ದೇಶದಲ್ಲಿ ಕೊರೊನಾ ಪ್ರಕರಣಗಳು ಏರಿಕೆಯಾಗುತ್ತಿದ್ದರೂ ಹೆಚ್ಚು ಜನರು ಕೋವಿಡ್ ಲಸಿಕೆ ಪಡೆದ ಪರಿಣಾಮ ತೀವ್ರ ಅನಾರೋಗ್ಯ ಮತ್ತು ಸಾವುಗಳು ಉಂಟಾಗುತ್ತಿಲ್ಲ ಎಂದು ಗುರುವಾರ ಪ್ರತಿಪಾದಿಸಿದ್ದಾರೆ.
ಪ್ರಸ್ತುತ ಕೋವಿಡ್ ಉಲ್ಬಣದ ಕುರಿತು ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ದೇಶಾದ್ಯಂತ ಹೆಚ್ಚಿನ ವ್ಯಾಕ್ಸಿನೇಷನ್ ನಡೆದಿರುವುದರಿಂದ ಮೂರನೇ ಅಲೆಯಲ್ಲಿ ಕೊರೊನಾದಿಂದ ಉಂಟಾಗುವ ತೀವ್ರವಾದ ಕಾಯಿಲೆಗಳು ಮತ್ತು ಸಾವುಗಳನ್ನು ತಡೆಯಲು ನಮಗೆ ಸಾಧ್ಯವಾಯಿತು ಎಂದು ಹೇಳಿದ್ದಾರೆ.
ಲಸಿಕೆ ಪ್ರಯೋಜನಕಾರಿಯಾಗಿದೆ ಮತ್ತು ಎರಡನೇ ಕೊರೊನಾ ಅಲೆಯ ಉಲ್ಬಣಕ್ಕೆ ಹೋಲಿಸಿದರೆ ಸಾವುಗಳು ಗಣನೀಯವಾಗಿ ಕಡಿಮೆಯಾಗಿದೆ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ:ದಡಾರ-ರುಬೆಲ್ಲಾ ಲಸಿಕೆ ಅತ್ಯಂತ ಸುರಕ್ಷಿತ; ಬೆಳಗಾವಿ ಮಕ್ಕಳ ಸಾವಿನ ಬಗ್ಗೆ ಸೂಕ್ತ ತನಿಖೆಯಾಗಬೇಕು: ಡಾ. ಹಿಮಾಂಶು
“ಭಾರತದಲ್ಲಿ ಲಸಿಕೆಗಳು ಪ್ರಯೋಜನಕಾರಿಯಾಗಿವೆ. ವ್ಯಾಕ್ಸಿನೇಷನ್‌ಗಳಿಂದ ಸಾವುಗಳು ಗಣನೀಯವಾಗಿ ಕಡಿಮೆಯಾಗಿದೆ. ಕೊರೊನಾದ ಈ ಮೂರನೇ ಅಲೆಯ ಉಲ್ಬಣದಲ್ಲಿ, ವ್ಯಾಕ್ಸಿನ್ ಕಾರಣದಿಂದಾಗಿ ತೀವ್ರವಾದ ಅನಾರೋಗ್ಯ ಮತ್ತು ಸಾವು ಸಂಭವಿಸುತ್ತಿಲ್ಲ” ಎಂದು ಅವರು ಹೇಳಿದ್ದಾರೆ.
ಆದಾಗ್ಯೂ, ಇತರ ಕಾಯಿಲೆ ಇರುವವರು ತಮ್ಮ ಆರೋಗ್ಯದ ಮೇಲ್ವಿಚಾರಣೆ ಮಾಡಬೇಕು ಮತ್ತು ಯಾವುದೇ ತೊಡಕುಗಳನ್ನು ತಪ್ಪಿಸಬೇಕು ಎಂದು ಅವರು ಸಲಹೆ ನೀಡಿದ್ದಾರೆ.
“ಲಸಿಕೆಯು ಸಾವನ್ನು ತಡೆಯುತ್ತದೆ ಮತ್ತು ಆದ್ದರಿಂದ ಇದು ಅತ್ಯಗತ್ಯವಾಗಿದೆ. ಕೋವಿಡ್ ಲಸಿಕೆಗಳನ್ನು ಪಡೆಯುವುದರಿಂದ ಈ ಅಲೆಯಲ್ಲಿ ಸಾವುಗಳು ತುಂಬಾ ಕಡಿಮೆಯಾಗಿದೆ. ದೇಶದ 94% ವಯಸ್ಕರಿಗೆ ಮೊದಲ ಡೋಸ್ ನೀಡಲಾಗಿದೆ ಮತ್ತು 72% ದಷ್ಟು ವಯಸ್ಕರಿಗೆ ಪೂರ್ಣ ಪ್ರಮಾಣದ ಡೋಸ್ ಆಗಿದೆ” ಎಂದು ಡಾ ಭಾರ್ಗವ ಹೇಳಿದ್ದಾರೆ.
ಇದನ್ನೂ ಓದಿ:ಬಿಜೆಪಿ ಈ ಹಿಂದೆ ರೈತರ ಬೆಂಬಲ ದುರುಪಯೋಗ ಮಾಡಿಕೊಂಡಿದೆ, ಈ ಬಾರಿ ರೈತರು ಬುದ್ದಿ ಕಲಿಸುತ್ತಾರೆ: ನರೇಶ್ ಟಿಕಾಯತ್
ಪ್ರಸ್ತುತ ಉಲ್ಬಣದಲ್ಲಿ ಮನೆಯಲ್ಲೆ ಕೋವಿಡ್ ಪರೀಕ್ಷೆಗಳ ಪ್ರವೃತ್ತಿ ಹೆಚ್ಚುತ್ತಿದೆ, “ಈ ವರ್ಷದ 20 ದಿನಗಳಲ್ಲಿ, ನಾವು 2 ಲಕ್ಷ ಮನೆ ಪರೀಕ್ಷೆಗಳನ್ನು ನೋಡಿದ್ದೇವೆ” ಎಂದು ಅವರು ಕೋವಿಡ್ ಪರೀಕ್ಷೆಗಳ ಕುರಿತು ಹೇಳಿದ್ದಾರೆ.
NITI ಆಯೋಗ(ಆರೋಗ್ಯ) ಸದಸ್ಯ, ಡಾ ವಿ.ಕೆ. ಪೌಲ್, ದೇಶದಲ್ಲಿ ಒಟ್ಟಾರೆ 16% ದಷ್ಟು ಪಾಸಿಟಿವಿಟಿ ದರ ಹೆಚ್ಚಾಗಿದೆ ಎಂದು ಹೇಳಿದ್ದಾರೆ. ಗೋವಾದಂತಹ ಕೆಲವು ರಾಜ್ಯಗಳಲ್ಲಿ 50% ಕ್ಕಿಂತ ಹೆಚ್ಚು ಪಾಸಿಟಿವಿಟಿ ವರದಿಯಾಗಿವೆ. ಕೇರಳದಲ್ಲಿ 42% ಇದ್ದರೆ, ರಾಜಸ್ಥಾನದಲ್ಲಿ 31%ದಷ್ಟು ಪಾಸಿಟಿವಿಟಿ ಪ್ರಮಾಣವಿದೆ.
ಪಾಸಿಟಿವಿಟಿ ದರ ಎಂದರೆ, ಕೊರೊನಾ ಪರೀಕ್ಷೆ ಮಾಡಿರುವ ಪ್ರತಿ ನೂರು ಜನರಲ್ಲಿ ಎಷ್ಟು ಜನರಿಗೆ ಕೊರೊನಾ ಪಾಸಿಟಿವ್ ಆಗಿದೆ ಎಂಬ ಲೆಕ್ಕಚಾರವಾಗಿದೆ. ಉದಾಹರಣೆಗೆ ಪರೀಕ್ಷೆ ಮಾಡಿದ ನೂರು ಜನರಲ್ಲಿ ಐವತ್ತು ಜನರಿಗೆ ಕೊರೊನಾ ಪಾಸಿಟಿವ್ ಆದರೆ, 50% ಪಾಸಿವಿಟಿ ಇದೆ ಎಂದರ್ಥ.
ಇದನ್ನೂ ಓದಿ:ಹಿಜಾಬ್ ಧರಿಸುವುದು ಅಶಿಸ್ತು: ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ವಿವಾದಾತ್ಮಕ ಹೇಳಿಕೆ