Homeಕರೋನಾ ತಲ್ಲಣಮಹಾರಾಷ್ಟ್ರ: ಧಾರ್ಮಿಕ ಮೆರವಣಿಗೆ ನಡೆಸಲು ಅನುಮತಿ ನೀಡದ ಪೊಲೀಸರ ಮೇಲೆ ಹಲ್ಲೆ

ಮಹಾರಾಷ್ಟ್ರ: ಧಾರ್ಮಿಕ ಮೆರವಣಿಗೆ ನಡೆಸಲು ಅನುಮತಿ ನೀಡದ ಪೊಲೀಸರ ಮೇಲೆ ಹಲ್ಲೆ

- Advertisement -
- Advertisement -

ಕತ್ತಿ ಹಿಡಿದ ಸಿಖ್ ಧರ್ಮದ ಪ್ರತಿಭಟನಾಕಾರರ ಗುಂಪೊಂದು ಸೋಮವಾರ (ಮಾರ್ಚ್ 29) ಸಂಜೆ ಮಹಾರಾಷ್ಟ್ರದ ನಾಂದೇಡ್‌ನ ಗುರುದ್ವಾರವೊಂದರಲ್ಲಿ ಬ್ಯಾರಿಕೇಡ್‌ಗಳನ್ನು ಭೇದಿಸಿ ಪೊಲೀಸರ ಮೇಲೆ ಹಲ್ಲೆ ನಡೆಸಿರುವ ಘಟನೆ ನಡೆದಿದೆ. ಘಟನೆಯಲ್ಲಿ ನಾಲ್ವರು ಗಾಯಗೊಂಡಿದ್ದಾರೆ.

ಮಹಾರಾಷ್ಟ್ರದಲ್ಲಿ ಕೊರೊನಾ ಉಲ್ಬಣದಿಂದಾಗಿ ಧಾರ್ಮಿಕ ಮೆರವಣಿಗೆಯನ್ನು ಪೊಲೀಸರು ನಿರಾಕರಿಸಿದ ನಂತರ ಹಿಂಸಾಚಾರ ನಡೆದಿದೆ. ರಾಜ್ಯದ ಕೊರೊನಾ ಸುರಕ್ಷತಾ ನಿಯಮಗಳ ಉಲ್ಲಂಘನೆ, ಕೊಲೆ ಯತ್ನ, ದಾಂಧಲೆ ಕುರಿತು ಪ್ರಕರಣ ದಾಖಲಿಸಲಾಗಿದ್ದು, ಘಟನೆ ಸಂಬಂಧ  ಸುಮಾರು 18 ಜನರನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ವೀಡಿಯೊವೊಂದರಲ್ಲಿ, ಗುರುದ್ವಾರದ ಗೇಟ್‌ನಿಂದ ಕತ್ತಿಗಳನ್ನು ಹಿಡಿದ ಜನರ ಗುಂಪೊಂದು ಹೊರಗೆ ನುಗ್ಗಿ, ಪೊಲೀಸರು ಹಾಕಿದ ಬ್ಯಾರಿಕೇಡ್‌ಗಳನ್ನು ಭೇದಿಸಿ, ಪೊಲೀಸ್ ಗಾರ್ಡ್‌ಗಳ ಮೇಲೆ ಹಲ್ಲೆ ನಡೆಸುತ್ತಿರುವುದು ಕಾಣಬಹುದು.

ನಾಲ್ವರು ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದಾರೆ ಮತ್ತು ಪೊಲೀಸ್ ಕಾರುಗಳಿಗೆ ಹಾನಿಯಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಇದನ್ನೂ ಓದಿ: ಇನ್ನು 15 ದಿನ ರಾಜ್ಯದಲ್ಲಿ ಯಾವುದೇ ಪ್ರತಿಭಟನೆ, ರ್‍ಯಾಲಿ ನಡೆಸುವಂತಿಲ್ಲ- ಸಿಎಂ ಯಡಿಯೂರಪ್ಪ

ರಾಜ್ಯದಲ್ಲಿ ಗಣನೀಯವಾಗಿ ಹೆಚ್ಚಾಗುತ್ತಿರುವ ಕೊರೊನಾ ಪ್ರಕರಣಗಳಿಂದ “ಹೋಲಾ ಮೊಹಲ್ಲಾ” ಮೆರವಣಿಗೆಯನ್ನು ಅನುಮತಿಸಲಾಗುವುದಿಲ್ಲ ಎಂದು ಗುರುದ್ವಾರಕ್ಕೆ ತಿಳಿಸಲಾಗಿತ್ತು ಎಂದು ಪೊಲೀಸ್ ವರಿಷ್ಠಾಧಿಕಾರಿ ಪ್ರಮೋದ್ ಕುಮಾರ್ ಶೆವಾಲೆ ತಿಳಿಸಿದ್ದಾರೆ.

“ನಾವು ಗುರುದ್ವಾರದ ಅಧಿಕಾರಿಗಳು ಮತ್ತು ಮುಖ್ಯಸ್ಥರೊಂದಿಗೆ ಮಾತನಾಡಿದ್ದೇವೆ. ಅವರಿಗೆ ಪರಿಸ್ಥಿತಿಯನ್ನು ವಿವರಿಸಿದ್ದೇವೆ. ಆದ್ದರಿಂದ ಅವರು ಈ ವರ್ಷ ಯಾವುದೇ ಮೆರವಣಿಗೆ ನಡೆಯುವುದಿಲ್ಲ ಮತ್ತು ಸಂಕೀರ್ಣದೊಳಗೆ ಕಡಿಮೆ ಆಚರಣೆಯನ್ನು ನಡೆಸಲಾಗುವುದು ಎಂದು ಅವರು ಒಪ್ಪಿಕೊಂಡಿದ್ದರು” ಎಂದು ಶೆವಾಲೆ ಹೇಳಿದ್ದಾರೆ.

“ಹೋಲಾ ಮೊಹಲ್ಲಾ” ಮೆರವಣಿಗೆಯಲ್ಲಿ ಸಾಂಪ್ರದಾಯಿಕವಾಗಿ ಸಿಖ್ ಸಮುದಾಯದ ಸಮರ ಕೌಶಲ್ಯಗಳ ಪ್ರದರ್ಶನವಿರುತ್ತದೆ.

ರಾಜ್ಯದಲ್ಲಿ ಸಭೆಗಳನ್ನು ನಿಷೇಧಿಸಿದರೂ, ಸ್ಥಳೀಯರು ಮೆರವಣಿಗೆ ನಡೆಸಲು ಯೋಜಿಸಿದ್ದರು. ಹೀಗಾಗಿ ಗುರುದ್ವಾರ ಬಳಿ ಪೊಲೀಸರು ಬ್ಯಾರಿಕೇಡ್‌ಗಳನ್ನು ಹಾಕಿದ್ದರು. ನಿಶಾನ್ ಸಾಹಿಬ್ ಅಥವಾ ಸಿಖ್ ಧಾರ್ಮಿಕ ಧ್ವಜವನ್ನು ಗುರುದ್ವಾರದ ಬಾಗಿಲು ಬಳಿ ತಂದು ಅನುಮತಿ ನೀಡದ ಪೊಲೀಸರೊಂದಿಗೆ ವಾದಿಸಲು ಶುರುಮಾಡಿದ್ದರು. ನಂತರ ಒಂದು ದೊಡ್ಡ ಗುಂಪು ಗೇಟ್‌ನಿಂದ ಬ್ಯಾರಿಕೇಡ್‌ಗಳನ್ನು ತಳ್ಳಿ ಹೊರಗೆ ನುಗ್ಗಿ ಪೊಲೀಸರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.


ಇದನ್ನೂ ಓದಿ: ಯುಪಿ: ಮನೆ ಹೊರಗೆ ಹೋಳಿ ಆಚರಣೆಗೆ ವಿರೋಧಿಸಿದ್ದಕ್ಕೆ 60 ವರ್ಷದ ಮಹಿಳೆಯ ಕೊಲೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಲೈಂಗಿಕ ದೌರ್ಜನ್ಯ ಪ್ರಕರಣ : ರೇವಣ್ಣ, ಪ್ರಜ್ವಲ್‌ಗೆ ಎಸ್‌ಐಟಿ ನೋಟಿಸ್

0
ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಪಟ್ಟಂತೆ ತನಿಖೆಗೆ ಹಾಜರಾಗಲು ಆರೋಪಿಗಳಾದ ಹೆಚ್‌.ಡಿ ರೇವಣ್ಣ ಹಾಗೂ ಪ್ರಜ್ವಲ್ ರೇವಣ್ಣಗೆ ಎಸ್ಐಟಿ ಅಧಿಕಾರಿಗಳು ಇಂದು (ಏ.30) ನೋಟಿಸ್ ಜಾರಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಹಾಸನದ ಹೊಳೆನರಸೀಪುರ ನಗರ...