Homeಮುಖಪುಟನೀವೊಂದು ತಂಡ ಕಟ್ಟಬೇಕೆಂದಿದ್ದೀರಾ? ಹಾಗಾದರೆ ಹೀಗೆ ಮಾಡಿನೋಡಿ

ನೀವೊಂದು ತಂಡ ಕಟ್ಟಬೇಕೆಂದಿದ್ದೀರಾ? ಹಾಗಾದರೆ ಹೀಗೆ ಮಾಡಿನೋಡಿ

- Advertisement -
- Advertisement -

ಜೀವನ ಕಲೆಗಳು: ಅಂಕಣ-27

ತಂಡ ಕಟ್ಟುವ ಕಲೆ

ತಂಡವನ್ನು ಕಟ್ಟುವ ಕಲೆ ಮತ್ತು ತಂಡದಂತೆ ಕೆಲಸ ಮಾಡುವ ಕಲೆಗಳು ಎರಡೂ ಬೇರೆ ಬೇರೆ. ಇವೆರಡನ್ನೂ ಗಲಿಬಿಲಿ ಮಾಡಿಕೊಳ್ಳುವ ಸಾಧ್ಯತೆ ಇರುತ್ತದೆ. ಯಾವುದೇ ಒಂದು ಕಾರ್ಯಕ್ಕೆ, ಯೋಜನೆ ಹಾಕುವಾಗ ಅದಕ್ಕೆ ಬೇಕಾದ ಸರಿಯಾದ ಜನರನ್ನು ಹುಡುಕಿ, ತೆಗೆದು, ಗುಂಪುಗೂಡಿಸುವುದು ತಂಡ ರಚನೆ. ಆದರೆ ನಂತರ ಈ ಗುಂಪನ್ನು ಒಂದು ತಂಡದಂತೆ ಕೆಲಸಕ್ಕಿಳಿಸಿ, ಯೋಜನೆಯನ್ನು ಸಾರ್ಥಕಗೊಳಿಸುವುದು ಆ ತಂಡದ  ನಾಯಕರ ಕೆಲಸ. ಕೆಲವು ವಿಷಯದಲ್ಲಿ ಸಮಾನತೆ ಇದ್ದರೂ ಸಹ ಪ್ರಕ್ರಿಯೆಯಲ್ಲಿ ಕೆಲವು ವ್ಯತ್ಯಾಸಗಳೂ ಇರುತ್ತವೆ.

ಶೈಕ್ಷಣಿಕ ಮನಃಶಾಸ್ತ್ರಜ್ಞ ಬ್ರೂಸ್ ಟಕ್ಮಾನ್ ಪ್ರಕಾರ ತಂಡ ರಚನೆಯಲ್ಲಿ ಐದು ಅಭಿವೃದ್ಧಿ ಪ್ರಕ್ರಿಯೆಗಳಿವೆ. ಇದನ್ನು ಅವರು ಫಾರ್ಮಿಂಗ್, ಸ್ಟಾರ್ಮಿಂಗ್, ನಾರ್ಮಿಂಗ್, ಪರ್ಫಾರ್ಮಿಂಗ್ ಮತ್ತು ಅಡ್ಜರ್ನಿಂಗ್, (forming, storming, norming, performing, and adjourning) ಎನ್ನುತ್ತಾರೆ.

·         ರಚನೆ (ಫಾರ್ಮಿಂಗ್) ಹಂತದಲ್ಲಿ ಸರಿಯಾದ ಜನರನ್ನು ತಂಡಕ್ಕೆ ಆಯ್ದುಕೊಳ್ಳುವುದು. ಇದು ತಂಡರಚನಾಕಾರರ ಕೆಲಸ.

·         ಸ್ಟಾರ್ಮಿಂಗ್ (ಬ್ರೇನ್ ಸ್ಟಾರ್ಮಿಂಗ್) ಹಂತದಲ್ಲಿ ಒಟ್ಟಾಗಿ ಕಲೆತು ತಂಡದ ಬಗ್ಗೆ ಎಲ್ಲರೂ ತಮ್ಮ ತಮ್ಮ ಸಲಹೆಗಳನ್ನು ಕೊಡುವುದು.

·         ನಾರ್ಮಿಂಗ್ ಹಂತದಲ್ಲಿ ತಂಡದ ಕೆಲಸ ಮತ್ತು ನಿಯಮಾವಳಿಯನ್ನು ರೂಪಿಸಿ, ಎಲ್ಲರಿಗೂ ಸರಿಯಾಗಿ ತಿಳಿಯುವಂತೆ ಹೇಳುವುದು.

·         ಪರ್ಫೊರ್ಮಿಂಗ್ ಹಂತದಲ್ಲಿ ತಂಡವು ತನ್ನ ಕೆಲಸವನ್ನು ಅಚ್ಚುಕಟ್ಟಾಗಿ ಮಾಡುವುದು.

·         ಕೊನೆಯದಾಗಿ ಅಡ್ಜರ್ನಿಂಗ್ ಹಂತದಲ್ಲಿ ಕೆಲಸ ಮುಗಿದ ನಂತರ ತಂಡವನ್ನು ಬರ್ಖಾಸ್ತ್ ಮಾಡುವುದು.

ನಿಮಗೆಲ್ಲಾ ತಿಳಿದಿರುವಂತೆ ಯಾವುದಾದರೂ ನೈಸರ್ಗಿಕ ವಿಕೋಪ ಅಥವಾ ಕಠಿಣವಾದ ಕೆಲಸವನ್ನು ಕೂಡಲೇ ಮಾಡಬೇಕಾಗಿ ಬಂದಾಗ ಜನರಿಗೂ ಮತ್ತು ಸರಕಾರಕ್ಕೂ ಭಾರತೀಯ ಸೇನೆ ನೆನಪಾಗುತ್ತದೆ. ಏಕೆ ಗೊತ್ತೆ? ಅದರಲ್ಲಿರುವ ಶಿಸ್ತು ಮತ್ತು ಛಲ. ಸೈನಿಕರು ಯಾವ ಸಮಯದಲ್ಲೂ ಇದು ನಮ್ಮ ಕೆಲಸವಲ್ಲ, ಈಗ ಚಹಾ ಸಮಯ, ಮುಂತಾದ ಕ್ಷುಲ್ಲಕ ಕಾರಣ ನೀಡುವುದಿಲ್ಲ. ಅವಶ್ಯಕತೆ ಬಿದ್ದಲ್ಲಿ ತಮ್ಮ ಪ್ರಾಣವನ್ನು ಪಣಕ್ಕೆ ಒಡ್ಡಿ, ಹೇಳಿದ ಕೆಲಸ ಮಾಡಿ ಮುಗಿಸುತ್ತಾರೆ. ಸೈನ್ಯದ ಇನ್ನೊಂದು ಬಹಳ ಗಮನೀಯ ಗುಣ ಅಂದರೆ ಇಲ್ಲಿ ಜಾತಿ ಬೇಧವಿಲ್ಲ. ಮೇಲಧಿಕಾರಿ ಅಥವಾ ಕೆಳ ಹಂತದ ಸೈನಿಕ ಇಬ್ಬರಿಗೂ ಎಂದೂ ಕೆಲಸದ ಮಧ್ಯೆ ಜಾತಿಯ ಪ್ರಶ್ನೆ ಉದ್ಭವವಾಗುವುದಿಲ್ಲ. ಕೆಲಸದಲ್ಲಿ ಅವನ ರೆಜಿಮೆಂಟ್ ಅವನ ಜಾತಿಯಾಗುತ್ತದೆ. ಆದ್ದರಿಂದ ಇಂತಹ ಚಿಂತನೆಯುಳ್ಳ ಜನರನ್ನು ನಿಮ್ಮ ತಂಡಕ್ಕೆ ಸೇರಿಸಿಕೊಂಡಲ್ಲಿ ಏನೇ ಕೆಲಸವಿರಲಿ, ನಿಮ್ಮ ತಂಡ ಮಾಡಲು ಸಾಧ್ಯವಾಗುತ್ತದೆ.

ತಂಡ ಕಟ್ಟಲು ಮುಖ್ಯವಾಗಿ ನಮಗೆ ಬೇಕಾಗಿರುವುದು ಮುನ್ನೋಟ, ದೂರದೃಷ್ಟಿ (ವಿಷನ್): ನಾವು ಏತಕ್ಕಾಗಿ ಈ ತಂಡ ರಚಿಸುತ್ತಿದ್ದೇವೆ, ಇದರಿಂದ ಸಾಧಿಸಬೇಕಾಗಿರುವುದು ಏನು ಎಂಬ ಮಾಹಿತಿ ನಮ್ಮಲ್ಲಿರಬೇಕು.

ಎರಡನೆಯದು ತಂಡದಲ್ಲಿ ಸಾಮರಸ್ಯ, ಸೌಹಾರ್ದತೆ ಇರಬೇಕು, ಇಲ್ಲದಿದ್ದಲ್ಲಿ ತಂಡ ಏಕ ದಿಸೆಯಲ್ಲಿ ಸಾಗಲು ಸಾಧ್ಯವಿಲ್ಲ.

ಮೂರನೆಯದು ಗುರಿಯ ಕೇಂದ್ರೀಕರಣ (ಫೋಕಸ್). ಇಡೀ ತಂಡ ತನ್ನ ಗಮನವನ್ನು ಒಂದೇ ಗುರಿಯತ್ತ ಕೇಂದ್ರೀಕರಿಸಿ, ಅದರತ್ತ ಒಂದೇ ಗತಿಯಲ್ಲಿ ಸಾಗಬೇಕು.

ನಾಲ್ಕನೆಯದು ಕೆಲಸದ ಪ್ರತಿ ಸಂಪೂರ್ಣ ಸಮರ್ಪಣೆ. ಇದನ್ನು ಬಿಟ್ಟು ಇನ್ನೇನನ್ನೂ ಯೋಚಿಸುವಂತಿಲ್ಲ.

ಐದನೆಯದು ಸಮರ್ಪಕ ಸಂವಹನ. ತಂಡದ ರಚನಾಕಾರರ, ನಾಯಕರ ಮತ್ತು ಪರಸ್ಪರ ಸದಸ್ಯರ ಮಧ್ಯೆ ಸಂವಹನೆ ಸಮರ್ಪಕವಾಗಿರಬೇಕು.

ಹೊಂದಿಕೊಳ್ಳುವಿಕೆ: ಅವಶ್ಯಕತೆ ಹಾಗೂ ಸನ್ನಿವೇಶಕ್ಕೆ ತಕ್ಕಂತೆ ಕೆಲಸಕ್ಕೆ ಹೊಂದಿಕೊಳ್ಳುವಿಕೆ ಇರಬೇಕು.

ಪ್ರತಿಭೆ: ತಂಡದಲ್ಲಿ ಕೆಲಸಕ್ಕೆ ಬೇಕಾದ ಪ್ರತಿಭೆ ಇರಬೇಕು. ಕ್ರಿಕೆಟ್ ಆಟಗಾರರನ್ನು ಸೇರಿಸಿಕೊಂಡು ಫುಟ್ಬಾಲ್ ಪಂದ್ಯಕ್ಕೆ ಸ್ಪರ್ದಿಸಲಾಗುವುದಿಲ್ಲ.

ಮಾಪನ: ಪ್ರತ್ಯೇಕವಾಗಿ ತಂಡದ ಸದಸ್ಯರ ಮತ್ತು ಒಟ್ಟಾಗಿ ತಂಡದ ಪ್ರದರ್ಶನವನ್ನು ಅಳೆಯುವ ಮಾಪನ/ಸಾಧನ ಇರಬೇಕು.

ಅನುಭವ: ತಂಡ ರಚಿಸುತ್ತಿರುವವರಿಗೆ ತಂಡ ರಚನೆಯ ಅನುಭವವಿರಬೇಕು. ಇಲ್ಲದಿದ್ದಲ್ಲಿ ಇದು ಪರೀಕ್ಷೆ, ಮರುಪರೀಕ್ಷೆ (ಟ್ರಯಲ್ ಎಂಡ್ ಎರರ್) ಪ್ರಯತ್ನವಾಗುತ್ತದೆ. ಸಮಯ ಮತ್ತು ಪರಿಶ್ರಮ ವ್ಯರ್ಥವಾಗುತ್ತದೆ.

ತಂಡ ರಚನೆಗೆ ಬೇಕಾದ ಕಲೆಗಳು:

·         ಸಂವಹನ ಕಲೆ*

·         ಸಮಸ್ಯೆಗಳ ಪರಿಹಾರದ ಕಲೆ*

·         ನಾಯಕತ್ವದ ಕಲೆ*

·         ತಂಡದಂತೆ ಕೆಲಸ ಮಾಡುವ ಕಲೆ*

·         ಪ್ರೇರೇಪಿಸುವ ಕಲೆ%

·         ಅಧಿಕಾರ/ಜವಾಬ್ದಾರಿ ವಹಿಸಿವ ಕಲೆ%

·         ಪ್ರತ್ಯಾದಾನದ ಕಲೆ%

(*ಈ ಕಲೆಗಳ ಬಗ್ಗೆ ಪ್ರತ್ಯೇಕವಾಗಿ, ವಿವರವಾಗಿ ಬರೆದಿರುತ್ತೇನೆ ಮತ್ತು % ಬೇರೆ ಕಲೆಗಳ ಭಾಗವಾಗಿರುತ್ತದೆ.)

ತಂಡ ಕಟ್ಟುವ ಸಲುವಾಗಿ:

1.      ತಂಡದ ನಾಯಕರನ್ನು ನೇಮಿಸಬೇಕು. ನಾಯಕರ ಮೇಲೆ ತಂಡದ ಸದಸ್ಯರಿಗೆ ಸಂಪೂರ್ಣ ವಿಶ್ವಾಸವಿದ್ದಲ್ಲಿ ಅವರು ನಾಯಕರ ಅನುಪಸ್ಥಿತಿಯಲ್ಲೂ ಸಹ ಸಮರ್ಪಕವಾಗಿ ಕೆಲಸ ಮಾಡುತ್ತಾರೆ.

2.      ತಂಡದ ಪ್ರತಿಯೊಬ್ಬ ಸದಸ್ಯರ ಜೊತೆಯೂ ಒಳ್ಳೆಯ ಸೌಹಾರ್ದಯುತ ಬಾಂಧವ್ಯ ಬೆಳೆಸಿ.

3.      ತಂಡದ ಸಂವಹನೆಯ ರೂಪು ರೇಷೆಗಳನ್ನು ಚರ್ಚಿಸಿ. ಪ್ರಕ್ರಿಯೆ ಸುಲಲಿತಗೊಳಿಸಿ.

4.      ಒಂದು ತಂಡದಂತೆ ಕೆಲಸಮಾಡುವ ಅಭ್ಯಾಸವನ್ನು ಸದಸ್ಯರಲ್ಲಿ ಬೆಳೆಯುವಂತೆ ಮಾಡಿ.

5.      ತಂಡದಲ್ಲಿ ಸದಸ್ಯರ ನಡತೆಯ ನಿಯಮಾವಳಿ ಎಲ್ಲರಿಗೂ ತಿಳಿಯುವಂತೆ ಸ್ಪಷ್ಟಗೊಳಿಸಿ.

6.      ತಂಡದಲ್ಲಿ ಪ್ರತಿಯೊಬ್ಬ ಸದಸ್ಯನಿಗೂ ತನ್ನ ಕೆಲಸ/ಸಮಯ ಬಹಳ ಸ್ಪಷ್ಟವಾಗಿ ತಿಳಿದಿರಬೇಕು. ಜೊತೆಗೆ ಬೇರೆಯವರ ಕೆಲಸ/ಸಮಯ ಏನು ಎಂಬುದರ ಅರಿವೂ ಇರಬೇಕು.

7.      ತಂಡದಲ್ಲಿ ಸಾಮರಸ್ಯವಿರಬೇಕು, ಇಂದಿನ ದೈನಂದಿನ ಜೀವನದಲ್ಲಿ ಒಡಕು ಹುಟ್ಟಿಸುವ ಅಂಶಗಳಾದ ಜಾತಿ, ಧರ್ಮ, ಆಹಾರ, ವೇಷ-ಭೂಷದಂತಹ ವಿಷಯಗಳು ಮತ್ತು ವೈಯುಕ್ತಿಕ ಅಂಶಗಳಾದ ಅಹಂಕಾರ, ಮತ್ಸರ ಮುಂತಾದವು ತಂಡವನ್ನು ಕಾಡುತ್ತಿದ್ದಲ್ಲಿ ತಂಡದಿಂದ ಏನನ್ನೂ ಸಾಧಿಸಲು ಆಗುವುದಿಲ್ಲ.

ತಂಡರಚನೆಗೆ ಅನುಕೂಲವಾಗುವಂತಹ ಹಲವಾರು ಒಳಾಂಗಣ ಮತ್ತು ಹೊರಾಂಗಣ ಆಟಗಳು ಅಂತರ್ಜಾಲದಲ್ಲಿ ಲಭ್ಯವಿದೆ. ಇದನ್ನು ಆಡುವ ಮೂಲಕ ಬೇರೆ ಬೇರೆ ಶೈಕ್ಷಣಿಕ, ಸಾಮಾಜಿಕ ಹಿನ್ನೆಲೆಯಿಂದ ಬಂದಿರುವ ಸದಸ್ಯರಲ್ಲಿ ವೈವಿಧ್ಯತೆಯಲ್ಲಿ ಐಕ್ಯತೆ ಎಂಬಂತೆ “ನಾವು ಒಂದೇ ತಂಡ” ಎಂಬ ಭಾವನೆ ಬೆಳೆದು, ಅವರು ತಂಡಕ್ಕೋಸ್ಕರ ಕೆಲಸ ಮಾಡುವಂತೆ ಪ್ರೇರೇಪಣೆಗೆ ಒಳಗಾಗುತ್ತಾರೆ. ಇಂತಹ ಆಟಗಳನ್ನು ನಮ್ಮ ಮಕ್ಕಳು ಚಿಕ್ಕಂದಿನಿಂದಲೂ ಆಡುತ್ತಿರುತ್ತಾರೆ ಆದರೆ ಅವರಿಗೆ ಆಟಕ್ಕೂ ನಿಜ ಜೀವನಕ್ಕೂ ಇರುವ ಹೋಲಿಕೆ/ಸಂಬಂಧ ಅಥವಾ ಪ್ರಯೋಜನ ತಿಳಿದಿರುವುದಿಲ್ಲ.

ತಂಡರಚನೆ ಬಹಳ ಸುಧೀರ್ಘವಾದ ವಿಷಯ. ನಾನು ಕೇವಲ ಪಕ್ಷಿನೋಟ ಮಾತ್ರ ನೀಡಿದ್ದೇನೆ. ಇಂದಿನ ದಿನಗಳಲ್ಲಿ ತಂಡ ರಚನೆಯ ತಂತ್ರಾಂಶವಷ್ಟೇ ಅಲ್ಲ, ಮೊಬೈಲ್ ಆಪ್ ಕೂಡಾ ಬಂದಿವೆ. ಇವು ತಂಡರಚನೆಯ ಎಲ್ಲಾ ಪ್ರಕ್ರಿಯೆಯನ್ನು ಸ್ವಯಂಚಾಲತೀಕರಣಗೊಳಿಸಿವೆ. ನೀವೂ ನಿಮ್ಮ ತಂಡ ರಚಿಸಿಕೊಳ್ಳಿ.

 

 

 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಮುಸ್ಲಿಮರ ಬಗ್ಗೆ ನಿಂದನಾತ್ಮಕ, ಪ್ರಚೋದನಕಾರಿ ಹೇಳಿಕೆ : ಸಿ.ಟಿ ರವಿ ವಿರುದ್ಧ FIR

ಮುಸ್ಲಿಮರ ವಿರುದ್ಧ ನಿಂದನಾತ್ಮಕ ಹಾಗೂ ಪ್ರಚೋದನಕಾರಿ ಹೇಳಿಕೆ ನೀಡಿದ ವಿಧಾನಪರಿಷತ್ ಸದಸ್ಯ ಸಿ.ಟಿ ರವಿ ವಿರುದ್ಧ ಚಿಕ್ಕಮಗಳೂರು ನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ನಗರದ ಜಾಮಿಯಾ ಮಸೀದಿಯ ಅಧ್ಯಕ್ಷ ಮುದಸ್ಸಿರ್ ಪಾಷಾ ಅವರು...

ಹತ್ಯಾಕಾಂಡಕ್ಕೆ ಸಮನಾದ NEET ಹಗರಣ ನಡೆಯಲು ಬಿಟ್ಟ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಕೊಡಲಿ

ನೀಟ್ ಪರೀಕ್ಷೆಯ ಪ್ರಶ್ನೆ ಪತ್ರಿಕೆಗಳು ಲೀಕ್ ಆದ ನಂತರದ ಬೆಳವಣಿಗೆಗಳನ್ನು ಇಡೀ ದೇಶ ಗಮನಿಸುತ್ತಿದೆ. ಅದರಲ್ಲೂ ವಿಶೇಷವಾಗಿ ಜೂನ್ ಆರಂಭದಿಂದ ಇಲ್ಲಿಯವರೆಗೆ ದೇಶದ ವಿದ್ಯಾರ್ಥಿಗಳು ನಡೆಸುತ್ತಿರುವ ಆಂದೋಲನವನ್ನು ದೇಶದ ಜನತೆ ನೋಡುತ್ತಿದ್ದಾರೆ. ದೇಶದ...

ಸಿಜೆಪಿ ಮತ್ತು ಜೆನ್‌ ಜಿಫಿಕೇಶನ್: ಪ್ರಸ್ತುತ ಬೆಳವಣಿಗೆ, ಭವಿಷ್ಯದ ಸಾಧ್ಯತೆ

ಇತ್ತೀಚಿನ ಬೆಳವಣಿಗೆಗಳು ಕಳೆದ ಒಂದು ತಿಂಗಳಿಂದ ನಡೆಯುತ್ತಿರುವ ಸಿಜೆಪಿ (ಕಾಕ್ರೋಚ್‌ ಜನತಾ ಪಕ್ಷ) ಪ್ರತಿಭಟನೆ ಈಗ ತಾರ್ಕಿಕ ಹಂತಕ್ಕೆ ತಲಪುತ್ತಿದೆ. ಪ್ರಶ್ನೆಪತ್ರಿಕೆ ಸೋರಿಕೆಯ ಕಾರಣಕ್ಕೆ ನೀಟ್‌ನ (ರಾಷ್ಟ್ರೀಯ ಅರ್ಹತಾ ಹಾಗೂ ಪ್ರವೇಶ ಪರೀಕ್ಷೆ) ಮೊದಲ...

SIR ಕರ್ತವ್ಯದ ವೇಳೆ ಶಿಕ್ಷಕಿಗೆ ಹಾರ್ಟ್ ಅಟ್ಯಾಕ್: ಚಿಕಿತ್ಸೆ ಫಲಿಸದೇ ಸಾವು

ಕೇಂದ್ರ ಚುನಾವಣಾ ಆಯೋಗವು ರಾಜ್ಯದಲ್ಲಿ ನಡೆಸುತ್ತಿರುವ ಮತದಾರರ ಪಟ್ಟಿಯ 'ವಿಶೇಷ ಸಮಗ್ರ ಪರಿಷ್ಕರಣೆ' (SIR) ಕೆಲಸದ ಹೆಸರಿನಲ್ಲಿ ಶಿಕ್ಷಕರ ಮೇಲೆ ಹೇರುತ್ತಿರುವ ಅತಿಯಾದ ಮಾನಸಿಕ ಹಾಗೂ ದೈಹಿಕ ಒತ್ತಡಕ್ಕೆ ಮತ್ತೊಬ್ಬ ಶಿಕ್ಷಕಿ ಬಲಿಯಾಗಿದ್ದಾರೆ. ಬೆಂಗಳೂರಿನ...

ಎದೆ ಸೀಳಿದರೆ ಮೂರು ಅಕ್ಷರ ಬರಲ್ಲ, ಮುಲ್ಲಾನಿಗೂ ನೀಟ್‌ಗೂ ಏನು ಸಂಬಂಧ: ಸಿ.ಟಿ ರವಿ ವಿವಾದಾತ್ಮಕ ಹೇಳಿಕೆ

ದೇಶಾದ್ಯಂತ ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಹಾಗೂ ಪರೀಕ್ಷಾ ಅಕ್ರಮಗಳ ವಿರುದ್ಧ ವಿದ್ಯಾರ್ಥಿ ಮತ್ತು ಯುವಜನ ಸಂಘಟನೆಗಳು ಬೃಹತ್ ಪ್ರತಿಭಟನೆ ನಡೆಸುತ್ತಿವೆ. ಈ ನಡುವೆ ವಿದ್ಯಾರ್ಥಿಗಳ ಹೋರಾಟವನ್ನು ಕುಹಕವಾಡಿರುವ ವಿಧಾನ ಪರಿಷತ್ ಬಿಜೆಪಿ...

ಪ್ರತಿಭಟನೆಯನ್ನು ಹತ್ತಿಕ್ಕಲು ಅಕ್ಕಾಡಕ್ಕಿಳಿದಿವೆ ಹಿಂದುತ್ವವಾದಿ ಸೋಷಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ಸ್‌ ಮತ್ತು ಉಗ್ರ ಗೂಂಡಾ ಪಡೆ

ದೆಹಲಿಯ ಜಂತರ್ ಮಂತರ್‌ನಲ್ಲಿ ಜೂನ್ 20ರಂದು ಶುರುವಾಗಿದ್ದ ಈ ಆಂದೋಲನ ಇದೀಗ ದೇಶಾದ್ಯಂತ ತೀವ್ರ ಸ್ವರೂಪ ಪಡೆದುಕೊಂಡಿದೆ. ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಸಿಜೆಪಿ ಪಟ್ಟು ಹಿಡಿದಿದ್ದು, ಇಂದು...

ಜಿರಳೆಗಳನ್ನು ಸಾಯಿಸಿ ಎಂದು ವಿವಾದಾತ್ಮಕ ಪೋಸ್ಟ್‌ ಹಾಕಿದ ಪ್ರಜ್ಞಾ ಸಿಂಗ್ ಠಾಕೂರ್

ಮಾಜಿ ಬಿಜೆಪಿ ಸಂಸದೆ ಪ್ರಜ್ಞಾ ಸಿಂಗ್ ಠಾಕೂರ್ ಅವರು ದೇಶದಿಂದ ಜಿರಳೆಗಳನ್ನು ಶಾಶ್ವತವಾಗಿ ನಿರ್ಮೂಲನೆ ಮಾಡಲು ವ್ಯವಸ್ಥೆ ಮಾಡುವಂತೆ ದೇಶದ ನಾಯಕರಿಗೆ ಮನವಿ ಮಾಡಿದ್ದಾರೆ. X (ಟ್ವಿಟರ್) ನಲ್ಲಿ ಮಾಡಿದ ಪೋಸ್ಟ್‌ನಲ್ಲಿ, 2008 ರ...

ಸೋನಮ್ ವಾಂಗ್ಚುಕ್ ಮತ್ತು ಸರ್ಕಾರದ ಡೀಲ್‌ನಲ್ಲಿ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಅಂಶವೇ ಇಲ್ಲ

ಕೇಂದ್ರದ ಮೋದಿ ಸರ್ಕಾರ ತನ್ನ ಮೂರು ಪ್ರಮುಖ ಬೇಡಿಕೆಗಳನ್ನು ಈಡೇರಿಸಲು ಒಪ್ಪಿಕೊಂಡ ನಂತರ, ಪರಿಸರ ಹೋರಾಟಗಾರ ಸೋನಮ್ ವಾಂಗ್ಚುಕ್ ಜುಲೈ 23ರ ಗುರುವಾರ ತಮ್ಮ 26 ದಿನಗಳ ಸುದೀರ್ಘ ಉಪವಾಸ ಸತ್ಯಾಗ್ರಹವನ್ನು ಕೊನೆಗೊಳಿಸಿದ್ದಾರೆ....

“50 ಗ್ರಾಂ ಡ್ರಗ್ಸ್ ಇಟ್ಟು ಕೇಸ್ ಹಾಕ್ತೀನಿ!”: ಪ್ರತಿಭಟನಾ ನಿರತ ವಿದ್ಯಾರ್ಥಿಗಳಿಗೆ ಮಾದಕದ್ರವ್ಯ ಪ್ರಕರಣದ ಬೆದರಿಕೆಯೊಡ್ಡಿದ ಮುಂಬೈ ಪೊಲೀಸ್!

ಮುಂಬೈ: ದೇಶಾದ್ಯಂತ ವಿದ್ಯಾರ್ಥಿ ಸಮುದಾಯದ ಆಕ್ರೋಶ ತೀವ್ರಗೊಳ್ಳುತ್ತಿರುವ ಬೆನ್ನಲ್ಲೇ, ತಮ್ಮ ಹಕ್ಕುಗಳಿಗಾಗಿ ಧ್ವನಿ ಎತ್ತುತ್ತಿರುವ ಯುವಜನರನ್ನು ಹತೋಟಿಗೆ ತರಲು ಪೊಲೀಸರು ಯಾವ ಮಟ್ಟದ ದಮನಕಾರಿ ಮಾರ್ಗಗಳನ್ನು ತುಳಿಯುತ್ತಿದ್ದಾರೆ ಎಂಬುದಕ್ಕೆ ಮುಂಬೈನಲ್ಲಿ ನಡೆದ ಘಟನೆಯೊಂದು...

ಬಿಡದಿ ಟೌನ್‌ಶಿಪ್: 80% ರೈತರ ಒಪ್ಪಿಗೆ ಇದೆ ಎಂಬ ವಾದ ಸಾಬೀತುಪಡಿಸಿ – ಸರ್ಕಾರಕ್ಕೆ ಸಂಯುಕ್ತ ಹೋರಾಟ ಸವಾಲು

ಬಿಡದಿ ಟೌನ್‌ಶಿಪ್ ಯೋಜನೆಗೆ ಭೂಮಿ ನೀಡಲು ಉದ್ದೇಶಿತ ಪ್ರದೇಶದ ಶೇಕಡಾ 80 ರಷ್ಟು ರೈತರು ಒಪ್ಪಿದ್ದಾರೆ ಎಂಬ ಸರ್ಕಾರದ ವಾದಕ್ಕೆ ಯಾವುದೇ ವಾಸ್ತವಿಕ ಆಧಾರವಿಲ್ಲ. ಸರ್ಕಾರಕ್ಕೆ ಧೈರ್ಯವಿದ್ದರೆ ತನ್ನ ಈ ಹೇಳಿಕೆಯನ್ನು ಜನರ...