Homeಕರ್ನಾಟಕಪಂಚಮಸಾಲಿ ಸಮಾಜದ ಬಂಡಾಯಕ್ಕೆ ಸರ್ಕಾರ ಆಸ್ಪದ ನೀಡದಿರಲಿ: ಮೃತ್ಯುಂಜಯ ಸ್ವಾಮೀಜಿ

ಪಂಚಮಸಾಲಿ ಸಮಾಜದ ಬಂಡಾಯಕ್ಕೆ ಸರ್ಕಾರ ಆಸ್ಪದ ನೀಡದಿರಲಿ: ಮೃತ್ಯುಂಜಯ ಸ್ವಾಮೀಜಿ

- Advertisement -
- Advertisement -

ಲಿಂಗಾಯತ ಪಂಚಮಸಾಲಿ ಸಮಾಜದ ಬಂಡಾಯಕ್ಕೆ ಸರ್ಕಾರ ಆಸ್ಪದ ನೀಡದಿರಲಿ ಎಂದು ಕೂಡಲ ಸಂಗಮ ಲಿಂಗಾಯತ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಎಚ್ಚರಿಸಿದ್ದಾರೆ.

ಸಮುದಾಯಕ್ಕೆ 2ಎ ಮೀಸಲಾತಿ ನೀಡಬೇಕೆಂದು ಆಗ್ರಹಿಸಿ ಡಿ.22ರಂದು ಬೆಳಗಾವಿಯಲ್ಲಿ ಪಂಚಮಸಾಲಿ ಸಮಾಜ ಹೋರಾಟ ಹಮ್ಮಿಕೊಂಡಿದೆ. ಇದರ ಹಿನ್ನೆಲೆಯಲ್ಲಿ ಸ್ವಾಮೀಜಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.

“ಲಿಂಗಾಯತ ಪಂಚಮಸಾಲಿ ಸಮಾಜಕ್ಕೆ ಡಿ.22ರಂದು ವಿಜಯೋತ್ಸವದ ದಿನ ಆಗಬೇಕೆ ಹೊರತು ಬಂಡಾಯದ ದಿನ ಆಗದಂತೆ ನೋಡಿಕೊಳ್ಳುವುದು ಸರ್ಕಾರದ ಜವಾಬ್ದಾರಿ. 2ಎ ಮೀಸಲಾತಿ ನೀಡಿ ನ್ಯಾಯ ದೊರಕಿಸಬೇಕು” ಎಂದಿದ್ದಾರೆ.

ಬೆಳಗಾವಿ ಪಟ್ಟಣದ ವೀರರಾಣಿ ಕಿತ್ತೂರು ಚನ್ನಮ್ಮನ ಸಮಾಧಿಗೆ ಬುಧವಾರ ಪುಷ್ಪ ನಮನ ಸಲ್ಲಿಸಿ ಬೆಳಗಾವಿ ಕಡೆಗೆ ಪಾದಯಾತ್ರೆ ಆರಂಭಿಸಿದ ಅವರು ಸುದ್ದಿಗಾರರೊಂದಿಗೆ ಮಾತನಾಡಿದ್ದಾರೆ.

“ಕೂಡಲ ಸಂಗಮದಿಂದ ಆರಂಭವಾದ ಪಂಚಮಸಾಲಿ ಹೋರಾಟಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬಹಳ ದೊಡ್ಡ ಬೆಂಬಲ ಕೊಟ್ಟಿದ್ದಾರೆ. ಮುಖ್ಯಮಂತ್ರಿ ಪಂಚಮಸಾಲಿ ಸಮಾಜಕ್ಕೆ ಮೀಸಲಾತಿ ಕೊಟ್ಟೇ ಕೊಡುತ್ತಾರೆಂಬ ವಿಶ್ವಾಸ ಇದೆ. ಆದರೆ ಮಾತು ಕೊಟ್ಟು ಎಲ್ಲೋ ಒಂದು ಕಡೆ ಪಂಚಮಸಾಲಿ ಸಮಾಜ ಬಾಂಧವರ ಭಾವನೆಗಳೊಂದಿಗೆ ಚೆಲ್ಲಾಟ ಆಡುತ್ತಿದ್ದಾರೆ. ಸಮಾಜ ಬಾಂಧವರು ಸಹನೆ ಕಳೆದುಕೊಳ್ಳುವುದಕ್ಕಿಂತ ಮುಂಚ್ಚೆ ‘2ಎ’ಮೀಸಲಾತಿ ಘೋಷಿಸಿ ಅಭಿನಂದನೆಗೆ ಪಾತ್ರರಾಗಬೇಕು” ಎಂದು ಆಗ್ರಹಿಸಿದ್ದಾರೆ.

“ಲಿಂಗಾಯತ ಪಂಚಮಸಾಲಿ ಸಮಾಜ ಬಾಂಧವರ ಕುಲದೇವತೆ ಆಗಿರುವ ವೀರರಾಣಿ ಕಿತ್ತೂರು ಚನ್ನಮ್ಮನ ಐಕ್ಯಸ್ಥಳದಿಂದ ಸಂಪಗಾಂವ, ಚಿಕ್ಕಬಾಗೇವಾಡಿ, ಹಿರೇಬಾಗೇವಾಡಿ ಮಾರ್ಗವಾಗಿ ಬೆಳಗಾವಿ ಸುವರ್ಣ ಸೌಧಕ್ಕೆ ತೆರಳಿ ಪಂಚಶಕ್ತಿ ವಿರಾಟ ಸಮಾವೇಶ ನಡೆಸಲಾಗುತ್ತಿದೆ. ಈ ಭಾಗದ ಸಮಸ್ತ ಪಂಚಮಸಾಲಿ ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಶಕ್ತಿ ಪ್ರದರ್ಶನ ಮಾಡಬೇಕು” ಎಂದು ಕೋರಿದ್ದಾರೆ.

ಮುಖಂಡ ವಿಜಯಾನಂದ ಕಾಶಪ್ಪನವರ ಮಾತನಾಡಿ, “ಸಮಾವೇಶಕ್ಕೆ ಲಕ್ಷಾಂತರ ಜನ ಸೇರುವ ನಿರೀಕ್ಷೆ ಇದೆ. ಸರ್ಕಾರ ಅಂತಿಮ ನಿರ್ಣಯ ಕೈಕೊಂಡರೆ ಗೌರವ ಸಲ್ಲಿಸುತ್ತೇವೆ. ಇಲ್ಲವಾದರೆ ಮಾಡುವ ಅವಮಾನ ಎದುರಿಸಬೇಕಾಗುತ್ತದೆ” ಎಂದು ಎಚ್ಚರಿಸಿದ್ದಾರೆ.

ಕಾಡಾ ಅಧ್ಯಕ್ಷ ಡಾ.ವಿಶ್ವನಾಥ ಪಾಟೀಲ, ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಶಂಕರ ಮಾಡಲಗಿ, ಪಂಚಮಸಾಲಿ ಸಮಾಜದ ತಾಲ್ಲೂಕು ಘಟಕ ಅಧ್ಯಕ್ಷ ಶ್ರೀಶೈಲ ಬೋಳಣ್ಣವರ, ಪುರಸಭೆ ಅಧ್ಯಕ್ಷ ಬಸವರಾಜ ಜನ್ಮಟ್ಟಿ, ಪ್ರಧಾನ ಕಾರ್ಯದರ್ಶಿ ಮಹೇಶ ಹರಕುಣಿ, ರಾಜಶೇಖರ ಮೂಗಿ, ಎಫ್.ಎಸ್.ಸಿದ್ದನಗೌಡರ, ಎಸ್.ಬಿ.ಸಂಗನಗೌಡರ, ಬಸವರಾಜ ತಟವಟಿ, ಉಮೇಶ ಬೋಳೆತ್ತಿನ, ಶಿವಾನಂದ ಬೆಳಗಾವಿ, ರಾಜು ಸೊಗಲ, ಸುನೀಲ ಮರಕುಂಬಿ, ರಾಜು ನರಸಣ್ಣವರ, ನಿಂಗಪ್ಪ ಚೌಡನ್ನವರ ಮೊದಲಾದವರು ಹಾಜರಿದ್ದರು.

“ಪಂಚಮಸಾಲಿ ಹೋರಾಟಕ್ಕೆ ಪರಿಹಾರವನ್ನು ಸರ್ಕಾರ ನಾಳೆ ನಡೆಯುವ ಸಚಿವ ಸಂಪುಟ ಸಭೆಯಲ್ಲಿ ತೆಗೆದುಕೊಳ್ಳುವ ಸಾಧ್ಯತೆ ಇದೆ. ನಾಳೆ ಸರ್ಕಾರ ಈ ಬಗ್ಗೆ ತೀರ್ಮಾನ ಪ್ರಕಟ ಮಾಡುವ ಸಾಧ್ಯತೆ ಇದೆ” ಎಂದು ವರದಿಯಾಗಿದೆ. ಮುಂದಿನ ಚುನಾವಣೆಯಲ್ಲಿ ಕಿತ್ತೂರು ಕರ್ನಾಟಕ ಭಾಗದಲ್ಲಿ ಅಧಿಕ ಸಂಖ್ಯೆಯಲ್ಲಿ ಇರುವ ಪಂಚಮಸಾಲಿ ಸಮುದಾಯದ ಮತ ಸೆಳೆಯಲು ಬಿಜೆಪಿ ಯತ್ನಿಸುವ ಸಾಧ್ಯತೆ ಇದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

12ನೇ ತರಗತಿ ಉತ್ತೀರ್ಣರಾದ ಜಾತಿ ಹಿಂಸಾಚಾರ ಸಂತ್ರಸ್ತ, ಲೈಂಗಿಕ ಅಲ್ಪಸಂಖ್ಯಾತೆಯನ್ನು ಅಭಿನಂದಿಸಿದ ಸ್ಟಾಲಿನ್

0
ಪರಿಶಿಷ್ಟ ಎಂಬ ಕಾರಣಕ್ಕೆ ಜಾತಿ ಹಿಂಸೆ ಎದುರಿಸಿದ ತಮಿಳುನಾಡಿನ ತಿರುನೆಲ್ವೇಲಿ ಜಿಲ್ಲೆಯ ದಲಿತ ವಿದ್ಯಾರ್ಥಿ ಚಿನ್ನದೊರೈ 12 ಪಬ್ಲಿಕ್ ಪರೀಕ್ಷೆಗಳಲ್ಲಿ ಶೇಕಡಾ 78 ಅಂಕಗಳನ್ನು ಪಡೆದರೆ, ಟ್ರಾನ್ಸ್‌ಜೆಂಡರ್ ನಿವೇತಾ ಶೇಕಡಾ 47.1 ಅಂಕಗಳನ್ನು...