Homeಅಂತರಾಷ್ಟ್ರೀಯಟೇಪ್ ರೆಕಾರ್ಡರ್‌ನ ಕ್ಯಾಸೆಟ್ ಅನ್ವೇಷಕ ಲಾವೊ ಒಟೆನ್ಸ್ ನಿಧನ

ಟೇಪ್ ರೆಕಾರ್ಡರ್‌ನ ಕ್ಯಾಸೆಟ್ ಅನ್ವೇಷಕ ಲಾವೊ ಒಟೆನ್ಸ್ ನಿಧನ

ಲಾವೊ ಒಟೆನ್ಸ್ ಇನ್ನುಮುಂದೆ ಕ್ಯಾಸೆಟ್‌ನಂತೆಯೇ ನಮ್ಮ ನೆನಪಿನ ಸುರುಳಿಗಳಲ್ಲಿ ಮಾತ್ರ ಉಳಿಯುತ್ತಾರೆ

- Advertisement -
- Advertisement -

ಕ್ಯಾಸೆಟ್‌ಗಳು ಯಾರಿಗೆ ಗೊತ್ತಿಲ್ಲ. 90ರ ದಶಕದ ಪೀಳಿಗೆಯವರೆಗಿನ ಯಾರನ್ನು ಕೇಳಿದರೂ ಅವರ ಜೀವನದ ಒಂದಲ್ಲಾ ಒಂದು ಘಳಿಗೆಯಲ್ಲಿ ಕ್ಯಾಸೆಟ್‌ನೊಂದಿಗಿನ ನೆನಪಿನ ಸುರುಳಿಗಳು ಬಿಚ್ಚಿಕೊಳ್ಳುತ್ತವೆ; ಧ್ವನಿ ಸುರುಳಿಯ ಕ್ಯಾಸೆಟ್‌ನಂತೆಯೇ. ಟೇಪ್‌ ರೆಕಾರ್ಡರ್ ಒಳಗೆ ಈ ಕ್ಯಾಸೆಟ್ ಟೇಪ್ ಸಿಕ್ಕಿಕೊಂಡರೆ, ಅದನ್ನು ಹೊರತೆಗೆದು ಮತ್ತೆ ಸುತ್ತಿ ಕ್ಯಾಸೆಟ್‌ ಒಳಗೆ ಸೇರಿಸುವುದು ನಿಜಕ್ಕೂ ಧ್ಯಾನಸ್ಥ ಕೆಲಸವಾಗಿರುತ್ತಿತ್ತು. ಇನ್ನು ಅದು ತುಂಡಾಗಿಬಿಟ್ಟರಂತೂ, ಅದಕ್ಕೆ ಕಳ್ಳಿಹಾಲು ಹಾಕಿ ಅಂಟಿಸಿ, ನೆರಳಿನಲ್ಲಿಯೇ ಒಣಗಿಸಿ ಸುತ್ತುವುದು ಯಾವ ಕರಕುಶಲ ಕೆಲಸಕ್ಕೂ ಕಡಿಮೆಯಿಲ್ಲ. ಇನ್ನು ನಮ್ಮ ಅಚ್ಚುಮೆಚ್ಚಿನ ಚಲನಚಿತ್ರ ಗೀತೆಗಳು, ದೇವರ ಹಾಡುಗಳು, ಜನಪದ ಕಥನಗಳು, ಸಿನಿಮಾಗಳನ್ನು ಕ್ಯಾಸೆಟ್‌ಗಳಲ್ಲಿಯೇ ಕೇಳುತ್ತಿದ್ದೆವು. 1960ರ ದಶಕದಲ್ಲಿ ಅನ್ವೇಷಿಸಲಾದ ಈ ಕ್ಯಾಸೆಟ್ ಬಹುಪಾಲು ಜನರಿಗೆ ತಮ್ಮ ಜೀವನದ ಅವಿಭಾಜ್ಯ ಅಂಗವಾಗಿದ್ದುದರಲ್ಲಿ ಸಂದೇಹವಿಲ್ಲ.

ಇಂತಹ ನೆನಪಿನ ಸುರುಳಿ ನಮ್ಮೊಂದಿಗಿರಲು ಕಾರಣ ಈ ಕ್ಯಾಸೆಟ್‌ ಅನ್ನು ಅನ್ವೇಷಿಸಿದ ಲಾವೊ ಒಟೆನ್ಸ್. ಆದರೆ ಅವರೂ ಕೂಡ ಇನ್ನುಮುಂದೆ ಕ್ಯಾಸೆಟ್‌ನಂತೆಯೇ ನಮ್ಮ ನೆನಪಿನ ಸುರುಳಿಗಳಲ್ಲಿ ಮಾತ್ರ ಉಳಿಯುತ್ತಾರೆ. ಹೌದು, ಧ್ವನಿ ಸುರುಳಿಯ ಕ್ಯಾಸೆಟ್ (ಟೇಪ್) ಕಂಡುಹಿಡಿದಿದ್ದ ಲಾವೊ ಒಟೆನ್ಸ್ ಇತ್ತೀಚೆಗೆ ನಿಧನರಾಗಿದ್ದಾರೆ. ನೆದರ್ಲೆಂಡ್ ಮೂಲದವರಾದ 94 ವರ್ಷದ ಲಾವೊ ಒಟೆನ್ಸ್ ನಿಧನರಾಗಿದ್ದಾರೆ ಎಂದು ಫಿಲಿಪ್ಸ್‌ ಕಂಪನಿ ದೃಢಪಡಿಸಿದೆ.

ಇದನ್ನೂ ಓದಿ: ಬಂಗಾಳ ಚುನಾವಣೆ: ಮಾಜಿ ಬಿಜೆಪಿ ನಾಯಕ ಯಶವಂತ್ ಸಿನ್ಹಾ ಟಿಎಂಸಿ ಸೇರ್ಪಡೆ!

21, ಜೂನ್ 1926 ರಲ್ಲಿ ಜನಿಸಿದ ಲಾವೊ ಒಟೆನ್ಸ್ ಡೆಲ್ಫ್‌ನ ಪ್ರತಿಷ್ಠಿತ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ಶಿಕ್ಷಣ ಪಡೆದು, 1952ರಲ್ಲಿ ಫಿಲಿಪ್ಸ್‌ ಕಂಪನಿ ಸೇರಿದ್ದರು. ಕಂಪನಿಯ ಉತ್ಪನ್ನಗಳ ಅಭಿವೃದ್ಧಿ ವಿಭಾಗದ ಮುಖ್ಯಸ್ಥರಾಗಿಯೂ ಸೇವೆ ಸಲ್ಲಿಸಿದ್ದರು. ಆಗ ಟೇಪ್‌ ರೆಕಾರ್ಡರ್‌ಗೆ ಪರ್ಯಾಯವನ್ನು ಅನ್ವೇಷಿಸಲು ಹೆಚ್ಚಿನ ಒತ್ತು ನೀಡಿದ್ದರು. ಕಾಂಪ್ಯಾಕ್ಟ್‌ ಡಿಸ್ಕ್‌ ಅಭಿವೃದ್ಧಿಪಡಿಸಲು ಒಟೆನ್ಸ್‌ ಅವರು ಫಿಲಿಪ್ಸ್‌ ಕಂಪನಿಗೆ ನೆರವಾಗಿದ್ದರು. ಸಿಡಿ, ಡಿವಿಡಿ ಕ್ಯಾಸೆಟ್‌ಗಳ ಅನ್ವೇಷಣೆಗೂ ಲಾವೊ ಒಟೆನ್ಸ್ ಅವರ ಕೊಡುಗೆಯಿದೆ.

ಧ್ವನಿ ಸಂಗ್ರಹಣ ಟೇಪ್‌ ಮತ್ತು ಪ್ಲೇಯರ್‌ಗಳು ಸುಲಭವಾಗಿ ಬಳಸುವಂತೆ ಇರಬೇಕು ಮತ್ತು ದೊರೆಯಬೇಕು ಎಂಬುದು ಇವರ ಗುರಿಯಾಗಿತ್ತು.

ರೇಡಿಯೋ ನಂತರ ಮನುಷ್ಯನಿಗೆ ಅತಿ ಹೆಚ್ಚು ಮನರಂಜನೆ ನೀಡಿದ್ದು ಟೇಪ್‌ ರೇಕಾರ್ಡರ್‌ಗಳು. 20ನೇ ಶತಮಾನದ ಅಂತ್ಯದವರೆಗೂ ಜಗತ್ತಿನಾದ್ಯಂತ ಬಹುಪಾಲು ಸಂಗೀತ, ಸಿನಿಮಾಗಳನ್ನು ಧ್ವನಿಸುರುಳಿ ಮತ್ತು ಟೇಪ್‌ ರೆಕಾರ್ಡರ್‌ಗಳಲ್ಲಿಯೇ ಕೇಳಲಾಗುತ್ತಿತ್ತು. ಅದು ಅಂದಿನವರಿಗೆ ಬಹುಪ್ರಿಯವಾದ ಮಾಧ್ಯಮವಾಗಿತ್ತು. ಇಂದಿಗೂ ಕೂಡ ಹಲವರು ಕ್ಯಾಸೆಟ್‌ಗಳನ್ನು ಭಾವನಾತ್ಮವಾಗಿ ನೋಡುತ್ತಾ, ಅವುಗಳನ್ನು ಕಾಪಿಟ್ಟುಕೊಂಡಿದ್ದಾರೆ.


ಇದನ್ನೂ ಓದಿ: ವಿಧಾನಸಭೆಯಲ್ಲೇ ಸ್ಯಾನಿಟೈಸರ್‌ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಬಿಜೆಪಿ ಶಾಸಕ!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....

ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ ಆರೋಪ; ಗೃಹ ಸಚಿವ ಅಮಿತ್‌ ಶಾ ಮೌನ ಪ್ರಶ್ನಿಸಿದ ಕಪಿಲ್ ಸಿಬಲ್

ಜುಲೈ 20 ರಂದು ದೆಹಲಿಯಲ್ಲಿ ನಡೆದ ಸಂಶತ್ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಸಲಾಗಿದೆ ಎಂಬ ಆರೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನು...