Homeಮುಖಪುಟಮಮತಾ ಬ್ಯಾನರ್ಜಿ ವಿಚಾರದಲ್ಲಿ ಚುನಾವಣಾ ಆಯೋಗ ಪಕ್ಷಪಾತ ತೋರುತ್ತಿದೆ- ಶಿವಸೇನೆ

ಮಮತಾ ಬ್ಯಾನರ್ಜಿ ವಿಚಾರದಲ್ಲಿ ಚುನಾವಣಾ ಆಯೋಗ ಪಕ್ಷಪಾತ ತೋರುತ್ತಿದೆ- ಶಿವಸೇನೆ

ಮಾದರಿ ನೀತಿ ಸಂಹಿತೆಯನ್ನು "ಮೋದಿ ನೀತಿ ಸಂಹಿತೆ" ಎಂದು ಮಮತಾ ಬ್ಯಾನರ್ಜಿ ಕರೆದಿದ್ದಕ್ಕಾಗಿ ಆಯೋಗ ಅವರ ಮೇಲೆ ಅಸಮಾಧಾನಗೊಂಡಿದೆ.- ಶಿವಸೇನೆ

- Advertisement -
- Advertisement -

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ 24 ಗಂಟೆಗಳ ಕಾಲ ಪ್ರಚಾರಕ್ಕೆ ನಿರ್ಬಂಧ ಹೇರಿದ್ದ ಚುನಾವಣಾ ಆಯೋಗವು ಮಮತಾ ಬ್ಯಾನರ್ಜಿ ವಿಚಾರದಲ್ಲಿ ಪಕ್ಷಪಾತ ತೋರುತ್ತಿದೆ ಎಂದು ಶಿವಸೇನೆ ಬುಧವಾರ ಆರೋಪಿಸಿದೆ.

ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ಮಮತಾ ಬ್ಯಾನರ್ಜಿಯವರಿಗೆ ಬೆಂಬಲ ನೀಡಿರುವ ಶಿವಸೇನೆ, ಚುನಾವಣಾ ಆಯೋಗದಂತಹ ಸಾಂವಿಧಾನಿಕ ಸಂಸ್ಥೆಯು ರಾಜಕೀಯ ಲಾಭಕ್ಕಾಗಿ ಕೀಳಾಗಿ ವರ್ತಿಸಬಾರದು ಎಂದು ಶಿವಸೇನಾ ತನ್ನ ಮುಖವಾಣಿ ‘ಸಾಮನಾ’ದ ಸಂಪಾದಕೀಯದಲ್ಲಿ ತಿಳಿಸಿದೆ.

“ಚುನಾವಣಾ ಆಯೋಗವು ಮಮತಾ ಬ್ಯಾನರ್ಜಿ ವಿರುದ್ಧ ಪಕ್ಷಪಾತ ಮಾಡುತ್ತಿದೆ. ಬಿಜೆಪಿಯವರ ಮಾತನ್ನು ಮಾತ್ರ ಕೇಳುತ್ತಿದೆ. ನಾವು ಕೈಮುಗಿದು ಕೇಳಿಕೊಳ್ಳುತ್ತಿದ್ದೇವೆ ನೀವು ಎಲ್ಲಾ ಪಕ್ಷದ ಅಭಿಪ್ರಾಯವನ್ನೂ ಆಲಿಸಬೇಕು. ಈ ವಿಷಯದಲ್ಲಿ ಪಕ್ಷಪಾತ ಮಾಡಬಾರದು” ಎಂದು ಮರಾಠಿ ದಿನಪತ್ರಿಕೆ ತನ್ನ ಸಂಪಾದಕಿಯದಲ್ಲಿ ಹೇಳಿದೆ.

ಇದನ್ನೂ ಓದಿ: ಸೀತಾಲ್ಕುಚ್ಚಿ ಶೂಟೌಟ್ ಬಗ್ಗೆ ವಿವಾದಿತ ಹೇಳಿಕೆ: ರಾಹುಲ್ ಸಿನ್ಹಾಗೆ 48 ಗಂಟೆ ಪ್ರಚಾರಕ್ಕೆ ನಿಷೇಧ

ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಚಣೆಯ ಪ್ರಚಾರದ ಸಮಯದಲ್ಲಿ ಎಲ್ಲಾ ಪಕ್ಷಗಳು ಶಿಷ್ಟಾಚಾರವನ್ನು ಕಳೆದುಕೊಂಡಿದ್ದಾರೆ. ಆದರೆ ಬ್ಯಾನರ್ಜಿಗೆ ಮಾತ್ರ ಚುನಾವಣಾ ಆಯೋಗ ಶಿಕ್ಷೆ ನೀಡಿದೆ ಎಂದು ಸಂಪಾದಕೀಯದಲ್ಲಿ ಶಿವಸೇನೆ ಆರೋಪಿಸಿದೆ.

“ಕಾನೂನಿನ ಮುಂದೆ ಪ್ರತಿಯೊಬ್ಬರನ್ನು ಸಮಾನವಾಗಿ ಪರಿಗಣಿಸಲಾಗುವುದು ಎಂಬುದನ್ನು ಸುಳ್ಳು ಎಂದು ಚುನಾವಣಾ ಆಯೋಗ ಪಶ್ಚಿಮ ಬಂಗಾಳದಲ್ಲಿ ಮಾಡಿ ತೋರಿಸಿದೆ. ಈ ಚುನಾವಣೆಯ ಫಲಿತಾಂಶವನ್ನು ಲೆಕ್ಕಿಸದೆ ಮಮತಾ ಬ್ಯಾನರ್ಜಿ ಅವರ ಹೋರಾಟವನ್ನು ಇತಿಹಾಸದಲ್ಲಿ ನೆನಪಿಸಿಕೊಳ್ಳಲಾಗುವುದು” ಎಂದು ತಿಳಿಸಲಾಗಿದೆ.

ಮಾದರಿ ನೀತಿ ಸಂಹಿತೆಯನ್ನು “ಮೋದಿ ನೀತಿ ಸಂಹಿತೆ” ಎಂದು ಮಮತಾ ಬ್ಯಾನರ್ಜಿ ಕರೆದಿದ್ದಕ್ಕಾಗಿ ಆಯೋಗ ಅವರ ಮೇಲೆ ಅಸಮಾಧಾನಗೊಂಡಿದೆ. ಆದರೆ,  ಕೂಚ್ ಬೆಹಾರ್‌ನ ಸೀತಾಲ್ಕುಚ್ಚಿ ಹಿಂಸಾಚಾರದ ಜವಾಬ್ದಾರಿಯನ್ನು ಕೇಂದ್ರ ಸರ್ಕಾರ ತೆಗೆದುಕೊಳ್ಳಬೇಕು ಎಂದು  ಆಗ್ರಹಿಸಿದೆ.

ಮೋದಿಯವರ ಬಾಂಗ್ಲಾದೇಶ ಭೇಟಿಯ ನಂತರ, ಪಶ್ಚಿಮ ಬಂಗಾಳದಲ್ಲಿ ಹಿಂಸಾಚಾರ ಹೆಚ್ಚಾಗಿದೆ ಎಂದು ಚುನಾವಣಾ ಆಯೋಗ ಏಕೆ ಗಮನಿಸುತ್ತಿಲ್ಲ?” ಎಂದು ಮರಾಠಿ ಪತ್ರಿಕೆ ಪ್ರಶ್ನಿಸಿದೆ. ಪಶ್ಚಿಮ ಬಂಗಾಳದ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ವಿವಾದಾತ್ಮಕ ಹೇಳಿಕೆಗಳನ್ನು ನೀಡುತ್ತಿರುವ ಕೇಂದ್ರ ಮತ್ತು ಬಿಜೆಪಿ ನಾಯಕರ ಮೇಲೆ ಬ್ಯಾನರ್ಜಿ ಮಾಡಿರುವ ತೀವ್ರ ಟೀಕೆಗೆ ಸಂಪಾದಕೀಯ ಬೆಂಬಲ ನೀಡಿದೆ.


ಇದನ್ನೂ ಓದಿ: ಸುಗ್ರೀವಾಜ್ಞೆ ಹೊರಡಿಸುವಲ್ಲಿ ಯುಪಿಎಗಿಂತ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರವೇ ಮುಂದು!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಎಸ್ಐಆರ್ ಬೇಡ..’ ರಾಷ್ಟ್ರೀಯ ವೇದಿಕೆ ಆರಂಭ; ಪ್ರಕ್ರಿಯೆ ರದ್ದುಗೊಳಿಸಿ ಹಳೆ ಮತದಾರರ ಪಟ್ಟಿ ಮರುಸ್ಥಾಪನೆಗೆ ಆಗ್ರಹ

ದೇಶದಲ್ಲಿ ನಡೆಯುತ್ತಿರುವ ಚುನಾವಣಾ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಮತ್ತು ಮತದಾರರ ಮೇಲೆ ಉಂಟಾಗಿರುವ ಅದರ ಪರಿಣಾಮಗಳ ವಿರುದ್ಧ ಸಮನ್ವಯತೆಯಿಂದ ಕಾರ್ಯನಿರ್ವಹಿಸಲು ಕರೆ ನೀಡಿರುವ ನಾಗರಿಕ ಸಂಘಟನೆಗಳು, ದೇಶದ ವಿವಿಧ ರಾಜ್ಯಗಳ...

ಬಿಜೆಪಿ-ಜೆಡಿಎಸ್ ಕಾರ್ಯಕರ್ತರಿಂದ ಅರ್ಹ ಮತದಾರರ ಹೆಸರು ಡಿಲೀಟ್‌ಗೆ ಅರ್ಜಿ; ಚುನಾವಣಾ ಕಚೇರಿ ಮುಂದೆ ಸಿಎಂ ಪ್ರತಿಭಟನೆ

ಅರ್ಹ ಮತದಾರರ ಹಸರು ಡಿಲೀಟ್‌ ಮಾಡುವಂತೆ ಬಿಜೆಪಿ ಮತ್ತು ಜೆಡಿಎಸ್‌ ಕಾರ್ಯಕರ್ತತು ಫಾರ್ಮ್‌ - 7 ನೀಡಿದ್ದಾರೆ ಎಂದು ಆರೋಪಿಸಿರುವ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಆಗ್ರಹಿಸಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ರಾಜ್ಯ...

ಕದನ ವಿರಾಮದ ಹೊರತಾಗಿಯೂ ಗಾಜಾದಲ್ಲಿ ಇಸ್ರೇಲ್‌ ದಾಳಿ; ಪತ್ರಕರ್ತ ಸೇರಿದಂತೆ ಕನಿಷ್ಠ ಎಂಟು ಮಂದಿ ಪ್ಯಾಲೆಸ್ತೀನಿಯರ ಹತ್ಯೆ

ಪ್ಯಾಲೆಸ್ತೀನ್ ಅಧಿಕಾರಿಗಳು ಮತ್ತು ವೈದ್ಯಕೀಯ ಮೂಲಗಳ ಪ್ರಕಾರ, ಬುಧವಾರ (ಸೆ.30) ದಂದು ಗಾಜಾ ಪಟ್ಟಿಯಾದ್ಯಂತ ಇಸ್ರೇಲ್ ನಡೆಸಿದ ದಾಳಿಯಲ್ಲಿ ಪತ್ರಕರ್ತ ಹಾಗೂ ಇಮಾಮ್ ಮೊಹಮ್ಮದ್ ಅಬ್ದುಲ್ ಅಜೀಜ್ ಅಲ್-ನಜ್ಜಾರ್ ಸೇರಿದಂತೆ ಕನಿಷ್ಠ ಎಂಟು...

ಸಿಇಸಿ ಗ್ಯಾನೇಶ್ ಕುಮಾರ್ ವಿರುದ್ಧ ಪ್ರತಿಭಟನೆ: ಕೇರಳ ಯೂತ್ ಕಾಂಗ್ರೆಸ್ -ಎಸ್‌ಎಫ್‌ಐ ಕಾರ್ಯಕರ್ತರ ವಿರುದ್ಧ ಪ್ರಕರಣ ದಾಖಲು

ಕೇರಳ ರಾಜಧಾನಿಯ ಪಾಳಯಂ ಪ್ರದೇಶದಲ್ಲಿ ನಡೆದ ಘರ್ಷಣೆಯ ನಂತರ, ಕೆಎಸ್‌ಯು/ಯೂತ್ ಕಾಂಗ್ರೆಸ್ ಮತ್ತು ಎಸ್‌ಎಫ್‌‌ಐ/ಡಿವೈಎಫ್‌ಐ ಕಾರ್ಯಕರ್ತರ ವಿರುದ್ಧ ಗುರುವಾರ ಎರಡು ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಬುಧವಾರ ರಾತ್ರಿ ಕೇಂದ್ರ ಸರ್ಕಾರ...

ಹೈದರಾಬಾದ್: ಕೇಸರಿ ಶಾಲುಗಳೊಂದಿಗೆ ಶಾಲೆಗೆ ನುಗ್ಗಿ ಮುಸ್ಲಿಂ ಶಿಕ್ಷಕಿಗೆ ಬೆದರಿಕೆ ಆರೋಪ: ಬಿಜೆಪಿ ಕಾರ್ಪೊರೇಟರ್ ವಿರುದ್ಧ ಪ್ರಕರಣ ದಾಖಲು

ಹೈದರಾಬಾದ್: ಶಾಲೆಯೊಂದರ ಮುಸ್ಲಿಂ ಶಿಕ್ಷಕಿಗೆ ಕಿರುಕುಳ ನೀಡಿ ಬೆದರಿಕೆ ಹಾಕಿದ ಆರೋಪದ ಹಿನ್ನೆಲೆಯಲ್ಲಿ ಬಿಜೆಪಿ ಕಾರ್ಪೊರೇಟರ್ ಅಕುಲಾ ಶ್ರೀವಾಣಿ ವಿರುದ್ಧ ಹೈದರಾಬಾದ್ ಪೊಲೀಸರು ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿದ್ದಾರೆ. ಸರೂರ್ ನಗರದ ಶ್ರೀ ವೆಂಕಟೇಶ್ವರ...

ಪ್ರತಿಯೊಂದರಲ್ಲೂ ಅಜೆಂಡಾ; ಉತ್ತರ ಪ್ರದೇಶ ಪೊಲೀಸರನ್ನೇ ವಿಸರ್ಜಿಸಿಬಿಡುವುದು ಒಳ್ಳೆಯದು: ಸುಪ್ರೀಂ ಕೋರ್ಟ್

ಉತ್ತರ ಪ್ರದೇಶ ಪೊಲೀಸರ ವಿರುದ್ಧ ತೀವ್ರವಾಗಿ ಕಿಡಿಕಾರಿರುವ ಸುಪ್ರೀಂ ಕೋರ್ಟ್, ಆ ಇಲಾಖೆಯನ್ನೇ ವಿಸರ್ಜಿಸಿ ರಾಜ್ಯದ ಪ್ರತಿಯೊಂದು ತನಿಖೆಯನ್ನು ಸಿಬಿಐ (ಸಿಬಿಐ) ವಹಿಸಿಕೊಳ್ಳುವಂತೆ ಮಾಡುವುದು ಉತ್ತಮ ಎಂದು ಬುಧವಾರ (ಸೆ.30) ಕಟುವಾಗಿ ಟೀಕಿಸಿದೆ. ಮೋಟಾರ್...

ಜಾತಿ ಕಾರಣಕ್ಕೆ ಆಸ್ಪತ್ರೆಗೆ ದಾಖಲಿಸಿಕೊಳ್ಳಲು ನಿರಾಕರಣೆ ಆರೋಪ : ರಸ್ತೆ ಬದಿಯೇ ಮಗುವಿಗೆ ಜನ್ಮ ನೀಡಿದ ದಲಿತ ಮಹಿಳೆ!

ಉತ್ತರ ಪ್ರದೇಶದ ಭದೋಹಿ ಜಿಲ್ಲೆಯ ಗ್ಯಾನ್‌ಪುರದಲ್ಲಿರುವ ಮಹಾರಾಜ ಚೇತ್ ಸಿಂಗ್ ಜಿಲ್ಲಾಸ್ಪತ್ರೆಯ ಸಿಬ್ಬಂದಿ ದಾಖಲಿಸಿಕೊಳ್ಳಲು ನಿರಾಕರಿಸಿದ ಕಾರಣ, ಆದಿವಾಸಿ ಮಹಿಳೆಯೊಬ್ಬರು ಆಸ್ಪತ್ರೆಯ ಹೊರಗಿನ ರಸ್ತೆ ಬದಿಯೇ ಮಗುವಿಗೆ ಜನ್ಮ ನೀಡಿದ ಘಟನೆ ನಡೆದಿದೆ....

ಬ್ಯಾಂಕ್ ಖಾತೆಗಳು ಸ್ಥಗಿತಗೊಳಿಸಿರುವುದನ್ನು ಪ್ರಶ್ನಿಸಿದ್ಧ ಟಿಎಂಸಿ ಆರ್ಜಿ ವಜಾಗೊಳಿಸಿದ ಸುಪ್ರೀಂ ಕೋರ್ಟ್ : ವಿಚಾರಣೆ ತ್ವರಿತಗೊಳಿಸುವಂತೆ ಹೈಕೋರ್ಟ್‌ಗೆ ಸೂಚನೆ

ಪಶ್ಚಿಮ ಬಂಗಾಳ ಪೊಲೀಸರು ತಮ್ಮ ನಾಲ್ಕು 'ಇಂಡಿಯನ್ ಬ್ಯಾಂಕ್' ಖಾತೆಗಳನ್ನು ಸ್ಥಗಿತಗೊಳಿಸಿರುವುದನ್ನು ಪ್ರಶ್ನಿಸಿ ಮಮತಾ ಬ್ಯಾನರ್ಜಿ ನೇತೃತ್ವದ 'ಆಲ್ ಇಂಡಿಯಾ ತೃಣಮೂಲ ಕಾಂಗ್ರೆಸ್' (ಎಐಟಿಸಿ) ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಗುರುವಾರ (ಅ.1)...

ಬಂಗಾಳ ಹೈಕೋರ್ಟ್‌ನಿಂದ ಮಧ್ಯಂತರ ಜಾಮೀನು; ನಂದಿಗ್ರಾಮ ಕಾಂಗ್ರೆಸ್‌ ಅಭ್ಯರ್ಥಿ ಜೈಲಿನಿಂದ ಬಿಡುಗಡೆ

ಪಶ್ಚಿಮ ಬಂಗಾಳ ಹೈಕೋರ್ಟ್ ಮಧ್ಯಂತರ ಜಾಮೀನು ನೀಡಿದ ಮರುದಿನವೇ, ಕಾಂಗ್ರೆಸ್‌ನ ನಂದಿಗ್ರಾಮ ಉಪಚುನಾವಣೆಯ ಅಭ್ಯರ್ಥಿ ಮಿಲನ್ ಪ್ರಧಾನ್ ಬುಧವಾರ (ಸೆ. 30) ಜೈಲಿನಿಂದ ಬಿಡುಗಡೆಯಾಗಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಹಲ್ದಿಯಾ ಜೈಲಿನ ಹೊರಗೆ...

ಚುನಾವಣಾ ಆಯೋಗದ ಐಟಿ ಸೆಲ್ ನಿರ್ದೇಶಕಿ ಸೀಮಾ ಖನ್ನಾ ವಿರುದ್ಧ ದೂರು ದಾಖಲಿಸಿದ ಸಂಸದೆ ಮಹುವಾ ಮೊಯಿತ್ರಾ

ಬಂಗಾಳದಲ್ಲಿ ಮತದಾರರ ಹೆಸರುಗಳು ಮತ್ತು ಪಟ್ಟಿಗಳನ್ನು ಕೇಂದ್ರ ಮಟ್ಟದಲ್ಲೇ ಸೇರಿಸಲು, ತೆಗೆದುಹಾಕಲು ಅಥವಾ ಬದಲಾಯಿಸಲು ಅನುವು ಮಾಡಿಕೊಡುವಂತಹ ಮತದಾರರ ಪಟ್ಟಿ ಸಾಫ್ಟ್‌ವೇರ್ ಬಳಕೆಗೆ ಸಂಬಂಧಿಸಿದಂತೆ, ಭಾರತೀಯ ಚುನಾವಣಾ ಆಯೋಗದ ಐಟಿ ವಿಭಾಗದ ಮಹಾನಿರ್ದೇಶಕಿ...