Homeಎಲೆಮರೆಜೀತಕ್ಕಿದ್ದ ಜೇನುಕುರುಬರ ಸೋಮಣ್ಣರ ಪಾರಂಪರಿಕ ಜ್ಞಾನದ ಕಣಜ ಕಂಡರೆ ಬೆರಗಾಗುತ್ತೀರಿ!

ಜೀತಕ್ಕಿದ್ದ ಜೇನುಕುರುಬರ ಸೋಮಣ್ಣರ ಪಾರಂಪರಿಕ ಜ್ಞಾನದ ಕಣಜ ಕಂಡರೆ ಬೆರಗಾಗುತ್ತೀರಿ!

ಸೋಮಣ್ಣನಿಗೆ 2016 ರಲ್ಲಿ ಮೊದಲಪಟ್ಟಿಯಲ್ಲಿ ರಾಜ್ಯೋತ್ಸವ ಪ್ರಶಸ್ರಿ ಘೋಷಣೆಯಾಗಿ, ಎರಡನೆ ಪಟ್ಟಿಯಲ್ಲಿ ಕೈಬಿಡಲಾಗಿತ್ತು. ಹೀಗಾಗಿ ಜನಪರ ಚಿಂತಕರು ಸೋಮಣ್ಣನ ಹಾಡಿಗೆ ಹೋಗಿ `ಜನರಾಜ್ಯೋತ್ಸವ’ಪ್ರಶಸ್ತಿ ಪ್ರದಾನ ಮಾಡಿದ್ದರು.

- Advertisement -
- Advertisement -

ಎಲೆಮರೆ – 9

ಅರುಣ್ ಜೋಳದಕೂಡ್ಲಿಗಿ

ಹೆಗ್ಗಡದೇವನಕೋಟೆ ಸಮೀಪದ ಮೊತ್ತಹಾಡಿ ಜೇನುಕುರುಬರ ಹಾಡಿ. ಅಲ್ಲಿ ತನ್ನದೇ ಸಮುದಾಯಕ್ಕಾಗಿ ಹೋರಾಟ ರೂಪಿಸಿದ, ಬುಡಕಟ್ಟು ಪರಂಪರೆಯ ಅಪಾರ ಜ್ಞಾನ ಹೊಂದಿದ ಸೋಮಣ್ಣ ಇಂದಿಗೂ ತನ್ನ ಸಮುದಾಯದ ಏಳಿಗೆಗಾಗಿ ದುಡಿಯುತ್ತಿದ್ದಾರೆ. ಜೇನುಕುರುಬರ ಸೋಮಣ್ಣನ ಬದುಕಿನ ಪಯಣ ತ್ರಾಸದಾಯಕವಾದದ್ದು. 1957 ರಲ್ಲಿ ಜನಿಸಿದ ಸೋಮಣ್ಣ ಸಾಂಪ್ರದಾಯಕ ಶಿಕ್ಷಣ ಪಡೆಯದೆ, ಮನೆಯನ್ನು ಮುತ್ತಿದ್ದ ಬಡತನದ ಬೆಂಕಿಯಲ್ಲಿ ಅರಳಿ ಬಂದದ್ದೇ ಒಂದು ಸಾಹಸ. ತಂದೆ ಕುನ್ನಯ್ಯನಿಗಿದ್ದ ಪಾರಂಪರಿಕ ಜ್ಞಾನವನ್ನು ಜತನದಿಂದ ಕಲಿತ ಸೋಮಣ್ಣ ಕಾಡುಬದುಕಿನ ಎಲ್ಲಾ ಬಗೆಯ ತಿಳಿವು, ಅರಿವುಗಳನ್ನು ಪಡೆಯುತ್ತಲೇ ಪಾರಂಪರಿಕ ಜ್ಞಾನದ ಕಣಜವಾದದ್ದೊಂದು ಸಾಹಸದ ಪಯಣ. ಬಡತನದ ಕಾರಣಕ್ಕೆ ಸ್ಥಳೀಯ ಜಮೀನ್ದಾರರಲ್ಲಿ ಜೀತಕ್ಕಿದ್ದ ಸೋಮಣ್ಣ 1976ರಲ್ಲಿ ಜೀತಕಾರ್ಮಿಕ ವ್ಯವಸ್ಥೆ (ನಿಷೇಧ) ಕಾಯ್ದೆ ಜಾರಿಗೆ ಬಂದಾಗ ಇದರಿಂದ ಮುಕ್ತಿ ಪಡೆದರು. ಆಗ ಸೋಮಣ್ಣಗೆ 19 ವರ್ಷ. ಸೋಮಣ್ಣನಿಗೆ ಸಿಕ್ಕ ಈ ಬಗೆಯ ವೈಯಕ್ತಿಕ ಮುಕ್ತಿಯು ಸಮುದಾಯದ ಮುಕ್ತಿಯೆಡೆಗೆ ಸೆಳೆಯಿತು. ತನ್ನ ಒಡನಾಡಿ ಬಂಧುಗಳಾದ ಬುಡಕಟ್ಟು ಸಮುದಾಯದ ಅಸಂಖ್ಯಾತ ಜನ ಸಂಕಷ್ಟದಲ್ಲಿರುವುದು ಅರಿವಿಗೆ ಬಂತು.

1972ರ ವನ್ಯಜೀವಿ ಸಂರಕ್ಷಣಾ ಕಾಯ್ದೆ ಜಾರಿಗೆ ಬಂದಾಗ, ತಮ್ಮ ಸುತ್ತಮುತ್ತಲಿನ ನೂರಾರು ಬುಡಕಟ್ಟು ಕಾಲನಿಗಳು ಸ್ಥಳಾಂತರಗೊಂಡು ಅನಾಥಪ್ರಜ್ಞೆಯಲ್ಲಿ ಬದುಕಿದ್ದನ್ನೂ, 1974ರಲ್ಲಿ ಕಬಿನಿ ಅಣೆಕಟ್ಟು ನಿರ್ಮಾಣ ಆರಂಭವಾದಾಗ, ದೊಡ್ಡ ಪ್ರಮಾಣದಲ್ಲಿ ಅರಣ್ಯಭೂಮಿ ನಾಶವಾದದ್ದನ್ನೂ ಸೋಮಣ್ಣ ಸ್ವತಃ ನೋಡಿದ್ದರು. ಇದರಿಂದ ಕೇವಲ ನೈಸರ್ಗಿಕ ಅರಣ್ಯ ಮಾತ್ರ ನಾಶವಾಗುವುದಲ್ಲ; ಬದಲಾಗಿ ಬುಡಕಟ್ಟು ಜನರ ಜೀವನ, ಸಂಸ್ಕೃತಿ ಹಾಗೂ ಜ್ಞಾನವೂ ನಾಶವಾಗುತ್ತದೆ ಎನ್ನುವುದನ್ನು ತನ್ನ ಸಮುದಾಯಕ್ಕೆ ಸೋಮಣ್ಣ ಮನವರಿಕೆ ಮಾಡಿಕೊಡತೊಡಗಿದರು.

ಇಂತಹ ಹಾದಿಯಲ್ಲಿ ಸೋಮಣ್ಣನಿಗೆ ತನ್ನವರಿಗೆ ಭೂಮಿ ಸಿಕ್ಕರೆ ಇನ್ನೊಬ್ಬರ ಆಶ್ರಯವಿಲ್ಲದೆ ಬದುಕುತ್ತಾರೆ ಎಂಬ ಕನಸು ಚಿಗುರೊಡೆಯಿತು. ಈ ಕನಸಿನ ಜಾಡುಹಿಡಿದು ಕಳೆದ ಮೂರ್ನಾಲ್ಕು ದಶಕಗಳಿಂದ ಸೋಮಣ್ಣ ಭೂರಹಿತ ಆದಿವಾಸಿಗಳನ್ನು ಒಗ್ಗೂಡಿಸಿದ್ದಾರೆ. ಅಂತೆಯೇ ಸ್ಥಳೀಯ ಚಳವಳಿಗಳ ಸಂಗಾತಿಗಳ ಜೊತೆಗೂಡಿ ಕೂಡುಹೋರಾಟ ಕಟ್ಟಿದ್ದಾರೆ. ಇದರ ಫಲವಾಗಿ ಕಟ್ಟಿದ ರಾಜ್ಯ ಮೂಲನಿವಾಸಿ ವೇದಿಕೆಯ ಅಧ್ಯಕ್ಷನಾಗಿ ಜನಪರ ಕಾರ್ಯಗಳಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದಾರೆ. ಇಂತಹ ನಿರಂತರ ಸಾಂಘಿಕ ಪ್ರಯತ್ನದಿಂದಾಗಿ ಆದಿವಾಸಿಗಳಿಗೆ ಸರಿಸುಮಾರು ಆರು ಸಾವಿರ ಎಕರೆ ಕೃಷಿ ಭೂಮಿ ಸಿಗುವಂತೆ ಮಾಡಿದ್ದಾರೆ. ರಾಜೀವ್ ಗಾಂಧಿ ರಾಷ್ಟ್ರೀಯ ಉದ್ಯಾನ ವ್ಯಾಪ್ತಿಯ ನಾಗರಹೊಳೆ ಮತ್ತು ಕಾಕನಕೋಟೆ ಅರಣ್ಯ ಪ್ರದೇಶದಿಂದ ಒಕ್ಕಲೆದ್ದ ಆದಿವಾಸಿಗಳನ್ನು ಸೋಮಣ್ಣ ಸಂಘಟಿಸಿ, ಪುನರ್ವಸತಿಗಾಗಿ ಅನೇಕ ಚಳವಳಿಗಳನ್ನು ರೂಪಿಸಿದ್ದಾರೆ. ಹೀಗಾಗಿ ಆದಿವಾಸಿಗಳು ಆತಂಕಕ್ಕೆ ಒಳಗಾದಾಗಲೆಲ್ಲಾ ಅವರುಗಳು ಎದೆಗುಂದಿ ತತ್ತರಿಸಿದಾಗಲೆಲ್ಲಾ ಸೋಮಣ್ಣ ಆದಿವಾಸಿಗಳ ಎಂದೂ ಜತೆಗಾರನಾಗಿ ಶಕ್ತಿ ತುಂಬಿದ್ದಾರೆ.

`ಸೋಮಣ್ಣ ಆದಿವಾಸಿಗಳ ಅಖಂಡ ಪ್ರಜ್ಞೆ, ಹರಿತ ಮುನ್ನೋಟ, ಜಟಿಲ ಮನಸ್ಥಿತಿ ಮತ್ತು ತಪ್ತ ಅಂತರಾಳಗಳನ್ನು ಏಕೀಭವಿಸಿದಂತಿದ್ದಾನೆ. ಅರಣ್ಯಕ್ಕೆ ಸಂಬಂಧಿಸಿದ ಕಾನೂನುಗಳು ಇವರನ್ನು ದಿಕ್ಕಾಪಾಲಾಗಿಸಿವೆ. ಸ್ಥಳೀಯ ಅಧಿಕಾರಸ್ಥ ಸಮುದಾಯಗಳು, ಯಾವ ಒಳನೋಟಗಳು ಇಲ್ಲದ ಸರಕಾರಗಳು, ಎನ್‍ಜಿಓಗಳು ಯಾವೂ ಸೋಮಣ್ಣನ ತಾಯ್ನೆಲವನ್ನು ಆತನಿಗೆ ಉಳಿಸಿಕೊಟ್ಟಿಲ್ಲ’ ಎಂದು ಪ್ರೊ. ಎ.ಎಸ್.ಪ್ರಭಾಕರ್ ಅವರು ಹೇಳುತ್ತಾರೆ.

ಕಾಡುಬದುಕಿನ ಬಗ್ಗೆ ಸೋಮಣ್ಣನ ಮಾತುಗಳನ್ನು ಕೇಳಿಸಿಕೊಂಡರೆ, ಆತ ಆದಿವಾಸಿಗಳ ವಿಷಾದ ಮತ್ತು ಚಿಂತನೆಗಳ ಫಲವಾಗಿ ರೂಪುಗೊಂಡ ಅನುಭಾವಿಯಂತೆ ಕಾಣುತ್ತಾನೆ. ಸರಿಸುಮಾರು ಅರ್ಧ ಶತಮಾನದಿಂದ ಅರಣ್ಯ ಮತ್ತು ಆದಿವಾಸಿಗಳ ಮೇಲೆ ಕಣ್ಣೆದುರು ನಡೆದ ಮತ್ತು ನಡೆಯುತ್ತಲೇ ಇರುವ ‘ನಾಗರಿಕ’ ಜಗತ್ತಿನ ಕ್ರೌರ್ಯವನ್ನು ಆತ ತನ್ನ ಮುಗುಳ್ನಗೆಯಿಂದಲೇ ಎದುರಿಸಿದ್ದಾನೆ. ತನ್ನ ಮೂಲ ನೆಲೆ, ದೈವ, ತನ್ನ ಹಿರೀಕರ ಆತ್ಮಗಳು, ಒಡನಾಡಿದ್ದ ಮರ ಗಿಡ ಹೂವುಗಳು, ಸಹಜೀವನ ನಡೆಸಿದ್ದ ಕಾಡುಪ್ರಾಣಿಗಳು ಇವ್ಯಾವು ಈಗ ಸೋಮಣ್ಣನ ಜೊತೆಗಿಲ್ಲ. ಪ್ರಭುತ್ವ ಈತನನ್ನು ವಂಚಿಸಿದೆ. ದಿಕ್ಕಾಪಾಲಾದ ಆದಿವಾಸಿಗಳು ಕಾಡಂಚಿನ ಪುಟ್ಟ ಜಾಗಗಳಲ್ಲಿ, ನಗರಗಳ ಕೊಳಗೇರಿಗಳಲ್ಲಿ ಬದುಕುತ್ತಿದ್ದಾರೆ. ಒಕ್ಕಲೇಳುವಾಗ ಪ್ರಭುತ್ವ ಕೊಟ್ಟ ಭರವಸೆಗಳು ಭ್ರಮೆಗಳಾಗಿ ಹೋಗಿವೆ. ಪ್ರಾಣಿಗಳೂ ವಾಸಿಸಲು ಯೋಗ್ಯವಾಗಿಲ್ಲದ ಸ್ಥಳಗಳಲ್ಲಿ ಆದಿವಾಸಿಗಳು ಬದುಕುತ್ತಿದ್ದಾರೆ. ಆದಿವಾಸಿಗಳಿಂದ ಎಲ್ಲವನ್ನೂ ಕಿತ್ತುಕೊಂಡು ಪ್ರಭುತ್ವ ಈ ಸಮುದಾಯಗಳನ್ನು ವಂಚಿಸುತ್ತಲೇ ಬಂದಿದೆ. ಇಂದೂ ಸಹ ರಾಜ್ಯೋತ್ಸವ ಪ್ರಶಸ್ತಿಯನ್ನು ಕೊಟ್ಟಂತೆ ಮಾಡಿ ಸೋಮಣ್ಣನಿಗೆ ವಂಚನೆ ಮಾಡಲಾಗಿದೆ. ಇದು ಕೇವಲ ಸೋಮಣ್ಣನಿಗೆ ಆದ ವಂಚನೆಯಲ್ಲ. ಕರ್ನಾಟಕದ ಆದಿವಾಸಿ ಸಮುದಾಯಗಳಿಗೆ ಆದ ವಂಚನೆಯೇ ಆಗಿದೆ.

ಸೋಮಣ್ಣನಿಗೆ 2016 ರಲ್ಲಿ ಮೊದಲಪಟ್ಟಿಯಲ್ಲಿ ರಾಜ್ಯೋತ್ಸವ ಪ್ರಶಸ್ರಿ ಘೋಷಣೆಯಾಗಿ, ಎರಡನೆ ಪಟ್ಟಿಯಲ್ಲಿ ಕೈಬಿಡಲಾಗಿತ್ತು. ಹೀಗಾಗಿ ಜನಪರ ಚಿಂತಕರು ಸೋಮಣ್ಣನ ಹಾಡಿಗೆ ಹೋಗಿ `ಜನರಾಜ್ಯೋತ್ಸವ’ಪ್ರಶಸ್ತಿ ಪ್ರದಾನ ಮಾಡಿದ್ದರು. ಆಗ ಪ್ರಶಸ್ತಿ ಪ್ರದಾನ ಮಾಡಿದ ದೇವನೂರ ಮಹಾದೇವ `ಇವತ್ತು ಅಂತಃಕರಣದ ಧ್ವನಿ ಮಾತಾಗಿದೆ, ಕರುಳಬಳ್ಳಿ ಸ್ಪಂದಿಸಿದೆ, ಅಂತಃಕರಣದ ಮಿಡಿತಕ್ಕೆ ಬೆಲೆ ಕಟ್ಟಲಾಗದು. ಮೂಲನಿವಾಸಿಗಳ ಉಸಿರಲ್ಲಿ ಮನುಕುಲದ ಉಸಿರಾಟ ಇದೆ, ಇಂತಹ ಬದುಕು ನಾಗರಿಕ ಜಗತ್ತಿನ ದಬ್ಬಾಳಿಕೆಗೆ ನಲುಗಿ ತತ್ತರಿಸಿದೆ. ಮೂಲನಿವಾಸಿಗಳು ಈ ನೆಲದ ಮಾಜಿ ಒಡೆಯರು. ಆದ್ದರಿಂದ ಆದಿವಾಸಿಗಳ ಇಂತಹ ಸಂಗತಿಗಳನ್ನು ಹುಡುಕಿ ಮತ್ತೆ ಬೀಜ ಬಿತ್ತಬೇಕಾಗಿದೆ. ಈ ಕಾರ್ಯಕ್ರಮವನ್ನು ಆಯೋಜನೆ ಮಾಡಿದ ಅಂತಃಕರಣದ ಸ್ನೇಹಿತರಂತ ನೂರು ಜನ ಈ ರಾಜ್ಯದಲ್ಕಿ ಸಿಕ್ಕಿದರೆ ಸಾಕು ನಾವು ನಮ್ಮ ಕನಸುಗಳನ್ನು ನನಸು ಮಾಡಬಹುದು’ ಎಂದಿದ್ದರು.

ಪ್ರಶಸ್ತಿ ಸ್ವೀಕರಿಸಿದ ಸೋಮಣ್ಣ `ವಿಶಾಲ ಮನಸಿನ ಜನರು ಇವತ್ತು ನನಗೆ ಪ್ರಶಸ್ತಿ ಕೊಟ್ಟಿದ್ದೀರ, ಸರ್ಕಾರ ಪ್ರಶಸ್ತಿ ಕೊಟ್ಟಿದ್ರೂ ಕೂಡ ಇಷ್ಟೊಂದು ಸಂತೋಷ ಆಗ್ತಿರ್ಲಿಲ್ಲ. ನೀವು ಕೊಟ್ಟಿರೋ ಪ್ರಶಸ್ತಿ ಸುಪ್ರೀಂಕೋರ್ಟ್ ತೀರ್ಪಿಗಿಂತಲೂ ದೊಡ್ಡದು. ಕಟ್ಟಕಡೆಯ ವ್ಯಕ್ತಿಯನ್ನು ಗುರುತಿಸಿ, ರಾಜ್ಯದ ಮೂಲೆಮೂಲೆಯ ಜನರು ಬಂದು ಜಾತಿಧರ್ಮದ ಭೇದವಿಲ್ಲದೆ ನನ್ನನ್ನು ಕಂಡಿದಿರಲ್ವಾ ಇದಕ್ಕಿಂತ ಹೆಚ್ಚು ನನಗೇನು ಬೇಕು? ಎನ್ನುತ್ತಾ ಭಾವುಕರಾದರು. ಸೋಮಣ್ಣನಂತಹವರ ಹಕ್ಕೊತ್ತಾಯದ ಹೋರಾಟಗಳಿಗೆ ಜನಪರ ಚಳವಳಿಗಾರರು, ಅಧ್ಯಯನಕಾರರು, ಪತ್ರಕರ್ತರು, ಚಿಂತಕರು ಜೊತೆಯಾಗಿ ಬೆಂಬಲಿಸಬೇಕಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

SIR: ಚಿಂತಕ ಪರಕಾಲ ಪ್ರಭಾಕರ್‌ಗೆ ಚುನಾವಣಾ ಆಯೋಗದಿಂದ ನೋಟಿಸ್

ಅರ್ಥಶಾಸ್ತ್ರಜ್ಞ, ರಾಜಕೀಯ ವಿಶ್ಲೇಷಕ ಡಾ. ಪರಕಾಲ ಪ್ರಭಾಕರ್ ಅವರಿಗೂ ಈಗ ‘ವಿಶೇಷ ತೀವ್ರ ಪರಿಷ್ಕರಣೆ’ (SIR) ಪ್ರಕ್ರಿಯೆಯಡಿ ಚುನಾವಣಾ ಆಯೋಗದ ನೋಟಿಸ್ ಜಾರಿಯಾಗಿದೆ. ವೋಟರ್ ಐಡಿ ಪರಿಶೀಲನೆಯಲ್ಲಿ ‘Logical Discrepancy’ (ತಾರ್ಕಿಕ ಅಸಂಗತತೆ)...

ಕರ್ನಾಟಕ ಎಸ್‌ಐಆರ್: ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬರಿಗೆ ನೋಟಿಸ್ ನೀಡಿದ ಚುನಾವಣಾ ಆಯೋಗ

ಮಂಗಳೂರು: ಶೈಕ್ಷಣಿಕ ಕ್ಷೇತ್ರದಲ್ಲಿ ತಮ್ಮ ವಿಶಿಷ್ಟ ಸೇವೆಯ ಮೂಲಕ ದೇಶ-ವಿದೇಶಗಳಲ್ಲಿ ಗುರುತಿಸಿಕೊಂಡಿರುವ ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬ ಅವರಿಗೆ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಗೆ ಸಂಬಂಧಿಸಿದಂತೆ ಚುನಾವಣಾ ಆಯೋಗದ...

SIR ಸೂತ್ರದಿಂದ ಬದಲಾಗುತ್ತಾ ಬೆಂಗಳೂರಿನ 28 ಕ್ಷೇತ್ರಗಳ ಗೆಲುವಿನ ಸಮೀಕರಣ?

ರಾಜ್ಯ ರಾಜಕೀಯದ ಶಕ್ತಿಕೇಂದ್ರವಾದ ಬೆಂಗಳೂರಿನ 28 ವಿಧಾನಸಭಾ ಕ್ಷೇತ್ರಗಳಲ್ಲಿ ‘ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ (SIR)’ ಪ್ರಕ್ರಿಯೆಯು ಮಹತ್ವದ ರಾಜಕೀಯ ಮತ್ತು ಆಡಳಿತಾತ್ಮಕ ಚರ್ಚೆಯನ್ನು ಹುಟ್ಟುಹಾಕಿದೆ. ಎಸ್‌ಐಆರ್‌ಗೂ ಮುನ್ನ ನಗರದಲ್ಲಿದ್ದ ಸುಮಾರು 1.03...

ಮಣಿಪುರದಲ್ಲಿ ಹಿಂಸಾಚಾರಕ್ಕೆ 306 ಬಲಿ, 49 ಮಂದಿ ನಾಪತ್ತೆ: ವಿಧಾನಸಭೆಯಲ್ಲಿ ಗೃಹ ಸಚಿವರ ಸ್ಪಷ್ಟನೆ

ಇಂಫಾಲ್: ಮಣಿಪುರದಲ್ಲಿ 2023ರ ಮೇ ತಿಂಗಳಲ್ಲಿ ಭುಗಿಲೆದ್ದ ಜನಾಂಗೀಯ ಹಿಂಸಾಚಾರಕ್ಕೆ ಮೂರು ವರ್ಷಗಳಿಗೂ ಹೆಚ್ಚು ಕಾಲ ಕಳೆದಿದ್ದರೂ, ಅದರ ಪರಿಣಾಮದಿಂದ ರಾಜ್ಯ ಸಂಪೂರ್ಣವಾಗಿ ಹೊರಬಂದಿಲ್ಲ. ಹಿಂಸಾಚಾರ ಆರಂಭವಾದ ಬಳಿಕ ಇದುವರೆಗೆ ಕನಿಷ್ಠ 306...

ದಲಿತರ ಅಭಿವೃದ್ಧಿಗೆ ಮೀಸಲಿಟ್ಟ ನಿಧಿ ದುರ್ಬಳಕೆ; ಜನವಸತಿಯೇ ಇಲ್ಲದ ಜಾಗದಲ್ಲಿ ರೂ. 50 ಲಕ್ಷದ ಸಿ.ಸಿ. ರಸ್ತೆ ನಿರ್ಮಾಣ!

ಸಮಾಜ ಕಲ್ಯಾಣ ಇಲಾಖೆಯ 'ಪ್ರಗತಿ ಕಾಲೋನಿ' ಯೋಜನೆಯ ನಿಧಿ ದುರ್ಬಳಕೆಯಾಗಿರುವ ಆರೋಪ ಕೇಳಿಬಂದಿದ್ದು, ಜನವಸತಿಯೇ ಇಲ್ಲದ ಜಾಗದಲ್ಲಿ ರೂ. 50 ಲಕ್ಷ ವೆಚ್ಚದಲ್ಲಿ ಸಿಸಿ ರಸ್ತೆ ನಿರ್ಮಾಣ ಮಾಡಿರುವ ಪ್ರಕರಣ ಬೆಂಗಳೂರು...

SIR: ‘ಚುನಾವಣಾ ಆಯೋಗದಿಂದ ನೋಟಿಸ್‌’ ಇಲ್ಲದಿರುವ ದಾಖಲೆಗಳನ್ನು ಎಲ್ಲಿಂದಾ ತರೋದು? ಸಾರ್ವಜನಿಕರ ಪ್ರಶ್ನೆ?

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಚುನಾವಣಾ ಆಯೋಗವು ಬಳಸುತ್ತಿರುವ 'Logical Discrepancy' (ತಾರ್ಕಿಕ ವ್ಯತ್ಯಾಸ) ಎಂಬ ಸಾಫ್ಟ್‌ವೇರ್ ಆಧಾರಿತ ಪರಿಶೀಲನೆಯು ತಾಂತ್ರಿಕವಾಗಿ ದೋಷರಹಿತವೆಂದು ತೋರಿದರೂ, ವಾಸ್ತವದಲ್ಲಿ ಲಕ್ಷಾಂತರ ನೈಜ...

SIR ರಗಳೆ: ಕೊನೆಗೂ 43.81 ಲಕ್ಷ ಮತದಾರರ ನೋಟಿಸ್ ಪಟ್ಟಿ ಬಹಿರಂಗಪಡಿಸಿದ ಚುನಾವಣಾ ಆಯೋಗ

ಕರ್ನಾಟಕದಲ್ಲಿ ಭಾರಿ ಸದ್ದು ಮಾಡುತ್ತಿರುವ 'ವಿಶೇಷ ತೀವ್ರ ಪರಿಷ್ಕರಣೆ' (SIR) ಪ್ರಕ್ರಿಯೆಯಲ್ಲಿ ನೋಟಿಸ್‌ಗೆ ಗುರಿಯಾಗಿರುವ 43.81 ಲಕ್ಷ ಮತದಾರರ ಪಟ್ಟಿಯನ್ನು ರಾಜ್ಯ ಮುಖ್ಯ ಚುನಾವಣಾಧಿಕಾರಿ ಕಚೇರಿ ಕೊನೆಗೂ ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ...

‘ಆರ್‌ಎಸ್‌ಎಸ್‌ ಅಡಗಿಕೊಂಡಿದೆ’: ಮೋಹನ್ ಭಾಗವತ್‌ ಯುಕೆ ಭೇಟಿ ವಿರೋಧಿಸಿ ಲಂಡನ್‌ನಲ್ಲಿ ಪ್ರತಿಭಟನೆ

ಲಂಡನ್: ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ಮುಖ್ಯಸ್ಥ ಮೋಹನ್ ಭಾಗವತ್ ಅವರ ಯುನೈಟೆಡ್ ಕಿಂಗ್‌ಡಮ್‌ ಭೇಟಿಯನ್ನು ವಿರೋಧಿಸಿ ಲಂಡನ್‌ನ ಪಾರ್ಲಿಮೆಂಟ್ ಸ್ಕ್ವೇರ್‌ನಲ್ಲಿ ನೂರಾರು ಜನರು ಪ್ರತಿಭಟನೆ ನಡೆಸಿದ್ದಾರೆ. ಭಾಗವತ್ ಅವರ ಯುಕೆ ಪ್ರವಾಸದ...

ಪಂಚಾಯಿತಿಯಲ್ಲಿ ಅಸ್ಪೃಶ್ಯತೆ ಆಚರಣೆ-ಪ್ರತ್ಯೇಕ ಟೀ ಲೋಟ; ಆತ್ಮಹತ್ಯೆಗೆ ಯತ್ನಿಸಿದ ಪೌರಕಾರ್ಮಿಕ ಮಹಿಳೆ

ಕೆಲಸದ ಸ್ಥಳದಲ್ಲಿ ನಡೆಯುತ್ತಿದ್ದ ಅಸ್ಪೃಶ್ಯತೆ ಆಚರಣೆಯಿಂದ ಮನನೊಂದ 37 ವರ್ಷದ ದಲಿತ ನೈರ್ಮಲ್ಯ ಕಾರ್ಮಿಕರೊಬ್ಬರು ಕ್ರಿಮಿನಾಶಕ ಸೇವಿಸಿ ಆತ್ಮತ್ಯೆಗೆ ಯತ್ನಿಸಿರುವ ಘಟನೆ ತಮಿಳುನಾಡಿನ ಮೇಲೂರು ಸಮೀಪದ ಕಂಬೂರ್ ಪಂಚಾಯತ್‌ನಲ್ಲಿ ಬೆಳಕಿಗೆ ಬಂದಿದೆ. ...

ಗೌರಿ, ಗಾಂಧಿಯನ್ನು ಕೊಂದದ್ದು ಬರೀ ಬುಲೆಟ್‌ಗಳಲ್ಲ, ಕೋಮುವಾದಿ ಸಿದ್ಧಾಂತ: ವಿದ್ಯಾರ್ಥಿ ನಾಯಕಿ ದಾನಿಶ್ ಅಲಿ

"ಗಾಂಧಿ, ಗೌರಿಯನ್ನು ಕೊಂದಿದ್ದು ಬರೀ ಬುಲೆಟ್‌ಗಳಲ್ಲ, ಅದು ಸಿದ್ಧಾಂತ ಎಂಬುದನ್ನು ನಾವು ನೆನಪಿಡಬೇಕು. ಈ ಸಿದ್ಧಾಂತಗಳ ವಿರುದ್ಧವಾಗಿ ನಾವು ಇಂದು ಹೋರಾಡಬೇಕಿದೆ” ಎಂದು ದೆಹಲಿಯ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ (JNU) ವಿದ್ಯಾರ್ಥಿ ನಾಯಕಿ...