Homeಅಂಕಣಗಳುಮುಖಕ್ಕೆ ಬೀಳ್ತಿರೊ ಎಂಜಲು ಒರೆಸಿಕೊಳ್ಳಲು ಲೇವಣ್ಣ ಎರಡು ಶಾಮಿಯಾನ ತರಿಸಿಕೊಂಡ ಬ್ರೇಕಿಂಗ್ ನ್ಯೂಸ್!

ಮುಖಕ್ಕೆ ಬೀಳ್ತಿರೊ ಎಂಜಲು ಒರೆಸಿಕೊಳ್ಳಲು ಲೇವಣ್ಣ ಎರಡು ಶಾಮಿಯಾನ ತರಿಸಿಕೊಂಡ ಬ್ರೇಕಿಂಗ್ ನ್ಯೂಸ್!

- Advertisement -
- Advertisement -

ಕೇಳುಗರಿಗೆಲ್ಲ ನಮಸ್ಕಾರ, ಆಘಾತವಾಣಿ ವಾರ್ತೆಗಳಿಗೆ ಸ್ವಾಗತ, ಓದುತ್ತಿರುವವರು ನಿಮ್ಮ ಪ್ರೀತಿಯ ಅಟ್ಯಾಕ್ ಹನ್ಮಂತ. ಈಗ ವಾರ್ತೆಗಳ ವಿವರ..
ಮುಖ್ಯಮಂತ್ರಿ ‘ಸುಮಾರ್ ಸ್ವಾಮಿ’ಯ ಬೆನ್ನಿಗೆ ಬಿದ್ದ ಬೇತಾಳದಂತೆ ಹೋದಲ್ಲಿ ಬಂದಲ್ಲೆಲ್ಲ ರಂಕಲು ಎಬ್ಬಿಸಿಕೊಂಡು ತಿರುಗೋ ಹೆಚ್.ಡಿ. ಲೇವಣ್ಣನ ಹಿಲ್ಲೇರಿಯಸ್ ಅಡ್ವೆಂಚರ್‍ಗಳಿಗೆ ಹೊಸದೊಂದು ಸಾಹಸ ಸೇರ್ಪಡೆಯಾಗಿದೆ. ತನ್ನ ಮನೆಯ ಬೆಡ್ರೂಂ ಮಂಚದ ಮೇಲೆ ಹೋಮಕುಂಡ ಕಟ್ಟಿಸಿಕೊಂಡು ಅದ್ರೊಳಗೇ ಮಲಗಿದ್ದ ಲೇವಣ್ಣನಿಗೆ ಕನಸಿನಲ್ಲಿ ಸನಿಮಾತ್ಮನು ಬಂದು ತನ್ನ ಕಾಗೆ ಕೊಕ್ಕಿನಿಂದ ಲೇವಣ್ಣನ ಕಣ್ಣಿಗೆ ಕುಕ್ಕಿಸಿ ಎಬ್ಬಿಸಿದ್ದಾನೆ. ಪ್ರವಾಹ ಬಂದು ಜನ ಸಾಯ್ತಾವರೆ, ನೀನಿಲ್ಲಿ ಕುಂಡದೊಳಗೆ ಕಾಲೆತ್ತಿಕೊಂಡು ಬಿದ್ಕಂಡಿದೀಯ ಎದ್ದೇಳೋ ಲೋಪರ್ ಎಂದು ಬೈದನಂತೆ. ತಕ್ಷಣ ಕುಂಡದೊಳಗಿನಿಂದ ಕಣ್ಣುಜ್ಜಿಕೊಂಡು ಎದ್ದ ಲೇವಣ್ಣ ಕಾರಲ್ಲಿ ಒಂದೆರಡು ಬಂಡಲ್ ಬಿಸ್ಕತ್ ಪ್ಯಾಕೆಟ್ ಎತ್ಕೊಂಡು ಪ್ರವಾಹ ಸಂತ್ರಸ್ತರ ಗಂಜಿಕೇಂದ್ರಗಳಿಗೆ ಓಡೋಗಿದೆ. ಅಲ್ಲಿ ಮೊದಲೇ ನೊಂದು ಬೆಂದು ಹೈರಾಣಾಗಿದ್ದ ಸಂತ್ರಸ್ತ ಜನರಿಗೆ ನಾಯಿಗೆ ಎಸೆಯುವಂತೆ ಬಿಸ್ಕತ್ ಎಸೆದು ಬಂದಿದೆ. ಈ ಸುದ್ದಿ ಬಹಿರಂಗವಾಗುತ್ತಿದ್ದಂತೆ ಜನ ಕ್ಯಾಕರಿಸಿ ತುಪಾತುಪಾ ಉಗಿಯತೊಡಗಿದ್ದಾರೆ. ದೊಡ್ಡಗೌಡರ ಮಗ ಅನ್ನೋ ಕ್ವಾಲಿಫಿಕೇಷನ್ ಬಿಟ್ರೆ ಗ್ರಾಮಪಂಚಾಯ್ತಿ ಪೀವನ್ ಆಗಲೂ ಲಾಯಕ್ಕಿಲ್ಲದ ಭಯಂಕರ ವದನ ಹೊಂದಿರೋ ಲೇವಣ್ಣ, ಮುಖಕ್ಕೆ ಬೀಳ್ತಿರೋ ಎಂಜಲು ಒರೆಸಿಕೊಳ್ಳಲು ಮನೇಲಿರೋ ಟವೆಲ್ಲು, ಬೆಡ್‍ಶೀಟುಗಳು ಸಾಲದಾಗಿ ಹೊಸ ಎರಡು ಶಾಮಿಯಾನ ತರಿಸಿಕೊಂಡಿದ್ದಾರೆಂದು ಲೇವಣ್ಣನ ಅಧಿಕೃತ ಪುತ್ರ ಹೇಳಿಕೆ ಕೊಟ್ಟಿದ್ದಾರೆ. ಇದರ ನಡುವೆ ಲೇವಣ್ಣನೇನಾದ್ರೂ ಸಂತ್ರಸ್ತ ಶಿಬಿರಗಳಿಗೆ ಅಪ್ಪಿತಪ್ಪಿ ಮತ್ತೆ ಭೇಟಿ ಕೊಟ್ಟರೆ ಅಲ್ಲಿರೋ ಜನರು ಲೇವಣ್ಣನ ಕಾಲುಹಿಡಿದು ದರದರನೆ ಎಳೆದೊಯ್ದು ರಾಜಾಸೀಟ್ ಮೇಲಿಂದ ಕೆಳಕ್ಕೆಸೆಯಲು ಪ್ಲಾನ್ ಮಾಡಿದ್ದಾರೆಂದು ಗುಪ್ತಚರ ಮೂಲಗಳು ಸ್ಪಷ್ಟಪಡಿಸಿವೆ.

********

ಆಡಳಿತ ನಡೆಸಿ ಅನುಭವವಿರದ ಎಲ್ ಬೋರ್ಡ್ ಎನ್.ಡಿ.ಎ ಸರ್ಕಾರ, ಎಲ್ಲಿ ಕೈ ಇಟ್ಟರೂ ಅಲ್ಲೊಂದು ಕೊಳಕುಮಂಡಲದ ಹಾವಿನ ಕೈಲಿ ಗಚ್ಚನೆ ಕಡಿಸಿಕೊಂಡು ಕಿಟಾರ್ ಎಂದು ಕಿರುಚಿಕೊಳ್ಳುತ್ತಿರುವ ಸುದ್ದಿಗಳು ಲಭ್ಯವಾಗಿವೆ. ಕೇಂದ್ರ ಅಂಕಿಅಂಶ ಆಯೋಗ ನಡೆಸಿದ ಅವಲೋಕನದಲ್ಲಿ ಕೇಂದ್ರದ ‘ಹಾಫ್ ಮೆಂಟ್ಲು ಓಲ್ಡ್ ಮ್ಯಾನ್’ ಸರ್ಕಾರದ ಕಾಲದ ಜಿ.ಡಿ.ಪಿಯು ಹಿಂದಿನ ಯುಪಿಎ ಸರ್ಕಾರದ ಕಾಲದ ಜಿಡಿಪಿಯ ಕಾಲಧೂಳಿಗೂ ಸಮವಿಲ್ಲದಂತೆ ಯಕ್ಕುಟ್ಟಿ ಹೋಗಿರುವುದು ಬಯಲಾಗಿದೆ. ಇದನ್ನೇ ಸರ್ಕಾರದ ವೆಬ್‍ಸೈಟಿನಲ್ಲಿ ಪ್ರಕಟಿಸಿದಾಗ ತಲೆಯಿರುವ ಮಾಧ್ಯಮಗಳು ಪೊರಕೆ ಎತ್ತಿಕೊಂಡು ‘ಗಟರ್ ಗ್ಯಾಸ್ ಮೆಂಟ್ಲುಮ್ಯಾನ್’ ಮುಖಕ್ಕೆ ಹೆಟ್ಟಿ ‘ಏನಲೇ ಇದು ಭಾಡಕೋ’ ಎಂದು ಮಕ್ಕುಗಿದಿವೆ. ಇದರಿಂದ ನೊಂದ ಮೆಂಟ್ಲುತಾತ.. ಆ ರಿಪೋರ್ಟನ್ನೇ ವೆಬ್‍ಸೈಟಿಂದ ಕಿತ್ತು ಬಚ್ಚಿಡಲು ಹೇಳಿ, ಮತ್ತೊಮ್ಮೆ ಸಿಕ್ಕಿ ಬಿದ್ದಿದೆ. ಚಡ್ಡಿ ಹರಿದೋಗಿ ಏನೇನೋ ಕಾಣ್ತಿದೆ ನೋಡ್ಕಳಯ್ಯ ಅಂದ್ರೆ ‘ ನಾನಿರದೇ ಹಿಂಗೆ, ನೋಡಕ್ಕಾಗದಿದ್ರೆ ನೀವೇ ಕಣ್ ಮುಚ್ಕಳಿ ಅಂದ್ನಂತೆ’ ಅನ್ನೋ ಗಾದೆಯನ್ನ ಈ ಓಲ್ಡ್ ಬಫೆಲೋನ ನೋಡಿಯೇ ಬರೆದಿರಬಹುದೆಂದು ಜನರು ಮಾತನಾಡಿಕೊಳ್ಳುತ್ತಿದ್ದಾರೆ.

********

ಭೂಮಿಯ ಮೇಲೆ ಎಲ್ಲೂ ಕಾಣಸಿಗದ ಅತ್ಯಂತ ಶ್ರೇಷ್ಟ ಮುಠ್ಠಾಳರ ಕೊಂಪೆಯಾಗಿರೋ ಮೋತಿಜೀ ಭಕ್ತರು ಕೇರಳ ಪ್ರವಾಹದ ಸಂದರ್ಭದಲ್ಲು ತಮ್ಮ ಸೈಕೋಬುದ್ದಿಗಳನ್ನು ಬಿಡದಿರುವುದು ಆಶ್ಚರ್ಯವೇನಲ್ಲ. ಸುಪ್ರೀಂಕೋರ್ಟ್ ಶಬರಿಮಲೆ ದೇವರ ದರ್ಶನಕ್ಕೆ ಹೆಂಗಸರನ್ನು ಬಿಟ್ಟಿದ್ದೇ ಕಾರಣವೆಂದು ಈ ಅನ್ಯಗ್ರಹ ಮೂದೇವಿಗಳು ತಲೆಚಚ್ಚಿಕೊಂಡು ಅಳುತ್ತಿವೆ. ಆ ಲೆಕ್ಕದಲ್ಲಿ ನೋಡಿದರೆ ಸುಪ್ರೀಂ ತೀರ್ಪಿಗೆ ಸಿಟ್ಟಿಗೆದ್ದ ಅಯ್ಯಪ್ಪಸ್ವಾಮಿ ಕೋರ್ಟನ್ನೇ ಪ್ರವಾಹದೊಳಗೆ ಮುಳುಗಿಸುವ ಬದಲು ತನ್ನ ಟೆಂಪಲ್ಲನ್ನೇ ಯಾಕೆ ಪಂಪಾನದಿಯೊಳಗೆ ಕಂಠಮಟ್ಟ ಮುಳುಗಿಸಿಕೊಂಡನೆಂಬ ಪ್ರಶ್ನೆಗಳು ಕೇಳಿಬರುತ್ತಿವೆ. ಉತ್ತರಾಖಂಡದಲ್ಲಿ ನೆರೆ ಬಂದು ಇಡೀ ಕಣಿವೆ ದೇಗುಲದ ಊರನ್ನು ಕೊಚ್ಚಿಕೊಂಡು ಹೋದಾಗ ಆ ದೇವರೇನು ಶಾಪ ಕೊಟ್ಟಿತ್ತು? ಗುಜರಾತಲ್ಲಿ ಭೂಕಂಪ ಸಂಭವಿಸಿದಾಗ ಆ ರಾಜ್ಯವೇನು ಪಾಪ ಮಾಡಿತ್ತು? ಅನ್ನತಕ್ಕಂಥ ಪ್ರಶ್ನೆಗಳು ಜನರಿಂದ ಬರುತ್ತಿದ್ದಂತೆ.. ಸೆಗಣಿ ಬ್ರೈನ್ ಸೈಕೋಭಕ್ತರು ಕಣ್ಣಿಗೆ ಬಿದ್ದ ಇಲಿಬಿಲಗಳನ್ನು ಹೊಕ್ಕಿದ್ದು, ಅಲ್ಲಿ ವಾಸವಿದ್ದ ಮೂಗಿಲಿಗಳೊಡನೆ ವೀರಾವೇಶದಿಂದ ಹೋರಾಡಿ ಅವನ್ನು ಹೊರಗಾಕಿ ಬಿಲದಲ್ಲೇ ಠಿಕಾಣಿ ಹೂಡಿದ್ದಾರೆಂದು ಬಲ್ಲ ಮೂಲಗಳು ತಿಳಿಸಿವೆ.

*********

ಪಾಕಿಸ್ತಾನದ ಹೊಸ ಪ್ರಧಾನಮಂತ್ರಿ ಇಮ್ರಾನ್ ಖಾನ್ ಪದವಿ ಸ್ವೀಕಾರ ಪ್ರೋಗ್ರಾಂಗೆ ಹೋಗಿಬಂದ ಮಾಜಿ ಕ್ರಿಕೆಟರ್ ಸಿಕ್ಸರ್ ಸಿದ್ದುವಿನ ಮೇಲೆ ಬ್ರಿಟಿಷರ ಬೂಟನ್ನು ನಾಲಿಗೆಯಿಂದ ಸ್ವಚ್ಛಗೊಳಿಸುತ್ತಿದ್ದ ದ್ವೇಷಭಕ್ತರು ಮುಗಿಬಿದ್ದಿದ್ದಾರೆ. ಶತ್ರು ದೇಶಕ್ಕೆ ಯಾಕೆ ಹೋದ್ರಿ, ಅಲ್ಲಿನ ಆರ್ಮಿ ಚೀಫನ್ನ ಯಾಕ್ ತಬ್ಕೊಂಡ್ರಿ, ಲೊಟ್ಟೆ ಲೊಸಕು ಅಂತ ಕೂಗಾಡುತ್ತಿದ್ದಾರೆ. ಆಲ್ ಇಂಡಿಯ ನಿರುದ್ಯೋಗಿಗಳ ಸಂಘದ ‘ಭಜ ಮಂಗದಳ’ದ ಕಮಂಗಿಗಳು ಸಿದ್ದು ತಲೆ ತೆಗೆದವರಿಗೆ 5 ಲಕ್ಷ ದುಡ್ಡನ್ನ ಪೇಟಿಎಂಲಿ ಕಳಿಸ್ತೀವಿ ಅಂತ ಬೊಗಳಾಡುತ್ತಿದ್ದಾರೆ. ಎಲ್ಲವನ್ನು ಕೇಳಿಸಿಕೊಂಡ ಸಿಕ್ಸರ್ ಸಿದ್ದು ಇದೀಗ ಅರಚಾಡುತ್ತಿರೋ ‘ಬ್ರಿಟಿಶ್ ಬೂಟ್ ಪಾಲಿಶ್’ ಗ್ಯಾಂಗಿಗೆ ಒಂದೊಂದೇ ಪ್ರಶ್ನೆಗಳನ್ನು ಹಳೇಕೆರಗಳಿಗೆ ಸಿಕ್ಕಿಸಿ ಎಸೆಯತೊಡಗಿದ್ದಾರೆ. ವಾಜಪೇಯಿ ಕಾಲದಲ್ಲಿ ಕಾರ್ಗಿಲ್ ಯುದ್ಧಕ್ಕೆ ಕಾರಣನಾಗಿ ನಮ್ಮ ಸಾವಿರಾರು ಸೈನಿಕರನ್ನು ಕೊಂದ ಪರ್ವೆಜ್ ಮುಶರಫ್‍ನನ್ನು ಅ’ತಾತ’ಶತ್ರು ವಾಜಪೇಯಿ ಇಂಡಿಯಾಗೆ ಆಹ್ವಾನಿಸಿ ತಬ್ಬಿಕೊಂಡಿದ್ರಲ್ಲ.. ಅವಾಗ ಈ ‘ಬ್ರಿಟಿಶ್ ಬೂಟ್ ಪಾಲಿಶ್ ಗ್ಯಾಂಗ್’ ಯಾವ ಹೋಟೆಲಿನಲ್ಲಿ ಎಂಜಲೆತ್ತುತ್ತಿತ್ತು? “ಕರೆಯದೇ ಬರುವನ ಕರೆದು ಹಳೆಯ ರೀಬೋಕ್ ಬೂಟಲ್ಲಿ ಹೊಡೆಯೆಂದ ಸರ್ವಜ್ಞ” ಎಂಬ ಗಾದೆಯಂತೆ ಕರೆಯದಿದ್ರೂ ನವಾಜ್ ಶರೀಫ್ ಮಗಳ ಮದ್ವೆಗೆ ಪಾಕಿಸ್ತಾನಕ್ಕೆ ಓಡೋಗಿ “ಮಮ್ಮಿಗೆ ಸೀರೆ ಇಲ್ಲ, ಇರೋ ಸೀರೆಗಳೆಲ್ಲ ಹರಿದು ಹೋಗಿವೆ, ನನಗೆ ಕೊಡಿಸೋ ತಾಕತ್ತಿಲ್ಲ, ಒಂದೆರಡು ಸೀರೆ ಕೊಡ್ರಿ” ಅಂತ ನವಾಜ್ ಶರೀಫನಿಂದ ಸೀರೆ ತಗೊಂಡು ಬಂದ ‘ಗಟರ್ ಗ್ಯಾಸ್ ಮೋರಿ’ಯ ತಲೆಗೆಷ್ಟು ಬಹುಮಾನ ಕಟ್ತೀರಿ? ಪಠಾಣ್ ಕೋಟ್ ಆರ್ಮಿಬೇಸಿಗೆ ಬಾಂಬೆಸೆದು ಹೋದ ಪಾಕ್ ಉಗ್ರರನ್ನು ಸದೆ ಬಡೆಯೋದು ಬಿಟ್ಟು ಪಾಕ್ ಗುಪ್ತಚರ ದಳದ ಐಎಸ್‍ಐ ಅಧಿಕಾರಿಗಳನ್ನ ಪಠಾಣ್ ಕೋಟಿನಲ್ಲಿ ರತ್ನಗಂಬಳಿ ಹಾಸಿ ಕರೆದುಕೊಂಡ ಅರುಳುಮರುಳು ಪಕೋಡತಾತನ್ನ ಯಾವ ಸಮುದ್ರದ ಒಳಗೆ ಎಸೀತೀರಿ? ಅಂತ ಸೈಕೋ ದ್ವೇಷಭಕ್ತರನ್ನು ಕಂಡಕಂಡಲ್ಲಿ ಒದೆಯುತ್ತಿರೋ ಸಿಕ್ಸರ್ ಸಿದ್ದು ಧೈರ್ಯಕ್ಕೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.
ಇಲ್ಲಿಗೆ ಆಘಾತವಾಣಿ ವಾರ್ತೆಗಳು ಮುಕ್ತಾಯವಾಯಿತು. ಮತ್ತೆ ನಮ್ಮ ನಿಮ್ಮ ಭೇಟಿ ಮುಂದಿನವಾರ. ಅಲ್ಲೀತನಕ ನೀವೂ ನೆಮ್ದಿಯಾಗಿರಿ, ನಾವೂ ನೆಮ್ದಿಯಾಗಿರುತ್ತೇವೆ ಅಂತ ಹೇಳುತ್ತ, ವಾರ್ತಾಪ್ರಸಾರಕ್ಕೆ ಮಂಗಳ ಹಾಡುತ್ತಿದ್ದೇವೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಹೈದರಾಬಾದ್| ಎಕ್ಸ್‌ಪ್ರೆಸ್‌ವೇನಲ್ಲಿ ನೇಮಕಾತಿ ಪರೀಕ್ಷೆ ಓಎಂಆರ್ ಹಾಳೆಗಳು ಪತ್ತೆ: ತನಿಖೆಗೆ ಆದೇಶ

ನೇಮಕಾತಿ ಪರೀಕ್ಷೆಯ ಮೂಲ ಆಪ್ಟಿಕಲ್ ಮಾರ್ಕ್ ರೆಕಗ್ನಿಷನ್ (ಒಎಂಆರ್) ಹಾಳೆಗಳು ಹೈದರಾಬಾದ್‌ನ ರಸ್ತೆಬದಿಯಲ್ಲಿ ರಾಶಿ ರಾಶಿಯಾಗಿ ಬಿದ್ದಿರುವುದು ಕಂಡುಬಂದ ನಂತರ ತೆಲಂಗಾಣ ಸಾರ್ವಜನಿಕ ಸೇವಾ ಆಯೋಗ (ಟಿಜಿಪಿಎಸ್‌ಸಿ) ತನಿಖೆಗೆ ಆದೇಶಿಸಿದೆ. 2018 ರ ಹಾಸ್ಟೆಲ್...

ಕರೂರ್ ಕಾಲ್ತುಳಿತ ಮೃತರ ಕುಟುಂಬಸ್ಥರಿಗೆ ನೀಡಿದ್ದ ಸರ್ಕಾರಿ ಉದ್ಯೋಗವನ್ನು ರದ್ದುಗೊಳಿಸಿದ ಮದ್ರಾಸ್ ಹೈಕೋರ್ಟ್

ಕರೂರ್ ಕಾಲ್ತುಳಿತ ದುರಂತದಲ್ಲಿ ಮೃತಪಟ್ಟವರ ಕುಟುಂಬಸ್ಥರಿಗೆ ಸರ್ಕಾರಿ ಉದ್ಯೋಗ ನೀಡಿದ್ದ ತಮಿಳುನಾಡು ಸರ್ಕಾರದ ಆದೇಶವನ್ನು ಮದ್ರಾಸ್ ಹೈಕೋರ್ಟ್ ಸೋಮವಾರ ರದ್ದುಗೊಳಿಸಿದೆ. ಈ ನೇಮಕಾತಿಗಳನ್ನು ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ (PIL) ವಿಚಾರಣೆ...

ವಿದ್ಯಾರ್ಥಿಗಳ ಬಂಧನ: ಮತ್ತೆ ಪ್ರತಿಭಟನೆಯ ಎಚ್ಚರಿಕೆ ನೀಡಿದ ‘ಕಾಕ್ರೋಚ್ ಜನತಾ ಪಾರ್ಟಿ’

ಪ್ರತಿಭಟನಾಕಾರರ ವಿರುದ್ಧ ಯಾವುದೇ ಪೋಲೀಸ್ ಕ್ರಮ ಕೈಗೊಳ್ಳುವುದಿಲ್ಲ ಎಂಬ ಒಪ್ಪಂದವನ್ನು ಸಂಪೂರ್ಣವಾಗಿ ಉಲ್ಲಂಘಿಸಲಾಗಿದೆ ಎಂದು 'ಕಾಕ್ರೋಚ್ ಜನತಾ ಪಾರ್ಟಿ' (CJP) ರಾಷ್ಟ್ರೀಯ ವಕ್ತಾರ ಅಶುತೋಷ್ ರಂಕಾ ಎಕ್ಸ್ (X) ಸಾಮಾಜಿಕ ಜಾಲತಾಣದ ಪೋಸ್ಟ್‌ನಲ್ಲಿ...

ಜೆನ್ ಝೀ ಪೀಳಿಗೆಯ ಹೋರಾಟ ಮತ್ತು ಮುಂದಿನ ನಡೆ.!

NEET ಪರೀಕ್ಷೆಯ ಅಕ್ರಮ ಹಾಗೂ ಪೇಪರ್ ಸೋರಿಕೆ ವಿರುದ್ಧ 'ಜೆನ್ ಝೀ' (Gen Z) ಯುವ ಸಮೂಹ ನಡೆಸಿದ ಹೋರಾಟವು ಕೇವಲ ಒಂದು ತಾತ್ಕಾಲಿಕ ವಿದ್ಯಾರ್ಥಿ ಹೋರಾಟವಾಗಿ ಉಳಿದಿಲ್ಲ. ಇದು ಪ್ರಭುತ್ವದ ಅಹಂಕಾರವನ್ನು...

ಬಿಹಾರ| ವಿದ್ಯಾರ್ಥಿಗಳ ಪ್ರತಿಭಟನೆಯ ಸಮಯದಲ್ಲಿ ಎಕೆ-47 ಬಳಸಿದ ಪೊಲೀಸ್‌ ಕಾನ್‌ಸ್ಟೆಬಲ್ ಅಮಾನತು

ಬಿಹಾರದ ಸಿವಾನ್ ಜಿಲ್ಲೆಯಲ್ಲಿ ಜುಲೈ 25 ರಂದು ನಡೆದ ವಿದ್ಯಾರ್ಥಿಗಳ ಪ್ರತಿಭಟನೆಯ ಸಮಯದಲ್ಲಿ ಎಕೆ-47 ರೈಫಲ್ ಬಳಸಿರುವ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ನಂತರ ಪೊಲೀಸ್ ಕಾನ್‌ಸ್ಟೆಬಲ್ ಒಬ್ಬರನ್ನು ಅಮಾನತುಗೊಳಿಸಲಾಗಿದೆ ಎಂದು...

ನಾಳೆ ನನ್ನ ಮಗನೂ ಮೋದಿ ವಿರುದ್ಧ ಮಾತನಾಡಬಹುದು: ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ

ಅಸ್ಸಾಂ ಸಚಿವರೊಬ್ಬರ ಮಗಳು ಗುವಾಹಟಿಯಲ್ಲಿ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡು, ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಆಗ್ರಹಿಸಿರುವುದು ರಾಜ್ಯಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಈ ಘಟನೆಗೆ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ...

ವಿದ್ಯಾರ್ಥಿಗಳನ್ನು ಗುಂಡಿಕ್ಕಿ ಕೊಲ್ಲಬೇಕಿತ್ತು: ಆರ್‌ಎಸ್‌ಎಸ್ ಸಿದ್ಧಾಂತವಾದಿ ಟಿ.ಜಿ. ಮೋಹನ್‌ದಾಸ್ ವಿಕೃತ ಹೇಳಿಕೆ

ನವದೆಹಲಿ: ಕೇಂದ್ರ ಸರ್ಕಾರದ ಶಿಕ್ಷಣ ನೀತಿಗಳು ಹಾಗೂ ಪರೀಕ್ಷಾ ಅಕ್ರಮಗಳ ವಿರುದ್ಧ ದೆಹಲಿಯ ಜಂತರ್ ಮಂತರ್‌ನಲ್ಲಿ ಬೃಹತ್ ಪ್ರತಿಭಟನೆ ನಡೆಸಿ, ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಆಗ್ರಹಿಸಿದ್ದ ಯುವಜನರ ವಿರುದ್ಧ...

ಸಿಜೆಪಿ ಪ್ರತಿಭಟನೆ: ವಿದ್ಯಾರ್ಥಿಗಳ ಮೇಲೆ ‘ಪೆಲೆಟ್‌ ಗನ್’ ದಾಳಿ ದೃಢ; ನಿಯಮಾವಳಿಗಳನ್ನು ಉಲ್ಲಂಘಿಸಿ ಬಲಪ್ರಯೋಗ ನಡೆಸಿರುವ RAF

ನವದೆಹಲಿ: ತಮ್ಮ ಹಕ್ಕುಗಳಿಗಾಗಿ ಪ್ರಜಾಸತ್ತಾತ್ಮಕವಾಗಿ ಧ್ವನಿ ಎತ್ತುತ್ತಿದ್ದ ವಿದ್ಯಾರ್ಥಿ ಸಮುದಾಯದ ಮೇಲೆ ಕೇಂದ್ರದ ಸಶಸ್ತ್ರ ಪಡೆಗಳು ಎಸಗಿದ ದೌರ್ಜನ್ಯದ ಕರಾಳ ಮುಖ ಕೊನೆಗೂ ಅನಾವರಣಗೊಂಡಿದೆ. ಜುಲೈ 20ರಂದು ದೆಹಲಿಯ ಕನ್ಹಾಟ್ ಪ್ಲೇಸ್ ಪ್ರದೇಶದಲ್ಲಿ...

ಕೇವಲ ಪ್ರತಿಭಟಿಸಿದ್ದಕ್ಕೆ ವಿದ್ಯಾರ್ಥಿಗಳು ಜೈಲುಪಾಲು; ಗಂಗೆಯ ದೋಣಿಯಲ್ಲಿ ಬಿರಿಯಾನಿ ತಿಂದವರಿಗೂ ಸಿಗುತ್ತಿಲ್ಲ ಜಾಮೀನು : ನ್ಯಾಯಮೂರ್ತಿ ಉಜ್ಜಲ್ ಭುಯಾನ್ ಕಳವಳ

ಭಾರತದಲ್ಲಿ ಭಿನ್ನಾಭಿಪ್ರಾಯಗಳನ್ನು ಗೌರವಿಸುವ ಮತ್ತು ಅವುಗಳಿಗೆ ಅವಕಾಶ ನೀಡುವ ಸಾರ್ವಜನಿಕ ಸ್ಥಳಗಳು ಎಷ್ಟು ಕಡಿಮೆಯಾಗುತ್ತಿವೆ ಎಂದರೆ, ತಮ್ಮ ಹಕ್ಕುಗಳಿಗಾಗಿ ಪ್ರತಿಭಟಿಸುವ ವಿದ್ಯಾರ್ಥಿಗಳನ್ನು ಬಂಧಿಸಿ ಅವರಿಗೆ ಜಾಮೀನು ನಿರಾಕರಿಸಲಾಗುತ್ತಿದೆ ಎಂದು ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿ...

ಪ.ಬಂಗಾಳ: ನೂತನ ‘ಗೂಂಡಾ ಕಾಯ್ದೆ’ ಅಡಿ NEET ಪ್ರತಿಭಟನೆಯಲ್ಲಿ ಭಾಗಿಯಾದ 10 ಮುಸ್ಲಿಂ ಯುವಕರು ಸೇರಿದಂತೆ 11 ಜನರ ಬಂಧನ 

ಕೋಲ್ಕತ್ತಾ: ಕೇಂದ್ರದ ನರೇಂದ್ರ ಮೋದಿ ಸರ್ಕಾರದ ಶಿಕ್ಷಣ ಕ್ಷೇತ್ರದ ವೈಫಲ್ಯಗಳು ಹಾಗೂ ನೀಟ್-ಯುಜಿ (NEET-UG) ಪ್ರಶ್ನೆ ಪತ್ರಿಕೆ ಸೋರಿಕೆ ಹಗರಣವನ್ನು ಖಂಡಿಸಿ ಶುಕ್ರವಾರ ಕೋಲ್ಕತ್ತಾದಲ್ಲಿ ನಡೆದ ಬೃಹತ್ ವಿದ್ಯಾರ್ಥಿ ಪ್ರತಿಭಟನೆಯು ತೀವ್ರ ರಾಜಕೀಯ...