PC: DNA India

ಭಾರತೀಯ ನೌಕಾಪಡೆ ದೇಶೀಯವಾಗಿ ಅಭಿವೃದ್ಧಿಪಡಿಸಿರುವ ಬ್ರಹ್ಮೋಸ್ ಸೂಪರ್‌ಸಾನಿಕ್‌ ಕ್ಷಿಪಣಿಯ ನೌಕಾ ಆವೃತ್ತಿಯನ್ನು ಭಾನುವಾರ ಅರಬ್ಬೀ ಸಮುದ್ರದಲ್ಲಿ ಯಶಸ್ವಿಯಾಗಿ ಪರೀಕ್ಷಿಸಲಾಯಿತು ಎಂದು ರಕ್ಷಣಾ ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ.

“ಕ್ಷಿಪಣಿಯು ಉನ್ನತ ಮಟ್ಟದ ಮತ್ತು ಅತ್ಯಂತ ಸಂಕೀರ್ಣವಾದ ಕುಶಲ ತಂತ್ರಜ್ಞಾನ ಹೊಂದಿದೆ. ಬ್ರಹ್ಮೋಸ್‌ ನಿಖರವಾಗಿ ತಲುಪಲಿದೆ. ಭಾರತೀಯ ನೌಕಾಪಡೆಯಲ್ಲಿ ವಿಧ್ವಂಸಕ ಕೃತ್ಯವನ್ನು ತಡೆಯುವ ಮತ್ತೊಂದು ಅಸ್ತ್ರವಾಗಲಿದೆ” ಎಂದು ಸಚಿವಾಲಯ ಹೇಳಿದೆ.

ಅಂತ್ಯಂತ ಸಂಕೀರ್ಣವಾದ ಕುಶಲ ತಂತ್ರಜ್ಞಾನ ಹೊಂದಿರುವ, ಪಿನ್‌ – ಪಾಯಿಂಟ್‌ನಷ್ಟು ನಿಖರತೆಯೊಂದಿಗೆ ಗುರಿ ಸಾಧಿಸುವಂತಹ  ಈ ಕ್ಷಿಪಣಿಯನ್ನು ಐಎನ್‌ಎಸ್‌ ಚೆನ್ನೈನಿಂದ ಪರೀಕ್ಷಾರ್ಥವಾಗಿ ಹಾರಿಸಲಾಯಿತು.

290 ಕಿ.ಮೀ ವ್ಯಾಪ್ತಿಯ ಕ್ಷಿಪಣಿ ಇದಾಗಿದೆ. ಬ್ರಹ್ಮೋಸ್​ ಕ್ಷಿಪಣಿಯನ್ನ ಭಾರತ ಹಾಗೂ ರಷ್ಯಾ ಜಂಟಿಯಾಗಿ ವಿನ್ಯಾಸಗೊಳಿಸಿ, ಅಭಿವೃದ್ಧಿಪಡಿಸಿದೆ. ಇದು ಭೂ, ವಾಯು ಮತ್ತು ನೌಕಾ ರೂಪಾಂತರಗಳನ್ನು ಹೊಂದಿದೆ. ಕ್ಷಿಪಣಿಯು ಮ್ಯಾಕ್ 2.8 ನ ವೇಗವನ್ನು ಹೊಂದಿದ್ದು, ಇದು ಶಬ್ದದ ವೇಗಕ್ಕಿಂತ ಮೂರು ಪಟ್ಟು ಹೆಚ್ಚಾಗಿದೆ.

ಬ್ರಹ್ಮೋಸ್ ನೌಕಾ ಆವೃತ್ತಿ ಕ್ಷಿಪಣಿಯ ಪರೀಕ್ಷೆ ಯಶಸ್ವಿಗೊಳಿಸಿದ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ), ಬ್ರಹ್ಮೋಸ್ ಏರೋಸ್ಪೇಸ್ ಮತ್ತು ಭಾರತೀಯ ನೌಕಪಡೆಯ ಸಿಬ್ಬಂದಿಯನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅಭಿನಂದಿಸಿದರು.

ಸೆಪ್ಟೆಂಬರ್ 30 ರಂದು ಒಡಿಶಾದ ಬಾಲಸೋರ್‌ನಲ್ಲಿ 400 ಕಿ.ಮೀ ದೂರದಲ್ಲಿರುವ ಗುರಿಗಳನ್ನು ತಲುಪಬಲ್ಲ ವಿಸ್ತೃತ ಶ್ರೇಣಿಯ ಬ್ರಹ್ಮೋಸ್ ಸೂಪರ್ಸಾನಿಕ್ ಕ್ರೂಸ್ ಕ್ಷಿಪಣಿಯನ್ನು ಭಾರತ ಪರೀಕ್ಷಿಸಿದ ಕೆಲವೇ ದಿನಗಳ ನಂತರ ಇಂದು ಮತ್ತೊಂದು ಪರೀಕ್ಷೆ ನಡೆಸಲಾಗಿದೆ.

ಸದ್ಯ ಲಡಾಖ್‌ನ ಭಾರತ-ಚೀನಾ ಗಡಿಯಲ್ಲಿ ಚೀನಾದೊಂದಿಗೆ ನಡೆಯುತ್ತಿರುವ ಸಂಘರ್ಷದ ಮಧ್ಯೆ ಭಾರತ ಕಳೆದ ಎರಡು ತಿಂಗಳುಗಳಲ್ಲಿ ಶಸ್ತ್ರಾಸ್ತ್ರಗಳ ಸರಣಿ ಪರೀಕ್ಷೆ ನಡೆಸಿದೆ.


ಇದನ್ನೂ ಓದಿ: ಹೈಪರ್‌ ಸಾನಿಕ್‌ ತಂತ್ರಜ್ಞಾನದ ಡೆಮಾನ್‌‌ಸ್ಟ್ರೇಷರ್‌ ವೆಹಿಕಲ್ ಯಶಸ್ವಿ ಉಡಾವಣೆ ಮಾಡಿದ ಭಾರತ

Donate

ಈ ಲೇಖನ, ಈ ವೆಬ್‌ಸೈಟ್ ನಿಮಗೆ ಇಷ್ಟವಾಯಿತೇ? ನಿಮ್ಮ ಬೆಂಬಲ ಇದಕ್ಕೆ ಅಗತ್ಯ.

ಜನಪರ ಪತ್ರಿಕೋದ್ಯಮದ ಉಳಿವು ಮತ್ತು ಬೆಳವಣಿಗೆಗಾಗಿ ನಿಮ್ಮ ನಿರಂತರ ಆರ್ಥಿಕ ನೆರವು ಅಗತ್ಯ. ನಿಮ್ಮಿಂದ ಸಾಧ್ಯವಿರುವಷ್ಟು ಹೆಚ್ಚಿನ ವಂತಿಗೆಯನ್ನು ನೀಡಲು ಕೆಳಗಿನ ಲಿಂಕುಗಳನ್ನು ಕ್ಲಿಕ್ಕಿಸಿ.
ಒಂದು ವೇಳೆ ಈ ಲಿಂಕಿನ ಮೂಲಕ ಹಣ ಪಾವತಿ ಮಾಡುವುದಕ್ಕೆ ಅಡಚಣೆ ಇದ್ದರೆ, ಈ ಪುಟದ ಮೇಲೆ ಅಥವಾ ಕೆಳಗೆ ಇರುವ ವಂತಿಗೆ – Donate ಬಟನ್.ಅನ್ನು ಕ್ಲಿಕ್ಕಿಸಿ.
ಧನ್ಯವಾದಗಳು
Independent journalism can’t be independent without your support, contribute by clicking below.

+ posts

LEAVE A REPLY

Please enter your comment!
Please enter your name here