Homeಅಂತರಾಷ್ಟ್ರೀಯಮೊದಲ ಮಂಗಳಯಾನ ರಾಕೆಟ್‌‌ಅನ್ನು ಯಶಸ್ವಿಯಾಗಿ ಉಡಾವಣೆ ಮಾಡಿದ ಚೀನಾ

ಮೊದಲ ಮಂಗಳಯಾನ ರಾಕೆಟ್‌‌ಅನ್ನು ಯಶಸ್ವಿಯಾಗಿ ಉಡಾವಣೆ ಮಾಡಿದ ಚೀನಾ

ಮಿಷನ್ ಯಶಸ್ವಿಯಾದರೆ, ಅಮೇರಿಕಾ ನಂತರ ಮಂಗಳ ಗ್ರಹದಲ್ಲಿ ರೋವರ್ ಅನ್ನು ಇಳಿಸುವ ಮತ್ತು ನಿರ್ವಹಿಸುವ ಎರಡನೇ ದೇಶವಾಗಿದೆ ಚೀನಾ.

- Advertisement -
- Advertisement -

ಚೀನಾ ಇಂದು ಟಿಯಾನ್ವೆನ್ -1 ಅನ್ನು ಯಶಸ್ವಿಯಾಗಿ ಉಡಾವಣೆ ಮಾಡಿದೆ. ಇದು ಮಂಗಳ ಗ್ರಹದ ಅತ್ಯಂತ ಮಹತ್ವಾಕಾಂಕ್ಷೆಯ, ಮೊದಲ ಅಂತರ್ ಗ್ರಹ ಯಾನ. ಇದು ಗ್ರಹದ ಮೇಲ್ಮೈಯನ್ನು ಅನ್ವೇಷಿಸಲು ಆರ್ಬಿಟರ್, ಲ್ಯಾಂಡರ್ ಮತ್ತು ರೋವರ್ ಸೇರಿದಂತೆ ಮೂರು ಬಾಹ್ಯಾಕಾಶ ನೌಕೆಗಳನ್ನು ಹೊಂದಿದೆ.

ಚೀನಾದ ಈ ಮಿಷನ್ ಯಶಸ್ವಿಯಾದರೆ, ಅಮೇರಿಕಾ ನಂತರ ಮಂಗಳ ಗ್ರಹದಲ್ಲಿ ರೋವರ್ ಅನ್ನು ಇಳಿಸುವ ಮತ್ತು ನಿರ್ವಹಿಸುವ ಎರಡನೇ ದೇಶವಾಗಿದೆ. ಅಮೇರಿಕಾ ಹೊರತುಪಡಿಸಿ ಇದನ್ನು ಪ್ರಯತ್ನಿಸಿದ ಮತ್ತು ಎರಡು ಬಾರಿ ವಿಫಲವಾದ ಏಕೈಕ ದೇಶ ರಷ್ಯಾ.

ಚೀನೀ ಮಿಷನ್ ಟಿಯಾನ್ವೆನ್ -1 ಎಂದರೆ, “ಸ್ವರ್ಗಕ್ಕೆ ಪ್ರಶ್ನೆಗಳು” ಎಂದರ್ಥ. ಇದು ಬ್ರಹ್ಮಾಂಡದ ಬಗೆಗಿನ ಕವಿತೆಯಾಗಿದೆ.

ಮೂರು-ಕಾಂಬೊ-ಬಾಹ್ಯಾಕಾಶ ನೌಕೆಗಳು ಏಳು ತಿಂಗಳು ಬಾಹ್ಯಾಕಾಶದಲ್ಲಿ ಕಳೆದು, ನಂತರ ಮಂಗಳ ಗ್ರಹಕ್ಕೆ ಪ್ರಯಾಣಿಸುತ್ತದೆ. ಇದು ಫೆಬ್ರವರಿ 2021 ರಲ್ಲಿ ಮಂಗಳ ಗ್ರಹವನ್ನು ತಲುಪುತ್ತದೆ.

“ಚೀನಾಕ್ಕೆ ಇದು ಮೊದಲ ಪ್ರಯತ್ನವಾಗಿದೆ. ಅಮೇರಿಕಾ ಈಗಾಗಲೇ ಮಾಡಿದ್ದಕ್ಕಿಂತ ಹೆಚ್ಚಿನದನ್ನು ಇದು ಮಾಡಬಹುದೆಂದು ನಾನು ನಿರೀಕ್ಷಿಸುವುದಿಲ್ಲ” ಎಂದು ಹಾರ್ವರ್ಡ್-ಸ್ಮಿತ್ಸೋನಿಯನ್ ಸೆಂಟರ್ ಫಾರ್ ಆಸ್ಟ್ರೋಫಿಸಿಕ್ಸ್‌ನ ಖಗೋಳಶಾಸ್ತ್ರಜ್ಞ ಜೊನಾಥನ್ ಮೆಕ್‌ಡೊವೆಲ್ ಹೇಳಿದ್ದಾರೆ.

1990ರಿಂದ ಅಮೆರಿಕ ನಾಲ್ಕು ರೋವರ್‌ಗಳನ್ನು ಮಂಗಳ ಗ್ರಹಕ್ಕೆ ಕಳುಹಿಸಿದೆ.

ಈ ರೋವರ್‌ನ ಧ್ಯೇಯವೆಂದರೆ ಜೀವಿಸುವ ಕುರುಹುಗಳನ್ನು ಹೊಂದಿರುವ ಮಂಗಳ ಗ್ರಹದ ಅಂಗಳದ ಮಾದರಿಗಳನ್ನು ಸಂಗ್ರಹಿಸುವುದು.

ರೋವರ್ ಗ್ರಹವನ್ನು ತಲುಪಿದ ನಂತರ ಅದರ ಮೇಲ್ಮೈಯನ್ನು ಅಧ್ಯಯನ ಮಾಡಲು ಮೂರು ತಿಂಗಳು ಕಳೆಯುತ್ತದೆ.


ಇದನ್ನೂ ಓದಿ: ಖಾಸಗಿ ವಲಯಕ್ಕೆ ಬಾಹ್ಯಾಕಾಶ ಚಟುವಟಿಕೆಯಲ್ಲಿ ಅವಕಾಶ: ಇಸ್ರೋ ಮುಖ್ಯಸ್ಥ ಕೆ.ಶಿವನ್

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕೇಜ್ರಿವಾಲ್ ವಿರುದ್ಧ ಎನ್ಐಎ ತನಿಖೆಗೆ ಶಿಫಾರಸು ಮಾಡಿದ ದೆಹಲಿ ಲೆಫ್ಟಿನೆಂಟ್ ಗವರ್ನರ್

0
ನಿಷೇಧಿತ ಭಯೋತ್ಪಾದಕ ಸಂಘಟನೆ 'ಸಿಖ್ಸ್ ಫಾರ್ ಜಸ್ಟೀಸ್' ನಿಂದ ತಮ್ಮ ಪಕ್ಷಕ್ಕೆ ದೇಣಿಗೆ ಪಡೆದ ಆರೋಪದ ಮೇಲೆ ಸಿಎಂ ಅರವಿಂದ್ ಕೇಜ್ರಿವಾಲ್ ವಿರುದ್ಧ ಎನ್ಐಎ ತನಿಖೆಗೆ ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿ ಕೆ ಸಕ್ಸೇನಾ...