Homeನಿಜವೋ ಸುಳ್ಳೋಫ್ಯಾಕ್ಟ್‌ಚೆಕ್: ಪ್ರಿಯಾಂಕ ಗಾಂಧಿ ವಾದ್ರಾ ಮದುವೆ ನೆರವೇರಿಸಿದ್ದು ಮುಸ್ಲಿಂ ಮುಲ್ಲಾ? ವಾಸ್ತವವೇನು?

ಫ್ಯಾಕ್ಟ್‌ಚೆಕ್: ಪ್ರಿಯಾಂಕ ಗಾಂಧಿ ವಾದ್ರಾ ಮದುವೆ ನೆರವೇರಿಸಿದ್ದು ಮುಸ್ಲಿಂ ಮುಲ್ಲಾ? ವಾಸ್ತವವೇನು?

- Advertisement -
- Advertisement -

ಕಾಂಗ್ರೆಸ್ ಪಕ್ಷದ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ ವಾದ್ರಾ ಮದುವೆಯನ್ನು ಮುಸ್ಲಿಂ ಸಂಪ್ರದಾಯಗಳ ಪ್ರಕಾರ ನೆರವೇರಿಸಿದ್ದು ಮುಸ್ಲಿಂ ಸಂಸದ ಶಫಿಕೂರ್ ರಹಮಾನ್ ವಿರ್ಕ್ ಎಂದು ಹಲವಾರು ನೆಟ್ಟಿಗರು ದೂರಿದ್ದಾರೆ. ಜೊತೆಗೆ ಗಡ್ಡಧಾರಿ ಪೂಜಾರಿಯ ಚಿತ್ರವೊಂದನ್ನು ಷೇರ್ ಮಾಡಿದ್ದಾರೆ.

ಸ್ವತಂತ್ರ ಠಾಕೂರ್ ಹೆಸರಿನ ಟ್ವಿಟ್ಟರ್ ಖಾತೆಯಲ್ಲಿ “ಪ್ರಿಯಾಂಕಾ ಗಾಂಧಿಯವರ ವಿವಾಹದ ಸಮಯದಲ್ಲಿ ಮೌಲಾನಾ ಮತ್ತು ಸಂಸತ್ ಸದಸ್ಯ ಶಫಿಕುರ್ ರಹಮಾನ್ ವಿರ್ಕ್ ಅವರು ಕೆಲವು ಇಸ್ಲಾಮಿಕ್ ಆಚರಣೆಗಳನ್ನು ಮಾಡಲು ಏಕೆ ಆಹ್ವಾನಿಸಲಾಯಿತು?” ಎಂಬ ಆರೋಪ ಮಾಡಲಾಗಿದೆ. ಸ್ವಂತಂತ್ರ ಠಾಕೂರ್ ಬಿಜೆಪಿ ಬೆಂಬಲಿಗ ಎಂದು ತಮ್ಮ ಬಯೋ ನಲ್ಲಿ ಬರೆದುಕೊಂಡಿದ್ದಾರೆ.

प्रियंका गांधी के विवाह के समय मौलाना और संसद सदस्य शफीकुर्र रहमान विर्क को कुछ इस्लामी रवायत निभाने के लिए क्यों बुलाया गया था ?पूछता है भारत ??

Posted by Hindu Kamal Garg on Thursday, April 23, 2020

ಫ್ಯಾಕ್ಟ್ ಚೆಕ್:

ಛಾಯಾಚಿತ್ರದಲ್ಲಿ ಗಡ್ಡವಿರುವ ವ್ಯಕ್ತಿಯ ಹೆಸರು ಪಂಡಿತ್ ಇಕ್ಬಾಲ್ ಕಿಶೆನ್ ರೆಯು. ಅವರು ಮೊದಲ ಕಾಶ್ಮೀರಿ ಪಂಡಿತ್ ಕ್ರಿಕೆಟ್ ಅಂಪೈರ್ ಮತ್ತು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಪಂಡಿತ್ ಸ್ವರೂಪ್ ಕಿಶೆನ್ ರೆಯು ಅವರ ಸಹೋದರ. ಕಾಶ್ಮೀರ ಸೆಂಟಿನೆಲ್‌ನ 2009 ರ ಲೇಖನವೊಂದರ ಪ್ರಕಾರ, ಪಂಡಿತ್ ಇಕ್ಬಾಲ್ ಕಿಶೆನ್ ರೆಯು “ರೈಲ್ವೆಯಲ್ಲಿ ಉದ್ಯೋಗದಲ್ಲಿದ್ದರು ಮತ್ತು ಕಾಶ್ಮೀರಿ ಸಂಪ್ರದಾಯಗಳ ಬಗ್ಗೆ ಸಂಪೂರ್ಣ ಜ್ಞಾನ ಹೊಂದಿದ್ದರು. ಅವರು ಕುಲ್ ಪುರೋಹಿತ್ ಅಭ್ಯಾಸ ಮಾಡುತ್ತಿದ್ದರು ಮತ್ತು ಅವರ ಜಜ್ಮಾನ್‌ಗಳ ಧಾರ್ಮಿಕ ಆಚರಣೆಗಳನ್ನು ಮಾಡುತ್ತಿದ್ದರು. 1996 ರಲ್ಲಿ ಕೆ.ಪಿ ಅವರ ಸಂಪ್ರದಾಯಗಳ ಪ್ರಕಾರ ರಾಬರ್ಟ್ ವಾದ್ರಾ ಅವರೊಂದಿಗೆ ಪ್ರಿಯಾಂಕಾ ಗಾಂಧಿಯವರ ವಿವಾಹವನ್ನು ಮಾಡಿದ ನಂತರ ಅವರು ಈ ಕೆಲಸವನ್ನು ತೊರೆದರು” ಎಂದು ಪತ್ರಿಕೆ ವರದಿ ಮಾಡಿದೆ. ಕುಲ್ ಪುರೋಹಿತ್ ಎಂದರೆ ಕುಟುಂಬದ ಪೂಜಾರಿ ಎಂದರ್ಥ.

ಕಾಶ್ಮೀರ ಪಂಡಿತ್ ಆದ ಇಕ್ಬಾಲ್ ಕಿಶೆನ್ ಅವರು ಗಾಂಧಿ ಕುಟುಂಬದ ಪೂಜಾರಿಗಳಾಗಿದ್ದು ಹಿಂದೂ ಸಂಪ್ರದಾಯದ ರೀತಿಯಲ್ಲಿಯೇ ವಿವಾಹದ ವಿಧಿ ವಿಧಾನಗಳನ್ನು ನೆರವೇರಿಸಿದ್ದಾರೆ ಎಂದು ಪತ್ರಿಕೆಗಳು ವರದಿ ಮಾಡಿವೆ. ಅಲ್ಲದೇ ಪ್ರಿಯಾಂಕ ಗಾಂಧಿಯವರು ಜೂನ್ 15 ರಂದು ಹಂಚಿಕೊಂಡಿರುವ ಮದುವೆಯ ಫೋಟೊಗಳಲ್ಲಿ ಅವರು ಹಿಂದೂ ಧರ್ಮದ ಸಂಪ್ರದಾಯಗಳನ್ನು ಪಾಲಿಸುತ್ತಿರುವುದು ಸ್ಪಷ್ಟವಾಗಿ ಕಾಣುತ್ತಿದೆ.


ಇದನ್ನು ಓದಿ: ಒಂದೇ ವೆಂಟಿಲೇಟರ್‌ ಫೋಟೊ ಹಂಚಿಕೊಂಡ ನೂರಾರು ಬಿಜೆಪಿ ಮುಖಂಡರು: ಪಬ್ಲಿಸಿಟಿ ಗಿಮ್ಮಿಕ್ ಎಂದ ನೆಟ್ಟಿಗರು!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಎಲ್ಲಾ ಯೋಜನೆಗಳೂ ಗುಜರಾತ್‌ಗೇ ಏಕೆ?: ಬಿಜೆಪಿ ಕೇಂದ್ರ ನಾಯಕತ್ವ ವಿರುದ್ಧವೇ ಬಹಿರಂಗವಾಗಿ ತಿರುಗಿಬಿದ್ದ ಅಣ್ಣಾಮಲೈ!

BJP ನಾಯಕತ್ವದ ನಿರ್ಧಾರಗಳು ‘ದೆಹಲಿ ಕೇಂದ್ರಿತ’ ಹಾಗೂ ದೇಶದ ಅಭಿವೃದ್ಧಿ ಮಾದರಿಯು ‘ಗುಜರಾತ್‌ ಕೇಂದ್ರಿತ’ವಾಗುತ್ತಿದೆ ಎಂದು ತಮಿಳುನಾಡು ಬಿಜೆಪಿಯ ನಿಕಟಪೂರ್ವ ರಾಜ್ಯಾಧ್ಯಕ್ಷ ಹಾಗೂ ‘ವಿ ದಿ ಲೀಡರ್ಸ್’ ಸಂಘಟನೆಯ ಸಂಸ್ಥಾಪಕ ಕೆ. ಅಣ್ಣಾಮಲೈ...

ಜಾರ್ಖಂಡ್ ವಿದ್ಯಾರ್ಥಿಗಳ ಹೋರಾಟ; ಹೇಮಂತ್ ಸೊರೇನ್ – ರಾಹುಲ್ ಗಾಂಧಿ ಪ್ರತಿಕೃತಿ ದಹಿಸಿದ ಪ್ರತಿಭಟನಾಕಾರರು

ಜಾರ್ಖಂಡ್ ನೇಮಕಾತಿ ಪರೀಕ್ಷೆಗಳಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿ ಆಗಸ್ಟ್ 16 ರಂದು (ಭಾನುವಾರ) ವಿದ್ಯಾರ್ಥಿಗಳು ನಡೆಸಿದ ಪ್ರತಿಭಟನೆ ತೀವ್ರಗೊಂಡಿದೆ. ಮುಖ್ಯಮಂತ್ರಿ ಹೇಮಂತ್ ಸೊರೇನ್, ರಾಹುಲ್ ಗಾಂಧಿ ಮತ್ತು ಆರ್‌ಜೆಡಿ ನಾಯಕ ತೇಜಸ್ವಿ...

BJP ರಾಷ್ಟ್ರೀಯ ವಕ್ತಾರ ಹುದ್ದೆಗೆ ಮತ್ತೆ ರಾಜೀನಾಮೆ! ಕಾರಣ ಬಿಚ್ಚಿಟ್ಟ ಶೆಹಝಾದ್ ಪೂನಾವಾಲಾ

BJP ರಾಷ್ಟ್ರೀಯ ವಕ್ತಾರ ಶೆಹಝಾದ್ ಪೂನಾವಾಲಾ ಅವರು ಪಕ್ಷದ ಪ್ರಾಥಮಿಕ ಸದಸ್ಯತ್ವ ಹಾಗೂ ತಮ್ಮ ಹುದ್ದೆಗೆ ಮತ್ತೊಮ್ಮೆ ರಾಜೀನಾಮೆ ನೀಡಿದ್ದಾರೆ. ತಮ್ಮ ರಾಜೀನಾಮೆ ಪತ್ರವನ್ನು ತಕ್ಷಣವೇ ಅಂಗೀಕರಿಸುವಂತೆ ಅವರು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ...

NALSAR ಘಟಿಕೋತ್ಸವ ವಿವಾದ: ಆಹ್ವಾನ ತಿರಸ್ಕರಿಸಿದ ಸಿಜೆಐ ಸೂರ್ಯಕಾಂತ್!

ಹೈದರಾಬಾದ್‌ನ ಪ್ರತಿಷ್ಠಿತ NALSAR ಕಾನೂನು ವಿಶ್ವವಿದ್ಯಾಲಯದ ಘಟಿಕೋತ್ಸವಕ್ಕೆ ಮುಖ್ಯ ಅತಿಥಿಯಾಗಿ ಭಾಗವಹಿಸುವ ಕುರಿತು ಎದ್ದಿದ್ದ ವಿವಾದಕ್ಕೆ ಕೊನೆಗೂ ತೆರೆ ಬಿದ್ದಿದೆ. ತಾವು ಈ ಆಹ್ವಾನವನ್ನು ಸ್ವೀಕರಿಸಿಲ್ಲ, ಹೀಗಾಗಿ ಘಟಿಕೋತ್ಸವದಲ್ಲಿ ಭಾಗವಹಿಸುವ ಪ್ರಶ್ನೆಯೇ ಉದ್ಭವಿಸುವುದಿಲ್ಲ...

ಹೈದರಾಬಾದ್ : ಡಿಜಿಟಲೀಕರಣಗೊಂಡ ಶೇ. 21ರಷ್ಟು ಮತದಾರರಿಗೆ SIR ನೋಟಿಸ್

ಹೈದರಾಬಾದ್ ಜಿಲ್ಲಾ ಚುನಾವಣಾ ಪ್ರಾಧಿಕಾರವು (ಡಿಇಎ) ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) 2026ರ ಅಡಿಯಲ್ಲಿ ಸೋಮವಾರ (ಆ. 17) ಕರಡು ಮತದಾರರ ಪಟ್ಟಿಯನ್ನು ಪ್ರಕಟಿಸಿದ ನಂತರ, 5.82 ಲಕ್ಷ ಮತದಾರರಿಗೆ ನೋಟಿಸ್ ಜಾರಿ...

ಕಾವೇರಿ: ರೈತರ ಹಿತ ಕಾಯುವುದು ನನ್ನ ಮೊದಲ ಕರ್ತವ್ಯ ಡಿ.ಕೆ.ಶಿವಕುಮಾರ್

ರಾಜ್ಯದ ಜಲಾಶಯಗಳಲ್ಲಿ ನೀರಿನ ಲಭ್ಯತೆ ಕಡಿಮೆಯಿರುವಾಗ ನಮ್ಮ ರೈತರನ್ನು ಬದುಕಿಸುವ ಸವಾಲಿನ ಜೊತೆಗೆ ಕಾನೂನನ್ನೂ ಕಾಪಾಡಬೇಕಾದ ಹೊಣೆಗಾರಿಕೆ ಇದೆ. ಕಾವೇರಿ ವಿಚಾರದಲ್ಲಿ ನಮ್ಮ ರೈತರ ಹಿತ ಕಾಯುವುದು ನನ್ನ ಮೊದಲ ಕರ್ತವ್ಯ ಎಂದು...

‘ಅಸ್ತಿತ್ವದ ಸಮಸ್ಯೆಯಲ್ಲ, ಹೊಣೆಗಾರಿಕೆಯೇ ಮುಖ್ಯ’: ಆರ್‌ಎಸ್‌ಎಸ್ ನೋಂದಣಿ ಕುರಿತು ಬಿ.ಎಲ್. ಸಂತೋಷ್ ವಿರುದ್ಧ ಪ್ರಿಯಾಂಕ್ ಖರ್ಗೆ ವಾಗ್ದಾಳಿ

ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ನೋಂದಣಿ ಹಾಗೂ ಅದರ ಕಾನೂನಾತ್ಮಕ ಅಸ್ತಿತ್ವಕ್ಕೆ ಸಂಬಂಧಿಸಿದಂತೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಬಿ.ಎಲ್. ಸಂತೋಷ್ ಹಾಗೂ ಕರ್ನಾಟಕದ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್...

ನಾನು ‘ದಿಮಾಗಿ ನಕ್ಸಲ್’ ಆಗಿದ್ದರೆ ಅದಕ್ಕೆ ಹೆಮ್ಮೆ ಇದೆ: ಮೋದಿ-ರಿಜಿಜು ವಿರುದ್ಧ ಚಿದಂಬರಂ ತಿರುಗೇಟು

ಸ್ವಾತಂತ್ರ್ಯ ದಿನಾಚರಣೆಯ ಭಾಷಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಬಳಸಿದ್ದ ‘ದಿಮಾಗಿ ನಕ್ಸಲರು’ (ವೈಚಾರಿಕ ನಕ್ಸಲರು) ಎಂಬ ಪದ ಬಳಕೆ ದೇಶದ ರಾಜಕೀಯ ವಲಯದಲ್ಲಿ ಹೊಸ ಸಂಚಲನ ಸೃಷ್ಟಿಸಿದೆ. ಪ್ರಧಾನಿಯವರ ಈ...

CAA ವಿರೋಧಿ ಪ್ರತಿಭಟನೆಗೆ ಕಾರಣವಾಗಿದ್ದ ಪ್ರಶ್ನೆಗಳು ಮತ್ತೆ ಜನಗಣತಿಯಲ್ಲಿ-ವರದಿ

ಶೀಘ್ರದಲ್ಲೇ ಪ್ರಾರಂಭವಾಗಲಿರುವ ಜನಗಣತಿಯ ಜನಸಂಖ್ಯಾ ಎಣಿಕೆ ಹಂತವು, 2011ರ ಜನಗಣತಿಗೆ ಹೋಲಿಸಿದರೆ 14 ಹೊಸ ಅಥವಾ ಮಾರ್ಪಡಿಸಿದ ಪ್ರಶ್ನೆಗಳನ್ನು ಒಳಗೊಂಡಿರುತ್ತದೆ. ಈ ಪೈಕಿ ಹಲವು ಪ್ರಶ್ನೆಗಳು 2020ರಲ್ಲಿ ಅಧಿಸೂಚನೆ ಹೊರಡಿಸಲಾಗಿದ್ದ ರಾಷ್ಟ್ರೀಯ ಜನಸಂಖ್ಯಾ ನೋಂದಣಿ...

ಹಿಂಗೋಲಿ ಶಾಲೆಯಲ್ಲಿ ಪ್ರಾಂಶುಪಾಲರ ಮದ್ಯಪಾನ, ಶಿಕ್ಷಕರ ಅಭಾವ: ಕ್ರಮ ಕೈಗೊಳ್ಳದಿದ್ದರೆ ಪ್ರತಿಭಟನೆಯ ಎಚ್ಚರಿಕೆ ನೀಡಿದ ಅಭಿಜೀತ್ ದೀಪ್ಕೆ

ಮಹಾರಾಷ್ಟ್ರದ ಹಿಂಗೋಲಿ ಜಿಲ್ಲೆಯ ಲಿಂಬಾಲಾ ಗ್ರಾಮದ ಸರ್ಕಾರಿ ಶಾಲೆಯೊಂದರಲ್ಲಿ ಶೈಕ್ಷಣಿಕ ವಾತಾವರಣ ಸಂಪೂರ್ಣವಾಗಿ ಕುಸಿದಿದ್ದು, ಶಾಲಾ ಪ್ರಾಂಶುಪಾಲರ ಹೊಣೆಗೇಡಿತನ ಮತ್ತು ಆಡಳಿತ ಮಂಡಳಿಯ ನಿರ್ಲಕ್ಷ್ಯದ ವಿರುದ್ಧ ಗ್ರಾಮಸ್ಥರ ಆಕ್ರೋಶ ಮುಗಿಲುಮುಟ್ಟಿದೆ. ಶಾಲೆಯ ಪ್ರಾಂಶುಪಾಲರು...