Homeಅಂಕಣಗಳು'ನಿಮ್ಮ ಪಾರ್ಟಿಲಿ ಶೀಲವಂತ್ರೆ ಇಲ್ಲವಲ್ಲ ಸಾರ್?'

‘ನಿಮ್ಮ ಪಾರ್ಟಿಲಿ ಶೀಲವಂತ್ರೆ ಇಲ್ಲವಲ್ಲ ಸಾರ್?’

- Advertisement -
- Advertisement -

ಆರೆಸ್ಸೆಸ್ ತತ್ವ ಅಳವಡಿಸಿಕೊಂಡರೆ ನಾವು ಕಾಂಗ್ರೆಸ್ ಪರವಾಗಿಯೂ ಕೆಲಸ ಮಾಡಲು ಸಿದ್ಧ ಎಂದು ಆರೆಸ್ಸೆಸ್ ಸಂಘದ ಅರುಣಕುಮಾರ ಹೇಳಿದ್ದಾರಲ್ಲಾ ಇದೊಂದು ರೀತಿ ಅಜ್ಞಾನದಿಂದ ಕೂಡಿರುವ ಮಾತು. ಕಾಂಗ್ರೆಸ್ ಹುಟ್ಟಿದಾಗಿನಿಂದಲೂ ಹಲವರು ಹಿಂದೂ ಪರವಾದ ಸಿದ್ಧಾಂತಗಳಲ್ಲೇ ಬದುಕಿದ್ದಾರೆ. ಆದರೆ ಜೈನ, ಬೌದ್ಧ, ಸಿಖ್ ಮತ್ತು ಬಸವ ತತ್ವಗಳೆಲ್ಲಾ ಹಿಂದೂಧರ್ಮದಿಂದಲೇ ಸಿಡಿದುಹೋಗಿ ಪ್ರಜ್ವಲಿಸುತ್ತಿರುವ ಧರ್ಮದ ಕಿಡಿಗಳು. ಇನ್ನೂ ಲೋಕಲ್ಲಾಗಿ ಮಾತನಾಡುವುದಾದರೆ ಕಾಂಗ್ರೆಸಿನಲ್ಲಿದ್ದು ತಮ್ಮವನೇನಾದರು ಬಿಜೆಪಿ ಕ್ಯಾಂಡಿಡೇಟ್ ಆದರೆ ಅವನಿಗೆ ಓಟು ಮಾಡುವ ಅಸಾಮಿಗಳೂ ಹೇರಳವಾಗಿದ್ದಾರೆ. ಈ ಪೈಕಿ ಎರಡು ಉದಾಹರಣೆ ಕೊಡುವುದಾದರೆ, ಚಿಕ್ಕಮಗಳೂರಲ್ಲಿ ಅನಾದಿಕಾಲದಿಂದಲೂ ಕಾಂಗ್ರೆಸ್ಸಿಗರಾಗಿರುವ ಒಕ್ಕಲಿಗರು ತಮ್ಮ ಹುಡುಗನನ್ನ ಕೈಬಿಡಲಾದೀತೆ ಎಂದು ಸಿ.ಟಿ.ರವಿಗೆ ಓಟು ಮಾಡುತ್ತಿರಲಾಗಿ, ಅತ್ತ ಶಿವಮೊಗ್ಗದ ಕಾಂಗ್ರೆಸ್ ಕುರುಬರು ಈಶ್ವರಪ್ಪ ನಮ್ಮವನೆಂದು ಓಟು ಮಾಡುವ ಉದಾಹರಣೆಗಳು ನಮ್ಮ ಮುಂದಿವೆ. ಆದರೆ ಬಿಜೆಪಿ ವಿಷಯದಲ್ಲಿ ಈ ಆಟ ನಡೆಯುವುದಿಲ್ಲ. ಅಲ್ಲಿ ಹೆರಿಗೆ ಡಾಕ್ಟರ್ ಹೆರಿಗೆ ಪೇಷಂಟ್ ಕಾಯುವಂತೆ ಬಿಜೆಪಿ ಮತದಾರರನ್ನು ಕಾಯುವ ವಾಚ್‌ಮನ್‌ಗಳು ಹೇರಳವಾಗಿದ್ದಾರಂತಲ್ಲಾ, ಥೂತ್ತೇರಿ.

*****

ನಮ್ಮ ಸಂಸ್ಕೃತಿ ವಿಷಯ ಮಾತನಾಡುವುದಾದರೆ, ಸಾಮಾಜಿಕವಾಗಿ ಏನೇ ನಡೆದರೂ, ಅದು ಮಹಿಳೆ ಮತ್ತು ಮಕ್ಕಳ ಮೇಲೆ ಪರಿಣಾಮ ಬೀರುತ್ತಾ ಬಂದಿರುವುದು ಅನಾದಿಕಾಲದಿಂದ ನಡೆದುಬಂದಿದೆ. ಮುರುಘಾ ಶರಣರ ಆರೋಪಿತ ದುಷ್ಕೃತ್ಯದಲ್ಲಿ ಸಿಲುಕಿದ್ದವರೆಲ್ಲಾ ಮಕ್ಕಳು. ಇನ್ನು ಪ್ರವಾಹದಿಂದ ಸಂತ್ರಸ್ತರಾಗಿ ಶಾಸಕನಿಂದ ಅನಾಗರಿಕವಾದ ಅವಾಚ್ಯ ಬೈಗುಳ ಕೇಳಿದವರು ಮಹಿಳೆ. ಈ ಪ್ರಕರಣದ ವಿಷಯದಲ್ಲಿ ಮಾಧ್ಯಮದೊಳಗಿರುವ ಶ್ಯಾನುಭೋಗರ ಮಕ್ಕಳು ಕೃತ್ಯದ ವಿಶ್ಲೇಷಣೆ ಬಿಟ್ಟು, ಕಾಂಗ್ರೆಸ್ ಕೈಗೆ ಅನಾಯಾಸವಾಗಿ ಸಿಕ್ಕ ಅಸ್ತ್ರವಿದು ಎಂದುದಲ್ಲದೆ ಶಿಸ್ತಿನ ಪಕ್ಷ ಬಿಜೆಪಿ ಏನು ಮಾಡುತ್ತದೋ ಎಂದು ಕೂಗಿವೆಯಲ್ಲಾ. ಅಂತೂ ಲಿಂಬಾವಳಿ ನಡವಳಿಕೆಯಿಂದ ಅಘಾತವಾಗಿರುವುದು ಟಿವಿಯೊಳಗಿರುವ ಸಂಘಿ ಅಂಕರ್‌ಗಳಿಗೆ. ಶಿಸ್ತಿನ ಪಕ್ಷ ಬಿಜೆಪಿ ಎನ್ನುವುದನ್ನು ವಿಶ್ಲೇಷಿಸುವುವಾದರೆ ಲಿಂಬಾವಳಿಯ ಅನಾಗರಿಕ ನಡತೆಯ ವಿಷಯದಲ್ಲಿ ಯಾವೊಬ್ಬ ಬಿಜೆಪಿಯೂ ಪ್ರತಿಕ್ರಿಯಿಸಿಲ್ಲ. ಇನ್ನು ಬಿಜೆಪಿ ಮಹಿಳೆಯರಂತೂ ಆಕೆಗೆ ತಕ್ಕಶಾಸ್ತಿಯಾಯ್ತು ಎನ್ನುತ್ತಿದ್ದಾರಂತಲ್ಲಾ, ಥೂತ್ತೇರಿ.

*****

ಕರ್ನಾಟಕದ ಇತಿಹಾಸದಲ್ಲಿ ಈವರೆಗೆ ಯಾವೊಬ್ಬ ಶಾಸಕನೂ ಇಷ್ಟು ಅನಾಗರಿಕವಾಗಿ ನಡೆದುಕೊಂಡಿರದ ಕಾರಣವಾಗಿ, ಪ್ರಕರಣದ ಪ್ರಮುಖ ಆರೋಪಿ ಲಿಂಬಾವಳಿಯನ್ನ ಮಾತನಾಡಿಸಬೇಕೆನಿಸಿತಲ್ಲಾ. ಆ ಕೂಡಲೇ ಪೋನ್ ಮಾಡಲಾಗಿ ರಿಂಗಾಯ್ತು. ರಿಂಗ್ ಟೋನ್ “ನಮಸ್ತೆ ಸದಾ ವತ್ಸಲೇ ಮಾತೃಭೂಮಿ”.

“ಹಲೋ ಯಾರ್ರಿ”

“ಸಾರ್ ನಾನು ಯಾಹು ಅಂತ, ಸಾರ್”

“ಯಾಹು ಅಂದರೆ ಯಾರ್ರಿ”

“ಪತ್ರಕರ್ತ ಸಾರ್”

“ಏನೇಳ್ರಿ”

“ನಿಮಗೆ ಧಮಕಿ ಹಾಕಿದ ಮಹಿಳೆ ಮೇಲೆ ಎಫ್‌ಐಆರ್ ಆಯ್ತಂತಲ್ಲಾ ಸಾರ್”

“ಎಫ್‌ಐಆರ್‌ಗಿಂತ ಮೊದ್ಲು ನಾಲ್ಕು ವದಿರಿ ಅವುಳಿಗೆ ಅಂತ ಹೇಳಿದ್ದೆ ನಮ್ಮ ಪೊಲೀಸರಿಗೆ”

“ಯಾಕ್ ಸಾರ್”

“ಮತ್ತೆ ಅವಳ ದುರಹಂಕಾರ ನೋಡ್ರಿ, ರಾಜಕಾಲುವೆ ಒತ್ತುವರಿ ಮಾಡಿದ್ಲು, ಅಲ್ದೆ ನನಿಗೇ ಆವಾಜ್ ಹಾಕ್ತಳೆ”

“ತಪ್ಪು ಸಾರ್ ಜನಪ್ರತಿನಿಧಿಗೆ ಆವಾಜ್ ಹಾಕಬಾರ್ದು”

“ಅದಕ್ಕೆ ಎಫ್‌ಐಆರ್ ಹಾಕಿಸಿದ್ದೀನಿ”

“ವಳೆದಾಯ್ತು ಬುಡಿ ಸಾರ್. ಇನ್ನ ಮುಂದೆ ಯಾರೂ ನಿಮ್ಮತ್ರ ಅರ್ಜಿ ಹಿಡಕೊಂಡು ಬರಲ್ಲ”

“ಜನಕ್ಕೆ ಸದರ ಕೊಡಬಾರ್ದು ಕಂಡ್ರಿ. ಶಾಸಕರು ಅಂದ್ರೆ ಭಯ ಇರಬೇಕು. ಇಲ್ಲ ಅಂದ್ರೆ ಯಲ್ಲಾದಕ್ಕೂ ಅರ್ಜಿ ತಗೊಂಡು ಬರ್ತಾರೆ”

“ಮಹಿಳಾ ಹೋರಾಟಗಾರ್ರು ಆ ಹೆಣ್ಣು ಮಗಳ ಪರ ಪ್ರತಿಭಟನೆ ಮಾಡ್ತೆ ಅವುರೆ.”

“ಮಾಡ್ಲಿ ಬುಡ್ರಿ. ಈ ಮಹಿಳೆಯರು ಆಕೆ ಪರ ಬರ್ತಾರೆ ಅಂದ್ರೆ ಇವುರು ಅವುಳ ತರದೋರೆಯಾ”

“ಅಲ್ಲ ಸಾರ್, ನಿಮ್ಮಲ್ಲಿ ಮಹಿಳೆಯರ ಬಗ್ಗೆ ಇರೋ ಗೌರವ ನೋಡಿದ್ರೆ, ನಿಮ್ಮ ಮಾತಿನ ಪರಿಣಾಮನೆ ನಿಮಗೆ ಗೊತ್ತಿಲ್ಲ ಅನ್ಸುತ್ತೆ”

“ಏನೇಳ್ತಾಯಿದ್ದಿರಿ ನೀವು”

“ಅವತ್ತಿನಿಂದ ಇವತ್ತಿನವರೆಗೂ ಶಿಸ್ತಿನ ಪಕ್ಷವಾದ ನಿಮ್ಮಲ್ಲಿ ಶೀಲವಂತನೇ ಕಾಣಲಿಲ್ಲ. ವಿಕೃತ ಮನಸ್ಸಿನವರೇ ಜಾಸ್ತಿ ಬಿಡಿ ಸಾರ್”

ಥೂತ್ತೇರಿ.


ಇದನ್ನೂ ಓದಿ: ಬೊಮ್ಮಾಯಿಯಿಂದ ಲಿಂಗಾಯಿತರಿಗೇ ಅವಮಾನವಾಯ್ತಂತಲ್ಲಾ!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....

ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ ಆರೋಪ; ಗೃಹ ಸಚಿವ ಅಮಿತ್‌ ಶಾ ಮೌನ ಪ್ರಶ್ನಿಸಿದ ಕಪಿಲ್ ಸಿಬಲ್

ಜುಲೈ 20 ರಂದು ದೆಹಲಿಯಲ್ಲಿ ನಡೆದ ಸಂಶತ್ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಸಲಾಗಿದೆ ಎಂಬ ಆರೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನು...