Homeಮುಖಪುಟರಾಸಾಯನಿಕ ಹೊತ್ತ ಹಡಗಿನ ಮೇಲೆ ಇರಾನ್‌ನಿಂದ ಡ್ರೋನ್‌ ದಾಳಿ: ಗುಜರಾತ್‌ ಬಳಿ ಘಟನೆ

ರಾಸಾಯನಿಕ ಹೊತ್ತ ಹಡಗಿನ ಮೇಲೆ ಇರಾನ್‌ನಿಂದ ಡ್ರೋನ್‌ ದಾಳಿ: ಗುಜರಾತ್‌ ಬಳಿ ಘಟನೆ

- Advertisement -
- Advertisement -

ಇರಾನ್‌ನಿಂದ ಉಡಾವಣೆಯಾದ ಡ್ರೋನ್‌ ಹಿಂದೂ ಮಹಾಸಾಗರದಲ್ಲಿ ರಾಸಾಯನಿಕ ಟ್ಯಾಂಕರ್‌ಗೆ ಡಿಕ್ಕಿ ಹೊಡೆದಿದೆ ಎಂದು ಯುಎಸ್ ರಕ್ಷಣಾ ಇಲಾಖೆ ಆರೋಪಿಸಿದ್ದು, ಇಸ್ರೇಲ್‌- ಗಾಝಾ ಮೇಲೆ ನಡೆಸುತ್ತಿರುವ ಯುದ್ಧ ಅಪರಾಧ ಪ್ರಾದೇಶಿಕ ಉದ್ವಿಗ್ನತೆ ಮತ್ತು ಜಲ ಮಾರ್ಗಗಳಲ್ಲಿನ ಹೊಸ ಅಪಾಯವನ್ನು ಎತ್ತಿ ತೋರಿಸುತ್ತಿದೆ.

ಲೈಬೀರಿಯಾ-ಧ್ವಜವನ್ನು ಹೊಂದಿದ್ದ ಜಪಾನೀಸ್ ಒಡೆತನದ ಮತ್ತು ನೆದರ್ಲ್ಯಾಂಡ್ಸ್-ಚಾಲಿತ ರಾಸಾಯನಿಕ ಟ್ಯಾಂಕರ್ ಮೋಟಾರು ನೌಕೆ CHEM PLUTO ಮೇಲೆ ನಿನ್ನೆ ಸ್ಥಳೀಯ ಕಾಲಮಾನ ಸುಮಾರು 10 ಗಂಟೆಗೆ ಹಿಂದೂ ಮಹಾಸಾಗರದಲ್ಲಿ ಭಾರತದ ಕರಾವಳಿಯಿಂದ 200 ನಾಟಿಕಲ್ ಮೈಲುಗಳಷ್ಟು ದೂರದಲ್ಲಿ ಡ್ರೋನ್‌ ಅಪ್ಪಳಿಸಿದೆ. ಇರಾನ್‌ ಡ್ರೋನ್‌ನ್ನು ದಾಳಿ ಮಾಡಿದೆ ಎಂದು ಅಮೆರಿಕ ಆರೋಪಿಸಿರುವ ಬಗ್ಗೆ ರಾಯಿಟರ್ಸ್‌ ವರದಿ ಮಾಡಿದೆ.

2021ರಿಂದ ವಾಣಿಜ್ಯ ಹಡಗುಗಳ ಮೇಲೆ ಇರಾನ್‌ ನಡೆಸುತ್ತಿರುವ 7ನೇ ದಾಳಿ ಇದು ಎಂದು ಅಮೆರಿಕ ಆರೋಪಿಸಿದೆ. ದಾಳಿಯ ಪರಿಣಾಮವಾಗಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಮತ್ತು ಟ್ಯಾಂಕರ್‌ಗೆ ಸ್ವಲ್ಪ  ಬೆಂಕಿ ಕಾಣಿಸಿಕೊಂಡಿದೆ. ಭಾರತದ ಕರಾವಳಿಯಿಂದ ಕೇವಲ 200 ನಾಟಿಕಲ್ ಮೈಲು ದೂರದಲ್ಲಿ ಈ ಘಟನೆ ನಡೆದಿದೆ ಎಂದು ಅಮೆರಿಕ ಆರೋಪಿಸಿದೆ. ಆದರೆ ಅಮೆರಿಕದ ಆರೋಪಕ್ಕೆ ಇರಾನ್ ಯಾವುದೇ ಪ್ರತಿಕ್ರಿಯೆಯನ್ನು ನೀಡಿಲ್ಲ.

ಭಾರತೀಯ ರಕ್ಷಣಾಧಿಕಾರಿಗಳು ಹೇಳುವುದೇನು?

ಭಾರತೀಯ ಕೋಸ್ಟ್ ಗಾರ್ಡ್ ಹಡಗು ಐಸಿಜಿಎಸ್ ವಿಕ್ರಮ್, ಡ್ರೋನ್ ದಾಳಿಯಿಂದ ಬೆಂಕಿ ಕಾಣಿಸಿಕೊಂಡ ಎಂವಿ CHEM PLUTO ಹಡಗಿನ ರಕ್ಷಣೆಗೆ ತೆರಳಿದೆ. ಪೋರಬಂದರ್ ಕರಾವಳಿಯಿಂದ 217 ನಾಟಿಕಲ್ ಮೈಲಿ ದೂರದಲ್ಲಿರುವ ಅರಬ್ಬಿ ಸಮುದ್ರದಲ್ಲಿ ಘಟನೆ ನಡೆದಿದೆ ಎಂದು ಭಾರತೀಯ ರಕ್ಷಣಾ ಅಧಿಕಾರಿಗಳು ತಿಳಿಸಿದ್ದಾರೆ.

ನಾವು ಸ್ವೀಕರಿಸಿದ ಮಾಹಿತಿ ಪ್ರಕಾರ ಹಡಗಿನ ಬೆಂಕಿಯನ್ನು ನಂದಿಸಲಾಗಿದೆ ಆದರೆ ಬೆಂಕಿಯು ಹಡಗಿನ ಕಾರ್ಯನಿರ್ವಹಣೆಯ ಮೇಲೆ ಪರಿಣಾಮ ಬೀರಿದೆ. ಹಡಗಿನಲ್ಲಿದ್ದ ಸುಮಾರು 20 ಭಾರತೀಯರನ್ನು ಒಳಗೊಂಡಂತೆ ಎಲ್ಲಾ ಸಿಬ್ಬಂದಿ ಸುರಕ್ಷಿತವಾಗಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

20 ಭಾರತೀಯ ಮತ್ತು ಒಬ್ಬ ವಿಯೆಟ್ನಾಂ ಸಿಬ್ಬಂದಿಯನ್ನು ಹೊಂದಿರುವ ಹಡಗು ಡಿಸೆಂಬರ್ 19 ರಂದು ಯುನೈಟೆಡ್ ಅರಬ್ ಎಮಿರೇಟ್ಸ್‌ನಿಂದ ಹೊರಟು ಡಿ.25 ರಂದು ಮಂಗಳೂರು ಬಂದರನ್ನು ತಲುಪುವ ನಿರೀಕ್ಷೆಯಿತ್ತು ಎನ್ನಲಾಗಿದೆ.

ಅ.7ರಂದು ಇಸ್ರೇಲ್ ಮೇಲೆ ಗಾಝಾ ಮೇಲೆ ನಡೆಸುವ ಯುದ್ಧ ಅಪರಾಧದ ಮಧ್ಯೆ ಈ ಘಟನೆ ನಡೆದಿದೆ. ಇರಾನ್ ಸರ್ಕಾರ ಮತ್ತು ಯೆಮನ್‌ನಲ್ಲಿರುವ ಅದರ ಮಿತ್ರ ಪಡೆಗಳು ಗಾಝಾದ ಮೇಲೆ ಇಸ್ರೇಲ್‌ ಸರ್ಕಾರ ನಡೆಸುತ್ತಿರುವ ಮಿಲಿಟರಿ ಕಾರ್ಯಾಚರಣೆಯನ್ನು ಬಲವಾಗಿ ವಿರೋಧಿಸುತ್ತಿದೆ. ನಿನ್ನೆಯಷ್ಠೇ ಇಸ್ರೇಲ್‌ ಮತ್ತು ಅದರ ಮಿತ್ರರಾಷ್ಟ್ರ ಅಮೆರಿಕ ಗಾಝಾದಲ್ಲಿ ಯುದ್ಧ ಅಪರಾಧಗಳನ್ನು ಮಾಡುವುದನ್ನು ಮುಂದುವರೆಸಿದರೆ ಮೆಡಿಟರೇನಿಯನ್ ಸಮುದ್ರವನ್ನು ಮುಚ್ಚಲಾಗುವುದು ಎಂದು ಇರಾನ್‌ನ ಕಮಾಂಡರ್ ಮೊಹಮ್ಮದ್ ರೆಜಾ ನಕ್ದಿ ಬೆದರಿಕೆ ಹಾಕಿದ್ದರು.

ಹೌತಿ ಗುಂಪು ಕಳೆದ ತಿಂಗಳು ಗಾಝಾದ ಮೇಲೆ ಇಸ್ರೇಲ್‌ನ ದಾಳಿಗೆ ಪ್ರತೀಕಾರವಾಗಿ ಕೆಂಪು ಸಮುದ್ರದ ಮೂಲಕ ತೆರಳುತ್ತಿದ್ದ ವ್ಯಾಣಿಜ್ಯ ಹಡಗುಗಳ ಮೇಲೆ ದಾಳಿ ಮಾಡಿದೆ. ಈ ದಾಳಿ ಕೆಲವು ಹಡಗುಗಳು ಮಾರ್ಗಗಳನ್ನು ಬದಲಾಯಿಸಲು ಕಾರಣವಾಗಿತ್ತು.

ಇದನ್ನು ಓದಿ: ಗಾಝಾ ಮೇಲಿನ ಯುದ್ಧ ನಿಲ್ಲಿಸದಿದ್ದರೆ ಮೆಡಿಟರೇನಿಯನ್ ಸಮುದ್ರ ಮಾರ್ಗಗಳನ್ನು ಬಂದ್‌ ಮಾಡುತ್ತೇವೆ: ಇರಾನ್ ಎಚ್ಚರಿಕೆ

 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

‘ಇವಿಎಂ’ ತಿರುಚಲು ಶಿವಸೇನಾ ನಾಯಕನಿಗೆ 2.5 ಕೋಟಿ ರೂ.ಬೇಡಿಕೆ ಇಟ್ಟ ಯೋಧ!

0
ವಿದ್ಯುನ್ಮಾನ ಮತಯಂತ್ರಗಳನ್ನು(ಇವಿಎಂ) ತಿರುಚಲು ಶಿವಸೇನಾ ಉದ್ಧವ್‌ ಬಣದ ನಾಯಕ ಅಂಬಾದಾಸ್ ದನ್ವೆ ಅವರಿಂದ 2.5 ಕೋಟಿ ರೂಪಾಯಿಗೆ ಬೇಡಿಕೆಯಿಟ್ಟಿದ್ದಕ್ಕಾಗಿ ಮಹಾರಾಷ್ಟ್ರ ಪೊಲೀಸರು ಛತ್ರಪತಿ ಸಂಭಾಜಿನಗರದಲ್ಲಿ ಸೇನಾ ಯೋಧನೋರ್ವನನ್ನು ಬಂಧಿಸಿದ್ದಾರೆ. ಮಾರುತಿ ಧಕ್ನೆ(42) ವಿರುದ್ಧ ದೂರು...