Homeಫ್ಯಾಕ್ಟ್‌ಚೆಕ್FACT CHECK : ಹಿಂದೂ ಬಾಲಕನ ತಾಯತವನ್ನು ಮುಸ್ಲಿಮರು ಬಲವಂತದಿಂದ ತೆಗೆದಿದ್ದಾರೆ ಎಂಬುವುದು ಸುಳ್ಳು

FACT CHECK : ಹಿಂದೂ ಬಾಲಕನ ತಾಯತವನ್ನು ಮುಸ್ಲಿಮರು ಬಲವಂತದಿಂದ ತೆಗೆದಿದ್ದಾರೆ ಎಂಬುವುದು ಸುಳ್ಳು

- Advertisement -
- Advertisement -

ಬಾಂಗ್ಲಾದೇಶದಲ್ಲಿ ಹಿಂದೂ ಬಾಲಕನ ಕತ್ತಿನಿಂದ ‘ತುಳಸಿ ಮಾಲೆ’ ಅಥವಾ ತಾಯತವನ್ನು ಮುಸ್ಲಿಮರು ಬಲವಂತವಾಗಿ ಕಿತ್ತು ಹಾಕಿದ್ದಾರೆ ಎಂದು ಆರೋಪಿಸಿ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ವಿಡಿಯೋದಲ್ಲಿ ಮೊಣಕಾಲು ಮಟ್ಟ ನೀರಿನಲ್ಲಿ ನಿಂತಿರುವ ಬಾಲಕನಿಗೆ ಆಹಾರ ಸಾಮಗ್ರಿ ನೀಡುವ ಮುಸ್ಲಿಂ ವ್ಯಕ್ತಿಯೊಬ್ಬರು, ಆತನ ಕತ್ತಿನಲ್ಲಿರುವ ತಾಯತವನ್ನು ಹಲ್ಲಿನಿಂದ ಕಚ್ಚಿ ಕತ್ತರಿಸಿ ತೆಗೆಯುವ ದೃಶ್ಯವಿದೆ. ವಿಡಿಯೋ ಮೇಲೆ ಬಾಂಗ್ಲಾ ಭಾಷೆಯಲ್ಲಿ “ನೊಖಾಲಿಯಲ್ಲಿ ರಿಲೀಫ್ ಸಾಮಗ್ರಿಗಳ ವಿತರಣೆಯ ಸಮಯದಲ್ಲಿ ಮಗುವಿಗೆ ಶಿರ್ಕ್‌ನಿಂದ ಮುಕ್ತಿ ದೊರೆಯಿತು” ಎಂದು ಬರೆಯಲಾಗಿದೆ.

ಆಗಾಗ ಸುಳ್ಳು ಸುದ್ದಿಗಳನ್ನು ಹಂಚಿಕೊಳ್ಳುವ ಜಿತೇಂದ್ರ ಪ್ರತಾಪ್ ಸಿಂಗ್ (@jpsin1) ಎಂಬ ಎಕ್ಸ್‌ ಬಳಕೆದಾರ ಆಗಸ್ಟ್ 30ರಂದು ವಿಡಿಯೋ ಹಂಚಿಕೊಂಡು “ಬಾಂಗ್ಲಾದೇಶದ ಹೊಸ ಸರ್ಕಾರ ಹಿಂದೂಗಳನ್ನು ಹೇಗೆ ನಾಶ ಮಾಡುತ್ತಿದೆ ಎಂಬುವುದನ್ನು ನೋಡಿ. ನೊಖಾಲಿಯಲ್ಲಿ ಪ್ರವಾಹದಲ್ಲಿ ದಿನಗಟ್ಟಲೆ ಸಿಲುಕಿ ಹಸಿದಿದ್ದ ಹಿಂದೂ ಮಗುವನ್ನು ಜಮಾತ್-ಎ-ಇಸ್ಲಾಮಿಯ ಮೌಲ್ವಿಯೊಬ್ಬರು ಸಹಾಯ ಪಡೆಯುವ ಮೊದಲು ಕಲಿಮಾವನ್ನು ಪಠಿಸುವಂತೆ ಒತ್ತಾಯಿಸಿದರು. ನಂತರ ಮೌಲ್ವಿಯು ಮಗುವಿನ ಹಿಂದೂ ಸಂಕೇತವಾದ ತುಳಸಿ ಮಾಲೆಯನ್ನು ಬಲವಂತವಾಗಿ ತೆಗೆದು ಹಾಕಿದರು. ಅವನು ಇನ್ನು ಮುಂದೆ ಹಿಂದೂ ಅಲ್ಲ ಎಂದು ಮಗುವಿಗೆ ಹೇಳಿದರು. ಮಗು ಮಾಲೆಯನ್ನು ಹಿಂದಕ್ಕೆ ಕೇಳಿದಾಗ, ಅವರು ಇನ್ನು ಮುಂದೆ ಯಾವುದೇ ಪರಿಹಾರ ಸಾಮಗ್ರಿಗಳನ್ನು ಸಿಗುವುದಿಲ್ಲ ಎಂದು ಹೇಳಿದ್ದಾರೆ” ಎಂದು ಬರೆದುಕೊಂಡಿದ್ದರು.

ಬಲಪಂಥೀಯ ಸುದ್ದಿ ವೆಬ್‌ಸೈಟ್ ‘ಓಪ್ಇಂಡಿಯಾ’ ಕೂಡ ವಿಡಿಯೋ ಕುರಿತು ಆಗಸ್ಟ್ 30ರಂದು ವರದಿ ಪ್ರಕಟಿಸಿತ್ತು. ವರದಿಯಲ್ಲಿ ಹಿಂದೂ ಮಗುವಿನಿಂದ ಮೌಲ್ವಿ ತುಳಸಿ ಮಾಲೆಯನ್ನು ತೆಗೆದಿದ್ದಾರೆ ಎಂದು ಆರೋಪಿಸಿತ್ತು. ಬಳಿಕ, ಮಗುವಿನ ಧರ್ಮವನ್ನು ಖಚಿತವಾಗಿ ದೃಢೀಕರಿಸಲು ಸಾಧ್ಯವಿಲ್ಲ ಎಂದು ಸುದ್ದಿಯಲ್ಲಿ ತಿದ್ದುಪಡಿ ಮಾಡಿತ್ತು. ಆದರೆ, ಸುದ್ದಿಯ ಯುಆರ್‌ಎಲ್‌ ಲಿಂಕ್‌ನಲ್ಲಿ ಇನ್ನೂ ಕೂಡ ಹಿಂದೂ ಮಗು ಎಂದೇ ಇದೆ.

ಬಲಪಂಥೀಯ ಎಕ್ಸ್‌ ಬಳಕೆದಾರ ರೌಶನ್ ಸಿನ್ಹಾ ಅಥವಾ ಮಿ. ಸಿನ್ಹಾ  ಆಗಸ್ಟ್ 30ರಂದು ವಿಡಿಯೋ ಹಂಚಿಕೊಂಡು ” ಬಾಂಗ್ಲಾದೇಶದಲ್ಲಿ ಇಸ್ಲಾಮಿಸ್ಟ್‌ಗಳು ಪರಿಹಾರ ಸಾಮಾಗ್ರಿ ನೀಡಲು ಹಿಂದೂ ಮಕ್ಕಳ ಕುತ್ತಿಗೆಯಿಂದ ಧಾರ್ಮಿಕ ದಾರವನ್ನು ತೆಗೆದಿದ್ದಾರೆ. ಭಾರತದಲ್ಲಿ ಯಾವುದಾದರೂ ಸಹಾಯಕ್ಕೆ ಬದಲಾಗಿ ಯಾವುದೇ ಹಿಂದೂ ಸ್ವಾಮಿ ಮುಸ್ಲಿಂ ವ್ಯಕ್ತಿಗೆ ಇದೇ ರೀತಿ ಮಾಡಿದರೆ ಏನಾಗುತ್ತಿತ್ತು ಊಹಿಸಿ” ಎಂದು ಬರೆದಕೊಂಡಿದ್ದರು.

ಮತ್ತೊಂದು ಬಲಪಂಥೀಯ ಎಕ್ಸ್‌ ಖಾತೆ ಫ್ರಂಟಲ್ ಫೋರ್ಸ್ (@FrontalForce) ಕೂಡ ಮಿ. ಸಿನ್ಹಾನಂತೆ ಬರೆದುಕೊಂಡು ಆಗಸ್ಟ್ 30ರಂದು ವಿಡಿಯೋ ಹಂಚಿಕೊಂಡಿತ್ತು.

ಫ್ಯಾಕ್ಟ್‌ಚೆಕ್ : ವೈರಲ್ ವಿಡಿಯೋದ ಸತ್ಯಾಸತ್ಯತೆ ತಿಳಿಯಲು ನಾವು ಆ ಕುರಿತು ಮಾಹಿತಿ ಹುಡುಕಿದ್ದೇವೆ. ಈ ವೇಳೆ ಖ್ಯಾತ ಫ್ಯಾಕ್ಟ್‌ಚೆಕ್ ಸಂಸ್ಥೆ ಆಲ್ಟ್‌ ನ್ಯೂಸ್ ವಿಡಿಯೋ ಕುರಿತು ಸುದ್ದಿ ಮಾಡಿರುವುದು ಕಂಡು ಬಂದಿದೆ.

ಆಲ್ಟ್ ನ್ಯೂಸ್ ಸುದ್ದಿಯಲ್ಲಿ “ನಾವು ಬಾಂಗ್ಲಾದೇಶದ ಫ್ಯಾಕ್ಟ್‌ಚೆಕ್ಕರ್ ಸೊಹಾನುರ್ಹ್ಮಾನ್ ಅವರೊಂದಿಗೆ ಮಾತನಾಡಿದ್ದೇವೆ. ಅವರು ವಿಡಿಯೋದಲ್ಲಿರುವ ಬಾಲಕ ಹಿಂದೂ ಧರ್ಮವದನಲ್ಲ, ಮುಸ್ಲಿಂ. ಅಲ್ಲದೆ, ಆತನ ಕತ್ತಿನಿಂದ ತುಳಸಿ ಮಾಲೆಯನ್ನಲ್ಲ ತೆಗೆದಿರುವುದು. ಅದು ತಲಿಸ್ಮನ್ (ಮುಸ್ಲಿಮರು ಧರಿಸುವ ತಾಯತ) ಎಂದು ಹೇಳಿದ್ದಾರೆ ಎಂದು ತಿಳಿಸಲಾಗಿದೆ.

ನಾವು ಸೊಹಾನುರ್ಹ್ಮಾನ್ ಅವರ ಎಕ್ಸ್‌ ಖಾತೆಯನ್ನು ಪರಿಶೀಲಿಸಿದಾಗ, ಆಗಸ್ಟ್ 30ರಂದು ಅವರು ವಿಡಿಯೋ ಕುರಿತು ಸ್ಪಷ್ಟನೆ ಕೊಟ್ಟಿರುವುದು ಕಂಡು ಬಂದಿದೆ.

ಸೊಹಾನುರ್ಹ್ಮಾನ್ ಹೇಳಿರುವಂತೆ “ವೈರಲ್ ವಿಡಿಯೋವನ್ನು ಆಗಸ್ಟ್ 26ರಂದ ರಸೇಲ್ ಖಾನ್ ಎಂಬವರು ಮೊದಲು ಫೇಸ್‌ಬುಕ್‌ನಲ್ಲಿ ಅಪ್ಲೋಡ್ ಮಾಡಿದ್ದರು. ವಿಡಿಯೋದಲ್ಲಿ ಘಟನೆ ನಡೆದಿರುವುದು ನೊಖಾಲಿ  ಪ್ರದೇಶದಲ್ಲಿ ಎಂದಿದೆ. ಆ ಪ್ರದೇಶದಲ್ಲಿ ಚಂದ್‌ಪುರದ ‘ತೌಹಿದ್ ಅಕಾಡೆಮಿ ಮತ್ತು ಇಸ್ಲಾಮಿಕ್ ಸೆಂಟರ್’ ಎಂಬ ಹೆಸರಿನ ಸಲಫಿ ಇಸ್ಲಾಮಿಕ್ ಶಾಲೆಯು ಜನರಿಗೆ ಪರಿಹಾರ ಸಾಮಾಗ್ರಿಗಳನ್ನು ವಿತರಿಸಿತ್ತು. ಸಲಫಿ/ಅಹ್ಲೆ ಹದೀಸ್ ಅನುಯಾಯಿಗಳು ತವೀಜ್ (ತಾಯತ) ಧರಿಸುವುದನ್ನು ವಿರೋಧಿಸುತ್ತಾರೆ. ಸಲಫಿಗಳು ಅನೇಕ ಕಡೆಗಳಲ್ಲಿ ಜನರ ಕತ್ತಿನಿಂದ ತಾಯತ ಕತ್ತರಿಸಿದ ವಿಡಿಯೋಗಳು ಲಭ್ಯವಿದೆ”

“ಹಿಂದೂ ಬಾಲಕನ ತಾಯತ ಕತ್ತರಿಸಿ ಆತನನ್ನು ಶಿರ್ಕ್‌ನಿಂದ ಹೊರತರಲು ಸಾಧ್ಯವಿಲ್ಲ. ಈ ಶಿರ್ಕ್‌ ಅನ್ನುವುದು ಅಲ್ಲಾಹನನ್ನು ಆರಾಧಿಸುವ ಮುಸ್ಲಿಮರಿಗೆ ಸಂಬಂಧಿಸಿದ್ದಾಗಿದೆ. ಇಸ್ಲಾಮಿನಲ್ಲಿ ಬಹು ದೈವಾರಾಧನೆ ಶಿರ್ಕ್‌ ಎಂದು ಪರಿಗಣಿಸಲಾಗುತ್ತದೆ. ಸಲಫಿಗಳು ತಾಯತ ಧರಿಸುವುದನ್ನೂ ಬಹು ದೈವಾರಾಧನೆ ಎಂದು ಹೇಳುತ್ತಾರೆ. ಹಾಗಾಗಿ, ಮುಸ್ಲಿಂ ಬಾಲಕನ ಕತ್ತಿನಿಂದ ತಾಯತ ತೆಗೆದಿದ್ದಾರೆ” ಎಂದು ಸೊಹಾನುರ್ಹ್ಮಾನ್ ವಿವರಿಸಿದ್ದಾರೆ.

ವೈರಲ್ ವಿಡಿಯೋದಲ್ಲಿರುವ ಮೌಲ್ವಿಯ ಹೆಸರು ಅಬ್ದುಲ್ ಮಲೆಕ್ ಮಿಯಾಜಿ. ತೌಹೀದ್ ಅಕಾಡೆಮಿ ಮತ್ತು ಇಸ್ಲಾಮಿಕ್ ಸೆಂಟರ್ ನಿರ್ವಹಿಸುತ್ತಿರುವ ಜಾಮಿಯಾ ದಾರುತೌಹೀದ್‌ನ ಸಹಾಯಕ ಪ್ರಾಂಶುಪಾಲರಾಗಿದ್ದಾರೆ. ಅವರೊಂದಿಗೆ ಸೊಹಾನುರ್ಹ್ಮಾನ್ ಮಾತನಾಡಿದ್ದು,” ವಿಡಿಯೋದಲ್ಲಿ ಬಾಲಕನ ಕತ್ತಿನಿಂದ ತಾಯತ ಕತ್ತರಿಸಿದ್ದು ನಾನೆ. ನೊವಾಖಾಲಿಯಲ್ಲಿ ಪರಿಹಾರ ಸಾಮಾಗ್ರಿಗಳನ್ನು ವಿತರಿಸುತ್ತಿದ್ದಾಗ ಆ ವಿಡಿಯೋ ಚಿತ್ರೀಕರಿಸಲಾಗಿದೆ. ವಿಡಿಯೋದಲ್ಲಿರುವ ಮಗುವಿನ ಹೆಸರು ಸೊಹೈಲ್ ಎಂದಾಗಿದ್ದು, ಆತ ಸ್ಥಳೀಯ ಮದ್ರಾಸದಲ್ಲಿ ಮೂರನೇ ತರಗತಿಯಲ್ಲಿ ಓದುತ್ತಿದ್ದಾನೆ. ಆತನ ತಂದೆಯ ಹೆಸರು ಅಬ್ದುಲ್ ಹಕ್, ಮತ್ತು ತಾಯಿ ರಜಿಯಾ ಖಾತುನ್ ಎಂದಾಗಿದೆ. ಇಬ್ಬರೂ ನೌಖಾಲಿಯ ಚಾರ್ ಅಲಗಿ ಗ್ರಾಮದವರು” ಎಂದು ವಿವರಿಸಿದ್ದಾರೆ.

ಒಟ್ಟಿನಲ್ಲಿ, ಬಾಂಗ್ಲಾದೇಶದ ನೊವಾಖಾಲಿಯಲ್ಲಿ ಪ್ರವಾಹ ಬಂದಾಗ, ಅಲ್ಲಿನ ಸ್ಥಳೀಯ ಸಲಫಿ ಸಂಸ್ಥೆ ತೌಹೀದ್ ಅಕಾಡೆಮಿ ಜನರಿಗೆ ಪರಿಹಾರ ಸಾಮಾಗ್ರಿಗಳನ್ನು ವಿತರಿಸಿತ್ತು. ಈ ವೇಳೆ ಪರಿಹಾರ ಸ್ವೀಕರಿಸಲು ಬಂದ ಸೊಹೈಲ್ ಎಂಬ ಬಾಲಕನ ಕತ್ತಿನಲ್ಲಿ ತಾಯತ ಕಂಡು, ಅದನ್ನು ಮೌಲ್ವಿ ಕತ್ತರಿಸಿ ತೆಗೆದಿದ್ದಾರೆ. ಆ ವಿಡಿಯೋವನ್ನು ಹಿಂದೂ ಬಾಲಕನ ತುಳಸಿ ಮಾಲೆಯನ್ನು ಮುಸ್ಲಿಮರು ಕತ್ತರಿಸಿದ್ದಾರೆ ಎಂದು ಸುಳ್ಳು ಪ್ರತಿಪಾದನೆಯೊಂದಿಗೆ ಹಂಚಿಕೊಳ್ಳಲಾಗಿದೆ.

ಇದನ್ನೂ ಓದಿ : FACT CHECK : ತಂದೆ ಇಲ್ಲದ ಮಕ್ಕಳ ಖಾತೆಗೆ ವರ್ಷಕ್ಕೆ 24 ಸಾವಿರ ರೂ. ಸ್ಕಾಲರ್‌ಶಿಪ್…ವೈರಲ್ ಸಂದೇಶದ ಸತ್ಯಾಸತ್ಯತೆ ಏನು?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸಂವಿಧಾನ ಬದಲಿಸಿ ಮನುಸ್ಮೃತಿ ತರಲು SIR ಷಡ್ಯಂತ್ರ: ನಟ ಕಿಶೋರ್

ದೇಶದ ಬಹುಕೋಟಿ ಉದ್ಯಮಿ ಗೌತಮ್ ಅದಾನಿಯದ್ದೇ ಇರಲಿ ಅಥವಾ ಒಬ್ಬ ಬಡ ರೈತನದ್ದೇ ಇರಲಿ, ಪ್ರಜಾಪ್ರಭುತ್ವದಲ್ಲಿ ಎಲ್ಲರ ಮತವೂ ಒಂದೇ ಸಮ. ಪ್ರಜೆಗಳನ್ನೆಲ್ಲ ಸಮಾನವಾಗಿ ಕಾಣುವ ಏಕೈಕ ಅಸ್ತ್ರ ಎಂದರೆ ಅದು ಮತದಾನದ...

Nepal: ಭೀಕರ ಪ್ರವಾಹಕ್ಕೆ ಸವಾಲೆಸೆದು ನಿಂತ ‘ಗ್ರೀನ್ ಹೌಸ್’ ಸ್ಟೋರಿ

'ನಮ್ಮ ಬದುಕು ಇಷ್ಟಕ್ಕೇ ಅಂತ್ಯವಾಯಿತು ಎನಿಸುವ ಕ್ಷಣಗಳು ಎದುರಾದಾಗ ಮನಸ್ಸಿನಲ್ಲಿ ಏನು ಓಡಬಹುದು? ಪ್ರವಾಹ ಬಂದಾಗ ನನಗೂ ಅದೇ ಅನಿಸಿತ್ತು' ಇದು ನೇಪಾಳದ ನುವಾಕೋಟ್ ಜಿಲ್ಲೆಯ ತ್ರಿಶೂಲಿ ನದಿಯಲ್ಲಿ ಹರಿದುಬಂದ ಭೀಕರ ಪ್ರವಾಹದಿಂದ...

NEET: ದೇಶಾದ್ಯಂತ ಪ್ರತಿಭಟನಾಕಾರರ ವಿರುದ್ದ ದಾಖಲಾಗಿದ್ದ ಎಲ್ಲಾ FIRಗಳನ್ನು ರದ್ದುಗೊಳಿಸಿದ ಸುಪ್ರೀಂ ಕೋರ್ಟ್

ಮರುಪರೀಕ್ಷೆ ಮತ್ತು ಪ್ರಶ್ನೆ ಪತ್ರಿಕೆ ಸೋರಿಕೆ ವಿರೋಧಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ‘ಕಾಕ್ರೋಚ್ ಜನತಾ ಪಾರ್ಟಿ’ಯ (CJP) ಪ್ರತಿಭಟನಾಕಾರರ ವಿರುದ್ಧ ದಾಖಲಾಗಿದ್ದ ಎಲ್ಲಾ FIR ಗಳನ್ನು ಸುಪ್ರೀಂ ಕೋರ್ಟ್ ಮಂಗಳವಾರ ರದ್ದುಗೊಳಿಸಿದೆ. ಕೇಂದ್ರ ಸರ್ಕಾರವು ಈ...

ಚುನಾವಣಾ ಆಯೋಗ ಚಲೋ: ನಟ ಪ್ರಕಾಶ್ ರಾಜ್ ಸೇರಿದಂತೆ ನೂರಾರು SIR ಸಂತ್ರಸ್ತರು, ಹೋರಾಟಗಾರರನ್ನು ವಶಕ್ಕೆ ಪಡೆದ ಪೊಲೀಸರು

ಕರ್ನಾಟಕ ರಾಜ್ಯದ ಅರ್ಹ ಮತದಾರರ ‘ಮತಹರಣ’ ಖಂಡಿಸಿ ‘ಎಸ್‌ಐಆರ್ ವಿರೋಧಿ ಒಕ್ಕೂಟ’ ಹಮ್ಮಿಕೊಂಡಿದ್ದ ‘ಚುನಾವಣಾ ಆಯೋಗ ಚಲೋ’ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಬಹುಭಾಷಾ ನಟ ಪ್ರಕಾಶ್ ರಾಜ್, ಕಿಶೋರ್ ಹಾಗೂ ಪ್ರಮುಖ ನಾಯಕರು ಸೇರಿದಂತೆ...

‘ಚುನಾವಣಾ ಆಯೋಗ ಚಲೋ’: ‘ಮುಚ್ಚಿದ ಬಾಗಿಲಿನ ಮಾತುಕತೆ ಬೇಡ, ಎಲ್ಲವೂ ಸಾರ್ವಜನಿಕರ ಮುಂದೆಯೇ ಇತ್ಯರ್ಥವಾಗಬೇಕು’: ನೂರ್ ಶ್ರೀಧರ್ ಆಗ್ರಹ

ಬೆಂಗಳೂರು: ಕರ್ನಾಟಕದಲ್ಲಿ ನಡೆದ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯು ರಾಜ್ಯದ ಪ್ರಜಾಸತ್ತಾತ್ಮಕ ವ್ಯವಸ್ಥೆಯಲ್ಲಿ ಬೃಹತ್ ಕಳವಳವನ್ನು ಸೃಷ್ಟಿಸಿದೆ. ಕೇಂದ್ರ ಚುನಾವಣಾ ಆಯೋಗವು ಬಿಡುಗಡೆ ಮಾಡಿರುವ ನೂತನ ಕರಡು ಮತದಾರರ...

SIR ಎಂಬುದು ಪ್ರಜಾಪ್ರಭುತ್ವವನ್ನು ಹಾಳುಮಾಡುವ ದೊಡ್ಡ ಸಂಚು ಮತ್ತು ಮೋಸ: ಪ್ರಕಾಶ್ ರಾಜ್

"ನಾನು ಸಣ್ಣವನಿದ್ದಾಗ ಮುಕ್ಕೂಟಿ ಕನ್ನಡಿಗರು ಎನ್ನುತ್ತಿದ್ದರು. ದಶಕಗಳ ನಂತರ ಪಂಚಕೋಟಿ ಕನ್ನಡಿಗರಾಗಿ, ಈಗ ಶತಕೋಟಿ ಆಗಬೇಕಿತ್ತು. ಆದರೆ ಮತದಾರರ ಪಟ್ಟಿ ವಿಶೇಷ ಸಾಂದ್ರ ಪರಿಷ್ಕರಣೆ (SIR) ಹೆಸರಿನಲ್ಲಿ ಮತ್ತೆ ಮುಕ್ಕೂಟಿಗೆ ತಂದು ನಿಲ್ಲಿಸಲಾಗುತ್ತಿದೆ....

‘ಚುನಾವಣಾ ಆಯೋಗ ಚಲೋ’: ಎಸ್ಐಆರ್ ಅನ್ಯಾಯವನ್ನು ಪ್ರಶ್ನಿಸಲು ನಾವು ಚುನಾವಣಾ ಆಯೋಗಕ್ಕೆ ಮುತ್ತಿಗೆ ಹಾಕುತ್ತಿದ್ದೇವೆ: ಯೂಸುಫ್ ಕನ್ನಿ

ಬೆಂಗಳೂರು: ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಹೆಸರಿನಲ್ಲಿ ಅರ್ಹ ನಾಗರಿಕರ ಮತದಾನದ ಹಕ್ಕನ್ನು ಕಸಿದುಕೊಳ್ಳಲಾಗುತ್ತಿದೆ ಎಂದು ಆರೋಪಿಸಿ ‘ಎಸ್‌ಐಆರ್ ವಿರೋಧಿ ಕರ್ನಾಟಕ’ ವೇದಿಕೆಯು 2026 ಸೆಪ್ಟಂಬರ್ 01, ಮಂಗಳವಾರ ಹಮ್ಮಿಕೊಂಡಿದ್ದ...

SIR:‘ನಾವು ಕಳ್ಳರಲ್ಲ, ಈ ದೇಶದ ಮೂಲ ನಿವಾಸಿಗಳು’ SIR ಸಂತ್ರಸ್ತರ ಜೊತೆ ಪ್ರಕಾಶ್ ರಾಜ್ ಸಂವಾದ

"ನಾವು ಈ ದೇಶದ ನಾಗರಿಕರು, ಕಳ್ಳರಲ್ಲ. ಮತದಾರರ ಪಟ್ಟಿಯಿಂದ ಹೆಸರು ಡಿಲೀಟ್ ಮಾಡಿ ನಮ್ಮ ಸ್ವಾಭಿಮಾನಕ್ಕೆ ಧಕ್ಕೆ ತರಲಾಗುತ್ತಿದೆ. ನಮ್ಮ ಹಕ್ಕನ್ನು ಉಳಿಸಿಕೊಳ್ಳಲು ನಾವು ಹೋರಾಟ ನಡೆಸುತ್ತಿದ್ದೇವೆ," ಎಂದು ಬಹುಭಾಷಾ ನಟ ಹಾಗೂ...

‘ವಿದೇಶದಲ್ಲಿ ಚಿನ್ನ ಖರೀದಿಸಬೇಡಿ, ವಿವಾಹವಾಗಬೇಡಿ’: ಭಾರತೀಯರಿಗೆ ಮೋದಿ ಮನವಿ

ಭಾರತೀಯರು ಅನಗತ್ಯವಾಗಿ ವಿದೇಶಿ ಪ್ರವಾಸ ಕೈಗೊಳ್ಳುವುದನ್ನು, ವಿದೇಶಗಳಲ್ಲಿ ವಿವಾಹವಾಗುವುದನ್ನು ಹಾಗೂ ಅಗತ್ಯವಿಲ್ಲದಿದ್ದರೆ ವಿದೇಶದಿಂದ ಚಿನ್ನ ಖರೀದಿಸುವುದನ್ನು ಸಂಪೂರ್ಣವಾಗಿ ತಪ್ಪಿಸಬೇಕು ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಮನವಿ ಮಾಡಿದ್ದಾರೆ. ಸ್ವಾವಲಂಬನೆಗೆ ಉತ್ತೇಜನ ನೀಡುವುದರ...

ಧಾರವಾಡ | ಪ್ರಕಾಶ್ ರಾಜ್ ಭಾಗವಹಿಸಿದ್ದ ಸಮುದಾಯ ಕಾರ್ಯಕ್ರಮಕ್ಕೆ ಅಡ್ಡಿಪಡಿಸಲು ಯತ್ನ : ದೂರು ದಾಖಲು

ಭಾನುವಾರ (ಆ.30) ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದ ಸಭಾ ಭವನದಲ್ಲಿ ಆಯೋಜಿಸಿದ್ದ ಸಮುದಾಯ ಸಂಘಟನೆಯ ಕಾರ್ಯಕ್ರಮಕ್ಕೆ ಅಡ್ಡಿಪಡಿಸಲು ಯತ್ನಿಸಿ ಗಲಾಟೆ ಎಬ್ಬಿಸಿದ ಬಿಜೆಪಿ-ಸಂಘಪರಿವಾರದ ಬೆಂಬಲಿಗರ ವಿರುದ್ಧ ದೂರು ದಾಖಲಿಸಲಾಗಿದೆ. ಸಮುದಾಯ ಸಂಘಟನೆಯ ಧಾರವಾಡದ...