Homeಮುಖಪುಟಪಾಕಿಸ್ತಾನ: ಸ್ಪೋಟದಿಂದಾಗಿ 10 ಮಂದಿ ದುರ್ಮರಣ

ಪಾಕಿಸ್ತಾನ: ಸ್ಪೋಟದಿಂದಾಗಿ 10 ಮಂದಿ ದುರ್ಮರಣ

- Advertisement -
- Advertisement -

ಪಾಕಿಸ್ತಾನದ ಕರಾಚಿಯ ಶೇರ್ಷಾ ಪ್ರದೇಶದ ಪರಚಾ ಚೌಕ್ ಬಳಿ ಶನಿವಾರ ಸಂಭವಿಸಿದ ಸ್ಫೋಟದಿಂದಾಗಿ ಕನಿಷ್ಠ 10 ಜನರು ಸಾವನ್ನಪ್ಪಿದ್ದಾರೆ ಮತ್ತು 12 ಮಂದಿ ಗಾಯಗೊಂಡಿದ್ದಾರೆ ಎಂದು ಕರಾಚಿ ಪೊಲೀಸ್ ವಕ್ತಾರರು ಮಾಹಿತಿ ನೀಡಿದ್ದಾರೆ.

ಖಾಸಗಿ ಬ್ಯಾಂಕ್‌ನ ಕೆಳಗಿರುವ ಒಳಚರಂಡಿಯಲ್ಲಿ ಸ್ಫೋಟ ಸಂಭವಿಸಿದೆ ಎಂದು ಎಸ್‌ಎಚ್‌ಒ ಜಾಫರ್ ಅಲಿ ಷಾ ಹೇಳಿದ್ದು, ಆವರಣವನ್ನು ತೆರವುಗೊಳಿಸುವಂತೆ ನೋಟಿಸ್ ನೀಡಿದ್ದಾರೆ.

ಸ್ಫೋಟದಿಂದಾಗಿ ಬ್ಯಾಂಕ್‌ನ ಕಟ್ಟಡ ಮತ್ತು ಹತ್ತಿರದ ಪೆಟ್ರೋಲ್ ಪಂಪ್‌ಗೆ ಹಾನಿಯಾಗಿದೆ. ಕಟ್ಟಡದ ಕೆಳಗಿರುವ ಡ್ರೈನಲ್ಲಿ ಅನಿಲಗಳು ಶೇಖರಿಸಿರುವುದು ಸ್ಫೋಟಕ್ಕೆ ಕಾರಣ ಎಂದು ಶಂಕಿಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಸ್ಫೋಟದ ಸ್ಥಳವನ್ನು ಪರಿಶೀಲಿಸಲು ಬಾಂಬ್ ನಿಷ್ಕ್ರಿಯ ದಳವನ್ನು ಕರೆಯಲಾಗಿದೆ. ತಜ್ಞರು ತನ್ನ ವರದಿಯನ್ನು ಸಲ್ಲಿಸಿದ ನಂತರ ಕಾರಣವನ್ನು ಖಚಿತವಾಗಿ ನಿರ್ಧರಿಸಬಹುದು ಎಂದು ಅವರು ಪ್ರತಿಕ್ರಿಯೆ ನೀಡಿರುವುದಾಗಿ ಪಾಕಿಸ್ತಾನದ ಮಾಧ್ಯಮ ‘ಡಾನ್’ ವರದಿ ಮಾಡಿದೆ.

ಹಾನಿಗೊಳಗಾದ ಕಟ್ಟಡ ಮತ್ತು ಅವಶೇಷಗಳು ನೆಲದ ಮೇಲೆ ಉರುಳಿರುವುದನ್ನು ಸ್ಥಳದ ದೃಶ್ಯಾವಳಿಗಳು ತೋರಿಸುತ್ತಿವೆ. ಸ್ಫೋಟದ ಸ್ಥಳದಲ್ಲಿ ವಾಹನಗಳು ಹಾನಿಗೊಳಗಾಗಿವೆ. ಜನರು ಅವಶೇಷಗಳನ್ನು ತೆಗೆದುಹಾಕಲು ಪ್ರಯತ್ನಿಸುತ್ತಿರುವುದನ್ನು ಕಾಣಬಹುದು. ಅವಶೇಷಗಳಡಿಯಲ್ಲಿ ಜನರು ಸಿಲುಕಿರುವ ಬಗ್ಗೆ ವರದಿಯಾಗಿದೆ. ಇದು ತಕ್ಷಣ ವರದಿಯಾಗಿದ್ದು, ಮುಂದಿನ ಬೆಳವಣಿಗೆಗಳು ಬದಲಾಗಲೂಬಹುದು ಎಂದು ಡಾನ್‌ ತಿಳಿಸಿದೆ.


ಇದನ್ನೂ ಓದಿರಿ: ಕುಸ್ತಿಪಟುಗೆ ವೇದಿಕೆಯಲ್ಲಿ ಕಪಾಳಕ್ಕೆ ಭಾರಿಸಿದ ಬಿಜೆಪಿ ಸಂಸದ; ವಿಡಿಯೊ ವೈರಲ್

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ಭಾರತದಲ್ಲಿ ಬಿಕ್ಕಟ್ಟಿನಲ್ಲಿ ಪತ್ರಿಕಾ ಸ್ವಾತಂತ್ರ್ಯ: ವರದಿ

0
ಭಾರತದಲ್ಲಿ ಪತ್ರಿಕಾ ಸ್ವಾತಂತ್ರ್ಯದ ಸ್ಥಿತಿ ಅತ್ಯಂತ ಕಟ್ಟದಾಗಿದ್ದು, ನೆರೆಯ ಪಾಕಿಸ್ತಾನ, ಶ್ರೀಲಂಕಾ, ನೇಪಾಳಕ್ಕಿಂತಲೂ ಕಳಪೆಯಾಗಿದೆ. ಇದು ಪ್ರಜಾಪ್ರಭುತ್ವ ದೇಶಕ್ಕೆ ಯೋಗ್ಯವಾದ ಬೆಳವಣಿಗೆಯಲ್ಲ ಎಂದು ರಿಪೋರ್ಟರ್ಸ್ ವಿಥೌಟ್ ಬಾರ್ಡರ್ಸ್ (ಆರ್‌ಎಸ್‌ಎಫ್) ಬಿಡುಗಡೆ ಮಾಡಿದ 2024ರ...