Homeಮುಖಪುಟಅಜೀಂ ಪ್ರೇಮ್‌ಜಿ ದೇಶದ ಅತಿ ದೊಡ್ಡ ದಾನಿ: ದಿನಕ್ಕೆ 27 ಕೋಟಿ ರೂ. ದೇಣಿಗೆ

ಅಜೀಂ ಪ್ರೇಮ್‌ಜಿ ದೇಶದ ಅತಿ ದೊಡ್ಡ ದಾನಿ: ದಿನಕ್ಕೆ 27 ಕೋಟಿ ರೂ. ದೇಣಿಗೆ

- Advertisement -
- Advertisement -

ವಿಪ್ರೋದ ಸಂಸ್ಥಾಪಕ ಅಧ್ಯಕ್ಷ, ಕೈಗಾರಿಕೋದ್ಯಮಿ ಅಜೀಂ ಪ್ರೇಮ್‌ಜಿ ಅವರು 2020-21ನೇ ಸಾಲಿನಲ್ಲಿ 9,713 ಕೋಟಿ ರೂಪಾಯಿ ದಾನ ಮಾಡುವ ಮೂಲಕ ಭಾರತದ ದಾನಿಗಳಲ್ಲಿ ಮೊದಲಿಗರಾಗಿದ್ದಾರೆ. ದಿನಕ್ಕೆ 27 ಕೋಟಿ ರೂಪಾಯಿಗಳನ್ನು ದೇಣಿಗೆ ನೀಡಿದ್ದಾರೆ ಎಂದು ವರದಿಯಾಗಿದೆ.

ಎಡೆಲ್‌ಗಿವ್ ಹುರುನ್ ಇಂಡಿಯಾ ಫಿಲಾಂತ್ರಪಿ ಪಟ್ಟಿ 2021 ರ ಪ್ರಕಾರ ಅಜೀಂ ಪ್ರೇಮ್‌ಜಿ ಕೊರೊನಾ ಸಾಂಕ್ರಾಮಿಕದಿಂದ ಜನ ಸಂಕಷ್ಟ ಪಡುತ್ತಿದ್ದ ವರ್ಷದಲ್ಲಿ ತಾವು ನೀಡುತ್ತಿದ್ದ ದೇಣಿಗೆಯನ್ನು ಸುಮಾರು ನಾಲ್ಕನೇ ಒಂದು ಭಾಗದಷ್ಟು ಹೆಚ್ಚಿಸಿದ್ದಾರೆ ಎನ್ನಲಾಗಿದೆ.

ಎಡೆಲ್‌ಗಿವ್ ಹುರುನ್ ಇಂಡಿಯಾ ಫಿಲಾಂತ್ರಪಿ ಪಟ್ಟಿಯಲ್ಲಿ ಹೆಚ್‌ಸಿಎಲ್‌ನ ಶಿವ ನಾಡಾರ್ ಎರಡನೇ ಸ್ಥಾನದಲ್ಲಿದ್ದಾರೆ. ಅಭಿವೃಧಿ ಕಾರಣಗಳಿಗಾಗಿ 1,263 ಕೋಟಿ ರೂಪಾಯಿ ದಾನ ಮಾಡಿದ್ದಾರೆ.

ಇದನ್ನೂ ಓದಿ: ‘ರಾಹುಲ್ ಗಾಂಧಿಯ ಸಮಸ್ಯೆಯೇನೆಂದರೆ…!’: ಪ್ರಶಾಂತ್ ಕಿಶೋರ್ ಖಾಸಗಿ ಮಾತು ವೈರಲ್

ದೇಶದ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿರುವ ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಖೇಶ್ ಅಂಬಾನಿ 577 ಕೋಟಿ ರೂಪಾಯಿ ದಾನ ಮಾಡಿ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ. ಅವರ ನಂತರ ಕುಮಾರ ಮಂಗಳಂ ಬಿರ್ಲಾ ಇದ್ದು, 377 ಕೋಟಿ ರೂಪಾಯಿ ದಾನ ಮಾಡಿದ್ದಾರೆ.

ಎರಡನೇ ಶ್ರೀಮಂತ ಭಾರತೀಯ ಮತ್ತು ಅದಾನಿ ಸಮೂಹದ ಅಧ್ಯಕ್ಷ ಗೌತಮ್ ಅದಾನಿ ವಿಪತ್ತು ಪರಿಹಾರಕ್ಕಾಗಿ  130 ಕೋಟಿ ರೂಪಾಯಿ ದೇಣಿಗೆ ನೀಡುವ ಮೂಲಕ ಪಟ್ಟಿಯಲ್ಲಿ ಎಂಟನೇ ಸ್ಥಾನದಲ್ಲಿದ್ದಾರೆ.


ಇದನ್ನೂ ಓದಿ: ಫ್ಯಾಕ್ಟ್‌ಚೆಕ್: ಗೋಮೂತ್ರ ಬಳಕೆಯಿಂದ ಕ್ಯಾನ್ಸರ್ ಕಡಿಮೆಯಾಗಿದೆ ಎಂದು ಆಸ್ಕರ್ ಫರ್ನಾಂಡಿಸ್ ಹೇಳಿರಲಿಲ್ಲ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ರಜ್ವಲ್ ರೇವಣ್ಣಗೆ ಶಿಕ್ಷೆಯಾಗದಿದ್ದರೆ ಮತ್ತೆ ಹಾಗೆ ಮಾಡ್ತಾರೆ: ಅತ್ಯಾಚಾರ ಸಂತ್ರಸ್ತೆಯ ಸಹೋದರಿ ಹೇಳಿಕೆ

0
"ಪ್ರಜ್ವಲ್ ಮತ್ತು ರೇವಣ್ಣ ಯಾವತ್ತೂ ತಲೆ ಎತ್ತಿ ನಡೆಯಬಾರದು, ಅಂತಹ ಶಿಕ್ಷೆಯಾಗಬೇಕು" ಎಂದು ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆಯೊಬ್ಬರ ಸಹೋದರಿ ಮಾಲಾ (ಹೆಸರು ಬದಲಿಸಲಾಗಿದೆ) ಹೇಳಿರುವುದಾಗಿ thenewsminute.com ವರದಿ ಮಾಡಿದೆ. ಮಾಲಾಗೆ ತನ್ನ ಸಹೋದರಿ...