ಗಿರ್ಮಿಟ್ ಚಿತ್ರದಲ್ಲಿ ಮಿಂಚಿದ ಮಕ್ಕಳ ಹೊಸ ಆಸೆ ಏನು ಗೊತ್ತಾ..?

0

ನಿರ್ದೇಶಕ, ಸಂಗೀತ ನಿದೇಶಕ ಬಸ್ರೂರು ಅವರ ಹೊಸ ಪ್ರಯತ್ನದ ಗಿರ್ಮಿಟ್ ಚಿತ್ರಕ್ಕೆ ಪ್ರೇಕ್ಷಕರು ಫಿದಾ ಆಗಿದ್ದಾರೆ. ಮೊದಲ ಕಮರ್ಷಿಯಲ್​ ಚಿತ್ರ ಗಿರ್ಮಿಟ್​ ಗೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. ಚಿತ್ರದಲ್ಲಿ ಮಕ್ಕಳು ದೊಡ್ಡವರ ಧಿರಿಸಿನಲ್ಲಿ ಮನೋಜ್ಞವಾಗಿ ಅಭಿನಿಯಿಸಿದ್ದಾರೆ. ಸ್ಟಾರ್​ ನಟರ ಹಿನ್ನಲೆ ಧ್ವನಿ ಕೂಡ ಸಖತ್ ಆಗಿ ಮೂಡಿ ಬಂದಿದೆ.

ಈಗ ಹೊಸ ವಿಷಯವೆಂದರೆ ಚಿತ್ರದಲ್ಲಿ ಅಭಿನಯಿಸಿರುವ ಮಕ್ಕಳು ಹೊಸ ಆಸೆಯೊಂದನ್ನು ವ್ಯಕ್ತಪಡಿಸಿದ್ದಾರೆ. ತಮ್ಮ ಪಾತ್ರಗಳಿಗೆ ಧ್ವನಿ ನೀಡಿರುವ ನಟ ಯಶ್​ ಮತ್ತು ರಾಧಿಕಾ ಜತೆ ಚಿತ್ರ ವೀಕ್ಷಿಸಬೇಕು ಎಂಬ ಇಚ್ಛೆ ವ್ಯಕ್ತಪಡಿಸಿದ್ದಾರೆ. ಟಿವಿ ವಾಹಿನಿಗಳ ಸಂದರ್ಶನಗಳಲ್ಲಿ ತಮ್ಮ ಆಸೆ ಹೇಳಿಕೊಂಡಿದ್ದಾರೆ.

ಚಿತ್ರದಲ್ಲಿ ಅಭಿನಯಿಸಿರುವ ಬಹುತೇಕ ಮಕ್ಕಳು ಕುಂದಾಪುರದವರು, ಇವರು ಚಾಲೆಂಜಿಂಗ್​ ಸ್ಟಾರ್​ ದರ್ಶನ್​ ಅಭಿಮಾನಿಗಳಾಗಿದ್ದಾರೆ. ತಮ್ಮ ನೆಚ್ಚಿನ ನಟ ಡಿ ಬಾಸ್​ ಜತೆಯೂ ಚಿತ್ರ ನೋಡಬೇಕು ಎಂಬ ಇಚ್ಛೆ ಹೊರ ಹಾಕಿದ್ದಾರೆ. ನಟ ದರ್ಶನ್​ ತಮ್ಮ ಬಿಡುವಿಲ್ಲದ ಶೂಟಿಂಗ್​ ಸಮಯದ ಮಧ್ಯೆ ಮಕ್ಕಳ ಆಸೆ  ಈಡೇರಿಸುತ್ತಾರೆ ಅಂತಾ ನೋಡಬೇಕು.

ಈ ಮಧ್ಯೆ ಚಿತ್ರಕ್ಕೆ ಮತ್ತೊಂದು ಅಚ್ಚರಿ ಸಂಗತಿ ಎದುರಾಗಿದೆ. ಚಿತ್ರದ ಟ್ರೇಲರ್​ ನೋಡಿ ಮೆಚ್ಚಿಕೊಂಡಿರುವ ಹ್ಯಾಟ್ರಿಕ್​ ಹೀರೊ ಶಿವರಾಜ್​ ಕುಮಾರ್​ ಚಿತ್ರ ತಂಡದ ಪ್ರಯತ್ನವನ್ನು ಶ್ಲಾಘಿಸಿದ್ದಾರೆ. ತೆಲುಗು, ತಮಿಳು ಚಿತ್ರರಂಗಗಳಲ್ಲಿ ಇಂತಹ ಪ್ರಯತ್ನಗಳು ನಡೆಯುತ್ತಿರುತ್ತವೆ. ಕನ್ನಡದ ಈ ಪ್ರಯತ್ನ ಮೆಚ್ಚುವಂತಹದ್ದು, ಇಂತಹ ಪ್ರಯತ್ನಗಳು ಹೆಚ್ಚಾಗಲಿ. ಚಿತ್ರಕ್ಕೆ ಡಬ್​ ಮಾಡುವಂತೆ ನನಗೆ ಕೇಳಿದ್ದರೆ ಖಂಡಿತ ಮಾಡುತ್ತಿದ್ದೆ, ಎಂದು ಹೇಳಿ ಅಚ್ಚರಿ ಮೂಡಿಸಿದರು.

Donate

ಜನಪರ ಪತ್ರಿಕೋದ್ಯಮದ ಉಳಿವು ಮತ್ತು ಬೆಳವಣಿಗೆಗಾಗಿ ನಿಮ್ಮ ನಿರಂತರ ಆರ್ಥಿಕ ನೆರವು ಅಗತ್ಯ. ನಿಮ್ಮಿಂದ ಸಾಧ್ಯವಿರುವಷ್ಟು ಹೆಚ್ಚಿನ ವಂತಿಗೆಯನ್ನು ನೀಡಲು ಕೆಳಗಿನ ಲಿಂಕುಗಳನ್ನು ಕ್ಲಿಕ್ಕಿಸಿ.
ಒಂದು ವೇಳೆ ಈ ಲಿಂಕಿನ ಮೂಲಕ ಹಣ ಪಾವತಿ ಮಾಡುವುದಕ್ಕೆ ಅಡಚಣೆ ಇದ್ದರೆ, ಈ ಪುಟದ ಮೇಲೆ ಅಥವಾ ಕೆಳಗೆ ಇರುವ ವಂತಿಗೆ – Donate ಬಟನ್.ಅನ್ನು ಕ್ಲಿಕ್ಕಿಸಿ.
ಧನ್ಯವಾದಗಳು
Independent journalism can’t be independent without your support, contribute by clicking below.

LEAVE A REPLY

Please enter your comment!
Please enter your name here