Homeಮುಖಪುಟಭಾರತದಲ್ಲಿ ಹೆಚ್ಚುತ್ತಿರುವ ಮುಸ್ಲಿಂ ವಿರೋಧಿ ಹಾಡುಗಳು: ಇಸ್ಲಾಮೋಫೋಬಿಯ ಹರಡುವ ಪ್ರಯತ್ನ ತೆರೆದಿಟ್ಟ ಜರ್ಮನ್ ಸಾಕ್ಷ್ಯಚಿತ್ರ

ಭಾರತದಲ್ಲಿ ಹೆಚ್ಚುತ್ತಿರುವ ಮುಸ್ಲಿಂ ವಿರೋಧಿ ಹಾಡುಗಳು: ಇಸ್ಲಾಮೋಫೋಬಿಯ ಹರಡುವ ಪ್ರಯತ್ನ ತೆರೆದಿಟ್ಟ ಜರ್ಮನ್ ಸಾಕ್ಷ್ಯಚಿತ್ರ

57 ರಾಷ್ಟ್ರಗಳು ಮುಸ್ಲಿಮರಿಗಿರುವಾಗ, ಭಾರತ ಏಕೆ ಹಿಂದುಗಳದ್ದಾಗಬಾರದು? ಎಂಬ ಹಾಡು ವೈರಲ್ ಆಗಿದೆ.

- Advertisement -
- Advertisement -

ಬಿಬಿಸಿ ಡಾಕ್ಯುಮೆಟರಿ ಜಾಗತಿಕ ಮಟ್ಟದಲ್ಲಿ ಚರ್ಚೆಯಾದ ಬೆನ್ನಲ್ಲೇ  ಜರ್ಮನ್ ಸರ್ಕಾರಿ ಸ್ವಾಮ್ಯದ ಸಾರ್ವಜನಿಕ ಪ್ರಸಾರ ಮಾಧ್ಯಮ Deutsche Welle ಎಂಬ ಮಾಧ್ಯಮವೊಂದು ತನ್ನ DW Documentary  ಎಂಬ  ಯೂಟ್ಯೂಬ್ ಚಾನಲ್ ನಲ್ಲಿ ಭಾರತದಲ್ಲಿ ಹಾಡುಗಳು – ಸಂಗೀತದ ಮೂಲಕ   ದ್ವೇಷವನ್ನು ಹರಡುವ  ‘ಹಿಂದುತ್ವ ಪ್ರೇರಿತ  ಪಾಪ್  ಹಾಡುಗಳ’ ಕುರಿತಾದ ಸಾಕ್ಷ್ಯಚಿತ್ರವೊಂದನ್ನು 30 ಜನವರಿ ರಂದು ತನ್ನ ಯೂಟ್ಯೂಬ್ ಚಾನೆಲ್‌ನಲ್ಲಿ ಬಿಡುಗಡೆ ಮಾಡಿದೆ. ಜರ್ಮನ್ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ  ಲಭ್ಯವಿರುವ ಕೇವಲ 12 ನಿಮಿಷದ ಈ  ಸಾಕ್ಷ್ಯಚಿತ್ರವು ಹಿಂದುತ್ವವಾದಿ ಗಾಯಕರು ಹಾಗು ಅವರ  ದ್ವೇಷ ಪೂರಿತ ಹಾಡುಗಳ ಕುರಿತು ವಿವರಿಸುತ್ತದೆ.

ಭಾರತದಲ್ಲಿ ಹೆಚ್ಚುತ್ತಿರುವ ಇಸ್ಲಾಮೋಫೋಬಿಯಾದ ಹಿಂದೆ, ದ್ವೇಷ ಪ್ರಚಾರದ ಹಾಡುಗಳನ್ನು ರಚಿಸುವ  ಹಿಂದೂ ಬಲಪಂಥೀಯ ಕಲಾವಿದರ ಜಾಲವೊಂದು ಸಕ್ರಿಯವಾಗಿದೆ ಎಂದು ಈ ಡಾಕ್ಯುಮೆಟರಿ ಸ್ಪಷ್ಟಪಡಿಸುತ್ತದೆ. ಅಂತಹ ಗಾಯಕರು ಹೇಗೆ ತಮ್ಮ ಕೆಲಸವನ್ನು ಸಮರ್ಥಿಸಿಕೊಳ್ಳುತ್ತಾರೆ ಮತ್ತು ಯುವಜನರ ಮನಸ್ಸಿನಲ್ಲಿ ದ್ವೇಷ – ಹಿಂಸೆ ತುಂಬುತ್ತಾರೆ ಎಂಬುದನ್ನು ಜಗತ್ತಿನೆದರು ತೆರದಿಡಲಾಗಿದೆ. ಹಿಂದುತ್ವ ಪಾಪ್ ಹಾಡುಗಳು ಮುಸ್ಲಿಂಮರ ವಿರುದ್ಧ ಹಿಂಸೆ ನಡೆಸಲು ಪ್ರಚೋದನೆ ನೀಡಿವೆ, ಕೊಲೆಗೈಯಲು ಕರೆ ನೀಡುತ್ತವೆ ಎಂಬುದನ್ನು ಪತ್ರಕರ್ತೆ ಆಕಾಂಕ್ಷ ಸಕ್ಸೇನ ಸಾಕ್ಷಿ ಸಮೇತ ನಿರೂಪಿಸುತ್ತದೆ.

ಉತ್ತರ ಪ್ರದೇಶದ ಹಲವಾರು ಜಿಲ್ಲೆಗಳಲ್ಲಿ ಸಂಚರಿಸಿ ಹಲವಾರು ಹಿಂದುತ್ವ ಗಾಯಕರನ್ನು ಸಂದರ್ಶಿಸಲಾಗಿದೆ. ಅವರ ಕಾರ್ಯಕ್ರಮಗಳನ್ನು ವೀಕ್ಷಿಸಲಾಗಿದೆ. ಸಂದೀಪ್ ಆಚಾರ್ಯ ಎಂಬ  ಹಿಂದುತ್ವದ ಪಾಪ್ ಗಾಯಕ ಮಾತನಾಡುತ್ತ ನನ್ನ ಅನೇಕ ಯೂಟ್ಯೂಬ್ ಚಾನೆಲ್‌ಗಳನ್ನು ಬ್ಯಾನ್ ಮಾಡಲಾಗಿದೆ. ಆದರೆ ನಾನು ಒಂದು ಹೋದರೆ ಮತ್ತೊಂದು ಹೊಸದನ್ನು ತೆರೆದು ಹಾಡುಗಳನ್ನು ಅಪ್ಲೋಡ್ ಮಾಡುತ್ತಲೇ ಇದ್ದೇನೆ ಎನ್ನುತ್ತಾರೆ.

ಆತನ ಹಾಡಿನ ಕೆಲವೊಂದು ಸಾಲುಗಳು ಇಲ್ಲಿವೆ. ..

“ನೀವು ಎಲ್ಲಿ ಬೇಕಾದ್ರೂ ಮಸೀದಿ ಕಟ್ಟಿ ಇದು ರಾಮನ ಭೂಮಿ”

“ನೀವು ಹಿಂದುತ್ವವನ್ನು ಇಷ್ಟಪಡದಿದ್ದರೆ ಮತ್ತೇಕೆ ಭಾರತದ ಮಣ್ಣಿನಲ್ಲೇ  ಸಾಯುತ್ತೀರಿ”

ಅಬ್ದುಲ್ ಅಂಕಲ್ ನೀವು ಈ ದೇಶದಲ್ಲಿ ಬಾಡಿಗೆಗೆ ಇದ್ದೀರಿ, ನಿಮ್ಮನ್ನೇಕೆ ನಾವು ಸಹಿಸಿಕೊಳ್ಳಬೇಕು?

ಅಯೋಧ್ಯ ಬಳಿಯ ರಘಡ್‌ಗಂಜ್ ಗ್ರಾಮದಲ್ಲಿ ಆತನ ಸಂಗೀತ ಕಚೇರಿ ನಡೆಯುವಲ್ಲಿಗೆ ವರದಿಗಾರರು ತೆರಳಿ “ನಿಮ್ಮ ಹಾಡಿನಿಂದ ಗಲಭೆ ನಡೆದು ಪ್ರಾಣಹಾನಿಯಾದರೆ ಅದರ ಜವಾಬ್ದಾರಿ ಹೊತ್ತುಕೊಳ್ಳುತ್ತೀರಾ? ಎಂದು ಪ್ರಶ್ನಿಸಿದ್ದಾರೆ. ಅದಕ್ಕೆ ಉತ್ತರಿಸಿದ ಅವರು, ಹಿಂದೂಗಳು ಭಯಪಡುವ ಕಾಲ ಹೊರಟು ಹೋಗಿದೆ. ನಮ್ಮ ಪ್ರಾಬಲ್ಯವನ್ನು ಒಪ್ಪಿಕೊಳ್ಳದವರು ದೇಶ ತೊರೆಯಬಹುದು. ನೀವು ನಮ್ಮ ಮೇಲೆ ದಾಳಿ ಮಾಡಿದರೆ ನಾವು ಪ್ರತಿ ದಾಳಿ ಮಾಡುತ್ತೇವೆ. ಕಣ್ಣಿಗೆ ಕಣ್ಣು ತೆಗೆಯುತ್ತೇವೆ ಅಷ್ಟೇ” ಎಂದು ಉತ್ತರಿಸಿದ್ದಾರೆ.

ಆತನ ಹಾಡುಗಳನ್ನು ಕೇಳುವ ಸಣ್ಣ ಅಂಗಡಿ ನಡೆಸುವ ರಾಕೇಶ್ ಎಂಬ ಯುವಕ ಹೇಳುವುದು ಹೀಗೆ.. “ಹಿಂದೂಗಳು ಅವರ ಹಾಡುಗಳನ್ನು ಕೇಳಿದರೆ ಹೊಸ ಶಕ್ತಿ ಬರುತ್ತದೆ. ಗಂಟೆಗಟ್ಟಲೆ ಹಾಡುಗಳನ್ನು ಕೇಳಿದರೆ ಬೇರೊಂದು ಲೋಕಕ್ಕೆ ಪ್ರವೇಶಿಸಿದಂತೆ ಆಗುತ್ತದೆ. ಪದೇ ಪದೇ ಕೇಳಬೇಕೆನಿಸುತ್ತದೆ ಮತ್ತು ಹಿಂದೂಗಳಿಗೆ ಅನ್ಯಾಯ ಆಗುತ್ತಿರುವುದು ಅರ್ಥವಾಗುತ್ತದೆ.

2022ರಲ್ಲಿ ಮಧ್ಯಪ್ರದೇಶದ ಕಾರ್ಬೋನ್ ಎಂಬ ನಗರದಲ್ಲಿ ಹಿಂದೂ ಮುಸ್ಲಿಂ ಗಲಭೆ ನಡೆಯಿತು. ಆನತಂರ ಮುಸ್ಲಿಮರ ಮೇಲೆ ದಾಳಿ ನಡೆಸಿ ಅವರ ಅಂಗಡಿಗಳನ್ನು ಲೂಟಿಗೈಯ್ಯಲಾಯಿತು. ಅದಕ್ಕೆ ಕಾರಣ ಹಿಂದೂಗಳ ಮೆರವಣಿಗೆಯಲ್ಲಿ ಮುಸ್ಲಿಂ ವಿರೋಧಿ ಹಾಡುಗಳನ್ನು ಹಾಕಲಾಗಿತ್ತು. ತಲವಾರುಗಳನ್ನು ಹಿಡಿದು ಮೆರವಣಿಗೆ ಮಾಡುತ್ತಿದ್ದಾಗ ಯಾರೋ ಕಿಡಿಗೇಡಿಗಳು ಕಲ್ಲು ತೂರಿದ್ದರು. ಪರಿಣಾಮ ಹಲವಾರು ಮುಸ್ಲಿಮರು ತಮ್ಮ ಆಸ್ತಿ ಪಾಸ್ತಿ ಕಳೆದುಕೊಂಡಿದ್ದರು.

ಸಂದೀಪ್ ಆಚಾರ್ಯ ನಿಂದ ಪ್ರಭಾವಿತನಾದ ಮತ್ತೋರ್ವ ಗಾಯಕ ಲಖನೌನಲ್ಲಿ ವಾಸಿಸುವ ಪ್ರೇಮ್ ಕೃಷ್ಣವಂಶಿ. ಸಂದೀಪ್ ನ ಕಟ್ಟಾ ಶಿಷ್ಯನಾಗಿರುವ ಈತನೂ ದ್ವೇಷ ಹರಡುವ ಗಾಯನದಲ್ಲಿ ಜನಪ್ರಿಯತೆ ಪಡೆದುಕೊಂಡಿದ್ದಾರೆ.  “ಮೊದಲ ನನಗೆ ಹಿಂದುತ್ವ ಅಂದರೆ ಏನೆಂದು ಗೊತ್ತಿರಲಿಲ್ಲ. ನನಗೆ ಹಲವು ಮುಸ್ಲಿಂ ಸ್ನೇಹಿತರಿದ್ದರು. ಆದರೆ ಸಂದೀಪ್ ನನ್ನನ್ನು ಸಂಪೂರ್ಣ ಬದಲಾಯಿಸಿದರು. ಮೆಕ್ಕಾದಲ್ಲಿ ಶಿವ ದೇವಾಸ್ಥಾನವಿರುವುದು ತಿಳಿಯಿತು. ನಾನೀಗ ವಾಟ್ಸಾಪ್ ನಲ್ಲಿ ಬರುವ ಮಾಹಿತಿಗಳನ್ನಿಟ್ಟುಕೊಂಡು ಹಾಡುಗಳನ್ನು ಬರೆಯುತ್ತೇನೆ” ಎನ್ನುತ್ತಾರೆ ಪ್ರೇಮ್.

ಪ್ರೇಮ್ ಕೃಷ್ಣವಂಶಿ ಹಾಡುಗಳಲ್ಲಿ ಕೆಲವು ಹೀಗಿವೆ..

“ಯಾರು ನಮ್ಮ ಧರ್ಮದ ಮೇಲೆ ಕಣ್ಣಿಡುತ್ತಾರೋ, ಅವನನ್ನು ಗನ್ ಮೂಲಕ ಸುಡುತ್ತೇವೆ”

“ಹಿಂದೂ ಕ ಹೇ ಹಿಂದುಸ್ಥಾನ್,  ಮುಲ್ಲಾ ಜಾವೋ ಪಾಕಿಸ್ತಾನ್”

“ಇನ್ಸಾನ್ ನಹೀ ಹೋ ಸಾಲೋ, ಹೋ ತುಮ್ ಕಸಾಯಿ; ಬಹುತ್ ಹೋ ಚುಕಾ ಹಿಂದೂ-ಮುಸ್ಲಿಂ ಭಾಯಿ ಭಾಯಿ” – ನೀವು ಮನುಷ್ಯರಲ್ಲ, ಕಟುಕರು; ಹಿಂದೂ-ಮುಸ್ಲಿಂ ಭಾವೈಕ್ಯತೆ ಇನ್ನು ಸಾಕು”

ಈ ಬಗ್ಗೆ ಪ್ರಶ್ನಿಸಿದಾಗ ಪತ್ರಕರ್ತೆ ಆಕಾಂಕ್ಷ ಸಕ್ಸೇನ ಅವರೊಂದಿಗೆ ಆತ ಕೇಳಿದ್ದಿಷ್ಟೇ…

“57 ರಾಷ್ಟ್ರಗಳು ಮುಸ್ಲಿಮರಿಗಿರುವಾಗ, ಭಾರತ ಏಕೆ ಹಿಂದುಗಳದ್ದಾಗಬಾರದು?” ಅಂತ.

ಇದನ್ನೂ ಓದಿ; ಟಿಪ್ಪು ಅನುಯಾಯಿಗಳನ್ನು ಕೊಲ್ಲಿರಿ: ನಳಿನ್ ಕುಮಾರ್‌‌ ಪ್ರಚೋದನಾತ್ಮಕ ಹೇಳಿಕೆ

ದ್ವೇಷದ ರಾಜಕೀಯದಿಂದ ಪ್ರಚೋದಿಸಲ್ಪಟ್ಟ ಗಾಯಕ ಸಂದೀಪ್ ಆಚಾರ್ಯ, ಪ್ರೇಮ್ ಕೃಷ್ಣವಂಶಿ ನಂತಹ ಗಾಯಕರ  ಹಾಡುಗಳು,  ಸಮಕಾಲೀನ  ಭಾರತದಲ್ಲಿ ಹುಟ್ಟಿಕೊಂಡ  ಹೊಸ ಸಾಮಾಜಿಕ ದ್ವೇಷ ಸಂಸ್ಕೃತಿಯ  ಭಾಗವಾಗಿದೆ. ಉತ್ತರದ ರಾಜ್ಯಗಳಲ್ಲಿ ಹಿಂದೂಗಳ ರ್ಯಾಲಿಗಳಲ್ಲಿ ಇಂತಹ  ಮುಸ್ಲಿಂ ವಿರೋಧಿ ಹಾಡುಗಳಿಗೆ ಹೆಚ್ಚಿನ ಪ್ರಾಮುಖ್ಯತೆ ಇದೆ. ಈ ಇಬ್ಬರು ಗಾಯಕರು ಬಿಜೆಪಿಯ ಅನುಯಾಯಿಗಳಾಗಿದ್ದಾರೆ.

ಹಾಗಾಗಿ , ದ್ವೇಷ, ನಿಂದನೆ ಮತ್ತು ಮುಸ್ಲಿಂ ಅಲ್ಪಸಂಖ್ಯಾತರನ್ನು ಗುರಿಯಾಗಿಸಿಕೊಂಡು ನರಮೇಧದ ಬೆದರಿಕೆಗಳ ಸಂದೇಶಗಳು  ಇಂತಹ ಸಂಗೀತಗಳಲ್ಲಿ ಇರುವುದರಿಂದಲೇ ಹಿಂದೂ ಬಲಪಂಥೀಯರು ಅವುಗಳನ್ನು ಹೆಚ್ಚು  ಇಷ್ಟಪಡುತ್ತಾರೆ  ಮತ್ತು ಎಲ್ಲರ ಜೊತೆ  ಹಂಚಿಕೊಳ್ಳುತ್ತಾರೆ.

ಈ ಕಾರಣಗಳಿಂದಾಗಿಯೇ, ಹಿಂದೂಗಳ  ಹಬ್ಬ ಹರಿದಿನಗಳ ಸಂದರ್ಭಗಳಲ್ಲಿ, ಬಲಪಂಥೀಯ ಗುಂಪುಗಳು ಮುಖ್ಯವಾಗಿ ಮುಸ್ಲಿಂ ಬಹು ಸಂಖ್ಯಾತರಿರುವ ಪ್ರದೇಶಗಳಲ್ಲಿ  ಮೆರವಣಿಗೆಗಳನ್ನು ನಡೆಸಿದಾಗ  ಮಸೀದಿಗಳ  ಮುಂದೆ ಇಸ್ಲಾಮೋಫೋಬಿಕ್ ಹಾಡುಗಳೊಂದಿಗೆ ಜೋರಾಗಿ ಮುಸ್ಲಿಂ ವಿರೋಧಿ ಘೋಷಣೆಗಳನ್ನು ಕೂಗಿದಾಗ,  ಹಲವೆಡೆ  ಧಾರ್ಮಿಕ ಹಿಂಸಾಚಾರ, ಸಂಘರ್ಷಗಳು  ಭುಗಿಲೇಳುವಂತಾಯಿತು.

ಕೃಷ್ಣವಂಶಿ ಹಿಂದಿ ಮತ್ತು ಭೋಜ್‌ಪುರಿ ಭಾಷೆಗಳಲ್ಲಿ ಹಾಡುತ್ತಾನೆ. ಆತನ ಅಭಿಮಾನಿ ಬಳಗವು ಮುಖ್ಯವಾಗಿ ಉತ್ತರಪ್ರದೇಶದಲ್ಲಿದೆ.

ಅನೇಕ ಹಾಡುಗಳಲ್ಲಿ, ಕೃಷ್ಣವಂಶಿ ‘ಮುಸ್ಲಿಮರು ಪಾಕಿಸ್ತಾನಕ್ಕೆ ಹೋಗಬೇಕಾದ ದೇಶ ದ್ರೋಹಿಗಳು’ ಎಂದು ಹೇಳುತ್ತಾನೆ. ಒಂದು ಹಾಡು ಹೀಗಿದೆ: “ಹಿಂದೂಗಳು ಬೇಗನೆ ಎಚ್ಚೆತ್ತುಕೊಳ್ಳದಿದ್ದರೆ, ಮುಸ್ಲಿಮರು ಕೊನೆಗೆ ನಮ್ಮನ್ನೂ ನಮಾಜ್ ಮಾಡಲು ಒತ್ತಾಯಿಸುತ್ತಾರೆ”.

ಆದರೆ, ಕೃಷ್ಣವಂಶಿ ಹೇಳುವ ಪ್ರಕಾರ  ಅವು ದ್ವೇಷದ ಹಾಡುಗಳಲ್ಲವಂತೆ. ಪತ್ರಕರ್ತೆಯೊಂದಿಗೆ ಡಾಕ್ಯುಮೆಂಟರಿಯಲ್ಲಿ ಆತ ಹೇಳಿದ್ದು ಹೀಗೆ..

“ನನ್ನ ಸಂಗೀತವು ಮುಸ್ಲಿಂ ದ್ವೇಷ ಹುಟ್ಟಿಸುವಂತದ್ದು ಎಂದು ನಾನು ಭಾವಿಸುವುದಿಲ್ಲ. ನನ್ನ ಸಂಗೀತವು ಸತ್ಯವನ್ನು ಹೇಳುತ್ತದೆ.  ಯಾರಾದರೂ ಅದನ್ನು ಇಸ್ಲಾಮೋಫೋಬಿಕ್ ಎಂದು ಭಾವಿಸಿದರೆ, ಅವರು ಆ ರೀತಿ ಭಾವಿಸುವುದನ್ನು ತಡೆಯಲು ನನ್ನಿಂದ ಸಾಧ್ಯವಿಲ್ಲ” ಎಂದು.

ಇತ್ತೀಚೆಗಷ್ಟೇ ಯುಪಿ ಸರ್ಕಾರ ಸಿಎಂ ಯೋಗಿ ಆದಿತ್ಯನಾಥ್ ಅವರನ್ನು ಹಾಡಿ ಹೊಗಳಿದ್ದಕ್ಕಾಗಿ ಕೃಷ್ಣವಂಶಿಗೆ ಪ್ರಶಸ್ತಿಯನ್ನು ನೀಡಿದೆ.  ಆತನ  ದ್ವೇಷದ ಹಾಡುಗಳಲ್ಲಿ ಹೆಚ್ಚಿನವು,   ಹಿಂದೂ ರಾಷ್ಟ್ರೀಯವಾದಿ ರಾಜಕಾರಣಿಗಳಾದ ಮೋದಿ, ಯೋಗಿ ಮತ್ತು ಇತರ ಬಿಜೆಪಿ ನಾಯಕರಿಗೆ ಗೌರವವನ್ನು ಸೂಚಿಸುವಂತದ್ದೇ ಆಗಿದೆ.

ಸಾಕ್ಷ್ಯ ಚಿತ್ರ ನೋಡಿ

ಇಂತಹ ಹಾಡುಗಳ ವೀಡಿಯೋಗಳಲ್ಲಿ ಗಾಯಕರು ತಮ್ಮ ಹಣೆಯ ಮೇಲೆ ಸಿಂಧೂರವಿಟ್ಟು, ಕೈಯಲ್ಲಿ ಪಿಸ್ತೂಲು, ತ್ರಿಶೂಲ ಮತ್ತು  ಖಡ್ಗಗಳನ್ನು ಝಳಪಿಸುವುದನ್ನು ಕಾಣಬಹುದಾಗಿದೆ.

ಇವರದೇ ಸಾಲಲ್ಲಿ ಸೇರುವ ಮತ್ತೋರ್ವ ಗಾಯಕಿ ಲಕ್ಷ್ಮಿ ದುಬೆ ಹೇಳುವ ಪ್ರಕಾರ “ನಾನು ಯಾವುದೇ ಪಕ್ಷಕ್ಕೆ ಸೇರಿದವಳಲ್ಲ, ಆದರೆ ಮೋದಿಯವರು ಹಿಂದೂಗಳಿಗಾಗಿ ಮಾಡಿದ ಎಲ್ಲಾ ಕಾರ್ಯಗಳಿಗಾಗಿ  ನಾನು ಅವರಿಗೆ ಧನ್ಯವಾದ ಹೇಳುತ್ತೇನೆ”

ದುಬೆಯ ಹೆಚ್ಚು ಜನಪ್ರಿಯ ಗೀತೆಗಳಲ್ಲಿ ಒಂದು ಹೀಗೆ ಹೇಳುತ್ತದೆ: “ಅಗರ್ ಹಿಂದೂಸ್ತಾನ್ ಮೇ ರೆಹನಾ ಹೋಗಾ, ತೋ ವಂದೇ ಮಾತರಂ ಕೆಹನಾ ಹೋಗಾ” (ನೀವು ಭಾರತದಲ್ಲಿ ಉಳಿಯಲು ಬಯಸಿದರೆ, ಮಾತೃಭೂಮಿಯನ್ನು ಸ್ತುತಿಸಿ).

ಇದೆ ವೇಳೆ, DW ಬಿಡುಗಡೆ ಮಾಡಿರುವ  ಈ  ಸಾಕ್ಷ್ಯಚಿತ್ರವು ಏಕಪಕ್ಷೀಯ, ಪಕ್ಷಪಾತ ಮತ್ತು ನ್ಯೂನತೆಗಳಿಂದ ಕೂಡಿದೆ ಎಂದು ಹಿಂದುತ್ವವಾದಿಗಳು ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ಮಾಡುತ್ತಿದ್ದಾರೆ. ಇವೆಲ್ಲಾ ಭಾರತ ವಿಭಜನೆ ಮಾಡಲು  ಕ್ರಿಶ್ಚಿಯನ್ ದೇಶಗಳು ನಡೆಸುತ್ತಿರುವ  ಸಂಘಟಿತಪ್ರಯತ್ನದ ಭಾಗವಾಗಿವೆ ಎನ್ನುತ್ತಿದ್ದಾರೆ. ಮೊದಲು  BBC, ಈಗ DW ಸರದಿ. ಭಾರತವನ್ನು ಹಿಂದುತ್ವದ ಹೆಸರಿನಲ್ಲಿ ದೂಷಿಸುವ ರಾಷ್ಟ್ರಗಳು ಮತಾಂಧತೆಯ ಕಂದಕಕ್ಕೆ ಬಿದ್ದು ಒದ್ದಾಡುತ್ತಿದ್ದರೂ ಅವು ನಮ್ಮ ದೇಶವನ್ನು ದೂಷಿಸ ಹೊರಟಿವೆ ಎಂದು ಬರೆದಿದ್ದಾರೆ.

ಡಾಕ್ಯುಮೆಂಟರಿ ಕೊನೆಯ ಭಾಗದಲ್ಲಿ ಬಿಜೆಪಿ ಪಕ್ಷದ ವಕ್ತಾರೆ  ಅನಿಲಾ ಸಿಂಗ್ ಜೊತೆ DW journalist Akanksha Saxena ಈ ಬಗ್ಗೆ ಪ್ರಶಿಸಿದಾಗ, ಅವರು  “ನಮ್ಮ ಬಿಜೆಪಿ ಪಕ್ಷ ಯಾವತ್ತೂ ಇಂತಹ ಹಾಡುಗಳನ್ನು,  ಗಾಯಕರನ್ನು ಪ್ರೋತ್ಸಾಹಿಸುವುದಿಲ್ಲ, ಹಾಗೇನಾದರೂ ಅವರ ಹಾಡುಗಳು, ಸಂಗೀತ ಕಾರ್ಯಕ್ರಮಗಳು ಹಿಂಸೆಗೆ ಪ್ರಚೋದನೆ ನೀಡುವ ಹಾಗಿದ್ದಲ್ಲಿ, ಅವರ ವಿರುದ್ಧ ನೀವು ಕಾನೂನು ಕ್ರಮ ಕೈಗೊಳ್ಳಬಹುದು ಎಂದು ಹೇಳಿ ಕೈತೊಳೆದುಕೊಂಡರು.

– ನಿಝಾಮ್ ಅನ್ಸಾರಿ ಕಲ್ಲಡ್ಕ

ಇದನ್ನೂ ಓದಿ: ಸಿದ್ದರಾಮಯ್ಯ ಕೊಲೆಗೆ ಕರೆ ನೀಡಿದ ಅಶ್ವತ್ಥ ನಾರಾಯಣ ವಿರುದ್ಧ ರಾಜ್ಯಾದ್ಯಂತ ಖಂಡನೆ ವ್ಯಕ್ತ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

LEAVE A REPLY

Please enter your comment!
Please enter your name here

- Advertisment -

ಸಂವಿಧಾನದ ಬುಡಕ್ಕೆ ಕೊಡಲಿ ಏಟು: ಆರ್‌ಎಸ್‌ಎಸ್-ಬಿಜೆಪಿಯ ಷಡ್ಯಂತ್ರ ಸೋಲಿಸಲು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಅನಿವಾರ್ಯ – ಬಿ.ಕೆ. ಹರಿಪ್ರಸಾದ್

ಎಸ್‌ಐಆರ್ (SIR) ವಿರೋಧಿ ಹೋರಾಟದಲ್ಲಿ ನಮ್ಮ ಪಕ್ಷ ನಿಮ್ಮ ಜೊತೆಗಿದೆ ಎಂದು ಹೇಳಲು ಸರ್ಕಾರದ ಪ್ರತಿನಿಧಿಯಾಗಿ ನಾನು ಇಲ್ಲಿ ಬಂದಿದ್ದೇನೆ. ನೀವು ಮಂಡಿಸಿರುವ ಹಕ್ಕೊತ್ತಾಯಗಳ ಕುರಿತು ನೂತನ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಸೇರಿದಂತೆ ಪಕ್ಷದ...

ಮತದಾರರ ಪಟ್ಟಿಯಿಂದ 65 ಲಕ್ಷ ಜನರನ್ನು ಹೊರಹಾಕಿದ್ದು ಯಾರು? ಈ ಅಕ್ರಮಕ್ಕೆ ಚುನಾವಣಾ ಆಯೋಗವೇ ಉತ್ತರಿಸಬೇಕು: ಮೊಹಮ್ಮದ್ ಯೂಸುಫ್ ಕನ್ನಿ

"ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇವೆ. 1952ರ ಮೊದಲ ಚುನಾವಣೆಯ ಸಂದರ್ಭದಲ್ಲಿ ಸುಮಾರು 17.32 ಕೋಟಿ ಮತದಾರರಿದ್ದರು. 1955ರಲ್ಲಿ ಸಿಟಿಜನ್‌ಶಿಪ್ ಆಕ್ಟ್ ಜಾರಿಯಾದ ಬಳಿಕ ನಡೆದ 1957ರ ಚುನಾವಣೆಯಲ್ಲಿ ಈ ಸಂಖ್ಯೆ...

ಸರ್ಕಾರ-ನ್ಯಾಯಾಂಗ ವ್ಯವಸ್ಥೆ ಕೈಬಿಟ್ಟರೆ ರಾಜ್ಯದ ಜನ ಅನಾಥರಾಗುತ್ತಾರೆ : ಹಿರಿಯ ಸಾಹಿತಿ ಬಿ.ಟಿ. ಲಲಿತಾ ನಾಯ್ಕ್

ಎಸ್‌ಐಆರ್‌ ವಿಚಾರದಲ್ಲಿ ಇಂದು ನಾಡಿನ ಜನತೆ ಭೀಕರ ಸಂಕಷ್ಟದಲ್ಲಿದ್ದಾರೆ. ಈ ಗೊಂದಲವನ್ನು ಉಂಟು ಮಾಡಿದವರು ಯಾರು? ಕೇಂದ್ರ ಸರ್ಕಾರವೋ ಅಥವಾ ಕರ್ನಾಟಕ ಸರ್ಕಾರದ ಅಲಕ್ಷ್ಯ ಇದಕ್ಕೆ ಕಾರಣವೇ? ಅಥವಾ ನಮಗೆ ಸಂಬಂಧವೇ ಇಲ್ಲ...

ಎಸ್ಐಆರ್ ಹೆಸರಿನಲ್ಲಿ ನಡೆಯುತ್ತಿರುವ ಜನವಿರೋಧಿ ಹುನ್ನಾರಗಳನ್ನು ಸೋಲಿಸಬೇಕಿದೆ: ಎಸ್. ವರಲಕ್ಷ್ಮಿ

ಬೆಂಗಳೂರು: ರಾಜ್ಯಾದ್ಯಂತ ಎಸ್ಐಆರ್ (SIR) ವಿರುದ್ಧ ನಡೆಯುತ್ತಿರುವ ಸಮಾವೇಶವು ಆಕ್ರಮಣಕಾರಿ ಧೋರಣೆಯ ವಿರುದ್ಧದ ಬೃಹತ್ ಪ್ರತಿರೋಧವಾಗಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ ತಿಳಿಸಿದರು. ಎಸ್ಐಆರ್ ಸಮಸ್ಯೆಯಲ್ಲ ಎಂದು ಬಿಂಬಿಸುವ ಸಂಘಪರಿವಾರದವರ...

ಮತದಾನ ನಮ್ಮ ಜನ್ಮಸಿದ್ದ ಹಕ್ಕು, ಎಸ್‌ಐಆರ್ ಕುರಿತು ಜನ ಜಾಗೃತಿ ಅಗತ್ಯ: ಪೀಟರ್ ಮಚಾಡೋ

'ಮತದಾನ ನಮ್ಮ ಜನ್ಮಸಿದ್ದ ಹಕ್ಕು ಅದನ್ನು ನಾವು ಬಿಟ್ಟು ಕೊಡುವುದಿಲ್ಲ' ಎಂದು ಕರ್ನಾಟಕ ಕ್ರೈಸ್ತ ಸಮುದಾಯದ ಮಹಾ ಧರ್ಮಾಧ್ಯಕ್ಷ ರೆವೆಂಡರ್ ಫಾದರ್ ಪೀಟರ್ ಮಚಾಡೋ ಹೇಳಿದರು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ...

ಸುರಿವ ಮಳೆಯಲ್ಲಿಯೂ ಎಸ್‌ಐಆರ್ ವಿರೋಧಿ ಜಾಥಾಕ್ಕೆ ಜೊತೆಯಾದ ಮಳವಳ್ಳಿ, ಮದ್ದೂರು, ಮಂಡ್ಯ ಜನತೆ

ಮಂಡ್ಯ: ಮಳವಳ್ಳಿಯ ಬಸ್ ನಿಲ್ದಾಣದ ಬಳಿ ಸುರಿವ ಮಳೆಯಲ್ಲಿಯೂ 'ಎಸ್‌ಐಆರ್ (SIR) ವಿರೋಧಿ ಕರ್ನಾಟಕ' ಜಾಥಾಕ್ಕೆ ಹೋರಾಟಗಾರರು, ಬರಹಗಾರರು, ಜನಚಳವಳಿಗಳ ಮುಖಂಡರು ಹಾಗೂ ಪ್ರಗತಿಪರರು ಬೆಂಬಲ ವ್ಯಕ್ತಪಡಿಸಿದರು‌. ಈ ವೇಳೆ ಎಸ್‌ಐಆರ್ ಕುರಿತು ಮಾತನಾಡಿದ...

ಚಿತ್ರದುರ್ಗದಲ್ಲಿ ಸಮಾರೋಪಗೊಂಡ ಮಾರ್ಗ -3 SIR ವಿರೋಧಿ ಜನಜಾಗೃತಿ ಜಾಥ: ಜೂನ್ 20ರ ಸಮಾವೇಶದ ಯಶಸ್ಸಿಗೆ ಕರೆ

ಚುನಾವಣಾ ಆಯೋಗ ಜಾರಿಗೆ ತರಲು ಹೊರಟಿರುವ ಎಸ್‌ಐಆರ್ (SIR) ವ್ಯವಸ್ಥೆಯನ್ನು ವಿರೋಧಿಸಿ ಹಮ್ಮಿಕೊಳ್ಳಲಾಗಿದ್ದ ‘ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾ’ವು ದಾವಣಗೆರೆಯಲ್ಲಿ ಪ್ರಚಾರ ಮುಗಿಸಿ ಚಿತ್ರದುರ್ಗವನ್ನು ತಲುಪಿದ್ದು, ಇಲ್ಲಿ ಯಶಸ್ವಿಯಾಗಿ ಸಮಾರೋಪಗೊಂಡಿದೆ. ಎದ್ದೇಳು ಕರ್ನಾಟಕ,...

ಗದಗ | ಮನುವಾದದ ಜಾರಿಗೆ ಎಸ್‌ಐಆರ್‌ ಹೇರಿಕೆ : ಡಾ.ಇಸಾಬೆಲ್ಲ ಝೇವಿಯರ್

ದೇಶದಲ್ಲಿ ಮನುವಾದ ಜಾರಿಗೆ ತರುವುದು ಆರ್‌ಎಸ್‌ಎಸ್‌-ಸಂಘಪರಿವಾರದ ಮೂಲ ಉದ್ದೇಶ, ಅದಕ್ಕಾಗಿ ಜನರ ಮೇಲೆ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಯಂತಹ ಹೊಸ ಹೊಸ ಪ್ರಕ್ರಿಯೆಗಳನ್ನು ಹೇರಲಾಗುತ್ತಿದೆ ಎಂದು ಸಾಮಾಜಿಕ ಹೋರಾಟಗಾರ್ತಿ...

ಸಂವಿಧಾನ ವಿರೋಧಿ ‘SIR’ಗೆ ಹರಿಹರದಲ್ಲಿ ತೀವ್ರ ವಿರೋಧ: ಜನಜಾಗೃತಿ ಜಾಥಾದ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ನಾಗರಿಕರ ಆಕ್ರೋಶ

ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನಲ್ಲಿ ಇತ್ತೀಚೆಗೆ ಕೇಂದ್ರ ಚುನಾವಣಾ ಆಯೋಗದ 'SIR' (ವಿಶೇಷ ಗುರುತಿನ ಪರಿಶೀಲನೆ/ಮರುಪರಿಶೀಲನಾ ಕ್ರಮ) ಯೋಜನೆ ವಿರುದ್ಧ ಬೃಹತ್ ಜನಜಾಗೃತಿ ಜಾಥಾ ಯಶಸ್ವಿಯಾಗಿ ಸಂಚರಿಸಿತು. ಸಾರ್ವಜನಿಕರಲ್ಲಿ ಈ ಯೋಜನೆಯ ಕುರಿತು...

“ಎಸ್ಐಆರ್ ಮೂಲಕ ಮನುವಾದದ ಜಾರಿಗೆ ಕುತಂತ್ರ ರೂಪಿಸುತ್ತಿರುವ ಬಿಜೆಪಿ ಗೆಲ್ಲಲು ಬಿಡುವುದಿಲ್ಲ”:  ಮೈಸೂರಿನಲ್ಲಿ ಜನಾಕ್ರೋಶ

2026 ಜೂನ್ 16 ರಂದು ಹುಣುಸೂರು, ಹೆಚ್.ಡಿ ಕೋಟೆ, ಮೈಸೂರಿನಲ್ಲಿ ಸಾಗಿದ ಎಸ್ಐಆರ್ ವಿರೋಧಿ ಕರ್ನಾಟಕ ಜಾಥಾಕ್ಕೆ ಹುಣುಸೂರಿನ ಸಂವಿಧಾನ ಸರ್ಕಲ್ ನಿಂದ ಅಭೂತಪೂರ್ವ ಬೆಂಬಲ ಸಿಕ್ಕಿತು. ಬೆಳಗ್ಗೆ 8 ಗಂಟೆ ಸುಮಾರಿಗೆ ಎಸ್ಐಆರ್...