Homeದಿಟನಾಗರಫ್ಯಾಕ್ಟ್‌ಚೆಕ್‌: ಮರಣ ಪ್ರಮಾಣಪತ್ರದಲ್ಲೂ ಮೋದಿ ಚಿತ್ರ?

ಫ್ಯಾಕ್ಟ್‌ಚೆಕ್‌: ಮರಣ ಪ್ರಮಾಣಪತ್ರದಲ್ಲೂ ಮೋದಿ ಚಿತ್ರ?

- Advertisement -
- Advertisement -

ಕೊರೊನಾದಿಂದ ಮೃತಪಟ್ಟವರಿಗೆ ಪ್ರಧಾನಿ ಮೋದಿಯ ಚಿತ್ರವಿರುವ ಮರಣ ಪ್ರಮಾಣಪತ್ರ ನೀಡಲಾಗುತ್ತಿದೆ ಎಂದು ಪ್ರತಿಪಾದಿಸುವ ಚಿತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲಾಗಿದೆ. ವೈರಲ್ ಪೋಸ್ಟ್‌ನಲ್ಲಿ ವ್ಯಕ್ತಿಯೊಬ್ಬರು ಡಾಕ್ಯುಮೆಂಟ್ ಅನ್ನು ಹಿಡಿದಿದ್ದು, ಅದರಲ್ಲಿ ಪ್ರಧಾನಿ ಮೋದಿಯ ಚಿತ್ರವನ್ನು ಕಾಣಬಹುದಾಗಿದೆ. ಪ್ರಧಾನಿ ಮೋದಿ ಸಾವಿನ ವಿಚಾರವನ್ನೂ ತನ್ನ ಪ್ರಚಾರಕ್ಕೆ ಬಳಸಿಕೊಳ್ಳುತ್ತಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗಿದೆ.

ಈ ಚಿತ್ರದಲ್ಲಿ ವ್ಯಕ್ತಿಯು ಮರಣ ಪ್ರಮಾಣಪತ್ರ ಹಿಡಿದಿದ್ದಾರೆ ಎಂದು ಹಲವಾರು ಜನರು ಪ್ರತಿಪಾದಿಸಿದ್ದಾರೆ. ಅದನ್ನು ಇಲ್ಲಿ, ಇಲ್ಲಿ, ಇಲ್ಲಿ ನೋಡಬಹುದು. ಟ್ವಿಟರ್‌ನಲ್ಲಿ ಮಾತ್ರವಲ್ಲದೆ ಫೇಸ್‌ಬುಕ್‌ನಲ್ಲಿ ಕೂಡಾ ಹಲವಾರು ಜನರು ಇದೇ ಪ್ರತಿಪಾದನೆ ಮಾಡಿದ್ದು, ಚಿತ್ರವು ವೈರಲ್ ಆಗಿದೆ.

ಇದನ್ನೂ ಓದಿ: ಎಚ್ಚರ: ದೈಹಿಕ ಅಂತರ ಕಾಪಾಡದ ಸೋಂಕಿತ ವ್ಯಕ್ತಿ 406 ಜನರಿಗೆ ಕೊರೊನಾ ಹರಡಬಲ್ಲ!

ಫ್ಯಾಕ್ಟ್‌ಚೆಕ್‌

ಈ ಚಿತ್ರವನ್ನು ಗೂಗಲ್ ರಿವರ್ಸ್ ಸರ್ಚ್ ಮೂಲಕ ಹುಡುಕಾಡಿದಾಗ, ಏಪ್ರಿಲ್ 17, 2021 ರಂದು ಪ್ರಕಟವಾದ ಇಂಡಿಯಾ ಟೈಮ್ಸ್‌ನ ಲೇಖನವೊಂದರಲ್ಲಿ ಈ ಚಿತ್ರವು ಕಂಡು ಬಂದಿದೆ. ಲೇಖನದ ಪ್ರಕಾರ, ಮಹಾರಾಷ್ಟ್ರದ ಎನ್‌ಸಿಪಿ ನಾಯಕ ನವಾಬ್ ಮಲಿಕ್ ಪಿಎಂ ಮೋದಿಯ ವಿರುದ್ದ ವಾಗ್ದಾಳಿ ನಡೆಸಿದ್ದು, “ವ್ಯಾಕ್ಸಿನೇಷನ್ ನೀಡಿರುವ ಪ್ರಮಾಣಪತ್ರದಲ್ಲಿ ಮೋದಿಯ ಫೋಟೋ ಇರುವುದಾದರೆ, ಕೊರೊನಾದಿಂದಾದ ಮರಣ ಪ್ರಮಾಣಪತ್ರಗಳಲ್ಲಿ ಕೂಡಾ ಅವರ ಚಿತ್ರವ ಇರಬೇಕು” ಎಂದು ಹೇಳಿದ್ದರು.

ಇದನ್ನೂ ಓದಿ: ಕೋವಿಡ್ ಕಾಲ: ಕೇರಳದ ಬೀಡಿ ಕಾರ್ಮಿಕರೊಬ್ಬರಿಂದ ಸಿಎಂ ಫಂಡ್‌ಗೆ 2 ಲಕ್ಷ ರೂ. ದೇಣಿಗೆ

ಇಂಡಿಯಾ ಟೈಮ್ಸ್ ಪ್ರಕಟಿಸಿದ ಚಿತ್ರದಲ್ಲಿ ಮುದ್ರಿಸಲಾದ ಅಕ್ಷರವು ಸ್ಪಷ್ಟವಾಗಿದೆ ಓದಬಹುದಾಗಿದೆ. ಅದರಲ್ಲಿ, “ಕೊರೊನಾ ವ್ಯಾಕ್ಸಿನೇಷನ್‌ಗಾಗಿ ತಾತ್ಕಾಲಿಕ ಪ್ರಮಾಣಪತ್ರ” ಎಂದು ಬರೆಯಲಾಗಿದೆ.

ಅಮರ್ ಉಜಲಾ” ಸುದ್ದಿಯಲ್ಲಿ ಕೂಡ ಲಸಿಕೆ ಪಡೆದ ನಂತರ ನೀಡಿದ ವ್ಯಾಕ್ಸಿನೇಷನ್ ಪ್ರಮಾಣಪತ್ರದ ಚಿತ್ರವನ್ನು ಪೋಸ್ಟ್ ಮಾಡಿದ್ದಾರೆ.

ವಿಧಾನಸಭಾ ಚುನಾವಣೆ ನಡೆಯುತ್ತಿರುವುದರಿಂದ ಪ್ರಧಾನಿ ಮೋದಿ ವ್ಯಾಕ್ಸಿನೇಷನ್ ಪ್ರಮಾಣಪತ್ರಗಳಲ್ಲಿ ತಮ್ಮ ಚಿತ್ರವನ್ನು ಪ್ರಕಟಿಸಿ ಪ್ರಚಾರ ಪಡೆಯುತ್ತಿದ್ದು, ಇದು ಚುನಾವಣಾ ನೀತಿ ಸಂಹಿತೆಯನ್ನು ಉಲ್ಲಂಘಿಸಿದಂತಾಗುತ್ತದೆ ಎಂದು ವಿರೋಧ ಪಕ್ಷಗಳು ಟೀಕಿಸಿವೆ.

ಒಟ್ಟಿನಲ್ಲಿ ವೈರಲ್ ಚಿತ್ರವು ವ್ಯಾಕ್ಸಿನೇಷನ್ ಪಡೆದ ಸರ್ಟಿಫಿಕೇಟ್ ಆಗಿದೆಯೆ ವಿನಃ, ಮರಣ ಪ್ರಮಾಣಪತ್ರ ಅಲ್ಲ.

ಇದನ್ನೂ ಓದಿ: ಕೊರೊನಾದಿಂದ ಸಿಪಿಎಂ ನಾಯಕನ ಪುತ್ರ ನಿಧನ; ವಿಕೃತಿ ಮೆರೆದ ಬಿಜೆಪಿ ಉಪಾಧ್ಯಕ್ಷ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

2 COMMENTS

  1. ಅವ ಪ್ರಧಾನಮಂತ್ರಿಯೋ ಪ್ರಚಾರ ಮಂತ್ರಿಯೋ ಅವನಿಗೂ ಗೊತ್ತಿಲ್ಲ, ಅಂದ ಬಕ್ತರಿಗೂ
    ಅದರ ಅರಿವಿಲ್ಲ

LEAVE A REPLY

Please enter your comment!
Please enter your name here

- Advertisment -

Must Read

‘ಇವಿಎಂ’ ತಿರುಚಲು ಶಿವಸೇನಾ ನಾಯಕನಿಗೆ 2.5 ಕೋಟಿ ರೂ.ಬೇಡಿಕೆ ಇಟ್ಟ ಯೋಧ!

0
ವಿದ್ಯುನ್ಮಾನ ಮತಯಂತ್ರಗಳನ್ನು(ಇವಿಎಂ) ತಿರುಚಲು ಶಿವಸೇನಾ ಉದ್ಧವ್‌ ಬಣದ ನಾಯಕ ಅಂಬಾದಾಸ್ ದನ್ವೆ ಅವರಿಂದ 2.5 ಕೋಟಿ ರೂಪಾಯಿಗೆ ಬೇಡಿಕೆಯಿಟ್ಟಿದ್ದಕ್ಕಾಗಿ ಮಹಾರಾಷ್ಟ್ರ ಪೊಲೀಸರು ಛತ್ರಪತಿ ಸಂಭಾಜಿನಗರದಲ್ಲಿ ಸೇನಾ ಯೋಧನೋರ್ವನನ್ನು ಬಂಧಿಸಿದ್ದಾರೆ. ಮಾರುತಿ ಧಕ್ನೆ(42) ವಿರುದ್ಧ ದೂರು...