Homeಕರ್ನಾಟಕದಿಂಡಗನೂರು: ದೇವಾಲಯ ಪ್ರವೇಶದ ಬಳಿಕ ದಲಿತರಿಗೆ ಅಘೋಷಿತ ಸಾಮಾಜಿಕ ಬಹಿಷ್ಕಾರ

ದಿಂಡಗನೂರು: ದೇವಾಲಯ ಪ್ರವೇಶದ ಬಳಿಕ ದಲಿತರಿಗೆ ಅಘೋಷಿತ ಸಾಮಾಜಿಕ ಬಹಿಷ್ಕಾರ

- Advertisement -
- Advertisement -

ನಮ್ಮ ಸಂವಿಧಾನ ಎಲ್ಲ ರೀತಿಯ ಅಸ್ಪೃಶ್ಯತೆ ಆಚರಣೆಯನ್ನು ನಿಷೇಧಿಸಿದೆ. ಅದರ ಭಾಗವಾಗಿ ದಲಿತರು ದೇವಾಲಯಗಳಿಗೆ ಪ್ರವೇಶಿಸುತ್ತಿದ್ದಾರೆ. ಆದರೆ ಸ್ವಾಭಿಮಾನ ಮೆರೆದ ದಲಿತರ ಆರ್ಥಿಕ ಮೂಲಗಳಿಗೆ ಸವರ್ಣಿಯರು ಅಡ್ಡಿಯುಂಟು ಮಾಡುವ ವಿದ್ಯಮಾನಗಳು ವರದಿಯಾಗುತ್ತಿವೆ. ಅದಕ್ಕೆ ಇತ್ತೀಚಿನ ಉದಾಹರಣೆ ಹಾಸನ ಜಿಲ್ಲೆಯ ಚೆನ್ನರಾಯಪಟ್ಟಣ ತಾಲ್ಲೂಕಿನ ದಿಂಡಗನೂರು ಪ್ರಕರಣ.

8 ತಿಂಗಳ ಹಿಂದೆ ಜಾತಿ ಕಾರಣಕ್ಕೆ ದಲಿತರಿಗೆ ಹೊಟೇಲ್‌ ಒಳಗೆ ಪ್ರವೇಶ ನೀಡದೇ ಹೊರ ಕಳುಹಿಸಲಾಗಿತ್ತು. ಅದೇ ಗ್ರಾಮದಲ್ಲಿ ದೇವಾಲಯ ಪ್ರವೇಶಿಸುವ ಮೂಲಕ ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ದಿಂಡಗೂರಿನ ದಲಿತರು ಹೊಸ ಇತಿಹಾಸ ಬರೆದಿದ್ದರು.

ಮೇಲ್ಜಾತಿ ಮತ್ತು ದಲಿತರ ಜೊತೆಗೆ ತಹಶೀಲ್ದಾರ್‌ ಮಾರುತಿ ಸಭೆ ನಡೆಸಿದ್ದರು. ಬಳಿಕ ತಾಲೂಕು ಆಡಳಿತ, ಪೊಲೀಸ್ ಇಲಾಖೆ, ಜಿಲ್ಲಾ ಭೀಮ್ ಆರ್ಮಿ ಸಂಘಟನೆ, ಮುಜರಾಯಿ ಇಲಾಖೆ ಸಮ್ಮುಖದಲ್ಲಿ ದಿಂಡಗೂರು ಗ್ರಾಮದ ದಲಿತರು ದೇವಾಲಯಗಳಿಗೆ ಮೊದಲ ಬಾರಿಗೆ ಪ್ರವೇಶ ಪಡೆದಿದ್ದರು.

ದೇವಾಲಯಗಳಿಗೆ ದಲಿತರು ಪ್ರವೇಶಿಸಿದ ಬಳಿಕ ಹಲವು ಸಮಸ್ಯೆಗಳನ್ನು ಎದುರಿಸುವಂತಾಗಿದೆ. ಸವರ್ಣೀಯರನ್ನು ದಲಿತರು ಅವಲಂಬಿಸಿರುವುದೇ ಈ ಸಮಸ್ಯೆಗೆ ಕಾರಣವಾಗಿದೆ. ದೇವಾಲಯ ಪ್ರವೇಶವನ್ನೇ ನೆಪವಾಗಿಟ್ಟುಕೊಂಡು ದಲಿತರನ್ನು ಮೂಲೆಗುಂಪು ಮಾಡುವ ಪ್ರವೃತ್ತಿಯನ್ನು ಎಲ್ಲೆಡೆ ಕಾಣಬಹುದು. ಇದಕ್ಕೆ ದಿಂಡಿಗನೂರು ಗ್ರಾಮ ಒಂದು ಉದಾಹರಣೆಯಷ್ಟೇ.

ಇದನ್ನೂ ಓದಿರಿ: ಚಿಲ್ಲರೆ ನೆಪದಲ್ಲಿ ದಲಿತರಿಗೆ ಹಾಲು ನೀಡದ ‘ಬ್ಯಾಲಹಳ್ಳಿ ಹಾಲು ಉತ್ಪಾದಕರ ಸಂಘ’

ದಿಂಡಗನೂರು ದಲಿತ ಮುಖಂಡ, ಭೀಮ್‌ ಆರ್ಮಿಯ ಸಂಘಟಕ ನಟರಾಜ್‌‌ ‘ನಾನುಗೌರಿ.ಕಾಂ’ ಜೊತೆ ಮಾತನಾಡಿ ದೇವಾಲಯ ಪ್ರವೇಶೋತ್ತರ ಪರಿಸ್ಥಿತಿಗಳನ್ನು ಬಿಚ್ಚಿಟ್ಟರು.

“ನಾವು ದೇವಾಲಯ ಪ್ರವೇಶ ಮಾಡಿದ್ದು ಸಾಮಾಜಿಕ ನ್ಯಾಯಕ್ಕಾಗಿ. ನಾವು ಕೂಡ ಮನುಷ್ಯರು ಎಂಬುದನ್ನು ಸಾರುವುದಕ್ಕಾಗಿ. ನಮ್ಮ ಧಾರ್ಮಿಕ ಹಕ್ಕಿಗಾಗಿ ದೇವಾಲಯ ಪ್ರವೇಶಿಸಿದೆವು. ಆದರೆ ಆನಂತರದಲ್ಲಿ ನಮ್ಮ ಮೇಲೆ ಅಘೋಷಿತ ಸಾಮಾಜಿಕ ಬಹಿಷ್ಕಾರ ಹಾಕುವುದು ನಡೆಯುತ್ತಿದೆ” ಎಂದರು.

“ನಮ್ಮ ಊರಿನಲ್ಲಿ ದಲಿತರು ಸೇರಿ ಸುಮಾರು ಏಟೆಂಟು ಜಾತಿಗಳಿವೆ. ದಲಿತರಿಗೆ ಮಾತ್ರ ಬಹಿಷ್ಕಾರ ಹಾಕುವ ಪದ್ಧತಿ ರೂಢಿಗೆ ಬಂದಿದೆ. ನಾವು ದೇವಾಲಯ ಪ್ರವೇಶಿಸಿದ ಬಳಿಕ ಸವರ್ಣೀಯ ಮುಖಂಡರು ಸಭೆ ಸೇರಿ ಅಘೋಷಿತ ಬಹಿಷ್ಕಾರಕ್ಕೆ ನಿರ್ಧರಿಸಿದ್ದಾರೆ. ದಲಿತರ ಬಳಿ ಯಾವುದೇ  ಮಾತುಕತೆ, ವ್ಯವಹಾರ ಮಾಡಬೇಡಿ ಎಂದು ತಮ್ಮ ಜಾತಿಯ ಜನರಿಗೆ ತಿಳಿಸಿದ್ದಾರೆ. ನಮ್ಮ ಜೊತೆ ಮಾತನಾಡಿದವರಿಗೆ ದಂಡ ಹಾಕುವ ಪದ್ಧತಿಯನ್ನು ಆಂತರಿಕವಾಗಿ ಮಾಡಿಕೊಂಡಿದ್ದಾರೆ. ಈಗಲೂ ಅದು ಚಾಲ್ತಿಯಲ್ಲಿದೆ” ಎಂದು ಮಾಹಿತಿ ನೀಡಿದರು.

“ಕೂಲಿಯನ್ನೇ ನಂಬಿಕೊಂಡಿದ್ದ ದಲಿತರನ್ನು ಕೂಲಿಗೆ ಕರೆಯುತ್ತಿಲ್ಲ. ಕೇಳಿದರೆ ಅದಕ್ಕೆ ಸಬೂಬುಗಳನ್ನು ಹೇಳುತ್ತಿದ್ದಾರೆ. ಇಷ್ಟು ದಿನ ಕೆಲಸ ಇತ್ತು, ಕರೆಯುತ್ತಿದ್ದೆವು; ಈಗ ಕೆಲಸ ಇಲ್ಲ ಎನ್ನುತ್ತಾರೆ. ಮಿಲ್‌ ಅಂಗಡಿಗೆ ದಲಿತರು ಹೋದರೆ ನಮಗೆ ಹುಷಾರಿಲ್ಲ, ನಾವು ಮಿಲ್‌ ನಿಲ್ಲಿಸಬೇಕೆಂದಿದ್ದೇವೆ ಎನ್ನುತ್ತಾರೆ. ಅವರಿಗೆ ಸರಿಸಮಾನವಾಗಿ ದೇವಾಲಯ ಪ್ರವೇಶಿಸಿದ್ದೇ ಅವರಿಗೆ ಸಹಿಸಲು ಆಗಿಲ್ಲ. ನಾವು ಯಾವಾಗಲೂ ಅವರ ಕಾಲಡಿ ಇರಬೇಕೆಂಬುದು ಅವರ ಮನಸ್ಥಿತಿ. ಹೊರಗಿನ ಪ್ರಪಂಚಕ್ಕೆ ಇದು ಗೊತ್ತಾಗುತ್ತಿಲ್ಲ” ಎಂದು ವಿಷಾದಿಸಿದರು.

“ನಾವು ಕೂಲಿನಾಲಿ ಮಾಡಿಕೊಂಡು ಹೇಗೋ ಇದ್ದೆವು. ಸಂಘಟಕರೆಲ್ಲ ಸೇರಿ ದೇವಾಲಯಕ್ಕೆ ಕರೆದುಕೊಂಡು ಹೋಗಿದ್ದೇ ಇದಕ್ಕೆಲ್ಲ ಕಾರಣ ಎಂದು ಕೆಲವು ದಲಿತರೇ ನಮ್ಮ ವಿರುದ್ಧ ಮಾತನಾಡುತ್ತಿದ್ದಾರೆ. ದೇವಾಲಯಕ್ಕೆ ಹೋಗಿ ನಮಗೆ ಆರ್ಥಿಕವಾಗಿ ಹಿನ್ನೆಡೆಯಾಯಿತು. ಆದರೆ ಧಾರ್ಮಿಕ ಸ್ವತಂತ್ರವನ್ನು ಪಡೆದುಕೊಂಡಿದ್ದೇವೆ” ಎನ್ನುತ್ತಾರೆ ನಟರಾಜ್‌.

“ನಮಗೆ ಸರ್ಕಾರಿ ಸವಲತ್ತುಗಳನ್ನು ದೊರಕಿಸಿ, ಸ್ವಾವಲಂಬಿಗಳಾಗಲು ಅವಕಾಶವನ್ನು ಸರ್ಕಾರ ನೀಡಬೇಕು. ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಿದರೂ ಯಾವುದೇ ಕ್ರಮ ಜರುಗಿಸುತ್ತಿಲ್ಲ. ಶಾಸಕರ ಗಮನಕ್ಕೆ ತರುವ ಕೆಲಸ ಮಾಡುತ್ತಿದ್ದೇವೆ. ದಲಿತರ ಸ್ವಯಂ ಉದ್ಯೋಗಕ್ಕೆ ಜನಪ್ರತಿನಿಧಿಗಳು ಪ್ರೋತ್ಸಾಹಿಸಬೇಕು. ಈ ನಿಟ್ಟಿನಲ್ಲಿ ಶ್ರೀಶಕ್ತಿ ಸಂಘವನ್ನು ಆರಂಭಿಸಿದ್ದೇವೆ. ಎಷ್ಟು ದಿನ ಸವರ್ಣೀಯರನ್ನೇ ಅವಲಂಬಿಸಲು ಸಾಧ್ಯ?” ಎಂದು ಕೇಳುವ ನಟರಾಜ್‌ ಅವರ ಪ್ರಶ್ನೆಯಲ್ಲಿ ಬಿಡುಗಡೆಯ ಮಾರ್ಗವಿದೆ. ಆದರೆ ಇದಕ್ಕೆ ಸರ್ಕಾರ, ಜನಪ್ರತಿನಿಧಿಗಳು ಬೆನ್ನೆಲುಬಾಗಿ ನಿಲ್ಲಬೇಕಿದೆ.


ಇದನ್ನೂ ಓದಿರಿ: ವಿಡಿಯೊ ವರದಿ: ಬ್ಯಾಲಹಳ್ಳಿ ದಲಿತರಿಂದ ದೇವಾಲಯ ಪ್ರವೇಶ; ಸವರ್ಣೀಯರ ಅಸಹನೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ಇವೆಲ್ಲಾ ಹುನ್ನಾರಗಳಿಗೆ ದಲಿತರು ಎದರಬಾರದು ಸರ್ಕಾರ ಮಧ್ಯಪ್ರವೇಶಿಸಿ ಅವರಿಗೆ ಭೂಮಿ ಸ್ವಯಂ ಉದ್ಯೋಗ ಸಾಲಸೌಲಭ್ಯ ನೀಡಿ ಅವರ ಗೌಲವಯುತ ಬದುಕಿಗೆ ನೆರವಾಗಬೇಕು ವಿದ್ಯಾವಂತ ದಲಿತರ ಜವಾಬ್ದಾರಿಯು ಹೆಚ್ಚಿದೆ

LEAVE A REPLY

Please enter your comment!
Please enter your name here

- Advertisment -

ರಾಜಸ್ಥಾನ ಸ್ಥಳೀಯ ಸಂಸ್ಥೆ ಚುನಾವಣೆ: ಬಿಕಾನೇರ್‌ನ ನೋಖಾದಲ್ಲಿ ಸಿಪಿಐ(ಎಂ) ಐತಿಹಾಸಿಕ ಜಯಭೇರಿ

ರಾಜಸ್ಥಾನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಎಡಪಕ್ಷವಾದ ಸಿಪಿಐ(ಎಂ) (CPI-M) ಐತಿಹಾಸಿಕ ಸಾಧನೆ ಮಾಡಿದ್ದು, ಬಿಕಾನೇರ್ ಜಿಲ್ಲೆಯ ನೋಖಾ ನಗರ ಪಾಲಿಕೆಯ ಆಡಳಿತದ ಚುಕ್ಕಾಣಿಯನ್ನು ತನ್ನದಾಗಿಸಿಕೊಂಡಿದೆ. ಹಲವು ವರ್ಷಗಳಿಂದ ಬಿಜೆಪಿ ಹಾಗೂ ಎನ್‌ಸಿಪಿ (NCP)...

ಏಕರೂಪ ನಾಗರಿಕ ಸಂಹಿತೆಯನ್ನು ಸಂಸತ್ತಿನ ಬದಲು ರಾಜ್ಯಗಳ ಮೂಲಕವೇ ಜಾರಿಗೆ ಅಮಿತ್ ಶಾ ಮುಂದಾಗಿದ್ದೇಕೆ?

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೆಪ್ಟೆಂಬರ್ 13ರಂದು ಮುಂಬೈನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ, 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ಮತ್ತು ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ...

ದಿಶಾ ಸಾಲಿಯಾನ್ ಸಾವಿನ ಪ್ರಕರಣ : ಸಿಬಿಐ ಎಫ್ಐಆರ್‌ನಲ್ಲಿ ಆದಿತ್ಯ ಠಾಕ್ರೆ, ರಿಯಾ ಚಕ್ರವರ್ತಿ ಸೇರಿದಂತೆ ಹಲವರ ಹೆಸರು

ಬಾಂಬೆ ಹೈಕೋರ್ಟ್ ಆದೇಶದ ಮೇರೆಗೆ, ಕೇಂದ್ರೀಯ ತನಿಖಾ ದಳವು (ಸಿಬಿಐ) ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಅವರ ನಿಗೂಢ ಸಾವಿಗೆ ಸಂಬಂಧಿಸಿದಂತೆ ಸೋಮವಾರ(ಸೆ.14) ಎಫ್‌ಐಆರ್ ದಾಖಲಿಸಿದೆ. ಶಿವಸೇನೆ...

ಟಿ. ನರಸೀಪುರ ಇನ್ಸ್‌ಪೆಕ್ಟರ್‌ ಧನಂಜಯ್‌ ಹೇಳಿದ್ದರಲ್ಲಿ ತಪ್ಪೇನಿದೆ? ಸಾರ್ವಜನಿಕರಿಂದ ಬೆಂಬಲ

ಮಸೀದಿಗಳ ಮುಂಭಾಗ ಯಾವುದೇ ಪ್ರಚೋದನಕಾರಿ ಕೃತ್ಯಗಳಿಗೆ ಆಸ್ಪದ ನೀಡದೆ, ರಾತ್ರಿ 10:30ರ ಒಳಗಾಗಿ ಡಿಜೆ ಸದ್ದಿಲ್ಲದೆ ನಿಯಮಾನುಸಾರ ಮೆರವಣಿಗೆ ಮುಗಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಂಡ ಇನ್ಸ್‌ಪೆಕ್ಟರ್ ಧನಂಜಯ್ ಅವರ ಪರವಾಗಿ ಈಗ ಸಾಮಾಜಿಕ...

ಅತ್ಯಾಚಾರ ಪ್ರಕರಣದಲ್ಲಿ 10 ವರ್ಷ ಜೈಲು ಶಿಕ್ಷೆ: ‘ತೆಹಲ್ಕಾ’ ಸಂಸ್ಥಾಪಕ ತರುಣ್ ತೇಜ್‌ಪಾಲ್ ನ್ಯಾಯಾಲಯಕ್ಕೆ ಶರಣು, ಜೈಲಿಗೆ ರವಾನೆ 

ಪಣಜಿ: 2013ರ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್‌ನ ಗೋವಾ ಪೀಠದಿಂದ ದೋಷಿ ಎಂದು ತೀರ್ಪುಗೊಂಡು 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಗೆ ಗುರಿಯಾಗಿರುವ ‘ತೆಹಲ್ಕಾ’ ಸಂಸ್ಥಾಪಕ ಹಾಗೂ ಮಾಜಿ ಪ್ರಧಾನ ಸಂಪಾದಕ...

ಹೈದರಾಬಾದ್‌ನಲ್ಲಿ ಗಣೇಶ ವಿಗ್ರಹ ಖರೀದಿ ವಿಚಾರಕ್ಕೆ ಘರ್ಷಣೆ: 34 ವರ್ಷದ ವ್ಯಕ್ತಿ ಸಾವು: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ

ಹೈದರಾಬಾದ್: ಗಣೇಶ ಚತುರ್ಥಿ ಆಚರಣೆಗೆ ಮುನ್ನ ಗಣೇಶ ವಿಗ್ರಹ ಖರೀದಿಸುವ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ವಾಗ್ವಾದವು ಹಿಂಸಾತ್ಮಕ ಘರ್ಷಣೆಗೆ ತಿರುಗಿ 34 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಹೈದರಾಬಾದ್‌ನ ಜೋಡಿಮೆಟ್ಲಾ ಪ್ರದೇಶದಲ್ಲಿ ನಡೆದಿದೆ....

ಮಹಿಳಾ ಬೈಕರ್‌ಗೆ ಬೇಕಂತಲೇ ಢಿಕ್ಕಿ ಹೊಡೆದು ಪರಾರಿಯಾದ ಕಾರು ಸವಾರ! ಬೆಚ್ಚಿಬೀಳಿಸುವ ವಿಡಿಯೋ ವೈರಲ್

ಹರ್ಯಾಣದ ಗುರುಗ್ರಾಮದ ಗಾಲ್ಫ್ ಕೋರ್ಸ್ ರಸ್ತೆಯಲ್ಲಿ ಅತಿವೇಗವಾಗಿ ಬಂದ ಕಾರೊಂದು ಮಹಿಳಾ ಬೈಕ್ ಸವಾರಿಗೆ ಉದ್ದೇಶಪೂರ್ವಕವಾಗಿ ಢಿಕ್ಕಿ ಹೊಡೆದು ಪರಾರಿಯಾಗಿರುವ ಭೀಕರ ಘಟನೆ ನಡೆದಿದೆ. ಹಿಟ್ ಆ್ಯಂಡ್ ರನ್ ಶಂಕೆ ವ್ಯಕ್ತವಾಗಿರುವ ಈ...

ಪ. ಬಂಗಾಳ | 252 ಮದ್ರಸಾಗಳನ್ನು ಮುಚ್ಚಲು ಆದೇಶಿಸಿದ ಬಿಜೆಪಿ ಸರ್ಕಾರ; 100 ಸಂಸ್ಥೆಗಳಿಗೆ ಕಾರಣ ಕೇಳಿ ನೋಟಿಸ್

ರಾಜ್ಯದಾದ್ಯಂತ ಮದ್ರಸಾಗಳ ಸಮೀಕ್ಷೆಯನ್ನು ಪ್ರಾರಂಭಿಸಿದ ಮೂರು ತಿಂಗಳ ನಂತರ, ಬಿಜೆಪಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಅನುಮೋದನೆಯ ಕೊರತೆ ಅಥವಾ ಇತರ ಅಕ್ರಮಗಳನ್ನು ಉಲ್ಲೇಖಿಸಿ 252 ಸಂಸ್ಥೆಗಳನ್ನು ಮುಚ್ಚಲು ಆದೇಶಿಸಿದೆ ಮತ್ತು ಇತರ...

ಟಿ. ನರಸೀಪುರ ಪ್ರತಿಭಟನೆ ವೇಳೆ ವಾಕ್ಸಮರ: ಪ್ರತಾಪ್ ಸಿಂಹ ಹಾಗೂ ಎಲ್. ನಾಗೇಂದ್ರ ನಡುವೆ ಬಹಿರಂಗ ನೂಕಾಟ-ತಳ್ಳಾಟ!

ಟಿ. ನರಸೀಪುರದಲ್ಲಿ ಗಣೇಶೋತ್ಸವ ಮೆರವಣಿಗೆಗೆ ಸಂಬಂಧಿಸಿದ ವಿವಾದದ ಹಿನ್ನೆಲೆಯಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಮೈಸೂರು ಬಿಜೆಪಿಯಲ್ಲಿನ ಆಂತರಿಕ ಭಿನ್ನಮತ ಬಹಿರಂಗಗೊಂಡಿದೆ. ಪೊಲೀಸ್ ಇನ್ಸ್‌ಪೆಕ್ಟರ್ ಧನಂಜಯ್ ವಿರುದ್ಧ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಮಾಜಿ...

ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನ ಮುಂದೂಡಿದ NLSIU ವಿದ್ಯಾರ್ಥಿ ಸಂಘ; ಯಾವುದೇ ಒತ್ತಡಕ್ಕೆ ಮಣಿದಿಲ್ಲವೆಂದು ಸ್ಪಷ್ಟನೆ

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯ (NLSIU) ಲಾ ಅಂಡ್ ಸೊಸೈಟಿ ಕಮಿಟಿಯು (LawSoc) ಉಮರ್ ಖಾಲಿದ್ ಅವರ ಜೈಲುವಾಸದ ಕುರಿತು ಲಲಿತ್ ವಾಚಾನಿ ನಿರ್ಮಿಸಿರುವ 'ಪ್ರಿಸನರ್ ನಂ. 626710...