Homeಮುಖಪುಟಆತ್ಮನಿರ್ಭರಕ್ಕಾಗಿ ಖಾಸಗಿಯವರನ್ನು ಬೆಂಬಲಿಸಿ: ಮೋದಿ ಹೇಳಿಕೆಗೆ ಕೆಲವು ಪ್ರಶ್ನೆಗಳು

ಆತ್ಮನಿರ್ಭರಕ್ಕಾಗಿ ಖಾಸಗಿಯವರನ್ನು ಬೆಂಬಲಿಸಿ: ಮೋದಿ ಹೇಳಿಕೆಗೆ ಕೆಲವು ಪ್ರಶ್ನೆಗಳು

ರಾಜ್ಯಗಳ ಜಿಎಸ್‌ಟಿ ಪಾಲನ್ನು ಕೇಂದ್ರವೇ ನೀಡುತ್ತಿಲ್ಲ. ಹಾಗಿರುವಾಗ, ಖಾಸಗಿ ಕೃಷಿ-ಉತ್ಪನ್ನ ಖರೀದಿದಾರರು ರೈತರಿಗೆ ಸರಿಯಾಗಿ ಪಾವತಿ ಮಾಡುತ್ತಾರೆ ಎಂದು ನಂಬುವುದು ಹೇಗೆ?

- Advertisement -
- Advertisement -

ನೀತಿ ಆಯೋಗದ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ “ನಾವು ಆತ್ಮನಿರ್ಭರ ಭಾರತದ ಧ್ಯೇಯವನ್ನು ಸಾಕಾರಗೊಳಿಸಲು, ಖಾಸಗಿ ವಲಯಕ್ಕೆ ಅವಕಾಶಗಳನ್ನು ನೀಡಬೇಕಾಗಿದೆ” ಎಂದು ಹೇಳಿದ್ದಾರೆ. ಅವರ ಭಾಷಣದ ಕುರಿತು ಒಂದಿಷ್ಟು ಪ್ರಶ್ನೆಗಳು

• ‘ಆತ್ಮನಿರ್ಭರ್’ (ಸ್ವಾವಲಂಬಿ ಭಾರತ) ಸಾಧಿಸಲು ಸರ್ಕಾರಗಳು ಖಾಸಗಿ ವಲಯವನ್ನು ಉತ್ತೇಜಿಸಬೇಕು ಎಂಬುದರ ಅರ್ಥವೇನು?
• ಇಲ್ಲಿ ಖಾಸಗಿ ವಲಯವೆಂದರೆ, ದೇಸಿ ಖಾಸಗಿ ವಲಯವಷ್ಟೇಯೇ? ಅಥವಾ ಅದು ವಿದೇಶಿ ಖಾಸಗಿ ವಲಯವನ್ನೂ ಒಳಗೊಂಡಿದಿಯೇ?
• ದೇಸಿ ಖಾಸಗಿ ವಲಯವೆಂದರೇನು? ಅದು ವಿದೇಶಿ ಬಂಡವಾಳದ ಮೇಲೆಯೇ ನಿಂತಿದೆಯಲ್ಲವೆ? ಬಿಎಸ್‌ಎನ್‌ಎಲ್ ಅನ್ನು ನಾಶ ಮಾಡಿ ಜಿಯೋ ಬೆಳೆಯಲು ನೆರವು ನೀಡುವುದು ಆತ್ಮನಿರ್ಭರ್ ಹೇಗಾಗುತ್ತದೆ? ಅದು ‘ಆತ್ಮನಿರ್ಭರ್’ ಎಂಬ ಸುಂದರ ಪದದೊಂದಿಗೆ ಜನರನ್ನು ಮರುಳು ಮಾಡುವ ಸಾಹಸವೇ?
• ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವೆ ಸಹಕಾರವಿರಬೇಕು ಎಂದಿದ್ದಾರಲ್ಲ? ರಾಜ್ಯಗಳ ಜಿಎಸ್‌ಟಿ ಪಾಲನ್ನೇ ಕೊಡದ ಮೇಲೆ ಅದೆಂತಹ ಸಹಕಾರ ನಿರೀಕ್ಷಿಸುವುದು?
• ಮುಖ್ಯ ಪ್ರಶ್ನೆ ಎಂದರೆ, ಪ್ರಧಾನಿ ಭಾಷಣದ ಎರಡು ಮುಖ್ಯ ಅಂಶಗಳು: ಆತ್ಮನಿರ್ಭರಕ್ಕಾಗಿ ಖಾಸಗಿಯವರಿಗೆ ಮಣೆ ಮತ್ತು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ನಡುವೆ ಸಹಕಾರ…ಈ ಎರಡೂ ಅಂಶಗಳನ್ನು ಕೃಷಿ ಕಾಯ್ದೆಗಳು ಮತ್ತು ಅವುಗಳ ರದ್ದತಿಗಾಗಿ ನಡೆಯುತ್ತಿರುವ ಪ್ರತಿಭಟನೆ (ಪ್ರಧಾನಿ ಪ್ರಕಾರ ಆಂದೋಲನ್‌ಜೀವಿಗಳ ಪ್ರತಿಭಟನೆ!)ಯ ಹಿನ್ನೆಲೆಯಲ್ಲಿ ನೋಡೋಣ.

ಮೊದಲನೆದಾಗಿ, ಕೃಷಿ ಕಾಯ್ದೆಗಳ ಪ್ರಕಾರ ಖಾಸಗಿಯವರು ಕೃಷಿ ಕ್ಷೇತ್ರ ಪ್ರವೇಶಿಸಲು ಅವಕಾಶ ನೀಡಲಾಗಿದೆ. ಇದು ಖಾಸಗಿಯವರಿಗೆ ಮತ್ತು ಅವರನ್ನು ಬೆಂಬಲಿಸುವ ಸರ್ಕಾರಕ್ಕೆ ಆತ್ಮನಿರ್ಭರ್ ಆಗಿರಬಹುದು, ಆದರೆ ಅದು ರೈತಾಪಿಗಳ ಪಾಲಿಗೆ ಆತ್ಮಹತ್ಯೆಯೇ ಆಗಿದೆ.

ಕೇಂದ್ರ ಮತ್ತು ರಾಜ್ಯಗಳ ನಡುವಿನ ಸಹಕಾರ! ಕೃಷಿ ಕಾಯ್ದೆಗಳನ್ನು ರಾಜ್ಯಗಳ ಜೊತೆ ಚರ್ಚಿಸದೇ ಜಾರಿ ಮಾಡುವಾಗ ಇದು ನೆನಪಾಗಲಿಲ್ಲವೆ? ಒಕ್ಕೂಟ ವ್ಯವಸ್ಥೆಗೆ ಮಾರಕವಾಗಿರುವ ಈ ಕೇಂದ್ರ ಸರ್ಕಾರ ರಾಜ್ಯಗಳಿಂದ ಸಹಕಾರ ಪಡೆಯುತ್ತಿದೆ, ಆದರೆ ಅದೆ ರಾಜ್ಯ ಸರ್ಕಾರಗಳನ್ನು ವಂಚಿಸುತ್ತಿದೆಯಲ್ಲವೆ?

ಕಳೆದ 6-7 ವರ್ಷಗಳಲ್ಲಿ, ನರೇಂದ್ರ ಮೋದಿಯವರ ಅತಿದೊಡ್ಡ ಕಾರ್ಪೊರೇಟ್ ದಾನಿಗಳಾದ ಅಂಬಾನಿಗಳು ಮತ್ತು ಅದಾನಿ ಗುಂಪುಗಳು ತಮ್ಮ ಪ್ರಭಾವವನ್ನು, ಕಾರ್ಪೊರೇಟ್ ಜಗತ್ತಿನ ಎಲ್ಲ ಪ್ರತಿಸ್ಪರ್ಧಿಗಳಿಗಿಂತ ತಮಗೆ ಹೆಚ್ಚಿನ ಲಾಭವನ್ನು ನೀಡುವ ನೀತಿಗಳನ್ನು ರೂಪಿಸಲು ಬಳಸಿಕೊಂಡಿವೆ. ದೇಶೀ ರಾಜಕಾರಣಿಗಳು ತಮ್ಮ ಜೇಬಿನಲ್ಲಿರುವುದರಿಂದ ಎರಡೂ ಗುಂಪುಗಳು ತಮ್ಮನ್ನು ತಾವು ಹೆಚ್ಚಿನ ವಿದೇಶಿ ಬಿಡ್ಡುದಾರರಿಗೆ ಮಾರಾಟ ಮಾಡಲು ಮುಂದಾಗಿವೆ.

ಮುಕೇಶ್ ಅಂಬಾನಿ ರಿಲಯನ್ಸ್ ಎಂಬುದು ದೇಸಿ ಕಂಪನಿ ಅಲ್ಲವೇ ಅಲ್ಲ.
ಜಿಯೋ ಪ್ಲಾಟ್‌ಫಾರ್ಮ್‌ಗಳಲ್ಲಿ ಫೇಸ್‌ಬುಕ್ 5.5 ಬಿಲಿಯನ್ ಡಾಲರ್ (43,753 ಕೋಟಿ ರೂ.) ಹೂಡುವ ಮೂಲಕ ಅತಿದೊಡ್ಡ ಹೂಡಿಕೆದಾರರಾಗಿದ್ದರೆ, ಗೂಗಲ್ 4.5 ಬಿಲಿಯನ್ ಡಾಲರ್‌ಗಳನ್ನು ಹೂಡಿದೆ. ಸೌದಿ ಅರೇಬಿಯಾದ ಸಾರ್ವಭೌಮ ಸಂಪತ್ತು ನಿಧಿಯಾಗಿರುವ ಪಬ್ಲಿಕ್ ಇನ್‌ವೆಸ್ಟ್ಮೆಂಟ್ ಫಂಡ್ 1.5 ಬಿಲಿಯನ್ ಡಾಲರ್, ಅಮೆರಿಕಾದ ದೊಡ್ಡ ಹೂಡಿಕೆದಾರ ಕಂಪನಿ ಕೆಕೆಆರ್ 1.5 ಬಿಲಿಯನ್ ಡಾಲರ್, ಅಬುದಾಬಿ ಮೂಲದ ಮುಬಡಾಲಾ ಮತ್ತು ಎಡಿಐಎ ಎಂಬ ಎರಡು ಹೂಡಿಕೆ ನಿಧಿ ಕಂಪನಿಗಳು ಕ್ರಮವಾಗಿ 1.2 ಬಿಲಿಯನ್ ಡಾಲರ್ ಮತ್ತು 750 ಮಿಲಿಯನ್ ಡಾಲರ್ ಮತ್ತು ಜಾಗತಿಕ ಆಸ್ತಿ ನಿರ್ವಹಣಾ ಸಂಸ್ಥೆ ಟಿಪಿಜಿ ಕ್ಯಾಪಿಟಲ್ 600 ಮಿಲಿಯನ್ ಡಾಲರ್ ಹಣವನ್ನು ಅಂಬಾನಿ ಕಂಪನಿಯಲ್ಲಿ ಹೂಡಿಕೆ ಮಾಡಿವೆ. ಪಟ್ಟಿ ಇನ್ನೂ ದೊಡ್ಡದಾಗಬಹುದು.

ಹೀಗಾಗಿ ಅಂಬಾನಿ ಹಿತರಕ್ಷಣೆ ಎಂದರೆ ಮೇಲೆ ತಿಳಿಸಿದ ಕಂಪನಿಗಳ ಬಂಡವಾಳದ ರಕ್ಷಣೆಯೂ ಆಗಿದೆಯಲ್ಲವೆ? ಈ ಕಾರಣಕ್ಕೆ ಆತ್ಮನಿರ್ಭರ‌ಕ್ಕಾಗಿ ಖಾಸಗಿಯವರಿಗೆ ಉತ್ತೇಜನ ಎಂಬ ಮಾತನ್ನು ಅರ್ಥೈಸಿಕೊಳ್ಳಬೇಕಾಗಿದೆ.

ಭಾರೀ ವಿರೋಧದ ನಡುವೆಯೂ ಕೃಷಿ ಕಾನೂನುಗಳನ್ನು ಹೇರಲು ಮೋದಿ ಸರ್ಕಾರ ಮುಂದಾದ್ದರ ಹಿಂದಿನ ಬಹಿರಂಗ ರಹಸ್ಯವಿದು. ಕೇವಲ ಭಾರತೀಯ ಕೃಷಿಯಷ್ಟೇ ಅಲ್ಲ, ನಮ್ಮ ಎಲ್ಲ ವಲಯಗಳಿಗೂ ನಿಮಗೆ ಮುಕ್ತ ಸ್ವಾಗತ ಎಂದು ಎಲ್ಲಾ ವಿದೇಶಿ ಹೂಡಿಕೆದಾರರಿಗೆ ಸೂಚಿಸುವ ಒಂದು ಮಾರ್ಗವಾಗಿದೆ ಇದು. ಕೃಷಿ ಕಾನೂನು ಹಿಂಪಡೆಯುವುದಿಲ್ಲ ಎನ್ನುತ್ತಿರುವ ಭಾರತ ಸರ್ಕಾರವು ದೃಢವಾಗಿ ತಮ್ಮ (ವಿದೇಶಿ ಬಂಡವಾಳಿಗರು) ಕಡೆಗಿದೆ ಮತ್ತು ತಮಗೆ ಲಾಭದ ಖಾತ್ರಿ ನೀಡಲು ತನ್ನದೇ ಜನರನ್ನು ಬಲಿ ಕೊಡಲು ಸಿದ್ಧವಾಗಿದೆ ಎಂದು ವಿದೇಶಿ ಹೂಡಿಕೆದಾರರು, ದೇಸಿ ವಂಚಕ ಉದ್ಯಮಪತಿಗಳು ನಂಬಬೇಕೆಂದರೆ ಮೋದಿ ಕೃಷಿ ಕಾಯ್ದೆಗಳ ಪರ ನಿಲ್ಲಲೇಬೇಕು ಅಲ್ಲವೆ?

ಪಿ.ಕೆ. ಮಲ್ಲನಗೌಡರ್

(ಲೇಖಕರು ಪತ್ರಕರ್ತರು, ಅಭಿಪ್ರಾಯಗಳು ವೈಯಕ್ತಿಕವಾದವು)


ಇದನ್ನೂ ಓದಿ: ಆತ್ಮನಿರ್ಭರ ಭಾರತಕ್ಕಾಗಿ ಖಾಸಗಿ ವಲಯಕ್ಕೆ ಉತ್ತೇಜನ ನೀಡಿ: ಪ್ರಧಾನಿ ಮೋದಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಉತ್ತರ ಪ್ರದೇಶ : 33 ವರ್ಷಗಳ ಬಳಿಕ ದೇಶದ್ರೋಹ ಪ್ರಕರಣದಿಂದ ಮುಸ್ಲಿಂ ವ್ಯಕ್ತಿ ಖುಲಾಸೆ

ಪ್ರಾಸಿಕ್ಯೂಷನ್ ಆರೋಪಗಳನ್ನು ಸಾಂದರ್ಭಿಕ ಪುರಾವೆಗಳೊಂದಿಗೆ ಸಾಬೀತುಪಡಿಸಲು ವಿಫಲವಾಗಿದೆ ಮತ್ತು ಆರೋಪಿಯನ್ನು ಕೃತ್ಯಕ್ಕೆ ಲಿಂಕ್ ಮಾಡುವ ಪ್ರಮುಖ ಪುರಾವೆಗಳು ಕಾಣೆಯಾಗಿವೆ ಎಂದು ಅಭಿಪ್ರಾಯಪಟ್ಟ ಲಕ್ನೋದ ವಿಶೇಷ ರಾಷ್ಟ್ರೀಯ ತನಿಖಾ ದಳ (ಎನ್ಐಎ) ನ್ಯಾಯಾಲಯ, ದೇಶದ್ರೋಹ...

‘ಊರು ಕೊಳ್ಳೆ ಹೊಡೆದ ಮೇಲೆ ದಿಡ್ಡಿ ಬಾಗಿಲು ಹಾಕಿದರು’ ಎಂಬಂತೆ NTA ಯಿಂದ ₹7.5 ಕೋಟಿಯ ಬೃಹತ್ ಸೆಕ್ಯೂರಿಟಿ ಟೆಂಡರ್

ನೀಟ್ ಪ್ರಶ್ನೆಪತ್ರಿಕೆ ಸೋರಿಕೆಯಾಗಿ, ಅಮಾಯಕ ವಿದ್ಯಾರ್ಥಿಗಳ ಜೀವ-ಭವಿಷ್ಯ ಹಾಳಾದ ಮೇಲೆ, ಊರು ಕೊಳ್ಳೆ ಹೊಡೆದ ಮೇಲೆ ದಿಡ್ಡಿ ಬಾಗಿಲು ಹಾಕಿದರು ಎಂಬಂತೆ ಈಗ ಎನ್‌ಟಿಎ (NTA) ₹7.5 ಕೋಟಿ ವೆಚ್ಚದ ಭದ್ರತಾ ಟೆಂಡರ್...

SIR: ನಮೂನೆಯೂ ಇಲ್ಲ, ನೋಟಿಸ್‌ ಇಲ್ಲ ಸ್ವಂತ ಮನೆಯಲ್ಲಿದ್ದವರ ಹೆಸರನ್ನೇ ಅಳಿಸಿಹಾಕಿದ ಚುನಾವಣಾ ಆಯೋಗ

ರಾಜ್ಯದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಒಂದಾದ ಮೇಲೊಂದರಂತೆ ಆತಂಕಕಾರಿ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಮನೆಮನೆಗೆ ತೆರಳಿ ಎನ್ಯುಮರೇಷನ್ ನಮೂನೆ ವಿತರಿಸುವ ಮೊದಲ ಹಂತದ ಪ್ರಕ್ರಿಯೆ...

ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಅಮಾನತುಗೊಂಡಿದ್ದ ಯುಪಿ ಪೊಲೀಸ್ ಕಾನ್‌ಸ್ಟೇಬಲ್; ಮರುನೇಮಕದ ಬೆನ್ನಲ್ಲೇ ಬಾಲಕಿಯ ಅತ್ಯಾಚಾರ, ಕೊಲೆ!

ಹತ್ತು ವರ್ಷದ ಬಾಲಕಿಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿ, ಆಕೆಯ ಸಾವಿಗೆ ಕಾರಣನಾದ ಆರೋಪದ ಮೇಲೆ ಬಂಧಿತನಾದ ಉತ್ತರ ಪ್ರದೇಶದ ಪೊಲೀಸ್ ಕಾನ್‌ಸ್ಟೇಬಲ್ ಅಭಿಷೇಕ್ ಯಾದವ್‌ನನ್ನು ವೈದ್ಯಕೀಯ ತಪಾಸಣೆಗಾಗಿ ಗೋರಖ್‌ಪುರದ ಜಿಲ್ಲಾಸ್ಪತ್ರೆಗೆ ಕರೆತಂದಾಗ, ಅಲ್ಲಿನ...

BJP ವಿರುದ್ಧದ ಆಕ್ರೋಶವೇ Gen-Z ಹೋರಾಟದ ಮೂಲ: ವಿಪಕ್ಷಗಳಿಗೆ ಇದು ದೊಡ್ಡ ಪಾಠ

ಜಂತರ್ ಮಂತರ್‌ನಲ್ಲಿ ನಡೆದ ವಿದ್ಯಾರ್ಥಿಗಳ ಹೋರಾಟವನ್ನು ನಿಮ್ಮ ರಾಜಕೀಯ ದೃಷ್ಟಿಕೋನಕ್ಕೆ ತಕ್ಕಂತೆ ನೀವು ಕ್ರಾಂತಿ ಎಂದಾದರೂ ನೋಡಬಹುದು, ಅಥವಾ ಕ್ಷಣಿಕವಾಗಿ ಎದ್ದ ಬಿರುಗಾಳಿ ಎಂದಾದರೂ ಭಾವಿಸಬಹುದು. ಆದರೆ ಇಲ್ಲಿ ನಿಜವಾಗಿಯೂ ಆಗಿದ್ದೇನು ಮತ್ತು...

ಇನ್‌ಸ್ಟಾಗ್ರಾಮ್‌ನಲ್ಲಿ ಕ್ಷಮಿಸಿದರೆ ಸಾಲದು, ವಿದ್ಯಾರ್ಥಿಗಳ ಮೇಲಿನ ಕೇಸ್ ವಾಪಸ್ ಪಡೆಯಿರಿ: ಪ್ರಧಾನಿಗೆ ದೀಪ್ಕೆ ನೇರ ಪ್ರಶ್ನೆ

ಪ್ರಧಾನಿ ನರೇಂದ್ರ ಮೋದಿ ಅವರು ಇನ್‌ಸ್ಟಾಗ್ರಾಮ್ ವಿಡಿಯೋವೊಂದರಲ್ಲಿ ತಮ್ಮ ವಿರುದ್ಧ ನಿಂದನಾತ್ಮಕ ಪದ ಬಳಸಿದ್ದ ‘ಕಾಕ್ರೋಚ್ ಜನತಾ ಪಾರ್ಟಿ’ (CJP) ಪ್ರತಿಭಟನಾ ನಿರತ ವಿದ್ಯಾರ್ಥಿಗಳನ್ನು ಕ್ಷಮಿಸಿದ್ದೇನೆ ಎಂದು ಹೇಳಿರುವುದಕ್ಕೆ ಸಿಜೆಪಿ ಸಂಸ್ಥಾಪಕ ಅಭಿಜೀತ್...

ಪ್ರತಿಭಟನೆ ಭೀತಿ : ಸಿಜೆಐ ಸೂರ್ಯಕಾಂತ್ ಭಾಗವಹಿಸಬೇಕಿದ್ದ ಘಟಿಕೋತ್ಸವ ದಿಢೀರ್ ಮುಂದೂಡಿದ TISS

ಮುಂಬೈನ ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಸೋಷಿಯಲ್ ಸೈನ್ಸಸ್ (ಟಿಐಎಸ್‌ಎಸ್‌) ಸಂಸ್ಥೆಯು ಆಗಸ್ಟ್ 2ರಂದು ನಡೆಸಲು ನಿಗದಿಪಡಿಸಿದ್ದ ತನ್ನ 86ನೇ ವಾರ್ಷಿಕ ಘಟಿಕೋತ್ಸವವನ್ನು ದಿಢೀರ್ ಮುಂದೂಡಿದೆ. ಕ್ಯಾಂಪಸ್ ಭದ್ರತೆಯ ಬಗೆಗಿನ ಕಳವಳಗಳು ಮತ್ತು ವಿದ್ಯಾರ್ಥಿಗಳ...

ಪ್ರಧಾನಿಗಳೇ ನಿಮ್ಮ ರೀಲ್‌ಗಳನ್ನು ಅಂಧಭಕ್ತರು ಮೆಚ್ಚಬಹುದು, ಆದರೆ ಇತಿಹಾಸ ನಿಮ್ಮನ್ನು ಕ್ಷಮಿಸುವುದಿಲ್ಲ: ಬಿ.ಕೆ. ಹರಿಪ್ರಸಾದ್

ಪ್ರಧಾನಿ ನರೇಂದ್ರ ಮೋದಿ ಬಿಡುಗಡೆ ಮಾಡಿರುವ ಇತ್ತೀಚಿನ ವಿಡಿಯೋ (ರೀಲ್) ಕುರಿತು ಕಾಂಗ್ರೆಸ್ ಹಿರಿಯ ನಾಯಕ ಮತ್ತು ಕೆಪಿಸಿಸಿ ಅಧ್ಯಕ್ಷರಾದ ಬಿ.ಕೆ. ಹರಿಪ್ರಸಾದ್ ತೀವ್ರ ವಾಗ್ದಾಳಿ ನಡೆಸಿದ್ದಾರೆ. ತಾನು ಮಾಡಿದರೆ ರಾಜತಂತ್ರ, ಬೇರೆಯವರು...

ಪ್ರಧಾನಿ ಮೋದಿ ವಿರುದ್ಧ ನಿಂದನೆ: ನನಗೆ ಕೇವಲ 15 ವರ್ಷ ‘ಅನ್ಯರ ಪ್ರಭಾವಕ್ಕೆ ಒಳಗಾಗಿದ್ದೆ’ ಎಂದು ಕ್ಷಮೆ ಕೇಳಿದ ವಿದ್ಯಾರ್ಥಿನಿ ವಿಡಿಯೋ ವೈರಲ್

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿ ಭಾರಿ ಆಕ್ರೋಶಕ್ಕೆ ಗುರಿಯಾಗಿದ್ದ ಸಿಜೆಪಿ (CJP) ಪ್ರತಿಭಟನಾಕಾರ ಯುವತಿಯೊಬ್ಬಳು ಸೋಶಿಯಲ್ ಮೀಡಿಯಾದಲ್ಲಿ ಕ್ಷಮೆಯಾಚಿಸಿದ್ದಾಳೆ ಎನ್ನಲಾದ ವೀಡಿಯೊವೊಂದು ಹರಿದಾಡುತ್ತಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್...

ಸ್ಪೇನ್‌ಗೆ ನುಗ್ಗಿದ ಸಾವಿರಾರು ಮೊರಾಕನ್ನರು : ಬೃಹತ್ ವಲಸೆಯ ಹಿಂದೆ ಇಸ್ರೇಲ್ ಕುತಂತ್ರ?

ಮೊರಾಕೊದಿಂದ ಸ್ಪೇನ್‌ನ ಸಿಯುಟಾ ನಗರಕ್ಕೆ ಸಾವಿರಾರು ವಲಸಿಗರು ನುಗ್ಗಿದ ಬಿಕ್ಕಟ್ಟಿನ ಹಿಂದೆ ಇಸ್ರೇಲ್ ಕೈವಾಡವಿದೆ ಎಂಬ ಆರೋಪಗಳು ಕೇಳಿ ಬಂದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಇಸ್ರೇಲ್‌ನ ಕುತಂತ್ರ ಬುದ್ದಿಯ ಬಗ್ಗೆ ಭಾರೀ ಚರ್ಚೆಗಳು ನಡೆಯುತ್ತಿವೆ. ಇದೇ...