Homeಮುಖಪುಟಲೋಕಸಭಾ ಚುನಾವಣೆ ಮುಗಿದ ನಾಲ್ಕು ತಿಂಗಳಲ್ಲೇ ನಿಯಮ ಮೀರಿ ವಿವಿ ಪ್ಯಾಟ್‌ ಸ್ಲಿಪ್‌ಗಳ ನಾಶ: ಉತ್ತರ...

ಲೋಕಸಭಾ ಚುನಾವಣೆ ಮುಗಿದ ನಾಲ್ಕು ತಿಂಗಳಲ್ಲೇ ನಿಯಮ ಮೀರಿ ವಿವಿ ಪ್ಯಾಟ್‌ ಸ್ಲಿಪ್‌ಗಳ ನಾಶ: ಉತ್ತರ ಕೊಡದ ಚುನಾವಣಾ ಆಯೋಗ..!

ಚುನಾವಣಾ ಆಯೋಗವು ನಿಯಮಗಳನ್ನು ಏಕೆ ಪಾಲಿಸಲಿಲ್ಲ. ಕೇವಲ ನಾಲ್ಕು ತಿಂಗಳಲ್ಲಿ ವಿವಿಪಿಎಟಿ ಸ್ಲಿಪ್‌ಗಳನ್ನು ಏಕೆ ನಾಶಪಡಿಸಿತು? ಮತಯಂತ್ರ ಟ್ಯಾಂಪರ್‌ ಆಗಿರುವ ಪುರಾವೆಗಳನ್ನು ನಾಶ ಮಾಡಲು ಹೀಗೆ ಮಾಡಲಾಗಿದೆಯೇ ಎಂಬ ಪ್ರಶ್ನೆಗಳು ಎದ್ದಿವೆ.

- Advertisement -
- Advertisement -

ಯಾವುದೇ ಚುನಾವಣೆಯಲ್ಲಿ ಬಳಸಿದ ಮುದ್ರಿತ ವಿವಿಪಿಎಟಿ ಸ್ಲಿಪ್‌ಗಳನ್ನು ಒಂದು ವರ್ಷದವರೆಗೆ ಉಳಿಸಿಕೊಂಡು ನಂತರ ನಾಶ ಮಾಡಬೇಕೆಂದು 1961ರ ಚುನಾವಣಾ ನಿಯಮಗಳ ನಿಯಮ 94 (ಬಿ) ಹೇಳುತ್ತದೆ. ಆದರೆ ಚುನಾವಣಾ ಆಯೋಗವು 2019ರ ಲೋಕಸಭಾ ಚುನಾವಣೆಯಲ್ಲಿ ಬಳಸಿದ ಮುದ್ರಿತ ವಿವಿಪಿಎಟಿ ಸ್ಲಿಪ್‌ಗಳನ್ನು ಈಗಾಗಲೇ ನಾಶಪಡಿಸಿದೆ. ಅದೂ ಸಹ 2019ರ ಮೇನಲ್ಲಿ ಫಲಿತಾಂಶಗಳನ್ನು ಘೋಷಿಸಿದ ನಾಲ್ಕು ತಿಂಗಳ ನಂತರ… ಯಾಕಿಷ್ಟು ಅವಸರ, ತರಾತುರಿ ಎಂಬ ಪ್ರಶ್ನೆ ಭುಗಿಲೆದ್ದಿದೆ.

ಇಂಗ್ಲಿಷ್‌ನ ಖ್ಯಾತ ವೆಬ್‌ ಪೋರ್ಟಲ್‌ ’ದಿ ಕ್ವಿಂಟ್‌’ ಸಲ್ಲಿಸಿದ್ದ ಆರ್‌ಟಿಐ ಅರ್ಜಿಗೆ ನೀಡಿದ ಉತ್ತರದಲ್ಲಿ ದೆಹಲಿ ಚುನಾವಣಾ ಆಯೋಗದ ಸಾರ್ವಜನಿಕ ಮಾಹಿತಿ ಅಧಿಕಾರಿ “ವಿವಿಪಿಎಟಿ ಸ್ಲಿಪ್‌ಗಳನ್ನು ವಿಲೇವಾರಿ ಮಾಡಲಾಗಿದೆ” ಎಂದು ತಿಳಿಸಿದ್ದಾರೆ.

ಆರ್‌ಟಿಐ ಉತ್ತರದೊಂದಿಗೆ ಲಗತ್ತಿಸಲಾದ ಮಾಹಿತಿಯಲ್ಲಿ ಚುನಾವಣಾ ಆಯೋಗವು 24 ಸೆಪ್ಟೆಂಬರ್ 2019ರಂದು ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಮುಖ್ಯ ಚುನಾವಣಾ ಅಧಿಕಾರಿಗಳಿಗೆ “ವಿವಿಪಿಎಟಿ ಮುದ್ರಿತ ಕಾಗದದ ಸ್ಲಿಪ್‌ಗಳನ್ನು ವಿಲೇವಾರಿ ಮಾಡಲು” ಆದೇಶಿಸಿದೆ.

ಚುನಾವಣೆ ಮುಗಿದ ನಾಲ್ಕು ತಿಂಗಳಲ್ಲಿಯೇ ವಿವಿಪಿಎಟಿ ಸ್ಲಿಪ್‌ಗಳನ್ನು ನಾಶಮಾಡುವ ಅವಸರ ಮತ್ತು ತುರ್ತು ಏಕೆ? ನೀವು ಮತ್ತು ನಾನು ಹೇಗೆ ಮತ ಚಲಾಯಿಸಿದ್ದೇವೆ ಎಂಬುದಕ್ಕೆ ನಿರ್ಣಾಯಕ ಸಾಕ್ಷಿಯಾಗಿರುವ ವಿವಿಪಿಎಟಿ ಸ್ಲಿಪ್‌ಗಳನ್ನು ಚುನಾವಣಾ ಆಯೋಗವು ಒಂದು ವರ್ಷದ ಅವಧಿಗೆ ಏಕೆ ಸಂಗ್ರಹಿಸಲು ಸಾಧ್ಯವಾಗಲಿಲ್ಲ?

ನೆನಪಿಡಿ, ನಾವು ಮತ ​​ಚಲಾಯಿಸಿದಾಗ, ನಮ್ಮ ಮತವು ನಮ್ಮ ಆಯ್ಕೆಯ ಅಭ್ಯರ್ಥಿಗೆ ಹೋಗಿದೆಯೇ ಎಂದು ವಿವಿಪಿಎಟಿ ಸ್ಲಿಪ್ ಪರಿಶೀಲಿಸುತ್ತದೆ. ವಿವಿಪಿಎಟಿ ಸ್ಲಿಪ್ ನಮ್ಮ ಆಯ್ಕೆಯ ಅಭ್ಯರ್ಥಿಯ ಹೆಸರನ್ನು ತೋರಿಸದಿದ್ದರೆ, ವಿವಿಪಿಎಟಿ ಯಂತ್ರದ ಅಸಮರ್ಪಕ ಕಾರ್ಯದ ಬಗ್ಗೆ ನಾವು ತಕ್ಷಣ ಮತದಾನ ಕೇಂದ್ರದಲ್ಲಿ ಚುನಾವಣಾ ಅಧಿಕಾರಿಗೆ ತಿಳಿಸಿ ದೂರು ದಾಖಲಿಸಬಹುದು.

ಇಡೀ ಮತದಾನ ಪ್ರಕ್ರಿಯೆಯಲ್ಲಿ ಸಂಭವನೀಯ ರಿಗ್ಗಿಂಗ್‌, ಅಕ್ರಮ ಮತದಾನ, ದುರ್ಬಳಕೆ ನಡೆದಿದ್ದರೆ ಪತ್ತೆಹಚ್ಚಲು ವಿವಿಪಿಎಟಿ ಸ್ಲಿಪ್‌ಗಳು ಎಷ್ಟು ನಿರ್ಣಾಯಕವಾಗಿವೆ ಎಂಬುದರ ಬಗ್ಗೆ ಕ್ವಿಂಟ್ ಈ ಹಿಂದೆ ವರದಿ ಮಾಡಿತ್ತು.

ಪ್ರತಿ ಮತದಾನ ಕೇಂದ್ರದಲ್ಲಿ, ವಿವಿಪಿಎಟಿ ಯಂತ್ರವನ್ನು ಬ್ಯಾಲೆಟ್ ಘಟಕಕ್ಕೆ ಸಂಪರ್ಕಿಸಲಾಗಿರುತ್ತದೆ. ನಾವು ಮತ ​​ಚಲಾಯಿಸಿದಾಗ, ಅದನ್ನು ಮೊದಲು ವಿವಿಪಿಎಟಿ ಯಂತ್ರದಲ್ಲಿ ದಾಖಲಿಸಲಾಗುತ್ತದೆ, ಮತ್ತು ಅದರ ನಂತರವೇ ಅದು ಇವಿಎಂ ನಿಯಂತ್ರಣ ಘಟಕಕ್ಕೆ ಹೋಗುತ್ತದೆ.

ಪ್ರತಿ ಕ್ಷೇತ್ರಕ್ಕೂ ವಿವಿಪಿಎಟಿ ಯಂತ್ರಗಳನ್ನು ಗುರುತಿಸಿದ ನಂತರ, ಅವುಗಳನ್ನು ಎರಡು ವಾರಗಳವರೆಗೆ ಸರ್ಕಾರವು ತೊಡಗಿಸಿಕೊಂಡ ಖಾಸಗಿ ಎಂಜಿನಿಯರ್‌ಗಳು ಹೇಗೆ ಪರಿಶೀಲಿಸಿದರು, ನಿರ್ವಹಿಸುತ್ತಿದ್ದರು ಮತ್ತು ಪ್ರೋಗ್ರಾಮ್ ಮಾಡಿದರು, ಈ ಸಮಯದಲ್ಲಿ ವಿವಿಪಿಎಟಿ ಯಂತ್ರಗಳು ಟ್ಯಾಂಪರಿಂಗ್‌ಗೆ ಸ್ಪಷ್ಟವಾಗಿ ಗುರಿಯಾಗುತ್ತವೆ.

ಆದ್ದರಿಂದ, 2019 ರಲ್ಲಿ ಎಲ್ಲಾ ಇವಿಎಂ-ವಿವಿಪಿಎಟಿ ಯಂತ್ರಗಳನ್ನು ಹಾಳುಗೆಡವಿದ್ದರೆ, ಮತದಾರರು ಆಯ್ಕೆ ಮಾಡಿದ ಅಭ್ಯರ್ಥಿಯ ಹೆಸರನ್ನು ತೋರಿಸುವ ವಿವಿಪಿಎಟಿ ಸ್ಲಿಪ್ ಅಂತಹ ಯಾವುದೇ ಆರೋಪದ ಬಗ್ಗೆ ತನಿಖೆ ನಡೆಸುವಾಗ ನಿರ್ಣಾಯಕ ಸಾಕ್ಷಿಯಾಗಬಹುದು.

ಆದರೆ ಈಗ, ಈ ಆರ್‌ಟಿಐ ಉತ್ತರವು ಬಹಿರಂಗಪಡಿಸಿದಂತೆ, ಎಲ್ಲಾ ವಿವಿಪಿಎಟಿ ಸ್ಲಿಪ್‌ಗಳು ನಾಶವಾಗಿವೆ ಮತ್ತು ವಿವಿಪಿಎಟಿ ಸ್ಲಿಪ್‌ಗಳ ಬಗ್ಗೆ ಇರಬಹುದಾದ ಯಾವುದೇ ಸಂಭಾವ್ಯ ಅನುಮಾನಕ್ಕೂ ಪುರಾವೆಗಳು ಸಹ ನಾಶವಾಗಿವೆ.

ಮತ್ತು ನಾವು ಮೊದಲೇ ಸೂಚಿಸಿದಂತೆ ಅದು ಚುನಾವಣಾ ನಿಯಮಗಳಿಗೆ ವಿರುದ್ಧವಾಗಿದೆ.

ಯಾವುದೇ ಪ್ರಯೋಜನವಿಲ್ಲದಿದ್ದರೂ ಸಹ, ದಶಕಗಳಿಂದ ‘ಬಾಬುಡೊಮ್’ ದಾಖಲೆಗಳು ಮತ್ತು ಫೈಲ್‌ಗಳನ್ನು ಹಿಡಿದಿಟ್ಟುಕೊಂಡಿರುವ ದೇಶದಲ್ಲಿ, ವಿವಿಪಿಎಟಿ ಸ್ಲಿಪ್‌ಗಳನ್ನು ಇಷ್ಟು ತುರ್ತಾಗಿ ಏಕೆ ವಿಲೇವಾರಿ ಮಾಡಲಾಗಿದೆ ಎಂದರೆ ಆಶ್ಚರ್ಯವಾಗುವುದಿಲ್ಲವೇ?

ಕಾನೂನು ತಜ್ಞರು ಹೇಳುವಂತೆ, ಈ ವಿವಿಪಿಎಟಿ ಸ್ಲಿಪ್‌ಗಳನ್ನು ನಾಲ್ಕು ತಿಂಗಳಲ್ಲಿ ನಾಶಪಡಿಸಿರುವುದು ಚಿಂತೆಗೀಡುಮಾಡುವು ವಿಷಯವಾಗಿದೆ. ಇದು ನಿಯಮಗಳ ಸ್ಪಷ್ಟ ಉಲ್ಲಂಘನೆಯಾಗಿದೆ. ಚುನಾವಣಾ ಆಯೋಗದ ಇಷ್ಟು ಅವಸರಕ್ಕೆ ಕಾರಣವೇನೆಂದು ವಿವರಿಸಬೇಕು. ಅಸಾಧಾರಣ ಸಂದರ್ಭಗಳಲ್ಲಿ ಮಾತ್ರ, ಹಾಗೆ ಮಾಡಲು ಸರಿಯಾದ ಕಾರಣವಿದ್ದಲ್ಲಿ ಮಾತ್ರ ಚುನಾವಣಾ ಆಯೋಗ ವಿವಿಪಿಎಟಿ ಸ್ಲಿಪ್‌ಗಳನ್ನು ನಾಶಪಡಿಸುವ ಅಧಿಕಾರ ಹೊಂದಿದೆ. ಅಂತಹ ಸಕಾರಣವೇನೆಂದು ಅದು ವಿವರಿಸಬೇಕಿದೆ.

ಚುನಾವಣಾ ಆಯೋಗದ ಆರ್‌ಟಿಐ ಉತ್ತರವನ್ನು ನೋಡಿದ್ದೇವೆ. ಆದರೆ ಅದರಲ್ಲಿ ಒಂದು ವರ್ಷಕ್ಕಿಂತ ಕಡಿಮೆ ಅವಧಿಯಲ್ಲಿ ವಿವಿಪಿಎಟಿ ಸ್ಲಿಪ್‌ಗಳನ್ನು ಏಕೆ ವಿಲೇವಾರಿ ಮಾಡಲಾಗಿದೆ ಎಂಬುದನ್ನು ವಿವರಿಸಲು ಯಾವುದೇ ಸ್ಪಷ್ಟ ಕಾರಣ ಕಂಡುಬಂದಿಲ್ಲ.

ರಾಜಸ್ಥಾನ, ಹಿಮಾಚಲ ಪ್ರದೇಶ, ಮಣಿಪುರ, ಮೇಘಾಲಯ ಮತ್ತು ಆಂಧ್ರಪ್ರದೇಶದಲ್ಲಿ ಇವಿಎಂ ಮತ್ತು ವಿವಿಪಿಎಟಿ ಮತ ಎಣಿಕೆಗಳ ನಡುವೆ ಕನಿಷ್ಠ ಎಂಟು ‘ಹೊಂದಿಕೆಯಾಗದ’ ಪ್ರಕರಣಗಳು ವರದಿಯಾಗಿವೆ ಎಂದು ಈ ಹಿಂದೆ ಕ್ವಿಂಟ್ ವರದಿ ಮಾಡಿತ್ತು.

ಈ ಪ್ರಕರಣಗಳ ವಿಚಾರಣೆಗೆ ಚುನಾವಣಾ ಆಯೋಗವು ಜುಲೈ 2019ರಲ್ಲಿ ಆದೇಶ ನೀಡಿತು. ನಡೆಸಿದ ವಿಚಾರಣೆಯ ಮಾಹಿತಿ ಕೋರಿ ಕ್ವಿಂಟ್ ಆರ್‌ಟಿಐ ಸಲ್ಲಿಸಿದರು. ಇಸಿ 2019 ರ ನವೆಂಬರ್‌ನಲ್ಲಿ ಉತ್ತರಿಸುತ್ತಾ, ಈ ವಿಷಯವು ಇಸಿಯ ತಾಂತ್ರಿಕ ತಜ್ಞರ ಸಮಿತಿಯ ಪರಿಗಣನೆಯಲ್ಲಿ ಇರುವುದರಿಂದ ಮಾಹಿತಿ ಲಭ್ಯವಿಲ್ಲ ಎಂದು ಹೇಳಿದೆ.

ಈಗ, ಈ ಎಂಟು ಪ್ರಕರಣಗಳಿಗೆ ಸಂಬಂಧಿಸಿದ ವಿವಿಪಿಎಟಿ ಸ್ಲಿಪ್‌ಗಳನ್ನು ಇಸಿ ವಿಲೇವಾರಿ ಮಾಡಿದೆಯೇ ಅಥವಾ ನಾಶಪಡಿಸಿದೆ ಎಂಬುದು ನಮಗೆ ತಿಳಿದಿಲ್ಲ. ಆದರೆ ಸೆಪ್ಟೆಂಬರ್ 2019ರಿಂದ ಈ ಚುನಾವಣಾ ಆಯೋಗ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ತಮ್ಮ ವಿವಿಪಿಎಟಿ ಸ್ಲಿಪ್‌ಗಳನ್ನು ವಿಲೇವಾರಿ ಮಾಡಲು ಆದೇಶಿಸಿದೆ…

ಇದು ಮತ್ತೊಂದು ಪ್ರಮುಖ ಪ್ರಶ್ನೆಯನ್ನು ಹುಟ್ಟುಹಾಕುತ್ತದೆ. ಈ ಎಂಟು ಪ್ರಕರಣಗಳಿಗೆ ಸಂಬಂಧಿಸಿದ ವಿವಿಪಿಎಟಿ ಸ್ಲಿಪ್‌ಗಳು ಸಹ ನಾಶವಾಗಿದ್ದರೆ, ಇವಿಎಂ ಮತ್ತು ವಿವಿಪಿಎಟಿ ಮತ ಎಣಿಕೆಗಳ ‘ಹೊಂದಾಣಿಕೆಯಾಗದ’ ಕುರಿತು ವಿಚಾರಣೆಯನ್ನು ಹೇಗೆ ನಡೆಸಬಹುದು?

ಹಾಗಾಗಿ, ನಾವು ಮತ್ತೆ ಕೇಳುತ್ತೇವೆ – ಚುನಾವಣಾ ಆಯೋಗವು ನಿಯಮಗಳನ್ನು ಏಕೆ ಪಾಲಿಸಲಿಲ್ಲ, ಮತ್ತು ಕೇವಲ ನಾಲ್ಕು ತಿಂಗಳಲ್ಲಿ ವಿವಿಪಿಎಟಿ ಸ್ಲಿಪ್‌ಗಳನ್ನು ಏಕೆ ನಾಶಪಡಿಸಿತು? ಮತಯಂತ್ರ ಟ್ಯಾಂಪರ್‌ ಆಗಿರುವ ಪುರಾವೆಗಳನ್ನು ನಾಶ ಮಾಡಲು ಹೀಗೆ ಮಾಡಲಾಗಿದೆ ಎಂದು ನಾವು ಹೇಳುವ ಧೈರ್ಯವಿದೆಯೇ?

ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವದ ಪ್ರಧಾನ ಮಂತ್ರಿಯನ್ನು ನಿರ್ಧರಿಸುವ, ಭಾರತದ ಅತ್ಯಂತ ನಿರ್ಣಾಯಕ ಚುನಾವಣೆಗಳ ವಿವಿಪಿಎಟಿ ಸ್ಲಿಪ್‌ಗಳನ್ನು ಇಸಿ ಏಕೆ ಉಳಿಸಿಕೊಳ್ಳಲಿಲ್ಲ?

ಕ್ವಿಂಟ್ ತನ್ನ ಈ ಪ್ರಶ್ನೆಗಳೊಂದಿಗೆ ಭಾರತದ ಚುನಾವಣಾ ಆಯೋಗಕ್ಕೆ ಪತ್ರ ಬರೆದಿದೆ. ನಾವೀಗ ಚುನಾವಣಾ ಆಯೋಗದ ಸಮರ್ಪಕ ಉತ್ತರದ ನಿರೀಕ್ಷೆಯಲ್ಲಿದ್ದೇವೆ…

ಕೃಪೆ: ದಿ ಕ್ವಿಂಟ್‌

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ಭಾರತೀಯ ಚುನಾವಣಾ ಆಯೋಗ, ಬಿಜೆಪಿಯ ಚುನಾವಣಾ ಏಜೆಂಟನಂತೆ ವರ್ತಿಸುತ್ತಿರುವುದಕ್ಕೆ ಈ ಪ್ರಕರಣ ಪ್ರಮುಖ ಸಾಕ್ಷಿಯಾಗಿದೆ.

LEAVE A REPLY

Please enter your comment!
Please enter your name here

- Advertisment -

ನಾಸಿಕ್‌| ಅಧಿಕಾರಿಯ ಮೇಜಿನ ಮೇಲೆ ಬೀದಿ ನಾಯಿಗಳನ್ನು ಬಿಟ್ಟ ಪ್ರತಿಭಟನಾಕಾರರು

ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ನಿಫಾದ್ ನಗರ ಪಂಚಾಯತ್ ವ್ಯಾಪ್ತಿಯಲ್ಲಿ ಬೀದಿ ನಾಯಿಗಳ ಹಾವಳಿಯನ್ನು ಖಂಡಿಸಿ ಮತ್ತು ಅಧಿಕಾರಿಗಳ ನಿರ್ಲಕ್ಷ್ಯವನ್ನು ಖಂಡಿಸಿದ ಪ್ರತಿಭಟನಾಕಾರರ ಗುಂಪೊಂದು ನಗರ ಪಂಚಾಯತ್ ಅಧಿಕಾರಿಯ ಮೇಜಿನ ಮೇಲೆ ಬೀದಿ ನಾಯಿಗಳನ್ನು...

ವಿವಾಹಿತೆ ಮೇಲೆ ಅತ್ಯಾಚಾರ ಆರೋಪ : ಬಿಜೆಪಿ ಮಾಜಿ ಶಾಸಕನ ವಿರುದ್ಧ ಎಫ್‌ಐಆರ್

ಗನ್‌ ಪಾಯಿಂಟ್‌ ಇಟ್ಟು ಬೆದರಿಸಿ 22 ವರ್ಷದ ವಿವಾಹಿತ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ಪ್ರಕರಣದಲ್ಲಿ ಮಹಾರಾಷ್ಟ್ರದ ಬಿಜೆಪಿ ಮಾಜಿ ಶಾಸಕ ಮತ್ತು ವಜಾಗೊಂಡಿರುವ ಪೊಲೀಸ್ ಸಿಬ್ಬಂದಿಯೊಬ್ಬರ ವಿರುದ್ಧ ಗುರುವಾರ (ಸೆ.17)...

ಬ್ರಿಕ್ಸ್ ಶೃಂಗಸಭೆಯಲ್ಲಿ ಸಂಪೂರ್ಣ ಸಸ್ಯಹಾರಿ ಮೆನು; ಶಿವಸೇನೆ ತೀವ್ರ ವಾಗ್ದಾಳಿ

ದೆಹಲಿಯಲ್ಲಿ ನಡೆದ 18ನೇ ಬ್ರಿಕ್ಸ್ ಶೃಂಗಸಭೆಯಲ್ಲಿ ವಿದೇಶಿ ಪ್ರತಿನಿಧಿಗಳಿಗೆ ಕೇವಲ ಸಸ್ಯಹಾರಿ ಆಹಾರವನ್ನು ಬಡಿಸಿರುವುದನ್ನು ಖಂಡಿಸಿರುವ ಶಿವಸೇನೆ (ಯುಬಿಟಿ) ಗುರುವಾರ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದೆ. ಇದು ಅಂತರರಾಷ್ಟ್ರೀಯ ಅತಿಥಿಗಳ ಮೇಲೆ...

ದೆಹಲಿ ಎಸ್‌ಐಆರ್: ಮತದಾರರ ಪಟ್ಟಿಯಿಂದ ಹೆಸರುಗಳ ಡಿಲೀಟ್ ಪ್ರಶ್ನಿಸಿ ಅರ್ಜಿ; ವಿಚಾರಣೆಗೆ ಸುಪ್ರೀಂ ಕೋರ್ಟ್ ಒಪ್ಪಿಗೆ

ದೆಹಲಿಯಲ್ಲಿ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಅಭಿಯಾನದಡಿ ಮತದಾರರ ಪಟ್ಟಿಯಿಂದ ಹೆಸರುಗಳನ್ನು ಕೈಬಿಟ್ಟಿರುವುದನ್ನು ಪ್ರಶ್ನಿಸಿ ಸಲ್ಲಿಕೆಯಾಗಿರುವ ಅರ್ಜಿಯ ವಿಚಾರಣೆಯನ್ನು ಸೆಪ್ಟೆಂಬರ್ 21ರಂದು ನಡೆಸಲು ಸುಪ್ರೀಂ ಕೋರ್ಟ್ ಗುರುವಾರ ಒಪ್ಪಿಗೆ ಸೂಚಿಸಿದೆ. ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್...

ಕೇರಳ | ಮಿತಿಗಿಂತ ಹೆಚ್ಚು ಮದ್ಯ ಸಂಗ್ರಹ ಆರೋಪ : ರಿಪೋರ್ಟರ್ ಟಿವಿ ಎಂಡಿ ಆಂಟೋ ಆಗಸ್ಟಿನ್ ಬಂಧನ

ಕೇರಳ ಅಬಕಾರಿ ಇಲಾಖೆಯು ಮಲಯಾಳಂ ಸುದ್ದಿ ವಾಹಿನಿ 'ರಿಪೋರ್ಟರ್ ಟಿವಿ'ಯ ವ್ಯವಸ್ಥಾಪಕ ನಿರ್ದೇಶಕ (ಎಂಡಿ) ಆಂಟೋ ಆಗಸ್ಟಿನ್ ಅವರನ್ನು ಗುರುವಾರ (ಸೆ.17) ಮುಂಜಾನೆ ಬಂಧಿಸಿದೆ. ಎರ್ನಾಕುಲಂನಲ್ಲಿರುವ ಸುದ್ದಿ ವಾಹಿನಿಯ ಕಚೇರಿಯಿಂದ ಮುಂಜಾನೆ ಸುಮಾರು...

ದೆಹಲಿ: ಜಾಮೀನು ಸಿಕ್ಕ ಬೆನ್ನಲ್ಲೇ ಸ್ವತಂತ್ರ ಭಾರದ್ವಾಜ್ ವಿಡಿಯೋ ವೈರಲ್; ಷರತ್ತು ಉಲ್ಲಂಘನೆ ಆರೋಪ!

ಜಂತರ್ ಮಂತರ್‌ನಲ್ಲಿ ದಲಿತ ವಿದ್ಯಾರ್ಥಿ ಹೋರಾಟಗಾರ್ತಿ ನಿಶು ಆಜಾದ್ ಅವರ ತಂದೆಯ ಮೇಲೆ ಹಲ್ಲೆ ನಡೆಸಿದ ಆರೋಪದಲ್ಲಿ ಬಂಧಿತರಾಗಿದ್ದ ಹಿಂದುತ್ವ ಪ್ರಭಾವಿ ಸ್ವತಂತ್ರ ಭಾರದ್ವಾಜ್ ಅವರಿಗೆ ದೆಹಲಿ ನ್ಯಾಯಾಲಯ ಮೂರು ವಾರಗಳ ಮಧ್ಯಂತರ...

ಸರ್ಕಾರದ ಹಸ್ತಕ್ಷೇಪದಿಂದ ಕ್ಯಾಂಪಸ್ ನಿರ್ಬಂಧದವರೆಗೆ: ಭಾರತದಲ್ಲಿ ಶೈಕ್ಷಣಿಕ ಸ್ವಾತಂತ್ರ್ಯದ ಕುಸಿತ ಬಯಲಿಗೆಳೆದ ಜಾಗತಿಕ ವರದಿ 

ಭಾರತದಲ್ಲಿ ಶೈಕ್ಷಣಿಕ ಸ್ವಾತಂತ್ರ್ಯವು ತೀವ್ರವಾಗಿ ನಿರ್ಬಂಧಿತವಾಗಿದ್ದು, ಉನ್ನತ ಶಿಕ್ಷಣ ಸಂಸ್ಥೆಗಳ ಮೇಲೆ ಸರ್ಕಾರದ ಹೆಚ್ಚುತ್ತಿರುವ ಹಸ್ತಕ್ಷೇಪ, ಕ್ಯಾಂಪಸ್‌ಗಳಲ್ಲಿ ಶೈಕ್ಷಣಿಕ ಮತ್ತು ರಾಜಕೀಯ ಅಭಿವ್ಯಕ್ತಿಯ ಮೇಲಿನ ನಿರ್ಬಂಧಗಳು, ವಿದ್ವಾಂಸರು ಹಾಗೂ ವಿದ್ಯಾರ್ಥಿಗಳ ವಿರುದ್ಧದ ಕ್ರಮಗಳು...

ಬಿಹಾರ| ದಲಿತ ಯುವಕನ ವಿವಾಹವಾದ ಯುವತಿ; ಮಗಳ ಸಾಂಕೇತಿಕ ಅಂತ್ಯಕ್ರಿಯೆ ನಡೆಸಿದ ಪೋಷಕರು

ತಮ್ಮ 18 ವರ್ಷದ ಮಗಳು ಅಂತರ್ಜಾತಿ ವಿವಾಹವಾಗಿದ್ದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಪೋಷಕರು, ಆಕೆಗೆ ಸಾಂಕೇತಿಕವಾಗಿ ಅಂತ್ಯಕ್ರಿಯೆ ನಡೆಸಿದ ಘಟನೆ ಬಿಹಾರದ ಪೂರ್ಣಿಯಾದಲ್ಲಿ ಬೆಳಕಿಗೆ ಬಂದಿದೆ. ಯುವತಿಯ ಫೋಟೋವಿರುವ ಪ್ರತಿಕೃತಿಯನ್ನು ಸಿದ್ಧಪಡಿಸಿ ಊರಿನಲ್ಲಿ ಶವಯಾತ್ರೆ...

ಸ್ವಇಚ್ಛೆಯಿಂದ ಇಸ್ಲಾಂ ಸ್ವೀಕಾರ : ಆಯುಷ್ ಮಲಿಕ್‌ರನ್ನು ಗೃಹಬಂಧನದಿಂದ ಬಿಡುಗಡೆಗೊಳಿಸಿದ ಅಲಹಾಬಾದ್ ಹೈಕೋರ್ಟ್

ತಾನು ಸ್ವಇಚ್ಛೆಯಿಂದ ಇಸ್ಲಾಂ ಧರ್ಮವನ್ನು ಸ್ವೀಕರಿಸಿರುವುದಾಗಿ ಮತ್ತು ಆ ನಂತರ ತನ್ನ ತಂದೆಯೇ ತನಗೆ ಬೆದರಿಕೆ ಹಾಕಿ, ಕಾನೂನುಬಾಹಿರವಾಗಿ ಗೃಹಬಂಧನದಲ್ಲಿ ಇರಿಸಿದ್ದರು ಎಂದು ಆರೋಪಿಸಿದ್ದ ಆಯುಷ್ ಮಲಿಕ್ ಎಂಬ 31 ವರ್ಷದ ಯುವಕನನ್ನು...

ಬಿಜ್ನೋರ್‌ನಲ್ಲಿ ಮುಸ್ಲಿಂ ಶಿಕ್ಷಕನ ಗುಂಡಿಕ್ಕಿ ಹತ್ಯೆ: ‘ಲವ್ ಜಿಹಾದ್’ ಆರೋಪ; ವೈಯಕ್ತಿಕ ದ್ವೇಷದ ಬಗ್ಗೆಯೂ ಪೊಲೀಸರಿಂದ ತನಿಖೆ 

ಬಿಜ್ನೋರ್: ಉತ್ತರ ಪ್ರದೇಶದ ಬಿಜ್ನೋರ್ ಜಿಲ್ಲೆಯಲ್ಲಿ 43 ವರ್ಷದ ಮುಸ್ಲಿಂ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕನೊಬ್ಬರನ್ನು ರೈತನೊಬ್ಬ ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ನಡೆದಿದೆ. ಶಿಕ್ಷಕ ನೌಶಾದ್ ಅಹ್ಮದ್ ಅವರು ‘ಲವ್ ಜಿಹಾದ್’...