Homeಮುಖಪುಟಭೀಮಾ ಕೋರೆಗಾಂವ್ ಪ್ರಕರಣ: ಫಾದರ್ ಸ್ಟಾನ್ ಸ್ವಾಮಿಗೆ ಮತ್ತೆ ಜಾಮೀನು ನಿರಾಕರಣೆ

ಭೀಮಾ ಕೋರೆಗಾಂವ್ ಪ್ರಕರಣ: ಫಾದರ್ ಸ್ಟಾನ್ ಸ್ವಾಮಿಗೆ ಮತ್ತೆ ಜಾಮೀನು ನಿರಾಕರಣೆ

- Advertisement -
- Advertisement -

2018 ರಲ್ಲಿ ಭೀಮಾ ಕೋರೆಗಾಂವ್ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಬಂಧಿತರಾಗಿರುವ ಫಾದರ್ ಸ್ಟಾನ್ ಸ್ವಾಮಿ ಅವರಿಗೆ ಜಾಮೀನು ನೀಡಲು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ)ಯ ವಿಶೇಷ ನ್ಯಾಯಾಲಯ ಸೋಮವಾರ ನಿರಾಕರಿಸಿದೆ.

2018 ರಲ್ಲಿ ಭೀಮಾ ಕೋರೆಗಾಂವ್‌ನಲ್ಲಿ ಗಲಭೆಗಳನ್ನು ಪ್ರಚೋದಿಸುವಲ್ಲಿ ಪಾತ್ರವಹಿಸಿದ ಆರೋಪದ ಮೇಲೆ ಸ್ವಾಮಿ ಅವರನ್ನು ಅಕ್ಟೋಬರ್ 8 ರಂದು ರಾಂಚಿಯಲ್ಲಿರುವ ಅವರ ಮನೆಯಿಂದ ಬಂಧಿಸಲಾಗಿತ್ತು. ನಂತರ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ತಾಲೋಜ ಜೈಲಿನಲ್ಲಿರಿಸಲಾಯಿತು. 83 ವರ್ಷದ ರಾಂಚಿ ನಿವಾಸಿ ಸ್ವಾಮಿ ಕಳೆದ ಐದು ತಿಂಗಳಿನಿಂದ ತಾಲೋಜ ಕೇಂದ್ರ ಕಾರಾಗೃಹದಲ್ಲಿ ಬಂಧಿಯಾಗಿದ್ದಾರೆ.

ಎನ್‌ಐಎ ಸ್ವಾಮಿಯವರನ್ನು ಅಕ್ಟೋಬರ್ 7 ರಂದು ರಾಂಚಿಯಲ್ಲಿ ಬಂಧಿಸಿ, ಮರುದಿನ ಮುಂಬೈಗೆ ಕರೆತಂದು ಅವರು ಮತ್ತು ಇತರ ಏಳು ಜನರ ವಿರುದ್ಧ ಚಾರ್ಜ್ ಶೀಟ್ ದಾಖಲಿಸಿತ್ತು. ಅಂದಿನಿಂದ ಅವರು ನ್ಯಾಯಾಂಗ ಬಂಧನದಲ್ಲಿದ್ದಾರೆ.

ಸ್ವಾಮಿ ಅವರು ಪ್ರಕರಣದ ಅರ್ಹತೆಗಳ ಜೊತೆಗೆ ಪ್ರಾಥಮಿಕವಾಗಿ ವೈದ್ಯಕೀಯ ಆಧಾರದ ಮೇಲೆ ಜಾಮೀನು ಕೋರಿದ್ದರು.

ತನ್ನ ಜಾಮೀನು ಅರ್ಜಿಯಲ್ಲಿ, ಸ್ವಾಮಿ ತನ್ನ ಬಂಧನವು ಅಸಮರ್ಪಕವಾಗಿದೆ ಮತ್ತು ದೊಷಪೂರಿತವಾಗಿದೆ ಎಂದು ಹೇಳಿದ್ದರು. ಎಫ್‌ಐಆರ್ ದಾಖಲಾದ ಎರಡು ವರ್ಷಗಳ ನಂತರವೂ ಬಂಧನ ಮಾಡಿರಲಿಲ್ಲ. ಅವರು ವಿದೇಶಕ್ಕೆ ಪರಾರಿಯಾಗಬಲ್ಲರು ಅಥವಾ ಸಾಕ್ಷಾಧಾರಗಳನ್ನು ಹಾಳುಮಾಡುವ ವ್ಯಕ್ತಿಯೆಂದು ಪರಿಗಣಿಸಲಾಗಿಲ್ಲ ಎಂಬುದಕ್ಕೆ ಇದೇ ಸಾಕ್ಷಿ ಎಂದು ಅರ್ಜಿಯಲ್ಲಿ ವಿವರಿಸಲಾಗಿತ್ತು.

ಈ ಹಿರಿಯ ನಾಗರಿಕರರಾದ ಸ್ಟಾನ್ ಸ್ವಾಮಿ ಪಾರ್ಕಿನ್ಸನ್ ಕಾಯಿಲೆಯಿಂದ ಬಳಲುತ್ತಿದ್ದಾರೆ ಎಂದು ಅವರ ವಕೀಲ ಷರೀಫ್ ಶೇಖ್ ವರದಿ ಸಲ್ಲಿಸಿದರು ಮತ್ತು ಆರೋಗ್ಯ ಕಾರಣಗಳಿಂದಾಗಿ ಅವರನ್ನು ಜೈಲು ಆಸ್ಪತ್ರೆಗೆ ವರ್ಗಾಯಿಸಬೇಕಾಯಿತು ಎಂಬುದನ್ನು ಎತ್ತಿ ತೋರಿಸಿದರು.

ನವೆಂಬರ್‌ನಲ್ಲಿ ಅವರ ವಕೀಲ ಷರೀಫ್ ಶೇಖ್ ಅವರ ಮೂಲಕ ಸಲ್ಲಿಸಲಾದ 31 ಪುಟಗಳ ಜಾಮೀನು ಅರ್ಜಿಯಲ್ಲಿ, ಭಾರತದಲ್ಲಿ ಸ್ವಾಮಿ ಅವರು ಕೈಗೊಂಡ ಜಾತಿ ಮತ್ತು ಭೂ ಹೋರಾಟಗಳು, ಆದಿವಾಸಿಗಳ ಹೋರಾಟಗಳು ಹಾಗೂ ಅವರ ಬರಹಗಳ ಕಾರಣದಿಂದ ತನಿಖಾ ಸಂಸ್ಥೆ ಅವರನ್ನು ಗುರಿಯಾಗಿಸಿಕೊಂಡಿದೆ ಎಂದು ತಿಳಿಸಿತ್ತು.

ಸ್ವಾಮಿಯವರ ಸಂಘಟನೆ ಪರ್‌ಸುಕ್ಯುಟೆಡ್ ಪ್ರಿಸರ್ಸ್‌ ಸಾಲಿಡೆಟರಿ ಕಮೀಟಿ (ಪಿಪಿಎಸ್‌ಸಿ) ಜೊತೆಗೆ ವಿವಿದ ಶೋಷಿತ ಜನರು ಕಾನೂನು ನೆರವು ಪಡೆಯಲು ನಡೆಸಿದ ಪತ್ರ ವ್ಯವಹಾರಗಳೇ ಪುರಾವೆಗಳು ಎಂದು ಎನ್‌ಐಎ ಹೇಳಿಕೊಂಡಿದೆ. ಪಿಪಿಎಸ್‌ಸಿ ಸಂಘಟನೆಯು ಮಾವೋವಾದಿಗಳೆಂದು ಸುಳ್ಳು ಆರೋಪ ಹೊರಿಸಿರುವ ವಿಚಾರಣಾಧೀನ ಆದಿವಾಸಿಗಳು ಮತ್ತು ದಲಿತರಿಗಾಗಿ ಕೆಲಸ ಮಾಡುತ್ತದೆ ಎಂದು ವಕೀಲರು ವಿವರಿಸಿದ್ದರು.

ಸ್ವಾಮಿ ಅವರ ನಿವಾಸದಲ್ಲಿ ಎರಡು ದಾಳಿಗಳನ್ನು ನಡೆಸಿದ ನಂತರ ಏನೂ ಕಂಡುಬಂದಿಲ್ಲ. ವಾಸ್ತವವಾಗಿ, ಬಾಂಬೆ ಹೈಕೋರ್ಟ್‌ನಲ್ಲಿ ಸ್ವಾಮಿ ಸಲ್ಲಿಸಿದ್ದ ಮನವಿಯಲ್ಲಿ ಪುಣೆ ಪೊಲೀಸರು ದಾಖಲೆಯಲ್ಲಿ “ಅವರು ಆರೋಪಿಯಲ್ಲದ ಕಾರಣ ಅವರನ್ನು ಬಂಧಿಸುವ ಉದ್ದೇಶವಿರಲಿಲ್ಲ” ಎಂದು ಹೇಳಿದ್ದಾರೆ.

ಸ್ವಾಮಿ ವಿರುದ್ಧ ದಾಖಲಾದ ಎನ್‌ಐಎ ಚಾರ್ಜ್‌ಶೀಟ್‌ನಲ್ಲಿ ಸ್ವಾಮಿಯವರು ನಿಷೇಧಿತ ಸಂಘಟನೆಯ ಸಿಪಿಐ (ಮಾವೋವಾದಿ) ಸದಸ್ಯರೆಂದು ಅಪಾದಿಸಿದ್ದು, ಪಕ್ಷದ ಅನೇಕ ಸದಸ್ಯರ ಬಂಧನದ ನಂತರ ಅದರ ಚಟುವಟಿಕೆಗಳನ್ನು ಹರಡುವ ಜವಾಬ್ದಾರಿಯನ್ನು ಅವನಿಗೆ ನೀಡಲಾಗಿತ್ತು ಎಂದೂ ಆರೋಪ ಮಾಡಿದೆ. ಸ್ವಾಮಿ ವಿಸ್ತಾಪನ್ ವಿರೋಧಿ ಜನ್ ವಿಕಾಸ್ ಆಂದೋಲನ್ ಮತ್ತು ಪೀಪಲ್ಸ್ ಯೂನಿಯನ್ ಫಾರ್ ಸಿವಿಲ್ ಲಿಬರ್ಟೀಸ್‌ನಂತಹ ಸಿಪಿಐ (ಮಾವೋವಾದಿಗಳ) ಬೆಂಬಲಿತ ಸಂಘಟನೆಗಳ ತೀವ್ರ ಬೆಂಬಲಿಗರಾಗಿದ್ದರು ಎಂದು ಆರೋಪ ಮಾಡಲಾಗಿದೆ.

ಜಾರ್ಖಂಡ್‌ನಲ್ಲಿ ಎನ್‌ಜಿಒ ನಡೆಸುತ್ತಿರುವ ಸ್ವಾಮಿ, ತಮ್ಮ ಲ್ಯಾಪ್‌ಟಾಪ್‌ನಲ್ಲಿ ಕಂಡುಬರುವ ಪುರಾವೆಗಳನ್ನು “ಸುಲಭವಾಗಿ ಕುಶಲತೆಯಿಂದ ಸೇರಿಸಬಹುದು” ಎಂದು ವಿವರಿಸಿ ತಮ್ಮ ಮೇಲಿನ ಆರೋಪಗಳನ್ನು ನಿರಾಕರಿಸಿದ್ದರು.

ಡಿಸೆಂಬರ್ 31, 2017 ರಂದು ಎಲ್ಗರ್ ಪರಿಷತ್ ಕಾರ್ಯಕ್ರಮದ ಸಂಘಟನೆಯೊಂದಿಗೆ ಅವರು ಎಲ್ಲಿಯೂ ಸಂಪರ್ಕ ಹೊಂದಿಲ್ಲ ಎಂದು ಜಾಮೀನು ಅರ್ಜಿಯಲ್ಲಿ ತಿಳಿಸಲಾಗಿದೆ.
ಈ ಪ್ರಕರಣದಲ್ಲಿ ಇತರರ ಬಂಧನವನ್ನು ಖಂಡಿಸಿ ಸ್ವಾಮಿ ಸಭೆಗಳನ್ನು ನಡೆಸುತ್ತಿದ್ದುದು ಕಂಡುಬಂದಿದೆ ಎಂದು ಎನ್‌ಐಎ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಪ್ರಕಾಶ್ ಶೆಟ್ಟಿ ಮೂಲಕ ತಿಳಿಸಿತ್ತು ಮತ್ತು ಅವರ ಎನ್‌ಜಿಒ ವಿದೇಶಿ ಹಣವನ್ನು ಪಡೆದಿರುವುದಕ್ಕೆ ಪುರಾವೆಗಳಿವೆ ಎಂದು ಆರೋಪಿಸಿತ್ತು.

ಕಳೆದ ವರ್ಷ ಅಕ್ಟೋಬರ್‌ನಲ್ಲಿ, ಸುಪ್ರೀಂ ಕೋರ್ಟ್‌ನ ನಿರ್ದೇಶನದ ಮೇರೆಗೆ ನೇಮಕಗೊಂಡ ಉನ್ನತ ಸಮಿತಿಯು ಕೊವಿಡ್ -19 ಸಾಂಕ್ರಾಮಿಕ ಸಮಯದಲ್ಲಿ ಜೈಲುಗಳಲ್ಲಿ ಸಂದಣಿಯನ್ನು ನಿಯಂತ್ರಿಸಲು ಶಿಫಾರಸು ಮಾಡಿದ್ದ ಮಾರ್ಗಸೂಚಿಗಳನ್ನು ಉಲ್ಲೇಖಿಸಿ ಸ್ವಾಮಿ ಮಧ್ಯಂತರ ಜಾಮೀನು ಕೋರಿದ್ದರು.


ಇದನ್ನೂ ಓದಿ: ಸ್ಟಾನ್ ಸ್ವಾಮಿ ಬಂಧನ: ದಸ್ತಗಿರಿಯಾದದ್ದು ಆದಿವಾಸಿಗಳ ಕೊರಳ ದನಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಜೆಪಿಗೆ ಸಂಸದ ಸಂಗಣ್ಣ ಕರಡಿ ರಾಜೀನಾಮೆ: ಕಾಂಗ್ರೆಸ್ ಸೇರ್ಪಡೆ ಸಾಧ್ಯತೆ

0
ಲೋಕಸಭೆ ಚುನಾವಣೆಯಲ್ಲಿ ಕೊಪ್ಪಳ ಕ್ಷೇತ್ರದ ಟಿಕೆಟ್‌ ಕೈತಪ್ಪಿದ ಹಿನ್ನೆಲೆ ಬಿಜೆಪಿ ವಿರುದ್ದ ಮುನಿಸಿಕೊಂಡಿದ್ದ ಹಾಲಿ ಸಂಸದ ಸಂಗಣ್ಣ ಕರಡಿ ಅವರು ತಮ್ಮ ಸಂಸದ ಸ್ಥಾನಕ್ಕೆ ಮತ್ತು ಬಿಜೆಪಿ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ...