Homeಮುಖಪುಟರಸ್ತೆ, ಮೋರಿ, ಚರಂಡಿಯಂತಹ ಸಣ್ಣ ವಿಷಯಗಳ ಬಗ್ಗೆ ಮಾತನಾಡಬೇಡಿ, ಲವ್ ಜಿಹಾದ್ ನಿಲ್ಲಿಸಲು ಬಿಜೆಪಿ ಗೆಲ್ಲಿಸಿ:...

ರಸ್ತೆ, ಮೋರಿ, ಚರಂಡಿಯಂತಹ ಸಣ್ಣ ವಿಷಯಗಳ ಬಗ್ಗೆ ಮಾತನಾಡಬೇಡಿ, ಲವ್ ಜಿಹಾದ್ ನಿಲ್ಲಿಸಲು ಬಿಜೆಪಿ ಗೆಲ್ಲಿಸಿ: ನಳೀನ್‌ಕುಮಾರ್ ಕಟೀಲ್

- Advertisement -
- Advertisement -

ರಸ್ತೆ, ಮೋರಿ, ಚರಂಡಿಯಂತಹ ಸಣ್ಣ ವಿಷಯಗಳ ಬಗ್ಗೆ ಮಾತನಾಡಬೇಡಿ, ನಿಮ್ಮ ಮಕ್ಕಳ ಬದುಕಿನ ಪ್ರಶ್ನೆ ಲವ್ ಜಿಹಾದ್ ನಿಲ್ಲಿಸಲು ಬಿಜೆಪಿ ಗೆಲ್ಲಿಸಿ ಎಂದು ಸಂಸದ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್‌ಕುಮಾರ್ ಕಟೀಲ್ ಹೇಳಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯ ಉಲ್ಲಾಳದ ಸಭೆಯಲ್ಲಿ ನಳೀನ್ ಕುಮಾರ್ ಕಟೀಲ್ ಮಾತನಾಡಿರುವ ವಿಡಿಯೋ ವೈರಲ್ ಆಗಿದ್ದು ಕಾಂಗ್ರೆಸ್ ಸೇರಿದಂತೆ ಹಲವು ಕಟೀಲ್ ಹೇಳಿಕೆಗೆ ವಿರೋಧ ವ್ಯಕ್ತಪಡಿಸಿದ್ದಾರೆ.

“ರಸ್ತೆ, ಮೋರಿ, ಚರಂಡಿಯಂತಹ ಸಣ್ಣ ವಿಷಯಗಳ ಬಗ್ಗೆ ಮಾತನಾಡಬೇಡಿ; ವೇದವ್ಯಾಸ್ ಕೈ ಎತ್ತಿಲ್ಲ, ನಳೀನ್‌ಕುಮಾರ್ ಕಟೀಲ್ ನಕ್ಕಿಲ್ಲ, ನಳೀನ್‌ಕುಮಾರ್ ನಕ್ಕರೆ ನಿಮಗೇನು ಬಂಗಾರ ಸಿಗಲ್ಲ. ನಿಮ್ಮ ಮಕ್ಕಳ ಬದುಕಿನ ಪ್ರಶ್ನೆ ಲವ್ ಜಿಹಾದ್… ಅದನ್ನು ನಿಲ್ಲಿಸಬೇಕಿದ್ದರೆ ಭಾರತೀಯ ಜನತಾ ಪಾರ್ಟಿ ಅಧಿಕಾರಕ್ಕೆ ಬರಬೇಕು” ಎಂದು ತಮ್ಮ ಭಾಷಣದಲ್ಲಿ ಹೇಳಿದ್ದಾರೆ.

ಮುಂದುವರಿದು “2014 ನಂತರ ಈ ದೇಶದಲ್ಲಿ ಎಲ್ಲಿಯೂ ಬಾಂಬ್ ಬ್ಲಾಸ್ಟ್ ಆಗಿಲ್ಲ; ಅದು ನರೇಂದ್ರ ಮೋದಿಯವರ ತಾಕತ್ತು. ನಮ್ಮ ಮಕ್ಕಳು ಶಾಲೆಗೆ ಹೋದವರು ಮತ್ತೆ ಮನೆಗೆ ಬರಬೇಕಲ್ಲವೇ? ದಕ್ಷಿಣ ಕನ್ನಡ ಜಿಲ್ಲೆ, ಕರಾವಳಿ ಆತಂಕದಲ್ಲಿದೆ. ಆತಂಕ ನಿವಾರಣೆಗೆ ಒಂದೇ ದಾರಿ; ಅದು ಅಮಿತ್ ಶಾ ಹಾಗೂ ನರೇಂದ್ರ ಮೋದಿ, ಕರ್ನಾಟಕದಲ್ಲಿ ಬೊಮ್ಮಾಯಿ” ಎಂದು ಕಟೀಲ್ ಹೇಳಿದ್ದಾರೆ.

“ನಾವು ನಮ್ಮ ತಾಕತ್ತು ತೋರಿಸುತ್ತಿದ್ದೇವೆ; ಮತಾಂತರ ನಿಷೇಧ ಕಾಯ್ದೆ, ಗೋ ಹತ್ಯೆ ನಿಷೇಧ ಕಾಯ್ದೆಯನ್ನು ಜಾರಿಗೆ ತಂದಿದ್ದು ಬೊಮ್ಮಾಯಿ ಸರ್ಕಾರ. ಲವ್ ಜಿಹಾದ್ ಕಾಯ್ದೆಯನ್ನು ನಿಷೇಧಿಸಿ ಕಾನೂನು ತರೋದು ಕೂಡಾ ನಮ್ಮದೇ ಸರ್ಕಾರ” ಎಂದು ಹೇಳಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಕಾಂಗ್ರೆಸ್ ಪಕ್ಷವು, “ಬಿಜೆಪಿ ತನ್ನ ವೈಫಲ್ಯಗಳನ್ನು, ಭ್ರಷ್ಟಾಚಾರವನ್ನು ಮರೆಮಾಚಲು ಬಳಸುವುದು ಕೋಮು ಕಲಹವನ್ನು. ರಾಜ್ಯದ ಅಭಿವೃದ್ಧಿ, ಉದ್ಯೋಗ, ಶಿಕ್ಷಣದ ವಿಷಯಗಳು ಬಿಜೆಪಿಗೆ ಸಣ್ಣ ವಿಷಯಗಳಂತೆ. ಹೇಳಿಕೊಳ್ಳಲು ಅಭಿವೃದ್ಧಿಪರ ಸಾಧನೆಗಳಿಲ್ಲದ ಬಿಜೆಪಿ ಅವುಗಳ ಬಗ್ಗೆ ಮಾತೇ ಆಡಬೇಡಿ ಎಂದು ಕಾರ್ಯಕರ್ತರಿಗೆ ಕರೆ ಕೊಟ್ಟಿರುವುದು ಅತ್ಯಂತ ನಾಚಿಕೆಗೇಡಿನ ವಿಷಯ” ಎಂದು ಟ್ವೀಟ್ ಮಾಡಿದೆ.

ರಸ್ತೆ, ಚರಂಡಿ, ರಸ್ತೆಗುಂಡಿಗಳ ಸಣ್ಣ ವಿಚಾರ, ರಸ್ತೆ ಗುಂಡಿಗಳಿಂದ ಜನ ಸತ್ತಿದ್ದೂ ಸಣ್ಣ ವಿಚಾರ, ಭ್ರಷ್ಟಾಚಾರ, ಕಮಿಷನ್ ಸಣ್ಣ ವಿಚಾರ, ಗುತ್ತಿಗೆದಾರರು ಸತ್ತಿದ್ದೂ ಸಣ್ಣ ವಿಚಾರ, 54 ಸಾವಿರ PSI ಅಭ್ಯರ್ಥಿಗಳ ಭವಿಷ್ಯ ಛಿದ್ರವಾಗಿದ್ದೂ ಸಣ್ಣ ವಿಚಾರ. ಯುವಕರ ನಿರುದ್ಯೋಗವೂ ಸಣ್ಣ ವಿಚಾರ. ಬಿಜೆಪಿಗೆ ದೊಡ್ಡ ವಿಚಾರ ಯಾವುದು? ಎಂದು ಕಾಂಗ್ರೆಸ್ ಪ್ರಶ್ನಿಸಿದೆ.

ಇದನ್ನೂ ಓದಿ; ಅಣ್ಣಾಮಲೈ ನಾಯಕತ್ವದಲ್ಲಿ ಮಹಿಳೆಯರಿಗೆ ಸುರಕ್ಷತೆ ಇಲ್ಲ: ಬಿಜೆಪಿ ತೊರೆದ ತಮಿಳು ನಟಿ ಹೇಳಿಕೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

2 COMMENTS

  1. ಈ ಅಸಹ್ಯ ಮನುಷ್ಯ ಜನರ ಕ್ಷೇಮ, ಅಭಿವೃದ್ಧಿ, ಬಡತನ ನಿವಾರಣೆ, ನಿರುದ್ಯೋಗ, ಆರೋಗ್ಯ ಮತ್ತು ಶಿಕ್ಷಣ ದಂತಹ ಮುಖ್ಯ ವಿಷಯಗಳ ಬಗ್ಗೆ ಮಾತಾಡೋದು ಬಿಟ್ಟು ವಿಷಯಾಂತರ ಮಾಡಿ ಧರ್ಮ,ಧರ್ಮ ಗಳ ನಡುವೆ ,ಜಾತಿ ಜಾತಿಗಳ ನಡುವೆ ಸಾಮರಸ್ಯ ಕದಡೋ ಬಗ್ಗೆ ಕರೆ ಕೊಡುತ್ತಿದ್ದಾನೆ,love ಜಿಹಾದ್ ಆಗಿದ್ದರೆ ಅಂತವರ ಮೇಲೆ ಕಾನೂನು ಕ್ರಮ ತೊಗೊಳ್ಳದನ್ನ ಬಿಟ್ಟು ನಿಮ್ಮ ಸರ್ಕಾರ ತವು ಡು ಕುಟ್ಟುತ್ತಿದಯೇ? ನೀನು ಒಬ್ಬ ಶಾಸಕ ನಾಚಿಕೆ ಆಗಬೇಕು.

  2. ತಲೆಯಲ್ಲಿ ಸಗಣಿ ತುಂಬುವ ಕೆಲಸ ಚೆನ್ನಾಗಿ ಮಾಡುತ್ತಾರೆ ಈ ಮಹಾನ್ ನಾಯಕರು.. ಜನರಿಗೆ ಇದೇ ಬೇಕಾಗಿತ್ತು..ಈಗ ಸಗಣಿ ತಿನ್ನಿರಿ ಮತ್ತು ತಮ್ಮ ಮಕ್ಕಳಿಗೂ ಸಹ ಸಗಣಿ ತಿನ್ನಿಸಬೇಕು ಭವಿಷ್ಯ ದಲ್ಲಿ ಅಂದರೆ ಇಂತಹ ಮಹಾನುಭಾವ ರಿಗೆ ತಮ್ಮ ಮತವನ್ನು ಕೊಡಿ.. ಸಗಣಿ ಸರ್ಕಾರ ಮತ್ತು ಸಗಣಿ ಭಕ್ತರಿಗೆ ಜೈ..

LEAVE A REPLY

Please enter your comment!
Please enter your name here

- Advertisment -

Must Read

ಕೇಜ್ರಿವಾಲ್ ವಿರುದ್ಧ ಎನ್ಐಎ ತನಿಖೆಗೆ ಶಿಫಾರಸು ಮಾಡಿದ ದೆಹಲಿ ಲೆಫ್ಟಿನೆಂಟ್ ಗವರ್ನರ್

0
ನಿಷೇಧಿತ ಭಯೋತ್ಪಾದಕ ಸಂಘಟನೆ 'ಸಿಖ್ಸ್ ಫಾರ್ ಜಸ್ಟೀಸ್' ನಿಂದ ತಮ್ಮ ಪಕ್ಷಕ್ಕೆ ದೇಣಿಗೆ ಪಡೆದ ಆರೋಪದ ಮೇಲೆ ಸಿಎಂ ಅರವಿಂದ್ ಕೇಜ್ರಿವಾಲ್ ವಿರುದ್ಧ ಎನ್ಐಎ ತನಿಖೆಗೆ ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿ ಕೆ ಸಕ್ಸೇನಾ...