Homeಮುಖಪುಟಕೊರೊನಾ: ಏ.03ರೊಳಗೆ ಸಮಗ್ರ ಯೋಜನೆಯೊಂದಿಗೆ ಬನ್ನಿ: ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ತಾಕೀತು

ಕೊರೊನಾ: ಏ.03ರೊಳಗೆ ಸಮಗ್ರ ಯೋಜನೆಯೊಂದಿಗೆ ಬನ್ನಿ: ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ತಾಕೀತು

- Advertisement -
- Advertisement -

ಏಪ್ರಿಲ್ 3 ರೊಳಗೆ ಅಗತ್ಯವಿರುವ ಜನರು, ಬಡ ಜನರು, ದೈನಂದಿನ ಕೂಲಿ ಕಾರ್ಮಿಕರಿಗೆ ಸಮರ್ಪಕವಾಗಿ ಆಹಾರ ಧಾನ್ಯಗಳು ಮತ್ತು ಆಹಾರವನ್ನು ಪೂರೈಸಲು ಸಮಗ್ರ ಯೋಜನೆಯನ್ನು ಹೊರತರುವಂತೆ ಕರ್ನಾಟಕ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ.

21 ದಿನಗಳ ರಾಷ್ಟ್ರವ್ಯಾಪಿ ಲಾಕ್‌ಡೌನ್ ಸಮಯದಲ್ಲಿ ನಿರಾಶ್ರಿತ ಜನರು ಬೀದಿಗಳಲ್ಲಿ, ರೈಲ್ವೆ ಪ್ಲಾಟ್‌ಫಾರ್ಮ್‌ಗಳು, ಬಸ್ ನಿಲ್ದಾಣಗಳು ಇತ್ಯಾದಿಗಳಲ್ಲಿ ವಾಸಿಸುತ್ತಿರುವ ಜನರ ಹಿತರಕ್ಷಣೆ ಮುಖ್ಯ ಎಂಬುದನ್ನು ಹೈಕೋರ್ಟ್‌ ಒತ್ತಿ ಹೇಳಿದೆ.

ಲಾಕ್‌ಡೌನ್‌ ಸಮಯದಲ್ಲಿ ವಲಸೆ ಕಾರ್ಮಿಕರು ಮತ್ತು ನಿರಾಶ್ರಿತರು ಆಹಾರ ಸಿಗದೇ ಕಂಗಾಲಾಗಿದ್ದಾರೆ ಎಂದು ಸಂಧ್ಯಾ ಯು ಪ್ರಭು ಮತ್ತು ಇತರರು ಸಲ್ಲಿಸಿದ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಅಭಯ್ ಓಕಾ ಮತ್ತು ನ್ಯಾಯಮೂರ್ತಿ ಬಿ ವಿ ನಾಗರತ್ನ ಅವರ ವಿಭಾಗೀಯ ಪೀಠ ವಿಡಿಯೋ ಕಾನ್ಫರೆನ್ಸ್‌ ಮೂಲಕ ಆಲಿಸಿ ನಿರ್ದೇಶನಗಳನ್ನು ನೀಡಿದೆ.

ನ್ಯಾಯಾಲಯವು “ನಾವು ರಾಷ್ಟ್ರೀಯ ವಿಪತ್ತನ್ನು ಎದುರಿಸುತ್ತಿದ್ದೇವೆ. 2005ರ ವಿಪತ್ತು ನಿರ್ವಹಣಾ ಕಾಯ್ದೆಯ ನಿಬಂಧನೆಗಳನ್ನು ಆಹ್ವಾನಿಸಿದ್ದೇವೆ. ಸ್ವರಾಜ್ ಅಭಿಯಾನ್, Vs ಯೂನಿಯನ್ ಆಫ್ ಇಂಡಿಯಾ ಮತ್ತು ಇತರರು ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ತೀರ್ಪಿನ ಪ್ಯಾರಾಗ್ರಾಫ್ 128.4 ಒಳಗೊಂಡಿರುವ ನಿರ್ದೇಶನಗಳನ್ನು ಅನ್ವಯಿಸುವ ಬಗ್ಗೆ ರಾಜ್ಯ ಸರ್ಕಾರ ನಿರ್ಧಾರ ತೆಗೆದುಕೊಳ್ಳುತ್ತದೆ. ಅದರಂತೆ ಲಾಕ್‌ಡೌನ್‌ನಿಂದ ಪೀಡಿತ ವ್ಯಕ್ತಿಗಳಿಗೆ ಅವರು ಪಡಿತರ ಚೀಟಿಗಳನ್ನು ಹೊಂದಿರಲಿ ಅಥವಾ ಇಲ್ಲದಿರಲಿ ಅವರಿಗೆ ರಾಜ್ಯ ಸರ್ಕಾರವು ಆಹಾರದ ಅಗತ್ಯವನ್ನು ನೋಡಿಕೊಳ್ಳಬೇಕು” ಎಂದಿದೆ.

ನಗರ ಪ್ರದೇಶಗಳಲ್ಲಿ ಅಗತ್ಯವಿರುವವರಿಗೆ ಆಹಾರವನ್ನು ಪೂರೈಸಲು ಇರುವ ಯೋಜನೆಯನ್ನು ತಿಳಿಸುವಂತೆ ಸರ್ಕಾರವನ್ನು ನ್ಯಾಯಪೀಠ ಕೇಳಿದೆ.

ಪೌರಕರ್ಮಿಕರಿಗೆ ಸುರಕ್ಷತಾ ಸಾಧನಗಳನ್ನು ಒದಗಿಸುವುದಕ್ಕಾಗಿ ಎದ್ದಿರುವ ಸಮಸ್ಯೆಯನ್ನು ‘ಮುಖ್ಯ’ ಎಂದಿರುವ ನ್ಯಾಯಾಲಯವು, ಈ ಕುರಿತು ಬಿಬಿಎಂಪಿ ಮತ್ತು ರಾಜ್ಯ ಸರ್ಕಾರವು ಪ್ರತಿಯೊಬ್ಬ ಪೌರಕಾರ್ಮಿಕರಿಗೂ ಸುರಕ್ಷತಾ ಸಾಧನಗಳನ್ನು ಒದಗಿಸಿರುವುದರ ಬಗ್ಗೆ ಖಚಿತಪಡಿಸಿಕೊಳ್ಳಲು ನಿರ್ದೇಶಿಸಿತು. ಅಲ್ಲದೇ ತ್ಯಾಜ್ಯ / ಕಸವನ್ನು ಸಂಗ್ರಹಿಸುವಾಗ ಹೋಮ್‌ ಕ್ವಾರಂಟೈನ್‌ ಆದವರ ಮನೆಯಿಂದ ಹರಡಬಹುದಾದ ಸೋಂಕಿನ ಕುರಿತು ಆತಂಕವನ್ನು ವ್ಯಕ್ತಪಡಿಸಿದ ನಂತರ ಅದರ ಬಗ್ಗೆ ವಿಶೇಷ ಕ್ರಮಗಳನ್ನು ತೆಗೆದುಕೊಳ್ಳಲು ನ್ಯಾಯಾಲಯ ಸೂಚಿಸಿದೆ.

ಪೌರ ಕಾರ್ಮಿಕರು ಈ ಸಮಯದಲ್ಲಿ ಬಹಳ ಅನಿವಾರ್ಯವಾದ ಸೇವೆಯನ್ನು ಮಾಡುತ್ತಿದ್ದು ಅವರಿಗೆ ಸೂಕ್ತ ಸಾರಿಗೆ ವ್ಯವಸ್ಥೆಯನ್ನು ಕಲ್ಪಿಸಿಕೊಡಬೇಕೆಂದು ಸಹ ಕೋರ್ಟ್‌ ಆದೇಶಿಸಿದೆ.


ಇದನ್ನೂ ಓದಿ: ಕೊರೋನಾ ಕಾಲವೆಂಬುದು “ಮನುಷ್ಯನ ಮೇಲಿನ ಗೂಢಚಾರಿಕೆ”ಯ ಯುಗದ ಬಹುಮುಖ್ಯ ಸಂಧಿಕಾಲ


ಎಲ್ಲಾ ಎನ್‌ಜಿಒಗಳು ಕೊರೊನಾ ವಿಚಾರಕ್ಕೆ ತಾವು ಮಾಡುತ್ತಿರುವ ಪರಿಹಾರ ಕಾರ್ಯಗಳ ಕುರಿತು ಮಾಹಿತಿ ಮತ್ತು ಅವರು ಮಾಡುತ್ತಿರುವ ಭೌಗೋಳಿಕ ಪ್ರದೇಶದ ವಿವರ ನೀಡುವಂತೆ ಮನವಿ ಮಾಡಿ ವೆಬ್‌ಸೈಟ್‌ನಲ್ಲಿ ಪೋರ್ಟಲ್ ಒದಗಿಸುವುದನ್ನು ಪರಿಗಣಿಸಲು ರಾಜ್ಯ ಸರ್ಕಾರಕ್ಕೆ ಕೋರ್ಟ್‌ ಸೂಚಿಸಿದೆ. ಎಲ್ಲ ಮಾಹಿತಿಗಳು ಒಂದೆಡೆ ಸಿಕ್ಕಲ್ಲಿ ಪರಿಹಾರ ಕಾರ್ಯಚಾರಣೆ ಸುಲಭವಾಗಲಿದೆ ಎಂದು ಕೋರ್ಟ್‌ ಅಭಿಪ್ರಾಯಪಟ್ಟಿದೆ.

ಲಾಕ್ ಡೌನ್ ಉಲ್ಲಂಘಿಸುವವರ ವಿರುದ್ಧ ಪೊಲೀಸರು ಬಲವನ್ನು ಬಳಸುತ್ತಿದ್ದಾರೆ ಎಂಬ ಆರೋಪಗಳ ಬಗ್ಗೆ  ಬೆಂಗಳೂರು ಪೊಲೀಸ್ ಆಯುಕ್ತರು ಲಾಠಿಗಳನ್ನು ಬಳಸದಂತೆ ಸುತ್ತೋಲೆ ಹೊರಡಿಸಿದ್ದಾರೆ. ಅದೇ ರೀತಿ ಡಿಜಿ ಮತ್ತು ಐಜಿ ಪೊಲೀಸ್‌ ಅಧಿಕಾರಿಗಳು ರಾಜ್ಯದಾದ್ಯಂತ ಪೊಲೀಸ್ ಸಿಬ್ಬಂದಿಗೆ ಮಾರ್ಗಸೂಚಿಗಳು / ಸೂಚನೆಗಳನ್ನು ನೀಡಬೇಕು. ಪೊಲೀಸರ ಮೇಲೆ ಮೀತಿ ಮೀರಿ ವರ್ತಿಸುವ ಸಂಬಂಧಿಸಿದಂತೆ ಆರೋಪಗಳನ್ನು ಮಾಡುವ ಸಂದರ್ಭವಿಲ್ಲದಿರಬಹುದು. ಆದರೆ ಪೊಲೀಸರು ಲಾಠಿ ಚಾರ್ಜ್‌ ಮಾಡಬಾರದು ಎಂದು ಕೋರ್ಟ್‌ ಹೇಳಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಜೆಪಿಗೆ ಸಂಸದ ಸಂಗಣ್ಣ ಕರಡಿ ರಾಜೀನಾಮೆ: ಕಾಂಗ್ರೆಸ್ ಸೇರ್ಪಡೆ ಸಾಧ್ಯತೆ

0
ಲೋಕಸಭೆ ಚುನಾವಣೆಯಲ್ಲಿ ಕೊಪ್ಪಳ ಕ್ಷೇತ್ರದ ಟಿಕೆಟ್‌ ಕೈತಪ್ಪಿದ ಹಿನ್ನೆಲೆ ಬಿಜೆಪಿ ವಿರುದ್ದ ಮುನಿಸಿಕೊಂಡಿದ್ದ ಹಾಲಿ ಸಂಸದ ಸಂಗಣ್ಣ ಕರಡಿ ಅವರು ತಮ್ಮ ಸಂಸದ ಸ್ಥಾನಕ್ಕೆ ಮತ್ತು ಬಿಜೆಪಿ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ...