Homeಮುಖಪುಟಜಾಗತಿಕ ಸನ್ನಿವೇಶದಲ್ಲಿ ಗೌರಿಯವರ ಹುತಾತ್ಮತೆ : ಬಿನು ಮ್ಯಾಥ್ಯೂ

ಜಾಗತಿಕ ಸನ್ನಿವೇಶದಲ್ಲಿ ಗೌರಿಯವರ ಹುತಾತ್ಮತೆ : ಬಿನು ಮ್ಯಾಥ್ಯೂ

- Advertisement -
- Advertisement -

ಕೇರಳದ ಬಿನು ಮ್ಯಾಥ್ಯೂ ‘ಕೌಂಟರ್ ಕರೆಂಟ್ಸ್’ ವೆಬ್‍ಸೈಟ್‍ನ ಸ್ಥಾಪಕರಲ್ಲೊಬ್ಬರು. ವೆಬ್‍ಲೋಕ ಇನ್ನೂ ತೆರೆಯುತ್ತಿರುವಾಗಲೇ ಇಂಗ್ಲಿಷಿನಲ್ಲಿ ದೇಶದ ಪರ್ಯಾಯ ದನಿಗಳಿಗೆ ಅದರಲ್ಲಿ ವೇದಿಕೆಯನ್ನು ಕಲ್ಪಿಸಿದ್ದು ಕೌಂಟರ್‍ಕರೆಂಟ್ಸ್. ಬಹು ಹಿಂದೆಯೇ ಜನಪರ ಆಂದೋಲನಗಳ ಕುರಿತ ಮಾಹಿತಿ ಮತ್ತು ಚಿಂತನೆಗಳು ಆ ವೆಬ್‍ತಾಣದಲ್ಲಿ ಜಗತ್ತಿನ ಓದುಗರಿಗೆ ಲಭ್ಯವಿದ್ದವು. 2001ರಿಂದ ಇಲ್ಲಿಯವರೆಗೆ ನಿರಂತರವಾಗಿ ಅದನ್ನು ನಡೆಸಿಕೊಂಡು ಬಂದಿದ್ದು ಬಿನು ಮ್ಯಾಥ್ಯೂ.ಈ ಲೇಖನವನ್ನು ಕನ್ನಡಕ್ಕೆ ಶಂಕರ ಎನ್. ಕೆಂಚನೂರುಅವರು ಅನುವಾದಿಸಿದ್ದಾರೆ

ಭಯೋತ್ಪಾದನೆಯೆದುರಿನ ಹೋರಾಟದಲ್ಲಿ ನಾವು ಗೌರಿ ಲಂಕೇಶ್ ಅವರನ್ನು ಕಳೆದುಕೊಂಡಿದ್ದೇವೆ. ಈ ಭಯೋತ್ಪಾದನೆಗೆ ಒಂದು ಸಂದರ್ಭವಿದೆ. ಈ ಲೇಖನದಲ್ಲಿ ನಾನು ಗೌರಿಯ ಹುತಾತ್ಮತೆಯನ್ನು ಆ ಸಂದರ್ಭದ ಚೌಕಟ್ಟಿನಲ್ಲಿ ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತೇನೆ.

ನಾನು 2002ರಲ್ಲಿ ಕೌಂಟರ್ ಕರೆಂಟ್ಸ್.ಆರ್ಗ್ (Counter Currents.org) ಪ್ರಾರಂಭಿಸಿದಾಗ, ವಾತಾವರಣದಲ್ಲಿನ CO2 ಮಟ್ಟವು 370 ಪಿ.ಪಿ.ಎಮ್ (ಪಾರ್ಟ್ಸ್ ಪರ್ ಮಿಲಿಯನ್) ಇತ್ತು. 17 ವರ್ಷಗಳ ನಂತರ ಈಗ ಅದು 420 ಪಿಪಿಎಂ ತಲುಪಿದೆ. ಜಾಗತಿಕ ತಾಪಮಾನ ಏರಿಕೆಗೆ ಕಾರಣವಾಗುವ CO2 ಮತ್ತು CO2 ಸಮಾನ ಅಂಶಗಳು 496 ಪಿ.ಪಿ.ಎಮ್ ತಲುಪಿದೆ ಎಂದು ಇತ್ತೀಚೆಗೆ ನಾಸಾ ಅಂಕಿ-ಅಂಶಗಳನ್ನು ಬಿಡುಗಡೆ ಮಾಡಿದೆ. ವಾತಾವರಣದಲ್ಲಿ CO2 ಮಟ್ಟವು ವಾರ್ಷಿಕ 3 ಪಿ.ಪಿ.ಎಮ್‍ನಷ್ಟು ಹೆಚ್ಚುತ್ತಿದೆ. ಹೆಚ್ಚುತ್ತಿರುವ ತಾಪಮಾನದಿಂದ ಭೂಮಿಯನ್ನು ಉಳಿಸಲು ನಮಗೆ ಕೇವಲ ಒಂದು ದಶಕವಷ್ಟೇ ಉಳಿದಿದೆಯೆಂದು ಹವಾಮಾನ ವಿಜ್ಞಾನಿಗಳು ಎಚ್ಚರಿಸಿದ್ದಾರೆ. ಇಂಟರ್‍ನ್ಯಾಷನಲ್ ಎನರ್ಜಿ ಏಜೆನ್ಸಿ (ಐ.ಇ.ಎ) 2010ರಲ್ಲಿ ಪ್ರಕಟಿಸಿದ ತನ್ನ ‘ವರ್ಲ್ಡ್ ಪವರ್ ಔಟ್‍ಲುಕ್’ ಎಂಬ ವರದಿಯು ಆಶ್ವರ್ಯಗೊಳಿಸುವ ಅಂಶಗಳನ್ನು ಬಹಿರಂಗ ಮಾಡಿದೆ. ಸಾಂಪ್ರದಾಯಿಕ ತೈಲ ಅಂದರೆ, ಸುಲಭವಾಗಿ ಹೊರತೆಗೆಯಬಹುದಾದ ತೈಲದ ಉತ್ಪಾದನಾ ಮಟ್ಟವು 2005ರ ಆಸುಪಾಸಿನಲ್ಲಿ ಗರಿಷ್ಠ ಉತ್ಪಾದನೆಯನ್ನು ತಲುಪಿತ್ತು.

ಅದು ಆಧುನಿಕ ನಾಗರಿಕತೆಯನ್ನು ನಿರ್ಮಿಸಿದ ಸುಲಭವಾಗಿ ಲಭ್ಯವಿರುವ ತೈಲವೆನ್ನುವುದನ್ನು ನಾವು ನೆನಪಿನಲ್ಲಿಡಬೇಕು. ಅಂದರೆ ತೈಲವು ಮುಗಿದುಹೋದ ನಂತರ, ನಾಗರಿಕತೆಯೂ ಸಹ ಮುಗಿದುಹೋಗುತ್ತದೆ. ಅಂದರೆ ತಮ್ಮದಲ್ಲದ ತಪ್ಪಿಗಾಗಿ ನೂರಾರು ಕೋಟಿ ಜನರು ನಾಶವಾಗುತ್ತಾರೆ. ಆಧುನಿಕ ನಾಗರಿಕತೆಯನ್ನು ಸಾಧ್ಯವಾಗಿಸುವ ನೀರು ಮತ್ತು ಖನಿಜಗಳಂತಹ ನೈಸರ್ಗಿಕ ಸಂಪನ್ಮೂಲಗಳ ವಿಷಯದಲ್ಲೂ ಹೀಗೇ ಆಗುತ್ತಿದೆ.

ಈಗ ನಾವು ನಮ್ಮ ಚರ್ಚೆಯ ಚೌಕಟ್ಟನ್ನು ಸಿದ್ಧಪಡಿಸಿದ್ದಾಯಿತು, ಮುಂದಿನ ಭವಿಷ್ಯದ ಬಗ್ಗೆ ಅವಲೋಕಿಸೋಣ. ನಾವು ಅವನತಿಯ ಹಾದಿಯಲ್ಲಿ ಸಾಗುತ್ತಿದ್ದೇವೆ.

ಪರಿಸರ ಕುಸಿತ

ಪ್ಯಾರಿಸ್ ಒಪ್ಪಂದದಲ್ಲಿನ ಪ್ರಕಾರ ಇಂಗಾಲದ ಹೊರಸೂಸುವಿಕೆಯ ಕಡಿತದ ಪ್ರಮಾಣವನ್ನು ಸಾಧಿಸಿದರೂ ಸಹ, ವಿಜ್ಞಾನಿಗಳು `ಹಾಟ್ ಹೌಸ್ ಅರ್ಥ್”ಎಂದು ಕರೆಯುವ ಪರಿಸ್ಥಿತಿಗಳು ಭೂಮಿಗೆ ಪ್ರವೇಶಿಸುವ ಅಪಾಯವಿದೆ ಎಂದು ಅಂತರರಾಷ್ಟ್ರೀಯ ವಿಜ್ಞಾನಿಗಳ ತಂಡವು ಪ್ರಕಟಿಸಿದ ಪ್ರೊಸೀಡಿಂಗ್ಸ್ ಆಫ್ ದಿ ನ್ಯಾಷನಲ್ ಅಕಾಡೆಮಿ ಆಫ್ ಸೈನ್ಸಸ್ (ಪಿ.ಎನ್.ಎ.ಎಸ್) ವರದಿಯು ಸಾರಿ ಹೇಳಿದೆ. “ಹಾಟ್ ಹೌಸ್ ಅರ್ಥ್” ಹವಾಮಾನವು ದೀರ್ಘಾವಧಿಯಲ್ಲಿ ಕೈಗಾರಿಕಾ ಪೂರ್ವದ ತಾಪಮಾನಕ್ಕಿಂತ ಜಾಗತಿಕ ಸರಾಸರಿ 4-5 ಡಿಗ್ರಿ ಸೆಂಟಿಗ್ರೇಡ್‍ಗಳಷ್ಟು ತಾಪಮಾನ ಏರಿಕೆಯಾಗಲಿದೆ ಮತ್ತು ಸಮುದ್ರ ಮಟ್ಟವು ಇಂದಿನ ಮಟ್ಟಕ್ಕಿಂತ 10-60 ಮೀ ಏರಿಕೆಯಾಗಲಿದೆ. “ಈ ಸನ್ನಿವೇಶವನ್ನು ತಪ್ಪಿಸಬೇಕೆಂದರೆ ಭೂ-ಪರಿಸರದ ಶೋಷಣೆಯಲ್ಲಿ ತೊಡಗಿರುವ ಮಾನವ ಕ್ರಿಯೆಗಳನ್ನು ಬದಲಿಸಿ ಭೂ-ಪರಿಸರ ವ್ಯವಸ್ಥೆಯ ಉಸ್ತುವಾರಿ ಕಡೆಗೆ ಮರುನಿರ್ದೇಶಿಸುವ ಅಗತ್ಯವಿದೆ” ಎಂದು ವರದಿ ಎಚ್ಚರಿಸಿದೆ. ಭೂಮಿಯ ಮೇಲಿನ ಬಹುತೇಕ ಪ್ರಭೇದಗಳು ಹಾಗೂ ಮಾನವ ಪ್ರಭೇದದ ಬಹುತೇಕರ ಮೇಲೆ ಈ ಹಾಟ್ ಹೌಸ್ ಅರ್ಥ್‍ನ ದುಷ್ಪರಿಣಾಮಗಳು ಉಂಟಾಗಲಿವೆ.

ಆರ್ಥಿಕ ಕುಸಿತ

ನಮ್ಮ ಭೂಮಿಯು ವೆಂಟಿಲೇಟರ್‍ನಲ್ಲಿ ಇರುವುದರಿಂದ ಮತ್ತು ನಮ್ಮ ಹೆಚ್ಚಿನ ಸಂಪನ್ಮೂಲಗಳು ಖಾಲಿಯಾದ ನಂತರ ನಾವು ಆರ್ಥಿಕ ಕುಸಿತವನ್ನು ಎದುರಿಸಲಿದ್ದೇವೆ. ಇಲ್ಲಾ ಇಲ್ಲ. ನಾವು ಈಗಾಗಲೇ ಆರ್ಥಿಕ ಕುಸಿತವನ್ನು ಎದುರಿಸುತ್ತಿದ್ದೇವೆ.

ಸಾಮಾಜಿಕ ಕುಸಿತ

ಮೇಲೆ ತಿಳಿಸಿದ ಎರಡೂ ಕುಸಿತಗಳು ಊಹಿಸಲಾಗದ ಪ್ರಮಾಣದಲ್ಲಿ ಸಾಮಾಜಿಕ ಕುಸಿತವನ್ನು ತರುತ್ತವೆ. ಹೌದು, ಇದು ಈಗಾಗಲೇ ನಡೆಯುತ್ತಿದೆ. ಈ ಕುಸಿತವು ಸಾಮಾಜಿಕ ಅಸಹನೆ, ದ್ವೇಷ, ಯುದ್ಧಗಳು, ಗಲಭೆಗಳು ಮತ್ತು ತಪ್ಪಿಸಬಹುದಾದ ನೂರಾರು ಕೋಟಿ ಸಾವುಗಳಿಗೆ ಸಾಕ್ಷಿಯಾಗಲಿದೆ. ಇದು ಜನಸಂಖ್ಯೆಯ ಪ್ರಬಲ ವಿಭಾಗಗಳು ಸರ್ವಾಧಿಕಾರಿಗಳನ್ನು ಬಯಸುವ ಪ್ರವೃತ್ತಿಯ ಹೆಚ್ಚಳಕ್ಕೆ ಕಾರಣವಾಗುತ್ತದೆ. ನಾವು ಈಗಾಗಲೇ ಇದಕ್ಕೆ ಸಾಕ್ಷಿಯಾಗಿದ್ದೇವೆ. ಇದು ಭಾರತದಲ್ಲಿ ನರೇಂದ್ರ ಮೋದಿ ರೂಪದಲ್ಲಿದ್ದರೆ, ಅಮೇರಿಕಾದಲ್ಲಿ ಡೊನಾಲ್ಡ್ ಟ್ರಂಪ್ ಆಗಿದೆ. ಈ ಪ್ರವೃತ್ತಿ ಮುಂದುವರೆಯಲಿದೆ ಮಾತ್ರವಲ್ಲ, ಪ್ರಪಂಚದ ಇತರ ಭಾಗಗಳಿಗೂ ಹರಡಲಿದೆ. ಗೌರಿ ಲಂಕೇಶ್ ಅವರ ಜೀವವನ್ನು ತೆಗೆದುಕೊಂಡ ಸನಾತನ ಸಂಸ್ಥೆಯಂತಹ ದ್ವೇಷದ ಬೀಜಗಳು ಅನೇಕ ಕಡೆಗಳಲ್ಲಿ ಮೊಳಕೆಯೊಡೆಯುವುದನ್ನು ನಾವು ನೋಡಲಿದ್ದೇವೆ. ಮುಂದಿನ ದಿನಗಳಲ್ಲಿ ಅನೇಕರು ಗೌರಿಯ ಸ್ಥಿತಿಯನ್ನು ಎದುರಿಸಬಹುದೆಂಬ ಆತಂಕ ನನ್ನನ್ನು ಕಾಡುತ್ತಿದೆ.

ನಾವು ಏನು ಮಾಡಬಹುದು?

ಶಿಕ್ಷಣ, ಸಂಘಟನೆ, ಆಂದೋಲನ ಮತ್ತು ಕ್ರಿಯೆಗಿಳಿಯುವುದು!

ಪ್ರತಿರೋಧದ ಬೀಜಗಳು ಪ್ರಪಂಚದ ಅನೇಕ ಭಾಗಗಳಲ್ಲಿ ಚಿಗುರೊಡೆಯುತ್ತಿವೆ. ಅವುಗಳಲ್ಲಿ ಪ್ರಮುಖವಾದುದು ಸ್ವೀಡಿಷ್ ಹುಡುಗಿ ಗ್ರೆಟಾ ಥನ್ಬರ್ಗ್ ನೇತೃತ್ವದ ಶಾಲಾ ಮುಷ್ಕರ. ಕೊನೆಗೆ, ಮುಂದಿನ ಪೀಳಿಗೆಯವರು ಹಳೆಯ ತಲೆಮಾರುಗಳ ಲಾಭಕ್ಕಾಗಿ ಬೆಲೆ ತೆರಲಿದ್ದಾರೆ. ಎಕ್ಸ್ಟಿಂಕ್ಷನ್ ರೆಬೆಲಿಯನ್ (ಅಳಿವಿನಂಚಿನ ಬಂಡಾಯ) ಯುರೋಪಿನಲ್ಲಿ ಜನಪ್ರಿಯವಾಗುತ್ತಿರುವ ಮತ್ತೊಂದು ಪ್ರತಿಭಟನಾ ಕ್ರಮವಾಗಿದೆ. ಟ್ರಾನ್ಸಿಷನ್ ಟೌನ್ಸ್ (ಪರಿವರ್ತನಾ ಪಟ್ಟಣಗಳು) ಪ್ರಪಂಚದಾದ್ಯಂತ ಜನಪ್ರಿಯವಾಗುತ್ತಿರುವ ಇನ್ನೊಂದು ಪರ್ಯಾಯ ಮಾರ್ಗವಾಗಿದೆ.

ಜಾಗತಿಕ ತಾಪಮಾನ ಏರಿಕೆ, ಸಂಪನ್ಮೂಲ ಬಿಕ್ಕಟ್ಟು, ಪರಿಸರ ನಾಶಗಳು ನಮ್ಮನ್ನು ಆರ್ಥಿಕ, ಸಾಮಾಜಿಕ ಮತ್ತು ರಾಜಕೀಯ ಕುಸಿತದ ಹಾದಿಗೆ ಕೊಂಡೊಯ್ದಿರುವ ಈ ಸಂದರ್ಭದಲ್ಲಿ ನಮ್ಮ ಪತ್ರಿಕೋದ್ಯಮ, ಕಲೆ, ಸಾಹಿತ್ಯ ಇತ್ಯಾದಿಗಳು ನಡೆದಿರುವ ಹಾದಿಯನ್ನು ಮರುಪರಿಶೀಲಿಸುವ ಸಮಯ ಬಂದಿದೆ. ಈ ಕಟು ವಾಸ್ತವಗಳನ್ನು ಗಣನೆಗೆ ತೆಗೆದುಕೊಳ್ಳದ ಎಲ್ಲವೂ ನನಗೆ ಶೂನ್ಯ ಎನಿಸುತ್ತದೆ. ಪ್ರಸ್ತುತದಲ್ಲಿ ನಡೆಯುತ್ತಿರುವುದು ಮಾತ್ರ ಕುರುಡರು ಮತ್ತು ಆನೆಯ ಕತೆಯಂತೆ ಕಾಣುತ್ತಿದೆ.

ನಾವೆಲ್ಲರೂ ನಿಧಾನವಾಗಿ ಕಾವೇರುತ್ತಿರುವ ನೀರಿನಲ್ಲಿ ಇರುವ ಕಪ್ಪೆಗಳು. ನಿಜವಾಗಿಯೂ ಏನಾಗುತ್ತಿದೆ ಎಂಬುದು ನಮಗೆ ತಿಳಿಯುವಷ್ಟರಲ್ಲಿ ಬಹಳ ತಡವಾಗಿರುತ್ತದೆ. ನಿಧಾನವಾಗಿ ಬಿಸಿಯೇರುತ್ತಿರುವ ನೀರಿನಿಂದ ಹೊರಬಂದು ನಾವು ಎದುರಿಸುತ್ತಿರುವ ವಿಪತ್ತನ್ನು ಅರಿತುಕೊಳ್ಳಲೇಬೇಕಾದ ಸಮಯವಿದು. ನಮ್ಮ ಕತೆಗಳನ್ನು ಹೇಳಲು, ನಮ್ಮ ಪ್ರತಿರೋಧವನ್ನು ಸಂಘಟಿಸಲು ನಾವು ಸಂಪೂರ್ಣ ಹೊಸ ಮಾದರಿಗಳನ್ನು ಹುಟ್ಟುಹಾಕದಿದ್ದರೆ ನಮಗೆ ಉಳಿಗಾಲವಿಲ್ಲ.

ಹಳೆಯ ಜಗತ್ತು ಸತ್ತು ಬಿದ್ದಿದೆ. ಹೊಸ ಪ್ರಪಂಚದ ಹುಟ್ಟಿನ ಹೆರಿಗೆ ನೋವುಗಳನ್ನು ನಾವು ಆಲಿಸುತ್ತಿದ್ದೇವೆ!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಧಾರವಾಡ | ಪ್ರಕಾಶ್ ರಾಜ್ ಭಾಗವಹಿಸಿದ್ದ ಸಮುದಾಯ ಕಾರ್ಯಕ್ರಮಕ್ಕೆ ಅಡ್ಡಿಪಡಿಸಲು ಯತ್ನ : ದೂರು ದಾಖಲು

ಭಾನುವಾರ (ಆ.30) ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದ ಸಭಾ ಭವನದಲ್ಲಿ ಆಯೋಜಿಸಿದ್ದ ಸಮುದಾಯ ಸಂಘಟನೆಯ ಕಾರ್ಯಕ್ರಮಕ್ಕೆ ಅಡ್ಡಿಪಡಿಸಲು ಯತ್ನಿಸಿ ಗಲಾಟೆ ಎಬ್ಬಿಸಿದ ಬಿಜೆಪಿ-ಸಂಘಪರಿವಾರದ ಬೆಂಬಲಿಗರ ವಿರುದ್ಧ ದೂರು ದಾಖಲಿಸಲಾಗಿದೆ. ಸಮುದಾಯ ಸಂಘಟನೆಯ ಧಾರವಾಡದ...

ಚಲಿಸುತ್ತಿದ್ದ ಸ್ಲೀಪರ್ ಬಸ್‌ನಲ್ಲಿ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ : ಚಾಲಕ, ಕಂಡಕ್ಟರ್ ಬಂಧನ

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 2012ರಲ್ಲಿ ನಡೆದ ನಿರ್ಭಯಾ ಪ್ರಕರಣವನ್ನು ನೆನಪಿಸುವಂತಹ ಆಘಾತಕಾರಿ ಘಟನೆಯೊಂದು ನಡೆದಿದೆ. ಸ್ಲೀಪರ್‌ ಬಸ್‌ನಲ್ಲಿ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಲಾಗಿದೆ. indiatoday.in ವರದಿಯ ಪ್ರಕಾರ, ಈ ಘಟನೆಯು ಆಗಸ್ಟ್ 4ರ...

ಜಗತ್ತಿನ ಪ್ರತಿಯೊಬ್ಬರಿಗೂ ಲ್ಯಾಪ್‌ಟಾಪ್ ಕೊಳ್ಳುವಷ್ಟು ಕಪ್ಪು ಹಣ ಪ್ರಪಂಚದಲ್ಲಿದೆ: ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್

ಅಕ್ರಮ ಹಣ ವರ್ಗಾವಣೆ (Money Laundering) ಮತ್ತು 'ಡಿಜಿಟಲ್ ಅರೆಸ್ಟ್' ನಂತಹ ಆನ್‌ಲೈನ್ ವಂಚನೆಗಳ ಪ್ರಮಾಣದ ಕುರಿತು ಭಾರತದ ಮುಖ್ಯ ನ್ಯಾಯಮೂರ್ತಿ (CJI) ಸೂರ್ಯ ಕಾಂತ್ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ಈ ರೀತಿಯ...

ಪೆಟ್ರೋಲ್‌ನಲ್ಲಿ ಎಥನಾಲ್ ಪ್ರಮಾಣ ಬಹಿರಂಗಪಡಿಸುವಂತೆ ಕೋರಿದ್ದ ಅರ್ಜಿ ವಜಾಗೊಳಿಸಿದ ಸುಪ್ರೀಂ ಕೋರ್ಟ್

ಪೆಟ್ರೋಲ್‌ನಲ್ಲಿ ಬೆರೆಸಲಾಗುವ ಎಥನಾಲ್ ಪ್ರಮಾಣವನ್ನು ಕಡ್ಡಾಯವಾಗಿ ನಮೂದಿಸಬೇಕು ಮತ್ತು ವಾಹನಗಳಿಗೆ ಎಥನಾಲ್ ಮಿಶ್ರಿತ ಇಂಧನದ ಹೊಂದಾಣಿಕೆಯ ಬಗ್ಗೆ ಹೆಚ್ಚಿನ ಪಾರದರ್ಶಕತೆ ತರಬೇಕು ಎಂದು ಕೋರಿ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (ಪಿಐಎಲ್‌) ವಿಚಾರಣೆ...

ದೆಹಲಿ| ಜಮಾ ಮಸೀದಿ ಸುತ್ತಮುತ್ತಲಿನ ಅಕ್ರಮ ಒತ್ತುವರಿ ತೆರವು ಕಾರ್ಯಾಚರಣೆ ಆರಂಭಿಸಿದ ಎಂಸಿಡಿ

ದೆಹಲಿ ಹೈಕೋರ್ಟ್ ನಿರ್ದೇಶನದಂತೆ, ಮೊಘಲರ ಕಾಲದ ಐತಿಹಾಸಿಕ ಜಮಾ ಮಸೀದಿ ಸುತ್ತಮುತ್ತಲಿನ ಅಕ್ರಮ ನಿರ್ಮಾಣಗಳನ್ನು ಸಮೀಕ್ಷೆ ಮಾಡಿ, ಒತ್ತುವರಿಯನ್ನು ತೆರವುಗೊಳಿಸುವ ಬೃಹತ್ ಕಾರ್ಯಾಚರಣೆಯನ್ನು ದೆಹಲಿ ಮಹಾನಗರ ಪಾಲಿಕೆ (ಎಂಸಿಡಿ) ಸೋಮವಾರ (ಆ.31) ಪ್ರಾರಂಭಿಸಿದೆ...

ವೆನೆಜುವೆಲಾ ಮತ್ತೆ ಎದ್ದು ನಿಲ್ಲಲಿದೆ: ಬಂಧನದಲ್ಲಿರುವ ವೆನೆಜುವೆಲಾ ಮಾಜಿ ಅಧ್ಯಕ್ಷ ಮಡುರೊ ಮೊದಲ ಫೋಟೋ ಹಂಚಿಕೆ

ಜನವರಿಯಲ್ಲಿ ಅಮೆರಿಕ ಪಡೆಗಳಿಂದ ಬಂಧನಕ್ಕೊಳಗಾಗಿದ್ದ ವೆನೆಜುವೆಲಾದ ಮಾಜಿ ಅಧ್ಯಕ್ಷ ನಿಕೋಲಸ್ ಮಡುರೊ, ಅಮೆರಿಕದ ಬಂಧನ ಕೇಂದ್ರದಿಂದ ತಮ್ಮ ಎರಡು ಛಾಯಾಚಿತ್ರಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದಾರೆ. ಬಂಧನದ ಬಳಿಕ ಮಡುರೊ ಅವರ ಫೋಟೋಗಳು ಹೊರಬಂದಿರುವುದು...

‘ಮಹಿಳೆಯರು ಆಭರಣದಂತೆ ಮನೆಯಲ್ಲೇ ಇರಬೇಕು’ ಮುಸ್ಲಿಂ ಧರ್ಮಗುರು ವಿವಾದಾತ್ಮಕ ಹೇಳಿಕೆ

ಮಹಿಳೆಯರು ಮನೆಯಲ್ಲೇ ಇರಬೇಕು ಮತ್ತು ಸಾರ್ವಜನಿಕ ಕ್ಷೇತ್ರಕ್ಕೆ ಪ್ರವೇಶಿಸಬಾರದು ಎಂದು ಕೇರಳದ ಪ್ರಭಾವಿ ಮುಸ್ಲಿಂ ಧರ್ಮಗುರು ಶೇಖ್ ಅಬೂಬಕರ್ ಅಹ್ಮದ್ ನೀಡಿದ ಹೇಳಿಕೆ ಸಾಮಾಜಿಕ ಮಾಧ್ಯಮಗಳಲ್ಲಿ ಹಾಗೂ ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆ...

ಹಲ್ದ್ವಾನಿ ‘ಶುದ್ಧೀಕರಣ’ ವಿವಾದ : ರಾಹುಲ್ ಗಾಂಧಿ ವಿರುದ್ಧ ಎಫ್‌ಐಆರ್

ಉತ್ತರಾಖಂಡದ ಹಲ್ದ್ವಾನಿಯಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ರ್‍ಯಾಲಿ ನಡೆದ ಸ್ಥಳದಲ್ಲಿ ಬಿಜೆಪಿ ಬೆಂಬಲಿಗರು 'ಶುದ್ಧೀಕರಣ' ನಡೆಸಿದ ವಿವಾದ ಹೊಸ ರಾಜಕೀಯ ಮತ್ತು ಕಾನೂನು ತಿರುವು ಪಡೆದುಕೊಂಡಿದೆ. ಜಾತಿ ನಿಂದನೆಗೆ ಸಂಬಂಧಿಸಿದಂತೆ...

ಜೈಲಿನಲ್ಲಿದ್ದ KPSC ಅಧ್ಯಕ್ಷರ ಭೇಟಿಯಾಗಿದ್ದೇಕೆ HDK? ಪ್ರಿಯಾಂಕ್ ಖರ್ಗೆ ಪ್ರಶ್ನೆ

ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್‌ಸಿ) ನೇಮಕಾತಿ ವಿಚಾರವಾಗಿ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ವಿರುದ್ಧ ಕೇಳಿಬಂದಿರುವ ಗಂಭೀರ ಆರೋಪಗಳಿಗೆ ಅವರು ತಾರ್ಕಿಕ ಸ್ಪಷ್ಟನೆ ನೀಡುವ ಬದಲು, ಜಾರಿಕೊಳ್ಳುವ ರೀತಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ್ದಾರೆ ಎಂದು...

ನೇಪಾಳ: ಶಿಕ್ಷಕನ ಸಮಯಪ್ರಜ್ಞೆಯಿಂದ ಉಳಿಯಿತು 1643 ಮಕ್ಕಳ ಪ್ರಾಣ

ನೇಪಾಳದ ರಸುವಾ ಜಿಲ್ಲೆಯಲ್ಲಿ ಸಂಭವಿಸಿದ ಭೀಕರ ಜಲಪ್ರಳಯಕ್ಕೆ ಬಲಿಯಾದವರ ಸಂಖ್ಯೆ 700ರ ಗಡಿ ದಾಟಿದೆ. 2,000ಕ್ಕೂ ಹೆಚ್ಚು ಜನರು ಇಂದಿಗೂ ನಾಪತ್ತೆಯಾಗಿದ್ದು, ರಕ್ಷಣಾ ಪಡೆಗಳು ಅವಿಶ್ರಾಂತವಾಗಿ ಶೋಧ ಕಾರ್ಯ ನಡೆಸುತ್ತಿವೆ. ಪ್ರಕೃತಿ ತನ್ನ...