HomeಅಂಕಣಗಳುKarnataka against SIRSIR: ಭಾಲ್ಕಿಯಲ್ಲಿ 3,244 ಮತದಾರರ ಹೆಸರು ಡಿಲೀಟ್‌ಗೆ ಸುಳ್ಳು ಫಾರಂ-7 ಸೃಷ್ಟಿ, 32 ಜನರ ವಿರುದ್ಧ...

SIR: ಭಾಲ್ಕಿಯಲ್ಲಿ 3,244 ಮತದಾರರ ಹೆಸರು ಡಿಲೀಟ್‌ಗೆ ಸುಳ್ಳು ಫಾರಂ-7 ಸೃಷ್ಟಿ, 32 ಜನರ ವಿರುದ್ಧ FIR

- Advertisement -
- Advertisement -

ಮತದಾರರ ಪಟ್ಟಿಯ ‘ವಿಶೇಷ ತೀವ್ರ ಪರಿಷ್ಕರಣೆ’ (SIR) ಪ್ರಕ್ರಿಯೆಯ ಹೆಸರಿನಲ್ಲಿ ಅರ್ಹ ಬಡವರು, ಅಲ್ಪಸಂಖ್ಯಾತರು ಹಾಗೂ ಅವಿದ್ಯಾವಂತ ಮತದಾರರ ಹೆಸರುಗಳನ್ನು ಯೋಜಿತವಾಗಿ ಡಿಲೀಟ್ ಮಾಡಲು ಹೊರಟ ಬೃಹತ್ ಜಾಲವೊಂದು ಬೀದರ್ ಜಿಲ್ಲೆಯಲ್ಲಿ ಬಯಲಾಗಿದೆ. ಯಾವುದೇ ಆಧಾರ ಹಾಗೂ ದೃಢೀಕೃತ ದಾಖಲೆಗಳಿಲ್ಲದೆ ಫಾರಂ-7ರ ಅಡಿಯಲ್ಲಿ ಸುಳ್ಳು ಆಕ್ಷೇಪಣೆಗಳನ್ನು ಸಲ್ಲಿಸಿ 3,244 ಮತದಾರರನ್ನು ‘ಸ್ಥಳಾಂತರ’ ಹಾಗೂ ‘ಗೈರು’ ಎಂದು ನಮೂದಿಸಿ ಮತಹಕ್ಕು ಕಸಿಯಲು ಒಳಸಂಚು ರೂಪಿಸಿದ ಆರೋಪದಡಿ ಭಾಲ್ಕಿ ನಗರ ಪೊಲೀಸ್ ಠಾಣೆಯಲ್ಲಿ 32 ಜನರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಾಗಿದೆ.

ಭಾಲ್ಕಿ ನಗರಸಭೆಯ ನಾಮನಿರ್ದೇಶಿತ ಸದಸ್ಯರೂ ಆಗಿರುವ ಸ್ಥಳೀಯ ನಿವಾಸಿ ಮೊಹಮ್ಮದ್ ಅತೀಕ್ ಅಹಮದ್ ಎಂಬುವವರು ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಈ ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ. “ಬೂತ್ ನಂಬರ್‌ 1ರ ಮತದಾರರ ಪಟ್ಟಿಯಲ್ಲಿ ನನ್ನ ಹೆಸರಿದ್ದು, 2004ರಿಂದಲೂ ಸಾರ್ವತ್ರಿಕ ಹಾಗೂ ಸ್ಥಳೀಯ ಚುನಾವಣೆಗಳಲ್ಲಿ ನಿರಂತರವಾಗಿ ಮತದಾನ ಮಾಡುತ್ತಿದ್ದೇನೆ. ಆದರೆ, ಎಸ್‌ಐಆರ್‌ ಅಭಿಯಾನದ ವೇಳೆ ಫಾರಂ-7 ಬಳಸಿ ನನ್ನ ಹೆಸರು ಸೇರಿದಂತೆ ಬರೋಬ್ಬರಿ 3,244 ಮತದಾರರನ್ನು ‘ಸ್ಥಳಾಂತರಗೊಂಡಿದ್ದಾರೆ’ ಹಾಗೂ ‘ಗೈರಾಗಿದ್ದಾರೆ’ ಎಂದು ಸುಳ್ಳು ಮಾಹಿತಿ ನೀಡಿ ಕ್ಷೇತ್ರದ ಮತದಾರರ ನೋಂದಣಾಧಿಕಾರಿ (ERO) ಮುಂದೆ ಅರ್ಜಿ ಸಲ್ಲಿಸಲಾಗಿತ್ತು,” ಎಂದು ಅತೀಕ್ ಆತಂಕ ವ್ಯಕ್ತಪಡಿಸಿದ್ದಾರೆ.

ಈ ಆಕ್ಷೇಪಣಾ ಅರ್ಜಿಗಳನ್ನು ಪರಿಶೀಲಿಸಿದ ತಹಶೀಲ್ದಾರ್ ಹಾಗೂ ನೋಂದಣಾಧಿಕಾರಿಗಳು ದಾಖಲೆಗಳನ್ನು ಹಾಜರುಪಡಿಸುವಂತೆ ಸೂಚಿಸಿ ನೋಟಿಸ್ ನೀಡಿದಾಗ ಅಸಲಿ ಅಕ್ರಮ ಬೆಳಕಿಗೆ ಬಂದಿದೆ. ಶಿವರಾಜ, ದೀಪಕ, ಗೌಸೋದ್ದಿನ್‌ ಸಾಬ್‌, ಜಗದೀಶ, ಯೋಗೇಶ, ಕಲ್ಯಾಣರಾವ ಸೇರಿದಂತೆ ಸುಮಾರು 32 ಜನರು ಸಂಘಟಿತವಾಗಿ ದೊಡ್ಡ ಪ್ರಮಾಣದಲ್ಲಿ ಈ ಸುಳ್ಳು ಆಕ್ಷೇಪಣಾ ಅರ್ಜಿಗಳನ್ನು ಹೂಡಿರುವುದು ಪತ್ತೆಯಾಗಿದೆ. ಮತದಾರರ ಗಮನಕ್ಕೂ ಬಾರದಂತೆ ಅವರ ನಕಲಿ ಸಹಿಗಳನ್ನು ಮಾಡಿ, ಮನಬಂದಂತೆ ನಕಲಿ ಮೊಬೈಲ್ ಸಂಖ್ಯೆಗಳನ್ನು ನಮೂದಿಸಿ ಸಾಂವಿಧಾನಿಕ ಮತದಾನದ ಹಕ್ಕನ್ನು ಕಸಿಯಲು ಅಪರಾಧಿಕ ಸಂಚು ರೂಪಿಸಿರುವುದು ತನಿಖೆಯಲ್ಲಿ ಶಂಕಿಸಲಾಗಿದೆ.

32 ಮಂದಿ ವಿರುದ್ಧ ಬಿಎನ್‌ಎಸ್ ಅಡಿಯಲ್ಲಿ ಎಫ್‌ಐಆರ್ ದಾಖಲು

ಸಾಮಾಜಿಕವಾಗಿ ಹಾಗೂ ಆರ್ಥಿಕವಾಗಿ ಹಿಂದುಳಿದ ಮತದಾರರನ್ನು ಗುರಿಯಾಗಿಸಿಕೊಂಡು ಮತದಾರರ ಪಟ್ಟಿಯಿಂದ ಹೊರಹಾಕಲು ವ್ಯವಸ್ಥಿತ ಸಂಚು ನಡೆಸಿದ 32 ಜನರ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹಿಸಿ ದೂರು ನೀಡಲಾಗಿದ್ದು, ಭಾಲ್ಕಿ ನಗರ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆಯ (BNS) ಕಲಂ 61(2), 319(2), 336(2), 336(3), 340(2) ಹಾಗೂ 190 ಬಿಎನ್‌ಎಸ್ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

SIR ಅಕ್ರಮ : 13 ಕೋಟಿ ಮತದಾರರ ಹೆಸರು ಡಿಲೀಟ್‌ ವಿವಾದ ‘ವಿಶೇಷ ಸೇರ್ಪಡೆ ಅಭಿಯಾನ’ಕ್ಕೆ ಕೇಂದ್ರ ಚುನಾವಣಾ ಆಯೋಗದಿಂದ ತುರ್ತು ನಿರ್ದೇಶನ

ದೇಶಾದ್ಯಂತ ಜಾರಿಗೆ ತರಲಾದ 'ವಿಶೇಷ ತೀವ್ರ ಪರಿಷ್ಕರಣೆ' (SIR) ಪ್ರಕ್ರಿಯೆಯ ಹೆಸರಿನಲ್ಲಿ ಕೋಟ್ಯಂತರ ಅರ್ಹ ಮತದಾರರ ಹೆಸರುಗಳನ್ನು ಏಕಾಏಕಿ ಪಟ್ಟಿಯಿಂದ ಕೈಬಿಟ್ಟಿರುವುದರ ವಿರುದ್ಧ ರಾಷ್ಟ್ರವ್ಯಾಪಿ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ, ಕೇಂದ್ರ ಚುನಾವಣಾ ಆಯೋಗವು (ECI)...

‘ಎಸ್ಐಆರ್ ಬೇಡ..’ ರಾಷ್ಟ್ರೀಯ ವೇದಿಕೆ ಆರಂಭ; ಪ್ರಕ್ರಿಯೆ ರದ್ದುಗೊಳಿಸಿ ಹಳೆ ಮತದಾರರ ಪಟ್ಟಿ ಮರುಸ್ಥಾಪನೆಗೆ ಆಗ್ರಹ

ದೇಶದಲ್ಲಿ ನಡೆಯುತ್ತಿರುವ ಚುನಾವಣಾ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಮತ್ತು ಮತದಾರರ ಮೇಲೆ ಉಂಟಾಗಿರುವ ಅದರ ಪರಿಣಾಮಗಳ ವಿರುದ್ಧ ಸಮನ್ವಯತೆಯಿಂದ ಕಾರ್ಯನಿರ್ವಹಿಸಲು ಕರೆ ನೀಡಿರುವ ನಾಗರಿಕ ಸಂಘಟನೆಗಳು, ದೇಶದ ವಿವಿಧ ರಾಜ್ಯಗಳ...

ಬಿಜೆಪಿ-ಜೆಡಿಎಸ್ ಕಾರ್ಯಕರ್ತರಿಂದ ಅರ್ಹ ಮತದಾರರ ಹೆಸರು ಡಿಲೀಟ್‌ಗೆ ಅರ್ಜಿ; ಚುನಾವಣಾ ಕಚೇರಿ ಮುಂದೆ ಸಿಎಂ ಪ್ರತಿಭಟನೆ

ಅರ್ಹ ಮತದಾರರ ಹಸರು ಡಿಲೀಟ್‌ ಮಾಡುವಂತೆ ಬಿಜೆಪಿ ಮತ್ತು ಜೆಡಿಎಸ್‌ ಕಾರ್ಯಕರ್ತತು ಫಾರ್ಮ್‌ - 7 ನೀಡಿದ್ದಾರೆ ಎಂದು ಆರೋಪಿಸಿರುವ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಆಗ್ರಹಿಸಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ರಾಜ್ಯ...

ಕದನ ವಿರಾಮದ ಹೊರತಾಗಿಯೂ ಗಾಜಾದಲ್ಲಿ ಇಸ್ರೇಲ್‌ ದಾಳಿ; ಪತ್ರಕರ್ತ ಸೇರಿದಂತೆ ಕನಿಷ್ಠ ಎಂಟು ಮಂದಿ ಪ್ಯಾಲೆಸ್ತೀನಿಯರ ಹತ್ಯೆ

ಪ್ಯಾಲೆಸ್ತೀನ್ ಅಧಿಕಾರಿಗಳು ಮತ್ತು ವೈದ್ಯಕೀಯ ಮೂಲಗಳ ಪ್ರಕಾರ, ಬುಧವಾರ (ಸೆ.30) ದಂದು ಗಾಜಾ ಪಟ್ಟಿಯಾದ್ಯಂತ ಇಸ್ರೇಲ್ ನಡೆಸಿದ ದಾಳಿಯಲ್ಲಿ ಪತ್ರಕರ್ತ ಹಾಗೂ ಇಮಾಮ್ ಮೊಹಮ್ಮದ್ ಅಬ್ದುಲ್ ಅಜೀಜ್ ಅಲ್-ನಜ್ಜಾರ್ ಸೇರಿದಂತೆ ಕನಿಷ್ಠ ಎಂಟು...

ಸಿಇಸಿ ಗ್ಯಾನೇಶ್ ಕುಮಾರ್ ವಿರುದ್ಧ ಪ್ರತಿಭಟನೆ: ಕೇರಳ ಯೂತ್ ಕಾಂಗ್ರೆಸ್ -ಎಸ್‌ಎಫ್‌ಐ ಕಾರ್ಯಕರ್ತರ ವಿರುದ್ಧ ಪ್ರಕರಣ ದಾಖಲು

ಕೇರಳ ರಾಜಧಾನಿಯ ಪಾಳಯಂ ಪ್ರದೇಶದಲ್ಲಿ ನಡೆದ ಘರ್ಷಣೆಯ ನಂತರ, ಕೆಎಸ್‌ಯು/ಯೂತ್ ಕಾಂಗ್ರೆಸ್ ಮತ್ತು ಎಸ್‌ಎಫ್‌‌ಐ/ಡಿವೈಎಫ್‌ಐ ಕಾರ್ಯಕರ್ತರ ವಿರುದ್ಧ ಗುರುವಾರ ಎರಡು ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಬುಧವಾರ ರಾತ್ರಿ ಕೇಂದ್ರ ಸರ್ಕಾರ...

ಹೈದರಾಬಾದ್: ಕೇಸರಿ ಶಾಲುಗಳೊಂದಿಗೆ ಶಾಲೆಗೆ ನುಗ್ಗಿ ಮುಸ್ಲಿಂ ಶಿಕ್ಷಕಿಗೆ ಬೆದರಿಕೆ ಆರೋಪ: ಬಿಜೆಪಿ ಕಾರ್ಪೊರೇಟರ್ ವಿರುದ್ಧ ಪ್ರಕರಣ ದಾಖಲು

ಹೈದರಾಬಾದ್: ಶಾಲೆಯೊಂದರ ಮುಸ್ಲಿಂ ಶಿಕ್ಷಕಿಗೆ ಕಿರುಕುಳ ನೀಡಿ ಬೆದರಿಕೆ ಹಾಕಿದ ಆರೋಪದ ಹಿನ್ನೆಲೆಯಲ್ಲಿ ಬಿಜೆಪಿ ಕಾರ್ಪೊರೇಟರ್ ಅಕುಲಾ ಶ್ರೀವಾಣಿ ವಿರುದ್ಧ ಹೈದರಾಬಾದ್ ಪೊಲೀಸರು ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿದ್ದಾರೆ. ಸರೂರ್ ನಗರದ ಶ್ರೀ ವೆಂಕಟೇಶ್ವರ...

ಪ್ರತಿಯೊಂದರಲ್ಲೂ ಅಜೆಂಡಾ; ಉತ್ತರ ಪ್ರದೇಶ ಪೊಲೀಸರನ್ನೇ ವಿಸರ್ಜಿಸಿಬಿಡುವುದು ಒಳ್ಳೆಯದು: ಸುಪ್ರೀಂ ಕೋರ್ಟ್

ಉತ್ತರ ಪ್ರದೇಶ ಪೊಲೀಸರ ವಿರುದ್ಧ ತೀವ್ರವಾಗಿ ಕಿಡಿಕಾರಿರುವ ಸುಪ್ರೀಂ ಕೋರ್ಟ್, ಆ ಇಲಾಖೆಯನ್ನೇ ವಿಸರ್ಜಿಸಿ ರಾಜ್ಯದ ಪ್ರತಿಯೊಂದು ತನಿಖೆಯನ್ನು ಸಿಬಿಐ (ಸಿಬಿಐ) ವಹಿಸಿಕೊಳ್ಳುವಂತೆ ಮಾಡುವುದು ಉತ್ತಮ ಎಂದು ಬುಧವಾರ (ಸೆ.30) ಕಟುವಾಗಿ ಟೀಕಿಸಿದೆ. ಮೋಟಾರ್...

ಜಾತಿ ಕಾರಣಕ್ಕೆ ಆಸ್ಪತ್ರೆಗೆ ದಾಖಲಿಸಿಕೊಳ್ಳಲು ನಿರಾಕರಣೆ ಆರೋಪ : ರಸ್ತೆ ಬದಿಯೇ ಮಗುವಿಗೆ ಜನ್ಮ ನೀಡಿದ ದಲಿತ ಮಹಿಳೆ!

ಉತ್ತರ ಪ್ರದೇಶದ ಭದೋಹಿ ಜಿಲ್ಲೆಯ ಗ್ಯಾನ್‌ಪುರದಲ್ಲಿರುವ ಮಹಾರಾಜ ಚೇತ್ ಸಿಂಗ್ ಜಿಲ್ಲಾಸ್ಪತ್ರೆಯ ಸಿಬ್ಬಂದಿ ದಾಖಲಿಸಿಕೊಳ್ಳಲು ನಿರಾಕರಿಸಿದ ಕಾರಣ, ಆದಿವಾಸಿ ಮಹಿಳೆಯೊಬ್ಬರು ಆಸ್ಪತ್ರೆಯ ಹೊರಗಿನ ರಸ್ತೆ ಬದಿಯೇ ಮಗುವಿಗೆ ಜನ್ಮ ನೀಡಿದ ಘಟನೆ ನಡೆದಿದೆ....

ಬ್ಯಾಂಕ್ ಖಾತೆಗಳು ಸ್ಥಗಿತಗೊಳಿಸಿರುವುದನ್ನು ಪ್ರಶ್ನಿಸಿದ್ಧ ಟಿಎಂಸಿ ಆರ್ಜಿ ವಜಾಗೊಳಿಸಿದ ಸುಪ್ರೀಂ ಕೋರ್ಟ್ : ವಿಚಾರಣೆ ತ್ವರಿತಗೊಳಿಸುವಂತೆ ಹೈಕೋರ್ಟ್‌ಗೆ ಸೂಚನೆ

ಪಶ್ಚಿಮ ಬಂಗಾಳ ಪೊಲೀಸರು ತಮ್ಮ ನಾಲ್ಕು 'ಇಂಡಿಯನ್ ಬ್ಯಾಂಕ್' ಖಾತೆಗಳನ್ನು ಸ್ಥಗಿತಗೊಳಿಸಿರುವುದನ್ನು ಪ್ರಶ್ನಿಸಿ ಮಮತಾ ಬ್ಯಾನರ್ಜಿ ನೇತೃತ್ವದ 'ಆಲ್ ಇಂಡಿಯಾ ತೃಣಮೂಲ ಕಾಂಗ್ರೆಸ್' (ಎಐಟಿಸಿ) ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಗುರುವಾರ (ಅ.1)...

ಬಂಗಾಳ ಹೈಕೋರ್ಟ್‌ನಿಂದ ಮಧ್ಯಂತರ ಜಾಮೀನು; ನಂದಿಗ್ರಾಮ ಕಾಂಗ್ರೆಸ್‌ ಅಭ್ಯರ್ಥಿ ಜೈಲಿನಿಂದ ಬಿಡುಗಡೆ

ಪಶ್ಚಿಮ ಬಂಗಾಳ ಹೈಕೋರ್ಟ್ ಮಧ್ಯಂತರ ಜಾಮೀನು ನೀಡಿದ ಮರುದಿನವೇ, ಕಾಂಗ್ರೆಸ್‌ನ ನಂದಿಗ್ರಾಮ ಉಪಚುನಾವಣೆಯ ಅಭ್ಯರ್ಥಿ ಮಿಲನ್ ಪ್ರಧಾನ್ ಬುಧವಾರ (ಸೆ. 30) ಜೈಲಿನಿಂದ ಬಿಡುಗಡೆಯಾಗಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಹಲ್ದಿಯಾ ಜೈಲಿನ ಹೊರಗೆ...