Homeಮುಖಪುಟರೇವಣ್ಣನವರ ಕುರಿತು ವ್ಯಂಗ್ಯವಾಡಲು ಹೋಗಿ ತೀವ್ರ ಟೀಕೆ-ನಿಂದನೆಗೊಳಗಾದ ವಿಶ್ವೇಶ್ವರ ಭಟ್‌!

ರೇವಣ್ಣನವರ ಕುರಿತು ವ್ಯಂಗ್ಯವಾಡಲು ಹೋಗಿ ತೀವ್ರ ಟೀಕೆ-ನಿಂದನೆಗೊಳಗಾದ ವಿಶ್ವೇಶ್ವರ ಭಟ್‌!

ಈ ಟ್ವೀಟ್‌ ಮೂಲಕ ವಿಶ್ವೇಶ್ವರ ಭಟ್ಟರು ಮಾಡಿದ್ದು ತಪ್ಪು ಎಂದು ಶೇ. 80ಕ್ಕೂ ಹೆಚ್ಚು ಜನ ಅಭಿಪ್ರಾಯಪಟ್ಟಿದ್ದಾರೆ.

- Advertisement -
- Advertisement -

ಪ್ರಪಂಚದೆಲ್ಲೆಡೆ ಕೊರೊನಾ ಹಬ್ಬುತ್ತಿದೆ. ಸಾವು ನೋವುಗಳು ದಿನೇ ದಿನೇ ಹೆಚ್ಚುತ್ತಿವೆ. ಇಡೀ ವೈದ್ಯಕೀಯ ಸಮೂಹ ಅದರ ವಿರುದ್ಧ ಹೋರಾಡುತ್ತಿದೆ. ಇಂತಹ ಸಮಯದಲ್ಲಿ ಕೊರೊನಾ ವಿರುದ್ಧ ಐಕ್ಯಮತ್ಯ  ಸಾಧಿಸಲು ಭಾರತದ ಪ್ರಧಾನಿ ನರೇಂದ್ರ ಮೋದಿಯವರು 9 ನಿಮಿಷಗಳ ಕಾಲ ಲೈಟ್‌ ಬಂದ್‌ ಮಾಡಿ ದೀಪ ಹಚ್ಚಲು ಕರೆ ನೀಡಿದ್ದರು.

ಪ್ರಧಾನಿಗಳ ಕರೆ ಕೇಳಿಬರುತ್ತಿದ್ದಂತೆಯೇ ಅದಕ್ಕೆ ಮತ್ತಷ್ಟು ಸುಳ್ಳುಗಳು ಪೋಣಿಸಿಕೊಳ್ಳಲಾರಂಭಿಸಿದ್ದವು. ದೀಪದ ಬೆಳಕಿಗೆ ಕೊರೊನಾ ಸಾಯುತ್ತದೆ, ದೀಪದ ಶಾಖಕ್ಕೆ ಶಕ್ತಿ ಇದೆ ಎಂದೆಲ್ಲಾ ಜನ ನಂಬಲು ಆರಂಭಿಸಿದ್ದರು. ಅಷ್ಟರಲ್ಲಿ ಮೈಸೂರಿನ ಬಿಜೆಪಿ ಶಾಸಕ ರಾಮ್‌ದಾಸ್‌ “ದೀಪ ಹಚ್ಚಿದರೆ ವೈರಸ್ ದೀಪದ ಬಳಿ ಬಂದು ಶಾಖಕ್ಕೆ ಸಾಯುತ್ತದೆ” ಎಂದು ಹೇಳಿಕೆ ನೀಡಿ ತೀವ್ರ ಮುಜುಗರಕ್ಕೊಳಗಾಗಿದ್ದರು.

ಇದನ್ನೂ  ಓದಿ: ದೀಪದ ಶಾಖಕ್ಕೆ ಕ್ರಿಮಿ ಸಾಯುತ್ತದೆ ಎಂದ ಬಿಜೆಪಿ ಶಾಸಕ ರಾಮದಾಸ್: ವ್ಯಾಪಕ ಟ್ರೋಲ್‌

ಇನ್ನೊಂದು ಕಡೆ ದೇಶದೆಲ್ಲೆಡೆ ಪ್ರಧಾನಿಗಳ ಮನವಿಗೆ ಜನ ಸ್ಪಂದಿಸಿದ್ದರು. ಕರ್ನಾಟಕದ ಮಾಜಿ ಸಚಿವ ಎಚ್‌.ಡಿ ರೇವಣ್ಣ ಸಹ ಮೋಂಬತ್ತಿ ಹಚ್ಚಿ ಪ್ರಧಾನಿಗಳ ಕರೆಗೆ ಓಗೊಟ್ಟಿದ್ದರು. ಆದರೆ ಆ ಫೋಟೊವನ್ನೇ ಬಳಸಿ ರೇವಣ್ಣನವರ ತೇಜೋವಧೆಗೆ ಮಾಡಲು ಮುಂದಾಗಿದ್ದ ಪತ್ರಕರ್ತ ವಿಶ್ವೇಶ್ವರ ಭಟ್ ಮೇಲೆ ನೆಟ್ಟಿಗರು ಮುಗಿಬಿದ್ದಿದ್ದು ವ್ಯಾಪಕ ಟೀಕೆ-ನಿಂದನೆಗಳ ಸುರಿಮಳೆ ಸುರಿಸಿದ್ದಾರೆ.

ಈ ರೀತಿಯಾಗಿ ಟ್ವಿಟ್ಟರ್‌ನಲ್ಲಿ ಎಚ್‌.ಡಿ ರೇವಣ್ಣನವರ ತೇಜೋವಧೆ ಮಾಡುವಂತಹ ಎರಡು ಪೋಸ್ಟ್‌ಗಳನ್ನು ವಿಶ್ವೇಶ್ವರ ಭಟ್‌ ಹಾಕಿದ್ದಾರೆ. ಇದು ಸಹಜವಾಗಿಯೇ ನೆಟ್ಟಿಗರನ್ನು ಕೆರಳಿಸಿದೆ. ಕೂಡಲೇ ವಿಶ್ವೇಶ್ವರ ಭಟ್‌ ಮೇಲೆ ಮುಗಿಬಿದ್ದ ಅವರು ವ್ಯಾಪಕ ಟೀಕೆ ಜೊತೆಗೆ ನಿಂದನೆಗಳ ಸುರಿಮಳೆ ಸುರಿಸಿದ್ದಾರೆ. ಕೆಲವು ಕೆಳಗಿನಂತಿವೆ ನೋಡಿ.

“ಹೌದು ನಿಮ್ಮ ಈ ಟ್ವೀಟ್ ನೋಡಿದ ಮೇಲೆ ಇಂತ ವಿಷ ಜಂತುಗಳ ಮದ್ಯೆ ನನಗೇನು ಕೆಲಸ ಅಂತ ಕೊರೊನಾ ಈ ದೇಶ ಬಿಟ್ಟು ಓಡಿ ಹೋದರು ಹೋಗಬಹುದು , atleast ನಿಮ್ಮ ಹೆಸರಿನ ಮುಂದೆ ಇರೋ ಪತ್ರಕರ್ತ ಅನ್ನೋ ಶಬ್ದಕ್ಕಾದರೂ ಬೆಲೆ ಕೊಡಿ ಭಟ್ರೆ” ಎಂದು ವಿನಾಯಕ್‌ನಾಯಕ್‌ ಟ್ವೀಟ್‌ ಮಾಡಿದ್ದಾರೆ.

“ವಿಶ್ವೇಶ್ವರ ಬಟ್ಟರೆ.. ನಾನು ನೀವೊಬ್ಬ ಪತ್ರಕರ್ತರೆಂದು ಭಾವಿಸಿ ನಿಮ್ಮನ್ನು follow ಮಾಡ್ತಿದ್ದೆ, ಆದರೆ ನೀವು ಈ ರೀತಿ ವೈಯಕ್ತಿಕವಾಗಿ ಗೌಡರ ಮನೆಯವರ ಮೇಲೆ ವ್ಯಂಗ್ಯವಾಡುವುದು ಅಸಯ್ಯದ ಸಂಗತಿ.. ನಿಮ್ಮ ಸ್ಥಾನಕ್ಕೆ ತಕ್ಕಾಗಿ ನೆಡೆದುಕೊಳ್ಳಿ.. ಮನೆಯಲ್ಲಿದ್ದಾಗ ಪಂಚೆ ಹಾಕಿಕೊಳ್ಳದೆ ಇನ್ನೇನು ಸೂಟ್, ಬೂಟ್ ಹಾಕಿಕೊಂಡು ಪೋಸ್ ಕೊಡಬೇಕೆ..” ಎಂದು ಶರತ್‌ ಕುಮಾರ್‌ ಜಿ.ಡಿ ಎಂಬುವವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದು ಸ್ವಲ್ಪ ಅತಿಯಾಯಿತು ಭಟ್ರೇ. ಅವರು ಆಚರಿಸಿದರೂ ಅಣಕಿಸುತ್ತೀರ, ಆಚರಿಸದಿದ್ದರೂ ಅಣಕಿಸುತ್ತೀರ.. ಎಂದು ರೋಹಿತ್‌ ಸಿಂಹ ಅಭಿಪ್ರಾಯಪಟ್ಟಿದ್ದಾರೆ.

“ಭಟ್ರೇ ನಂಜು ಮೈ ಇಡೀ ತುಂಬಿದ ರೀತಿ ಕಾಣಿಸ್ತಾ ಇದೆ ನಿಮ್ಮ ಟ್ವೀಟ್ ನೋಡುವಾಗ. ಇಷ್ಟೊಂದು ವಿಷ ದೇಹದಲ್ಲಿ ಇಟ್ಕೊಂಡು ಹೇಗೆ ಜೀವಂತ ಇದ್ದೀರಿ?” ಎಂದು ಯಶ್ವಿನ್‌ಎಂಬುವವರು ಪ್ರಶ್ನಿಸಿದ್ದಾರೆ.

“ಒಂದು ಜನಾಂಗದ ಬಟ್ಟೆಯನ್ನು ಅಣುಕಿಸುವ ಮುಂಚೆ ನಿಮ್ಮ ಹಿರಿಯರ ಲಂಗೋಟಿ ಜ್ಞಾಪಸಿಕೋ” ಎಂದು ಮಂಜುನಾಥ್‌ ಜವರನಹಳ್ಳಿಯವರು ವ್ಯಂಗ್ಯವಾಡಿದ್ದಾರೆ.

Sir, ಪತ್ರಿಕೆಯೊಂದರ ಸಂಪಾದಕರಾಗಿ ನೀವು ಈ ರೀತಿ ಟ್ವೀಟ್ ಮಾಡುವುದು ಸರಿಯಲ್ಲ. ಪ್ರಧಾನಿಯ ಕರೆಗೆ ಇವರು ಸ್ಪಂದಿಸಿದ್ದಾರೆ, ಅದೇ ದೊಡ್ಡ ವಿಷಯ. ಈ ರೀತಿ ಟ್ರೋಲ್ ಮಾಡುವಷ್ಟು ಸಣ್ಣ ಸ್ಥಾನದಲ್ಲಿ ನೀವು ಇಲ್ಲ ಎಂದು ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ.

ದೀಪ ಹಚ್ಚಿದರೂ ಟೀಕೆ ಹಚ್ಚದಿದ್ದರೂ ಟೀಕೆ….. ವಾವ್…..ನಿಮ್ಮಂತ ನಿಷ್ಪ್ರಯೋಜಕರಿಂದ ದೇಶಕ್ಕೆ ಏನು ಪ್ರಯೋಜನವಿಲ್ಲ…ಹೊರಡು… ನೀವು 365 ದಿನ ಹಾಕೋದು ಇದೆ ಪಾಂಡಿತ್ಯದ ಬಟ್ಟೆ ಅಲ್ಲವಾ…..??? ಎಂದು ಮೋಹನ್‌ ಪ್ರಶ್ನಿಸಿದ್ದಾರೆ.

“ಪತ್ರಕರ್ತರೇನು ದೈವಪುತ್ರರಲ್ಲ ಸಲೀಸಾಗಿ ಇನ್ನೊಬ್ಬರ ತೇಜೋವಧೆ ಮಾಡಲು. ಅದು ಅವರ ಇಚ್ಛೆ. ಏಕವಚನದಿಂದ ಮಾತನಾಡುವುದನ್ನು ಬಿಡಿ. ಗೌರವ ಕೊಡಿ” ಎಂದು ದೀಪಕ್‌ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಭಟ್ಟರೆ ತಾವು ಒಂದು ಪತ್ರಿಕೆಯ ಸಂಪಾದಕರಾ ಇಲ್ಲ ರಾಜಕೀಯ ಪಕ್ಷದ ಸಾಮಾಜಿಕ ಜಾಲತಾಣ ಸಂಚಾಲಕರಾ ಅಂತ ನನಗೆ ಅನುಮಾನ ಬರತಾ ಇದೆ ಸದ್ಯಕ್ಕೆ ಯಾವುದೆ ನಾಮಕರಣಗಳು ಇಲ್ಲ ಸ್ವಲ್ಪ ತಡೆಯಿರಿ ಎಂದು ಪರಮ ಆತ್ಮ ಎಂಬುವವರು ಟೀಕಿಸಿದ್ದಾರೆ.

ಆ ಫೋಟೊದಲ್ಲಿ ತಪ್ಪೇನಿದೆ. ರಾಮದಾಸ್ ನ ಮೂರ್ಖ ಹೇಳಿಕೆನಾ ಖಂಡಿಸದ ನೀನು, ರೇವಣ್ಣನನ್ನು ಕಂಡರೆ ಯಾಕೆ ಉರಿ? ಥೂ ನೀನು ಒಬ್ಬ ಮನುಷ್ಯನಾ? ನಿನ್ನಂಥ ಜಾತಿವ್ಯಾದಿ ಕ್ರಿಮಿನಾ ನೋಡಿರಲಿಲ್ಲ.. ಥೂ ಅಯೋಗ್ಯ ಎಂದು ಮತ್ತೊಬ್ಬರು ಕಿಡಿಕಾರಿದ್ದಾರೆ.

ಈ ಟ್ವೀಟ್‌ ಮೂಲಕ ವಿಶ್ವೇಶ್ವರ ಭಟ್ಟರು ಮಾಡಿದ್ದು ತಪ್ಪು ಎಂದು ಶೇ. 80ಕ್ಕೂ ಹೆಚ್ಚು ಜನ ಅಭಿಪ್ರಾಯಪಟ್ಟಿದ್ದಾರೆ. ಇದೇ ಭಟ್ಟರು ಸಹ ಅದೇ ರೀತಿಯಲ್ಲಿ ತಾವು ಕೂಡ ದೀಪ ಹಚ್ಚಿಕೊಂಡು ತಮ್ಮ ಮಗಳ ಜೊತೆ ನಿಂತಿರುವ ವಿಡಿಯೋವನ್ನು ಕೆಲವೇ ನಿಮಿಷಗಳ ಮುಂಚೆ ಷೇರ್ ಮಾಡಿದ್ದಾರೆ. ಅಲ್ಲದೇ ಅತ್ಯಾಚಾರದ ಆರೋಪ ಹೊತ್ತಿರುವ ರಾಘವೇಶ್ವರ ಭಾರತಿ ಸ್ವಾಮಿಯವರು ದೀಪಹಿಡಿದಿರುವ ಫೋಟೊವನ್ನು ಸಹ ಅವರೇ ಷೇರ್‌ ಮಾಡಿದ್ದಾರೆ. ಆದರೆ ರೇವಣ್ಣನವರ ಮೇಲೆ ಮಾತ್ರ ಅಸೂಯೆ ವ್ಯಕ್ತಪಡಿಸಲು ಹೋಗಿ ಸಿಕ್ಕಿಬಿದ್ದಿದ್ದಾರೆ.

ವಿಶ್ವೇಶ್ವರ ಭಟ್ಟರು ಈ ರೀತಿ ವಯಕ್ತಿಕ ತೇಜೋವಧೇ ಮಾಡಲು ಹೋಗಿ ತಾವೇ ಮುಜುಗರಕ್ಕೊಳಗಾಗಿರುವುದು ಇದೇ ಮೊದಲನೇನಲ್ಲ. ಗೌರಿ ಲಂಕೇಶ್‌ ಹತ್ಯಾ ವಿರೋಧಿ ಕಾರ್ಯಕ್ರಮದಲ್ಲಿ ಜನರಿಲ್ಲ ಎಂದು ತೋರಿಸಲು ಹೋಗಿ ಟೀಕೆಗೆ ಒಳಗಾಗಿದ್ದರು. ಮಹಿಳೆಯರ ಒಳವಸ್ತ್ರಗಳ ಕುರಿತೆಲ್ಲಾ ತಮಾಷೆ ಮಾಡಲು ಹೋಗಿ ವ್ಯಾಪಕ ಟ್ರೋಲ್‌ಗೆ ಒಳಗಾಗಿದ್ದರು.


ಇದನ್ನೂ ಓದಿ: ಯಾರೂ ಸಹ ಅಲ್ಪಸಂಖ್ಯಾತ ಮುಸ್ಲಿಂ ಬಂಧುಗಳ ಮೇಲೆ ಒಂದು ಶಬ್ಧ ಮಾತಾಡಕೂಡದು: ಯಡಿಯೂರಪ್ಪ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

5 COMMENTS

  1. Vishwanath bhatre, you showed your true colour. People like you are disgrace to the community. Instead of commenting on Revanna’s dress like an idiot, appreciate his concern about the society at this crucial stage. We need to be united at this stage. Shame on you.

  2. Ivnu obba ganji kendrada giraki.. eno sarkarda mattinalli kelsa irbeku.. 90 % mediagalu, rajakaranigalu patrakartaru ovatu enadaru success agidare, adu e gowdara kutumba dinda, avra bhage olledo, kettado mstadidre success agtini anta e papi nu hage madidane..

  3. What Mr. Revanna has done, it is what PM Mr. Modi ji wanted from him as a citizen, of India and what Mr. BHATT has done is wrong and should apologize for his misdeed.

LEAVE A REPLY

Please enter your comment!
Please enter your name here

- Advertisment -

SIR ಅಕ್ರಮಗಳ ವಿರುದ್ಧ ಜನಪರ ಒಕ್ಕೂಟದ ಸಮರ: ಸೆ.22ರಿಂದ ‘ಪರಿಶೋಧನೆ ಹಾಗೂ ಪ್ರತಿರೋಧ ಪ್ರವಾಸ’

ಎಸ್‌ಐಆರ್ (ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ) ಪ್ರಕ್ರಿಯೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳನ್ನು ಬಯಲಿಗೆ ತರಲು, ಸಂತ್ರಸ್ತರನ್ನು ನೇರವಾಗಿ ಭೇಟಿಯಾಗಿ ಸಾಕ್ಷ್ಯಗಳನ್ನು ಒಟ್ಟುಗೂಡಿಸುವ ಉದ್ದೇಶದಿಂದ ಸೆಪ್ಟೆಂಬರ್ 22ರಿಂದ 30ರವರೆಗೆ ಎಸ್‌ಐಆರ್ ವಿರೋಧಿ ಜನಪರ ಸಂಘಟನೆಗಳು...

ಮುಂಬೈನಲ್ಲಿ ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನಕ್ಕೆ ತಡೆ ಆರೋಪ: ಪೊಲೀಸ್ ಕಣ್ಗಾವಲು, ಅಭಿವ್ಯಕ್ತಿ ಸ್ವಾತಂತ್ರ್ಯದ ಬಗ್ಗೆ ಕಳವಳ

ಮುಂಬೈ: ಜೈಲಿನಲ್ಲಿರುವ ವಿದ್ಯಾರ್ಥಿ ಹೋರಾಟಗಾರ ಉಮರ್ ಖಾಲಿದ್, ಶಾರ್ಜೀಲ್ ಇಮಾಮ್ ಸೇರಿದಂತೆ ರಾಜಕೀಯ ಕೈದಿಗಳೊಂದಿಗೆ ಒಗ್ಗಟ್ಟು ವ್ಯಕ್ತಪಡಿಸುವ ಉದ್ದೇಶದಿಂದ ಆಯೋಜಿಸಲಾಗಿದ್ದ ಖಾಸಗಿ ಸಾಕ್ಷ್ಯಚಿತ್ರ ಪ್ರದರ್ಶನವನ್ನು ರದ್ದುಗೊಳಿಸುವಂತೆ ಮುಂಬೈ ಪೊಲೀಸರು ಪ್ರದರ್ಶನಕ್ಕೆ ಸ್ಥಳ ನೀಡಿದ್ದ...

ರಮಾನಾಥ ರೈ ಪ್ರಯಾಣಿಸುತ್ತಿದ್ದ ಕಾರು ಮತ್ತು ಖಾಸಗಿ ಬಸ್ ನಡುವೆ ಢಿಕ್ಕಿ: ಆಸ್ಪತ್ರೆಗೆ ದಾಖಲು

ಕಾಂಗ್ರೆಸ್ ಹಿರಿಯ ನಾಯಕ ಹಾಗೂ ಮಾಜಿ ಸಚಿವ ಬಿ. ರಮಾನಾಥ ರೈ ಪ್ರಯಾಣಿಸುತ್ತಿದ್ದ ಕಾರು ಭೀಕರ ಅಪಘಾತಕ್ಕೀಡಾಗಿದ್ದು, ಘಟನೆಯಲ್ಲಿ ಮಾಜಿ ಸಚಿವರು ಹಾಗೂ ಅವರ ಕಾರು ಚಾಲಕ ಗಾಯಗೊಂಡಿದ್ದಾರೆ. ಕಾರ್ಕಳ-ಮೂಡುಬಿದ್ರೆ ಹೆದ್ದಾರಿಯ ಸಾಣೂರು...

ಮೋದಿ ಅಣಕ: ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ವಿರುದ್ಧ ಬಿಜೆಪಿ ಕಿಡಿ

ಮಧ್ಯಪ್ರದೇಶದ ಇಂದೋರ್‌ನಲ್ಲಿ ನಡೆದ ‘ಛಾತ್ರೋಂ ಕಿ ಗೂಂಜ್’ ಕಾರ್ಯಕ್ರಮದಲ್ಲಿ ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರೊಂದಿಗೆ ವೇದಿಕೆ ಹಂಚಿಕೊಂಡ ಸ್ಟ್ಯಾಂಡಪ್ ಕಾಮೆಡಿಯನ್‌ ಒಬ್ಬರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಅಣಕಿಸಿರುವ ವಿಚಾರ...

ಪ.ಬಂಗಾಳ: ನಂದಿಗ್ರಾಮದಲ್ಲಿ ಕಾಂಗ್ರೆಸ್‌ಗೆ ಮಮತಾ ಬೆಂಬಲ: ಬಂಗಾಳದ ವಿರೋಧ ಪಕ್ಷಗಳ ರಾಜಕೀಯದಲ್ಲಿ ಮರುಹೊಂದಾಣಿಕೆಯ ಸುಳಿವು

ಕೋಲ್ಕತ್ತಾ: ಪಶ್ಚಿಮ ಬಂಗಾಳದ ನಂದಿಗ್ರಾಮ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ದಿನದಿಂದ ದಿನಕ್ಕೆ ಹೊಸ ರಾಜಕೀಯ ತಿರುವುಗಳನ್ನು ಪಡೆದುಕೊಳ್ಳುತ್ತಿದ್ದು, ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೇತೃತ್ವದ ಬಣ ಕಾಂಗ್ರೆಸ್ ಅಭ್ಯರ್ಥಿ ಮಿಲನ್ ಪ್ರಧಾನ ಅವರಿಗೆ...

SIR ಎಂದರೆ ‘ಶಾ ಇನ್ಸ್ಟಿಗೇಟೆಡ್ ರಿಮೂವಲ್ʼ : ಕಾಂಗ್ರೆಸ್

ಚುನಾವಣಾ ಆಯೋಗ ಕೈಗೊಂಡಿರುವ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆಯಲ್ಲಿ (ಎಸ್‌ಐಆರ್) ದೊಡ್ಡ ಪ್ರಮಾಣದಲ್ಲಿ ಮತದಾರರ ಹೆಸರುಗಳನ್ನು ಕೈಬಿಡುತ್ತಿರುವ ವಿಷಯವನ್ನು ಪ್ರಸ್ತಾಪಿಸಿರುವ ಕಾಂಗ್ರೆಸ್, ಈ ಎಸ್‌ಐಆರ್ ಪ್ರಕ್ರಿಯೆಯು ವಾಸ್ತವವಾಗಿ ಮತದಾರರ ಬೃಹತ್ "ಶಾ...

ಟಿ. ನರಸೀಪುರ ಗಣೇಶೋತ್ಸವದಲ್ಲಿ ಪ್ರಚೋದನಕಾರಿ ಭಾಷಣ: ಮಾಜಿ ಸಂಸದ ಪ್ರತಾಪ್ ಸಿಂಹ ವಿರುದ್ಧ ಎಫ್‌ಐಆರ್ ದಾಖಲು

ಗಣೇಶೋತ್ಸವ ಮೆರವಣಿಗೆಯ ವೇಳೆ ಪ್ರಚೋದನಕಾರಿ ಭಾಷಣ ಮಾಡಿದ ಮತ್ತು ಸ್ಥಳದಲ್ಲಿದ್ದ ಪೊಲೀಸ್ ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿಪಡಿಸಿದ ಗಂಭೀರ ಆರೋಪದ ಮೇಲೆ ಬಿಜೆಪಿ ಮುಖಂಡ ಹಾಗೂ ಮಾಜಿ ಸಂಸದ ಪ್ರತಾಪ್ ಸಿಂಹ ವಿರುದ್ಧ ಎಫ್‌ಐಆರ್...

ದೆಹಲಿ ವಿವಿ ಚುನಾವಣಾ ಫಲಿತಾಂಶ: ABVPಯನ್ನು ಸೋಲಿಸಬಹುದಾಗಿದ್ದ ಚುನಾವಣೆಯಲ್ಲಿ ಕಾಂಗ್ರೆಸ್ ಮಾಡಿಕೊಂಡ ಎಡವಟ್ಟು

ಜಂತರ್ ಮಂತರ್‌ನಲ್ಲಿ ಲಕ್ಷಾಂತರ ವಿದ್ಯಾರ್ಥಿಗಳು ಬೀದಿಗಿಳಿದು ನಡೆಸಿದ ಧರಣಿ ಹಾಗೂ ಇನ್‌ಸ್ಟಾಗ್ರಾಮ್‌ ನಂತಹ ಡಿಜಿಟಲ್ ವೇದಿಕೆಗಳಲ್ಲಿ ಹರಿದಾಡಿದ ರೀಲ್ಸ್‌ಗಳು ಬಿಜೆಪಿಯ ಜನಪ್ರಿಯತೆ ಕುಸಿದಿರುವುದನ್ನು ಬಿಂಬಿಸಿದ್ದವು. ಕ್ಯಾಂಪಸ್‌ಗಳಲ್ಲಿ ಬಿಜೆಪಿ ಮತ್ತು ಎಬಿವಿಪಿ ಕಾರ್ಯಕರ್ತರ ದಬ್ಬಾಳಿಕೆ,...

ಐಐಟಿ ಬಾಂಬೆ ವಿದ್ಯಾರ್ಥಿ ಸಾಹಿಲ್ ವಕೋಡ್ ಆತ್ಮಹತ್ಯೆ ಪ್ರಕರಣ: ಜಾತಿ ನಿಂದನೆ, ಬೆದರಿಕೆ ಆರೋಪ: ಪ್ರಾಧ್ಯಾಪಕರ ವಿರುದ್ಧವೂ ಎಫ್‌ಐಆರ್

ಮುಂಬೈ: ಐಐಟಿ ಬಾಂಬೆ ಕ್ಯಾಂಪಸ್‌ನಲ್ಲಿ ಎರಡನೇ ವರ್ಷದ ವಿದ್ಯಾರ್ಥಿ ಸಾಹಿಲ್ ವಕೋಡ್ ಆತ್ಮಹತ್ಯೆ ಮಾಡಿಕೊಂಡ ಪ್ರಕರಣ ಇದೀಗ ಗಂಭೀರ ತಿರುವು ಪಡೆದುಕೊಂಡಿದ್ದು, ವಿದ್ಯಾರ್ಥಿಯ ಕುಟುಂಬ ಮಾಡಿರುವ ಜಾತಿ ಆಧಾರಿತ ನಿಂದನೆ, ಕಿರುಕುಳ ಮತ್ತು...

SIR : ಕೇಜ್ರಿವಾಲ್, ಧನಕರ್, ಅಡ್ವಾಣಿಗೂ ಬಂತು ಚುನಾವಣಾ ಆಯೋಗದ ನೋಟಿಸ್

ದೇಶದ ರಾಜಧಾನಿ ದೆಹಲಿಯಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯು ಭಾರೀ ವಿವಾದಕ್ಕೆ ಹಾಗೂ ಸಾರ್ವಜನಿಕ ಆತಂಕಕ್ಕೆ ಕಾರಣವಾಗಿದೆ. ದೆಹಲಿಯ ಒಟ್ಟು ಮತದಾರರ ಪೈಕಿ ಬರೋಬ್ಬರಿ ಶೇಕಡಾ 50ರಷ್ಟು...