Homeಮುಖಪುಟಆನಂದ್‌ ತೇಲ್‌ತುಂಬ್ಡೆ: ಬಂಧನದಲ್ಲಿ ಅಂಬೇಡ್ಕರ್ ಆತ್ಮಬಂಧು

ಆನಂದ್‌ ತೇಲ್‌ತುಂಬ್ಡೆ: ಬಂಧನದಲ್ಲಿ ಅಂಬೇಡ್ಕರ್ ಆತ್ಮಬಂಧು

ಹಳೆಯ ಮೆಹಬೂಬನಗರ್ ಜಿಲ್ಲೆಯ ಪಾತಪಲ್ಲೆ ಗ್ರಾಮದಲ್ಲಿ ದಲಿತರ ಮೇಲೆ ಬೋಯ ಸಮುದಾಯ ದಾಳಿ ಮಾಡಿದಾಗ ಎರಡು ಬಾರಿ ಊರಿಗೆ ತೆರಳಿ, ಹೋರಾಡಿ ನ್ಯಾಯ ಸಿಗುವ ಹಾಗೆ ಕೆಲಸ ಮಾಡಿದ್ದರು ತೇಲ್ತುಂಬ್ಡೆ..

- Advertisement -
- Advertisement -

ಕಾಕತಾಳೀಯವೇ ಆದರೂ ಬಾಬಾ ಸಾಹೇಬ್ ಅಂಬೇಡ್ಕರ್ 129ರ ಜಯಂತಿಯ ದಿನವೇ ಡಾ.ಅಂಬೇಡ್ಕರ್ ಕುಟುಂಬ ಸದಸ್ಯ ಮತ್ತು ಅವರ ಬೌದ್ಧಿಕ ವಾರಸುದಾರ ಹಾಗೂ ಚಿಂತಕ ಆನಂದ್ ತೇಲ್ತುಂಬ್ಡೆ ಜೈಲಿಗೆ ಹೋಗಬೇಕಾಗಿ ಬಂದಿರುವುದು ಒಂದು ಐತಿಹಾಸಿಕ ದುರಂತ.

ಸ್ವಾತಂತ್ರ್ಯಾನಂತರದಲ್ಲಿ ಅತಿ ಬಡ ದಲಿತ ಕುಟುಂಬದಲ್ಲಿ ಹುಟ್ಟಿದ ಆನಂದ್ ತೇಲ್ತುಂಬ್ಡೆ ಡಾಕ್ಟರ್ ಅಂಬೇಡ್ಕರ್ ಸ್ಪೂರ್ತಿಯಿಂದ ಕೇವಲ ತನ್ನ ಸ್ವಂತಶಕ್ತಿಯಿಂದ ಅತ್ಯಂತ ಪ್ರತಿಭಾವಂತನಾದ ಚಿಂತಕನಾಗಿ ಬೆಳೆದರು. ಬಹುಶಃ ನನಗೆ ತಿಳಿದಂತೆ ಅಂಬೇಡ್ಕರ್ ಬರಹಗಳನ್ನು ಅಷ್ಟು ಸಂಪೂರ್ಣವಾಗಿ ಓದಿದವರು ಬಹಳ ಕಡಿಮೆ. ಆನಂದ್ ಅಂಬೇಡ್ಕರ್‌ರನ್ನು ಆಳವಾಗಿ ಅಧ್ಯಯನ ಮಾಡಿದ್ದೇ ಅಲ್ಲದೇ ಮಾರ್ಕ್ಸಿಸಂಅನ್ನು ಕೂಡ ಆಳವಾಗಿ ಅಧ್ಯಯನ ಮಾಡಿದರು. ಮಾರ್ಕ್ಸಿಸಂನ ಚಾರಿತ್ರಿಕ, ತಾತ್ವಿಕ, ನೈತಿಕ ದೃಷ್ಟಿಕೋನಗಳನ್ನು ಹೆಚ್ಚು ಸಮಗ್ರವಾಗಿ ಹೆಚ್ಚು ಸೂಕ್ಷ್ಮವಾಗಿ ಅಧ್ಯಯನ ಮಾಡಿದರು. ಬಹಳ ಆಶ್ಚರ್ಯವೆಂದರೆ ಗಾಂಧಿಜಿಯ ಬರಹಗಳನ್ನು ಬಹಳ ಗೌರವದಿಂದ ಓದುವುದೇ ಅಲ್ಲದೇ, ಗಾಂಧಿಯನ್ನು ಭಾರತೀಯ ಸಮಾಜ ಮತ್ತಷ್ಟು ಪರಿಣಿತಿಯಿಂದ ಅಂದಾಜು ಮಾಡಬೇಕೆಂದು ವಾದಿಸುತ್ತಾರೆ. ಈ ಮೂರು ಚಿಂತನೆಗಳ ಧಾರೆಗಳ ಪ್ರಭಾವದಿಂದ ಅವರು ರಚಿಸಿದ 29 ಪುಸ್ತಕಗಳನ್ನು ನೋಡಬಹುದು. ಈ ಪುಸ್ತಕಗಳೆಲ್ಲಾ ಆನಂದ್‌ರ ಬೌದ್ಧಿಕ ಶಿಖರಗಳಿಗೆ ಕನ್ನಡಿಯಾಗಿವೆ.

ಆನಂದ್ ಚಿಕ್ಕಂದಿನಿಂದಲೇ ಬಹಳ ಚುರುಕಾದ ವಿದ್ಯಾರ್ಥಿ. ಕಡು ಬಡತನದ ಕಾರಣಕ್ಕೆ ರಜೆಯಲ್ಲಿ ಮನೆಗಳಿಗೆ ಸುಣ್ಣ ಬಳಿಯಲು ಹೋಗಿ ಅದರಿಂದ ಬಂದ ಹಣದಿಂದ ವಿದ್ಯಾಭ್ಯಾಸ ಮಾಡಿದರು. ಒಮ್ಮೆ ನಾನು ಆನಂದ್ ಅವರ ತಾಯಿಯನ್ನು ಭೇಟಿಯಾದಾಗ ನಿಮ್ಮ ಮಗನಿಗೆ ಹೆಸರು ಪ್ರತಿಷ್ಟೆ ಎಲ್ಲಾ ಇದೆ, ಒಳ್ಳೆಯ ಮಗನಿಗೆ ತಾಯಿ ನೀವು ಅಂದಾಗ ನನ್ನ ಮುಖವನ್ನೆಲ್ಲಾ ತನ್ನ ಕೈಗಳಿಂದ ಅಪ್ಯಾಯಮಾನವಾಗಿ ಸವರಿದಳು. ಆ ತಾಯಿ ಮನಸ್ಸೆಲ್ಲಾ ಪ್ರೀತಿ ತುಂಬಿದ ಮನುಷ್ಯಳಂತೆ ಕಂಡರು. ಆನಂದ್ ಎಲೆಕ್ಟ್ರಿಕಲ್ ಇಂಜಿನಿಯರಿಂಗ್‌ನಲ್ಲಿ ಪದವೀಧರರು. ಆ ನಂತರ ಬಾಂಬೆ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಮಾಡಿದರು. ಇದರ ಜೊತೆಗೆ ಪ್ರತಿಷ್ಠಿತ ಅಹ್ಮದಾಬಾದ್ ಐ.ಐ.ಎಮ್‌ನಿಂದ ಮ್ಯಾನೇಜ್‌ಮೆಂಟ್‌ನಲ್ಲಿ ಪದವಿ ಪಡೆದರು. ಆಧುನಿಕ ಐ.ಟಿ ರಂಗದಲ್ಲಿ ಮೆಗಾ ಅನಾಲಿಟಿಕ್ಸ್‌ನಲ್ಲಿ ಪ್ರಾವಿಣ್ಯತೆ ಗಳಿಸಿದರು. ಕೆಲಕಾಲ ಬಹುರಾಷ್ಟ್ರೀಯ ಕಂಪನಿಯಲ್ಲಿ ಕೆಲಸ ಮಾಡಿದರು. ಅವರಿಗಿರುವ ಅನುಭವವನ್ನು ನೋಡಿ ಭಾರತ ಸರ್ಕಾರ ಅವರಿಗೆ ಪೆಟ್ರೋನೆಟ್ ಇಂಡಿಯಾ ಲಿಮಿಟೆಡ್‌ನಲ್ಲಿ ಜವಾಬ್ದಾರಿಯನ್ನು ನೀಡಿತು. ಈ ಅಪಾರವಾದ ಅನುಭವದಿಂದ ಮತ್ತೊಂದು ಪ್ರತಿಷ್ಠಿತ ಐಐಟಿ ಗೋರಕ್‌ಪುರ್‌ನಲ್ಲಿ ಪ್ರಾಧ್ಯಾಪಕರಾಗಿ ಆಹ್ವಾನಿಸಿ, ಮ್ಯಾನೇಜ್‌ಮೆಂಟ್ ಎಕಾನಾಮಿಕ್ಸ್ ಬೋಧನೆಯ ಜವಬ್ದಾರಿಯನ್ನು ನೀಡಿತು. ಅಲ್ಲಿ ಕೆಲಸ ನಿರ್ವಹಿಸುತ್ತಿರುವಾಗಲೇ ಗೋವಾ ಮ್ಯಾನೇಜ್‌ಮೆಂಟ್ ಇನ್‌ಸ್ಟಿಟ್ಯೂಟ್ ಮೆಗಾ ಅನಾಲಿಟಿಕ್ ಬೋಧಿಸುವುದಕ್ಕೆ ಆಹ್ವಾನಿಸಿತು. ಈ ವಲಯದಲ್ಲಿ ಪ್ರಾವೀಣ್ಯತೆ ಹೊಂದಿದ ಕೇವಲ ಇಪ್ಪತ್ತು ಜನ ನಿಪುಣರಲ್ಲಿ ಆನಂದ್ ಒಬ್ಬರು. ನಿಜಕ್ಕೂ ಈ ಅರ್ಹತೆಗಳಿಂದಲೇ ಕರ್ನಾಟಕದ ವಿಶ್ವವಿದ್ಯಾಲಯವು ಅವರಿಗೆ ಗೌರವ ಡಾಕ್ಟರೇಟ್ ನೀಡಿ ಗೌರವಿಸಿದೆ.

ಆನಂದ್ ಈ ವಲಯಗಳಿಗೆ ಸೀಮಿತವಾಗಿದ್ದರೆ ಬಹುಶಃ ಭಾರತ ಸರ್ಕಾರ ಅವರಿಗೆ ಪದ್ಮ ಪ್ರಶಸ್ತಿಗಳನ್ನೇ ಕೊಡುತ್ತಿತ್ತು. ಸಾಕಷ್ಟು ಐಟಿ ನಿಪುಣರ ರೀತಿ ಕೇವಲ ತಮ್ಮ ವಲಯ ಬಿಟ್ಟು ಬೇರೆ ತಲೆಕೆಡಿಸಿಕೊಳ್ಳದ ಮನಸ್ಥಿತಿ ಅಲ್ಲದೇ, ಆನಂದ್‌ಗೆ ಇರುವ ಸಾಮಾಜಿಕ ಹಿನ್ನೆಲೆಯ ಕಾರಣ ಸಮಾಜದಲ್ಲಿ ಇರುವ ತಾರತಮ್ಯ, ಅಸಮಾನತೆ, ಬಡತನ, ಜಾತಿಪದ್ಧತಿ, ನಿರುದ್ಯೋಗ, ಭೂಮಿ ಸಮಸ್ಯೆ, ಜಾಗತೀಕರಣ, ಸಾಮ್ರಾಜ್ಯಶಾಹಿ ಲೂಟಿ, ಭೂಸ್ವಾಮ್ಯ ಸಂಬಂದಗಳು, ಶಿಕ್ಷಣ, ಆರೋಗ್ಯದಂತಹ ಸಮಸ್ಯೆಗಳ ಮೇಲೆ ಸ್ಪಂದಿಸುತ್ತಾ ಬಂದರು. ಒಂದು ಕಡೆ ತನ್ನ ಅನಲಿಟಿಕ್ಸ್ ಜವಾಬ್ದಾರಿಯನ್ನು ನಿರ್ವಹಿಸುತ್ತಾ ನಿರಂತರವಾಗಿ ಈ ಸಮಸ್ಯೆಗಳೆಲ್ಲವುಗಳ ಮೇಲೆ ಬರೆದರು. ಉದಾಹರಣೆಗೆ ಆತ ರಚಿಸಿದ ಗುಣಮಟ್ಟದ ಪುಸ್ತಕ ಕೈರ್‍ಲಾಂಜಿ ಕೇವಲ ಹತ್ತು ದಿನಗಳಲ್ಲಿ ಅದು ಚೈನಾದ ಬೀಜಿಂಗ್‌ನಿಂದ ಕೀನ್ಯಾಗೆ ಪ್ರಯಾಣಿಸುತ್ತಾ ವಿಮಾನದಲ್ಲಿ, ವಿಮಾನಾಶ್ರಯದಲ್ಲಿ ಕಳೆದ ಸಮಯದಲ್ಲಿ ಬರೆದರು. ನವಯಾನ ಎನ್ನುವ ಪ್ರಕಾಶಕ ಸಂಸ್ಥೆಯ ಮುಖ್ಯಸ್ಥ ಎಸ್.ಆನಂದ್ ಈ ವಿಷಯವನ್ನು ಪ್ರಸ್ತಾಪಿಸುತ್ತಾ ಆನಂದ್ ಬಹಳ ಸೃಜನಶೀಲರೆಂದು ಹೇಳಿದ್ದಾರೆ.

ಬ್ರಾಹ್ಮಣ್ಯದ ಸಿದ್ಧಾಂತ, ಜಾತಿ ವ್ಯವಸ್ಥೆ, ನಿಯೋ ಲಿಬರಲಿಜಂ, ಭೂಮಾಲೀಕತ್ವ, ಎಲ್ಲದಕ್ಕೂ ಮಿಗಿಲು ದೇಶದಲ್ಲಿ ಬಲಗೊಳ್ಳುತ್ತಿರುವ ಪ್ಯಾಸಿಸ್ಟ್ ಶಕ್ತಿಗಳ ಮೇಲೆ ಅವರು ಆಳವಾದ ಬರವಣಿಗೆಗಳನ್ನು ಬರೆದದ್ದೆ ಅಲ್ಲದೇ, ದೇಶದಲ್ಲಿರುವ ಬಡ ಸಮುದಾಯಗಳಿಗೆ ಡಾ.ಅಂಬೇಡ್ಕರ್ ಸೂಚಿಸಿದ ಹಾಗೆ ಸುಶಿಕ್ಷಿತರನ್ನಾಗಿ ಮಾಡುವ ಜವಾಬ್ದಾರಿ ತಲೆಯ ಮೇಲೆ ಹಾಕಿಕೊಂಡರು. ಬಡ ಸಮುದಾಯಗಳ ಮೇಲೆ ಪ್ರತ್ಯೇಕವಾಗಿ ದಲಿತರ ಮೇಲೆ ದಾಳಿಗಳು ನಡೆದರೆ ಆನಂದ್ ಖುದ್ದಾಗಿ ಅಲ್ಲಿಗೆ ಹೋಗಿ ಅವರ ಪರ ನಿಂತರು. ಹಳೆಯ ಮೆಹಬೂಬನಗರ್ ಜಿಲ್ಲೆಯ ಪಾತಪಲ್ಲೆ ಗ್ರಾಮದಲ್ಲಿ ದಲಿತರ ಮೇಲೆ ಬೋಯ ಸಮುದಾಯ ದಾಳಿ ಮಾಡಿದಾಗ ಎರಡು ಬಾರಿ ಊರಿಗೆ ತೆರಳಿ, ಹೋರಾಡಿ ನ್ಯಾಯ ಸಿಗುವ ಹಾಗೆ ಕೆಲಸ ಮಾಡಿದರು. ಡಾ.ಅಂಬೇಡ್ಕರ್ ಕುಟುಂಬದ ಸದಸ್ಯ ಬಂದರು ಎನ್ನುವುದು ದೊಡ್ಡ ಸುದ್ದಿಯಾಯಿತು. ನಾನು ಪಾತಪಲ್ಲೆಗೆ ಹೋದಾಗ ಬೋಯ ಸಮುದಾಯದವರು ಅಂಬೇಡ್ಕರ್ ಮೊಮ್ಮಗ ಬರುವಷ್ಟು ಅಪರಾಧ ನಾವು ಏನು ಮಾಡಿದ್ದೇವೆ ಎಂದರು. ಆನಂದ್ ಬಂದ ಕಾರಣದಿಂದ ಜಿಲ್ಲಾ ಯಂತ್ರಾಂಗವು ಸಹ ಸ್ಪಂದಿಸಿತು. ಇದು ಕೇವಲ ಒಂದು ಉದಾಹರಣೆ. ಇಷ್ಟು ಅಪರೂಪವಾದ ವ್ಯಕ್ತಿಯನ್ನು ಯುಎಪಿಎ ಕಾಯ್ದೆಯ ಕೆಳಗೆ ಬಂಧಿಸುವುದು ಎಂದರೆ ದೇಶ ಯಾವ ದಿಕ್ಕಿಗೆ ಹೋಗುತ್ತಿದೆ ಎಂಬುದನ್ನು ಸ್ಪಷ್ಟವಾಗಿ ನೋಡಬಹುದು.

ಇಷ್ಟಕ್ಕೂ ಆನಂದ್ ಮಾಡಿದ ಅಪರಾಧವೇನು, ಅವರ ಮೇಲೆ ಹೊರೆಸಿದ ಅಪರಾಧವೇನಾಗಿತ್ತು? ಅವರ ಮೇಲೆ ಹೊರೆಸಿದ ಅಪರಾಧ ಭೀಮಾ ಕೊರೆಗಾವ್ ಘಟನೆಯ ಜೊತೆ ಸಂಬಂಧವಿದೆ, ಭೀಮಾ ಕೊರೆಗಾವ್ ಮಾವೋಯಿಸ್ಟ್ ಪಕ್ಷದ ಬೆಂಬಲದಿಂದ ನಡೆಯಿತೆನ್ನುವುದು ಪ್ರಧಾನವಾದ ಆರೋಪ. ಭೀಮಾ ಕೋರೆಗಾವ್ ನಿಜಕ್ಕೂ ಬಾಬಾ ಸಾಹೇಬ್ ಅಂಬೇಡ್ಕರ್ ರಾಜಕೀಯ ಹೋರಾಟದ ಶ್ರಮದ ಭಾಗ. ಅಂದಾಜು ಎರಡು ಶತಮಾನಗಳ ಕೆಳಗೆ ಬ್ರಾಹ್ಮಣ ಪೇಶ್ವೆಗಳನ್ನು ಸೋಲಿಸಿದ ಬ್ರೀಟಿಷ್ ಸೈನ್ಯದಲ್ಲಿ ದಲಿತರು ಮುಖ್ಯವಾದ ಪಾತ್ರ ನಿರ್ವಹಿಸಿದರು. ಈ ಘಟನೆಯ ಮೂಲಕ ದಲಿತರಲ್ಲಿ ಚೈತನ್ಯವನ್ನು, ಆತ್ಮವಿಶ್ವಾಸವನ್ನು ಬೆಳೆಸಬಹುದೆಂದು ಅಂಬೇಡ್ಕರ್ ಚಿಂತಿಸಿದರು. ಯಾವ ವರ್ಷವೂ ಇಲ್ಲದೇ 2018ರಲ್ಲಿಯೇ ಇದು ವಿವಾದಾಸ್ಪದವಾಗಿ ಬದಲಾಯಿತು. ಅದನ್ನು ಕೇಂದ್ರ, ಮಹಾರಾಷ್ಟ್ರ ಬಿಜೆಪಿ ಸರ್ಕಾರಗಳು ಇದನ್ನು ಬಳಸಿಕೊಂಡು ದೇಶದಲ್ಲಿನ ಹನ್ನೊಂದು ಮಂದಿ ಅತ್ಯಂತ ಪ್ರತಿಭಾವಂತರನ್ನು ಅರೆಸ್ಟು ಮಾಡಿತು. ಮೌಲ್ಯಗಳುಳ್ಳ, ಮೌಲಿಕ ಬದುಕು ನಡೆಸುತ್ತಿರುವ, ವ್ಯವಸ್ಥೆಯ ಜೊತೆ ರಾಜಿಯಾದರೇ ಅದೆಷ್ಟೋ ಬಿರುದು, ಪದವಿಗಳನ್ನಾದರೂ ಪಡೆದು ಜೀವನದಲ್ಲಿ ಸುಖವಾಗಿ ಬದುಕಬಲ್ಲವರಾಗಿದ್ದ ಆ 11 ಜನರು ಇಂದು ಈ ರೀತಿಯಲ್ಲಿ ಜೈಲಿನಲ್ಲಿ ಬಂದಿಗಳಾಗಿದ್ದಾರೆ. ಮೊದಲಿಗೆ ಒಂಬತ್ತು ಮಂದಿಯನ್ನು ಪೂನಾ ಪೋಲಿಸರು ಬಂಧಿಸಿದರು. ಇದರಲ್ಲಿ ಆನಂದ್ ತೇಲ್ತುಂಬ್ಡೆ, ಗೌತಮ್ ನವಲಖ ಹೊರಗಡೆ ಇದ್ದುಬಿಟ್ಟಿದ್ದರು. ಆನಂದ್ ವಿಷಯದಲ್ಲಿ ಬಾಂಬೆ ಹೈಕೋರ್ಟ್, ಹಾಗೆಯೇ ನವಲಖ ವಿಷಯದಲ್ಲಿ ದೆಹಲಿ ಹೈಕೋರ್ಟ್ ಕೆಲವು ಸಾಂಕೇತಿಕ ಲೋಪಗಳಿಂದ ಸ್ಟೇ ಕೊಟ್ಟಿದ್ದರು. ಈ ಸ್ಟೇ ಮುಂದುವರೆಯುತ್ತಿರುವ ಸಮಯದಲ್ಲೇ ಮಹಾರಾಷ್ಟ್ರದಲ್ಲಿ ಬಿಜೆಪಿ ಸರ್ಕಾರದ ಅಧಿಕಾರ ಹೋಯಿತು. ಹೊಸದಾಗಿ ಅಧಿಕಾರಕ್ಕೆ ಬಂದ ಸರ್ಕಾರದ ಪಾಲುದಾರರನ್ನು ನಾವು ಭೇಟಿಯಾಗಿದ್ದೆವು. ಭೀಮಾ ಕೊರೇಗಾವ್ ಘಟನೆ ಹಾಗೂ ಪ್ರಧಾನಮಂತ್ರಿ ಮೇಲೆ ಹತ್ಯೆಗೆ ಪಿತೂರಿ ಎನ್ನುವುದು ಕೇವಲ ಕಾಲ್ಪನಿಕ, ಇವು ಅಮಾಯಕರ ಮೇಲೆ ಹಾಕಿದ ಕೇಸುಗಳೆಂದು ಎನ್.ಸಿ.ಪಿ ಹಿರಿಯ ನಾಯಕ ಶರದ್ ಪವಾರ್ ನಮ್ಮೊಡನೆ ಹೇಳಿದ್ದರು.

ಇದಾದ ಕೆಲವೇ ದಿನಗಳಲ್ಲಿ, ಕೇಸಾದ 18 ತಿಂಗಳ ನಂತರ ಕೇಂದ್ರ ಸರ್ಕಾರವು ಈ ಒಟ್ಟು ಮಹಾರಾಷ್ಟ್ರ ಸರ್ಕಾರದ ವ್ಯಾಪ್ತಿಯಿಂದ ತೆಗೆದು ತಾವೇ ಇದನ್ನು ಎನ್.ಐ.ಎ ಮುಖಾಂತರ ಡೀಲ್ ಮಾಡುತ್ತೇವೆಂದು ತಮ್ಮ ವ್ಯಾಪ್ತಿಗೆ ತೆಗೆದುಕೊಂಡಿತು. ಈ ನಿರ್ಣಯದ ನಂತರ ಆನಂದ್ ತೇಲ್ತುಂಬ್ಡೆ, ಗೌತಮ್ ನವಲಖ ಅವರ ಬಂಧನಕ್ಕಿದ್ದ ತಡೆಯಾಜ್ಞೆ ತೆರವಾಗಿ ಈಗ ಬಂಧನಕ್ಕೆ ಆದೇಶಿಸಲಾಗಿದೆ.

ಆನಂದ್ ಅರೆಸ್ಟ್‌ನ್ನು ದೇಶದೆಲ್ಲೆಡೆ ಅಲ್ಲದೇ, ಅಂತರ್ರಾಷ್ಟ್ರೀಯವಾಗಿಯೂ ನೋಮ್‌ಚಾಮಸ್ಕಿಯೊಂದಿಗೆ ಬಹಳ ಜನ ಪ್ರತಿಭಟಿಸಿದರು. ಅವರು ಅರೆಸ್ಟ್ ಆಗುತ್ತಾರೆ ಎನ್ನುವ ಸುದ್ದಿ ಬರುತ್ತಿದ್ದಂತೆ ಅಂದಾಜು ಹದಿನೇಳು ಸಾವಿರ ಟ್ವಿಟ್ಸ್ ಅದನ್ನು ವಿರೋಧಿಸಿ ಬಂದದ್ದು ನೋಡಿದರೆ ಅವರಿಗಿರುವ ಬೆಂಬಲ ಎಂದು ತಿಳಿಯುತ್ತದೆ. ಆನಂದ್ ಅಖಿಲ ಭಾರತೀಯ ಶಿಕ್ಷಣ ಹಕ್ಕು ವೇದಿಕೆಯ ಅಧ್ಯಕ್ಷ ಮಂಡಳಿಯ ಸದಸ್ಯರು. ಈ ವೇದಿಕೆ ಆನಂದ್ ಬಂಧನವನ್ನು ವಿರೋಧಿಸಿ ದೇಶಾದ್ಯಂತ ಪ್ರತಿಭಟನೆ ನಡೆಸುತ್ತಿದೆ. ಈ ವೇದಿಕೆಯು ಎಲ್ಲರಿಗೂ ಸಮಾನವಾದ, ಗುಣಮಟ್ಟದ, ಉಚಿತವಾದ ಶಿಕ್ಷಣ ಸಿಗಬೇಕೆಂದು ಕಳೆದ ದಶಕಗಳಿಂದ ಹೋರಾಡುತ್ತಿದೆ. ಈ ಹೋರಾಟದ ಪ್ರಮುಖ ಭಾಗವಾಗಿ ಆನಂದ್ ಇದ್ದಾರೆ. ಒಂದು ಕಡೆ ಕೊರೊನಾ ಕರಾಳ ನೃತ್ಯ ಮಾಡುತ್ತಿದೆ, ಮನುಷ್ಯ ಜೀವಿಯ ಭವಿಷ್ಯವೇನೋ ತೀರ್ಮಾನಿಸಿಕೊಳ್ಳಿ ಎನ್ನುತ್ತಿದೆ. ಕಾಣಿಸದ ನಿರ್ಜೀವಿಯೊಂದು ಜಗತ್ತೆಲ್ಲವನ್ನು ಜೈಲುಗಳೊಳಕ್ಕೆ ತಳ್ಳಿದೆ. ಮನೆಯಿಂದ ಕದಲುವುದಕ್ಕೆ ಬಿಡುವುದಿಲ್ಲವೆನ್ನುತ್ತಿದೆ. ಭೀಮಾ ಕೊರೆಗಾವ್ ಘಟನೆಯಲ್ಲಿ ವರವರರಾವ್ ಅಂತಹ ಮಿತ್ರರನ್ನು ಗೃಹಬಂಧನವೆಂದು ಒಂದಷ್ಟು ಕಾಲ ಮನೆಯಲ್ಲೇ ನಿರ್ಬಂಧಿಸಿದರು. ಇಂದು ಕರೊನಾ ಎಲ್ಲರನ್ನೂ ಗೃಹ ಬಂಧನಕ್ಕೆ ತಳ್ಳಿದೆ. ಈಗ ಜೈಲಿನಲ್ಲಿರುವ ಖೈದಿಗಳನ್ನು ಕನಿಷ್ಟ ಆರು ವಾರಗಳ ಪೆರೊಲ್ ಮೇಲೆ ಬಿಡುಗಡೆ ಮಾಡಬೇಕೆಂದು ಸುಪ್ರೀಂಕೋರ್ಟ್ ಆದೇಶಿಸಿದೆ. ಇದರ ಭಾಗವಾಗಿಯೇ ಮಹಾರಾಷ್ಟ್ರದಲ್ಲಿ 11,000 ಮಂದಿಯನ್ನು ಬಿಡುಗಡೆ ಮಾಡಿದ್ದಾರೆ. ಬಹಳ ಆಶ್ಚರ್ಯವೆಂದರೆ ಅಂತಹದೊಂದು ಆದೇಶ ಜಾರಿಯಲ್ಲಿರುವಾಗಲೇ ಆನಂದ್‌ರಂತಹವರಿಗೆ ಆ ಅವಕಾಶವೂ ಇಲ್ಲದೇ, ವಕೀಲರು ವಾದಿಸಿದರು ಸಹ ಕೇಳದೆ, ಒಂದು ವಾರದಲ್ಲಿ ಶರಣಾಗಬೇಕೆಂದು ಸುಪ್ರೀಂಕೋರ್ಟ್ ಆದೇಶಿಸಿದೆ. ಆ ವಾರಾಂತ್ಯ ವಿಚಿತ್ರವಾಗಿ ಡಾ.ಅಂಬೇಡ್ಕರ್ ಜಯಂತಿ, 14 ಏಪ್ರಿಲ್ ಆಗಿದೆ. ಅಂಬೇಡ್ಕರ್ ಮೇಲೆ ಗೌರವದ ಸೂಚನೆಯಾಗಿ ಕೇಂದ್ರ ಸರ್ಕಾರ ರಜೆ ಪ್ರಕಟಿಸಿದೆ. ಒಂದು ಕಡೆ ಅಂಬೇಡ್ಕರ್‌ವರಿಗೆ ಗೌರವ ಸೂಚಿಸುತ್ತಲೇ ಆತನ ಕುಟುಂಬ ಸದಸ್ಯನನ್ನು ಜೈಲು ಪಾಲು ಮಾಡುತ್ತಿರುವುದರಲ್ಲಿ ಸರ್ಕಾರದ ದ್ವಂದ್ವ ನೀತಿ ಕಾಣಿಸುತ್ತದೆ ಎಂದು ಆನಂದ್ ಹೇಳಿರುವುದು ಎಲ್ಲರನ್ನು ಆಲೋಚಿಸುವಂತೆ ಮಾಡುತ್ತಿದೆ. ದೇಶವು ತನ್ನ ಸ್ವಭಾವವನ್ನ ತನಗೆ ತಿಳಿಯದ ಹಾಗೆಯೇ ಬಹಿರಂಗಪಡಿಸುತ್ತದೆ ಎನ್ನುವುದಕ್ಕೆ ಇದಕ್ಕಿಂತ ದೊಡ್ಡ ನಿದರ್ಶನದ ಅವಶ್ಯಕತೆ ಇಲ್ಲ.

ತೆಲುಗು ಮೂಲ: ಪ್ರೊ.ಜಿ.ಹರಗೋಪಾಲ್

ಅನುವಾದ: ಅನಿಲ್‌ಕುಮಾರ್ ಚಿಕ್ಕದಾಳವಟ್ಟ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ಅಯೋಗ್ಯರ ಕೈಯಲ್ಲಿ ದೇಶದ ಹಿಡಿತ ಸೀಮಿತವಾದಾಗ ಇಂತಹ ದುರಂತಗಳು ಎದುರಾಗಬಹುದು

    ಪ್ರಭುದ್ಧ ಭಾರತೀಯ ಸಮೂಹಕ್ಕೆ ಜ್ಞಾನದ ಕೊರತೆ ಮತ್ತಿನ್ನೊಂದು ಏನಪ್ಪಾ ಅಂದರೆ ಮತ ಮಾರಿಕೊಳ್ಳುವ ತನವನ್ನು ಹೋಗಲಾಡಿಸಬೇಕು
    ಕಾಂಗ್ರೆಸ್ ತೋರಿಸಿಕೊಟ್ಟ ಪಾಠ ಬಿಜೆಪಿಯವರು ನೂರುಪಟ್ಟು ಜಾಸ್ತಿ ಮಾಡುತ್ತಿದ್ದಾರೆ ಅಂದರೆ ಒಂದೇ ನಾಣ್ಯದ ಮುಖವಿದ್ದಂತೆ ಎಂದರೆ ತಪ್ಪಾಗಲಾರದು ಜೈ ಭೀಮ್ ಜೈ ಭಾರತ್

LEAVE A REPLY

Please enter your comment!
Please enter your name here

- Advertisment -

ಸಂವಿಧಾನ ಬದಲಿಸಿ ಮನುಸ್ಮೃತಿ ತರಲು SIR ಷಡ್ಯಂತ್ರ: ನಟ ಕಿಶೋರ್

ದೇಶದ ಬಹುಕೋಟಿ ಉದ್ಯಮಿ ಗೌತಮ್ ಅದಾನಿಯದ್ದೇ ಇರಲಿ ಅಥವಾ ಒಬ್ಬ ಬಡ ರೈತನದ್ದೇ ಇರಲಿ, ಪ್ರಜಾಪ್ರಭುತ್ವದಲ್ಲಿ ಎಲ್ಲರ ಮತವೂ ಒಂದೇ ಸಮ. ಪ್ರಜೆಗಳನ್ನೆಲ್ಲ ಸಮಾನವಾಗಿ ಕಾಣುವ ಏಕೈಕ ಅಸ್ತ್ರ ಎಂದರೆ ಅದು ಮತದಾನದ...

Nepal: ಭೀಕರ ಪ್ರವಾಹಕ್ಕೆ ಸವಾಲೆಸೆದು ನಿಂತ ‘ಗ್ರೀನ್ ಹೌಸ್’ ಸ್ಟೋರಿ

'ನಮ್ಮ ಬದುಕು ಇಷ್ಟಕ್ಕೇ ಅಂತ್ಯವಾಯಿತು ಎನಿಸುವ ಕ್ಷಣಗಳು ಎದುರಾದಾಗ ಮನಸ್ಸಿನಲ್ಲಿ ಏನು ಓಡಬಹುದು? ಪ್ರವಾಹ ಬಂದಾಗ ನನಗೂ ಅದೇ ಅನಿಸಿತ್ತು' ಇದು ನೇಪಾಳದ ನುವಾಕೋಟ್ ಜಿಲ್ಲೆಯ ತ್ರಿಶೂಲಿ ನದಿಯಲ್ಲಿ ಹರಿದುಬಂದ ಭೀಕರ ಪ್ರವಾಹದಿಂದ...

NEET: ದೇಶಾದ್ಯಂತ ಪ್ರತಿಭಟನಾಕಾರರ ವಿರುದ್ದ ದಾಖಲಾಗಿದ್ದ ಎಲ್ಲಾ FIRಗಳನ್ನು ರದ್ದುಗೊಳಿಸಿದ ಸುಪ್ರೀಂ ಕೋರ್ಟ್

ಮರುಪರೀಕ್ಷೆ ಮತ್ತು ಪ್ರಶ್ನೆ ಪತ್ರಿಕೆ ಸೋರಿಕೆ ವಿರೋಧಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ‘ಕಾಕ್ರೋಚ್ ಜನತಾ ಪಾರ್ಟಿ’ಯ (CJP) ಪ್ರತಿಭಟನಾಕಾರರ ವಿರುದ್ಧ ದಾಖಲಾಗಿದ್ದ ಎಲ್ಲಾ FIR ಗಳನ್ನು ಸುಪ್ರೀಂ ಕೋರ್ಟ್ ಮಂಗಳವಾರ ರದ್ದುಗೊಳಿಸಿದೆ. ಕೇಂದ್ರ ಸರ್ಕಾರವು ಈ...

ಚುನಾವಣಾ ಆಯೋಗ ಚಲೋ: ನಟ ಪ್ರಕಾಶ್ ರಾಜ್ ಸೇರಿದಂತೆ ನೂರಾರು SIR ಸಂತ್ರಸ್ತರು, ಹೋರಾಟಗಾರರನ್ನು ವಶಕ್ಕೆ ಪಡೆದ ಪೊಲೀಸರು

ಕರ್ನಾಟಕ ರಾಜ್ಯದ ಅರ್ಹ ಮತದಾರರ ‘ಮತಹರಣ’ ಖಂಡಿಸಿ ‘ಎಸ್‌ಐಆರ್ ವಿರೋಧಿ ಒಕ್ಕೂಟ’ ಹಮ್ಮಿಕೊಂಡಿದ್ದ ‘ಚುನಾವಣಾ ಆಯೋಗ ಚಲೋ’ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಬಹುಭಾಷಾ ನಟ ಪ್ರಕಾಶ್ ರಾಜ್, ಕಿಶೋರ್ ಹಾಗೂ ಪ್ರಮುಖ ನಾಯಕರು ಸೇರಿದಂತೆ...

‘ಚುನಾವಣಾ ಆಯೋಗ ಚಲೋ’: ‘ಮುಚ್ಚಿದ ಬಾಗಿಲಿನ ಮಾತುಕತೆ ಬೇಡ, ಎಲ್ಲವೂ ಸಾರ್ವಜನಿಕರ ಮುಂದೆಯೇ ಇತ್ಯರ್ಥವಾಗಬೇಕು’: ನೂರ್ ಶ್ರೀಧರ್ ಆಗ್ರಹ

ಬೆಂಗಳೂರು: ಕರ್ನಾಟಕದಲ್ಲಿ ನಡೆದ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯು ರಾಜ್ಯದ ಪ್ರಜಾಸತ್ತಾತ್ಮಕ ವ್ಯವಸ್ಥೆಯಲ್ಲಿ ಬೃಹತ್ ಕಳವಳವನ್ನು ಸೃಷ್ಟಿಸಿದೆ. ಕೇಂದ್ರ ಚುನಾವಣಾ ಆಯೋಗವು ಬಿಡುಗಡೆ ಮಾಡಿರುವ ನೂತನ ಕರಡು ಮತದಾರರ...

SIR ಎಂಬುದು ಪ್ರಜಾಪ್ರಭುತ್ವವನ್ನು ಹಾಳುಮಾಡುವ ದೊಡ್ಡ ಸಂಚು ಮತ್ತು ಮೋಸ: ಪ್ರಕಾಶ್ ರಾಜ್

"ನಾನು ಸಣ್ಣವನಿದ್ದಾಗ ಮುಕ್ಕೂಟಿ ಕನ್ನಡಿಗರು ಎನ್ನುತ್ತಿದ್ದರು. ದಶಕಗಳ ನಂತರ ಪಂಚಕೋಟಿ ಕನ್ನಡಿಗರಾಗಿ, ಈಗ ಶತಕೋಟಿ ಆಗಬೇಕಿತ್ತು. ಆದರೆ ಮತದಾರರ ಪಟ್ಟಿ ವಿಶೇಷ ಸಾಂದ್ರ ಪರಿಷ್ಕರಣೆ (SIR) ಹೆಸರಿನಲ್ಲಿ ಮತ್ತೆ ಮುಕ್ಕೂಟಿಗೆ ತಂದು ನಿಲ್ಲಿಸಲಾಗುತ್ತಿದೆ....

‘ಚುನಾವಣಾ ಆಯೋಗ ಚಲೋ’: ಎಸ್ಐಆರ್ ಅನ್ಯಾಯವನ್ನು ಪ್ರಶ್ನಿಸಲು ನಾವು ಚುನಾವಣಾ ಆಯೋಗಕ್ಕೆ ಮುತ್ತಿಗೆ ಹಾಕುತ್ತಿದ್ದೇವೆ: ಯೂಸುಫ್ ಕನ್ನಿ

ಬೆಂಗಳೂರು: ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಹೆಸರಿನಲ್ಲಿ ಅರ್ಹ ನಾಗರಿಕರ ಮತದಾನದ ಹಕ್ಕನ್ನು ಕಸಿದುಕೊಳ್ಳಲಾಗುತ್ತಿದೆ ಎಂದು ಆರೋಪಿಸಿ ‘ಎಸ್‌ಐಆರ್ ವಿರೋಧಿ ಕರ್ನಾಟಕ’ ವೇದಿಕೆಯು 2026 ಸೆಪ್ಟಂಬರ್ 01, ಮಂಗಳವಾರ ಹಮ್ಮಿಕೊಂಡಿದ್ದ...

SIR:‘ನಾವು ಕಳ್ಳರಲ್ಲ, ಈ ದೇಶದ ಮೂಲ ನಿವಾಸಿಗಳು’ SIR ಸಂತ್ರಸ್ತರ ಜೊತೆ ಪ್ರಕಾಶ್ ರಾಜ್ ಸಂವಾದ

"ನಾವು ಈ ದೇಶದ ನಾಗರಿಕರು, ಕಳ್ಳರಲ್ಲ. ಮತದಾರರ ಪಟ್ಟಿಯಿಂದ ಹೆಸರು ಡಿಲೀಟ್ ಮಾಡಿ ನಮ್ಮ ಸ್ವಾಭಿಮಾನಕ್ಕೆ ಧಕ್ಕೆ ತರಲಾಗುತ್ತಿದೆ. ನಮ್ಮ ಹಕ್ಕನ್ನು ಉಳಿಸಿಕೊಳ್ಳಲು ನಾವು ಹೋರಾಟ ನಡೆಸುತ್ತಿದ್ದೇವೆ," ಎಂದು ಬಹುಭಾಷಾ ನಟ ಹಾಗೂ...

‘ವಿದೇಶದಲ್ಲಿ ಚಿನ್ನ ಖರೀದಿಸಬೇಡಿ, ವಿವಾಹವಾಗಬೇಡಿ’: ಭಾರತೀಯರಿಗೆ ಮೋದಿ ಮನವಿ

ಭಾರತೀಯರು ಅನಗತ್ಯವಾಗಿ ವಿದೇಶಿ ಪ್ರವಾಸ ಕೈಗೊಳ್ಳುವುದನ್ನು, ವಿದೇಶಗಳಲ್ಲಿ ವಿವಾಹವಾಗುವುದನ್ನು ಹಾಗೂ ಅಗತ್ಯವಿಲ್ಲದಿದ್ದರೆ ವಿದೇಶದಿಂದ ಚಿನ್ನ ಖರೀದಿಸುವುದನ್ನು ಸಂಪೂರ್ಣವಾಗಿ ತಪ್ಪಿಸಬೇಕು ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಮನವಿ ಮಾಡಿದ್ದಾರೆ. ಸ್ವಾವಲಂಬನೆಗೆ ಉತ್ತೇಜನ ನೀಡುವುದರ...

ಧಾರವಾಡ | ಪ್ರಕಾಶ್ ರಾಜ್ ಭಾಗವಹಿಸಿದ್ದ ಸಮುದಾಯ ಕಾರ್ಯಕ್ರಮಕ್ಕೆ ಅಡ್ಡಿಪಡಿಸಲು ಯತ್ನ : ದೂರು ದಾಖಲು

ಭಾನುವಾರ (ಆ.30) ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದ ಸಭಾ ಭವನದಲ್ಲಿ ಆಯೋಜಿಸಿದ್ದ ಸಮುದಾಯ ಸಂಘಟನೆಯ ಕಾರ್ಯಕ್ರಮಕ್ಕೆ ಅಡ್ಡಿಪಡಿಸಲು ಯತ್ನಿಸಿ ಗಲಾಟೆ ಎಬ್ಬಿಸಿದ ಬಿಜೆಪಿ-ಸಂಘಪರಿವಾರದ ಬೆಂಬಲಿಗರ ವಿರುದ್ಧ ದೂರು ದಾಖಲಿಸಲಾಗಿದೆ. ಸಮುದಾಯ ಸಂಘಟನೆಯ ಧಾರವಾಡದ...