ರೈತರ ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದ್ದ ಭೀಮ್ ಆರ್ಮಿ ಮುಖ್ಯಸ್ಥ ಚಂದ್ರಶೇಖರ್ ಆಜಾದ್ ಅವರಿಗೆ ಭಾರತ್ ಬಂದ್‌ಗೆ ಹಿನ್ನೆಲೆಯಲ್ಲಿ ಗೃಹ ಬಂಧನ ವಿಧಿಸಲಾಗಿದೆ. ಈ ಬಗ್ಗೆ ಆಜಾದ್ ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಮಾಹಿತಿ ನೀಡಿದ್ದಾರೆ.
ರೈತರ ಭಾರತ್ ಬಂದ್ ಮಧ್ಯೆ ಅವರನ್ನು ಉತ್ತರ ಪ್ರದೇಶ ಪೊಲೀಸರು ಗೃಹಬಂಧನದಲ್ಲಿರಿಸಿದ್ದಾರೆ ಎಂದು ಚಂದ್ರಶೇಖರ್ ಆಜಾದ್ ಹೇಳಿದ್ದಾರೆ.
भारत दोबारा से इमर्जेंसी के दौर में चला गया है आज हमारे अन्नदाता किसानों को हमारी जरूरत है लेकिन योगी सरकार की पुलिस ने मुझे सुबह से ही नजरबंद कर दिया है। pic.twitter.com/ChQ1WN5wLY
— Chandra Shekhar Aazad (@BhimArmyChief) December 8, 2020
ಇದನ್ನೂ ಓದಿ: ದೆಹಲಿ ಚಲೋ: ರೈತರ ಪ್ರತಿಭಟನೆಗೆ ಧುಮುಕಿದ ಭೀಮ್ ಆರ್ಮಿ ಚಂದ್ರಶೇಖರ್ ಆಜಾದ್
“ಭಾರತ ಮತ್ತೆ ತುರ್ತು ಪರಿಸ್ಥಿತಿಗೆ ಸಾಗಿದೆ. ಇಂದು ನಮ್ಮ ಅನ್ನದಾತ ರೈತರಿಗೆ ನಮ್ಮ ಬೆಂಬಲದ ಅಗ್ಯವಿದೆ ಆದರೆ, ಯೋಗಿ ಸರ್ಕಾರದ ಪೊಲೀಸರು ನನ್ನನ್ನು ಬೆಳಿಗ್ಗೆಯಿಂದ ಗೃಹಬಂಧನದಲ್ಲಿರಿಸಿದ್ದಾರೆ” ಎಂದು ಟ್ವೀಟ್ ಮಾಡಿದ್ದಾರೆ.
ಡಿಸೆಂಬರ್ ಒಂದರಂದು ಕೂಡ ದೆಹಲಿ-ಉತ್ತರಪ್ರದೇಶ ಗಡಿ ಗಾಜಿಪುರ್-ಗಾಜಿಯಾಬಾದ್‌ನಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆಗೆ ಚಂದ್ರಶೇಖರ್ ಆಜಾದ್ ಸೇರಿಕೊಂಡಿದ್ದರು. “ಮೋದಿಜಿ, ಮುಗ್ಧ ಮಕ್ಕಳು ಮತ್ತು ವೃದ್ಧ ಅಜ್ಜಿಯರು ಕೂಡ ರಸ್ತೆಗಿಳಿದಿದ್ದಾರೆ. ಅವರನ್ನು ಬಡಿಯಲು ನೀವು ಎಷ್ಟು ಕೋಲುಗಳನ್ನು ತರಬಹುದು? ಆ ಕೋಲುಗಳು ನಮ್ಮ ಎಲುಬುಗಳನ್ನು ಮುರಿಯಬಹುದು ಆದರೆ ನಮ್ಮ ರೈತರ ಹೋರಾಟವನ್ನು ಹತ್ತಿಕ್ಕಲು ಸಾಧ್ಯವಿಲ್ಲ. ರೈತ ವಿರೋಧಿ ಕಾನೂನುಗಳನ್ನು ಹಿಂತೆಗೆದುಕೊಳ್ಳಿ. ರೈತರ ಚಳವಳಿಗೆ ನಮ್ಮ ಸಂಪೂರ್ಣ ಬೆಂಬಲವಿದೆ” ಎಂದು ಆಜಾದ್ ಘೋಷಿಸಿದ್ದರು.
ಇಂದು ಬೆಳಿಗ್ಗೆ ಆಪ್ ಪಕ್ಷವು ಕೂಡ ತಮ್ಮ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ, ’ಸಿಂಘು ಗಡಿಯಲ್ಲಿ ಹೋರಾಟ ನಿರತ ರೈತರನ್ನು ಭೇಟಿ ಮಾಡಿದ ನಂತರ ಮಾನ್ಯ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್‌ರವರನ್ನು ದೆಹಲಿ ಪೊಲೀಸರು ಗೃಹ ಬಂಧನದಲ್ಲಿಟ್ಟಿದ್ದಾರೆ’ ಎಂದು ಟ್ವೀಟ್ ಮಾಡಿತ್ತು.
ಕೇಂದ್ರ ಗೃಹ ಸಚಿವಾಲಯದ ಆದೇಶದ ಮೇರೆಗೆ ದೆಹಲಿಯ ವಿವಿಧ ಪುರಸಭೆಗಳ ಮೂವರು ಮೇಯರ್‌ಗಳು ಮುಖ್ಯಮಂತ್ರಿ ನಿವಾಸದ ಮುಂದೆ ಪ್ರತಿಭಟಿಸಲು ಪೊಲೀಸರ ಪಡೆದಿದ್ದರು. ಇದನ್ನೆ ನೆಪವಾಗಿಟ್ಟುಕೊಂಡು ಪೊಲೀಸರು ಮುಖ್ಯಮಂತ್ರಿಗಳನ್ನು ಗೃಹಬಂಧನದಲ್ಲಿಟ್ಟಿದ್ದಾರೆ ಎಂದು ಆರೋಪಿಸಿತ್ತು.