Homeಮುಖಪುಟಜಾತಿ ಕಾರಣಕ್ಕೆ ಆಸ್ಪತ್ರೆಗೆ ದಾಖಲಿಸಿಕೊಳ್ಳಲು ನಿರಾಕರಣೆ ಆರೋಪ : ರಸ್ತೆ ಬದಿಯೇ ಮಗುವಿಗೆ ಜನ್ಮ ನೀಡಿದ...

ಜಾತಿ ಕಾರಣಕ್ಕೆ ಆಸ್ಪತ್ರೆಗೆ ದಾಖಲಿಸಿಕೊಳ್ಳಲು ನಿರಾಕರಣೆ ಆರೋಪ : ರಸ್ತೆ ಬದಿಯೇ ಮಗುವಿಗೆ ಜನ್ಮ ನೀಡಿದ ದಲಿತ ಮಹಿಳೆ!

- Advertisement -
- Advertisement -

ಉತ್ತರ ಪ್ರದೇಶದ ಭದೋಹಿ ಜಿಲ್ಲೆಯ ಗ್ಯಾನ್‌ಪುರದಲ್ಲಿರುವ ಮಹಾರಾಜ ಚೇತ್ ಸಿಂಗ್ ಜಿಲ್ಲಾಸ್ಪತ್ರೆಯ ಸಿಬ್ಬಂದಿ ದಾಖಲಿಸಿಕೊಳ್ಳಲು ನಿರಾಕರಿಸಿದ ಕಾರಣ, ಆದಿವಾಸಿ ಮಹಿಳೆಯೊಬ್ಬರು ಆಸ್ಪತ್ರೆಯ ಹೊರಗಿನ ರಸ್ತೆ ಬದಿಯೇ ಮಗುವಿಗೆ ಜನ್ಮ ನೀಡಿದ ಘಟನೆ ನಡೆದಿದೆ.

ಮಹಿಳೆ ಮುಸಾಹರ್ ಸಮುದಾಯಕ್ಕೆ (ದಲಿತ ಸಮುದಾಯ) ಸೇರಿದವರು ಎಂಬ ಕಾರಣಕ್ಕೆ ಆಸ್ಪತ್ರೆಯ ಸ್ಟಾಫ್ ನರ್ಸ್ ಆಕೆಗೆ ಚಿಕಿತ್ಸೆ ನೀಡಲು ನಿರಾಕರಿಸಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.

ಹೆರಿಗೆ ನೋವು ಶುರುವಾದ ಹಿನ್ನೆಲೆ ಜೊರೈ ಗ್ರಾಮದ ರಾಣಿ ದೇವಿ ಅವರನ್ನು ಮಂಗಳವಾರ (ಸೆ.29) ರಾತ್ರಿ ಕುಟುಂಬಸ್ಥರು ಆಸ್ಪತ್ರೆಗೆ ಕರೆದೊಯ್ದಿದ್ದರು. ಆದರೆ, ಆಸ್ಪತ್ರೆಯೆ ಸ್ಟಾಫ್ ನರ್ಸ್ ನೀಲಂ ಮೌರ್ಯ ರಾಣಿ ದೇವಿಗೆ ಹೆರಿಗೆ ಮಾಡಿಸಲು ನಿರಾಕರಿಸಿದ್ದಲ್ಲದೆ, ಆಕೆ ಮುಸಾಹರ್ ಸಮುದಾಯಕ್ಕೆ ಸೇರಿದರಾದ್ದರಿಂದ ಚಿಕಿತ್ಸೆ ನೀಡುವುದಿಲ್ಲ ಎಂದು ಹೇಳಿರುವುದಾಗಿ ಸಹೋದರ ವಿಜಯ್ ಕುಮಾರ್ ಹೇಳಿದ್ದಾರೆ.

ಕುಟುಂಬದವರು ಪ್ರತಿಭಟಿಸಿದರೂ ಯಾವುದೇ ಹಿರಿಯ ಅಧಿಕಾರಿ ಮಧ್ಯಪ್ರವೇಶಿಸದಿದ್ದಾಗ, ರಾಣಿ ದೇವಿ ಅವರನ್ನು ಮನೆಗೆ ಕರೆದೊಯ್ಯಲು ಮುಂದಾಗಿದ್ದರು. ಆದರೆ, ಆಸ್ಪತ್ರೆಯ ಗೇಟ್ ಹೊರಗೆ ಆಕೆಗೆ ತೀವ್ರ ಹೆರಿಗೆ ನೋವು ಕಾಣಿಸಿಕೊಂಡಿದೆ. ಆಗ ಅಲ್ಲಿದ್ದ ಮಹಿಳೆಯರು ಒಂದು ಸೀರೆಯನ್ನು ಪರದೆಯಂತೆ ಹಿಡಿದುಕೊಂಡು ಆಕೆಗೆ ಹೆರಿಗೆ ಮಾಡಿಸಲು ನೆರವಾಗಿದ್ದಾರೆ.

ಮಹಿಳೆ ಆಸ್ಪತ್ರೆಯ ಹೊರಗೆ ಹೆರಿಗೆ ಮಾಡಿಸಲಾಗಿದೆ ಎಂಬ ವಿಷಯ ತಿಳಿದ ಮುಖ್ಯ ವೈದ್ಯಾಧಿಕಾರಿ ಡಾ. ಎಸ್.ಕೆ. ಚಕ್ ಅವರು ಆಕೆಯ ಮನೆಗೆ ಭೇಟಿ ನೀಡಿ, ತಾಯಿ ಮತ್ತು ಮಗು ಇಬ್ಬರನ್ನೂ ಆಸ್ಪತ್ರೆಗೆ ಕರೆತಂದಿದ್ದಾರೆ. ಅವರನ್ನು ತುರ್ತು ಚಿಕಿತ್ಸಾ ವಿಭಾಗಕ್ಕೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ ಎಂದು ವರದಿಯಾಗಿದೆ.

ಮುಖ್ಯ ವೈದ್ಯಾಧಿಕಾರಿ ಪ್ರಕಾರ, ರಾಣಿ ಅವರು ಸೋಮವಾರ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿದ್ದರು. ಅಲ್ಲಿ ನಡೆಸಿದ ಪರೀಕ್ಷೆಗಳಲ್ಲಿ ಅವರ ಹಿಮೋಗ್ಲೋಬಿನ್ ಮಟ್ಟವು 5 ಗ್ರಾಂ ಇರುವುದು ಕಂಡುಬಂದ ಹಿನ್ನೆಲೆಯಲ್ಲಿ, ಅವರನ್ನು ಮಿರ್ಜಾಪುರ ವಿಭಾಗೀಯ ಆಸ್ಪತ್ರೆಗೆ ಶಿಫಾರಸು ಮಾಡಲಾಗಿತ್ತು. ಮಿರ್ಜಾಪುರದಿಂದ ಮರಳಿದ ನಂತರ, ಅವರು ಮಂಗಳವಾರ ರಾತ್ರಿ ಮತ್ತೆ ಗ್ಯಾನ್‌ಪುರ ಜಿಲ್ಲಾಸ್ಪತ್ರೆಗೆ ಭೇಟಿ ಹೋಗಿದ್ದರು. ಅಲ್ಲಿನ ಸ್ಟಾಫ್ ನರ್ಸ್ ಮತ್ತು ವೈದ್ಯರು, ಅವರ ಹಿಮೋಗ್ಲೋಬಿನ್ ಮಟ್ಟ ಕಡಿಮೆಯಿದ್ದ ಕಾರಣ ಬಿಎಚ್‌ಯುಗೆ ಶಿಫಾರಸು ಮಾಡಿದ್ದರು.

ರಾಣಿ ಮತ್ತು ಅವರ ಕುಟುಂಬದವರು 102 ಆಂಬ್ಯುಲೆನ್ಸ್ ಸೇವೆಯನ್ನು ಸಂಪರ್ಕಿಸಲು ಸಾಧ್ಯವಾಗಿಲ್ಲ ಮತ್ತು ಆಸ್ಪತ್ರೆಯಿಂದ ಹಿಂತಿರುಗುವಾಗ ಅವರು ರಸ್ತೆ ಬದಿಯಲ್ಲೇ ಮಗುವಿಗೆ ಜನ್ಮ ನೀಡಿದ್ದಾರೆ ಎಂದು ಮುಖ್ಯ ವೈದ್ಯಾಧಿಕಾರಿ ತಿಳಿಸಿದ್ದಾರೆ.

ಜಿಲ್ಲಾಡಳಿತಕ್ಕೆ ಮಾಹಿತಿ ನೀಡಿದ ನಂತರ, ಅವರನ್ನು ಮತ್ತೆ ಆಸ್ಪತ್ರೆಗೆ ಕರೆತಂದು ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಅಲ್ಲಿ ಅವರಿಗೆ ಪ್ಲಾಸ್ಮಾ ನೀಡಲಾಗುತ್ತಿದೆ.

ಸ್ಟಾಫ್‌ ನರ್ಸ್ ಮತ್ತು ವೈದ್ಯರ ವಿರುದ್ಧದ ನಿರ್ಲಕ್ಷ್ಯದ ಆರೋಪದ ಕುರಿತು ತನಿಖೆ ನಡೆಸಲು ಮುಖ್ಯ ವೈದ್ಯಾಧಿಕಾರಿ ನಾಲ್ವರು ಸದಸ್ಯರ ಸಮಿತಿಯೊಂದನ್ನು ರಚಿಸಿದ್ದಾರೆ. ತಪ್ಪಿತಸ್ಥರೆಂದು ಕಂಡುಬರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದ್ದಾರೆ.

ಜಿಲ್ಲಾ ಮ್ಯಾಜಿಸ್ಟ್ರೇಟ್ ಶೈಲೇಶ್ ಕುಮಾರ್ ಅವರು ಈ ವಿಷಯವನ್ನು ಗಂಭೀರವೆಂದು ಬಣ್ಣಿಸಿದ್ದು, ಸಂಬಂಧಪಟ್ಟ ನರ್ಸ್, ವೈದ್ಯರು ಮತ್ತು ಆಸ್ಪತ್ರೆ ಆಡಳಿತ ಮಂಡಳಿಯ ಕಾರ್ಯವೈಖರಿಯನ್ನು ಪರಿಶೀಲಿಸುವುದಾಗಿ ತಿಳಿಸಿದ್ದಾರೆ.



ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಬ್ಯಾಂಕ್ ಖಾತೆಗಳು ಸ್ಥಗಿತಗೊಳಿಸಿರುವುದನ್ನು ಪ್ರಶ್ನಿಸಿದ್ಧ ಟಿಎಂಸಿ ಆರ್ಜಿ ವಜಾಗೊಳಿಸಿದ ಸುಪ್ರೀಂ ಕೋರ್ಟ್ : ವಿಚಾರಣೆ ತ್ವರಿತಗೊಳಿಸುವಂತೆ ಹೈಕೋರ್ಟ್‌ಗೆ ಸೂಚನೆ

ಪಶ್ಚಿಮ ಬಂಗಾಳ ಪೊಲೀಸರು ತಮ್ಮ ನಾಲ್ಕು 'ಇಂಡಿಯನ್ ಬ್ಯಾಂಕ್' ಖಾತೆಗಳನ್ನು ಸ್ಥಗಿತಗೊಳಿಸಿರುವುದನ್ನು ಪ್ರಶ್ನಿಸಿ ಮಮತಾ ಬ್ಯಾನರ್ಜಿ ನೇತೃತ್ವದ 'ಆಲ್ ಇಂಡಿಯಾ ತೃಣಮೂಲ ಕಾಂಗ್ರೆಸ್' (ಎಐಟಿಸಿ) ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಗುರುವಾರ (ಅ.1)...

ಬಂಗಾಳ ಹೈಕೋರ್ಟ್‌ನಿಂದ ಮಧ್ಯಂತರ ಜಾಮೀನು; ನಂದಿಗ್ರಾಮ ಕಾಂಗ್ರೆಸ್‌ ಅಭ್ಯರ್ಥಿ ಜೈಲಿನಿಂದ ಬಿಡುಗಡೆ

ಪಶ್ಚಿಮ ಬಂಗಾಳ ಹೈಕೋರ್ಟ್ ಮಧ್ಯಂತರ ಜಾಮೀನು ನೀಡಿದ ಮರುದಿನವೇ, ಕಾಂಗ್ರೆಸ್‌ನ ನಂದಿಗ್ರಾಮ ಉಪಚುನಾವಣೆಯ ಅಭ್ಯರ್ಥಿ ಮಿಲನ್ ಪ್ರಧಾನ್ ಬುಧವಾರ (ಸೆ. 30) ಜೈಲಿನಿಂದ ಬಿಡುಗಡೆಯಾಗಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಹಲ್ದಿಯಾ ಜೈಲಿನ ಹೊರಗೆ...

ಚುನಾವಣಾ ಆಯೋಗದ ಐಟಿ ಸೆಲ್ ನಿರ್ದೇಶಕಿ ಸೀಮಾ ಖನ್ನಾ ವಿರುದ್ಧ ದೂರು ದಾಖಲಿಸಿದ ಸಂಸದೆ ಮಹುವಾ ಮೊಯಿತ್ರಾ

ಬಂಗಾಳದಲ್ಲಿ ಮತದಾರರ ಹೆಸರುಗಳು ಮತ್ತು ಪಟ್ಟಿಗಳನ್ನು ಕೇಂದ್ರ ಮಟ್ಟದಲ್ಲೇ ಸೇರಿಸಲು, ತೆಗೆದುಹಾಕಲು ಅಥವಾ ಬದಲಾಯಿಸಲು ಅನುವು ಮಾಡಿಕೊಡುವಂತಹ ಮತದಾರರ ಪಟ್ಟಿ ಸಾಫ್ಟ್‌ವೇರ್ ಬಳಕೆಗೆ ಸಂಬಂಧಿಸಿದಂತೆ, ಭಾರತೀಯ ಚುನಾವಣಾ ಆಯೋಗದ ಐಟಿ ವಿಭಾಗದ ಮಹಾನಿರ್ದೇಶಕಿ...

‘TCS ಮೇಲೆ ಒತ್ತಡ ಹೇರಲಾಗಿತ್ತೇ?’ : ಆನ್‌ಲೈನ್ ಫಾರಂ-6ರ ಬದಲಾವಣೆಗಳ ಕುರಿತು ಚುನಾವಣಾ ಆಯೋಗವನ್ನು ಪ್ರಶ್ನಿಸಿದ ರಾಹುಲ್ ಗಾಂಧಿ

ಹೊಸ ಮತದಾರರ ನೋಂದಣಿಗೆ ಬಳಸಲಾಗುವ ಆನ್‌ಲೈನ್ ಫಾರಂ ನಂಬರ್-6ರಲ್ಲಿ ಮಾಡಲಾದ ವಿವಾದಾತ್ಮಕ ಬದಲಾವಣೆಗಳ ಕುರಿತು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಗುರುವಾರ (ಅ.1) ಭಾರತೀಯ ಚುನಾವಣಾ ಆಯೋಗದಿಂದ ಉತ್ತರವನ್ನು...

ರಾಜ್ಯದಾದ್ಯಂತ ಫಾರಂ-7ರ ಮೂಲಕ ವೋಟ್ ಡಿಲೀಟ್ ಮಾಡಿಸುತ್ತಿರುವ ಬಿಜೆಪಿಗರು : ಮಾಹಿತಿ ನೀಡಲು ಸಿಎಂ ಡಿ.ಕೆ ಶಿವಕುಮಾರ್ ಸೂಚನೆ

ಬಿಜೆಪಿ ನಾಯಕರು ಮತ್ತು ಕಾರ್ಯಕರ್ತರು ಫಾರಂ ನಂಬರ್ -7 ಸಲ್ಲಿಸುವ ಮೂಲಕ ಅಲ್ಪಸಂಖ್ಯಾತರು, ದಲಿತರು ಮತ್ತು ಬಡವರ ಮತಗಳನ್ನು ಡಿಲೀಟ್ ಮಾಡಿಸುತ್ತಿದ್ದಾರೆ ಎಂದು ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಆರೋಪಿಸಿದ್ದಾರೆ. ಬುಧವಾರ (ಸೆ.30) ಸಾಮಾಜಿಕ...

ಉಜ್ಜಯಿನಿ ಶಾಹಿ ಮಸೀದಿ ಧ್ವಂಸ ಮೂರನೇ ದಿನಕ್ಕೆ: 14 ಮುಸ್ಲಿಮರ ಬಂಧನ, 30ಕ್ಕೂ ಹೆಚ್ಚು ಮಂದಿಯ ವಿರುದ್ಧ ಪ್ರಕರಣ

ಉಜ್ಜಯಿನಿ: ಮಧ್ಯಪ್ರದೇಶದ ಉಜ್ಜಯಿನಿಯ ಐತಿಹಾಸಿಕ ಶಾಹಿ ಮಸೀದಿ ಧ್ವಂಸ ಪ್ರಕರಣ ಮೂರನೇ ದಿನಕ್ಕೂ ಮುಂದುವರಿದಿದ್ದು, ಮಸೀದಿಯ ಸುತ್ತಮುತ್ತ ಭಾರೀ ಪೊಲೀಸ್ ಬಂದೋಬಸ್ತ್ ಮತ್ತು ಬ್ಯಾರಿಕೇಡ್‌ಗಳನ್ನು ಹಾಕಲಾಗಿದೆ. ಸೋಮವಾರ ಮಸೀದಿಯ ನೇತಾಡುವ ಚಪ್ಪಡಿಯ ಒಂದು...

ಹೈದರಾಬಾದ್ ವಿವಿ ಚುನಾವಣೆ: ABVPಗೆ ಮುಖಭಂಗ, ಅಧ್ಯಕ್ಷೆಯಾಗಿ SFIನ ದಿಲ್ಶಾದಾ ರೈಹಾನ್ ಭರ್ಜರಿ ಜಯ

ದೇಶದ ಪ್ರಮುಖ ಉನ್ನತ ಶಿಕ್ಷಣ ಸಂಸ್ಥೆಯಾದ ಹೈದರಾಬಾದ್ ಕೇಂದ್ರೀಯ ವಿಶ್ವವಿದ್ಯಾಲಯದ (HCU) ವಿದ್ಯಾರ್ಥಿ ಸಂಘದ ಚುನಾವಣೆಯಲ್ಲಿ ಬಲಪಂಥೀಯ ವಿದ್ಯಾರ್ಥಿ ಸಂಘಟನೆ ಎಬಿವಿಪಿಗೆ ಭಾರಿ ಹಿನ್ನಡೆಯಾಗಿದೆ. ಎಡಪಂಥೀಯ ಹಾಗೂ ದಲಿತ-ಬಹುಜನ ವಿದ್ಯಾರ್ಥಿ ಸಂಘಟನೆಗಳನ್ನೊಳಗೊಂಡ ಐಸಾ-ಎಎಸ್‌ಎ-ಡಿಎಸ್‌ಯು-ಎಸ್‌ಎಫ್‌ಐ-ಟಿಎಸ್‌ಎಫ್...

ಗ್ಯಾನೇಶ್ ಕುಮಾರ್ ನಿವಾಸದ ಬಳಿ ಪ್ರತಿಭಟನೆ: 6 ಕಾಂಗ್ರೆಸ್ ನಾಯಕರ ಬಂಧನ, 20 ಕಾರ್ಯಕರ್ತರ ವಿರುದ್ಧ ಕೊಲೆ ಯತ್ನದ ಆರೋಪ

ಆಗ್ರಾ: ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಗ್ಯಾನೇಶ್ ಕುಮಾರ್ ಅವರ ಆಗ್ರಾದಲ್ಲಿರುವ ಪೋಷಕರ ಪೈತೃಕ ನಿವಾಸದ ಹೊರಗೆ ನಡೆದ ಕಾಂಗ್ರೆಸ್ ಪ್ರತಿಭಟನೆ ಇದೀಗ ಗಂಭೀರ ಕಾನೂನು ಸಂಘರ್ಷಕ್ಕೆ ತಿರುಗಿದೆ. ಮತದಾರರ ಪಟ್ಟಿಯ ಪರಿಷ್ಕರಣೆ...

₹92,000 ಕೋಟಿ ವೆಚ್ಚದ ಗ್ರೇಟ್ ನಿಕೋಬಾರ್ ಯೋಜನೆ: ಕಲ್ಕತ್ತಾ ಹೈಕೋರ್ಟ್ ವಿಚಾರಣೆಗೆ ತಡೆ ಕೋರಿದ ಕೇಂದ್ರ ಸರ್ಕಾರ!

ಅಂದಾಜು ₹92,000 ಕೋಟಿ ವೆಚ್ಚದ ವಿವಾದಾತ್ಮಕ 'ಗ್ರೇಟ್ ನಿಕೋಬಾರ್ ದ್ವೀಪ ಅಭಿವೃದ್ಧಿ ಯೋಜನೆ'ಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರವು ಕಾನೂನಾತ್ಮಕವಾಗಿ ಅತ್ಯಂತ ಅಚ್ಚರಿಯ ಉಲ್ಟಾ ನಿಲುವು ತಳೆದಿದೆ. ಈ ಯೋಜನೆಯಲ್ಲಿ ಅರಣ್ಯ ಹಕ್ಕುಗಳ ಕಾಯಿದೆ...

SIR | ಫಾರಂ-8ರ ಬದಲು ಫಾರಂ-6 ಸಲ್ಲಿಸುವಂತೆ ಒತ್ತಡ : ಒಂದೇ ಕುಟುಂಬದ 6 ಜನರ ವೋಟ್ ಡಿಲೀಟ್; ಚುನಾವಣಾ ಆಯೋಗಕ್ಕೆ ಬಾಂಬೆ ಹೈಕೋರ್ಟ್ ತಪರಾಕಿ

ಗೋವಾದ ಸಾಂತಾ ಕ್ರೂಝ್ ಮತಕ್ಷೇತ್ರದಲ್ಲಿ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯ ಸಂದರ್ಭದಲ್ಲಿ, ಒಂದು ಕುಟುಂಬದ ಆರು ಸದಸ್ಯರು ತಮ್ಮ ವಿಳಾಸ ಬದಲಾವಣೆಯನ್ನು ತಿಳಿಸಲು 'ಫಾರ್ಮ್ 8' ಸಲ್ಲಿಸಿದ್ದರೂ ಸಹ, ಮತದಾರರ ಪಟ್ಟಿಯಿಂದ...