ಅಫ್ಘಾನಿಸ್ತಾನ: ಮಸೀದಿಯಲ್ಲಿ ಸ್ಫೋಟ 32 ಸಾವು, 53 ಮಂದಿಗೆ ಗಾಯ
PC: PTI

ದಕ್ಷಿಣ ಅಫ್ಘಾನಿಸ್ತಾನದ ಕಂದಹಾರ್‌ನಲ್ಲಿರುವ ಶಿಯಾ ಮಸೀದಿಯೊಂದರಲ್ಲಿ ಶುಕ್ರವಾರದ ಪ್ರಾರ್ಥನೆಯ ಸಮಯದಲ್ಲಿ ಸ್ಫೋಟ ಸಂಭವಿಸಿದೆ. ದುರಂತದಲ್ಲಿ 32 ಜನರು ಸಾವನ್ನಪ್ಪಿದ್ದು, 53 ಮಂದಿ ಗಾಯಗೊಂಡಿದ್ದಾರೆ.

“ಮೂವತ್ತೆರಡು ಮೃತ ದೇಹಗಳು ಪತ್ತೆಯಾಗಿವೆ. ಸುಮಾರು 53 ಗಾಯಾಳುಗಳನ್ನು ಇಲ್ಲಿಯವರೆಗೆ ನಮ್ಮ ಆಸ್ಪತ್ರೆಗೆ ತರಲಾಗಿದೆ” ಎಂದು ಕಂದಹಾರ್‌ ನಗರದ ಕೇಂದ್ರ ಮಿರ್ವಾಯಿಸ್ ಆಸ್ಪತ್ರೆಯ ವೈದ್ಯರು ಮಾಹಿತಿ ನೀಡಿದ್ದಾರೆ.

ಇತರೆ ವೈದ್ಯಕೀಯ ಮೂಲಗಳು ಮತ್ತು ಪ್ರಾಂತೀಯ ಅಧಿಕಾರಿಯೊಬ್ಬರು 30 ಕ್ಕಿಂತ ಹೆಚ್ಚಿನ ಜನರು ಮೃತಪಟ್ಟಿರುವ ಬಗ್ಗೆ ದೃಢಪಡಿಸಿದ್ದಾರೆ. ಘಟನಾ ಸ್ಥಳದಲ್ಲಿ ಕನಿಷ್ಠ 15 ಆಂಬ್ಯುಲೆನ್ಸ್‌ಗಳು ಇದ್ದು, ಮಸೀದಿಯ ಫೇಸ್‌ಬುಕ್ ಖಾತೆಯು ರಕ್ತದಾನ ಮಾಡುವಂತೆ ಮನವಿ ಮಾಡಿದೆ.

ಇದನ್ನೂ ಓದಿ: ‘ದೊಡ್ಡ ತಪ್ಪಾಗಿದೆ’ – ಅಫ್ಘಾನ್‌ನ 7 ಮಕ್ಕಳು ಸೇರಿದಂತೆ 10 ನಾಗರಿಕರನ್ನು ಕೊಂದ ಬಗ್ಗೆ ತಪ್ಪೊಪ್ಪಿಕೊಂಡ ಅಮೆರಿಕಾ

ಇಡೀ ವಾರದಲ್ಲೇ ಅತಿ ಹೆಚ್ಚು ಜನ ಸೇರುವ ಶುಕ್ರವಾರ ಈ ದಾಳಿ ನಡೆಸಲಾಗಿದ್ದು, ಮೂರು ಸ್ಥಳಗಳಲ್ಲಿ ಸ್ಫೋಟ ಸಂಭವಿಸಿವೆ ಎಂದು ಪ್ರತ್ಯಕ್ಷದರ್ಶಿಯೊಬ್ಬರು ಹೇಳಿದ್ದಾರೆ. ಒಂದು ಮಸೀದಿಯ ಮುಖ್ಯ ಬಾಗಿಲಲ್ಲಿ, ಇನ್ನೊಂದು ದಕ್ಷಿಣದ ಪ್ರದೇಶದಲ್ಲಿ, ಮತ್ತು ಜನರು ಪ್ರಾರ್ಥನೆ ಮಾಡುವ ಮೊದಲು ಮುಖ ತೊಳೆಯುವ ಜಾಗಗಳಲ್ಲಿ ಸ್ಫೋಟ ಸಂಭವಿಸಿವೆ.

ಸ್ಫೋಟಕ್ಕೆ ಕಾರಣ ಸ್ಪಷ್ಟವಾಗಿಲ್ಲ, ಆದರೆ ಕಳೆದ ವಾರ ಉತ್ತರ ನಗರದ ಕುಂಡುಜ್‌ನ ಮಸೀದಿಯಲ್ಲಿ ಶಿಯಾ ಮಸೀದಿಯಲ್ಲಿ ನಡೆದಿದ್ದ ಆತ್ಮಾಹುತಿ ದಾಳಿಯ ಹೊಣೆಯನ್ನು ಇಸ್ಲಾಮಿಕ್ ಸ್ಟೇಟ್ ಗುಂಪು ಹೊತ್ತುಕೊಂಡಿತ್ತು. ಇದನ್ನು ಕೂಡ ಅದೇ ಸಂಘಟನೆ ಮಾಡಿರುವ ಅನುಮಾನ ಉಂಟಾಗಿದೆ.

“ಕಂದಹಾರ್ ನಗರದ ಶಿಯಾ ಮಸೀದಿಯಲ್ಲಿ ಸ್ಫೋಟ ಸಂಭವಿಸಿರುವುದನ್ನು ತಿಳಿದು ನಾವು ದುಃಖಿತರಾಗಿದ್ದೇವೆ, ಸ್ಫೋಟದಲ್ಲಿ ನಮ್ಮ ಹಲವಾರು ದೇಶವಾಸಿಗಳು ಹುತಾತ್ಮರಾಗಿದ್ದಾರೆ. ಹಲವರು ಗಾಯಗೊಂಡಿದ್ದಾರೆ” ಎಂದು ತಾಲಿಬಾನ್ ಚಳುವಳಿಯ ಆಂತರಿಕ ಸಚಿವಾಲಯದ ವಕ್ತಾರ ಕರಿ ಸೈಯದ್ ಖೋಸ್ತಿ ಟ್ವೀಟ್ ಮಾಡಿದ್ದಾರೆ.


ಇದನ್ನೂ ಓದಿ: ಕಾಬೂಲ್ ಆತ್ಮಾಹುತಿ ದಾಳಿ: 13 ಅಮೆರಿಕಾ ಸೈನಿಕರು, 60 ನಾಗರಿಕರು ಸಾವು

1 COMMENT

LEAVE A REPLY

Please enter your comment!
Please enter your name here