Homeಚಳವಳಿರೈತ ಹೋರಾಟ: ದೆಹಲಿ ಗಡಿಗಳಲ್ಲಿ ಬ್ಯಾರಿಕೇಡ್‌ ತೆರವುಗೊಳಿಸುತ್ತಿರುವ ಪೊಲೀಸರು

ರೈತ ಹೋರಾಟ: ದೆಹಲಿ ಗಡಿಗಳಲ್ಲಿ ಬ್ಯಾರಿಕೇಡ್‌ ತೆರವುಗೊಳಿಸುತ್ತಿರುವ ಪೊಲೀಸರು

- Advertisement -
- Advertisement -

ಒಕ್ಕೂಟ ಸರ್ಕಾರದ ಮೂರು ಹೊಸ ಕೃಷಿ ಕಾನೂನುಗಳ ವಿರುದ್ಧ ಕಳೆದ 11 ತಿಂಗಳಿನಿಂದ ಸಾವಿರಾರು ಪ್ರತಿಭಟನೆ ನಡೆಸುತ್ತಿರುವ ರೈತರು ದೆಹಲಿ ಗಡಿಗಳಲ್ಲಿ ಹಾಕಲಾಗಿದ್ದ ಬ್ಯಾರಿಕೇಡ್‌ಗಳನ್ನು ದೆಹಲಿ ಪೊಲೀಸರು ಶುಕ್ರವಾರ ತೆರವುಗೊಳಿಸಲು ಆರಂಭಿಸಿದ್ದಾರೆ.

ಕೃಷಿ ಕಾಯ್ದೆಗಳನ್ನು ರದ್ದುಗೊಳಿಸುವಂತೆ ಒತ್ತಾಯಿಸಿ ಜನವರಿ 26ರಂದು ನಡೆದ ಟ್ಯ್ರಾಕ್ಟರ್‌ ರ್‍ಯಾಲಿ ವೇಳೆ ಅನಪೇಕ್ಷಿತ ಘಟನೆಗಳು ನಡೆದಿದ್ದವು. ದೀಪ್ ಸಿಧು ನೇತೃತ್ವದ ಒಂದು ರೈತ ಗುಂಪು ಉದ್ದೇಶಿತ ಮಾರ್ಗ ಉಲ್ಲಂಘಿಸಿ ಕೆಂಪುಕೋಟೆಗೆ ತೆರಳಿ ಧಾರ್ಮಿಕ ಬಾವುಟ ಹಾರಿಸಿತ್ತು. ನಂತರ ನಡೆದ ಹಿಂಸಾಚಾರದ ಹಿನ್ನೆಲೆಯಲ್ಲಿ ಪೊಲೀಸರು, ಸಿಂಘು, ಗಾಜಿಪುರ ಹಾಗೂ ಟಿಕ್ರಿ ಗಡಿಗಳಲ್ಲಿ ಕಬ್ಬಿಣದ ಮೊಳೆಗಳು, ಸಿಮೆಂಟ್‌ ಬ್ಯಾರಿಕೇಡ್‌, ಚೂಪಾದ ತಂತಿ, ಕಬ್ಬಿಣದ ಬ್ಯಾರಿಕೇಡ್‌ ಸೇರಿದಂತೆ ಐದು ಪದರಗಳಲ್ಲಿ ಬ್ಯಾರಿಕೇಡ್‌ ನಿರ್ಮಿಸಿದ್ದರು.

ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದ ರೈತರನ್ನು ಗಾಜಿಪುರ ಗಡಿಯಿಂದ ಎತ್ತಂಗಡಿ ಮಾಡಿಸಲು ಪೊಲೀಸರು ಪ್ರಯತ್ನಿಸಿದ್ದರು. ಇದಕ್ಕೆ ಪ್ರತಿರೋಧ ವ್ಯಕ್ತಪಡಿಸಿದ್ದ ರೈತರು ಸಾವಿರಾರು ಸಂಖ್ಯೆಯಲ್ಲಿ ಸೇರಿ ಗಾಜಿಪುರ ಗಡಿಯಲ್ಲಿ ಬೃಹತ್ ಪ್ರತಿಭಟನೆ ನಡೆಸಿದ್ದರು.

ಗಾಜಿಪುರದ NH9 ಹೆದ್ದಾರಿ ರಸ್ತೆಗೆ ಹಾಕಲಾಗಿದ್ದ ಕಬ್ಬಿಣದ ಮೊಳೆಗಳನ್ನು ಪೊಲೀಸ್‌ ಅಧಿಕಾರಿಗಳು ಮತ್ತು ಕಾರ್ಮಿಕರು ತೆಗೆಯಲಾರಂಭಿಸಿದ್ದಾರೆ.

ಪ್ರಸ್ತುತ ಪರಿಸ್ಥಿತಿ ಕುರಿತು ಪ್ರತಿಕ್ರಿಯಿಸಿರುವ ಭಾರತೀಯ ಕಿಸಾನ್‌ ಯೂನಿಯನ್‌ (ಬಿಕೆಯು) ನಾಯಕ ರಾಕೇಶ್‌ ಟಿಕಾಯತ್‌, ’ರೈತರು ಎಲ್ಲಿ ಬೇಕಾದರೂ ಬೆಳೆಗಳನ್ನು ಮಾರಾಟ ಮಾಡಬಹುದು ಎಂದು ಪ್ರಧಾನಿ ಮೋದಿ ಹೇಳಿದ್ದರು. ರಸ್ತೆಗಳು ತೆರೆದರೆ ನಾವು ನಮ್ಮ ಬೆಳೆಗಳನ್ನು ಮಾರಾಟ ಮಾಡಲು ಸಂಸತ್ತಿಗೆ ಹೋಗುತ್ತೇವೆ. ನಮ್ಮ ಟ್ಯ್ರಾಕ್ಟರ್‌ಗಳು ಮೊದಲು ದೆಹಲಿಗೆ ಹೋಗುತ್ತವೆ. ರಸ್ತೆ ತಡೆ ನಮ್ಮ ಪ್ರತಿಭಟನೆಯ ಭಾಗವಲ್ಲ. ನಾವು ರಸ್ತೆಯನ್ನು ನಿರ್ಬಂಧಿಸಿಲ್ಲ” ಎಂದಿದ್ದಾರೆ.

ಟಿಕ್ರಿ ಗಡಿಯಲ್ಲಿಯೂ ಗುರುವಾರ ಪೊಲೀಸರು ಬ್ಯಾರಿಕೇಡ್‌ಗಳನ್ನು ತೆರವುಗೊಳಿಸುತ್ತಿರುವ ದೃಶ್ಯಗಳನ್ನು ಎಎನ್‌ಐ ಟ್ವಿಟ್‌ ಮಾಡಿದೆ.

ಪ್ರತಿಭಟನಾಕಾರರು ಸಾರ್ವಜನಿಕ ರಸ್ತೆಗಳನ್ನು ಅನಿರ್ದಿಷ್ಟವಾಗಿ ನಿರ್ಬಂಧಿಸುವಂತಿಲ್ಲ ಎಂಬ ಸುಪ್ರೀಂ ಕೋರ್ಟ್‌ ಅಕ್ಟೋಬರ್ 21 ರ ಹೇಳಿಕೆಯ ನಂತರ ಈ ಕ್ರಮ ಜರುಗಿದೆ.

ಪ್ರತಿಭಟನಾಕಾರರು ಸಾರ್ವಜನಿಕ ರಸ್ತೆಗಳನ್ನು ಅನಿರ್ದಿಷ್ಟವಾಗಿ ನಿರ್ಬಂಧಿಸುವಂತಿಲ್ಲ ಎಂದು ಅಕ್ಟೋಬರ್‌ 21ರಂದು ಸುಪ್ರೀಂ ಕೋರ್ಟ್‌‌ ಪ್ರತಿಭಟನಾ ರೈತರನ್ನುದ್ದೇಶಿಸಿ ಹೇಳಿಕೆ ನೀಡಿತ್ತು. ಈ ಹಿನ್ನೆಲೆಯಲ್ಲಿ ಗಡಿಗಳಲ್ಲಿ ಹಾಕಲಾಗಿದ್ದ ಬಹು ಹಂತದ ಬ್ಯಾರಿಕೇಡ್‌ಗಳನ್ನು ಪೊಲೀಸರು ತೆರವುಗೊಳಿಸಲು ಮುಂದಾಗಿದ್ದಾರೆ.


ಇದನ್ನೂ ಓದಿ: ಲಸಿಕೆ ಖರೀದಿಗೆ ವಿದೇಶಿ ಬ್ಯಾಂಕ್‌ಗಳಿಂದ ಸಾಲ ಪಡೆಯಲು ಮುಂದಾದ ಭಾರತ: ಇಂಧನ ತೆರಿಗೆ ಎಲ್ಲಿಗೆ…

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕಾಂಗ್ರೆಸ್ ಪ್ರಣಾಳಿಕೆ ಬಗ್ಗೆ ವಿವರಿಸಲು ಸಮಯಾವಕಾಶ ಕೋರಿ ಪ್ರಧಾನಿಗೆ ಖರ್ಗೆ ಪತ್ರ

0
ಲೋಕಸಭೆ ಚುನಾವಣೆಯ ಕಾಂಗ್ರೆಸ್ ಪ್ರಣಾಳಿಕೆ 'ನ್ಯಾಯಪತ್ರ'ದ ಕುರಿತು ಪ್ರಧಾನಿ ಮೋದಿ ಸರಣಿ ಹೇಳಿಕೆಗಳನ್ನು ಕೊಡುತ್ತಿದ್ದು, ಈ ಹಿನ್ನೆಲೆ ಪ್ರಣಾಳಿಕೆಯ ಕುರಿತು ವಿವರಿಸಲು ಸಮಯ ಕೋರಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪತ್ರ ಬರೆದಿದ್ದಾರೆ. ಖರ್ಗೆ...