Homeಚಳವಳಿಸಿಎಎ ವಿರುದ್ಧ ಪ್ರತಿಭಟನೆಯಲ್ಲಿ ಭಾಗಿಯಾದ ವಿದ್ಯಾರ್ಥಿನಿಯೊಬ್ಬರ ಅನುಭವ

ಸಿಎಎ ವಿರುದ್ಧ ಪ್ರತಿಭಟನೆಯಲ್ಲಿ ಭಾಗಿಯಾದ ವಿದ್ಯಾರ್ಥಿನಿಯೊಬ್ಬರ ಅನುಭವ

- Advertisement -
- Advertisement -

ಎಲ್ಲೋ ಒಂದು ರೀತಿಯ ಭಯ, ಅರೆಸ್ಟ್ ಆದ್ರೆ ಏನ್ ಮಾಡೋದು? ಯಾರು ಹೊರಗೆ ತರ್ತಾರೆ? ಅಪ್ಪನಿಗೆ ಗೊತ್ತಾದ್ರೆ ಚರ್ಮ ಸುಲಿತಾರೆ! ಆದ್ರೆ, ಪ್ರತಿಭಟನೆಗೆ ಹೋಗ್ದೆ ಇದ್ರೆ? ಛೇ!

ಹೀಗೆ ಯೋಚಿಸಿ, ಕೊನೆಗೂ ಮನೆಯಿಂದ ಸುಮಾರು ವಿದ್ಯಾರ್ಥಿಗಳು ಬೆಂಗಳೂರಿನ ಬೀದಿಗೆ ಇಳಿದೇಬಿಟ್ಟೆವು! ನಮಗೆ ಆ ಕ್ಷಣದಲ್ಲಿ ನಾವು ಮುಖ್ಯ ಆಗಿರ್ಲಿಲ್ಲ. ಸರ್ಕಾರದ ವಿರುದ್ಧ ಹೋರಾಡೋದು ಮುಖ್ಯವಾಗಿತ್ತು. ಅದು ನಮ್ಮ ಸ್ವಾತಂತ್ರ್ಯದ ಪ್ರಶ್ನೆಯಾಗಿತ್ತು. ಮುಂದೊಂದು ದಿನ ನಮ್ಮ ಕಾಲೇಜಿಗೂ ನುಗ್ಗಿ ನಮ್ಮನ್ನೂ ಕೂಡ ನಾಯಿ ತರ ಪೊಅಲೀಸರು ಹೊಡಿಯೋ ಸಂಪೂರ್ಣ ಚಾನ್ಸಸ್ ಇದೆ ಅನ್ನೋದು ನಮ್ಮ ಅರಿವಿಗೆ ಬಂದಾಗಿತ್ತು.

ವಿದ್ಯಾರ್ಥಿಗಳು ತಮ್ಮ ಮೊದಲ ಪ್ರತಿಭಟನೆಯನ್ನ ಎಲ್ಲರ ಜೊತೆಯಲ್ಲೇ 15ರಂದು ನಡೆಸಿದ್ವಿ. ಮನಸ್ಸಿಗೆ ಸಮಾಧಾನ ಇಲ್ಲ. ಅದಾದಮೇಲೆ, 16ಕ್ಕೆ ವಿದ್ಯಾರ್ಥಿಗಳೇ ಪ್ರತಿಭಟನೆಗೆ ಕರೆ ಕೊಟ್ಟೆವು. ಟೌನ್‍ಹಾಲ್‍ನಿಂದ ಫ್ರೀಡಂಪಾರ್ಕ್‍ವರೆಗೆ ಮಾರ್ಚ್ ಮಾಡೋದು ಅಂತ ನಿರ್ಧಾರ ಆಯಿತು. ಆದರೆ, ಈ ಪೊಲೀಸರು ಬಿಡಬೇಕಲ್ಲ! ನಮ್ಮ 9 ಸಂಗಡಿಗರನ್ನ ಒಳಗೆ ಹಾಕಿಬಿಟ್ರು. ನಮ್ಮಲ್ಲಿ ಪ್ರತಿಭಟನೆಗೆ ಮೊದಲ ಬಾರಿಗೆ ಬಂದಿದ್ದ ಕೆಲವರು ಕಂಗಾಲಾಗಿಹೋದರು. ಆದರೆ, ಅಲ್ಲಿಗೆ ಮನದಟ್ಟಾಯಿತು. ನಾವು ಅವರಿಂದ ಓಔಅ ತೊಗೊಂಡ್ರೆನು? ಇಲ್ಲದಿದ್ರೇನು ನಮ್ಮನ್ನ ಒಳಗೆ ಹಾಕೋದು ಗ್ಯಾರೆಂಟಿ! ನಮ್ಮ ಪ್ರತಿಭಟನೆ ಮಾಡೋ ಹುಮ್ಮಸ್ಸು ಇನ್ನೂ ಹೆಚ್ಚಿತು. 20ಕ್ಕೆ ಸೆಕ್ಷನ್ 144 ನಡುವೆಯೂ ಪ್ರತಿಭಟನೆ ನಡೆಸೋದು ಅಂತ ಸಿದ್ಧ ಆಯಿತು!

ನನ್ನ ಪ್ರಕಾರ ಸರ್ಕಾರಿ ಕಾಲೇಜು ಮೈದಾನದಲ್ಲಿ ಏನಾಯಿತೋ, ಅದು ಒಂದು ರೀತಿಯ ಇತಿಹಾಸ. ಏಕೆಂದರೆ, ಎಲ್ಲಾ ವಿದ್ಯಾರ್ಥಿಗಳು ತಮ್ಮ ತಮ್ಮ ಸಂಘಟನೆಗಳ ಬ್ಯಾನರ್‍ಗಳು ಇಲ್ಲದೇನೇ ಒಟ್ಟಾಗಿ ಮುಂದೆ ಬಂದು ಒಗ್ಗಟ್ಟು ಏನು ಅನ್ನೋದನ್ನ ತೋರಿಸಿದ್ವಿ. ಇಷ್ಟು ವರ್ಷಗಳ ಕಾಲ ಬೆಂಗಳೂರಿನಲ್ಲಿ ನಡೀತಾ ಇದ್ದ “ಕನ್ನಡ ಗೊತ್ತಿಲ್ಲ” ಅನ್ನೋ ಶೋಕಿ ಬಿಟ್ಟು, ಒಟ್ಟಿಗೆ ಸೇರಿ, ಕನ್ನಡದಲ್ಲೇ ಸರ್ಕಾರಕ್ಕೆ ಧಿಕ್ಕಾರ ಕೂಗಿದ್ವಿ.
ಅದರಲ್ಲೂ ಹಾಳಾದ್ ಮೀಡಿಯಾ ಒಂದು ಪೋಸ್ಟರ್ ಹಿಡ್ಕೊಂಡು ನಾಯಿ ಬಟ್ಟೆ ಎಳ್ದಾಡಿದ ಹಾಗೆ ನಮ್ಮ ಪ್ರತಿಭಟನೆಯ ಮೌಲ್ಯವನ್ನು ಇಳಿಸಲಿಕ್ಕೆ ಏನೆಲ್ಲಾ ಮಾಡಿದ್ವು!

ಆದರೆ, ಇನ್ನು ಮುಂದೆ ಎಲ್ಲರಿಗೂ ನೆನಪಿರಲಿ, ವಿದ್ಯಾರ್ಥಿಗಳು ಯಾವಾಗ ಎಲ್ಲಾ ಸರ್ಕಾರದ ವಿರುದ್ಧ ಪ್ರತಿಭಟನೆಗೆ ಇಳಿದಿದ್ದಾರೆ, ಅವಾಗ ಎಲ್ಲಾ ಸರ್ಕಾರಗಳು ಬಿದ್ದಿವೆ. ಈ ಬಾರಿನೂ ಬೀಳುತ್ತೆ!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಹಾಸನ ಪೆನ್‌ಡ್ರೈವ್ ಪ್ರಕರಣ: ಎಸ್‌ಐಟಿ ರಚಿಸಲು ಕೋರಿ ಮಹಿಳಾ ಆಯೋಗದಿಂದ ಸಿಎಂಗೆ ಪತ್ರ

0
ಹಾಸನ ಜಿಲ್ಲೆಯಲ್ಲಿ ಹರಿದಾಡುತ್ತಿರುವ ಪೆನ್‌ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಗೆ ವಿಶೇಷ ತಂಡ ರಚನೆ ಮಾಡುವಂತೆ ಕೋರಿ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಚೌದರಿ ಅವರು ಸಿಎಂ ಸಿದ್ದರಾಮಯ್ಯ, ಗೃಹ ಸಚಿವ...