ತುಮಕೂರು ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಡಿಡಿಪಿಐ ಕಾಮಾಕ್ಷಮ್ಮ ಅವರ ಎತ್ತಂಗಡಿಗೆ ಜಾತಿವಾದಿ ‘ರಾಜಕಾರಣಿ ಶಿಕ್ಷಕರ ಗುಂಪು’ ಲಾಬಿ ನಡೆಸಿದೆ. ಡಿಡಿಪಿಐ ತಮ್ಮ ತಾಳಕ್ಕೆ ತಕ್ಕಂತೆ ಕುಣಿಯಬೇಕು. ಹೇಳಿದಂತೆ ಕೇಳಬೇಕು ಎಂಬುದೇ ಈ ಶಿಕ್ಷಕರ ಗುಂಪಿನ ಉದ್ದೇಶ. ಕಾರ್ಯಸಾಧನೆಗೆ ಯಾರ ಕಾಲನ್ನಾದರೂ ಹಿಡಿಯಬಲ್ಲರಾದ ಇವರು ತಮ್ಮ ಉದ್ದೇಶ ಈಡೇರದಿದ್ದರೆ ಯಾರ ಕಾಲೆಳೆಸಲು ಸಹ ಸಿದ್ಧರು.
ಶಿಕ್ಷಣ ಇಲಾಖೆಯಲ್ಲಿ ಶಿಕ್ಷಕರ ವರ್ಗಾವಣೆಯನ್ನು ಕೇಂದ್ರೀಕರಣಗೊಳಿಸಿದೆ. ಕೌನ್ಸಿಲ್ ಮೂಲಕವೇ ಶಿಕ್ಷಕರ ವರ್ಗಾವಣೆ ನಡೆಯುತ್ತದೆ. ವಸ್ತುಸ್ಥಿತಿ ಹೀಗಿದ್ದರೂ ವರ್ಗಾವಣೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಡಿಡಿಪಿಐ ಭ್ರಷ್ಟಾಚಾರ ನಡೆಸುತ್ತಿದ್ದಾರೆ ಎಂಬ ವದಂತಿಯನ್ನು ಹಬ್ಬಿಸಲಾಗಿದೆ.
ಮೇಲಧಿಕಾರಿಗಳು ಅಧಿಕಾರ ನೀಡಿದರೆ ಮಾತ್ರ ಡಿಡಿಪಿಐಗೆ ಶಿಕ್ಷಕರ ವರ್ಗಾವಣೆ ಮಾಡುವ ಅಧಿಕಾರವಿದೆ. ವಿಶೇಷ ಪ್ರಕರಣಗಳಲ್ಲಿಯೂ ಮೇಲಿನ ಆದೇಶವಿಲ್ಲದೆ ಏನೂ ಮಾಡುವ ಹಾಗಿಲ್ಲ. ಆದರೆ ಶಿಕ್ಷಕರ ಡೆಪ್ಯೂಟೇಶನ್ ಮಾಡುವ ಅಧಿಕಾರ ಡಿಡಿಪಿಐಗೆ ಇದೆ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ. ಆದರೆ ಕೆಲವು ಜಾತಿವಾದಿ ಪಟ್ಟಭದ್ರ ಶಿಕ್ಷಕರ ಗುಂಪು ತಾವು ಹೇಳಿದಂತೆ ಕೇಳುತ್ತಿಲ್ಲ ಎಂಬ ಕಾರಣಕ್ಕೆ ಡಿಡಿಪಿಐ ಕಾಮಾಕ್ಷಮ್ಮ ವರ್ಗಾವಣೆಗೆ ಮಸಲತ್ತು ನಡೆಸಿದೆ.

ಕಾಮಾಕ್ಷಮ್ಮ ಅವರು ಈ ಹಿಂದೆ ಬಾಗಲಕೋಟೆಯಲ್ಲಿ ಕೆಲಸ ಮಾಡಿಬಂದವರು. ಬಾಗಲಕೋಟೆಯಲ್ಲಿ ಉತ್ತಮ ಕೆಲಸ ಮಾಡಿ ಹೆಸರು ಮಾಡಿದ್ದರು. ತುಮಕೂರಿಗೆ ಬಂದ ಮೇಲೆ ಜಾತಿವಾದಿ ರಾಜಕಾರಣಿ ಶಿಕ್ಷಕರ ಗುಂಪು ಡಿಡಿಪಿಐ ವಿರುದ್ಧ ವದಂತಿಗಳನ್ನು ಹಬ್ಬಿಸುತ್ತಲೇ ಇದೆ. ಮಹಿಳಾ ಅಧಿಕಾರಿಯನ್ನು ಎತ್ತಂಗಡಿ ಮಾಡಿಸಿ ತಮ್ಮ ಮಾತು ಕೇಳುವವರನ್ನು ತಂದು ಹಾಕಿಸಿಕೊಳ್ಳುವುದು ಈ ಗುಂಪಿನ ಉದ್ದೇಶವಾಗಿದೆ ಎಂದು ಹೇಳಾಗುತ್ತಿದೆ.
ಇದೀಗ ಮತ್ತೊಂದು ಸುದ್ದಿ ಹಬ್ಬಿದೆ. ತುಮಕೂರಿನ ಡಾ. ರಾಧಾಕೃಷ್ಣನ್ ರಸ್ತೆಯ ಸೋಮೇಶ್ವರ ಮುಖ್ಯರಸ್ತೆಯ ತಿರುವಿನಲ್ಲಿರುವ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಕಚೇರಿ ಆವರಣದಲ್ಲಿ ದೊಡ್ಡದೊಂದು ಗುಂಡಿ ತೆಗೆಯಲಾಗಿದೆ. ಈ ಮಾಹಿತಿ ಜಿಲ್ಲಾ ಪಂಚಾಯಿತಿ ಸಿಇಒ ಶುಭ ಕಲ್ಯಾಣ್ ಅವರಿಗೆ ತಲುಪಿ ರಾತ್ರಿ 9 ಗಂಟೆಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಅಷ್ಟೊತ್ತಿಗೆ ಡಿಡಿಪಿಐ ಕಾಮಾಕ್ಷಮ್ಮ ಅವರ ಮೊಬೈಲ್ ಸ್ವಿಚ್ ಆಫ್ ಆಗಿತ್ತು. ಹಾಗಾಗಿ ಮಹಿಳಾ ಅಧಿಕಾರಿಯ ಪತಿಗೆ ಕರೆ ಮಾಡಿದ ಸಿಐಒ ಸ್ಥಳಕ್ಕೆ ಕರೆಸಿಕೊಂಡು ವಿವರ ಕೇಳಿದ್ದಾರೆ. ಕಸ ಮುಚ್ಚಲು ಗುಂಡಿ ತೋಡಿ ಎಂದು ನಾನೇ ಹೇಳಿದ್ದ ಎಂದು ಡಿಡಿಪಿಐ ಒಪ್ಪಿಕೊಂಡಿದ್ದಾರೆ. ಹಾಗಾಗಿ ಸಿಇಓ ಶುಭಕಲ್ಯಾಣ್ ಗುಂಡಿಯನ್ನು ಸೋಮವಾರದವರೆಗೆ ಮುಚ್ಚಬಾರದು. ಸ್ಧಳದಲ್ಲಿ ಸಿಸಿ ಕ್ಯಾಮೆರ ಅವಳವಡಿಸಬೇಕೆಂದು ಸೂಚಿಸಿ ಹೋಗಿದ್ದಾರೆ.

ಈ ಸುದ್ದಿಗೆ ಈಗ ರೆಕ್ಕೆಪುಕ್ಕಗಳು ಬಂದಿವೆ. ಲೋಕಾಯುಕ್ತಕ್ಕೆ ದೂರು ನೀಡಲಾಗಿದೆ. ಕೆಲ ಫೈಲ್ ಗಳನ್ನು ಮಣ್ಣಿನಲ್ಲಿ ಮುಚ್ಚಿಹಾಕಲು ಡಿಡಿಪಿಐ ಯತ್ನಿಸಿದ್ದಾರೆ ಎಂಬ ಆರೋಪ ತೇಲಿಬಿಡಲಾಗಿದೆ. ಗುಂಡಿ ತೋಡಿರುವುದು ಅನುಮಾನ ಹುಟ್ಟುಹಾಕುತ್ತದೆ ಸರಿ. ಆದರೆ ಎಂಥಾ ಮೂರ್ಖರು ಕೂಡ ದಾಖಲೆಗಳನ್ನು ಕಣ್ಣಮುಂದೆಯೇ ಹೂತು ಹಾಕುವಷ್ಟು ಅಧಿಕಾರಿಗಳು ದಡ್ಡರಲ್ಲ. ಹಾಗಾಗಿ ಡಿಡಿಪಿಐ ಅವರನ್ನು ವರ್ಗಾವಣೆ ಮಾಡಿಸುವುದೇ ಈ ಕುತಂತ್ರದ ಹಿಂದಿನ ಪ್ರಮುಖ ಉದ್ದೇಶವಾಗಿದೆ ಎಂದು ಹೇಳಲಾಗುತ್ತಿದೆ.
ಗುಬ್ಬಿಯ ತಹಶೀಲ್ದಾರ್ ಮಮತ, ಜಿಲ್ಲೆಯ ಆರೋಗ್ಯಾಧಿಕಾರಿ ಚಂದ್ರಿಕಾ ಎತ್ತಂಗಡಿಯಾದ ಮೇಲೆ ಈಗ ಡಿಡಿಪಿಐ ಕಾಮಾಕ್ಷಮ್ಮ ಅವರನ್ನು ವರ್ಗಾವಣೆ ಮಾಡಿಸಲು ಪಿತೂರು ನಡೆದಿದೆ. ಅತ್ಯಂತ ಹಿಂದುಳಿದ ಸವಿತಾ ಸಮಾಜಕ್ಕೆ ಸೇರಿರುವ ಕಾಮಾಕ್ಷಮ್ಮ ಅವರ ಕೈಕೆಳಗೆ ಕೆಲಸ ಮಾಡಲು ಒಪ್ಪದ ಜಾತಿವಾದಿ ಮನಸ್ಸುಗಳು ಅನಗತ್ಯವಾಗಿ ಹುಯ್ಯಿಲೆಬ್ಬಿಸಿ ಮಹಿಳಾ ಅಧಿಕಾರಿಯ ನೈತಿಕತೆಯನ್ನು ಕುಗ್ಗಿಸುವ ಪ್ರಯತ್ನಗಳು ನಡೆಯುತ್ತಿರುವುದು ಶೋಚನೀಯ ಸಂಗತಿ ಎಂದು ಹೆಸರು ಹೇಳದ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಮತ್ತಷ್ಟು ಸುದ್ದಿಗಳು
ಬೋಧನಾ ಕೆಲಸದಿಂದ ವಜಾ: ಬದುಕು ಸಾಗಿಸಲು ಬಾಳೆಹಣ್ಣು ಮಾರಾಟ ಆರಂಭಿಸಿದ ಶಿಕ್ಷಕ!
BJP ಮುಖಂಡನ ವಿರುದ್ಧ ಲೈಂಗಿಕ ದೌರ್ಜನ್ಯ ದೂರು; ಮಾರಕಾಸ್ತ್ರಗಳಿಂದ JDS ಕಾರ್ಯಕರ್ತರ ಮೇಲೆ ಹಲ್ಲೆ



DDPI ಕಾಮಾಕ್ಷಮ್ಮನವರು ಹೆಣ್ಣು ಎಂಬ ಕಾರಣಕ್ಕೆ, ಕೆಲವು ಪಟ್ಟಭದ್ರ ಹಿತಾಸಕ್ತಿ, ಜಾತಿವಾದಿ ಶಿಕ್ಷಕರ ಮತ್ತು ಕಾಣದ ಕೈಗಳ ಮಸಲತ್ತಿನಿಂದ ವರ್ಗಾವಣೆ ಮಾಡುತ್ತಿರುವುದು ಪ್ರಜಾಪ್ರಭುತ್ವ ತತ್ವ ವಿ ೋಧಿ.
ಇಂತಹ ಮನುವಾದಿ ಶಿಕ್ಷಕರು ಮಕ್ಕಳಿಗೆ ಬೋದಿಸುವುದಾದರೂ ಏನನ್ನು? ವಿದ್ಯೆ ಮನುಷ್ಯನನ್ನು ವಿವೇಕಿಯನ್ನಾಗಿಸಬೇಕು. ಆದರಿಲ್ಲಿ ಶಿಕ್ಷಕರೇ ಜಾತೀವಾದಿಗಳಾಗಿದ್ದಾರೆ. ಇದು ನಮ್ಮ ದುರಂತ. ಜಾತೀಯತೆ ಎಂಬ ರೋಗಾಣು ನಮ್ಮ ದೇಶದಿಂದ ತೊಲಗುವುದೇ ಇಲ್ಲವೇನೋ?