Homeಮುಖಪುಟಚುನಾವಣಾ ಪ್ರಚಾರ: ಕಾಂಗ್ರೆಸ್ ಸಂಸದ ಕಾರ್ತಿ ಚಿದಂಬರಂ ಪತ್ನಿಯ ಫೋಟೋ ಬಳಸಿದ ಬಿಜೆಪಿ!

ಚುನಾವಣಾ ಪ್ರಚಾರ: ಕಾಂಗ್ರೆಸ್ ಸಂಸದ ಕಾರ್ತಿ ಚಿದಂಬರಂ ಪತ್ನಿಯ ಫೋಟೋ ಬಳಸಿದ ಬಿಜೆಪಿ!

- Advertisement -
- Advertisement -

ಕಾಂಗ್ರೆಸ್ ಸಂಸದ ಕಾರ್ತಿ ಚಿದಂಬರಂ ಅವರ ಪತ್ನಿಯ ಭರತನಾಟ್ಯ ಭಂಗಿಯ ಫೋಟೋವನ್ನು ತಮಿಳುನಾಡು ಬಿಜೆಪಿ ಚುನಾವಣಾ ಪ್ರಚಾರಕ್ಕಾಗಿ ಬಳಸಿಕೊಂಡಿದೆ ಎಂದು ಆರೋಪಿಸಲಾಗಿದೆ. ಇದಕ್ಕೆ ವಿರೋಧ ವ್ಯಕ್ತವಾಗುತ್ತಿದ್ದಂತೆ ತಮಿಳುನಾಡು ಬಿಜೆಪಿ ಈ ಟ್ವೀಟ್ ಅನ್ನು ತನ್ನ ಖಾತೆಯಿಂದ ಅಳಿಸಿಹಾಕಿದೆ. ಆದರೆ ಇದರ ಸ್ಕ್ರೀನ್‌ಶಾಟ್‌ಗಳು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ.

ಇದಕ್ಕೆ ಪ್ರತಿಕ್ರಿಯಿಸಿರುವ ಕೆಲವರು, ಶ್ರೀನಿಧಿ ಚಿದಂಬರಂ ಅವರ ಚಿತ್ರವನ್ನು ಹೊರತುಪಡಿಸಿದರೂ ಸಹ ‘ಕಮಲ ಎಂದಿಗೂ ತಮಿಳುನಾಡಿನಲ್ಲಿ ಅರಳುವುದಿಲ್ಲ’ ಎಂದು ಹೇಳಿದ್ದಾರೆ.

ಕಾಕತಾಳೀಯವೆಂಬಂತೆ ಶ್ರೀನಿಧಿ ಚಿದಂಬರಂ ಅವರ ಭರತನಾಟ್ಯದ ಈ ಫೋಟೋ, ಡಿಎಂಕೆ ಅಧ್ಯಕ್ಷ ದಿವಂಗತ ಎಂ ಕರುಣಾನಿಧಿ ಅವರು ಬರೆದು, ಎ ಆರ್ ರಹಮಾನ್ ಸಂಗೀತ ಸಂಯೋಜನೆ ಮಾಡಿದ ಸೆಮ್ಮೊಳಿ ಹಾಡಿನದ್ದಾಗಿದೆ. ಈ ಹಾಡನ್ನು 2010 ರಲ್ಲಿ ನಡೆದ ‘ಸೆಮ್ಮೊಳಿ’ ಸಮ್ಮೇಳನದಲ್ಲಿ ಬಿಡುಗಡೆ ಮಾಡಲಾಗಿತ್ತು.

ತಮಿಳುನಾಡು ಬಿಜೆಪಿ ಟ್ವೀಟ್‌ನ ಸ್ಕ್ರೀನ್‌ಶಾಟ್‌ ಅನ್ನು ಶಿಲ್ಪ ಎಂಬುವವರು ಹಂಚಿಕೊಂಡಿದ್ದು, ಸ್ಕ್ರೀನ್‌ಶಾಟ್‌ನಲ್ಲಿ ‘ತಾಮರೈ ಮಲರಟ್ಟುಂ, ತಮಿಳಗ ವಳರಟ್ಟುಂ. ವಾಕ್ಕಳಿಪ್ಪೀರ್, ತಾಮರೈಕ್ಕೇ’ ಎಂದು ಬರೆಯಲಾಗಿದೆ. ಅಂದರೆ, ‘ಕಮಲ ಅರಳಲಿ, ತಮಿಳುನಾಡು ಬೆಳೆಯಲಿ. ಕಮಲಕ್ಕೇ ಮತ ಹಾಕಿ’ ಎಂದು ಬರೆಯಲಾಗಿದೆ.

ಇದನ್ನೂ ಓದಿ: ಅತ್ಯಾಚಾರ ಮತ್ತು ಬ್ಲ್ಯಾಕ್‌ಮೇಲ್‌‌‌‌: ಬಿಜೆಪಿ ಯುವ ಮೋರ್ಚಾ ಅಧ್ಯಕ್ಷನ ವಿರುದ್ದ ಪ್ರಕರಣ

ಶ್ರೀನಿಧಿ ಚಿದಂಬರಂ ಅವರ ಒಪ್ಪಿಗೆಯಿಲ್ಲದೇ ಅವರ ಚಿತ್ರವನ್ನು ಬಳಸಿದ್ದನ್ನು ಖಂಡಿಸಿರುವ ತಮಿಳುನಾಡು ಕಾಂಗ್ರೆಸ್, “ಪ್ರಿಯ ತಮಿಳುನಾಡಿನ ಬಿಜೆಪಿ, ಒಪ್ಪಿಗೆ ಎಂಬುದನ್ನು ಅರ್ಥಮಾಡಿಕೊಳ್ಳಲು ನಿಮಗೆ ಕಷ್ಟ ಎಂಬುದು ನಮಗೆ ತಿಳಿದಿದೆ. ಆದರೆ ಶ್ರೀಮತಿ ಕಾರ್ತಿ ಚಿದಂಬರಂ ಅವರ ಚಿತ್ರವನ್ನು ಅವರ ಅನುಮತಿಯಿಲ್ಲದೇ ಬಳಸಬಾರದು. ನಿಮ್ಮ ಅಭಿಯಾನವು ಸುಳ್ಳು ಪ್ರಚಾರದಿಂದ ಕೂಡಿದೆ ಎಂಬುದು ಸಾಬೀತಾಗಿದೆ” ಎಂದು ಟ್ವೀಟ್ ಮಾಡಿದೆ.


ಇದನ್ನೂ ಓದಿ: ಕೋರ್ಟ್‌ಗೆ ಹಾಜರಾದ ಸಂತ್ರಸ್ತ ಯುವತಿ: ಅರೆಸ್ಟ್ ಆಗುವರೆ ರಮೇಶ್ ಜಾರಕಿಹೊಳಿ?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಜೆಪಿಯವರು ಬಜೆಟ್ ಓದುವುದೂ ಇಲ್ಲ, ಆರ್ಥಿಕತೆ ಬಗ್ಗೆ ಗೊತ್ತೂ ಇಲ್ಲ: ಸಿಎಂ ಸಿದ್ದರಾಮಯ್ಯ

0
ಬಡವರಿಗೆ ಆರ್ಥಿಕ ಸಬಲತೆ ಕೊಡುವುದು ಅಭಿವೃದ್ಧಿ ಅಲ್ಲವೇ? ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ. ಮಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ಗ್ಯಾರಂಟಿ ಯೋಜನೆಗಳನ್ನೇ ಸಾಧನೆ ಎಂದು ಬಿಂಬಿಸಲಾಗುತ್ತಿದೆ. ಅಭಿವೃದ್ಧಿ ಕೆಲಸಗಳು ಆಗುತ್ತಿಲ್ಲ" ಎಂಬ ಬಿಜೆಪಿಗರ ಆರೋಪಕ್ಕೆ...