ಹಾಸ್ಟೆಲ್ ಶುಲ್ಕ ಹೆಚ್ಚಳ ವಿರುದ್ಧ ಜೆ.ಎನ್.ಯು ವಿದ್ಯಾರ್ಥಿಗಳ ಖಂಡನೆ: ವಿದ್ಯಾರ್ಥಿಗಳನ್ನು ಹತ್ತಿಕ್ಕಲು ಖಾಕಿ ಹರಸಾಹಸ

0

ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ವಿರೋಧ ಪ್ರದರ್ಶನ ಹತ್ತಿಕ್ಕಲು ಪೊಲೀಸರು ಹರಸಾಹಸ ನಡೆಸುತ್ತಿದ್ದಾರೆ. ಮೂರನೇ ದೀಕ್ಷಾಂತ್ ಸಮಾರೋಪ ಸಮಾರಂಭವನ್ನು ಬಹಿಷ್ಕರಿಸಿ, ವಿರೋಧ ಪ್ರದರ್ಶನಕ್ಕಿಳಿದರು. ಜೆ.ಎನ್.ಯು ವಿದ್ಯಾರ್ಥಿಗಳು ಹಾಸ್ಟೆಲ್ ಫೀಸ್ ಹೆಚ್ಚಳ ಮಾಡಿದ್ದನ್ನು ವಿರೋಧಿಸಿದರು. ಜೆಎನ್ ಯು ವಾಯ್ಸ್ ಚಾನ್ಸಲರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಡ್ರೆಸ್ ಕೋಡ್ ಮತ್ತು ಹಾಸ್ಟೆಲ್ ಶುಲ್ಕ ಹೆಚ್ಚಳ ವಿರುದ್ಧ ಕ್ಯಾಂಪಸ್ ನಲ್ಲಿ ಧರಣಿ ನಡೆಸಿದರು.

ಈ ವೇಳೆ ವಿದ್ಯಾರ್ಥಿಗಳ ವಿರೋಧ ಪ್ರದರ್ಶನವನ್ನು ಹತ್ತಿಕ್ಕಲು crpf ಹಾಗೂ ದೆಹಲಿ ಪೊಲೀಸ್ ಸಿಬ್ಬಂದಿ ನಿಯೋಜನೆಗೊಂಡಿತು. ಇತ್ತ ವಿದ್ಯಾರ್ಥಿಗಳ ಆಕ್ರೋಶ ಘೋಷಣೆಗಳು ಹೆಚ್ಚುತ್ತಿದ್ದವು. ವಿದ್ಯಾರ್ಥಿಗಳ ಪ್ರತಿಭಟನೆ ತಡೆಯಲು ಭಾರಿ ಸಂಖ್ಯೆಯಲ್ಲಿ ನಿಯೋಜನೆಗೊಂಡಿದ್ದ  ಪೊಲೀಸರು, ವಾಟರ್ ಟ್ಯಾಂಕರ್ ಬಳಸಲಾಯಿತು. ಹಾಸ್ಟೆಲ್ ಫೀಸ್ ಕಡಿಮೆ ಮಾಡುತ್ತಿಲ್ಲ. ಹೀಗಾಗಿ ನಮಗೆ ದೀಕ್ಷಾಂತ್ ಸಮಾರೋಪ ಸಮಾರಂಭ ಬೇಕಾಗಿಲ್ಲ ಎಂದು ಕಿಡಿಕಾರಿದರು.

ದೀಕ್ಷಾಂತ್ ಸಮಾರೋಪ ಸಮಾರಂಭದಲ್ಲಿ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು, ಕೇಂದ್ರ ಸಚಿವ ರಮೇಶ್ ಪೋಖ್ರಿಯಾಲ್ ಭಾಗವಹಿಸಲಿದ್ದಾರೆ. ವಿದ್ಯಾರ್ಥಿಗಳ ಪ್ರತಿಭಟನೆಯನ್ನು ತಡೆಯಲು ಪೊಲೀಸರು ಪ್ರಯತ್ನಿಸುತ್ತಿದ್ದಾರೆ.

ಅಂದಹಾಗೆ ಜೆನ್ ಯು ವಿದ್ಯಾರ್ಥಿಗಳ ಬೇಡಿಕೆಗಳೇನು..?

ಹಾಸ್ಟೆಲ್ನಲ್ಲಿ ಯಾವುದೇ ಸರ್ವೀಸ್  ಶುಲ್ಕ ತೆಗೆದುಕೊಳ್ಳಬಾರದು, ಹಾಸ್ಟೆಲ್ ನಲ್ಲಿ ಡ್ರೆಸ್ ಕೋಡ್ ಮಾಡಬಾರದು, ಹಾಸ್ಟೆಲ್ ನ ಒಳಗೆ ಬರಲು ಮತ್ತು ಹೊರಗೆ ಹೋಗಲು ಯಾವುದೇ ನಿರ್ದಿಷ್ಟ ಸಮಯ ನಿಗದಿ ಮಾಡಬಾರದು.

Donate

ಜನಪರ ಪತ್ರಿಕೋದ್ಯಮದ ಉಳಿವು ಮತ್ತು ಬೆಳವಣಿಗೆಗಾಗಿ ನಿಮ್ಮ ನಿರಂತರ ಆರ್ಥಿಕ ನೆರವು ಅಗತ್ಯ. ನಿಮ್ಮಿಂದ ಸಾಧ್ಯವಿರುವಷ್ಟು ಹೆಚ್ಚಿನ ವಂತಿಗೆಯನ್ನು ನೀಡಲು ಕೆಳಗಿನ ಲಿಂಕುಗಳನ್ನು ಕ್ಲಿಕ್ಕಿಸಿ.
ಒಂದು ವೇಳೆ ಈ ಲಿಂಕಿನ ಮೂಲಕ ಹಣ ಪಾವತಿ ಮಾಡುವುದಕ್ಕೆ ಅಡಚಣೆ ಇದ್ದರೆ, ಈ ಪುಟದ ಮೇಲೆ ಅಥವಾ ಕೆಳಗೆ ಇರುವ ವಂತಿಗೆ – Donate ಬಟನ್.ಅನ್ನು ಕ್ಲಿಕ್ಕಿಸಿ.
ಧನ್ಯವಾದಗಳು
Independent journalism can’t be independent without your support, contribute by clicking below.

LEAVE A REPLY

Please enter your comment!
Please enter your name here