Homeಮುಖಪುಟಟಿಎಂಸಿ ಸೇರಿದ ಬಿಜೆಪಿ ಸಂಸದನ ಪತ್ನಿ: ಡೈವರ್ಸ್‌ಗೆ ಮುಂದಾದ ಸಂಸದ!

ಟಿಎಂಸಿ ಸೇರಿದ ಬಿಜೆಪಿ ಸಂಸದನ ಪತ್ನಿ: ಡೈವರ್ಸ್‌ಗೆ ಮುಂದಾದ ಸಂಸದ!

ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಪಕ್ಷಕ್ಕೆ ಸೇರ್ಪಡೆಯಾಗುವ ಮೂಲಕ ಕಮಲ ಪಾಳಯಕ್ಕೆ ಶಾಕ್ ನೀಡಿದ್ದ ಸುಜಾತಾ ಮೊಂಡಾಲ್ ಖಾನ್‌ಗೆ ಪತಿ ವಿಚ್ಚೇದನ ನೀಡಿ ಶಾಕ್ ನೀಡಲು ಹೊರಟಿದ್ದಾರೆ.

- Advertisement -
- Advertisement -

ಪಶ್ಚಿಮ ಬಂಗಾಳ ಚುನಾವಣಾ ಕಣ ರಂಗೇರುತ್ತಲೇ ಇದೆ. ಆ ಪಕ್ಷದಿಂದ ಈ ಪಕ್ಷಕ್ಕೆ ಈ ಪಕ್ಷದಿಂದ ಆ ಪಕ್ಷಕ್ಕೆ ಹಾರುವವರ ಸಂಖ್ಯೆ ಕೂಡ ಹೆಚ್ಚಾಗಿದೆ. ಹೀಗಾಗಿಯೇ ಬಿಜೆಪಿ ಸಂಸದ ಸೌಮಿತ್ರಾ ಖಾನ್ ಅವರ ಪತ್ನಿ ಸುಜಾತಾ ಮೊಂಡಾಲ್ ಖಾನ್ ಟಿಎಂಸಿಗೆ ಸೇರ್ಪಡೆಯಾಗಿದ್ದರು. ಈಗ ಸಂಸದ ಸೌಮಿತ್ರಾ ಖಾನ್ ಪತ್ನಿಗೆ ಡೈವರ್ಸ್ ನಿಡಲು ಮುಂದಾಗಿದ್ದಾರೆ.

ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಪಕ್ಷಕ್ಕೆ ಸೇರ್ಪಡೆಯಾಗುವ ಮೂಲಕ ಕಮಲ ಪಾಳಯಕ್ಕೆ ಶಾಕ್ ನೀಡಿದ್ದ ಸುಜಾತಾ ಮೊಂಡಾಲ್ ಖಾನ್‌ಗೆ ಪತಿ ವಿಚ್ಚೇದನ ನೀಡಿ ಶಾಕ್ ನೀಡಲು ಹೊರಟಿದ್ದಾರೆ.

ಪಶ್ಚಿಮ ಬಂಗಾಳ ಚುನಾವಣೆ ಹಿನ್ನೆಲೆ ನಡೆಯುತ್ತಿರುವ ರಾಜಕೀಯ ನಾಯಕರುಗಳ ಜಗಳದಿಂದಾಗಿ ಒಂದು ಮದುವೆ ಮುರಿದುಬೀಳುವ ಹಂತಕ್ಕೆ ಬಂದಿದೆ. ರಾಜಕೀಯ ನಮ್ಮ ಮದುವೆಯನ್ನು ಕೊನೆಗೊಳಿಸಿದೆ ಎಂದು ಸಂಸದ ಸೌಮಿತ್ರಾ ಖಾನ್ ಕಣ್ಣೀರಿಟ್ಟು ಹೇಳಿದ್ದಾರೆ

ಇದನ್ನೂ ಓದಿ: ಕೋಲ್ಕತ್ತಾ ಕಮಲಕ್ಕೆ ಮುಖಭಂಗ; ಟಿಎಂಸಿ ಸೇರಿದ ಬಿಜೆಪಿ ಸಂಸದನ ಪತ್ನಿ!

ತೃಣಮೂಲ ಸಂಸದ ಸೌಗತಾ ರಾಯ್ ಮತ್ತು ವಕ್ತಾರ ಕುನಾಲ್ ಘೋಷ್ ಅವರ ಸಮ್ಮುಖದಲ್ಲಿ ಸುಜಾತಾ ಮಂಡಲ್ ಖಾನ್ ಟಿಎಂಸಿ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.

“ನಾನು ರಾಜ್ಯದಲ್ಲಿ ಬಿಜೆಪಿ ಪಕ್ಷವನ್ನು ಬೆಳೆಸಲು ಸಾಕಷ್ಟು ಶ್ರಮವಹಿಸಿ ಕೆಲಸ ಮಾಡಿದ್ದೇನೆ. ಆದರೆ, ಸದ್ಯಕ್ಕೆ ಮೂಲ ಬಿಜೆಪಿಗರಿಗೇ ಪಕ್ಷದಲ್ಲಿ ಬೆಲೆ ಗೌರವ ಇಲ್ಲದಂತಾಗಿದೆ. ಇದೇ ಕಾರಣಕ್ಕಾಗಿ ನಾನು ಪಕ್ಷವನ್ನು ತ್ಯಜಿಸುತ್ತಿದ್ದೇನೆ. ಅಲ್ಲದೆ, ಓರ್ವ ಮಹಿಳೆಯಾಗಿ ನನಗೆ ಆ ಪಕ್ಷದಲ್ಲಿರುವುದು ಕಷ್ಟವಾಗುತ್ತಿದೆ” ಎಂದು ಸುಜಾತಾ ಮೊಂಡಾಲ್ ತಿಳಿಸಿದ್ದರು.

ಅಲ್ಲದೆ, “ಬಿಜೆಪಿ ಪಕ್ಷ ತೃಣಮೂಲ ಕಾಂಗ್ರೆಸ್​ನಲ್ಲಿರುವ ಎಲ್ಲಾ ರಾಜಕಾರಣಿಗಳನ್ನು ಪಕ್ಷಾಂತರದ ಹೆಸರಿನಲ್ಲಿ ಭ್ರಷ್ಟಗೊಳಿಸುತ್ತಿದೆ. ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಅವರ ವರ್ಚಸ್ಸನ್ನು ಬಿಜೆಪಿ ಏನೇ ಮಾಡಿದರು ಕುಗ್ಗಿಸಲು ಸಾಧ್ಯವಿಲ್ಲ. ಹೀಗಾಗಿ ಓರ್ವ ಮಹಿಳೆಯಾಗಿ ಮಮತಾ ಬ್ಯಾನರ್ಜಿ ಜೊತೆಗೆ ಕೆಲಸ ಮಾಡುವುದು ನನಗೆ ಗೌರವಾನ್ವಿತವಾದ ವಿಚಾರ ಎಂದು ನಾನು ಭಾವಿಸುತ್ತೇನೆ” ಎಂದು ಸುಜಾತಾ ಮಂಡಲ್ ಖಾನ್ ತಿಳಿಸಿದ್ದಾರೆ.

ಒಟ್ಟಾರೆ, ಪಕ್ಷಗಳ ಜಗಳಕ್ಕೆ, ರಾಜಕೀಯಕ್ಕೆ ಕುಟುಂಬವೊಂದು ಬಿರುಕು ಬಿಡುವ ಸಂದರ್ಭ ಬಂದಿದೆ. ರಾಜಕೀಯ ಎಂಬುದು ಮನೆಯೊಳಗೆ ಬಂದರೆ ಇಂತಹ ಘಟನೆಗಳು ನಡೆಯುತ್ತವೆ. ರಾಜಕೀಯವನ್ನು ಮನೆ, ಕುಟುಂಬಗಳಿಂದ ಹೊರಗಿಟ್ಟರೆ ಎಷ್ಟೋ ಮದುವೆಗಳು, ಸಂಸಾರಗಳು ಉಳಿಯಬಹುದು.

ಇತ್ತ, ಪಶ್ಚಿಮ ಬಂಗಾಳದ ದುರ್ಗಾಪುರ ರ್‍ಯಾಲಿಯಲ್ಲಿ ಬಿಜೆಪಿಯ ಹೊಸ ಕಾರ್ಯಕರ್ತರು ಮತ್ತು ಹಳೇ ಕಾರ್ಯಕರ್ತರ ನಡುವೆ ಮಾರಾಮಾರಿ ನಡೆದಿದೆ. ಪಕ್ಷದ ರಾಜ್ಯದ್ಯಕ್ಷ ದಿಲೀಪ್‌ ಘೋಷ್‌ ಮತ್ತು ಪಕ್ಷದ ನಾಯಕ ಅರ್ಜುನ್‌ ಸಿಂಗ್‌ ಜೊತೆಗೆ ಯಾರು ವೇದಿಕೆ ಹಂಚಿಕೊಳ್ಳಬೇಕು ಎಂಬ ವಿಚಾರಕ್ಕೆ ಪರಸ್ಪರ ಕುರ್ಚಿಗಳು ಮತ್ತು ಕೋಲುಗಳಿಂದ ಬಡಿದಾಡಿಕೊಂಡಿದ್ದಾರೆ.


ಇದನ್ನೂ ಓದಿ: ಪ.ಬಂಗಾಳದಲ್ಲಿ BJP ಎರಡಂಕಿ ದಾಟುವುದಿಲ್ಲ: ಒಂದು ವೇಳೆ ಗೆದ್ದರೆ ರಾಜಕೀಯ ತ್ಯಜಿಸುತ್ತೇನೆ- ಪ್ರಶಾಂತ್ ಕಿಶೋರ್

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

LEAVE A REPLY

Please enter your comment!
Please enter your name here

- Advertisment -

Must Read

ಬಡ ಜನರಿಗೆ ಬದುಕು ಕಟ್ಟಿಕೊಳ್ಳಲು ನೆರವಾದ ‘ಕಾಂಗ್ರೆಸ್‌’ ಸರಕಾರದ ‘ಗ್ಯಾರಂಟಿ ಯೋಜನೆ’ ಬಗ್ಗೆ ತೇಜಸ್ವಿ...

0
ಕರ್ನಾಟಕದ ಕಾಂಗ್ರೆಸ್‌ ಸರಕಾರ ಜಾರಿಗೆ ತಂದಿದ್ದ ಪಂಚ ಗ್ಯಾರಂಟಿಗಳ ಬಗ್ಗೆ ತುಚ್ಛವಾಗಿ ಮಾತನಾಡಿದ ಬಿಜೆಪಿ ಸಂಸದ ತೇಜಸ್ವಿ ಸೂರ್ಯ, ರಾಜ್ಯದ ಕೋಟ್ಯಾಂತರ ಜನರಿಗೆ ಆಶ್ರಯವಾದ ಗ್ಯಾರಂಟಿ ಯೋಜನೆಗಳನ್ನು 'ಮತಿ ಹೀನ ಉಚಿತ ಕೊಡುಗೆ'...