Homeಮುಖಪುಟಬ್ರಿಜ್‌ಮೋಹನ್ ಮುಂದೆ ಬೇರೆಯವರಿಗೆ ಗೂಂಡಾ ಎಂದು ಕರೆಯುವುದು 'ಪದ'ಕ್ಕೆ ಮಾಡಿದ ಅವಮಾನ: ಛತ್ತೀಸ್‌ಗಢ ಸಿಎಂ

ಬ್ರಿಜ್‌ಮೋಹನ್ ಮುಂದೆ ಬೇರೆಯವರಿಗೆ ಗೂಂಡಾ ಎಂದು ಕರೆಯುವುದು ‘ಪದ’ಕ್ಕೆ ಮಾಡಿದ ಅವಮಾನ: ಛತ್ತೀಸ್‌ಗಢ ಸಿಎಂ

- Advertisement -
- Advertisement -

ಬಿಜೆಪಿಯ ಹಿರಿಯ ನಾಯಕ ಬ್ರಿಜ್‌ಮೋಹನ್ ಅಗರ್ವಾಲ್‌ ಅವರ ಮುಂದೆ ಬೇರೆಯವರನ್ನು ಗೂಂಡಾ ಎಂದು ಕರೆಯುವುದು ಪದಕ್ಕೆ ಮಾಡಿದ ಅವಮಾನ ಎಂದು ಛತ್ತೀಸ್‌ಗಢ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಟೀಕಿಸಿದ್ದಾರೆ.

ಬಿಜೆಪಿಯ ಹಿರಿಯ ನಾಯಕ ಬ್ರಿಜ್‌ಮೋಹನ್ ಅಗರವಾಲ್ ಚುನಾವಣಾ ಪ್ರಚಾರದ ವೇಳೆ ತನ್ನ ಮೇಲೆ ಕಾಂಗ್ರೆಸ್‌ ಬೆಂಬಲಿಗರು ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿದ್ದರು.

ಈ ಬಗ್ಗೆ ಪ್ರತಿಕ್ರಿಯಿಸಿದ ಸಿಎಂ ಭೂಪೇಶ್ ಬಘೇಲ್, ಮೊದಲ ವಿಷಯವೆಂದರೆ ಬ್ರಿಜ್ಮೋಹನ್ ಅಗರ್ವಾಲ್ ಮೇಲೆ ಯಾರೂ ದಾಳಿ ಮಾಡಲು ಸಾಧ್ಯವಿಲ್ಲ. ವೀಡಿಯೊದಲ್ಲಿ ಅಗರವಾಲ್ ಅವರೇ ತಳ್ಳುತ್ತಿರುವುದನ್ನು ಕಾಣಬಹುದು. ಸೇಠ್ ಜಿ ಚುನಾವಣೆಯಲ್ಲಿ ಹಿಂದುಳಿದಿದ್ದಾರೆ ಎಂಬುದನ್ನು ಈ ಆರೋಪ ಸೂಚಿಸುತ್ತದೆ. ಬ್ರಿಜ್ಮೋಹನ್ ಅವರ ಮುಂದೆ ಬೇರೊಬ್ಬರನ್ನು ಗೂಂಡ ಎಂದು ಕರೆಯುವುದು ಗೂಂಡ ಪದಕ್ಕೆ ಮಾಡಿದ ಅವಮಾನ ಎಂದು ಬಾಘೇಲ್ ಹೇಳಿದ್ದಾರೆ.

ರಾಯ್‌ಪುರ ನಗರ ದಕ್ಷಿಣ ವಿಧಾನಸಭಾ ಕ್ಷೇತ್ರದಿಂದ 7 ಬಾರಿ ಶಾಸಕರಾಗಿರುವ ಅಗರ್‌ವಾಲ್ ಅವರು ತಮ್ಮ ಕ್ಷೇತ್ರದಲ್ಲಿ ಪ್ರಚಾರ ಮಾಡುತ್ತಿದ್ದಾಗ ತಮ್ಮ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಆರೋಪಿಸಿದ್ದಾರೆ. ಘಟನೆಯ ನಂತರ ಹಲವಾರು ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರು ನಗರದ ಕೊತ್ವಾಲಿ ಪೊಲೀಸ್ ಠಾಣೆಯಲ್ಲಿ ಕ್ರಮಕ್ಕೆ ಒತ್ತಾಯಿಸಿ ಧರಣಿ ಕುಳಿತಿದ್ದರು.

ರಾಯ್‌ಪುರದ ಪ್ರಸಿದ್ಧ ದುಧಾಧಾರಿ ಮಠದ ಮುಖ್ಯ ಅರ್ಚಕ ಮಹಂತ್ ರಾಮ್ ಸುಂದರ್ ದಾಸ್ ಅವರನ್ನು ರಾಯ್‌ಪುರ ಸಿಟಿ ಸೌತ್‌ನಿಂದ ಅಗರ್ವಾಲ್ ವಿರುದ್ಧ ಕಾಂಗ್ರೆಸ್ ಕಣಕ್ಕಿಳಿಸಿದೆ. ಗುರುವಾರ ಅಗರವಾಲ್ ಅವರು ತಮ್ಮ ಕ್ಷೇತ್ರದ ಬೈಜನಾಥ್ ಪಾರಾದಲ್ಲಿ ಪ್ರಚಾರ ಮಾಡುತ್ತಿದ್ದಾಗ ಕೆಲವರು ತಮ್ಮ ಕೊರಳಪಟ್ಟಿ ಹಿಡಿದು ಹಲ್ಲೆ ಮಾಡಲು ಪ್ರಯತ್ನಿಸಿದರು ಎಂದು ಆರೋಪಿಸಿದ್ದರು.

ಘಟನೆಯನ್ನು ಯೋಜಿತ ಮತ್ತು ಉದ್ದೇಶಿತ ಘಟನೆ ಎಂದು ಹೇಳಿದ ಅಗರ್ವಾಲ್ ತನ್ನ ಮೇಲೆ ದಾಳಿ ಮಾಡಿದವರು ಕಾಂಗ್ರೆಸ್‌ ನಾಯಕರ ಬೆಂಬಲಿಗರು ಎಂದು ಹೇಳಿದ್ದರು. ಘಟನೆಗೆ ಸಂಬಂಧಿಸಿದಂತೆ ಮೊಹಮ್ಮದ್ ಸಾಜಿದ್ ಖಾನ್ ಅಲಿಯಾಸ್ ಚಿಂಟು ಎಂಬ ವ್ಯಕ್ತಿಯನ್ನು ಶುಕ್ರವಾರ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಬಳಿಕ ಅವರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ.

90 ಸದಸ್ಯ ಬಲದ ಛತ್ತೀಸ್‌ಗಢ ವಿಧಾನಸಭೆಯ 20 ಕ್ಷೇತ್ರಗಳಿಗೆ ಮೊದಲ ಹಂತದ ಚುನಾವಣೆ ನ.7 ರಂದು ನಡೆದಿತ್ತು. ಉಳಿದ ಸ್ಥಾನಗಳಿಗೆ ನ.17ರಂದು 2ನೇ ಹಂತದಲ್ಲಿ ಮತದಾನ ನಡೆಯಲಿದೆ.

ಇದನ್ನು ಓದಿ: ಉತ್ತರಾಖಂಡದಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿ ಸಾಧ್ಯತೆ

 

 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕೇಜ್ರಿವಾಲ್ ವಿರುದ್ಧ ಎನ್ಐಎ ತನಿಖೆಗೆ ಶಿಫಾರಸು ಮಾಡಿದ ದೆಹಲಿ ಲೆಫ್ಟಿನೆಂಟ್ ಗವರ್ನರ್

0
ನಿಷೇಧಿತ ಭಯೋತ್ಪಾದಕ ಸಂಘಟನೆ 'ಸಿಖ್ಸ್ ಫಾರ್ ಜಸ್ಟೀಸ್' ನಿಂದ ತಮ್ಮ ಪಕ್ಷಕ್ಕೆ ದೇಣಿಗೆ ಪಡೆದ ಆರೋಪದ ಮೇಲೆ ಸಿಎಂ ಅರವಿಂದ್ ಕೇಜ್ರಿವಾಲ್ ವಿರುದ್ಧ ಎನ್ಐಎ ತನಿಖೆಗೆ ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿ ಕೆ ಸಕ್ಸೇನಾ...