Homeಮುಖಪುಟಅಖಿಲೇಶ್, ಮಾಯಾವತಿ ‘ಪ್ರೀತಿಸುವ ಭಾರತ’ ಬಯಸುತ್ತಾರೆ: ರಾಹುಲ್ ಗಾಂಧಿ

ಅಖಿಲೇಶ್, ಮಾಯಾವತಿ ‘ಪ್ರೀತಿಸುವ ಭಾರತ’ ಬಯಸುತ್ತಾರೆ: ರಾಹುಲ್ ಗಾಂಧಿ

- Advertisement -
- Advertisement -

“ಸಮಾಜವಾದಿ ಪಕ್ಷದ ಅಧ್ಯಕ್ಷರಾದ ಅಖಿಲೇಶ್ ಯಾದವ್ ಮತ್ತು ಬಹುಜನ ಸಮಾಜ ಪಕ್ಷದ ಮುಖ್ಯಸ್ಥರಾದ ಮಾಯಾವತಿಯವರು ‘ಪ್ರೀತಿಸುವ ಭಾರತ’ವನ್ನು ಬಯಸುತ್ತಾರೆ. ಕಾಂಗ್ರೆಸ್ ಅವರೊಂದಿಗೆ ಸೈದ್ಧಾಂತಿಕ ಸಂಬಂಧವನ್ನು ಹೊಂದಿದ” ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.

“ದೇಶವನ್ನು ಒಂದುಗೂಡಿಸಲು ಬಯಸುವ ಎಲ್ಲರಿಗೂ ಭಾರತ್ ಜೋಡೋ ಯಾತ್ರೆಯ ಬಾಗಿಲುಗಳು ತೆರೆದಿರುತ್ತವೆ” ಎಂದು ಶನಿವಾರ ಹೇಳಿಕೆ ನೀಡಿರುವ ಅವರು, “ಕಾಂಗ್ರೆಸ್‌ ಕೈಗೊಂಡಿರುವ ಈ ಯಾತ್ರೆಗೆ ಎಲ್ಲಾ ವಿರೋಧ ಪಕ್ಷಗಳ ನಾಯಕರು ಬೆಂಬಲ ನೀಡುವುದು ಖಚಿತ” ಎಂದು ತಿಳಿಸಿದ್ದಾರೆ.

“ಆದರೆ ಇಂದಿನ ಭಾರತದಲ್ಲಿ ರಾಜಕೀಯ ಅಥವಾ ಇನ್ನಾವುದೇ ವಿಚಾರದಲ್ಲೂ ಒತ್ತಡಗಳು ಇವೆ. ಹಾಗಾಗಿ ಯಾರು [ಭಾರತ್ ಜೋಡೋ ಯಾತ್ರೆಗೆ] ಬರುತ್ತಿದ್ದಾರೆ ಮತ್ತು ಯಾರು ಬರುತ್ತಿಲ್ಲ ಎಂಬುದರ ಕುರಿತು ನಾನು ಪ್ರತಿಕ್ರಿಯಿಸಲು ಬಯಸುವುದಿಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ.

“ಭಾರತ್ ಜೋಡೋ ಯಾತ್ರೆಗೆ ಸೇರಲು ನನಗೆ ಯಾವುದೇ ಆಹ್ವಾನ ಬಂದಿಲ್ಲ” ಎಂದು ಅಖಿಲೇಶ್‌ ಯಾದವ್ ಹೇಳಿಕೆ ನೀಡಿದ ಎರಡು ದಿನಗಳ ನಂತರ ರಾಹುಲ್‌ ಪ್ರತಿಕ್ರಿಯಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ ಯಾದವ್, “ನಮ್ಮ ಪಕ್ಷದ ತತ್ವಗಳು ವಿಭಿನ್ನವಾಗಿವೆ. ಭಾರತೀಯ ಜನತಾ ಪಕ್ಷ ಮತ್ತು ಕಾಂಗ್ರೆಸ್ ಒಂದೇ” ಎಂದು ಆರೋಪಿಸಿದ್ದರು.

ಸೆಪ್ಟೆಂಬರ್ 7 ರಂದು ತಮಿಳುನಾಡಿನ ಕನ್ಯಾಯಾಕುಮಾರಿಯಿಂದ ಆರಂಭವಾಗಿರುವ ಭಾರತ್ ಜೋಡೋ ಯಾತ್ರೆಯು, ಬಿಜೆಪಿ ಪ್ರತಿಪಾದಿಸುವ ದ್ವೇಷದ ರಾಜಕೀಯವನ್ನು ಎದುರಿಸುವ ಗುರಿಯನ್ನು ಹೊಂದಿದೆ ಎಂದು ಕಾಂಗ್ರೆಸ್ ಹೇಳಿದೆ. ಸದ್ಯಕ್ಕೆ ದೆಹಲಿಯಲ್ಲಿ ಯಾತ್ರೆಯು ವಿರಾಮ ಪಡೆದಿದೆ. ಜನವರಿ 3 ರಂದು ಪುನರಾರಂಭವಾಗಲಿದೆ.

ಡಿಎಂಕೆ ಪಕ್ಷದ ನಾಯಕ, ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್, ಶಿವಸೇನೆಯ ಆದಿತ್ಯ ಠಾಕ್ರೆ (ಉದ್ಧವ್ ಬಾಳಾಸಾಹೇಬ್ ಠಾಕ್ರೆ) ಮತ್ತು ಮಕ್ಕಳ್ ನೀಧಿ ಮೈಯಂ ಪಕ್ಷದ ಕಮಲ್ ಹಾಸನ್ ಸೇರಿದಂತೆ ಹಲವಾರು ವಿರೋಧ ಪಕ್ಷದ ನಾಯಕರು ಭಾರತ್ ಜೋಡೋ ಯಾತ್ರೆಯಲ್ಲಿ ಪಾಲ್ಗೊಂಡು ಬೆಂಬಲಿಸಿದ್ದಾರೆ.

ಮಧ್ಯಪ್ರದೇಶ ಚುನಾವಣೆಯಲ್ಲಿ ಕಾಂಗ್ರೆಸ್‌ ಗೆಲ್ಲಲಿದೆ: ರಾಹುಲ್

ನವೆಂಬರ್‌ನಲ್ಲಿ ನಡೆಯಲಿರುವ ಮಧ್ಯಪ್ರದೇಶದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಸ್ವೀಪ್ ಮಾಡಲಿದೆ ಎಂದು ರಾಹುಲ್ ಗಾಂಧಿ ಭವಿಷ್ಯ ನುಡಿದಿದ್ದಾರೆ.

“ಮಧ್ಯಪ್ರದೇಶ ಚುನಾವಣೆಯಲ್ಲಿ ಕಾಂಗ್ರೆಸ್ ಮುನ್ನಡೆ ಸಾಧಿಸಲಿದೆ ಎಂದು ನಾನು ನಿಮಗೆ ಲಿಖಿತವಾಗಿ ಹೇಳಬಲ್ಲೆ” ಎಂದು ಕಾಂಗ್ರೆಸ್ ನಾಯಕ ರಾಹುಲ್ ತಿಳಿಸಿದ್ದಾರೆ. “ಬಿಜೆಪಿ ಎಲ್ಲಿಯೂ ಕಾಣದಾಗುತ್ತದೆ. ಅದರ ಬಗ್ಗೆ ಯಾವುದೇ ಪ್ರಶ್ನೆಯಿಲ್ಲ” ಎಂದಿದ್ದಾರೆ.

“ಅಧಿಕಾರವನ್ನು ಕದಿಯುವ ಮೂಲಕ ಮತ್ತು ಹಣದ ಮೂಲಕ ಬಿಜೆಪಿ ಸರ್ಕಾರವನ್ನು ರಚಿಸಿದೆ ಎಂದು ಮಧ್ಯಪ್ರದೇಶದ ಪ್ರತಿಯೊಬ್ಬ ನಿವಾಸಿಗೂ ತಿಳಿದಿದೆ” ಎಂದು ಹೇಳಿದ್ದಾರೆ.

2018ರ ಡಿಸೆಂಬರ್‌ನಲ್ಲಿ ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿತ್ತು. ವಿಧಾನಸಭೆ ಚುನಾವಣೆಯಲ್ಲಿ ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿತು. ಆದರೆ ಮಾರ್ಚ್ 2020ರಲ್ಲಿ ಜ್ಯೋತಿರಾದಿತ್ಯ ಸಿಂಧಿಯಾ ಅವರ ರಾಜೀನಾಮೆಯ ನಂತರ 22 ಕಾಂಗ್ರೆಸ್ ಶಾಸಕರು ಅಸೆಂಬ್ಲಿಯನ್ನು ತೆರೆದರು. ಹೀಗಾಗಿ ಕಮಲ್ ನಾಥ್ ನೇತೃತ್ವದ ಸರ್ಕಾರವು ಪತನಗೊಂಡಿತು. ನಂತರ ಸಿಂಧಿಯಾ ಬಿಜೆಪಿಗೆ ಸೇರ್ಪಡೆಯಾದರು. ಮಾರ್ಚ್ 23 ರಂದು ಬಿಜೆಪಿ ನಾಯಕ ಶಿವರಾಜ್ ಸಿಂಗ್ ಚೌಹಾಣ್ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

  1. ರಾಹುಲ್ ಗಾಂದಿ ದಿನೇದಿನೇ ಪ್ರಬುದ್ದರಾಗುತ್ತಿದ್ದಾರೆ. ಇದು ನಿಜಕ್ಕೂ ಒಂದು ಒಳ್ಳೆಯ ಬೆಳವಣಿಗೆ. ಈ ದೇಶಕ್ಕೆ ಒಳ್ಳೆಯ ನಾಯಕತ್ವವನ್ನು ಕೊಡುವಂತಹ ಗುಣಗಳು ರಾಹುಲ್‌ ಅವರಲ್ಲಿ ಗೋಚರಿಸುತ್ತಿದೆ.

LEAVE A REPLY

Please enter your comment!
Please enter your name here

- Advertisment -

Must Read

ಪಶ್ಚಿಮ ಬಂಗಾಳದ ಹೂಗ್ಲಿಯಲ್ಲಿ ಬಾಂಬ್ ಸ್ಫೋಟ: ಬಾಲಕ ಮೃತ್ಯು, ಇಬ್ಬರಿಗೆ ಗಂಭೀರ ಗಾಯ

0
ಪಶ್ಚಿಮ ಬಂಗಾಳದ ಹೂಗ್ಲಿ ಜಿಲ್ಲೆಯಲ್ಲಿ ಕಚ್ಚಾ ಬಾಂಬ್ ಸ್ಫೋಟ ಸಂಭವಿಸಿ ಏಳು ವರ್ಷದ ಬಾಲಕ ಸಾವನ್ನಪ್ಪಿದ್ದು, ಇತರ ಇಬ್ಬರು ಅಪ್ರಾಪ್ತ ಬಾಲಕರಿಗೂ ತೀವ್ರ ಗಾಯಗಳಾಗಿದೆ. ಮೃತ ಬಾಲಕನನ್ನು ರಾಜ್ ಬಿಸ್ವಾಸ್ ಎಂದು ಗುರುತಿಸಲಾಗಿದೆ. ಘಟನೆಯಲ್ಲಿ...