Homeಅಂತರಾಷ್ಟ್ರೀಯಭಾರತ-ಚೀನಾ: ಗಡಿಯಲ್ಲಿ ಚೀನೀ ಸೈನಿಕನೊಬ್ಬನನ್ನು ಸೆರೆಹಿಡಿದ ಭಾರತೀಯ ಪಡೆ!

ಭಾರತ-ಚೀನಾ: ಗಡಿಯಲ್ಲಿ ಚೀನೀ ಸೈನಿಕನೊಬ್ಬನನ್ನು ಸೆರೆಹಿಡಿದ ಭಾರತೀಯ ಪಡೆ!

ಸಿಕ್ಕಿಬಿದ್ದ ಸೈನಿಕ, ನಾಗರಿಕ ಮತ್ತು ಮಿಲಿಟರಿ ದಾಖಲೆಗಳನ್ನು ಹೊತ್ತೊಯ್ಯುತ್ತಿದ್ದನೆಂದು ಕೆಲವು ವರದಿಗಳು ಬಂದಿವೆ

- Advertisement -
- Advertisement -

ಭಾರತೀಯ ಪಡೆ ಇಂದು ಚೀನಾ ಸೈನಿಕನೊಬ್ಬನನ್ನು ಲಡಾಖ್ ಬಳಿ ಸೆರೆಹಿಡಿದಿದ್ದು, ಕಾರ್ಪೋರಲ್ ವಾಂಗ್ ಯಾ ಲಾಂಗ್ ಎಂದು ಗುರುತಿಸಲಾಗಿರುವ ಈತನನ್ನು ಚುಮರ್-ಡೆಮ್ಚೋಕ್ ಪ್ರದೇಶದಲ್ಲಿ ಸೆರೆಹಿಡಿಯಲಾಗಿದೆ.

ಸೈನಿಕನಿಗೆ ಆಮ್ಲಜನಕ, ಆಹಾರ ಮತ್ತು ಬೆಚ್ಚಗಿನ ಬಟ್ಟೆಗಳು ಸೇರಿದಂತೆ ಅಗತ್ಯ ವೈದ್ಯಕೀಯ ನೆರವು ನೀಡಲಾಗಿದೆ. ಸರಿಯಾದ ಕಾರ್ಯವಿಧಾನವನ್ನು ಅನುಸರಿಸಿ ಪ್ರೋಟೋಕಾಲ್ ಪ್ರಕಾರ ಪೀಪಲ್ಸ್ ಲಿಬರೇಶನ್ ಆರ್ಮಿ (ಪಿಎಲ್‌ಎ) ಸೈನಿಕನನ್ನು ಚೀನೀ ಸೈನ್ಯಕ್ಕೆ ಹಿಂತಿರುಗಿಸಲಾಗುತ್ತದೆ ಎಂದು ಸೇನೆಯು ತನ್ನ ಹೇಳಿಕೆಯಲ್ಲಿ ತಿಳಿಸಿದೆ.

“ನಾಪತ್ತೆಯಾದ ಸೈನಿಕ ಎಲ್ಲಿದ್ದಾನೆ ಎಂಬ ಬಗ್ಗೆ ಚೀನಾದ ಸೈನ್ಯದಿಂದ ಮನವಿ ಬಂದಿದ್ದು, ಔಪಚಾರಿಕ ಕಾರ್ಯಗಳು ಪೂರ್ಣಗೊಂಡ ನಂತರ ಅವರನ್ನು ಚುಶುಲ್-ಮೊಲ್ಡೊ ಮೀಟಿಂಗ್ ಪಾಯಿಂಟ್‌ನಲ್ಲಿ ಚೀನಾದ ಅಧಿಕಾರಿಗಳಿಗೆ ಹಿಂತಿರುಗಿಸಲಾಗುವುದು” ಎಂದು ಸೇನೆಯು ತಿಳಿಸಿದೆ.

ಸಿಕ್ಕಿಬಿದ್ದ ಸೈನಿಕ, ನಾಗರಿಕ ಮತ್ತು ಮಿಲಿಟರಿ ದಾಖಲೆಗಳನ್ನು ಹೊತ್ತೊಯ್ಯುತ್ತಿದ್ದನೆಂದು ಕೆಲವು ವರದಿಗಳು ಬಂದಿವೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.

ಇದನ್ನೂ ಓದಿ: ಚೀನಾ ಮತ್ತು ನಮ್ಮ ನಡುವೆ ನಡೆಯುತ್ತಿರುವ ಚರ್ಚೆ ಗೌಪ್ಯವಾದದ್ದು: ಭಾರತದ ವಿದೇಶಾಂಗ ಸಚಿವ!

ಗಾಲ್ವಾನ್ ಕಣಿವೆಯಲ್ಲಿ ಚೀನಿಯರೊಂದಿಗಿನ ಘರ್ಷಣೆಯಲ್ಲಿ ಕರ್ತವ್ಯದಲ್ಲಿದ್ದ 20 ಭಾರತೀಯ ಸೈನಿಕರು ಜೂನ್‌ನಲ್ಲಿ ಸಾವನ್ನಪ್ಪಿದ್ದರು. ಆಗ ಉಭಯ ದೇಶಗಳಲ್ಲಿ ಉದ್ವಿಗ್ನತೆ ಉತ್ತುಂಗಕ್ಕೇರಿತ್ತು. ಕಳೆದ ತಿಂಗಳು, ಪ್ಯಾಂಗೊಂಗ್ ತ್ಸೊದಲ್ಲಿ ಎರಡೂ ಪಡೆ ಮುಖಾಮುಖಿಯಾಗುತ್ತಿದ್ದಂತೆ ಒಂದಕ್ಕಿಂತ ಹೆಚ್ಚು ಬಾರಿ ಗಾಳಿಯಲ್ಲಿ ಗುಂಡು ಹಾರಿಸಲಾಗಿತ್ತು.

ಇತ್ತೀಚೆಗೆ ಭಾರತ-ಚೀನಾ ನಡುವಿನ ಸಂಬಂಧ ಚಿಂತಾಜನಕವಾಗಿದ್ದು, ಯಾವ ಸಂಧರ್ಭದಲ್ಲಿ ಏನುಬೇಕಾದರೂ ನಡೆಯಬಹುದು ಎಂಬ ಭೀತಿಯುಂಟಾಗಿದೆ. ಎರಡೂ ದೇಶಗಳೂ ಗಡಿಯಲ್ಲಿ ಸೇನೆಯನ್ನು ಜಮಾವಣೆ ಮಾಡಿವೆ.

ಈ ಪ್ರಕ್ಷುಬ್ದ ವಾತಾವರಣಕ್ಕೆ ಕೇಂದ್ರ ಸರ್ಕಾರವೇ ಕಾರಣ ಎಂದು ವಿರೋಧ ಪಕ್ಷಗಳು ಟೀಕಿಸುತ್ತಿದ್ದು, ಚೀನಾ ವಿರುದ್ಧ ಕೇಂದ್ರ ಸರ್ಕಾರದ ಪ್ರತಿಯೊಬ್ಬರೂ ಒಂದೊಂದು ಮಾಹಿತಿ ನೀಡುತ್ತಿದ್ದಾರೆ. ಒಬ್ಬರು ಯಾವುದೇ ತೊಂದರೆಯಿಲ್ಲ ಎಂದರೆ, ಮತ್ತೊಬ್ಬರು ತೊಂದರೆಯಿದೆ ಎನ್ನುತ್ತಾರೆ. ಇನ್ನೊಬ್ಬರು ಭೂಪ್ರದೇಶವನ್ನು ಆಕ್ರಮಿಸಿಕೊಂಡಿಲ್ಲ ಎಂದರೆ, ಮತ್ತೊಬ್ಬರು ಆಕ್ರಮಿಸಿಕೊಂಡಿದೆ ಎನ್ನುತ್ತಾರೆ. ಒಬ್ಬರು ಗೌಪ್ಯ ಮಾತುಕತೆ ನಡೆಸುತ್ತಿದ್ದೇವೆ ಎನ್ನುತ್ತಾರೆ, ಮತ್ತೊಬ್ಬರು ಚೀನಾದೊಟ್ಟಿಗೆ ಯುದ್ಧ ಮಾಡಲು ಸಿದ್ಧ ಎನ್ನುತ್ತಾರೆ.

ಒಟ್ಟಾರೆಯಾಗಿ, ಕೇಂದ್ರ ಸರ್ಕಾರ ಪ್ರಜೆಗಳಿಂದ ಸತ್ಯವನ್ನು ಮುಚ್ಚಿಡುತ್ತಿದೆ ಎಂದು ಹಲವರು ಆರೋಪಿಸಿದ್ದು, ನರೇಂದ್ರ ಮೋದಿಯವರು ಚೀನಾ ಹೆಸರನ್ನು ಹೇಳಲು ಭಯಪಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.


ಇದನ್ನೂ ಓದಿ: ಭಾರತ-ಚೀನಾ: ಗಡಿಯಲ್ಲಿ ಜಮಾವಣೆಗೊಂಡ ಚೀನಿ ಯುದ್ಧ ಟ್ಯಾಂಕ್‌‌ಗಳು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

LEAVE A REPLY

Please enter your comment!
Please enter your name here

- Advertisment -

ಅಮೆರಿಕ ರಾಷ್ಟ್ರೀಯ ಭಯೋತ್ಪಾದನಾ ನಿಗ್ರಹ ದಳದ ನಿರ್ದೇಶಕ ಜೋ ಕೆಂಟ್‌ ರಾಜೀನಾಮೆ

ಅಮೆರಿಕದ ರಾಷ್ಟ್ರೀಯ ಭಯೋತ್ಪಾದನಾ ನಿಗ್ರಹ ಕೇಂದ್ರದ (ಎನ್‌ಸಿಟಿಸಿ) ನಿರ್ದೇಶಕ ಜೋ ಕೆಂಟ್ ಅವರು ಇರಾನ್ ಜೊತೆಗಿನ ಯುದ್ಧಕ್ಕೆ ವಿರೋಧ ವ್ಯಕ್ತಪಡಿಸಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. "ಇರಾನ್‌ನಿಂದ ಅಮೆರಿಕಕ್ಕೆ ಯಾವುದೇ ತಕ್ಷಣದ ಅಪಾಯವಿರಲಿಲ್ಲ. ಇಸ್ರೇಲ್‌ನ ಒತ್ತಡದಿಂದಾಗಿ...

ಪಶ್ಚಿಮ ಏಷ್ಯಾ ಸಂಘರ್ಷ: ಇರಾನ್ ಭದ್ರತಾ ಮುಖ್ಯಸ್ಥ ಅಲಿ ಲಾರಿಜಾನಿ ಹತ್ಯೆ ಮಾಡಿರುವುದಾಗಿ ಹೇಳಿಕೊಂಡ ಇಸ್ರೇಲ್ 

ಇರಾನ್‌ನ ಭದ್ರತಾ ಮುಖ್ಯಸ್ಥ ಅಲಿ ಲಾರಿಜಾನಿ ವೈಮಾನಿಕ ದಾಳಿಯಲ್ಲಿ ಸಾವನ್ನಪ್ಪಿದ್ದಾರೆ ಎಂದು ಇಸ್ರೇಲ್ ರಕ್ಷಣಾ ಸಚಿವ ಕಾಟ್ಜ್ ಮಂಗಳವಾರ ಹೇಳಿದ್ದಾರೆ. ಆದರೆ ಟೆಹ್ರಾನ್‌ನಿಂದ ಯಾವುದೇ ಅಧಿಕೃತ ದೃಢೀಕರಣವಿಲ್ಲ. ಕಾಟ್ಜ್ ಪ್ರಕಾರ, ಜನರಲ್ ಘೋಲಮ್...

ನಾಲ್ಕು ತಿಂಗಳಲ್ಲೇ ಗರಿಷ್ಠ ಮಟ್ಟಕ್ಕೆ ತಲುಪಿದ ಯುವಜನರ ನಿರುದ್ಯೋಗ ಪ್ರಮಾಣ

15–29 ವರ್ಷ ವಯಸ್ಸಿನ ಯುವಕರಲ್ಲಿ ನಿರುದ್ಯೋಗ ದರವು ಫೆಬ್ರವರಿಯಲ್ಲಿ ನಾಲ್ಕು ತಿಂಗಳಲ್ಲೇ ಗರಿಷ್ಠ ಶೇ. 14.8 ಕ್ಕೆ ಏರಿದೆ. ಇದು ಜನವರಿಯಲ್ಲಿ ಶೇ. 14.7 ರಷ್ಟು ಹೆಚ್ಚಾಗಿ, ಯುವಜನರಲ್ಲಿ ನಿರುದ್ಯೋಗ ಹೆಚ್ಚಳ ಉಂಟಾಗಿದೆ...

ಆರ್‌ಎಸ್‌ಎಸ್‌ ನಿಷೇಧಕ್ಕೆ ಒತ್ತಾಯಿಸಿದ ಅಮೆರಿಕದ ಧಾರ್ಮಿಕ ಸ್ವಾತಂತ್ರ್ಯ ಸಮಿತಿ; ಕಾಂಗ್ರೆಸ್ ಪ್ರತಿಕ್ರಿಯೆ

ಭಾರತದಲ್ಲಿ ಧಾರ್ಮಿಕ ಸ್ವಾತಂತ್ರ್ಯದ ಉಲ್ಲಂಘನೆಯಾಗಿದೆ ಎಂದು ಆರೋಪಿಸಿರುವ ಅಂತರರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯದ ಯುನೈಟೆಡ್ ಸ್ಟೇಟ್ಸ್ ಆಯೋಗವು, ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರೆಸ್ಸೆಸ್) ಮತ್ತು ಭಾರತದ ಬಾಹ್ಯ ಗುಪ್ತಚರ ಸಂಸ್ಥೆಯಾದ ಸಂಶೋಧನೆ, ವಿಶ್ಲೇಷಣಾ...

ಕಾಂಗ್ರೆಸ್ ವಿರುದ್ಧದ ‘ಟರ್ಕಿ ಕಚೇರಿ’ ಹೇಳಿಕೆ: ಅರ್ನಾಬ್ ಗೋಸ್ವಾಮಿಗೆ ₹2 ಕೋಟಿ ಮಾನನಷ್ಟ ಮೊಕದ್ದಮೆ ಹೂಡಲು ಸಮನ್ಸ್ ಜಾರಿ ಮಾಡಿದ ದೆಹಲಿ ಹೈಕೋರ್ಟ್

ಕಾಂಗ್ರೆಸ್ ವಿರುದ್ಧದ "ಟರ್ಕಿ ಕಚೇರಿ" ಆರೋಪಕ್ಕೆ ಸಂಬಂಧಿಸಿದಂತೆ ಅರ್ನಾಬ್ ಗೋಸ್ವಾಮಿಗೆ ₹2 ಕೋಟಿ ಮಾನನಷ್ಟ ಮೊಕದ್ದಮೆ ಹೂಡಲು ದೆಹಲಿ ಹೈಕೋರ್ಟ್ ಸಮನ್ಸ್ ಜಾರಿ ಮಾಡಿದೆ. ಟರ್ಕಿಯಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಅಂತರರಾಷ್ಟ್ರೀಯ ಕಚೇರಿಯನ್ನು ನಡೆಸುತ್ತಿದೆ...

ಚುನಾವಣಾ ಆಯೋಗ ಬಿಜೆಪಿ ಆಜ್ಞೆಯ ಮೇರೆಗೆ ಕೆಲಸ ಮಾಡುತ್ತಿದೆ: ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ

ವಿಧಾನಸಭಾ ಚುನಾವಣೆಗೂ ಮುನ್ನ, ಭಾರತದ ಚುನಾವಣಾ ಆಯೋಗ (ಇಸಿಐ) ಪ್ರಸ್ತುತ ಡಿಜಿಪಿ, ಕೋಲ್ಕತ್ತಾ ಪೊಲೀಸ್ ಆಯುಕ್ತರು, ಮುಖ್ಯ ಮತ್ತು ಗೃಹ ಕಾರ್ಯದರ್ಶಿಗಳನ್ನು ಬದಲಿಸುವ ಮೂಲಕ ಪ್ರಮುಖ ಪುನರ್ರಚನೆಯನ್ನು ಮಾಡಿದೆ. ಪಶ್ಚಿಮ ಬಂಗಾಳದ ಹೊಸ ಡಿಜಿ...

‘ಶಾಂತಿಗೆ ಇದು ಸಮಯವಲ್ಲ’: ‘ಕದನ ವಿರಾಮ’ ಪ್ರಸ್ತಾಪಗಳನ್ನು ತಿರಸ್ಕರಿಸಿದ ಇರಾನ್ ಸರ್ವೋಚ್ಚ ನಾಯಕ ಮೊಜ್ತಾಬಾ ಖಮೇನಿ 

ಇರಾನ್‌ನ ನೂತನ ಸರ್ವೋಚ್ಚ ನಾಯಕ ಅಯತೊಲ್ಲಾ ಮೊಜ್ತಬಾ ಖಮೇನಿ ಅವರು ಉದ್ವಿಗ್ನತೆಯನ್ನು ಕಡಿಮೆ ಮಾಡುವ ಅಥವಾ ಎರಡು ಮಧ್ಯವರ್ತಿ ರಾಷ್ಟ್ರಗಳು ಟೆಹ್ರಾನ್‌ಗೆ ತಲುಪಿಸಿದ ಯುನೈಟೆಡ್ ಸ್ಟೇಟ್ಸ್‌ನೊಂದಿಗೆ ಕದನ ವಿರಾಮದ ಪ್ರಸ್ತಾಪಗಳನ್ನು ತಿರಸ್ಕರಿಸಿದರು ಎಂದು...

ಲೋಕಸಭೆ | 8 ವಿಪಕ್ಷ ಸಂಸದರ ಅಮಾನತು ರದ್ದು

ಲೋಕಸಭೆಯ ಎಂಟು ವಿಪಕ್ಷ ಸಂಸದರ ಅಮಾನತನ್ನು ತಕ್ಷಣಕ್ಕೆ ಜಾರಿಗೆ ಬರುವಂತೆ ಸ್ಪೀಕರ್ ಓಂ ಬಿರ್ಲಾ ಮಂಗಳವಾರ (ಮಾ.17) ವಾಪಸ್ ಪಡೆದಿದ್ದಾರೆ. ಅಶಿಸ್ತಿನ ಕಾರಣ ನೀಡಿ ಫೆಬ್ರವರಿ 8ರಂದು ಸಂಸದರನ್ನು ಅಮಾನತು ಮಾಡಲಾಗಿತ್ತು. ಅಮಾನತು...

ಪಿತೃತ್ವ ರಜೆಗೆ ಕಾನೂನು ತನ್ನಿ : ಕೇಂದ್ರಕ್ಕೆ ಸುಪ್ರೀಂ ಕೋರ್ಟ್ ಸೂಚನೆ

ಪಿತೃತ್ವ ರಜೆಯನ್ನು (paternity leave) ಸಾಮಾಜಿಕ ಭದ್ರತಾ ಸೌಲಭ್ಯವೆಂದು ಪರಿಗಣಿಸಿ ಕಾನೂನು ರೂಪಿಸುವಂತೆ ಸುಪ್ರೀಂ ಕೋರ್ಟ್ ಮಂಗಳವಾರ (ಮಾ.17) ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ. ಈ ರಜೆಯ ಅವಧಿಯು ಪೋಷಕರು ಮತ್ತು ಮಗು ಇಬ್ಬರ...

‘ಕಾಲ ಎಲ್ಲಕ್ಕೂ ಉತ್ತರಿಸುತ್ತದೆ’; ಟಿವಿಕೆ ನಾಯಕನ ‘ಡಿಎಂಕೆ ಬೆದರಿಕೆ’ ಆರೋಪ ‘ಸತ್ಯಕ್ಕೆ ದೂರವಾದ ಮಾತು’ ಎಂದ ರಜನಿಕಾಂತ್

ರಾಜಕೀಯ ಪ್ರವೇಶಕ್ಕೆ ಯತ್ನಿಸಿದಾಗ ಡಿಎಂಕೆಯಿಂದ ಬೆದರಿಕೆ ಇತ್ತು ಎಂಬ ಟಿವಿಕೆ ನಾಯಕ ಆಧವ್ ಅರ್ಜುನ ಅವರ ಆರೋಪವನ್ನು ಸೂಪರ್‌ಸ್ಟಾರ್ ರಜನಿಕಾಂತ್ ಮಂಗಳವಾರ ನಿರಾಕರಿಸಿದ್ದಾರೆ ಮತ್ತು "ಕಾಲವೇ ಉತ್ತರ ನೀಡುತ್ತದೆ" ಎಂದು ಹೇಳಿದ್ದಾರೆ. ತಮ್ಮ ಅಧಿಕೃತ...