HomeUncategorizedಚಂದ್ರಯಾನಕ್ಕೂ ಹರಭಜನ್ ಸಿಂಗ್ ಗೂ ಸಂಬಂಧವೇನು? ಆದರೂ ನೆಟ್ಟಿಗರು ಈ ಕ್ರಿಕೆಟಿಗನನ್ನು ಟ್ರೋಲ್ ಮಾಡಿದ್ದೇಕೆ?

ಚಂದ್ರಯಾನಕ್ಕೂ ಹರಭಜನ್ ಸಿಂಗ್ ಗೂ ಸಂಬಂಧವೇನು? ಆದರೂ ನೆಟ್ಟಿಗರು ಈ ಕ್ರಿಕೆಟಿಗನನ್ನು ಟ್ರೋಲ್ ಮಾಡಿದ್ದೇಕೆ?

- Advertisement -
- Advertisement -

ಹಲವು ದೇಶಗಳು ತಮ್ಮ ಧ್ವಜದ ಮೇಲೆ ಚಂದ್ರನ ಚಿತ್ರವನ್ನು ಹೊಂದಿವೆ

ಅದೇ ಸಂದರ್ಭದಲ್ಲಿ ಕೆಲವು ದೇಶಗಳ ಧ್ವಜಗಳು ಚಂದ್ರನ ಮೇಲಿವೆ.. #ಚಂದ್ರಯಾನ-2

ಹೀಗೆಂದು ಟ್ವೀಟ್ ಮಾಡಿದವರು ಭಾರತ ತಂಡದ ಮಾಜಿ ಕ್ರಿಕೆಟಿಗ ಹರಭಜನ್ ಸಿಂಗ್. ಇದಕ್ಕೂ ಹಲವಾರು ಜನರು ಲೈಕ್ ಮಾಡಿದ್ದಾರೆ. ಆದರೆ ಬಹಳಷ್ಟು ಜನರು ಈ ಟ್ವೀಟ್ ನೋಡಿ ಹರಭಜನ್ ಸಿಂಗ್ ರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಕೋಪದಿಂದ ಪ್ರತಿಕ್ರಿಯಿಸಿದ್ದಾರೆ.

ಭಾರತ ಯಶಸ್ವಿಯಾಗಿ ಚಂದ್ರಯಾನ ಮಾಡಿದ್ದು ಸಂತಸದ ವಿಷಯ. ಆದರೆ ಅದೇ ಸಂದರ್ಭದಲ್ಲಿ ಉಳಿದ ದೇಶಗಳು ಆ ಸಾಧನೆಯನ್ನು ಮಾಡಲಾಗಿಲ್ಲ ಎಂದು ಹಂಗಿಸುವುದು ಎಷ್ಟು ಸರಿ? ಅದರಲ್ಲೂ ಮುಸ್ಲಿಂ ರಾಷ್ಟ್ರಗಳನ್ನೇ ಉದ್ದೇಶಪೂರ್ವಕವಾಗಿ ಆಯ್ದುಕೊಂಡು ಟೀಕಿಸುವುದು ಮತಾಂಧತೆಯಲ್ಲವೇ? ಈ ಚೀಪ್ ಪಾಲಿಟಿಕ್ಸ್ ಬಿಟ್ಟುಬಿಡಿ ಎಂದು ಕಿಡಿಕಾರಿದ್ದಾರೆ.

ಹೌದು ಹರಭಜನ್ ತಮ್ಮ ಟ್ವೀಟ್ ನಲ್ಲಿ ಚಂದ್ರನ ಚಿಹ್ನೆಯುಳ್ಳ 09 ರಾಷ್ಟ್ರಗಳ ಧ್ವಜಗಳನ್ನು ಅಂಟಿಸಿದ್ದಾರೆ. ಅವೆಲ್ಲವೂ ಮುಸ್ಲಿಂ ರಾಷ್ಟ್ರಗಳೇ ಆಗಿವೆ. ಹಾಗೆಯೇ ಚಂದ್ರಯಾನ ಮಾಡಿದ ನಾಲ್ಕು ರಾಷ್ಟ್ರಗಳ ಚಿತ್ರಗಳನ್ನು ಹಾಕಿದ್ದಾರೆ.

ಇದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಖ್ಯಾತ ಹೋರಾಟಗಾರ್ತಿ ಕವಿತ್ ಕೃಷ್ಣನ್ “ನಿಮ್ಮ ಈ ದೊಡ್ಡ ಕಥೆಯನ್ನು ನಾನು ಸ್ವಲ್ಪ ವಾಸ್ತವದೊಂದಿಗೆ ತೊಂದರೆಗೊಳಿಸಬಹುದೇ? ಇದು ನೇಪಾಳ ಧ್ವಜ, ಅದರ ಮೇಲೆ ಅರ್ಧಚಂದ್ರ ಚಂದ್ರನೂ ಇದೆ. ಇದು ಎಲ್ಲಾ ‘ಮುಸ್ಲಿಂ’ ದೇಶಗಳನ್ನು ಅಕ್ಷರಶಃ ಕೆಟ್ಟದಾಗಿ ಚಿತ್ರಿಸುವ ಇಸ್ಲಾಮಿಫೋಬಿಯಾದ ಮೂಲತತ್ವವಾಗಿದೆ. ಶ್ರೀಲಂಕಾದ ಕ್ರಿಕೆಟಿಗರಿಂದ ನೀವು ಕಲಿಯಿರಿ ಮತ್ತು ಇದಕ್ಕಿಂತ ಮೇಲೇರಿ.” ಎಂದು ರಿಪ್ಲೈ ಮಾಡಿದ್ದಾರೆ.

ಇನ್ನು ಕೆಲವರು ವಾಟ್ಸಾಪ್ ಮೆಸೇಜ್ ಗಳನ್ನು ಫಾರ್ವಾಡ್ ಮಾಡುವ ಅಭ್ಯಾಸ ಬಿಡಿ, ನಿಮ್ಮ ಟ್ವೀಟ್ ಕೆಟ್ಟ ಉದ್ದೇಶದಿಂದ ಕೂಡಿದೆ, ನೀವು ಉತ್ತಮ ಕ್ರೀಡಾಪಡು ಅಲ್ಲ ಬದಲಿಗೆ ಕೋಮುವಾದಿಯಾಗಿದ್ದೀಯಾ ಎಂದು ಟ್ವೀಟ್ ಮಾಡಿದ್ದಾರೆ/

ನಮ್ಮ ಸಾಧನೆಯನ್ನು ಸಂಭ್ರಮಿಸುವ ರೀತಿ ಇದಲ್ಲ. ಇನ್ನೊಬ್ಬರನ್ನು ಕೆಳಗಿಳಿಸಿ ನೋಡುವುದನ್ನು ಬಿಟ್ಟು ನಾವಿನ್ನು ಸರಿಪಡಿಸಿಕೊಳ್ಳುವತ್ತ ಗಮನಹರಿಸಬೇಕಿದೆ ಎಂದು ಟ್ವೀಟ್ ಮಾಡಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ.ಬಂಗಾಳ: ತನ್ನ ವಿರುದ್ಧದ ತನಿಖೆಗೆ ಸಹಕರಿಸದಂತೆ ರಾಜಭವನದ ಸಿಬ್ಬಂದಿಗಳಿಗೆ ಸೂಚಿಸಿದ ಗವರ್ನರ್‌

0
ಪ.ಬಂಗಾಳದ ರಾಜ್ಯಪಾಲ ಸಿವಿ ಆನಂದ ಬೋಸ್ ವಿರುದ್ಧ ರಾಜಭವನದ ಮಹಿಳಾ ಉದ್ಯೋಗಿಯೋರ್ವರು ಲೈಂಗಿಕ ದೌರ್ಜನ್ಯದ ಆರೋಪದಲ್ಲಿ ಪ್ರಕರಣ ದಾಖಲಿಸಿದ್ದರು. ಈ ಕುರಿತು ತನಿಖೆ ನಡೆಸಲು ಕೋಲ್ಕತ್ತಾ ಪೊಲೀಸರು ತಂಡವನ್ನು ರಚಿಸಿದ್ದಾರೆ. ಇದರ ಬೆನ್ನಲ್ಲಿ...