ಭಾರತದ ಹಲವು ರಾಜ್ಯಗಳು ಕೋವಿಡ್ ಪ್ರಕರಣಗಳು ಮತ್ತು ಸಾವುಗಳ ಸಂಖ್ಯೆಯನ್ನು ಮುಚ್ಚಿಡುತ್ತಿವೆ ಎಂಬ ಆರೋಪ ಕಳೆದ ನಾಲ್ಕೈದು ತಿಂಗಳಿಂದ ಪದೇ ಪದೇ ಕೇಳಿಬರುತ್ತಿದೆ. ರಾಜ್ಯ ಸರ್ಕಾರಗಳು ನೀಡುತ್ತಿರುವ ವರದಿ ಸುಳ್ಳೆಂದು ಹಲವಾರು ಪತ್ರಿಕೆಗಳು ಚಿತಾಗಾರಗಳಲ್ಲಿ ಲೆಕ್ಕ ಹಾಕಿ ದಾಖಲೆ ಸಮೇತ ನಿರೂಪಿಸಿದ್ದಾರೆ. ಅಲ್ಲದೇ ಬಿಹಾರ ಸರ್ಕಾರ ಕೋವಿಡ್ ಸಾವುಗಳ ಸಂಖ್ಯೆ ಮುಚ್ಚಿಟ್ಟಿದೆ ಎಂದು ಪಾಟ್ನಾ ಹೈಕೋರ್ಟ್ ಆಡಿಟ್‌ಗೆ ಸೂಚಿಸಿದಾಗ ಒಂದೇ ದಿನ ಬಿಹಾರ 3500 ಹೆಚ್ಚು ಸಾವುಗಳನ್ನು ಪರಿಷ್ಕರಿಸಿ ಸೇರಿಸಿತ್ತು.. ಇಷ್ಟೆಲ್ಲ ನಡೆಯುತ್ತಿರುವ ಸಂದರ್ಭ ಭಾರತದಲ್ಲಿ ಕೋವಿಡ್ ಸಾವುಗಳು ಸರ್ಕಾರ ಪ್ರಕಟಿಸಿದ ಅಧಿಕೃತ ಸಂಖ್ಯೆಗಿಂತ 7 ಪಟ್ಟು ಹೆಚ್ಚಿವೆ ಎಂಬ ಸುದ್ದಿ ಲೇಖನದ ವಿರುದ್ಧ ಕೇಂದ್ರ ಸರ್ಕಾರ ತಿರುಗಿಬಿದ್ದಿದೆ.
ಭಾರತದಲ್ಲಿ ಅಧಿಕೃತ ಕೋವಿಡ್ ಸಾವುಗಳ ಸಂಖ್ಯೆಗಿಂತ 5-7 ಹೆಚ್ಚಿದ ಎಂಬ ವರದಿಯನ್ನು ಕೇಂದ್ರ ಸರ್ಕಾರ ತಿರಸ್ಕರಿಸಿದೆ. ಇದು ಯಾವುದೇ ಸಾಂಕ್ರಾಮಿಕ ರೋಗಶಾಸ್ತ್ರೀಯ ಪುರಾವೆಗಳಿಲ್ಲದ ದತ್ತಾಂಶ ಎಂದು ಟೀಕಿಸಿದೆ. ಕೇಂದ್ರ ಆರೋಗ್ಯ ಸಚಿವಾಲಯ ಈ ಕುರಿತು ಹೇಳಿಕೆಯೊಂದನ್ನು ಬಿಡುಗಡೆ ಮಾಡಿ ಪತ್ರಿಕೆ ಅಥವಾ ವರದಿಯ ಹೆಸರು ಹೇಳದೆ ಕಿಡಿಕಾರಿದೆ.
ಯಾವುದೇ ಆಧಾರವಿಲ್ಲದ, ಊಹಾಪೋಹದಿಂದ ಕೂಡಿದ ವರದಿಯಿದು. ಯಾವುದೇ ದೇಶ ಅಥವಾ ಪ್ರದೇಶದ ಸಾವಿನ ಪ್ರಮಾಣವನ್ನು ನಿರ್ಧರಿಸಲು ಮರಣ ಪ್ರಮಾಣವನ್ನು ಅಂದಾಜು ಮಾಡಲು ನಿಯತಕಾಲಿಕವು ಬಳಸಿದ ಅಧ್ಯಯನಗಳು ಮೌಲ್ಯೀಕರಿಸಿದ ಸಾಧನಗಳಲ್ಲ ಎಂದು ಕೇಂದ್ರ ಹೇಳಿದೆ.
ಈ ಕುರಿತು ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷವರ್ಧನ್ ಪಿಐಬಿ ಫ್ಯಾಕ್ಟ್‌ಚೆಕ್ ಅನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಆರೋಗ್ಯ ಸಚಿವಾಲಯ ಸರಿಯಾದ, ಪಾರದರ್ಶಕ ಮಾಹಿತಿಯನ್ನು ಪ್ರಕಟಿಸುತ್ತಿದೆ ಎಂದು ಸಮರ್ಥಿಸಿಕೊಂಡಿದ್ದಾರೆ.
Article claiming 5-7x higher than reported deaths in India is purely speculative.
The evidence being cited in these reports based on extrapolation of data are devoid of any epidemiological or scientific evidence.https://t.co/h8DFCjbUQ2@MoHFW_INDIA #Unite2FightCorona pic.twitter.com/D10vzdokZl
— Dr Harsh Vardhan (@drharshvardhan) June 12, 2021
ಲೇಖನದಲ್ಲಿ ಪುರಾವೆಯಾಗಿ ವಿಮಾ ಹಕ್ಕುಗಳ ಆಧಾರದ ಮೇಲೆ ತೆಲಂಗಾಣದಲ್ಲಿ ನಡೆಸಿದ ಅಧ್ಯಯನವನ್ನು ಹೆಸರಿಸಲಾಗಿದೆ. ಅಲ್ಲಿಯೂ ವೈಜ್ಞಾನಿಕ ದತ್ತಾಂಶಗಳು ಲಭ್ಯವಿಲ್ಲ ಎಂದು ಕೇಂದ್ರದ ಹೇಳಿಕೆ ತಿಳಿಸಿದೆ.
“ಮತದಾನದ ಸಮೀಕ್ಷೆಗಳನ್ನು ನಡೆಸುವುದು, ಊಹಿಸುವುದು ಮತ್ತು ವಿಶ್ಲೇಷಿಸುವುದರಲ್ಲಿ ಚೆನ್ನಾಗಿ ಪರಿಣತಿ ಹೊಂದಿರುವ ಪ್ರಶ್ನಮ್” ಮತ್ತು “ಸಿ-ವೋಟರ್” ಎಂಬ ಗುಂಪುಗಳು ನಡೆಸಿದ ಇತರ ಎರಡು ಅಧ್ಯಯನಗಳನ್ನು ಲೇಖಣ ಆಧರಿಸಿದೆ. ಆದರೆ ಅವು ಎಂದಿಗೂ ಸಾರ್ವಜನಿಕ ಆರೋಗ್ಯ ಸಂಶೋಧನೆಯೊಂದಿಗೆ ಸಂಬಂಧ ಹೊಂದಿಲ್ಲ” ಎಂದು ಕೇಂದ್ರ ಹೇಳಿದೆ.
ತಮ್ಮದೇ ಆದ ಅಂದಾಜು ಅಭಿಪ್ರಾಯಗಳ ಮೂಲಕ ವಿಶ್ವಾಸಾರ್ಹವಲ್ಲದ ಸ್ಥಳೀಯ ಸರ್ಕಾರದ ದತ್ತಾಂಶಗಳಿಂದ, ಕಂಪನಿಯ ದಾಖಲೆಗಳಿಂದ ಮತ್ತು ಶ್ರದ್ಧಾಂಜಲಿ ಬರಹಗಳ ವಿಶ್ಲೇಷಣೆಗಳಿಂದ ಈ ವರದಿ ರಚಿಸಲಾಗಿದೆ ಎಂದು ಕೇಂದ್ರ ಕಿಡಿಕಾರಿದೆ.
ಇದನ್ನೂ ಓದಿ: ಪ್ರಧಾನಿ ಹೇಡಿಯಂತೆ ವರ್ತಿಸುತ್ತಿದ್ದಾರೆ: ಕೋವಿಡ್ ನಿರ್ವಹಣೆ ಕುರಿತು ಮೋದಿ ವಿರುದ್ಧ ಕಿಡಿಕಾರಿದ ಪ್ರಿಯಾಂಕಾ ಗಾಂಧಿ