Homeಮುಖಪುಟನಿಮ್ಮಲ್ಲಿರುವ ನಾಯಕತ್ವ ಗುಣವನ್ನು ಸದ್ಬಳಕೆ ಮಾಡಿಕೊಳ್ಳುವುದು ಹೇಗೆ ಗೊತ್ತೆ?

ನಿಮ್ಮಲ್ಲಿರುವ ನಾಯಕತ್ವ ಗುಣವನ್ನು ಸದ್ಬಳಕೆ ಮಾಡಿಕೊಳ್ಳುವುದು ಹೇಗೆ ಗೊತ್ತೆ?

- Advertisement -
- Advertisement -

ಜೀವನ ಕಲೆಗಳು: ಅಂಕಣ- 23

ನಾಯಕತ್ವದ ಕಲೆ

ನಾಯಕತ್ವ ಎನ್ನುವುದು ಒಂದು ಕಲೆಯಲ್ಲ. ಕಲೆಗಳ ಒಂದು ಚಲಿಸುವ ಭಂಡಾರ. ನಾಯಕ ಎಂದ ಕೂಡಲೇ ರಾಜಕೀಯ ನೇತಾರರ, ಮತ ಯಾಚನೆಯ ವೇಳೆಯ, ಚಿತ್ರಣ ನಮ್ಮ ಕಣ್ಣ ಮುಂದೆ ಬರಬೇಕಿಲ್ಲ, ಏಕೆಂದರೆ ಅವರಲ್ಲಿ ಹೆಚ್ಚು ಜನ ನಿಜವಾದ ಅರ್ಥದಲ್ಲಿ ನಾಯಕರೇ ಅಲ್ಲ.

ನಾಯಕ ಎಂದರೆ ಸಮಾಜದಲ್ಲಿ ತಮ್ಮ ವ್ಯಕ್ತಿತ್ವದಿಂದ, ತಮ್ಮ ಕೆಲಸದಿಂದ ಉತ್ತಮ ಮಾದರಿಯಾದ, ಜನಸಾಮಾನ್ಯರು ಸ್ವ-ಇಚ್ಛೆಯಿಂದ ಹಿಂಬಾಲಿಸಬಹುದಂತಹ ವ್ಯಕ್ತಿ. ಕೇವಲ ಹಿಂಬಾಲಕರಿದ್ದಾರೆಂಬ ಕಾರಣಕ್ಕೆ ಯಾರೂ ನಾಯಕರಾಗುವುದಿಲ್ಲ.

ನಾಯಕರಿಗೆ ವಯಸ್ಸು, ವಿದ್ಯೆ, ವೃತ್ತಿ, ವಂಶ, ಜಾತಿ, ಧರ್ಮ, ಲಿಂಗ, ಹಣಇವುಗಳ ಕನಿಷ್ಠ ಅಥವಾ ಗರಿಷ್ಠ ಇತಿಮಿತಿ ಎಂಬುದೇ ಇಲ್ಲ. ಈ ಅಂಶಗಳ ಇರುವಿಕೆ ಅಥವಾ ಕೊರತೆ ಅವರನ್ನು ನಾಯಕರಾಗದಂತೆ ತಡೆಯುವುದಿಲ್ಲ ಆದರೆ ಕೆಲವೊಮ್ಮೆ ಮತ್ತು ಕೆಲವೊಂದು ಕ್ಷೇತ್ರ/ಸನ್ನಿವೇಶದಲ್ಲಿ, ಈ ಅಂಶಗಳು ಅವರಿಗೆ ಅನುಕೂಲಕರ ಎಂದು ಕಂಡು ಬಂದರೂ, ಕೇವಲ ಇವುಗಳ ಆಧಾರದ ಮೇಲೆ ಯಾರೂ ನಾಯಕರಾಗಲು ಸಾಧ್ಯವಿಲ್ಲ, ಒಂದು ವೇಳೆ ಆಗಿದ್ದರೆ, ಅವರು ಇಡೀ ಸಮಾಜಕ್ಕೆ ಪ್ರಯೋಜನವಾಗುವಂತಹ ನಾಯಕರಂತೂ ಆಗುವುದಿಲ್ಲ, ಕೇವಲ ಒಂದು ವರ್ಗಕ್ಕೆ ಪ್ರಯೋಜನಕಾರಿಯಾಗಬಹುದು.

ಒಂದು ಕ್ಷೇತ್ರದಲ್ಲಿ ನಾಯಕರೆಂದೆನಿಸಿಕೊಂಡವರು ಇನ್ನೊಂದು ಕ್ಷೇತ್ರದಲ್ಲೂ ನಾಯಕರಾಗಿರುತ್ತಾರೆ ಎನ್ನುವ ಖಾತರಿ ಏನೂ ಇಲ್ಲ. ನಮ್ಮ ದೇಶದ ಎಲ್ಲಾ ಕ್ಷೇತ್ರಗಳಲ್ಲಿ, ನಾಯಕರ ವಿಪರೀತ ಕೊರತೆ ಇದೆ ಮತ್ತು ಎಲ್ಲರಿಗೂ ನಾಯಕರಾಗುವ ಅರ್ಹತೆ/ಸಾಧ್ಯತೆ ಇದೆ, ಆದರೂ ಇಚ್ಛಾಶಕ್ತಿಯ ಕೊರತೆಯಿಂದ ಎಲ್ಲರೂ ನಾಯಕರಾಗುವುದಿಲ್ಲ.

ನಾಯಕತ್ವವನ್ನು ಸಂದರ್ಭ (ಸಿಚ್ಯುಏಷನಲ್), ವ್ಯವಹಾರ (ಟ್ರಾನ್ಸಾಕ್ಷನಲ್) ಮತ್ತು ಪರಿವರ್ತನೆ (ಟ್ರಾನ್ಸ್ಫ಼ಾರ್ಮೇಟಿವ್) ಮುಂತಾದ ಮೂರು ವಿಧದಲ್ಲಿ ವಿಂಗಡಿಸಿ ವಿವರಿಸಬಹುದು.

·         ಸಂದರ್ಭ ಎದುರಾದಾಗ, ಅವಕಾಶ ಸಿಕ್ಕಾಗ, ನಾಯಕತ್ವ ತೋರಿಸಬಲ್ಲ ವ್ಯಕ್ತಿ ಸಾಂದರ್ಭಿಕ ನಾಯಕ.

·         ಯಾವುದೇ ವ್ಯವಹಾರಗಳನ್ನು ಸಮರ್ಪಕವಾಗಿ ನಿರ್ವಹಿಸಬಲ್ಲವರು ವ್ಯವಹಾರಿಕ ನಾಯಕರು. ಉದಾ: ಕಂಪನಿಯ ವ್ಯವಸ್ಥಾಪಕರು, ಮಾರುಕಟ್ಟೆ ಗಟ್ಟಿಗರು, ಇತ್ಯಾದಿ. ಇದರಲ್ಲಿ ಮೇಲ್ವಿಚಾರಣೆ, ಸಂಸ್ಥೆ, ಪ್ರದರ್ಶನ, ಲಾಭ-ನಷ್ಟ, ಇನಾಮು-ದಂಡನೆ, ಸೋಲು—ಗೆಲುವು ಮುಂತಾದ ಶಬ್ದಗಳ ಪ್ರಯೋಗ ಹೆಚ್ಚಿರುತ್ತದೆ.

·         ವ್ಯವಸ್ಥೆಯಲ್ಲಿ ಪರಿವರ್ತನೆ ತರಬಲ್ಲ, ಸಮಾಜವನ್ನು ಬದಲಾಯಿಸಬಲ್ಲವರು ಪರಿವರ್ತನಾ ನಾಯಕರು.

ಕೆಲವು ಕಲೆಗಳು ಒಂದು ತರಹದ ನಾಯಕತ್ವಕ್ಕೆ ಅತ್ಯಂತ ಪ್ರಯೋಜನಕಾರಿ ಎನಿಸಿದರೆ, ಇನ್ನು ಕೆಲವು ನಿಶ್ಪ್ರಯೋಜಕ ಎನಿಸಬಹುದು. ಆದರೆ ಸಮಾಜಕ್ಕೆ ಮೂರೂ ತರಹದ ನಾಯಕರ ಅವಶ್ಯಕತೆ ಇದೆ. ಓರ್ವ ವ್ಯಕ್ತಿ ಒಂದು, ಎರಡು ಅಥವಾ ಮೂರೂ ರೀತಿಯ ನಾಯಕ ಆಗಲೂ ಬಹುದು.

ನಾಯಕತ್ವ ಮಾನವ ನಡತೆಯ ಒಂದು ಲಕ್ಷಣವಾಗಿರುವುದರಿಂದ ಅವರ ಲಾಲನೆ-ಪಾಲನೆ, ಸಂಸ್ಕೃತಿ, ಹುಟ್ಟಿ ಬೆಳೆದ ವಾತಾವರಣ ಎಲ್ಲವೂ ಅವರ ನಡತೆಯ ಮೇಲೆ ತಮ್ಮ ಛಾಪು ಮೂಡಿಸಿರುತ್ತದೆ. ಇದರಿಂದಾಗಿ ಕೆಲವು ಕಲೆಗಳು ಅವರಿಗೆ ಸಹಜವಾಗಿಯೇ ಬಂದಿರಬಹುದು ಅಥವಾ ಕಲಿಯಲು ಸುಲಭವಾಗಬಹುದು. ಇಂತಹವರನ್ನು ಕೆಲವೊಮ್ಮೆ ಹುಟ್ಟು ನಾಯಕರು (ಬಾರ್ನ್ ಲೀಡರ್ಸ್) ಎನ್ನಬಹುದು.

ಹಾಗಾದರೆ ಜನಸಾಮಾನ್ಯರಿಗೆ ನಾಯಕರಾಗಲು ಯಾವ ಕಲೆ ಇರಬೇಕು ಅಥವಾ ಕಲಿಯಬೇಕು ನೋಡೋಣ.

ಅಂತರ್ಜಾಲ (ಇಂಟರ್ನೆಟ್) ಜಾಲಿಸಿ ನೋಡಿದರೆ ನಿಮಗೆ ನಾಯಕತ್ವಕ್ಕೆ ಬೇಕಾದ 5 ಕಲೆ, 10, ಕಲೆ, 50 ಕಲೆ, 100 ಕಲೆಗಳ ಪಟ್ಟಿಯ ಜೊತೆಗೆ ಬೇಕಾದಷ್ಟು, ಬೇಡವಾದಷ್ಟು ಮಾಹಿತಿ ಸಿಗಬಹುದು. ನನಗೆ “ಮುಖ್ಯ”ಎಂದೆನಿಸಿದ ಕೆಲವೊಂದು ಕಲೆಗಳನ್ನು ಮಾತ್ರ ತಿಳಿಸುತ್ತೇನೆ.

ಮೊಟ್ಟಮೊದಲಿಗೆ ಬೇಕಾಗಿರುವುದು ಮುನ್ನಡೆ (ಇನಿಷಿಯೇಟಿವ್), ಮೊದಲ ಹೆಜ್ಜೆಯ ಇಚ್ಛಾಶಕ್ತಿ ಒಳಗಿನಿಂದ ಬರಬೇಕು. ಅದಕ್ಕೆ ವಿಯೋಜಕ ಶಕ್ತಿ (ಟ್ರಿಗರ್) ಯಾವುದೋ ಘಟನೆ, ಸನ್ನಿವೇಶ, ಆಸಕ್ತಿ, ಮುಂತಾದವು ಇರಬಹುದು ಆದರೆ ಆ ಕಿಡಿ ಒಳಗಿನಿಂದ ಹೊತ್ತಿ ಉರಿಯಬೇಕು. ಇದನ್ನು ಸ್ವ-ಪ್ರೇರೇಪಣೆ ಎನ್ನಲೂ ಬಹುದು.

ಪ್ರಾಮಾಣಿಕತೆ, ವಿಶ್ವಾಸಾರ್ಹತೆ ಮತ್ತು ನಿಷ್ಠೆ: ಪ್ರಾಮಾಣಿಕತೆಗೆ ಪರ್ಯಾಯವಿಲ್ಲ. ನಮ್ಮ ನಾಯಕರು ಪ್ರಾಮಾಣಿಕರಲ್ಲದಿದ್ದರೆ ಅಂತಹವರ ಹಿಂದೆ ಹೋಗುವುದರಲ್ಲಿ ಅರ್ಥವಿಲ್ಲ. ಅದೇ ರೀತಿ ಕೆಲಸದ ಬಗ್ಗೆ ನಿಷ್ಠೆಯೂ ಇರಬೇಕು. ಇದರಿಂದ ಅವರಲ್ಲಿ ಮಿಕ್ಕವರಿಗೆ ವಿಶ್ವಾಸ ಮೂಡುತ್ತದೆ.

ಇತರರನ್ನು ಪ್ರೇರೇಪಿಸುವ ಕಲೆ: ನಮ್ಮ ನಾಯಕರಿಗೆ ದೂರದೃಷ್ಟಿ (ವಿಷನ್) ಇರಬೇಕು, ಅದರತ್ತ ಅವರು ತಮ್ಮನ್ನು ಮತ್ತು ಹಿಂಬಾಲಕರನ್ನು ಪ್ರೇರೇಪಿಸಿ, ಬೊಮ್ಮನಹಳ್ಳಿಯ ಕಿಂದರ ಜೋಗಿಯಂತೆ, ಮುಂದಕ್ಕೆ ಕರೆದುಕೊಂಡು ಹೋಗುವ ಕೆಲಸ ಸದಾ ಮಾಡುತ್ತಿರಬೇಕು.

ಬದ್ಧತೆ ಮತ್ತು ಉತ್ಸಾಹ: ತಮ್ಮ ಕೆಲಸದ ಪ್ರತಿ ನಾಯಕರಿಗೆ ಬದ್ಧತೆ ಇರಬೇಕು. ಕೆಲಸ ಮಾಡದಿರಲು ನೂರೆಂಟು ಕಾರಣಗಳು ಸಿಗಬಹುದು ಆದರೆ ಇದು ನಮ್ಮ ಕೆಲಸ ಎಂಬ ಬದ್ಧತೆ ಇದ್ದರೆ ಅದನ್ನು ಮಾಡಿಯೇ ತೀರಬೇಕು. ಯಾರೂ ಆಂಶಿಕ (ಪಾರ್ಟ್-ಟೈಂ) ನಾಯಕರಾಗಲು ಸಾಧ್ಯವಿಲ್ಲ, ಆಂಶಿಕ ಹಿಂಬಾಲಕ ಬೇಕಾದರೆ ಆಗಬಹುದು. ಅದೇ ರೀತಿ ಅವರಲ್ಲಿ ಉತ್ಸಾಹ ತುಂಬಿ ತುಳುಕುತ್ತಿರಬೇಕು, ಅದರಿಂದ ಮಿಕ್ಕವರಿಗೂ ಸ್ಪೂರ್ತಿ ಬರುತ್ತದೆ.

ಸಂವಹನೆಯ ಕಲೆ: ಯಾರಿಗೆ, ಏನು, ಯಾವಾಗ ಹೇಳಬೇಕು ಅಥವಾ ವ್ಯಕ್ತ ಪಡಿಸಬೇಕು ಅದನ್ನು ಸಮರ್ಪಕವಾಗಿ ತಿಳಿಸುವ ಕಲೆ ಅವರಲ್ಲಿರಬೇಕು. ಸಂವಹನೆ ಕಲೆಯ ಬಗ್ಗೆ ಈಗಾಗಲೇ ತಿಳಿಸಿದ್ದೇನೆ.

ನಿರ್ಧಾರ ತೆಗೆದುಕೊಳ್ಳುವ ಕಲೆ: ಸರಿಯಾದ ಸಮಯಕ್ಕೆ, ಸರಿಯಾದ ನಿರ್ಧಾರ ತೆಗೆದುಕೊಳ್ಳುವ ಜಾಣತನ, ಧೈರ್ಯ ನಾಯಕರಲ್ಲಿರಬೇಕು. ತೆಗೆದುಕೊಂಡ ನಿರ್ಧಾರದ ಪರಿಣಾಮ ಎದುರಿಸುವ ಶಕ್ತಿಯೂ ಇರಬೇಕು. ಈ ಕಲೆಯ ಬಗ್ಗೆಯೂ ಈಗಾಗಲೇ ವಿವರಿಸಿದ್ದೇನೆ.

ಉತ್ತರದಾಯಿತ್ವ: ತಾವು ತೆಗೆದುಕೊಂಡ ನಿರ್ಧಾರಕ್ಕೆ ಬದ್ಧರಾಗಿಯೂ ಉತ್ತರದಾಯಿಯೂ ಆಗಿರಬೇಕು. ಹೊಣೆಗಾರಿಕೆಯನ್ನು ಇನ್ನೊಬ್ಬರ ಹೆಗಲಿಗೆ ಹಾಕುವವರು ಒಳ್ಳೆಯ ನಾಯಕರಲ್ಲ. ಅವಶ್ಯಕತೆ ಬಿದ್ದಲ್ಲಿ ತಲೆದಂಡ ತೆರಲೂ ಸಿದ್ಧರಾಗಿರಬೇಕು.

ಅಧಿಕಾರ ಇತರರಿಗೆ ನೀಡುವ ಕಲೆ: ಇದನ್ನು ಡೆಲಿಗೇಷನ್ ಎನ್ನುತ್ತಾರೆ. ನಾಯಕರಾದ ಮಾತ್ರಕ್ಕೆ ಎಲ್ಲಾ ಕೆಲಸ ತಾವೇ ಮಾಡಬೇಕಾಗಿಲ್ಲ, ಯಾವ ಕೆಲಸಕ್ಕೆ ಯಾರು ಸರಿಯಾದವರು ಎಂದು ಗುರುತಿಸಿ, ಅವರಿಗೆ ಜವಾಬ್ದಾರಿ ವಹಿಸಿ, ಅವರಿಂದ ಕೆಲಸ ತೆಗೆಸುವುದು ನಾಯಕರ ಕಲೆ.

ಸೃಜನಶೀಲತೆ ಮತ್ತು ಹೊಸತನ ಹುಡುಕುವ ಕಲೆ: ಮನುಷ್ಯರು ಯಂತ್ರಗಳಲ್ಲ, ಅವರಿಗೆ ಅದೇ ಕೆಲಸ, ಅದೇ ರೀತಿ ಮಾಡಲು ಬೇಸರ ಬರುತ್ತದೆ. ನಾಯಕರಾದವರು ಕೆಲಸ ಹಂಚುವಲ್ಲಿ, ಕೆಲಸದ ಪ್ರಕ್ರಿಯೆಯಲ್ಲಿ ಏನಾದರೂ ನವೀನತೆ ತರುತ್ತಲೇ ಇರಬೇಕು. ಇದರಿಂದ ತಂಡದಲ್ಲಿ ಉತ್ಸಾಹ ಹೆಚ್ಚುತ್ತದೆ.

ಸಕಾರಾತ್ಮಕ ಚಿಂತನೆ: ಸಕಾರಾತ್ಮ ಚಿಂತನೆ ಉಳ್ಳವರು ಒಳ್ಳೆಯ ನಾಯಕರಾಗುತ್ತಾರೆ. ತಂಡದ ಮಿಕ್ಕ ಸದಸ್ಯರು ಅಥವಾ ಸನ್ನಿವೇಶ ನಿರಾಶಾದಾಯಕವಾಗಿದ್ದರೂ, ಅವರನ್ನು ಪ್ರೇರೇಪಿಸಿ, ಹುರಿದುಂಬಿಸಿ ಮುನ್ನಡೆಯುವವನೇ ನಾಯಕ.

ತನ್ನನ್ನು ತಾನು ತಿದ್ದಿಕೊಳ್ಳುವ ಕಲೆ: ನಾಯಕರಾದವರು ತಮ್ಮ ಹಿಂಬಾಲಕರಿಂದ ಪ್ರತ್ಯಾದಾನ (ಫೀಡ್-ಬ್ಯಾಕ್)  ಧನಾತ್ಮಕವಾಗಲೀ, ಋಣಾತ್ಮಕವಾಗಲೀ, ಟೀಕೆ-ಟಿಪ್ಪಣಿಗಳನ್ನು ಯಾವಾಗಲೂ ಸ್ವೀಕರಿಸಬೇಕು. ಅದರಿಂದ ತಮ್ಮನ್ನು ತಾವು ಇನ್ನಷ್ಟು ಉತ್ತಮಗೊಳಿಸುವ ಅವಕಾಶ ಸಿಗುತ್ತದೆ. ಕೇವಲ ಹೊಗಳು-ಭಟ್ಟರನ್ನು ಕಲೆಹಾಕಿಕೊಳ್ಳಬಾರದು.

ಇಷ್ಟು ಕಲೆಗಳನ್ನು ನೀವು ಕಲಿತು ಅನುಷ್ಠಾನ ಮಾಡಿಕೊಂಡರೆ ಸಾಕು, ನಾಳೆಯಿಂದ ನೀವೂ ನಾಯಕರಾಗಬಹುದು. ಆಗುತ್ತೀರಲ್ಲವೇ?

 

 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

SIR ಕರ್ತವ್ಯದ ವೇಳೆ ಶಿಕ್ಷಕಿಗೆ ಹಾರ್ಟ್ ಅಟ್ಯಾಕ್: ಚಿಕಿತ್ಸೆ ಫಲಿಸದೇ ಸಾವು

ಕೇಂದ್ರ ಚುನಾವಣಾ ಆಯೋಗವು ರಾಜ್ಯದಲ್ಲಿ ನಡೆಸುತ್ತಿರುವ ಮತದಾರರ ಪಟ್ಟಿಯ 'ವಿಶೇಷ ಸಮಗ್ರ ಪರಿಷ್ಕರಣೆ' (SIR) ಕೆಲಸದ ಹೆಸರಿನಲ್ಲಿ ಶಿಕ್ಷಕರ ಮೇಲೆ ಹೇರುತ್ತಿರುವ ಅತಿಯಾದ ಮಾನಸಿಕ ಹಾಗೂ ದೈಹಿಕ ಒತ್ತಡಕ್ಕೆ ಮತ್ತೊಬ್ಬ ಶಿಕ್ಷಕಿ ಬಲಿಯಾಗಿದ್ದಾರೆ. ಬೆಂಗಳೂರಿನ...

ಎದೆ ಸೀಳಿದರೆ ಮೂರು ಅಕ್ಷರ ಬರಲ್ಲ, ಮುಲ್ಲಾನಿಗೂ ನೀಟ್‌ಗೂ ಏನು ಸಂಬಂಧ: ಸಿ.ಟಿ ರವಿ ವಿವಾದಾತ್ಮಕ ಹೇಳಿಕೆ

ದೇಶಾದ್ಯಂತ ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಹಾಗೂ ಪರೀಕ್ಷಾ ಅಕ್ರಮಗಳ ವಿರುದ್ಧ ವಿದ್ಯಾರ್ಥಿ ಮತ್ತು ಯುವಜನ ಸಂಘಟನೆಗಳು ಬೃಹತ್ ಪ್ರತಿಭಟನೆ ನಡೆಸುತ್ತಿವೆ. ಈ ನಡುವೆ ವಿದ್ಯಾರ್ಥಿಗಳ ಹೋರಾಟವನ್ನು ಕುಹಕವಾಡಿರುವ ವಿಧಾನ ಪರಿಷತ್ ಬಿಜೆಪಿ...

ಪ್ರತಿಭಟನೆಯನ್ನು ಹತ್ತಿಕ್ಕಲು ಅಕ್ಕಾಡಕ್ಕಿಳಿದಿವೆ ಹಿಂದುತ್ವವಾದಿ ಸೋಷಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ಸ್‌ ಮತ್ತು ಉಗ್ರ ಗೂಂಡಾ ಪಡೆ

ದೆಹಲಿಯ ಜಂತರ್ ಮಂತರ್‌ನಲ್ಲಿ ಜೂನ್ 20ರಂದು ಶುರುವಾಗಿದ್ದ ಈ ಆಂದೋಲನ ಇದೀಗ ದೇಶಾದ್ಯಂತ ತೀವ್ರ ಸ್ವರೂಪ ಪಡೆದುಕೊಂಡಿದೆ. ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಸಿಜೆಪಿ ಪಟ್ಟು ಹಿಡಿದಿದ್ದು, ಇಂದು...

ಜಿರಳೆಗಳನ್ನು ಸಾಯಿಸಿ ಎಂದು ವಿವಾದಾತ್ಮಕ ಪೋಸ್ಟ್‌ ಹಾಕಿದ ಪ್ರಜ್ಞಾ ಸಿಂಗ್ ಠಾಕೂರ್

ಮಾಜಿ ಬಿಜೆಪಿ ಸಂಸದೆ ಪ್ರಜ್ಞಾ ಸಿಂಗ್ ಠಾಕೂರ್ ಅವರು ದೇಶದಿಂದ ಜಿರಳೆಗಳನ್ನು ಶಾಶ್ವತವಾಗಿ ನಿರ್ಮೂಲನೆ ಮಾಡಲು ವ್ಯವಸ್ಥೆ ಮಾಡುವಂತೆ ದೇಶದ ನಾಯಕರಿಗೆ ಮನವಿ ಮಾಡಿದ್ದಾರೆ. X (ಟ್ವಿಟರ್) ನಲ್ಲಿ ಮಾಡಿದ ಪೋಸ್ಟ್‌ನಲ್ಲಿ, 2008 ರ...

ಸೋನಮ್ ವಾಂಗ್ಚುಕ್ ಮತ್ತು ಸರ್ಕಾರದ ಡೀಲ್‌ನಲ್ಲಿ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಅಂಶವೇ ಇಲ್ಲ

ಕೇಂದ್ರದ ಮೋದಿ ಸರ್ಕಾರ ತನ್ನ ಮೂರು ಪ್ರಮುಖ ಬೇಡಿಕೆಗಳನ್ನು ಈಡೇರಿಸಲು ಒಪ್ಪಿಕೊಂಡ ನಂತರ, ಪರಿಸರ ಹೋರಾಟಗಾರ ಸೋನಮ್ ವಾಂಗ್ಚುಕ್ ಜುಲೈ 23ರ ಗುರುವಾರ ತಮ್ಮ 26 ದಿನಗಳ ಸುದೀರ್ಘ ಉಪವಾಸ ಸತ್ಯಾಗ್ರಹವನ್ನು ಕೊನೆಗೊಳಿಸಿದ್ದಾರೆ....

“50 ಗ್ರಾಂ ಡ್ರಗ್ಸ್ ಇಟ್ಟು ಕೇಸ್ ಹಾಕ್ತೀನಿ!”: ಪ್ರತಿಭಟನಾ ನಿರತ ವಿದ್ಯಾರ್ಥಿಗಳಿಗೆ ಮಾದಕದ್ರವ್ಯ ಪ್ರಕರಣದ ಬೆದರಿಕೆಯೊಡ್ಡಿದ ಮುಂಬೈ ಪೊಲೀಸ್!

ಮುಂಬೈ: ದೇಶಾದ್ಯಂತ ವಿದ್ಯಾರ್ಥಿ ಸಮುದಾಯದ ಆಕ್ರೋಶ ತೀವ್ರಗೊಳ್ಳುತ್ತಿರುವ ಬೆನ್ನಲ್ಲೇ, ತಮ್ಮ ಹಕ್ಕುಗಳಿಗಾಗಿ ಧ್ವನಿ ಎತ್ತುತ್ತಿರುವ ಯುವಜನರನ್ನು ಹತೋಟಿಗೆ ತರಲು ಪೊಲೀಸರು ಯಾವ ಮಟ್ಟದ ದಮನಕಾರಿ ಮಾರ್ಗಗಳನ್ನು ತುಳಿಯುತ್ತಿದ್ದಾರೆ ಎಂಬುದಕ್ಕೆ ಮುಂಬೈನಲ್ಲಿ ನಡೆದ ಘಟನೆಯೊಂದು...

ಬಿಡದಿ ಟೌನ್‌ಶಿಪ್: 80% ರೈತರ ಒಪ್ಪಿಗೆ ಇದೆ ಎಂಬ ವಾದ ಸಾಬೀತುಪಡಿಸಿ – ಸರ್ಕಾರಕ್ಕೆ ಸಂಯುಕ್ತ ಹೋರಾಟ ಸವಾಲು

ಬಿಡದಿ ಟೌನ್‌ಶಿಪ್ ಯೋಜನೆಗೆ ಭೂಮಿ ನೀಡಲು ಉದ್ದೇಶಿತ ಪ್ರದೇಶದ ಶೇಕಡಾ 80 ರಷ್ಟು ರೈತರು ಒಪ್ಪಿದ್ದಾರೆ ಎಂಬ ಸರ್ಕಾರದ ವಾದಕ್ಕೆ ಯಾವುದೇ ವಾಸ್ತವಿಕ ಆಧಾರವಿಲ್ಲ. ಸರ್ಕಾರಕ್ಕೆ ಧೈರ್ಯವಿದ್ದರೆ ತನ್ನ ಈ ಹೇಳಿಕೆಯನ್ನು ಜನರ...

ವಿದ್ಯಾರ್ಥಿಗಳ ಮೇಲಿನ ಪೊಲೀಸ್ ದೌರ್ಜನ್ಯ: ವಿಚಾರಣೆ ತಿರಸ್ಕರಿಸಿದ ಸುಪ್ರೀಂ; “ವಿಡಿಯೋ ನೋಡಲು ನಮಗೆ ಆಸಕ್ತಿಯೂ ಇಲ್ಲ, ಸಮಯವೂ ಇಲ್ಲ” ಎಂದ ನ್ಯಾಯಮೂರ್ತಿ ಸೂರ್ಯಕಾಂತ್

ನವದೆಹಲಿ: ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ಪರೀಕ್ಷಾ ಅಕ್ರಮಗಳನ್ನು ಖಂಡಿಸಿ ಶಾಂತಿಯುತವಾಗಿ ಹೋರಾಡುತ್ತಿದ್ದ ಯುವ ಸಮೂಹದ ಮೇಲೆ ದೆಹಲಿ ಪೊಲೀಸರು ನಡೆಸಿದ ಭೀಕರ ದೌರ್ಜನ್ಯದ ವಿರುದ್ಧ ನ್ಯಾಯದ ನಿರೀಕ್ಷೆಯಲ್ಲಿದ್ದ ವಿದ್ಯಾರ್ಥಿಗಳಿಗೆ ದೇಶದ ಅತ್ಯುನ್ನತ ನ್ಯಾಯಾಲಯದಿಂದ...

ರಾಹುಲ್ ಗಾಂಧಿ ವಿದ್ಯಾರ್ಥಿಗಳನ್ನು ‘ರಾಜಕೀಯ ದಾಳ’ವಾಗಿ ಬಳಸುತ್ತಿದ್ದಾರೆ ಎಂದ ಧರ್ಮೇಂದ್ರ ಪ್ರಧಾನ್ ವಿರುದ್ಧ ವ್ಯಾಪಕ ಆಕ್ರೋಶ

ನವದೆಹಲಿ: ದೇಶಾದ್ಯಂತ ನೀಟ್ (NEET) ಪರೀಕ್ಷೆಯ ಅಕ್ರಮಗಳು, ಪ್ರಶ್ನೆಪತ್ರಿಕೆ ಸೋರಿಕೆ ಹಾಗೂ ಶಿಕ್ಷಣ ಇಲಾಖೆಯ ಸರಣಿ ವೈಫಲ್ಯಗಳನ್ನು ಖಂಡಿಸಿ ವಿದ್ಯಾರ್ಥಿಗಳು ಮತ್ತು ವಿರೋಧ ಪಕ್ಷಗಳು ತೀವ್ರ ಪ್ರತಿಭಟನೆ ನಡೆಸುತ್ತಿದ್ದು, ಶಿಕ್ಷಣ ಸಚಿವ ಧರ್ಮೇಂದ್ರ...

ಸಿಜೆಪಿ ಪ್ರತಿಭಟನಾಕಾರರ ಮೇಲೆ ಪೆಲೆಟ್ ಗನ್ ಬಳಕೆ, ವಿದ್ಯುತ್ ಲಾಠಿ ಪ್ರಹಾರ: ಆರೋಪ ನಿರಾಕರಿಸಿದ ಪೊಲೀಸರು

ಸೋಮವಾರ (ಜುಲೈ 20) ಕಾಕ್ರೋಚ್ ಜನತಾ ಪಕ್ಷ (ಸಿಜೆಪಿ) ಕರೆ ನೀಡಿದ್ದ ಸಂಸತ್ ಚಲೋ ಮೆರವಣಿ ಸಂದರ್ಭದಲ್ಲಿ ನಡೆದ ಪೊಲೀಸರ ದೌರ್ಜನ್ಯದಲ್ಲಿ ಗಾಯಗೊಂಡ 80 ಪ್ರತಿಭಟನಾಕಾರರಲ್ಲಿ ಕನಿಷ್ಠ ಒಬ್ಬರಿಗೆ ಪೆಲೆಟ್ ಗನ್ ಗಾಯಗಳಾಗಿವೆ...