Homeಕರ್ನಾಟಕಗದಗ: ಸ್ವಾಮಿಯೊಬ್ಬರ ಸೇಡಿನ ಪರಿಣಾಮ- ಗಂಟಿಚೋರ್ ಸಮುದಾಯಕ್ಕೆ ತಪ್ಪದ ತೊಂದರೆ

ಗದಗ: ಸ್ವಾಮಿಯೊಬ್ಬರ ಸೇಡಿನ ಪರಿಣಾಮ- ಗಂಟಿಚೋರ್ ಸಮುದಾಯಕ್ಕೆ ತಪ್ಪದ ತೊಂದರೆ

- Advertisement -
- Advertisement -

ಪುಟ್ಟ ಪುಟ್ಟ ಅಲಕ್ಷಿತ ಸಮುದಾಯಗಳು ಈಗಲೂ ಈ ಸಂವಿಧಾನವೇ ಒದಗಿಸಿದ ಮೀಸಲು ಸೌಲಭ್ಯದಿಂದ ವಂಚಿತರಾಗುತ್ತಿವೆ. ಜನಪ್ರತಿನಿಧಿಗಳನ್ನು ಯಾಮಾರಿಸಬಲ್ಲ ಕೆಲವು ಆಧಿಕಾರಿಗಳು ಯಾವುದೋ ತಾಂತ್ರಿಕ ನೆಪ ಒಡ್ಡುತ್ತ ಇಂತಹ ಸಮುದಾಯಗಳಿಗೆ ಅನ್ಯಾಯ ಮಾಡುತ್ತಲೇ ಬಂದಿವೆ. ಅಂತಹುದೇ ಘಟನೆ ಗದಗ ಜಿಲ್ಲೆಯಲ್ಲಿಯೂ ನಡೆದಿದೆ.

ಶತಮಾನಗಳ ಕಾಲ ಹೊಟ್ಟೆಪಾಡಿಗಾಗಿ ಕಳ್ಳತನವನ್ನೇ ಕಾಯಕವಾಗಿ ಮಾಡಿಕೊಂಡಿದ್ದ ಗಂಟಿಚೋರ್ ಸಮುದಾಯ ಕ್ರಮೇಣ ಸಮಾಜದ ಭಾಗವಾಗಿ ಶ್ರಮದ ಕಾಯಕದಲ್ಲಿ ನಿರತವಾಗಿದೆ. ಈಗಲೂ ಅಧಿಕಾರಸ್ಥರು ಮತ್ತು ಪೊಲೀಸ್ ವ್ಯವಸ್ಥೆ, ಇದೆಲ್ಲದಕ್ಕೂ ಮುಖ್ಯವಾಗಿ ಮೇಲ್ಜಾತಿಯ ಸಮುದಾಯಗಳು ಈ ಸಮುದಾಯವನ್ನು ಅಪರಾಧಿಗಳು ಎಂಬಂತೆ ಚಿತ್ರಿಸುತ್ತಿವೆ. ಉತ್ತರ ಕರ್ನಾಟಕದ ಗದಗ, ಬೆಳಗಾವಿ, ಧಾರವಾಡ, ಬಾಗಲಕೋಟೆ, ಕೊಪ್ಪಳ, ವಿಜಯಪುರ, ಕೊಪ್ಪಳ ಜಿಲ್ಲೆಗಳಲ್ಲಿ ಚದುರಿ ಹೋಗಿರುವ ಈ ಸಣ್ಣ ಸಮುದಾಯ ಎಸ್‍ಸಿ ಸಮುದಾಯ ಎಂದು ಪರಿಗಣಿಸಲ್ಪಟ್ಟಿದೆ. ಆದರೆ, ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಬಾಲೆಹೊಸೂರು ಗ್ರಾಮದ ಗಂಟಿಚೋರ್ ಸಮುದಾಯಕ್ಕೆ 2015ರಿಂದ ಎಸ್‍ಸಿ ಪ್ರಮಾಣ ಪತ್ರ ನೀಡಲು ಜಿಲ್ಲಾಡಳಿತ ಸತಾಯಿಸುತ್ತಿದೆ. ಇದರ ಮೂಲ ಹುಡುಕುತ್ತ ಹೋದರೆ ಬಾಲೆಹೊಸೂರು ಮಠದ ದಿಂಗಾಲೇಶ್ವರ ಸ್ವಾಮಿಯವರ ಸೇಡಿನ ಆಟಕ್ಕೆ ಈ ಸಮುದಾಯ ಬಲಿಯಾಗುತ್ತಿರುವುದು ಕಂಡು ಬರುತ್ತಿದೆ.

ಗಂಟಿಚೋರ್ ಸಮುದಾಯಕ್ಕೆ ಎಸ್‍ಸಿ ಮೀಸಲು ಇದೆ, ಅದು ಅವರ ಹಕ್ಕು, ಅದನ್ನು ಸಂವಿಧಾನದ ಅನುಸಾರವೇ ಅವರಿಗೆ ನೀಡಲಾಗಿದೆ. ಆದರೆ, ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಗಂಟಿಚೋರರಿಗೆ 2015ರಿಂದ ಎಸ್‍ಸಿ ಜಾತಿ ಪ್ರಮಾಣವನ್ನು ನೀಡಲು ಶಿರಹಟ್ಟಿ ತಾಲೂಕಾ ಆಡಳಿತ ನಿರಾಕರಿಸತೊಡಗಿದೆ. ಸತತ ಐದು ವರ್ಷಗಳಿಂದ ತಮ್ಮ ಹಕ್ಕಿಗಾಗಿ ಹೋರಾಡುತ್ತ ಬಂದಿದ್ದರೂ ತಾವುದೋ ತಾಂತ್ರಿಕ ನೆಪ ಒಡ್ಡುವ ತಾಲೂಕಾ ಆಡಳಿತ ಜಿಲ್ಲಾಡಳಿತದತ್ತ ಕೈ ತೋರಿಸುತ್ತಿದೆ.

ಜಿಲ್ಲಾಡಳಿತಕ್ಕೆ ಕೇಳಿದರೆ, ಜಾತಿ ಪರಿಶೀಲನಾ ಸಮಿತಿಗೆ ಈ ವಿಷಯವನ್ನು ವರ್ಗಾಯಿಸುತ್ತೇವೆ, ಸದ್ಯದಲ್ಲೇ ಸಮಸ್ಯೆ ಬಗೆಹರಿಯುತ್ತದೆ ಎನ್ನುತ್ತದೆ. ಸಾಕು ಸಾಕಾದ ಗಂಟಿಚೋರ್ ಸಮುದಾಯದ ಜನ ಎರಡು ದಿನಗಳ ಕಾಲ ಶಿರಹಟ್ಟಿ ತಹಶೀಲ್ದಾರ್ ಕಚೇರಿ ಮುಂದೆ ಟೆಂಟು ಹಾಕಿ ಪ್ರತಿಭಟನೆ ನಡೆಸಿದರು. ಮೊನ್ನೆ (ಬುಧವಾರ) ಧರಣಿನಿರತರನ್ನು ಭೇಟಿಯಾದ ತಹಶಿಲ್ದಾರ್ ಕೋರಿಶೆಟ್ಟರು, ಖಂಡಿತ ಸದ್ಯದಲ್ಲೇ ಎಲ್ಲ ಸರಿ ಹೋಗುತ್ತೆ. ಜಿಲ್ಲಾಡಳಿತ ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತೆ ಎಂದರು. ಪ್ರತಿಭಟನಾಕಾರರು ಜಗ್ಗದೇ ಇದ್ದಾಗ ನೇರವಾಗಿ ಜಿಲ್ಲಾಧಿಕಾರಿ ಹಿರೇಮಠರಿಗೆ ಫೋನ್ ಮಾಡಿ, ಸ್ಪೀಕರ್ ಆನ್ ಮಾಡಿ ಮಾತಾಡಿದರು. ಜಿಲ್ಲಾಧಿಕಾರಿ ಕೂಡ ಪರಿಶೀಲಿಸಿ ನ್ಯಾಯ ಒದಗಿಸುತ್ತೇವೆ ಎಂದರು.

ಆಗಿನ ಜಿಲ್ಲಾಧಿಕಾರಿ ನೀಡಿದ್ದ ಪತ್ರ

ಇಲ್ಲಿ ನಿಜಕ್ಕೂ ತಾಂತ್ರಿಕ ಸಮಸ್ಯೆ ಇದೆಯೇ? ಇಲ್ಲವೇ ಇಲ್ಲ. ಹಾಗಂತ ಒಂದು ಹಂತದಲ್ಲಿ 2014ರಲ್ಲಿ ಅದನ್ನು ಹುಟ್ಟು ಹಾಕಲಾಗಿತ್ತು. ಆಗಿನ ಜಿಲ್ಲಾ ಉಸ್ತುವಾರಿ ಸಚಿವ ಎಚ್ ಕೆ ಪಾಟೀಲರ ಬಹಿರಂಗ ಸೂಚನೆಯಂತೆ ಅಂದಿನ ಜಿಲ್ಲಾಧಿಕಾರಿ ಅಧ್ಯಯನ ಕೈಗೊಂಡು, ಗಂಟಿಚೋರರಿಗೆ ಮತ್ತು ಅದೇ ಸಮುದಾಯದವರಾಗಿದ್ದು ಗಿರಣಿ ವಡ್ಡರ್, ಗಂಟಿಚೋರ್ ಇಂತಹ ಅಡ್ಡಹೆಸರು ಇರುವವರಿಗೆಲ್ಲ ಎಸ್‍ಸಿ ಜಾತಿ ಪ್ರಮಾಣ ಪತ್ರ ನೀಡಬೇಕು ಎಂದು ಆದೇಶ ಮಾಡಿದ್ದರು. ನಂತರ ಜಿಲ್ಲಾಧಿಕಾರಿಯಾಗಿ ಬಂದ ದರ್ಪಣ್ ಜೈನ್ ಮೇಲೆ ಶಿರಹಟ್ಟಿ ತಾಲೂಕಿನ ಲಿಂಗಾಯತ ಮಠದ ಭಕ್ತರು ಕೆಲವು ರಾಜಕಾರಣಿಗಳಿಂದ ಒತ್ತಡ ಹಾಕಿಸಿದರು. ಜಿಲ್ಲಾಧಿಕಾರಿ ಇದನ್ನು ಆಯುಕ್ತರ ಕಚೇರಿಗೆ ವರ್ಗಾಯಿಸಿದರು. ಜಾತಿ ಪರಿಶೀಲನಾ ಸಮಿತಿಯ ಸದಸ್ರೆಲ್ಲರೂ ಸಹಿ ಹಾಕಿರಲಿಲ್ಲ ಎಂಬ ನೆಪ ಒಡ್ಡಿ ಮತ್ತೆ ಈ ವಿಷಯವನ್ನು ಜಾತಿ ಪರಿಶೀಲನಾ ಸಮಿತಿಗೆ ಒಪ್ಪಿಸಲಾಯಿತು.

ಪ್ರತಿವರ್ಷ ಕಾಲೇಜು ಪ್ರವೇಶ, ನೇಮಕಾತಿ ಅಧಿಸೂಚನೆ ಬಂದಾಗ ಯುವಕರು ಪರದಾಡುವುದೇ ಆಗಿತು. ಶಿರಹಟ್ಟಿಯ ಹಿಂದಿನ ತಹಶೀಲ್ದಾರ್ ವೆಂಕಟೇಶ ನಾಯ್ಕ್ ಅಂತೂ ತಮ್ಮ ಲಂಬಾಣಿ ಸಮುದಾಯಕ್ಕೆ ಅವಕಾಶ ಕಡಿಮೆ ಆಗಬಹುದು ಎಂಬ ಭ್ರಮೆಯಿಂದ ಇನ್ನಷ್ಟು ವ್ಯತಿರಿಕ್ತವಾಗಿ ವರ್ತಿಸಿದರು. ಈ ಸಲ ಗಟ್ಟಿ ನಿರ್ಧಾರ ಮಾಡಿದ ಶಿರಹಟ್ಟಿಯ ಗಂಟಿಚೋರ್ ಸಮುದಾಯ ವಕೀಲ ಅನಂತ್ ಕಟ್ಟಿಮನಿ ನೇತೃತ್ವದಲ್ಲಿ ತಹಶಿಲ್ದಾರ್ ಕಚೇರಿ ಮುಂದೆ ಧರಣಿ ನಡೆಸಿ ಜಿಲ್ಲೆಯ ಗಮನ ಸೆಳೆದ ಮೇಲಷ್ಟೇ ಎಚ್ಚೆತ್ತುಕೊಂಡ ಜಿಲ್ಲಾಡಳಿತ ಕೂಡಲೇ ಸಮಸ್ಯೆ ಬಗೆಹರಿಸಿ ಅನುಕೂಲ ಮಾಡಿ ಕೊಡುವುದಾಗಿ ಭರವಸೆ ನೀಡಿದೆ.

ಆದರೆ, ಈಗಲೂ ಗಂಟಿಚೋರ್ ಸಮುದಾಯಕ್ಕೆ ಈ ಭರವಸೆ ಬಗ್ಗೆ ನಂಬಿಕೆ ಇಲ್ಲ. ಅವರೀಗ ಇಂಥದ್ದೇ ಸಮಸ್ಯೆ ಎದುರಿಸುತ್ತಿರುವ ನರಗುಂದ ತಾಲೂಕಿನ ಗಂಟಿಚೋರ್ ಸಮುದಾಯದವರನ್ನು ಜೊತೆಗೆ ತೆಗೆದುಕೊಂಡು ಜಿಲ್ಲಾಧಿಕಾರಿ ಕಚೇರಿ ಮುಂದೆ ಹೋರಾಟ ಮಾಡಲು ಅಣಿಯಾಗುತ್ತಿದ್ದಾರೆ.

ಈ ಸಮಸ್ಯೆಯ ಮೂಲ ದಿಂಗಾಲೇಶ್ವರ ಎಂಬ ಸ್ವಾಮೀಜಿ!
ಗದಗ ಜಿಲ್ಲೆಯ ಇತರ ತಾಲೂಕುಗಳಲ್ಲಿರುವ ಗಂಟಿಚೋರ್ ಸಮುದಾಯದವರಿಗೆ ಎಸ್‍ಸಿ ಪ್ರಮಾಣ ಪತ್ರ ಪಡೆಯವ ಯಾವುದೇ ತಾಂತ್ರಿಕ ಅಡೆತಡೆ ಆಗಿಲ್ಲ. ಗೋಕಾಕ್, ಬಾಗಲಕೋಟೆ, ಕೊಪ್ಪಳ ಮತ್ತು ಹುಬ್ಬಳ್ಳಿ ಸುತ್ತಮುತ್ತ ಇರುವ ಗಂಟಿಚೋರರಿಗೂ ಈ ಸಮಸ್ಯೆ ಕಾಡಿಲ್ಲ. ಆದರೆ ಶಿರಹಟ್ಟಿಯ ಅದರಲ್ಲೂ ಬಾಲೆಹೊಸೂರು ಗ್ರಾಮದ ಗಂಟಿಚೊರರಿಗಷ್ಟೇ 2015ರಿಂದ ಈ ಸಮಸ್ಯೆ ಕಾಡಲು ಶುರುವಾಗಿದೆ. ಅದಕ್ಕೆ ಮೂಲ ಕಾರಣ ಬಾಲೆಹೊಸೂರಿನ ದಿಂಗಾಲೇಶ್ವರ ಸ್ವಾಮೀಜಿ.

ದಿಂಗಾಲೇಶ್ವರ ಸ್ವಾಮಿ

2014ರಲ್ಲಿ ಲಿಂಗಾಯತ ಸ್ವಾಮಿ ದಿಂಗಾಲೇಶ್ವರರ ಮಠ ತನ್ನ ವ್ಯಾಪ್ತಿಯನ್ನು ಬೆಳೆಸಲು ಬಾಲೆಹೊಸೂರಿನ ಕೆರೆಯೊಂದನ್ನು ಇಡಿಯಾಗಿ ಆಕ್ರಮಿಸಿಕೊಳ್ಳುತ್ತದೆ. ಸಂಖ್ಯೆ ಮತ್ತು ಜಾತಿ ಸ್ಥಾನದಲ್ಲಿ ಪ್ರಬಲರಾಗಿರುವ ಲಿಂಗಾಯತ ಸಮುದಾಯದ ಕೆಲವು ಪುಡಾರಿಗಳ ಬೆಂಬಲ, ಆ ಮೂಲಕ ಕೆಲವು ಲಿಂಗಾಯತ ರಾಜಕಾರಣಿಗಳ ಬೆಂಬಲ ಹೊಂದಿದ ದಿಂಗಾಲೇಶ್ವರ ಸ್ವಾಮೀಜಿಯ ಈ ಒತ್ತುವರಿಯನ್ನು ಪಂಚಾಯತಿ ಮತ್ತು ತಾಲೂಕಾ ಆಡಳಿತ ಪ್ರಶ್ನಿಸಲೇ ಇಲ್ಲ. ಮಠದ ತೇರಿನ ಮೆರವಣಿಗೆಯನ್ನು ವಿಸ್ತರಿಸಲು ಮತ್ತು ಮಠದ ಮುಂಭಾಗ ಇನ್ನಷ್ಟು ಭವ್ಯವಾಗಿ ಕಾಣಲು ಯೋಜನೆ ರೂಪಿಸಿದ ಸ್ವಾಮೀಜಿ ಅದಕ್ಕೆ ಅಡ್ಡಿಯಾಗಿದ್ದ ಸಾರ್ವಜನಿಕ ರಸ್ತೆಯನ್ನೇ ಆಕ್ರಮಿಸಲು ಹೊರಟರು. ಈ ಒತ್ತುವರಿಯಿಂದ ಹಲವಾರು ಬಡ ಗಂಟಿಚೋರರ ಕುಟುಂಬಗಳ ಮನೆಗಳೇ ವಿನಾಶದ ಭಿತಿಗೆ ಒಳಗಾದಾಗ ಗಂಟಿಚೋರ್ ಸಮುದಾಯ ಇದರ ಧ್ವನಿ ಎತ್ತಿ ಕಾನೂನು ಹೋರಾಟಕ್ಕೆ ಮುಂದಾಗಿತು. ಕೋರ್ಟಿನಲ್ಲಿ ತಮ್ಮ ಅತಿಕ್ರಮಣಕ್ಕೆ ಅವಕಾಶ ಸಿಗದು ಎಂದು ಅರಿತ ಸ್ವಾಮೀಜಿ ಕೆಲವು ಹುಂಬ ಲಿಂಗಾಯತ, ಕುರುಬ ಮತ್ತು ಇತರೆ ದಲಿತ ಪುಡಾರಿಗಳ ಮೂಲಕ ಜನರನ್ನು ಗಂಟಿಚೋರರ ವಿರುದ್ಧ ಎತ್ತಿ ಕಟ್ಟಿದರು.

ಇದರ ಪರಿಣಾಮವಾಗಿ ಗಂಟಿಚೋರರ ಮೇಲೆ ಹಲ್ಲೆಗಳಾಗಲು ಶುರುವಾದವು. 2015ರಲ್ಲಿ ಸ್ವಾಮಿಯ ಪ್ರಚೋದನೆಯಿಂದ ದೊಡ್ಡ ಗುಂಪೊಂದು ರಾತ್ರೋ ರಾತ್ರಿ ಗಂಟಿಚೋರರ ಮನೆ ಹೊಕ್ಕು ಮಹಿಳೆ ಮಕ್ಕಳೆನ್ನದೇ ಥಳಿಸುತ್ತ, ಮಾರಕಾಸ್ತ್ರಗಳಿಂದ ಹಲ್ಲೆ ಮಾಡುತ್ತ ಸಾಗಿತು. ಏನಾಗುತ್ತಿದೆ ಎಂದು ನೋಡಲು ಹೊರಬಂದ ವೃದ್ಧ ಮಾಂತಪ್ಪ ಗುಡಗೇರಿ ಅವರ ಮೇಲೆ ಮಾರಣಾಂತಿಕ ಹಲ್ಲೆ ಆಯಿತು. ಮರುದಿನ ಇಡೀ ಬಾಲೆಹೊಸೂರು ಪ್ರಕ್ಷುಬ್ದತೆಗೆ ಒಳಗಾಗಿತು.

ವಕೀಲ ಅನಂತ್ ಕಟ್ಟಿಮನಿ ನೇತೃತ್ವದಲ್ಲಿ ಗಂಟಿಚೋರ್ ಸಮುದಾಯದ ಹಿರಿಯರು ಮತ್ತು ಯುವಕರು ಸ್ವಾಮಿ ವಿರುದ್ಧ ಕೊಲೆಪ್ರಯತ್ನ ದೂರು ದಾಖಲಿಸಿದರು. ಸ್ವಾಮಿ ರಾತ್ರೋರಾತ್ರಿ ಪರಾರಿಯಾದರು. ಬಂಧನದ ಭೀತಿಯಿಂದ ಭೂಗತರಾದರು. ಆಗಲೇ ಸ್ವಾಮಿಗೆ ಯಾವನೋ ಒಬ್ಬ ಕ್ರಿಮಿನಲ್ ಐಡಿಯಾ ಕೊಟ್ಟ. ಬಾಲೆಹೊಸುರಿನಲ್ಲಿ ಇರುವ ಗಂಟಿಚೋರರೆಲ್ಲ ನಿಜವಾಗಿಯೂ ಗಂಟಿಚೋರರಲ್ಲ. ಗಿರಣಿ ವಡ್ಡರ್ ಎಂಬ ಸರ್‍ನೇಮ್ ( ಅಡ್ಡ ಹೆಸರು) ಇರುವವರೆಲ್ಲಾ ನಕಲಿ ಗಂಟಿಚೋರರಾಗಿದ್ದು, ಇವರೆಲ್ಲ ಎಸ್‍ಸಿ ಸಮುದಾಯದ ಸವಲತ್ತನ್ನು ಬಾಚಿಕೊಳ್ಳುತ್ತಿದ್ದಾರೆ ಎಂದು ಕೆಲವರನ್ನು ಮುಂದೆ ಕಳಿಸಿ ಕೋರ್ಟಿಗೆ ಅರ್ಜಿ ಹಾಕಿಸಿದ. ಇದನ್ನೇ ನೆಪ ಮಾಡಿಕೊಂಡ ಜಿಲ್ಲಾಡಳಿತ ತಟಸ್ಥ ಸ್ಥಿತಿಗೆ ಬಂದಿತು. ಆದರೆ ಇದರ ವಿರುದ್ದ ಗಂಟಿಚೋರರು ಪ್ರಗತಿಪರರ ನೇತೃತ್ವದಲ್ಲಿ ಅನಿರತ ಹೋರಾಟ ಮಾಡಿದಾಗ ಎಚ್‍ಕೆ ಪಾಟೀಲರು ಮತ್ತು ಅಂದಿನ ಜಿಲ್ಲಾಧಿಕಾರಿ ಪ್ರಸನ್ನಕುಮಾರ್ ಕಾಳಜಿ ವಹಿಸಿದ್ದರಿಂದ ಗಿರಣಿ ವಡ್ಡರ್ ಸೇರಿದಂತೆ ಹಾಗೆ ಹೋಲುವ ಅಡ್ಡ ಹೆಸರಿನ ಎಲ್ಲರಿಗೂ ಎಸ್‍ಸಿ ಪ್ರಮಾಣ ಪತ್ರ ನೀಡಬೇಕು ಎಂದು ಆದೇಶ ಹೊರಬಿತ್ತು. ಮುಂದೆ ಪ್ರಸನ್ನಕುಮಾರ್ ವರ್ಗಾ ಆಗಿ ಹೋದರು. ನಂತರ ಬಂದ ಡಿಸಿಗಳ ಮೇಲೆ ದಿಂಗಾಲೇಶ್ವರ ಸ್ವಾಮಿಯ ಪುಡಾರಿ ಭಕ್ತರು ಒತ್ತಡ ಹಾಕಿ ಈ ವಿಷಯ ನೆನೆಗುದಿಗೆ ಬರುವಂತೆ ಮಾಡಿದ್ದಾರೆ.

ಸಮಾಜ ಕಲ್ಯಾಣ ಇಲಾಖೆಯ ಅಂಬೇಡ್ಕರ್ ಅಧ್ಯಯನ ಸಂಸ್ಥೆಯ ಸಂಶೋಧಕ ಅರುಣಕುಮಾರ್ ಜೋಳದಕೂಡ್ಲಿಗಿ ಅವರಿಂದ ನಡೆಸಿದ ಸಂಶೋಧನೆಯಲ್ಲೂ ಈ ವಿಷಯದ ಬಗ್ಗೆ ಸಾಕಷ್ಟು ದಾಖಲೆಗಳನ್ನು ಒದಗಿಸಿದ್ದು, ಗಿರಣಿ ವಡ್ಡರ್ ಸೇರಿದಂತೆ ಇತರ ಹೆಸರಿನ ಎಲ್ಲ ಗಂಟಿಚೋರರೂ ಎಸ್‍ಸಿ ಸಮುದಾಯಕ್ಕೆ ಸೇರಿದವರು, ಇದಕ್ಕೆ ಸಂವಿಧಾನದ ಆಸರೆಯಿದೆ ಎಂದು ಸಾಬೀತು ಮಾಡಲಾಗಿದೆ.

ಆದರೂ, ಈಗಲೂ ಜಿಲ್ಲಾಡಳಿತ ಗಂಟಿಚೋರ್ ಎಂಬ ಸಣ್ಣ ಜನಸಂಖ್ಯೆ ಸಮುದಾಯಕ್ಕೆ. ಅದೂ ಮುಖ್ಯವಾಗಿ ಬಾಲೆ ಹೊಸೂರಿನ ಸಮುದಾಯಕ್ಕೆ ಕಾಟ ಕೊಡುತ್ತಿದೆ ಎಂದರೆ ಏನರ್ಥ? ಕೊಲೆ ಆರೋಪಿ ದಿಂಗಾಲೇಶ್ವರ ಸ್ವಾಮಿಯ ಒತ್ತಡವೇ ಅಲ್ಲವೇ?

ಜಿಲ್ಲಾಧಿಕಾರಿ ಹಿರೇಮಠರು ಇಂತಹ ಒತ್ತಡಕ್ಕೆ ಒಳಗಾಗಿರುವ ಸಂಶಯ ಕಾಣುತ್ತಿದೆ. ಗಂಟಿಚೋರರಿಗೆಲ್ಲ ಎಸ್‍ಸಿ ಪ್ರಮಾಣಪತ್ರ ಕೊಡಬೇಕು ಎಂಬ ಆದೇಶ ಬರಲು ಕಾರಣವಾಗಿದ್ದ ಎಚ್‍ಕೆ ಪಾಟೀಲರು ಈ ಬಗೆ ಕೂಡಲೇ ಗಮನ ಹರಿಸಬೇಕಾಗಿದೆ. ಶಿರಹಟ್ಟಿಯ ಬಿಜೆಪಿ ಶಾಸಕ ರಾಮಣ್ಣ ಲಮಾಣಿ ಕೂಡ ಸ್ವಾಮಿಯ ಬೆಂಬಲಕ್ಕೆ ಇದ್ದಾರೆ ಎಂಬ ಮಾತೂ ಇದೆ.

ಆದಷ್ಟು ಬೇಗ ಈ ವಿಷಯದಲ್ಲಿ ಗಂಟಿಚೋರರಿಗೆ ನ್ಯಾಯ ಸಿಗಲೇಬೇಕು. ಇಲ್ಲವಾದರೆ ಜಿಲ್ಲೆಯ ಎಲ್ಲ ದಲಿತ ಮತ್ತು ಪ್ರಗತಿಪರ ಸಂಘಟನೆಗಳು ತೀವ್ರ ಹೋರಾಟ ನಡೆಸಲಿವೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

SIR ಕರ್ತವ್ಯದ ವೇಳೆ ಶಿಕ್ಷಕಿಗೆ ಹಾರ್ಟ್ ಅಟ್ಯಾಕ್: ಚಿಕಿತ್ಸೆ ಫಲಿಸದೇ ಸಾವು

ಕೇಂದ್ರ ಚುನಾವಣಾ ಆಯೋಗವು ರಾಜ್ಯದಲ್ಲಿ ನಡೆಸುತ್ತಿರುವ ಮತದಾರರ ಪಟ್ಟಿಯ 'ವಿಶೇಷ ಸಮಗ್ರ ಪರಿಷ್ಕರಣೆ' (SIR) ಕೆಲಸದ ಹೆಸರಿನಲ್ಲಿ ಶಿಕ್ಷಕರ ಮೇಲೆ ಹೇರುತ್ತಿರುವ ಅತಿಯಾದ ಮಾನಸಿಕ ಹಾಗೂ ದೈಹಿಕ ಒತ್ತಡಕ್ಕೆ ಮತ್ತೊಬ್ಬ ಶಿಕ್ಷಕಿ ಬಲಿಯಾಗಿದ್ದಾರೆ. ಬೆಂಗಳೂರಿನ...

ಎದೆ ಸೀಳಿದರೆ ಮೂರು ಅಕ್ಷರ ಬರಲ್ಲ, ಮುಲ್ಲಾನಿಗೂ ನೀಟ್‌ಗೂ ಏನು ಸಂಬಂಧ: ಸಿ.ಟಿ ರವಿ ವಿವಾದಾತ್ಮಕ ಹೇಳಿಕೆ

ದೇಶಾದ್ಯಂತ ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಹಾಗೂ ಪರೀಕ್ಷಾ ಅಕ್ರಮಗಳ ವಿರುದ್ಧ ವಿದ್ಯಾರ್ಥಿ ಮತ್ತು ಯುವಜನ ಸಂಘಟನೆಗಳು ಬೃಹತ್ ಪ್ರತಿಭಟನೆ ನಡೆಸುತ್ತಿವೆ. ಈ ನಡುವೆ ವಿದ್ಯಾರ್ಥಿಗಳ ಹೋರಾಟವನ್ನು ಕುಹಕವಾಡಿರುವ ವಿಧಾನ ಪರಿಷತ್ ಬಿಜೆಪಿ...

ಪ್ರತಿಭಟನೆಯನ್ನು ಹತ್ತಿಕ್ಕಲು ಅಕ್ಕಾಡಕ್ಕಿಳಿದಿವೆ ಹಿಂದುತ್ವವಾದಿ ಸೋಷಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ಸ್‌ ಮತ್ತು ಉಗ್ರ ಗೂಂಡಾ ಪಡೆ

ದೆಹಲಿಯ ಜಂತರ್ ಮಂತರ್‌ನಲ್ಲಿ ಜೂನ್ 20ರಂದು ಶುರುವಾಗಿದ್ದ ಈ ಆಂದೋಲನ ಇದೀಗ ದೇಶಾದ್ಯಂತ ತೀವ್ರ ಸ್ವರೂಪ ಪಡೆದುಕೊಂಡಿದೆ. ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಸಿಜೆಪಿ ಪಟ್ಟು ಹಿಡಿದಿದ್ದು, ಇಂದು...

ಜಿರಳೆಗಳನ್ನು ಸಾಯಿಸಿ ಎಂದು ವಿವಾದಾತ್ಮಕ ಪೋಸ್ಟ್‌ ಹಾಕಿದ ಪ್ರಜ್ಞಾ ಸಿಂಗ್ ಠಾಕೂರ್

ಮಾಜಿ ಬಿಜೆಪಿ ಸಂಸದೆ ಪ್ರಜ್ಞಾ ಸಿಂಗ್ ಠಾಕೂರ್ ಅವರು ದೇಶದಿಂದ ಜಿರಳೆಗಳನ್ನು ಶಾಶ್ವತವಾಗಿ ನಿರ್ಮೂಲನೆ ಮಾಡಲು ವ್ಯವಸ್ಥೆ ಮಾಡುವಂತೆ ದೇಶದ ನಾಯಕರಿಗೆ ಮನವಿ ಮಾಡಿದ್ದಾರೆ. X (ಟ್ವಿಟರ್) ನಲ್ಲಿ ಮಾಡಿದ ಪೋಸ್ಟ್‌ನಲ್ಲಿ, 2008 ರ...

ಸೋನಮ್ ವಾಂಗ್ಚುಕ್ ಮತ್ತು ಸರ್ಕಾರದ ಡೀಲ್‌ನಲ್ಲಿ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಅಂಶವೇ ಇಲ್ಲ

ಕೇಂದ್ರದ ಮೋದಿ ಸರ್ಕಾರ ತನ್ನ ಮೂರು ಪ್ರಮುಖ ಬೇಡಿಕೆಗಳನ್ನು ಈಡೇರಿಸಲು ಒಪ್ಪಿಕೊಂಡ ನಂತರ, ಪರಿಸರ ಹೋರಾಟಗಾರ ಸೋನಮ್ ವಾಂಗ್ಚುಕ್ ಜುಲೈ 23ರ ಗುರುವಾರ ತಮ್ಮ 26 ದಿನಗಳ ಸುದೀರ್ಘ ಉಪವಾಸ ಸತ್ಯಾಗ್ರಹವನ್ನು ಕೊನೆಗೊಳಿಸಿದ್ದಾರೆ....

“50 ಗ್ರಾಂ ಡ್ರಗ್ಸ್ ಇಟ್ಟು ಕೇಸ್ ಹಾಕ್ತೀನಿ!”: ಪ್ರತಿಭಟನಾ ನಿರತ ವಿದ್ಯಾರ್ಥಿಗಳಿಗೆ ಮಾದಕದ್ರವ್ಯ ಪ್ರಕರಣದ ಬೆದರಿಕೆಯೊಡ್ಡಿದ ಮುಂಬೈ ಪೊಲೀಸ್!

ಮುಂಬೈ: ದೇಶಾದ್ಯಂತ ವಿದ್ಯಾರ್ಥಿ ಸಮುದಾಯದ ಆಕ್ರೋಶ ತೀವ್ರಗೊಳ್ಳುತ್ತಿರುವ ಬೆನ್ನಲ್ಲೇ, ತಮ್ಮ ಹಕ್ಕುಗಳಿಗಾಗಿ ಧ್ವನಿ ಎತ್ತುತ್ತಿರುವ ಯುವಜನರನ್ನು ಹತೋಟಿಗೆ ತರಲು ಪೊಲೀಸರು ಯಾವ ಮಟ್ಟದ ದಮನಕಾರಿ ಮಾರ್ಗಗಳನ್ನು ತುಳಿಯುತ್ತಿದ್ದಾರೆ ಎಂಬುದಕ್ಕೆ ಮುಂಬೈನಲ್ಲಿ ನಡೆದ ಘಟನೆಯೊಂದು...

ಬಿಡದಿ ಟೌನ್‌ಶಿಪ್: 80% ರೈತರ ಒಪ್ಪಿಗೆ ಇದೆ ಎಂಬ ವಾದ ಸಾಬೀತುಪಡಿಸಿ – ಸರ್ಕಾರಕ್ಕೆ ಸಂಯುಕ್ತ ಹೋರಾಟ ಸವಾಲು

ಬಿಡದಿ ಟೌನ್‌ಶಿಪ್ ಯೋಜನೆಗೆ ಭೂಮಿ ನೀಡಲು ಉದ್ದೇಶಿತ ಪ್ರದೇಶದ ಶೇಕಡಾ 80 ರಷ್ಟು ರೈತರು ಒಪ್ಪಿದ್ದಾರೆ ಎಂಬ ಸರ್ಕಾರದ ವಾದಕ್ಕೆ ಯಾವುದೇ ವಾಸ್ತವಿಕ ಆಧಾರವಿಲ್ಲ. ಸರ್ಕಾರಕ್ಕೆ ಧೈರ್ಯವಿದ್ದರೆ ತನ್ನ ಈ ಹೇಳಿಕೆಯನ್ನು ಜನರ...

ವಿದ್ಯಾರ್ಥಿಗಳ ಮೇಲಿನ ಪೊಲೀಸ್ ದೌರ್ಜನ್ಯ: ವಿಚಾರಣೆ ತಿರಸ್ಕರಿಸಿದ ಸುಪ್ರೀಂ; “ವಿಡಿಯೋ ನೋಡಲು ನಮಗೆ ಆಸಕ್ತಿಯೂ ಇಲ್ಲ, ಸಮಯವೂ ಇಲ್ಲ” ಎಂದ ನ್ಯಾಯಮೂರ್ತಿ ಸೂರ್ಯಕಾಂತ್

ನವದೆಹಲಿ: ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ಪರೀಕ್ಷಾ ಅಕ್ರಮಗಳನ್ನು ಖಂಡಿಸಿ ಶಾಂತಿಯುತವಾಗಿ ಹೋರಾಡುತ್ತಿದ್ದ ಯುವ ಸಮೂಹದ ಮೇಲೆ ದೆಹಲಿ ಪೊಲೀಸರು ನಡೆಸಿದ ಭೀಕರ ದೌರ್ಜನ್ಯದ ವಿರುದ್ಧ ನ್ಯಾಯದ ನಿರೀಕ್ಷೆಯಲ್ಲಿದ್ದ ವಿದ್ಯಾರ್ಥಿಗಳಿಗೆ ದೇಶದ ಅತ್ಯುನ್ನತ ನ್ಯಾಯಾಲಯದಿಂದ...

ರಾಹುಲ್ ಗಾಂಧಿ ವಿದ್ಯಾರ್ಥಿಗಳನ್ನು ‘ರಾಜಕೀಯ ದಾಳ’ವಾಗಿ ಬಳಸುತ್ತಿದ್ದಾರೆ ಎಂದ ಧರ್ಮೇಂದ್ರ ಪ್ರಧಾನ್ ವಿರುದ್ಧ ವ್ಯಾಪಕ ಆಕ್ರೋಶ

ನವದೆಹಲಿ: ದೇಶಾದ್ಯಂತ ನೀಟ್ (NEET) ಪರೀಕ್ಷೆಯ ಅಕ್ರಮಗಳು, ಪ್ರಶ್ನೆಪತ್ರಿಕೆ ಸೋರಿಕೆ ಹಾಗೂ ಶಿಕ್ಷಣ ಇಲಾಖೆಯ ಸರಣಿ ವೈಫಲ್ಯಗಳನ್ನು ಖಂಡಿಸಿ ವಿದ್ಯಾರ್ಥಿಗಳು ಮತ್ತು ವಿರೋಧ ಪಕ್ಷಗಳು ತೀವ್ರ ಪ್ರತಿಭಟನೆ ನಡೆಸುತ್ತಿದ್ದು, ಶಿಕ್ಷಣ ಸಚಿವ ಧರ್ಮೇಂದ್ರ...

ಸಿಜೆಪಿ ಪ್ರತಿಭಟನಾಕಾರರ ಮೇಲೆ ಪೆಲೆಟ್ ಗನ್ ಬಳಕೆ, ವಿದ್ಯುತ್ ಲಾಠಿ ಪ್ರಹಾರ: ಆರೋಪ ನಿರಾಕರಿಸಿದ ಪೊಲೀಸರು

ಸೋಮವಾರ (ಜುಲೈ 20) ಕಾಕ್ರೋಚ್ ಜನತಾ ಪಕ್ಷ (ಸಿಜೆಪಿ) ಕರೆ ನೀಡಿದ್ದ ಸಂಸತ್ ಚಲೋ ಮೆರವಣಿ ಸಂದರ್ಭದಲ್ಲಿ ನಡೆದ ಪೊಲೀಸರ ದೌರ್ಜನ್ಯದಲ್ಲಿ ಗಾಯಗೊಂಡ 80 ಪ್ರತಿಭಟನಾಕಾರರಲ್ಲಿ ಕನಿಷ್ಠ ಒಬ್ಬರಿಗೆ ಪೆಲೆಟ್ ಗನ್ ಗಾಯಗಳಾಗಿವೆ...