ಪಿ.ಬಿ ಮೆಹ್ತಾ, ಅರವಿಂದ್ ಸುಬ್ರಮಣಿಯನ್ ರಾಜೀನಾಮೆ: ಲೋಪಗಳನ್ನು ಒಪ್ಪಿಕೊಂಡ ಅಶೋಕ ವಿವಿ!

ಕಳೆದ ವಾರ ಉನ್ನತ ಶಿಕ್ಷಣ ತಜ್ಞರಾದ  ಪ್ರೊ. ಪ್ರತಾಪ್ ಭಾನು ಮೆಹ್ತಾ ಮತ್ತು ಅರವಿಂದ್ ಸುಬ್ರಮಣಿಯನ್ ಅಶೋಕ ವಿವಿಗೆ ರಾಜೀನಾಮೆ ನೀಡಿದ ಬೆನ್ನಲ್ಲೇ, ವಿವಿಯ ಸಾಂಸ್ಥಿಕ ಪ್ರಕ್ರಿಯೆಗಳಲ್ಲಿ ದೋಷಗಳು ಕಂಡುಬಂದಿದೆ ಎಂದು ಸೋನಿಪತ್‌ನ ಅಶೋಕ ವಿಶ್ವವಿದ್ಯಾಲಯವು ಒಪ್ಪಿಕೊಂಡಿದೆ.

ಖ್ಯಾತ ಅರ್ಥಶಾಸ್ತ್ರಜ್ಞ ಅರವಿಂದ್ ಸುಬ್ರಮಣಿಯನ್ ಮತ್ತು ಖ್ಯಾತ ರಾಜಕೀಯ ಶಾಸ್ತ್ರಜ್ಞ ಹಾಗೂ ವಿಶ್ಲೇಷಕ  ಪ್ರತಾಪ್ ಭಾನು ಮೆಹ್ತಾ ಇಬ್ಬರು ಶೈಕ್ಷಣಿಕ ಅಭಿವ್ಯಕ್ತಿ ಮತ್ತು ಸ್ವಾತಂತ್ರ್ಯಕ್ಕೆ ಅಲ್ಲಿ ಈಗ ಅವಕಾಶ ದೊರಕುತ್ತಿಲ್ಲ ಎಂದು ಉಲ್ಲೇಖಿಸಿ ಅಶೋಕ ವಿವಿಗೆ ರಾಜೀನಾಮೆ ನೀಡಿದ್ದರು.

ತಜ್ಞರ ರಾಜೀನಾಮೆಗೆ ಕಾರಣವಾದ ಅಶೋಕ ವಿವಿಯ ನಡವಳಿಕೆಯನ್ನು, ಆರ್‌ಬಿಐ ಮಾಜಿ ಗವರ್ನರ್ ರಾಜನ್ ಸೇರಿದಂತೆ ಹಲವಾರು ಶಿಕ್ಷಣ ತಜ್ಞರು ಟೀಕಿಸಿದ್ದರು.

ಖಾಸಗಿ ಅನುದಾನಿತ ಸಂಸ್ಥೆಯಾದ ಅಶೋಕ ವಿಶ್ವ ವಿದ್ಯಾಲಯವು “ಈ ಲೋಪಗಳನ್ನು” ಎಲ್ಲಾ ಮಧ್ಯಸ್ಥಗಾರರೊಂದಿಗೆ ಸಮಾಲೋಚಿಸಿ ಸರಿಪಡಿಸಲು ಕೆಲಸ ಮಾಡುತ್ತದೆ” ಎಂದು ಹೇಳಿದೆ.

ಇದನ್ನೂ ಓದಿ: ಸ್ವತಂತ್ರ ಮಾಧ್ಯಮಗಳನ್ನು ನಿಯಂತ್ರಿಸುವುದು ಹೇಗೆ?: ಪತ್ರಕರ್ತರೊಂದಿಗಿನ ಕೇಂದ್ರ ಸರ್ಕಾರದ ಗುಪ್ತ ಸಭೆಗಳ ವರದಿ ಸೋರಿಕೆ!

“ಸಾಂಸ್ಥಿಕ ಪ್ರಕ್ರಿಯೆಗಳಲ್ಲಿ ಕೆಲವು ನ್ಯೂನತೆಗಳು ಕಂಡುಬಂದಿವೆ ಎಂದು ನಾವು ಒಪ್ಪಿಕೊಳ್ಳುತ್ತೇವೆ, ಅದು ಎಲ್ಲಾ ಮಧ್ಯಸ್ಥಗಾರರೊಂದಿಗೆ ಸಮಾಲೋಚಿಸಿ ಸರಿಪಡಿಸಲು ನಾವು ಕೆಲಸ ಮಾಡುತ್ತೇವೆ. ಇದು ಅಶೋಕ ವಿಶ್ವವಿದ್ಯಾಲಯದ ಆದರ್ಶಗಳ ಕೇಂದ್ರಬಿಂದುವಾಗಿರುವ ಶೈಕ್ಷಣಿಕ ಸ್ವಾಯತ್ತತೆ ಮತ್ತು ಸ್ವಾತಂತ್ರ್ಯದ ಬಗೆಗಿನ ನಮ್ಮ ಬದ್ಧತೆಯನ್ನು ದೃಢ ಪಡಿಸುತ್ತದೆ” ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.

ವಿವಿಯ ಜಂಟಿ ಹೇಳಿಕೆಗೆ ಕುಲಪತಿ ರುದ್ರಂಗ್‌ಶು ಮುಖರ್ಜಿ, ಉಪಕುಲಪತಿ ಮಲಬಿಕಾ ಸರ್ಕಾರ್, ಮೆಹ್ತಾ, ಸುಬ್ರಮಣಿಯನ್ ಮತ್ತು ವಿಶ್ವವಿದ್ಯಾಲಯದ ಟ್ರಸ್ಟಿಗಳ ಮಂಡಳಿಯ ಅಧ್ಯಕ್ಷ ಆಶಿಶ್ ಧವನ್ ಸಹಿ ಹಾಕಿದ್ದಾರೆ.

ನ್ಯಾಷನಲ್ ಡೆಮಾಕ್ರಟಿಕ್ ಅಲೈಯನ್ಸ್ (ಎನ್‌ಡಿಎ) ಸರ್ಕಾರದ ವಿಮರ್ಶಕ ಮೆಹ್ತಾ ಅವರು ಜುಲೈ 2019 ರಲ್ಲಿ ಅಶೋಕ ವಿಶ್ವವಿದ್ಯಾಲಯದ ಉಪಕುಲಪತಿ ಸ್ಥಾನದಿಂದ ಹೊರಬಂದರೂ ಪ್ರಾಧ್ಯಾಪಕರಾಗಿ ಉಳಿದಿದ್ದರು. ಆದರೆ, ಮಂಗಳವಾರ, ಅವರು ಹಠಾತ್ತನೆ ಆ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

“ವಿಶ್ವವಿದ್ಯಾಲಯದೊಂದಿಗಿನ ಒಡನಾಟವನ್ನು ರಾಜಕೀಯ ಹೊಣೆಗಾರಿಕೆ ಎಂದು ಪರಿಗಣಿಸಬಹುದು” ಎಂದು ಹೇಳಿದ್ದರು. ಎರಡು ದಿನಗಳ ನಂತರ, ಪ್ರಧಾನಿ ನರೇಂದ್ರ ಮೋದಿಯವರ ಮಾಜಿ ಮುಖ್ಯ ಆರ್ಥಿಕ ಸಲಹೆಗಾರರಾದ ಅರವಿಂದ್ ಸುಬ್ರಮಣಿಯನ್ ಅವರು ಮೆಹ್ತಾ ಅವರ ನಿರ್ಗಮನದ ಬಗ್ಗೆ ಬೇಸರ ವ್ಯಕ್ತಪಡಿಸಿ ಅಧ್ಯಾಪಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

ಮಾನವಿಕ ಶಾಸ್ತ್ರಗಳಿಗೆ ಮೀಸಲಾಗಿರುವ ಭಾರತದ ಮೊದಲ ಖಾಸಗಿ-ಧನಸಹಾಯ ಆಶ್ರಯಿತ ಉನ್ನತ ಶಿಕ್ಷಣ ಸಂಸ್ಥೆಯೆಂದು ಹೇಳಲಾದ ಅಶೋಕ ವಿವಿಗೆ ಇಬ್ಬರು ರಾಜೀನಾಮೆ ನೀಡಿದ್ದಕ್ಕೆ ಅಂತರರಾಷ್ಟ್ರೀಯ ಮಟ್ಟದಲ್ಲಿ  ಪ್ರತಿಭಟನೆ ಹುಟ್ಟುಹಾಕಿತ್ತು.

ಮೆಹ್ತಾ ಮತ್ತು ಸುಬ್ರಮಣಿಯನ್ ರಾಜೀನಾಮೆಗೆ ಕಾರಣವಾದ ವಿವಿ ವಿರುದ್ಧ ದನಿ ಎತ್ತಿದವರಲ್ಲಿ, ಮಾಜಿ ರಿಸರ್ವ್ ಬ್ಯಾಂಕ್ ಗವರ್ನರ್ ರಘುರಾಮ್ ರಾಜನ್ ಮತ್ತು ಹಾರ್ವರ್ಡ್, ಆಕ್ಸ್‌ಫರ್ಡ್ ಮತ್ತು ಬ್ರೌನ್ ವಿಶ್ವವಿದ್ಯಾಲಯಗಳ ಪ್ರಾಧ್ಯಾಪಕರು ಮತ್ತು ಶಿಕ್ಷಣ ತಜ್ಞರು ಮತ್ತು ಮ್ಯಾಸಚೂಸೆಟ್ಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಅಧ್ಯಾಪಕರು ಸೇರಿದ್ದಾರೆ.


ಇದನ್ನೂ ಓದಿ: ಅಂಬಾನಿಗಾಗಿ NIA ತನಿಖೆ – ಪುಲ್ವಾಮಾ ದಾಳಿ ಹೇಗೆಂಬುದು ಪತ್ತೆಯಾಗಲಿಲ್ಲ?: ಶಿವಸೇನೆ ಪ್ರಶ್ನೆ

Donate

ನ್ಯಾಯದ ಜೊತೆಗಿರಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ

ಜನಪರ ಸ್ವತಂತ್ರ ಪತ್ರಿಕೋದ್ಯಮವೇ ನಮ್ಮ ಆಶಯ. ನಿಮ್ಮಗಳ ಬೆಂಬಲವೇ ನಮಗೆ ಬಲ. ನ್ಯಾಯದ ಜೊತೆಗಿರಲು ಬಯಸುವ, ಸತ್ಯಪಥವನ್ನು ತುಳಿಯಲು ಪ್ರೋತ್ಸಾಹಿಸುವವರು ಬೆಂಬಲಿಸಿ. ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ ಪಾವತಿಸಬಹುದು.
ಧನ್ಯವಾದಗಳು

Independent journalism can’t be independent without your support, contribute by clicking below.

ಪ್ರತಿವಾರದ ವಿದ್ಯಮಾನಗಳ ವಿಶ್ಲೇಷಣೆಗಳು, ಅಂಕಣಗಳು ಹಾಗೂ ವಿಶೇಷ ಬರಹಗಳನ್ನು ಓದಲು ನ್ಯಾಯಪಥ ಪತ್ರಿಕೆಗೆ ಚಂದಾದಾರರಾಗಿ. ಚಂದಾ ಹಣವನ್ನು ಪಾವತಿಸಲು ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ.
Avatar
ನಾನು ಗೌರಿ ಡೆಸ್ಕ್
+ posts

1 COMMENT

  1. ಮನುವಾದಿಗಳ ಆಡಳಿತ ಹೀಗೇ ಮುಂದುವರೆದಿದೆ, ಭಾರತದಲ್ಲಿ ಸತ್ಯ ಹೇಳುವವರಿಗೆ ಜಾಗವೇ ಇಲ್ಲದಂತೆ ಆಗುತ್ತದೆ.

LEAVE A REPLY

Please enter your comment!
Please enter your name here