Homeಅಂತರಾಷ್ಟ್ರೀಯಇಟಲಿ: ಆರ್ಥಿಕ ಚೇತರಿಕೆಗೆ ಹೊಸ ಉತ್ತೇಜಕ ಪ್ಯಾಕೇಜ್‌ಗಳಿಗೆ ಅನುಮೋದನೆ

ಇಟಲಿ: ಆರ್ಥಿಕ ಚೇತರಿಕೆಗೆ ಹೊಸ ಉತ್ತೇಜಕ ಪ್ಯಾಕೇಜ್‌ಗಳಿಗೆ ಅನುಮೋದನೆ

- Advertisement -
- Advertisement -

ಕೊರೊನಾ ವೈರಸ್ ಬಿಕ್ಕಟ್ಟಿನಿಂದ ಉಂಟಾದ ಆರ್ಥಿಕ ಹಿಂಜರಿತದಿಂದ ದೇಶದ ಪ್ರಗತಿಯನ್ನು ಹೆಚ್ಚಿಸಲು ಇಟಲಿ 2021 ರ ಬಜೆಟ್‌ನಲ್ಲಿ ಹೊಸ ಉತ್ತೇಜಕ ಪ್ಯಾಕೇಜ್‌ಗಳಿಗೆ ಅನುಮೋದನೆ ನೀಡಿದೆ ಎಂದು ಸರ್ಕಾರದ ಕ್ಯಾಬಿನೆಟ್ ಸಭೆಯ ನಂತರ ತಿಳಿಸಿದೆ.

5-ಸ್ಟಾರ್ ಮೂವ್ಮೆಂಟ್ ಮತ್ತು ಮಧ್ಯ-ಎಡ ಪಾರ್ಟಿಟೊ ಡೆಮಾಕ್ರಟಿಕೊ (ಪಿಡಿ) (Anti-establishment 5-Star Movement and Centre-left Partito Democratico) ಪಕ್ಷದ ನೇತೃತ್ವದ ಸಮ್ಮಿಶ್ರ ಸರ್ಕಾರವು ಉತ್ತೇಜಕ ಪ್ಯಾಕೇಜಿನ ಪ್ರಾಥಮಿಕ ಆವೃತ್ತಿಯನ್ನು ಒಪ್ಪಿಕೊಂಡಿತು ಎಂದು ಸರ್ಕಾರದ ಮೂಲವೊಂದು ತಿಳಿಸಿದೆ.

ಆರೋಗ್ಯ ಮತ್ತು ಶಿಕ್ಷಣ ವ್ಯವಸ್ಥೆಯನ್ನು ಬೆಂಬಲಿಸುವ ಕ್ರಮಗಳ ಪೈಕಿ, ಕೊರೊನಾ ವೈರಸ್ ಲಾಕ್‌ಡೌನ್‌ಗಳಿಂದ ಹೆಚ್ಚು ಹಾನಿಗೊಳಗಾದ ಕಂಪನಿಗಳಿಗೆ ಪರಿಹಾರ ನೀಡಲು ಸರ್ಕಾರವು 400 ಕೋಟಿ ಯೂರೋ ($4.7 billion) ನಿಧಿ ಸ್ಥಾಪಿಸುತ್ತದೆ. ಆರ್ಥಿಕವಾಗಿ ದುರ್ಬಲವಾಗಿರುವ ದಕ್ಷಿಣ ಇಟಲಿಯಲ್ಲಿ ಉದ್ಯೋಗವನ್ನು ಬೆಂಬಲಿಸಲು ತೆರಿಗೆ ವಿನಾಯಿತಿಗಳನ್ನು ನೀಡುತ್ತದೆ.

ಇದನ್ನೂ ಓದಿ: ಇಟಲಿಯಲ್ಲೇಕೆ ಹಾಗಾಯಿತು? : ಯೂರೋಪ್ ವೈದ್ಯರೊಬ್ಬರ ಸಂದರ್ಶನ

ಸಾಂಕ್ರಾಮಿಕ ರೋಗದಿಂದ ಹೆಚ್ಚು ಹಾನಿಗೊಳಗಾದ ಯುರೋಪಿಯನ್ ರಾಷ್ಟ್ರಗಳಲ್ಲಿ ಒಂದಾದ ಇಟಲಿ 2020 ಕ್ಕೆ 9% ಆರ್ಥಿಕ ಕುಸಿತದ ಮುನ್ಸೂಚನೆ ನೀಡಿದೆ ಮತ್ತು ಬಜೆಟ್ ಕೊರತೆಯು ಒಟ್ಟು ದೇಶೀಯ ಉತ್ಪನ್ನದ (GDP) 10.8% ಗೆ ಸಮನಾಗಿರುತ್ತದೆ. ಜೊತೆಗೆ 2021ರಲ್ಲಿ 6% ಆರ್ಥಿಕ ಬೆಳವಣಿಗೆಯನ್ನು ಮುನ್ಸೂಚಿಸಿದೆ.

ಮುಂದಿನ ವರ್ಷ ಇಟಲಿಯ ಕೊರತೆಯನ್ನು ಆರ್ಥಿಕ ಉತ್ಪಾದನೆಯ 7% ರಷ್ಟನ್ನು ಉಳಿಸಿಕೊಳ್ಳುವ ನಿರೀಕ್ಷೆಯಲ್ಲಿ ವಿಸ್ತರಣಾ ಪ್ಯಾಕೇಜ್ ಇದೆ. ಇದು ಏಪ್ರಿಲ್‌ ತಿಂಗಳಿನ 5.7% ಮುನ್ಸೂಚನೆಯಿಂದ ಹೆಚ್ಚುವರಿ ವೆಚ್ಚವನ್ನು ಪ್ರತಿಬಿಂಬಿಸುತ್ತದೆ.

ಚೀನಾದಲ್ಲಿ ಹುಟ್ಟಿದ ಸಾಂಕ್ರಾಮಿಕ ವೈರಸ್‌ನಿಂದ ಹೆಚ್ಚು ಹಾನಿಗೊಳಗಾದ ದೇಶ ಇಟಲಿಯಾಗಿದೆ. ಕೊರೊನಾ ಸಾಂಕ್ರಾಮಿಕದಿಂದ ಅತೀ ಹೆಚ್ಚು ಜನರು ಪ್ರಾಣ ತೆತ್ತಿದ್ದು ಇಲ್ಲಿಯೆ. ಇಟಲಿಯ ನೆರವಿಗೆ ದ್ವೀಪ ರಾಷ್ಟ್ರವಾದ ಕ್ಯೂಬಾದಿಂದ ಬಲಿಷ್ಠ ವೈದ್ಯರು ಮತ್ತು ದಾದಿಯರ ತಂಡ ಧಾವಿಸಿತ್ತು.


ಇದನ್ನೂ ಓದಿ:ಕೊರೊನಾ ವಿಷಯದಲ್ಲಿ ರಾಹುಲ್‌ ಮಾತು ಕೇಳಿದ್ದರೆ ಭಾರತ ಇಟಲಿಯಾಗುತ್ತಿತ್ತು: ಯೋಗಿ ಆದಿತ್ಯನಾಥ್

 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ದ್ವೇಷ ಭಾಷಣ: ಮೋದಿಗೆ ಕಳುಹಿಸುವ ಬದಲು ‘ಜೆ.ಪಿ.ನಡ್ಡಾ’ಗೆ ನೊಟೀಸ್‌ ನೀಡಿದ ಚುನಾವಣಾ ಆಯೋಗ!

0
ಪ್ರಧಾನಿ ನರೇಂದ್ರ ಮೋದಿ ವಿರುದ್ಧದ ದೂರುಗಳ ಆಧಾರದ ಮೇಲೆ ಚುನಾವಣಾ ಆಯೋಗವು ಮಾದರಿ ನೀತಿ ಸಂಹಿತೆ ಉಲ್ಲಂಘನೆಗಾಗಿ ನೋಟಿಸ್ ನೀಡಿದೆ. ಆದರೆ, ಈ ನೊಟೀಸ್‌ನ್ನು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರಿಗೆ ಕಳುಹಿಸಲಾಗಿದ್ದು,...