HomeಅಂಕಣಗಳುKarnataka against SIRSIR ಅಕ್ರಮ : 13 ಕೋಟಿ ಮತದಾರರ ಹೆಸರು ಡಿಲೀಟ್‌ ವಿವಾದ 'ವಿಶೇಷ ಸೇರ್ಪಡೆ ಅಭಿಯಾನ'ಕ್ಕೆ...

SIR ಅಕ್ರಮ : 13 ಕೋಟಿ ಮತದಾರರ ಹೆಸರು ಡಿಲೀಟ್‌ ವಿವಾದ ‘ವಿಶೇಷ ಸೇರ್ಪಡೆ ಅಭಿಯಾನ’ಕ್ಕೆ ಕೇಂದ್ರ ಚುನಾವಣಾ ಆಯೋಗದಿಂದ ತುರ್ತು ನಿರ್ದೇಶನ

- Advertisement -
- Advertisement -

ದೇಶಾದ್ಯಂತ ಜಾರಿಗೆ ತರಲಾದ ‘ವಿಶೇಷ ತೀವ್ರ ಪರಿಷ್ಕರಣೆ’ (SIR) ಪ್ರಕ್ರಿಯೆಯ ಹೆಸರಿನಲ್ಲಿ ಕೋಟ್ಯಂತರ ಅರ್ಹ ಮತದಾರರ ಹೆಸರುಗಳನ್ನು ಏಕಾಏಕಿ ಪಟ್ಟಿಯಿಂದ ಕೈಬಿಟ್ಟಿರುವುದರ ವಿರುದ್ಧ ರಾಷ್ಟ್ರವ್ಯಾಪಿ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ, ಕೇಂದ್ರ ಚುನಾವಣಾ ಆಯೋಗವು (ECI) ತೀವ್ರ ಹಿನ್ನಡೆ ಅನುಭವಿಸಿದೆ. ಈ ಅಕ್ರಮಗಳ ವಿರುದ್ಧ ವ್ಯಾಪಕ ಖಂಡನೆ ವ್ಯಕ್ತವಾದ ಬೆನ್ನಲ್ಲೇ, ಎಸ್‌ಐಆರ್ ಪೂರ್ಣಗೊಂಡಿರುವ 20 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಪಟ್ಟಿಯಿಂದ ಹೊರಗುಳಿದ ಅರ್ಹ ಮತದಾರರನ್ನು ಮತ್ತೆ ಸೇರ್ಪಡೆಗೊಳಿಸಲು ‘ವಿಶೇಷ ಅಭಿಯಾನ’ ನಡೆಸುವಂತೆ ರಾಜ್ಯ ಚುನಾವಣಾಧಿಕಾರಿಗಳಿಗೆ (CEO) ಆಯೋಗವು ತುರ್ತು ನಿರ್ದೇಶನ ನೀಡಿದೆ.

‘ಇಂಡಿಯನ್ ಎಕ್ಸ್‌ಪ್ರೆಸ್’ ನಡೆಸಿದ ಸ್ಫೋಟಕ ತನಿಖಾ ವರದಿಯ ಪ್ರಕಾರ, ದೇಶದ 30 ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಬರೋಬ್ಬರಿ 13 ಕೋಟಿ ಮತದಾರರ ಹೆಸರುಗಳನ್ನು ಕಡಿತಗೊಳಿಸಿರುವುದು ಭಾರೀ ವಿವಾದಕ್ಕೆ ಕಾರಣವಾಗಿತ್ತು. ಅಷ್ಟೇ ಅಲ್ಲದೆ, ಆಯೋಗದ ಆಂತರಿಕ ನಿರ್ಧಾರಗಳನ್ನು ತಮ್ಮ ಗಮನಕ್ಕೆ ತರದೆ ಏಕಪಕ್ಷೀಯವಾಗಿ ತೆಗೆದುಕೊಳ್ಳಲಾಗುತ್ತಿದೆ ಹಾಗೂ ಮತದಾರರ ಪಟ್ಟಿಯ ತಂತ್ರಾಂಶವಾದ ‘ECINet’ ಅನ್ನು ಕೇಂದ್ರೀಕರಿಸಲಾಗಿದೆ ಎಂದು ಚುನಾವಣಾ ಆಯುಕ್ತರಾದ ಸುಖ್ಬೀರ್ ಸಿಂಗ್ ಸಂಧು ಮತ್ತು ವಿವೇಕ್ ಜೋಶಿ ಅವರು ಕಳೆದ 10 ತಿಂಗಳಲ್ಲಿ 14 ಬಾರಿ ಬರೆದ ಸಾಲು ಸಾಲು ಆಕ್ಷೇಪಣಾ ಪತ್ರಗಳು ಬಹಿರಂಗಗೊಂಡು ಆಯೋಗದ ಬಣ್ಣ ಬಯಲಾಗಿತ್ತು.

ಈ ಒತ್ತಡಕ್ಕೆ ಮಣಿದಿರುವ ಆಯೋಗದ ಕಾರ್ಯದರ್ಶಿ ಸೆಪ್ಟೆಂಬರ್ 29 ರಂದು ಎಲ್ಲಾ ಸಿಇಒಗಳಿಗೆ ಲಿಖಿತ ಸೂಚನೆ ಕಳುಹಿಸಿದ್ದು, ಗುರುವಾರ ನಡೆಸಿದ ವೀಡಿಯೊ ಕಾನ್ಫರೆನ್ಸ್‌ನಲ್ಲಿಯೂ ಇದನ್ನು ಪುನರುಚ್ಚರಿಸಿದ್ದಾರೆ. ಎಸ್‌ಐಆರ್‌‌ ಪ್ರಕ್ರಿಯೆಗೂ ಮುನ್ನ ಇದ್ದ ಮತದಾರರ ಪಟ್ಟಿ ಹಾಗೂ ನಂತರದ ಪಟ್ಟಿಯನ್ನು ತಾಳೆ ಮಾಡಿ, ಅನ್ಯಾಯವಾಗಿ ಹೊರಗುಳಿದಿರುವ, ಮೃತಪಟ್ಟಿರದ ಹಾಗೂ ನಕಲಿ ಅಲ್ಲದ ಅರ್ಹ ಮತದಾರರ ಮನೆಗಳಿಗೆ ಬಿಎಲ್‌ಒ (BLO) ಸಿಬ್ಬಂದಿ ನೇರವಾಗಿ ಭೇಟಿ ನೀಡಿ ಅವರಿಂದ ಹೊಸದಾಗಿ ಫಾರಂ-6 ಭರ್ತಿ ಮಾಡಿಸಿಕೊಂಡು ಪಟ್ಟಿಗೆ ಸೇರಿಸುವಂತೆ ಸೂಚಿಸಲಾಗಿದೆ. ಈ ಪ್ರಕ್ರಿಯೆಯಲ್ಲಿ ರಾಜಕೀಯ ಪಕ್ಷಗಳ ಬೂತ್ ಮಟ್ಟದ ಏಜೆಂಟರ ನೆರವು ಪಡೆಯುವಂತೆಯೂ ತಿಳಿಸಲಾಗಿದೆ.

ಅಲ್ಲದೆ, ಹೊಸ ಮತದಾರರ ನೋಂದಣಿಗೆ ತರಲಾಗಿದ್ದ ಹಾಗೂ ಆಯುಕ್ತ ಸುಖ್ಬೀರ್ ಸಿಂಗ್ ಸಂಧು ಅವರಿಂದ ‘ಕಾನೂನುಬಾಹಿರ’ ಎಂದು ಕರೆಸಿಕೊಂಡಿದ್ದ ‘ಫಾರಂ-6’ ನಲ್ಲಿದ್ದ ವಿವಾದಾತ್ಮಕ ಹೆಚ್ಚುವರಿ ಷರತ್ತನ್ನು ಈಗ ಹಿಂಪಡೆಯಲಾಗಿದೆ. ಕೇವಲ ಎಸ್‌ಐಆರ್ ಹಂತಕ್ಕೆ ಮಾತ್ರ ಆ ಷರತ್ತು ಸೀಮಿತವಾಗಿದ್ದು, ಇನ್ಮುಂದೆ ಸಾಮಾನ್ಯ 1960ರ ನಿಯಮಾವಳಿಯಂತೆಯೇ ಸರಳ ಫಾರಂ-6 ಬಳಕೆಯಾಗಲಿದೆ. ಇನ್ನೊಂದೆಡೆ, ಎಸ್‌ಐಆರ್ ಪ್ರಕ್ರಿಯೆ ಇನ್ನೂ ಚಾಲ್ತಿಯಲ್ಲಿರುವ ಮಹಾರಾಷ್ಟ್ರದಂತಹ ದೊಡ್ಡ ರಾಜ್ಯಗಳಲ್ಲಿ ಮತದಾರರ ಹೆಸರುಗಳನ್ನು ಆತುರವಾಗಿ ಡಿಲೀಟ್ ಮಾಡದಂತೆ, ಪ್ರತಿಯೊಬ್ಬರಿಗೂ ದಾಖಲೆ ಸಲ್ಲಿಸಲು ಸೂಕ್ತ ಅವಕಾಶ ಮತ್ತು ವಿಚಾರಣೆ ನಡೆಸಿಯೇ ನಿರ್ಧಾರ ಕೈಗೊಳ್ಳುವಂತೆ ಕಟ್ಟುನಿಟ್ಟಿನ ಆದೇಶ ನೀಡಲಾಗಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

SIR: ಭಾಲ್ಕಿಯಲ್ಲಿ 3,244 ಮತದಾರರ ಹೆಸರು ಡಿಲೀಟ್‌ಗೆ ಸುಳ್ಳು ಫಾರಂ-7 ಸೃಷ್ಟಿ, 32 ಜನರ ವಿರುದ್ಧ FIR

ಮತದಾರರ ಪಟ್ಟಿಯ 'ವಿಶೇಷ ತೀವ್ರ ಪರಿಷ್ಕರಣೆ' (SIR) ಪ್ರಕ್ರಿಯೆಯ ಹೆಸರಿನಲ್ಲಿ ಅರ್ಹ ಬಡವರು, ಅಲ್ಪಸಂಖ್ಯಾತರು ಹಾಗೂ ಅವಿದ್ಯಾವಂತ ಮತದಾರರ ಹೆಸರುಗಳನ್ನು ಯೋಜಿತವಾಗಿ ಡಿಲೀಟ್ ಮಾಡಲು ಹೊರಟ ಬೃಹತ್ ಜಾಲವೊಂದು ಬೀದರ್ ಜಿಲ್ಲೆಯಲ್ಲಿ ಬಯಲಾಗಿದೆ....

‘ಎಸ್ಐಆರ್ ಬೇಡ..’ ರಾಷ್ಟ್ರೀಯ ವೇದಿಕೆ ಆರಂಭ; ಪ್ರಕ್ರಿಯೆ ರದ್ದುಗೊಳಿಸಿ ಹಳೆ ಮತದಾರರ ಪಟ್ಟಿ ಮರುಸ್ಥಾಪನೆಗೆ ಆಗ್ರಹ

ದೇಶದಲ್ಲಿ ನಡೆಯುತ್ತಿರುವ ಚುನಾವಣಾ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಮತ್ತು ಮತದಾರರ ಮೇಲೆ ಉಂಟಾಗಿರುವ ಅದರ ಪರಿಣಾಮಗಳ ವಿರುದ್ಧ ಸಮನ್ವಯತೆಯಿಂದ ಕಾರ್ಯನಿರ್ವಹಿಸಲು ಕರೆ ನೀಡಿರುವ ನಾಗರಿಕ ಸಂಘಟನೆಗಳು, ದೇಶದ ವಿವಿಧ ರಾಜ್ಯಗಳ...

ಬಿಜೆಪಿ-ಜೆಡಿಎಸ್ ಕಾರ್ಯಕರ್ತರಿಂದ ಅರ್ಹ ಮತದಾರರ ಹೆಸರು ಡಿಲೀಟ್‌ಗೆ ಅರ್ಜಿ; ಚುನಾವಣಾ ಕಚೇರಿ ಮುಂದೆ ಸಿಎಂ ಪ್ರತಿಭಟನೆ

ಅರ್ಹ ಮತದಾರರ ಹಸರು ಡಿಲೀಟ್‌ ಮಾಡುವಂತೆ ಬಿಜೆಪಿ ಮತ್ತು ಜೆಡಿಎಸ್‌ ಕಾರ್ಯಕರ್ತತು ಫಾರ್ಮ್‌ - 7 ನೀಡಿದ್ದಾರೆ ಎಂದು ಆರೋಪಿಸಿರುವ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಆಗ್ರಹಿಸಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ರಾಜ್ಯ...

ಕದನ ವಿರಾಮದ ಹೊರತಾಗಿಯೂ ಗಾಜಾದಲ್ಲಿ ಇಸ್ರೇಲ್‌ ದಾಳಿ; ಪತ್ರಕರ್ತ ಸೇರಿದಂತೆ ಕನಿಷ್ಠ ಎಂಟು ಮಂದಿ ಪ್ಯಾಲೆಸ್ತೀನಿಯರ ಹತ್ಯೆ

ಪ್ಯಾಲೆಸ್ತೀನ್ ಅಧಿಕಾರಿಗಳು ಮತ್ತು ವೈದ್ಯಕೀಯ ಮೂಲಗಳ ಪ್ರಕಾರ, ಬುಧವಾರ (ಸೆ.30) ದಂದು ಗಾಜಾ ಪಟ್ಟಿಯಾದ್ಯಂತ ಇಸ್ರೇಲ್ ನಡೆಸಿದ ದಾಳಿಯಲ್ಲಿ ಪತ್ರಕರ್ತ ಹಾಗೂ ಇಮಾಮ್ ಮೊಹಮ್ಮದ್ ಅಬ್ದುಲ್ ಅಜೀಜ್ ಅಲ್-ನಜ್ಜಾರ್ ಸೇರಿದಂತೆ ಕನಿಷ್ಠ ಎಂಟು...

ಸಿಇಸಿ ಗ್ಯಾನೇಶ್ ಕುಮಾರ್ ವಿರುದ್ಧ ಪ್ರತಿಭಟನೆ: ಕೇರಳ ಯೂತ್ ಕಾಂಗ್ರೆಸ್ -ಎಸ್‌ಎಫ್‌ಐ ಕಾರ್ಯಕರ್ತರ ವಿರುದ್ಧ ಪ್ರಕರಣ ದಾಖಲು

ಕೇರಳ ರಾಜಧಾನಿಯ ಪಾಳಯಂ ಪ್ರದೇಶದಲ್ಲಿ ನಡೆದ ಘರ್ಷಣೆಯ ನಂತರ, ಕೆಎಸ್‌ಯು/ಯೂತ್ ಕಾಂಗ್ರೆಸ್ ಮತ್ತು ಎಸ್‌ಎಫ್‌‌ಐ/ಡಿವೈಎಫ್‌ಐ ಕಾರ್ಯಕರ್ತರ ವಿರುದ್ಧ ಗುರುವಾರ ಎರಡು ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಬುಧವಾರ ರಾತ್ರಿ ಕೇಂದ್ರ ಸರ್ಕಾರ...

ಹೈದರಾಬಾದ್: ಕೇಸರಿ ಶಾಲುಗಳೊಂದಿಗೆ ಶಾಲೆಗೆ ನುಗ್ಗಿ ಮುಸ್ಲಿಂ ಶಿಕ್ಷಕಿಗೆ ಬೆದರಿಕೆ ಆರೋಪ: ಬಿಜೆಪಿ ಕಾರ್ಪೊರೇಟರ್ ವಿರುದ್ಧ ಪ್ರಕರಣ ದಾಖಲು

ಹೈದರಾಬಾದ್: ಶಾಲೆಯೊಂದರ ಮುಸ್ಲಿಂ ಶಿಕ್ಷಕಿಗೆ ಕಿರುಕುಳ ನೀಡಿ ಬೆದರಿಕೆ ಹಾಕಿದ ಆರೋಪದ ಹಿನ್ನೆಲೆಯಲ್ಲಿ ಬಿಜೆಪಿ ಕಾರ್ಪೊರೇಟರ್ ಅಕುಲಾ ಶ್ರೀವಾಣಿ ವಿರುದ್ಧ ಹೈದರಾಬಾದ್ ಪೊಲೀಸರು ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿದ್ದಾರೆ. ಸರೂರ್ ನಗರದ ಶ್ರೀ ವೆಂಕಟೇಶ್ವರ...

ಪ್ರತಿಯೊಂದರಲ್ಲೂ ಅಜೆಂಡಾ; ಉತ್ತರ ಪ್ರದೇಶ ಪೊಲೀಸರನ್ನೇ ವಿಸರ್ಜಿಸಿಬಿಡುವುದು ಒಳ್ಳೆಯದು: ಸುಪ್ರೀಂ ಕೋರ್ಟ್

ಉತ್ತರ ಪ್ರದೇಶ ಪೊಲೀಸರ ವಿರುದ್ಧ ತೀವ್ರವಾಗಿ ಕಿಡಿಕಾರಿರುವ ಸುಪ್ರೀಂ ಕೋರ್ಟ್, ಆ ಇಲಾಖೆಯನ್ನೇ ವಿಸರ್ಜಿಸಿ ರಾಜ್ಯದ ಪ್ರತಿಯೊಂದು ತನಿಖೆಯನ್ನು ಸಿಬಿಐ (ಸಿಬಿಐ) ವಹಿಸಿಕೊಳ್ಳುವಂತೆ ಮಾಡುವುದು ಉತ್ತಮ ಎಂದು ಬುಧವಾರ (ಸೆ.30) ಕಟುವಾಗಿ ಟೀಕಿಸಿದೆ. ಮೋಟಾರ್...

ಜಾತಿ ಕಾರಣಕ್ಕೆ ಆಸ್ಪತ್ರೆಗೆ ದಾಖಲಿಸಿಕೊಳ್ಳಲು ನಿರಾಕರಣೆ ಆರೋಪ : ರಸ್ತೆ ಬದಿಯೇ ಮಗುವಿಗೆ ಜನ್ಮ ನೀಡಿದ ದಲಿತ ಮಹಿಳೆ!

ಉತ್ತರ ಪ್ರದೇಶದ ಭದೋಹಿ ಜಿಲ್ಲೆಯ ಗ್ಯಾನ್‌ಪುರದಲ್ಲಿರುವ ಮಹಾರಾಜ ಚೇತ್ ಸಿಂಗ್ ಜಿಲ್ಲಾಸ್ಪತ್ರೆಯ ಸಿಬ್ಬಂದಿ ದಾಖಲಿಸಿಕೊಳ್ಳಲು ನಿರಾಕರಿಸಿದ ಕಾರಣ, ಆದಿವಾಸಿ ಮಹಿಳೆಯೊಬ್ಬರು ಆಸ್ಪತ್ರೆಯ ಹೊರಗಿನ ರಸ್ತೆ ಬದಿಯೇ ಮಗುವಿಗೆ ಜನ್ಮ ನೀಡಿದ ಘಟನೆ ನಡೆದಿದೆ....

ಬ್ಯಾಂಕ್ ಖಾತೆಗಳು ಸ್ಥಗಿತಗೊಳಿಸಿರುವುದನ್ನು ಪ್ರಶ್ನಿಸಿದ್ಧ ಟಿಎಂಸಿ ಆರ್ಜಿ ವಜಾಗೊಳಿಸಿದ ಸುಪ್ರೀಂ ಕೋರ್ಟ್ : ವಿಚಾರಣೆ ತ್ವರಿತಗೊಳಿಸುವಂತೆ ಹೈಕೋರ್ಟ್‌ಗೆ ಸೂಚನೆ

ಪಶ್ಚಿಮ ಬಂಗಾಳ ಪೊಲೀಸರು ತಮ್ಮ ನಾಲ್ಕು 'ಇಂಡಿಯನ್ ಬ್ಯಾಂಕ್' ಖಾತೆಗಳನ್ನು ಸ್ಥಗಿತಗೊಳಿಸಿರುವುದನ್ನು ಪ್ರಶ್ನಿಸಿ ಮಮತಾ ಬ್ಯಾನರ್ಜಿ ನೇತೃತ್ವದ 'ಆಲ್ ಇಂಡಿಯಾ ತೃಣಮೂಲ ಕಾಂಗ್ರೆಸ್' (ಎಐಟಿಸಿ) ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಗುರುವಾರ (ಅ.1)...

ಬಂಗಾಳ ಹೈಕೋರ್ಟ್‌ನಿಂದ ಮಧ್ಯಂತರ ಜಾಮೀನು; ನಂದಿಗ್ರಾಮ ಕಾಂಗ್ರೆಸ್‌ ಅಭ್ಯರ್ಥಿ ಜೈಲಿನಿಂದ ಬಿಡುಗಡೆ

ಪಶ್ಚಿಮ ಬಂಗಾಳ ಹೈಕೋರ್ಟ್ ಮಧ್ಯಂತರ ಜಾಮೀನು ನೀಡಿದ ಮರುದಿನವೇ, ಕಾಂಗ್ರೆಸ್‌ನ ನಂದಿಗ್ರಾಮ ಉಪಚುನಾವಣೆಯ ಅಭ್ಯರ್ಥಿ ಮಿಲನ್ ಪ್ರಧಾನ್ ಬುಧವಾರ (ಸೆ. 30) ಜೈಲಿನಿಂದ ಬಿಡುಗಡೆಯಾಗಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಹಲ್ದಿಯಾ ಜೈಲಿನ ಹೊರಗೆ...