Homeಮುಖಪುಟತಮಿಳುನಾಡಿನಲ್ಲಿ ಮೊದಲ ಟ್ರಾನ್ಸ್‌ಜೆಂಡರ್‌ ನರ್ಸ್‌ ಆಗಿ ನೇಮಕಕೊಂಡ ಅನ್ಬು ರೂಬಿ...

ತಮಿಳುನಾಡಿನಲ್ಲಿ ಮೊದಲ ಟ್ರಾನ್ಸ್‌ಜೆಂಡರ್‌ ನರ್ಸ್‌ ಆಗಿ ನೇಮಕಕೊಂಡ ಅನ್ಬು ರೂಬಿ…

ನಾನು ಸಾಧ್ಯವಾದಷ್ಟು ಸಮಾಜಕ್ಕೆ ಸೇವೆ ಸಲ್ಲಿಸಲು ಬಯಸುತ್ತೇನೆ. ಅದಕ್ಕಾಗಿಯೇ ನಾನು ಶುಶ್ರೂಷಕಿ ಕೆಲಸವನ್ನು ಆಯ್ದುಕೊಂಡೆ" ಎನ್ನುತ್ತಾರೆ ಅನ್ಬು ರೂಬಿ

- Advertisement -
- Advertisement -

25 ವರ್ಷದ ಅನ್ಬು ರೂಬಿ ಅವರು ತಮಿಳುನಾಡು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ದಾದಿಯಾಗಿ ನೇಮಕಗೊಂಡ ಮೊದಲ ಟ್ರಾನ್ಸ್‌ಜೆಂಡರ್‌ ಆಗಿದ್ದಾರೆ. ಅನ್ಬು ರೂಬಿಯು ಮುಖ್ಯಮಂತ್ರಿ ಎಡಪ್ಪಾಡಿ ಕೆ ಪಳನಿಸ್ವಾಮಿ ಮತ್ತು ಆರೋಗ್ಯ ಸಚಿವ ಸಿ ವಿಜಯಬಾಸ್ಕರ್ ಅವರಿಂದ ನಿನ್ನೆ ನೇಮಕಾತಿ ಆದೇಶವನ್ನು ಪಡೆದರು.

“ಆರೋಗ್ಯ ಮತ್ತು ಕಲ್ಯಾಣ ಇಲಾಖೆಯ ಇತಿಹಾಸದಲ್ಲಿ ಮೊದಲ ಬಾರಿಗೆ ನಾವು ಟ್ರಾನ್ಸ್‌ಜೆಂಡರ್‌ರನ್ನು ದಾದಿಯಾಗಿ ನೇಮಕ ಮಾಡಿಕೊಂಡಿದ್ದೇವೆ. ಇದು ರಾಜ್ಯಕ್ಕೆ ಬಹಳ ಹೆಮ್ಮೆಯ ಕ್ಷಣವಾಗಿದೆ” ಎಂದು ವಿಜಯಬಾಸ್ಕರ್ ಎಎನ್‌ಐಗೆ ತಿಳಿಸಿದ್ದಾರೆ.

ಸರ್ಕಾರಕ್ಕೆ ಕೃತಜ್ಞತೆಯನ್ನು ವ್ಯಕ್ತಪಡಿಸಿದ ರೂಬಿ, “ಈ ಬಗ್ಗೆ ನನಗೆ ನಿಜಕ್ಕೂ ಸಂತೋಷವಾಗಿದೆ. ನಾನು ದಾದಿಯಾಗಿ ನೇಮಕಗೊಂಡ ಭಾರತದ ಮೊದಲ ಟ್ರಾನ್ಸ್‌ಜೆಂಡರ್‌ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರನಾಗಿದ್ದೇನೆ. ಮುಖ್ಯಮಂತ್ರಿ ಮತ್ತು ಆರೋಗ್ಯ ಸಚಿವರಿಗೆ ನನ್ನ ಎದೆಯಾಳದ ಕೃತಜ್ಞತೆಯನ್ನು ಅರ್ಪಿಸುತ್ತೇನೆ” ಎಂದು ಹೇಳಿದ್ದಾರೆ.

ತೂತುಕುಡಿ ಮೂಲದ ರೂಬಿ, ತಿರುನೆಲ್ವೇಲಿಯ ಖಾಸಗಿ ಕಾಲೇಜಿನಲ್ಲಿ 2016 ರಲ್ಲಿ ಬಿಎಸ್ಸಿ ನರ್ಸಿಂಗ್ ಮುಗಿಸಿದರು. ನಂತರ ಎಂಬಿಎಯಲ್ಲಿ ಹಾಸ್ಪಿಟಲ್‌ ಮ್ಯಾನೇಜ್‌ಮೆಂಟ್‌ ಕೋರ್ಸ್ ಅನ್ನು ದೂರ ಶಿಕ್ಷಣ ವಿಭಾಗದಲ್ಲಿ ಅಧ್ಯಯನ ಮಾಡಿದ್ದಾರೆ.

“ನನ್ನ ಸಮುದಾಯಕ್ಕೆ ನಾನು ಉದಾಹರಣೆಯಾಗಲು ಬಯಸುತ್ತೇನೆ. ನಮ್ಮವರಲ್ಲಿ ಅನೇಕರು ಕಟ್ಟುಪಾಡಿಗಳಿಂದ ಹೊರಬಂದು ತಮ್ಮ ಜೀವನದಲ್ಲಿ ಮಹತ್ತರವಾದುದ್ದನ್ನು ಸಾಧಿಸಬೇಕು. ನಾನು ಸಾಧ್ಯವಾದಷ್ಟು ಸಮಾಜಕ್ಕೆ ಸೇವೆ ಸಲ್ಲಿಸಲು ಬಯಸುತ್ತೇನೆ. ಅದಕ್ಕಾಗಿಯೇ ನಾನು ಶುಶ್ರೂಷಕಿ ಕೆಲಸವನ್ನು ಆಯ್ದುಕೊಂಡೆ” ಎಂದು ಅನ್ಬು ರೂಬಿ ಅಭಿಪ್ರಾಯಪಟ್ಟಿದ್ದಾರೆ.

ತಾನು ಶಿಕ್ಷಣ ಪಡೆಯಲು ಪಟ್ಟ ಶ್ರಮದ ಬಗ್ಗೆಯೂ ರೂಬಿ ಹೇಳಿಕೊಂಡಿದ್ದಾರೆ. “ನಾನು ಮಧ್ಯಮ ವರ್ಗದ ಕುಟುಂಬಕ್ಕೆ ಸೇರಿದವಳು ಮತ್ತು ಸಾಕಷ್ಟು ಹೋರಾಟದಿಂದ ನನ್ನ ಶಿಕ್ಷಣವನ್ನು ಪಡೆದಿದ್ದೇನೆ. ನನ್ನ ಚಿಕ್ಕ ವಯಸ್ಸಿನಲ್ಲಿ ನನ್ನ ತಂದೆ ದೃಷ್ಟಿ ಕಳೆದುಕೊಂಡರು. ನಂತರ ನನ್ನ ತಾಯಿ ನಮ್ಮ ಕುಟುಂಬ ಮತ್ತು ನನ್ನ ಶಿಕ್ಷಣಕ್ಕಾಗಿ ಹಣ ಸಂಪಾದಿಸಲು ಬಾಳೆ ಎಲೆಗಳನ್ನು ಮಾರಾಟ ಮಾಡಲು ಪ್ರಾರಂಭಿಸಿದರು” ಎಂದಿದ್ದಾರೆ.

ಟ್ರಾನ್ಸ್‌ಜೆಂಡರ್‌ಗಳ ಬಗ್ಗೆ ಸಮಾಜವು ಹೊಂದಿರುವ ಜಾಗೃತಿಯ ಮಟ್ಟ ಕುರಿತು ಮಾತನಾಡಿದ ಅವರು “ಸಮಾಜವು ಟ್ರಾನ್ಸ್‌ಜೆಂಡರ್‌ ಜನರ ಬಗ್ಗೆ ಹೆಚ್ಚು ತಿಳಿದಿಲ್ಲ. ಅವರು ಟ್ರಾನ್ಸ್‌ಜೆಂಡರ್‌‌ಗಳನ್ನು ಮೊದಲು ಒಪ್ಪಿಕೊಳ್ಳಬೇಕು. ಒಪ್ಪಿಕೊಳ್ಳುವುದೇ ಒಂದು ದೊಡ್ಡ ಪರಿಹಾರವಾಗಿದೆ” ಎಂದಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

‘ಇವಿಎಂ’ ತಿರುಚಲು ಶಿವಸೇನಾ ನಾಯಕನಿಗೆ 2.5 ಕೋಟಿ ರೂ.ಬೇಡಿಕೆ ಇಟ್ಟ ಯೋಧ!

0
ವಿದ್ಯುನ್ಮಾನ ಮತಯಂತ್ರಗಳನ್ನು(ಇವಿಎಂ) ತಿರುಚಲು ಶಿವಸೇನಾ ಉದ್ಧವ್‌ ಬಣದ ನಾಯಕ ಅಂಬಾದಾಸ್ ದನ್ವೆ ಅವರಿಂದ 2.5 ಕೋಟಿ ರೂಪಾಯಿಗೆ ಬೇಡಿಕೆಯಿಟ್ಟಿದ್ದಕ್ಕಾಗಿ ಮಹಾರಾಷ್ಟ್ರ ಪೊಲೀಸರು ಛತ್ರಪತಿ ಸಂಭಾಜಿನಗರದಲ್ಲಿ ಸೇನಾ ಯೋಧನೋರ್ವನನ್ನು ಬಂಧಿಸಿದ್ದಾರೆ. ಮಾರುತಿ ಧಕ್ನೆ(42) ವಿರುದ್ಧ ದೂರು...