ಅಮೇರಿಕನ್ ಡಾಲರ್ ವಿರುದ್ಧ ಭಾರತೀಯ ರೂಪಾಯಿ ಇಂದು ಸಹ ಕುಸಿತ ಕಂಡಿದೆ. ಕಳೆದ ಎರಡು ದಶಕಗಳಲ್ಲಿ ಸಾರ್ವಕಾಲಿಕ ಕುಸಿತ ದಾಖಲಿಸಿ ರುಪಾಯಿ ಡಾಲರ್ ಮುಂದೆ 81 ರೂಗೆ ತಲುಪಿದೆ.
ಒಂದು ಕಡೆ US ಫೆಡರಲ್ ರಿಸರ್ವ್ ಬ್ಯಾಂಕ್ ಬಡ್ಡಿದರಗಳನ್ನು ಏರಿಸಿರುವುದು ಮತ್ತು ಆರ್‌ಬಿಐ ಯಾವುದೇ ಕ್ರಮಗಳನ್ನು ತೆಗೆದುಕೊಳ್ಳದಿರುವುದರಿಂದ ರೂಪಾಯಿ ಮೌಲ್ಯ ಪ್ರತಿದಿನ ಕುಸಿಯುತ್ತಿದೆ ಎನ್ನಲಾಗುತ್ತಿದೆ.
ಭಾರತೀಯ ಕರೆನ್ಸಿಯು ಪ್ರತಿ ಅಮೇರಿಕನ್ ಡಾಲರ್ ಮುಂದೆ ಮತ್ತಷ್ಟು ಕುಸಿಯುವ ಸಾಧ್ಯತೆಯಿದೆ ಎಂದು ಆರ್ಥಿಕ ವಿಶ್ಲೇಷಕರು ಊಹಿಸಿದ್ದರು. ಅದೀಗ ನಿಜವಾಗಿದೆ.
ಮುಂದಿನ ದಿನಗಳಲ್ಲಿ ಭಾರತೀಯ ಕರೆನ್ಸಿ ಮತ್ತಷ್ಟು ಕುಸಿಯಲಿದೆ ಎಂದು ಮನಿಕಂಟ್ರೋಲ್.ಕಾಂ ವರದಿ ಹೇಳಿದೆ. ಉಕ್ರೇನ್-ರಷ್ಯಾ ಯುದ್ಧ ಪ್ರಾರಂಭವಾದಾಗಿನಿಂದ, ಹೂಡಿಕೆದಾರರು ಅಮೆರಿಕದಂತಹ ಸುರಕ್ಷಿತ ಮಾರುಕಟ್ಟೆಗೆ ಹೆಚ್ಚಾಗಿ ಸ್ಥಳಾಂತರಗೊಂಡಿದ್ದಾರೆ. ಹಾಗಾಗಿ ಡಾಲರ್ ಮೌಲ್ಯ ಹೆಚ್ಚಲಿದೆ ಎಂದು ವರದಿ ಉಲ್ಲೇಖಿಸಿದೆ.
ರಷ್ಯಾ-ಉಕ್ರೇನ್ ಯುದ್ಧದಿಂದಾಗಿ, ಪ್ರಪಂಚದಾದ್ಯಂತದ ದೇಶಗಳ ಮೇಲೆ ಹಣದುಬ್ಬರವು ತೀವ್ರವಾಗಿ ಹೊಡೆತ ನೀಡಿದೆ. ಇದು ಹೆಚ್ಚಿನ ದೇಶಗಳ ಕರೆನ್ಸಿಯ ದರದ ಇಳಿಕೆಗೆ ಕಾರಣವಾಗಿದೆ. ಭಾರತವು ಹಣದುಬ್ಬರದಿಂದ ತಪ್ಪಿಸಿಕೊಳ್ಳಲು ಕ್ರಮಗಳನ್ನು ಕೈಗೊಂಡರೂ ಪರಿಣಾಮ ಬೀರಿಲ್ಲ ಎಂದು ಮನಿಕಂಟ್ರೋಲ್.ಕಾಂ ವರದಿ ಹೇಳಿದೆ.
ಇದನ್ನೂ ಓದಿ: 3 ಗಂಟೆಗಳ ಮೋದಿ ಪುಸ್ತಕ ಬಿಡುಗಡೆ ಕಾರ್ಯಕ್ರಮಕ್ಕೆ 37 ಲಕ್ಷ ರೂ.ಗಳನ್ನು ಖರ್ಚು ಮಾಡಿದ್ದ ರಾಜ್ಯದ ಬೊಮ್ಮಾಯಿ ಸರ್ಕಾರ!